ಕೋವಿಡ್‌ ಕರಾಳತೆಯ ಬಳಿಕ…

ಭಾರತದಲ್ಲಿ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸಲು ಆರಂಭಿಸಿದೆ. ಲಾಕ್‌ಡೌನ್‌ನ ಸಂದರ್ಭದಲ್ಲಿ ಇದ್ದುದಕ್ಕೂ ಈಗಿನ ಸನ್ನಿವೇಶಕ್ಕೂ ವ್ಯತ್ಯಾಸ ಎದ್ದು ಕಾಣುತ್ತಿದೆ. ದಿಲ್ಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಾಗದೆ ಖಾಸಗಿ ವ್ಯವಸ್ಥೆಯ ಮೊರೆ ಹೋಗಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ತೀವ್ರ ಸೋಂಕಿತರಿಗೆ ಐಸಿಯುಗಳು ಸಿಗುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಇತರ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ? ಅಲ್ಲೂ ಕೊರೊನಾ ಕೇಸುಗಳಲ್ಲಿ ಏರುಮುಖವಿದೆಯೇ ಅಥವಾ ಇಳಿಮುಖವಾಗುತ್ತಿದೆಯೇ? ಅಲ್ಲಿನ ಲಾಕ್‌ಡೌನ್‌ ನಂತರದ ಸಾಮಾಜಿಕ- ಆರ್ಥಿಕ ಸನ್ನಿವೇಶಗಳು ಹೇಗಿವೆ? ಒಂದು ನೋಟ ಇಲ್ಲಿದೆ. […]

Read More

ಗಿಲ್ಗಿಟ್‌ ವಿಚಾರದಲ್ಲಿ ಭಾರತದ ನಿಲುಮೆಗೆ ಚೀನಾ ಗಿರಗಿಟ್ಲೆ

ಸ್ವಾವಲಂಬನೆಯ ಮೂಲಕ ವ್ಯಾಪಾರ ವಹಿವಾಟಿನಲ್ಲೂ ಚೀನಾವನ್ನು ಮಣಿಸಬೇಕು. – ಹರಿಪ್ರಕಾಶ್‌ ಕೋಣೆಮನೆ. ಚೀನಾದ ವುಹಾನ್‌ ಪ್ರಾಂತ್ಯದಿಂದ ಹರಡಿದ ಕೊರೊನಾ ಎಂಬ ವೈರಸ್‌ ಇಡೀ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಇಡೀ ಮನುಕುಲಕ್ಕೆ ವೈರಸ್‌ ಹರಡಲು ಕಾರಣವಾದ ಅದೇ ಚೀನಾ ಭಾರತಕ್ಕೆ ಸದಾ ಮಗ್ಗಲು ಮುಳ್ಳು. ಈಗ ಕೊರೊನಾ ಕಾಟದ ಜತೆಗೆ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ. ಇದಕ್ಕೆ ಭಾರತವೇನು ಹೆದರಿಲ್ಲ. ಈಗಂತೂ ಗಟ್ಟಿ ನಾಯಕತ್ವವೇ ಇರುವುದರಿಂದ, ಹೆದರಿಸುವ ಸ್ಥಾನದಲ್ಲೂ ಇದೆ. ಹಾಗೆ ಸುಮ್ಮನೇ 2017ರ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಳ್ಳೋಣ. ಭಾರತ- […]

Read More

ಬರಲಿವೆ ಕಿಲ್ಲರ್‌ ರೋಬಾಟ್‌!

