ಭಾರತ ತನ್ನ ಕ್ಷಾತ್ರ ಗುಣ ತೋರಲು ಇದು ಸಕಾಲ!

ಪಾಕಿಸ್ತಾನದ ದುಷ್ಟರಿಗೆ ಶಿಕ್ಷೆ, ಅಫಘಾನಿಸ್ತಾನದ ಶಿಷ್ಟರಿಗೆ ರಕ್ಷೆ ನಮ್ಮಿಂದ ಆಗಬೇಕು ಅಫ್ಘಾನಿಸ್ತಾನ ನೆಲದಿಂದ ಅಮೆರಿಕಾ ತನ್ನ ಸೇನೆಯನ್ನು ಹಿಂತೆಗೆದುಕೊಳ್ಳಲಾರಂಭಿಸಿದ ಬೆನ್ನಲ್ಲಿಯೇ, ತಾಲಿಬಾನಿಗಳು ಬಾಲ ಬಿಚ್ಚಲಾರಂಭಿಸಿದ್ದಾರೆ. ಅವರ ಭಯೋತ್ಪಾದನೆ, ಜನ ಹಿಂಸೆ ಶುರುವಾಗಿದೆ. ವಿಭಜನೆಗೆ ಮುನ್ನ ತನ್ನ ನೆರೆಯ ರಾಷ್ಟ್ರವೇ ಆಗಿದ್ದ ಅಫ್ಘಾನಿಸ್ತಾನದ ನೆಲದಲ್ಲಿ ಭಾರತ ನಿರ್ಮಿಸಿದ ಆಸ್ತಿಗಳ ಮೇಲೂ ದಾಳಿ ನಡೆದಿದೆ. ಆಫ್ಘನ್ ಭದ್ರತಾ ಪಡೆ ಹಾಗೂ ತಾಲಿಬಾನಿಗಳ ನಡುವಿನ ಹಿಂಸಾಚಾರ ಕಂಡು ಆತಂಕಗೊಂಡಿರುವ ನಮ್ಮ ಕೇಂದ್ರ ಸರಕಾರ, ಅಲ್ಲಿ ನೆಲೆಸಿರುವ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. […]

Read More

ಇನ್ನು ಹಳ್ಳೀ ಕಡೆಗೂ ಐಟಿ ಕಂಪನಿಗಳು ಬರತ್ತಂತೆ! ಸಾಲಗಾರರಿಗೆ ಸುಪ್ರೀಂ ಕೊರ್ಟ್ ನೀಡಿರುವ ರಿಲೀಫ್ ಏನು? ಭಾರತ/ಚೀನಾ ಗಡಿಯಲ್ಲಿ ಏನಾಗ್ತಾ ಇದೆ? ಬಾರ್ ಗೆ ಬಂದ ಭಾಗ್ಯ ಲೈಬ್ರರಿಗೇಕಿಲ್ಲ? ಅಮೆರಿಕದಲ್ಲಿ ಮಹಿಳಾ ರಾಜಕೀಯದ ಹಕೀಕತ್ತು

Read More

ಶಿಕ್ಷಣ ನೀತಿಯ ನೂರೆಂಟು ಮುಖ

ನೂತನ ಶಿಕ್ಷಣ ನೀತಿಯನ್ನು ಕೇಂದ್ರ ಸರಕಾರ ಬಿಡುಗಡೆ ಮಾಡಿದೆ. ಯಾವ ದೇಶಗಳಲ್ಲಿ ಪರಿಣಾಮಕಾರಿ ಶಿಕ್ಷಣ ನೀತಿಯಿದೆ? ಭಾರತಕ್ಕೂ ಅವುಗಳಿಗೂ ಇರುವ ವ್ಯತ್ಯಾಸವೇನು? ಒಂದು ನೋಟ ಇಲ್ಲಿದೆ. ತಾಯಿನುಡಿಗೆ ಯುನೆಸ್ಕೊ ಒತ್ತು ನೂತನ ಶಿಕ್ಷಣ ನೀತಿಯಲ್ಲಿ ಕೇಂದ್ರ ಸರಕಾರ ಮಾತೃಭಾಷೆಗೆ ನೀಡಿರುವ ಒತ್ತನ್ನು, ವಿಶ್ವ ಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಘಟಕ (ಯುನೆಸ್ಕೊ) ಕೂಡ ಒತ್ತಿ ಹೇಳಿದೆ. ಮಗುವಿಗೆ ಚಿಕ್ಕ ವಯಸ್ಸಿನಿಂದಲೇ ಬಹುಭಾಷಾ ಶಿಕ್ಷಣವನ್ನು ಒದಗಿಸಬೇಕು. ಇದರಿಂದ ಮಗುವಿನ ಕಲ್ಪನೆ, ವೈವಿಧ್ಯತೆಯ ಪರಿಕಲ್ಪನೆ ಹಾಗೂ ಸೃಜನಶೀಲತೆಗೆ ಇಂಬು […]

