ಕರ್ನಾಟಕದಲ್ಲಿ‌ ಸೈಲೆಂಟ್ ಸೋಂಕಿನ‌ ಕೈಚಳಕ

ಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕುಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕು – 445 ಕೇಸ್ಗಳ ಪೈಕಿ 300 ಮಂದಿಗೆ ರೋಗ ಲಕ್ಷಣವಿಲ್ಲ- ಸೋಂಕಿತರ ಗುರುತಿಸಿ ಚಿಕಿತ್ಸೆ ನೀಡುವುದೇ ಸವಾಲು ವಿಕ ಬ್ಯೂರೊ ಬೆಂಗಳೂರು: ಅತ್ಯಂತ ವೇಗವಾಗಿ ಎಲ್ಲಕಡೆ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಯಾವುದೇ ಲಕ್ಷಣಗಳಿಲ್ಲದೆ ಒಳಗಿಂದೊಳಗೆ ಕೊರೆಯುತ್ತಿರುವುದು ಈಗ ಆತಂಕ ಸೃಷ್ಟಿಸಿದೆ. ಗಂಟಲು ನೋವು, ಕೆಮ್ಮು ಮತ್ತು ಜ್ವರ ಇವು ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತಿದ್ದರೂ ರಾಜ್ಯದಲ್ಲಿ ದಾಖಲಾದ 445 ಪ್ರಕರಣಗಳ ಪೈಕಿ 300 (67%) ಮಂದಿಗೆ ಇಂಥ […]

Read More

ಕಡಿಮೆಯಾಗುತ್ತಿದೆ ಸೋಂಕು ಆದರೆ, ಹೆಚ್ಚಾಗುತ್ತಿದೆ ಸಾವಿನ ಪ್ರಮಾಣ

ಕೊರೊನಾ ವೈರಸ್(ಕೋವಿಡ್ 19) ಸೃಷ್ಟಿಸಿರುವ ತಲ್ಲಣಕ್ಕೆ ಇಡೀ ಜಗತ್ತೇ ಸ್ತಬ್ಧವಾಗಿದೆ. ಚೀನಾ, ಅಮೆರಿಕ, ಇಟಲಿ, ಜರ್ಮನಿ ಹಾಗೂ ಸ್ಪೇನ್‌ನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೋವಿಡ್ 19 ಎದುರಿಸಲಾಗಿದೇ ಮಕಾಡೆ ಮಲಗಿವೆ. ಈ ದೇಶಗಳಲ್ಲಿ ಸೋಂಕಿಗೆ ಒಳಗಾಗುವವರು ಮತ್ತು ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಲಕ್ಷ ಮತ್ತು ಸಾವಿರ ಲೆಕ್ಕದಲ್ಲಿದೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ಕೊರೊನಾ ಉಪಟಳವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಗ್ಗೂಡಿ ಹೋರಾಡುತ್ತಿದ್ದು, ಅದರ ಫಲ ಈಗ ನಿಚ್ಚಳವಾಗುತ್ತಿದೆ. ಲಾಕ್‌ಡೌನ್‌ ಹೆಚ್ಚು ಪರಿಣಾಮಕಾರಿಯಾಗುತ್ತಿದೆ […]

Read More

ಮನೆಯೇ ತಂತ್ರಾಲಯ – ಟಿ. ಜಿ. ಶ್ರೀನಿಧಿ

ಮನೆಯಿಂದ ಕೆಲಸ ಮಾಡುವುದು, ವರ್ಕಿಂಗ್‌ ಫ್ರಮ್‌ ಹೋಮ್‌, ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ವಿಷಯವೇನೂ ಅಲ್ಲ. ವಾರಕ್ಕೊಂದು ದಿನವೋ ತಿಂಗಳಿಗೆರಡು ದಿನವೋ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಅನೇಕ ಸಂಸ್ಥೆಗಳು ಬಹಳ ವರ್ಷಗಳಿಂದಲೇ ತಮ್ಮ ಉದ್ಯೋಗಿಗಳಿಗೆ ನೀಡುತ್ತ ಬಂದಿವೆ. ಆಫೀಸಿಗೆ ಹೋಗುವ ಅಗತ್ಯವೇ ಇಲ್ಲದೆ, ಸದಾಕಾಲವೂ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿರುವ ಸಂಸ್ಥೆಗಳೂ ಇವೆ. ಈ ರೀತಿ ಕೆಲವರಿಗಷ್ಟೇ ಸೀಮಿತವಾಗಿದ್ದ ಸೌಲಭ್ಯವನ್ನು ಎಲ್ಲರಿಗೂ ವಿಸ್ತರಿಸಿದ್ದು, ಐಚ್ಛಿಕವಾಗಿದ್ದುದನ್ನು ಕಡ್ಡಾಯವಾಗಿಸಿದ್ದು ಕೋವಿಡ್‌-19ರ ಹೆಚ್ಚುಗಾರಿಕೆ. ಕಣ್ಣಿಗೆ […]