ಅಮೆರಿಕ ಹಾಗೂ ಚೀನಾಗಳು ಸದ್ದಿಲ್ಲದೆ ಕಿಲ್ಲರ್‌ ರೋಬಾಟ್‌ಗಳನ್ನು ತಯಾರಿಸುತ್ತಿವೆ ಎಂಬ ಗುಸುಗುಸು ಮಿಲಿಟರಿ ವಲಯದಲ್ಲೇ ಇದೆ. ಇವುಗಳನ್ನು ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಏನಿದು ಕೊಲೆಗಾರ ಯಂತ್ರ? ಅವುಗಳಿಂದ ಏನು ಅಪಾಯ? ಯುದ್ಧರಂಗದಲ್ಲಿ ಮಾನವರಿಲ್ಲದೆ ಬರೀ ಯಂತ್ರಗಳು ಹೊಡೆದಾಡುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಮುಂದುವರಿದ ದೇಶವೊಂದರ ದೈತ್ಯ ರೋಬಾಟ್‌ಗಳು ಪಕ್ಕದ ಬಲಹೀನ ದೇಶದ ಗಡಿಯೊಳಗೆ ನುಗ್ಗಿ ಸೈನಿಕರನ್ನು ಹುಳಗಳಂತೆ ಜಜ್ಜಿಹಾಕುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಇದ್ದಕ್ಕಿದ್ದಂತೆ ಆಕಾಶದಿಂದ ಸಾವಿರಾರು ಡ್ರೋನ್‌ಗಳು ಇದ್ದಕ್ಕಿದ್ದಂತೆ ಬೆಂಕಿಯ ಮಳೆ ಸುರಿಸುವುದನ್ನು ಊಹಿಸಿಕೊಳ್ಳಿ. ಮಿಲಿಟರಿಯಲ್ಲಿ ಕೊಲೆಗಾರ […]

Read More

ಜಿ7 – ಅಮೆರಿಕದ ಕರೆ – ಚೀನಾದ ಕರಕರೆ – ಚೀನಾಗೆ ಮುಸುಕಿನ ಗುದ್ದು

ಜಾಗತಿಕ ವಾಣಿಜ್ಯ, ಆರ್ಥಿಕ ಸಮೀಕರಣವನ್ನು ತಿದ್ದಿ ಬರೆಯುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಜಿ7 ಗಂಪಿನಲ್ಲಿ ಭಾರತವನ್ನೂ ಸೇರಿಸಿಕೊಳ್ಳಬೇಕು ಎಂಬುದು ಅವರ ವಾದ. ಇದು ಯಾಕೆ ಹಾಗೂ ಇದರ ಪರಿಣಾಮಗಳೇನು? ಜಿ7 ದೇಶಗಳ ಈ ವರ್ಷದ (46ನೇ) ಶೃಂಗಸಭೆ ಜೂನ್‌ 10- 12ರಂದು ಅಮೆರಿಕದ ಕ್ಯಾಂಪ್‌ ಡೇವಿಡ್‌ನಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದೂಡಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ: ‘‘ಹೊಸ ಜಾಗತಿಕ ಸನ್ನಿವೇಶದಲ್ಲಿ ಜಿ7 ಎಂಬುದು ಅಪ್ರಸ್ತುತ ಸಂಘಟನೆಯಾಗಿದೆ. ಭಾರತ, […]

Read More

ಹೊಸ ಗೆಳೆಯ ಆಸ್ಪ್ರೇಲಿಯ – ಕಿರಿಕಿರಿಯ ನೆರೆಹೊರೆಗೊಂದು ಎಚ್ಚರಿಕೆ

ಭಾರತವು ಆಸ್ಪ್ರೇಲಿಯದ ಜೊತೆ ಮಹತ್ವದ ಒಂದು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ. ಇನ್ನು ಮುಂದೆ ಭಾರತ ಹಾಗೂ ಆಸ್ಪ್ರೇಲಿಯ ಪರಸ್ಪರರ ನೆಲಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದು. ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ‘ಆನ್‌ಲೈನ್‌ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡು, ರಕ್ಷಣೆ ಸೇರಿ ಏಳು ಕ್ಷೇತ್ರಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ‘ಮ್ಯೂಚುವಲ್‌ ಲಾಜಿಸ್ಟಿಕ್ಸ್‌ ಸಪೋರ್ಟ್‌ ಅಗ್ರಿಮೆಂಟ್‌’ ಕ್ರಾಂತಿಕಾರಕವಾಗಿದ್ದು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ […]

Read More

ಲಾಕ್‌ಡೌನ್‌ ತೆರವಿಗೆ ನಾವು ತಯಾರಾ?