Read More

ಕೊರೊನಾ ಲಸಿಕೆಯ ಮೇಲೆ ಸೈಬರ್ ದಗಾಕೋರರ ಕಣ್ಣು

ಸುಧೀಂದ್ರ ಹಾಲ್ದೊಡ್ಡೇರಿ. ಕನ್ನಡದಲ್ಲೊಂದು ಆಡು ಮಾತಿದೆ – ಸಂತೆ ನೆರೆಯುವ ಮುನ್ನವೇ ಗಂಟು ಕಳ್ಳರು ನೆರೆದಿರುತ್ತಾರೆ. ಈ ಮಾತು ಸದ್ಯಕ್ಕೆ ಕೋವಿಡ್-19 ಲಸಿಕೆ ತಯಾರಿಕಾ ಮಾರುಕಟ್ಟೆಗೂ ಅನ್ವಯಿಸುವಂತಿದೆ. ಜನರ ಬಳಕೆಗೆ ಯಾವ ದೇಶದ ಲಸಿಕೆ ಮೊದಲು ಬರಬಹುದೆಂದು ಕಾತುರದಿಂದ ಕಾಯುತ್ತಿರುವಾಗಲೇ ಅಮೆರಿಕ, ಬ್ರಿಟನ್, ಹಾಗೂ ಕೆನಡಾ ದೇಶಗಳಲ್ಲಿನ ಲಸಿಕೆ ಸಂಶೋಧಕರ ಕಂಪ್ಯೂಟರ್‌ಗೆ ಲಗ್ಗೆಯಾಗಿರುವ ಸುದ್ದಿ ಬಂದಿದೆ. ಲಸಿಕೆಗೆ ಯಾವ ರಾಸಾಯನಿಕಗಳು ಬಳಕೆಯಾಗುತ್ತಿವೆ, ಎಷ್ಟು ಪ್ರಮಾಣದಲ್ಲಿ ಅವುಗಳನ್ನು ಬೆರೆಸಲಾಗಿದೆ, ಯಾವ ಅನುಪಾತದಲ್ಲಿ ಬೆರೆಸಿದಾಗ ಉತ್ತಮ ಪರಿಣಾಮ ದೊರೆತಿದೆ, ರಾಸಾಯನಿಕಗಳನ್ನು […]

Read More

ಅಮೆರಿಕ- ಚೀನಾ ಸಂಬಂಧ ಕದಡಿದ ಕಡಲು

ಅಮೆರಿಕ ಹಾಗೂ ಚೀನ ದೇಶಗಳ ನಡುವಿನ ವೈಷಮ್ಯ ದಿನೇ ದಿನೆ ಉಲ್ಬಣಿಸುತ್ತಿದೆ. ಉಭಯ ದೇಶಗಳ ವೈಷಮ್ಯಕ್ಕೆ ಕಾರಣವಾದ ಬೆಳವಣಿಗೆಗಳೇನು? ಅವು ಹೇಗೆ ಮುಂದುವರಿದಿವೆ? ರಾಯಭಾರ ಕಚೇರಿಗಳು ಕ್ಲೋಸ್‌ ಎರಡು ದಿನ ಹಿಂದೆ, ಚೀನಾದ ರಾಯಭಾರ ಕಚೇರಿಯ ಮೂಲಕ ನಮ್ಮ ದೇಶದ ರಹಸ್ಯಗಳನ್ನು ಅಲ್ಲಿಗೆ ಕದ್ದು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಅಮೆರಿಕ, ಹ್ಯೂಸ್ಟನ್‌ನಲ್ಲಿದ್ದ ಆ ಕಚೇರಿಯನ್ನು ಮುಚ್ಚಿಸಿತು. ಇದಕ್ಕೆ ಪ್ರತಿಯಾಗಿ, ಚೆಂಗ್ಡುವಿನಲ್ಲಿದ್ದ ಅಮೆರಿಕದ ರಾಯಭಾರಿ ಕಚೇರಿಯನ್ನು ಚೀನಾ ಮುಚ್ಚಿಸಿದೆ. ಇದಕ್ಕೂ ಮೊದಲು, ಚೀನಾದ ಇಬ್ಬರು ಪ್ರಜೆಗಳು ತನ್ನ ಮಿಲಿಟರಿ […]