Read More

ಇದು ವಿಜಯ ಕರ್ನಾಟಕ ಹೇಳಿದ್ದಲ್ಲ, ಕೇಂದ್ರ‌ ಸರಕಾರ‌ ಬಿಡುಗಡೆ ಮಾಡಿದ ಮಾಹಿತಿ…

ದೇಶದ 30% ಸೋಂಕಿಗೆ ತಬ್ಲಿಘಿ ಸಮಾವೇಶ ಲಿಂಕ್‌ – ದೇಶಾದ್ಯಂತ ಪತ್ತೆಯಾದ ಒಟ್ಟು ಕೊರೊನಾ ಪ್ರಕರಣಗಳು 14,378 – ತಬ್ಲಿಘಿ ಜಮಾತ್‌ ಸಮಾವೇಶದ ನಂಟಿರುವ ಸೋಂಕಿತರು 4,291 – ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಧಿಕೃತ ಮಾಹಿತಿ ಏಜೆನ್ಸೀಸ್‌ ಹೊಸದಿಲ್ಲಿ ದೇಶದಲ್ಲಿ ದಾಖಲಾದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇಕಡಾ 30ಕ್ಕೆ ತಬ್ಲಿಕ್‌ ಜಮಾತ್‌ ಸಮಾವೇಶದ ನಂಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ‘‘ದೇಶಾದ್ಯಂತ ಶನಿವಾರ ಮಧ್ಯಾಹ್ನದವರೆಗಿನ ವರದಿ ಪ್ರಕಾರ ಒಟ್ಟು 14,378 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, […]

Read More

ಇರೋಣ ಮನೆಯಲ್ಲಿ ಬೆಚ್ಚಗೆ, ತೋರೋಣ ಸೇನಾನಿಗಳಿಗೆ ಮೆಚ್ಚುಗೆ

ಲಾಕ್‌ಡೌನ್‌ನಿಂದ ಕಲಿತ ಪಾಠಗಳನ್ನು ಜೀವಮಾನ ಪರ್ಯಂತ ಅಳವಡಿಸಿಕೊಂಡರೆ ಅಪಾಯ ದೂರ.  ಕೊರೊನಾ ಲಾಕ್‌ಡೌನ್‌ ಏಪ್ರಿಲ್‌ 14ಕ್ಕೆ ಅಂತ್ಯ ಕಾಣುವುದೇ ಅಥವಾ ಮುಂದುವರಿಯುವುದೇ ಎಂಬ ಒಂದು ಪ್ರಶ್ನೆ ಭಾರತದ ಕೋಟಿ ಕೋಟಿ ಜನರನ್ನು ಮೂರು ದಿನಗಳ ಹಿಂದಿನವರೆಗೂ ಕಾಡುತ್ತಿತ್ತು. ಅದನ್ನು ಎಲ್ಲರೂ ತಮ್ಮೊಳಗೆ ತಾವು ಕೇಳಿಕೊಳ್ಳುತ್ತಿದ್ದರು. ಆದರೆ, ಈಗ ಲಾಕ್‌ಡೌನ್‌ ಮೇ 3ರವರೆಗೆ ಅಧಿಕೃತವಾಗಿ ವಿಸ್ತರಣೆಯಾಗಿರುವುದರಿಂದ 14ರ ಕುತೂಹಲಕ್ಕೆ ತೆರೆ ಬಿದ್ದಾಗಿದೆ. ಬೆನ್ನಲ್ಲಿಯೇ ಏಪ್ರಿಲ್‌ 20ರ ಬಳಿಕ ಈಗ ಜಾರಿಯಲ್ಲಿರುವ ಲಾಕ್‌ಡೌನ್‌-2ರ ಬಿಗಿ ಏನಾದರೂ ಸಡಿಲ ಆಗುವುದೇ? ಮೇ […]