ಮೇ 3 ಹತ್ತಿರ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮೊದಲು ಹೇಳಿದಂತೆ ನಮ್ಮ ಲಾಕ್‌ಡೌನ್‌ ಅಂದು ಕೊನೆಗೊಳ್ಳಬೇಕು. ಆದರೆ ನಾವು ಲಾಕ್‌ಡೌನ್‌ ತೆರವಿಗೆ ಸಂಪೂರ್ಣ ಸಜ್ಜಾಗಿದ್ದೇವಾ? ಮೇ 3ರಂದು ಲಾಕ್‌ಡೌನ್‌ ಭಾಗಶಃ ತೆರವಾಗಬಹುದು ಎಂದೇ ಎಲ್ಲರ ನಂಬಿಕೆ. ಶಾಲೆಗಳು, ಕಾಲೇಜುಗಳು ಕಾರ್ಯಾರಂಭಿಸಬಹುದು. ಆದರೆ ಬಾರ್‌ಗಳು, ಮಾಲ್‌ಗಳು, ಥಿಯೇಟರ್‌ಗಳು ಓಪನ್ ಆಗಲಿಕ್ಕಿಲ್ಲ. ಬಹಳ ಬೇಗನೆ ಲಾಕ್‌ಡೌನ್‌ ತೆರವು ಮಾಡಿದರೆ ಅದರ ಪರಿಣಾಮ ಸೋಂಕು ಅಧಿಕಗೊಂಡು ಸಾವಿರಾರು ಮಂದಿ ಸಾಯಬಹುದು. ಬಹಳ ತಡವಾಗಿ ತೆರವು ಮಾಡಿದರೂ ಆರ್ಥಿಕತೆಗೆ ಹೆಚ್ಚಿನ […]

Read More

ಕಡಿಮೆಯಾಗುತ್ತಿದೆ ಸೋಂಕು ಆದರೆ, ಹೆಚ್ಚಾಗುತ್ತಿದೆ ಸಾವಿನ ಪ್ರಮಾಣ

ಕೊರೊನಾ ವೈರಸ್(ಕೋವಿಡ್ 19) ಸೃಷ್ಟಿಸಿರುವ ತಲ್ಲಣಕ್ಕೆ ಇಡೀ ಜಗತ್ತೇ ಸ್ತಬ್ಧವಾಗಿದೆ. ಚೀನಾ, ಅಮೆರಿಕ, ಇಟಲಿ, ಜರ್ಮನಿ ಹಾಗೂ ಸ್ಪೇನ್‌ನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೋವಿಡ್ 19 ಎದುರಿಸಲಾಗಿದೇ ಮಕಾಡೆ ಮಲಗಿವೆ. ಈ ದೇಶಗಳಲ್ಲಿ ಸೋಂಕಿಗೆ ಒಳಗಾಗುವವರು ಮತ್ತು ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಲಕ್ಷ ಮತ್ತು ಸಾವಿರ ಲೆಕ್ಕದಲ್ಲಿದೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ಕೊರೊನಾ ಉಪಟಳವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಗ್ಗೂಡಿ ಹೋರಾಡುತ್ತಿದ್ದು, ಅದರ ಫಲ ಈಗ ನಿಚ್ಚಳವಾಗುತ್ತಿದೆ. ಲಾಕ್‌ಡೌನ್‌ ಹೆಚ್ಚು ಪರಿಣಾಮಕಾರಿಯಾಗುತ್ತಿದೆ […]

Read More

ಚೀನಾ ಅವಲಂಬನೆ ತಗ್ಗಿಸೋಣ

ಅಮೆರಿಕ, ಜಪಾನ್ ಸೇರಿ ಅನೇಕ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿವೆ. ಕೋವಿಡ್-19 ಬಿಕ್ಕಟ್ಟು ಚೀನಾಗೆ ದುಬಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತ ಹೊಸ ಅವಕಾಶಗಳನ್ನು ತನ್ನದಾಗಿಸಿಕೊಂಡು, ಗಣನೀಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆ ಇದೆ. ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾವನ್ನು ‘ಜಗತ್ತಿನ ಉತ್ಪಾದನೆಯ ಕಾರ್ಖಾನೆ’ ಎಂದು ಸಂತಸದಿಂದ ಕರೆಯುತ್ತಿತ್ತು. ನಾನಾ ರಾಷ್ಟ್ರಗಳು ಚೀನಾದ ಅಗ್ಗದ ಮಾಲುಗಳಿಂದ ಸಂಸ್ಕರಿತ, ಉತ್ತಮ ದರ್ಜೆಯ ಪ್ರಾಡಕ್ಟ್‌ಗಳ ತನಕ ಎಲ್ಲವನ್ನೂ ಸ್ವೀಕರಿಸುತ್ತಿತ್ತು. ವ್ಯಾಪಾರದ ಮೂಲಕ ಚೀನಾ […]