Read More

ಪ್ರಧಾನಿ ಮೋದಿಯ ರಾಜತಾಂತ್ರಿಕತೆಗೆ ಮಣಿದ ಚೀನಾ

ಮೋದಿಯವರ ಅಷ್ಟೊಂದು ವಿದೇಶ ಪ್ರವಾಸಗಳ ಪರಿಣಾಮ ಈಗ ತಿಳಿಯತೊಡಗಿದೆ – ರಮೇಶ್‌ ಕುಮಾರ್‌ ನಾಯಕ್‌. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸದಾ ವಿದೇಶ ಪ್ರವಾಸದ ಶೋಕಿ. ಬೆನ್ನುಬೆನ್ನಿಗೆ ಫಾರಿನ್‌ ಟೂರ್‌ ಮಾಡುವ ಮೂಲಕ ಖಜಾನೆಯ ದುಡ್ಡಿನ ದುಂದು ವೆಚ್ಚ ಮಾಡುತ್ತಿದ್ದಾರೆ. ದೇಶದ ಕೋಟ್ಯಂತರ ಜನ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಿರುವಾಗ ಈ ಪ್ರಧಾನಿ ದಿನ ಬೆಳಗಾದರೆ ವಿಶೇಷ ವಿಮಾನ ಏರಿ ದೇಶ ಸುತ್ತುವುದೇಕೆ? ಆಗಾಗ ಅಮೆರಿಕ, ರಷ್ಯಾ, ಜಪಾನ್‌, ಜರ್ಮನಿ, ಫ್ರಾನ್ಸ್‌, ಭೂತಾನ್‌ ಎಂದೆಲ್ಲ ರಾಜತಾಂತ್ರಿಕ ಭೇಟಿ […]

Read More

ಚೀನಾದ ದಾಹ ಮಣಿಸಿದ ಭಾರತದ ವ್ಯೂಹ

– ಡ್ರ್ಯಾಗನ್ ದೇಶದ ಕ್ಷುದ್ರತನಕ್ಕೆ ಎದುರೇಟು ನೀಡಲು ಮುಂದಾಗಿದೆ ಅಂತಾರಾಷ್ಟ್ರೀಯ ಸಮುದಾಯ. – ಹರಿಪ್ರಕಾಶ್ ಕೋಣೆಮನೆ. ಇದುವರೆಗೆ ಭಾರತದ ಪಾಲಿಗೆ ಗಡಿಯಲ್ಲಿ ಮತ್ತು ಉಡಿಯಲ್ಲಿ ಕಟ್ಟಿಕೊಂಡ ಕೆಂಡದಂತಿದ್ದ ಚೀನಾ, ಈಗ ಕರಕಲಾದ ಇದ್ದಿಲಿನಂತಾಗಿದೆ ಎಂದರೆ ಉತ್ಪ್ರೇಕ್ಷೆ ಆಗದು. ಅಮೆರಿಕಾಗೆ ಸಡ್ಡು ಹೊಡೆದು ಜಾಗತಿಕ ಪರ್ಯಾಯ ಶಕ್ತಿಯಾಗುವೆ ಎಂದು ಜಗತ್ತಿನ ಎದುರು ಬೀಗುತ್ತಿದ್ದ ಆ ರಾಷ್ಟ್ರ ಸದ್ಯಕ್ಕಂತೂ ಏಕಾಂಗಿಯಾಗಿದೆ. ಸ್ವಾರಸ್ಯ ಎಂದರೆ, ಚೀನಾ ವಿರುದ್ಧವೇ ಜಾಗತಿಕ ಒಕ್ಕೂಟ ರಚನೆಯಾಗುವ ಮುನ್ಸೂಚನೆಗಳು ಕಾಣುತ್ತಿವೆ. ನಿಜವಾಗಿಯೂ ಚೀನಾಗೆ ಜಾಗತಿಕ ಶಕ್ತಿಯಾಗುವ ಅರ್ಹತೆ […]

Read More

ವಿಶ್ವ ಆರೋಗ್ಯ ಸಂಸ್ಥೆಗೆ ಅಮೆರಿಕ ಬೈ

ಕೊರೊನಾ ಸೋಂಕು ನಿರ್ವಹಣೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ವಿಫಲವಾಗಿದೆ; ಅದು ಚೀನಾ ಪಕ್ಷಪಾತಿಯಾಗಿದೆ ಎಂದು ಆರೋಪಿಸಿ ಅಮೆರಿಕ ಸಂಸ್ಥೆಯಿಂದ ಹೊರಬರಲು ಮುಂದಾಗಿದೆ. ಏನೀ ವಿವಾದ? ಅಮೆರಿಕದ ವಾದವೇನು? ಡಬ್ಲ್ಯುಎಚ್‌ಒ ಯಾಕೆ ಅನಿವಾರ್ಯ? ಅಮೆರಿಕದ ವಾದವೇನು? ಡಬ್ಲ್ಯುಎಚ್‌ಒ ಅದರ ನೀತಿ ನಿಯಮಾವಳಿಯ ಪ್ರಕಾರ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಚೀನಾದ ಪಕ್ಷಪಾತಿಯಾಗಿ ವರ್ತಿಸುತ್ತಿದೆ. ಕಳೆದ ಡಿಸೆಂಬರ್‌ನಲ್ಲೇ ಚೀನಾದ ವುಹಾನ್‌ನಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಆದರೆ ಅದನ್ನು ಡಬ್ಲ್ಯುಎಚ್‌ಒಗೆ ತಿಳಿಸಲು ತಡ ಮಾಡಿತು. ನಂತರವೂ ಡಬ್ಲ್ಯುಎಚ್‌ಒ ವಿಶ್ವ ಸಮುದಾಯದ ಮುಂದೆ […]