Read More

ಚೀನಾ ಅವಲಂಬನೆ ತಗ್ಗಿಸೋಣ

ಅಮೆರಿಕ, ಜಪಾನ್ ಸೇರಿ ಅನೇಕ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿವೆ. ಕೋವಿಡ್-19 ಬಿಕ್ಕಟ್ಟು ಚೀನಾಗೆ ದುಬಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತ ಹೊಸ ಅವಕಾಶಗಳನ್ನು ತನ್ನದಾಗಿಸಿಕೊಂಡು, ಗಣನೀಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆ ಇದೆ. ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾವನ್ನು ‘ಜಗತ್ತಿನ ಉತ್ಪಾದನೆಯ ಕಾರ್ಖಾನೆ’ ಎಂದು ಸಂತಸದಿಂದ ಕರೆಯುತ್ತಿತ್ತು. ನಾನಾ ರಾಷ್ಟ್ರಗಳು ಚೀನಾದ ಅಗ್ಗದ ಮಾಲುಗಳಿಂದ ಸಂಸ್ಕರಿತ, ಉತ್ತಮ ದರ್ಜೆಯ ಪ್ರಾಡಕ್ಟ್‌ಗಳ ತನಕ ಎಲ್ಲವನ್ನೂ ಸ್ವೀಕರಿಸುತ್ತಿತ್ತು. ವ್ಯಾಪಾರದ ಮೂಲಕ ಚೀನಾ […]

Read More

ಲಾಕ್‌ಡೌನ್‌: ಸೋಂಕು ಇಳಿಸದಿದ್ದರೆ ಭಾರತ ತ್ರಿಶಂಕು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಮೂರು ವಾರಗಳ ಲಾಕ್‌ಡೌನ್‌ ಅನ್ನು ಭಾರತ ಮುಗಿಸಿದೆ. ಮೇ 3ರವರೆಗೆ ಮತ್ತೆ ವಿಸ್ತರಿಸಲಾಗಿದೆ. ಈ ನಡುವೆ, ಲಾಕ್‌ಡೌನ್‌ನಿಂದ ಭಾರತಕ್ಕೆ ಆದ ಪ್ರಯೋಜನ ಏನು? ಲಾಕ್‌ಡೌನ್‌ ಮಾಡದಿದ್ದರೆ ಏನಾಗುತ್ತಿತ್ತು? ಮೂರು ವಾರಗಳಿಂದ ಲಾಕ್‌ಡೌನ್‌ ಅನುಭವಿಸುತ್ತಿರುವ ಭಾರತ ಮತ್ತೂ ಹದಿನೆಂಟು ದಿನಗಳ ಲಾಕ್‌ಡೌನ್‌ಗೆ ಒಳಪಟ್ಟಿದೆ. ಈ ಅವಧಿಯಲ್ಲಿ, ಹೊಸ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೇರಳ ಕೊರೊನಾ ವೈರಸ್‌ನ್ನು ತಡೆಗಟ್ಟುವುದು ಹೇಗೆ ಎಂಬುದಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಿದೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಲಾಕ್‌ಡೌನ್‌ […]

Read More

ಕೊರೊನಾ ಮೆಟ್ಟಿ ನಿಂತ ಕೇರಳ!

ನಮ್ಮ ನೆರೆಯ ಕೇರಳ ರಾಜ್ಯವು ಕೊರೊನಾ ಸೋಂಕು ನಿಯಂತ್ರಣದಲ್ಲೀಗ ಮುಂದಿದೆ. ದೇಶದ ಬಹುತೇಕ ರಾಜ್ಯಗಳಲ್ಲಿ ಕೊರೊನಾ ಪೀಡಿತರ ಗ್ರಾಫ್‌ ಏರುಮುಖದಲ್ಲಿದ್ದರೆ, ಕೇರಳದಲ್ಲಿ ಅದು ಮಟ್ಟಸವಾಗಿದೆ. ಜೊತೆಗೆ, ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವವ ಪ್ರಮಾಣವೂ ಹೆಚ್ಚಿದೆ. ಹಾಗಾದರೆ, ಕೇರಳ ಈ ನಿಯಂತ್ರಣ ಕಂಡುಕೊಂಡಿದ್ದು ಹೇಗೆ ಎಂಬುದು ನೋಡೋಣ ಬನ್ನಿ. ಇಡೀ ದೇಶದಲ್ಲೇ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕು ಪತ್ತೆಯಾಗಿದ್ದು ‘ದೇವರ ನಾಡು’ ಕೇರಳದಲ್ಲಿ. ಅದೇ ಕೇರಳ ಇದೀಗ ಕೊರೊನಾ ಹಿಮ್ಮೆಟಿಸುವ ವ್ಯವಸ್ಥೆಗೆ ಇಡೀ ದೇಶಕ್ಕೆ ಮಾದರಿಯಾಗುತ್ತಿದೆ. ನೆರೆಯ ಬಾಂಗ್ಲಾದೇಶ ಕೂಡ […]