Read More

ವೈರಸ್‌ ತಡೆಯುವಲ್ಲಿ ತಂತ್ರಜ್ಞಾನ ಶಕ್ತ ರಾಷ್ಟ್ರಗಳಿಗಿಂತಲೂ ನಾವೇ ಬಲಿಷ್ಠ

– ಸುಧೀಂದ್ರ ಹಾಲ್ದೊಡ್ಡೇರಿ ವೈರಸ್‌ಗಳಿಗೆ ಯಾವುದೇ ಜಾತಿ, ಮತ, ಪಂಥ, ದೇಶ, ಭಾಷೆಗಳ ಹಂಗಿರುವುದಿಲ್ಲ. ಅಂತೆಯೇ ಬಡವ, ಧನಿಕನೆಂಬ ಭೇದ-ಭಾವವೂ ಇಲ್ಲ. ತಾವು ಹೊಕ್ಕ ಜೀವಿ ಗಂಡೋ ಹೆಣ್ಣೋ ಎಂದು ಗುರುತಿಸುವ ಶಕ್ತಿ ಇಲ್ಲ. ಹಾಗಿದ್ದ ಮೇಲೆ ನಮ್ಮ ದೇಶಕ್ಕಿಂತಲೂ ಹೆಚ್ಚಿನ ಸುಶಿಕ್ಷಿತ ಮಂದಿ ಇರುವ, ನಮಗಿಂತಲೂ (ಬಹುಶಃ) ಪೌಷ್ಟಿಕ ಆಹಾರ ಸೇವಿಸುವ, ಒಳ್ಳೆಯ ಆರೋಗ್ಯ ವ್ಯವಸ್ಥೆ ಇರುವ ದೇಶಗಳೇಕೆ ಕೊರೋನಾ ವೈರಸ್‌ಗಳ ಹೊಡೆತಕ್ಕೆ ನಮಗಿಂತಲೂ ಹೆಚ್ಚು ನಲುಗುತ್ತಿವೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವುದು ಸಹಜ. ಒಟ್ಟಾರೆ […]

Read More

ಕೊರೊನಾ ಸಂಕಷ್ಟದಲ್ಲಿರುವವರಿಗೆ ಭರವಸೆ ಬಾಗಿಲು‌..

ಡೋಂಟ್ ವರಿ, ಎಲ್ಲ ಬಾಗಿಲುಗಳೂ ಮುಚ್ಚಿಲ್ಲ! ಲಾಕ್‌ಡೌನ್ ನಡುವೆಯೂ ಹಲವು ವಲಯಗಳಲ್ಲಿ ಚುರುಕಿನ ವಹಿವಾಟು ಕೊರೊನಾಘಾತದ ನಡುವೆಯೂ ಆಶಾಕಿರಣ ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ದಿನ ಬಳಕೆ ವಸ್ತು ತಯಾರಿ ಕಂಪನಿಗಳ ಷೇರು ವೌಲ್ಯ ವೃದ್ಧಿ, ಔಷಧ ರಫ್ತಿನಿಂದ ಭಾರಿ ಲಾಭ – ಕೇಶವ ಪ್ರಸಾದ್ ಬಿ. ಬೆಂಗಳೂರು ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಭಾರಿ ಪ್ರಹಾರ ಮಾಡಿದೆ. ಸುದೀರ್ಘ ಲಾಕ್‌ಡೌನ್‌ನಿಂದಾಗಿ ಕೈಗಾರಿಕೋದ್ಯಮಕ್ಕೆ ಗರ ಬಡಿದಂತಾಗಿರುವುದು ನಿಜ. ಹಾಗಂತ ಪೂರ್ಣ ನಿರಾಶರಾಗಬೇಕಿಲ್ಲ. ಕೊರೊನಾ ಬಿಕ್ಕಟ್ಟು ಹಲವು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top