Read More

ಪಂಜಾಬ್‌ ಮೇಲೆ ಪಾಪಿ ಪಾಕ್‌ ಕಣ್ಣು

ಐಎಸ್‌ಐ ಮೂಲಕ ಖಲಿಸ್ತಾನ್‌ ಭಯೋತ್ಪಾದನೆಗೆ ಮರುಜೀವ. ಜಮ್ಮು- ಕಾಶ್ಮೀರದಲ್ಲಿ ಭದ್ರತಾ ಪಡೆಗಳ ಕಟ್ಟೆಚ್ಚರದಿಂದ ವಿಚಲಿತವಾಗಿರುವ ಪಾಕಿಸ್ತಾನದ ಗೂಢಚರ ಸಂಸ್ಥೆ ಐಎಸ್‌ಐ, ಭಾರತದಲ್ಲಿ ಹೇಗಾದರೂ ಭಯ ಸೃಷ್ಟಿಸುವ ಯತ್ನದಲ್ಲಿ ಪಂಜಾಬ್‌ನ ಖಲಿಸ್ತಾನ್‌ ಭಯೋತ್ಪಾದನೆಗೆ ಜೀವ ತುಂಬಲು ಯತ್ನಿಸುತ್ತಿದ್ದಾರೆ. ಅವರ ಯೋಜನೆಗಳೇನು, ಎಲ್ಲಿಂದ ಅನುಷ್ಠಾನಗೊಳ್ಳುತ್ತಿದೆ ಎಂಬ ವಿವರಗಳು ಇಲ್ಲಿವೆ. ಪಂಜಾಬ್‌ನಲ್ಲಿ ಬಹುತೇಕ ಅಳಿದೇ ಹೋಗಿದ್ದ ಖಲಿಸ್ತಾನ್‌ ಚಳವಳಿ ಹಾಗೂ ಭಯೋತ್ಪಾದನೆಗೆ ಮತ್ತೆ ಮರುಜೀವ ಬಂದಿದೆ. ಪಂಜಾಬ್‌ನ ಅಲ್ಲಲ್ಲಿ ಬಾಂಬ್‌ ಸ್ಫೋಟ, ಗುಂಡಿನ ದಾಳಿ ನಡೆಸಲು ಉಗ್ರರು ಸಂಚು ನಡೆಸುತ್ತಿದ್ದು, ಇದು […]

Read More

ಜಾರ್ಜ್ ಪ್ರತಿಪಾದಿಸಿದ್ದ ಆತ್ಮನಿರ್ಭರ ಮಂತ್ರ

ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ (ಜೂನ್ 25) 45 ವರ್ಷ. ಎಮರ್ಜೆನ್ಸಿ ಹೀರೊ, ಜನನಾಯಕ ಜಾರ್ಜ್ ಫರ್ನಾಂಡಿಸ್ ಅವರು ಪ್ರತಿಪಾದಿಸುತ್ತಿದ್ದ ಸ್ವದೇಶಿ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಆತ್ಮನಿರ್ಭರ ವಿಚಾರಗಳು ಈಗ ಹೆಚ್ಚು ಪ್ರಸ್ತುತವಾಗಿವೆ. – ಅನಿಲ್ ಹೆಗ್ಡೆ. 1974ರ ಐತಿಹಾಸಿಕ ರೈಲು ಮುಷ್ಕರದ ನೇತೃತ್ವ ವಹಿಸಿದ್ದ ಕರ್ನಾಟಕದ ಹೆಮ್ಮೆಯ ಪುತ್ರ ಜಾರ್ಜ್ ಫರ್ನಾಂಡಿಸ್ ತುರ್ತುಪರಿಸ್ಥಿತಿಯಲ್ಲಿ ಭೂಮಿಗತ ಕ್ರಾಂತಿಕಾರಿ ಆಂದೋಲನ ನಡೆಸಿ ನಂತರ ಬರೋಡಾ ಡೈನಮೈಟ್ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾಗಿ ಜೈಲಿನಿಂದಲೇ ಬಿಹಾರಿನ ಮುಜಫರ್‌ ಪುರದಿಂದ 3.34 […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top