Read More

ಕೇಂದ್ರದ ತಾರತಮ್ಯ ಸಲ್ಲದು: ಹೆಚ್ಚಿನ ಮೊತ್ತದ ಸಿಎಸ್‌ಆರ್‌ ರಾಜ್ಯಗಳಿಗೂ ಸಿಗಲಿ

ರಾಜ್ಯ ಮತ್ತು ಕೇಂದ್ರ ಸರಕಾರಗಳು ಪ್ರತ್ಯೇಕ ಅಸ್ತಿತ್ವ ಪಡೆದುಕೊಳ್ಳಲಿ ಎಂಬ ಕಾರಣಕ್ಕೆ ಭಾರತವು ‘ಒಕ್ಕೂಟ ವ್ಯವಸ್ಥೆ’ಯನ್ನು ಅನುಸರಿಸುತ್ತಿದೆ. ರಕ್ಷಣೆ, ಸಂವಹನ, ವಿದೇಶಾಂಗ ವ್ಯವಹಾರದಂಥ ಪ್ರಮುಖ ವಲಯಗಳನ್ನು ಹೊರತುಪಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮದೇ ಅಧಿಕಾರ ವ್ಯಾಪ್ತಿಯನ್ನು ಹೊಂದಿವೆ. ಸಂವಿಧಾನವೂ ಅಧಿಕಾರ ಹಂಚಿಕೆ ಸಂಬಂಧ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ಸ್ಪಷ್ಟ ಗೆರೆ ಎಳೆದಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಆ ಗೆರೆ ಮಸುಕಾಗುತ್ತಿದೆ. ಕೊರೊನಾ ಸಂಕಟದ ಸಮಯದಲ್ಲಿಅದು ಇನ್ನಷ್ಟು ಬಹಿರಂಗವಾಗುತ್ತಿದೆ. ಕೊರೊನಾ ಮಹಾಮಾರಿಯಿಂದಾಗಿ ಎಲ್ಲ ರಾಜ್ಯಗಳ ಆರ್ಥಿಕ […]

Read More

ವೈರಸ್‌ ತಡೆಯುವಲ್ಲಿ ತಂತ್ರಜ್ಞಾನ ಶಕ್ತ ರಾಷ್ಟ್ರಗಳಿಗಿಂತಲೂ ನಾವೇ ಬಲಿಷ್ಠ

– ಸುಧೀಂದ್ರ ಹಾಲ್ದೊಡ್ಡೇರಿ ವೈರಸ್‌ಗಳಿಗೆ ಯಾವುದೇ ಜಾತಿ, ಮತ, ಪಂಥ, ದೇಶ, ಭಾಷೆಗಳ ಹಂಗಿರುವುದಿಲ್ಲ. ಅಂತೆಯೇ ಬಡವ, ಧನಿಕನೆಂಬ ಭೇದ-ಭಾವವೂ ಇಲ್ಲ. ತಾವು ಹೊಕ್ಕ ಜೀವಿ ಗಂಡೋ ಹೆಣ್ಣೋ ಎಂದು ಗುರುತಿಸುವ ಶಕ್ತಿ ಇಲ್ಲ. ಹಾಗಿದ್ದ ಮೇಲೆ ನಮ್ಮ ದೇಶಕ್ಕಿಂತಲೂ ಹೆಚ್ಚಿನ ಸುಶಿಕ್ಷಿತ ಮಂದಿ ಇರುವ, ನಮಗಿಂತಲೂ (ಬಹುಶಃ) ಪೌಷ್ಟಿಕ ಆಹಾರ ಸೇವಿಸುವ, ಒಳ್ಳೆಯ ಆರೋಗ್ಯ ವ್ಯವಸ್ಥೆ ಇರುವ ದೇಶಗಳೇಕೆ ಕೊರೋನಾ ವೈರಸ್‌ಗಳ ಹೊಡೆತಕ್ಕೆ ನಮಗಿಂತಲೂ ಹೆಚ್ಚು ನಲುಗುತ್ತಿವೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾಡುವುದು ಸಹಜ. ಒಟ್ಟಾರೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top