ರಾಜಸ್ಥಾನದ ವಿಷಮ ಸನ್ನಿವೇಶ – ಅಧಿಕಾರಕ್ಕಾಗಿ ಕಚ್ಚಾಡುವ ಸಮಯ ಇದಲ್ಲ

ರಾಜಸ್ಥಾನದಲ್ಲಿ ಸರಕಾರ ಸಂದಿಗ್ಧ ಸ್ಥಿತಿಯಲ್ಲಿದೆ. ಆಳುವ ಕಾಂಗ್ರೆಸ್‌ ಪಕ್ಷದ ಒಂದು ಬಣ ಮುಖ್ಯಮಂತ್ರಿ ಹಾಗೂ ಹೈಕಮಾಂಡ್‌ನ ವಿರುದ್ಧ ಸಿಡಿದೆದ್ದು, ಯುವ ನಾಯಕ ಸಚಿನ್‌ ಪೈಲಟ್‌ ನೇತೃತ್ವದಲ್ಲಿ ಐಷಾರಾಮಿ ರೆಸಾರ್ಟ್‌ಗಳಲ್ಲಿ ಬೀಡು ಬಿಟ್ಟಿದೆ. ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ನೇತೃತ್ವದ ಇನ್ನೊಂದು ಬಣ, ಹೆಚ್ಚಿನ ಶಾಸಕ ಬಲವನ್ನು ಹೊಂದಿದ್ದರೂ ಒಂದು ಬಗೆಯ ಆತಂಕದಲ್ಲೇ ಅಸ್ತಿತ್ವವನ್ನು ಕಾಪಾಡಿಕೊಂಡಿದೆ. ಪಕ್ಷ ನೀಡಿದ ವಿಪ್‌ ಉಲ್ಲಂಘಿಸಿದ ಪ್ರಕರಣವನ್ನು ಹೈಕೋರ್ಟ್‌ ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಪ್ರತಿಪಕ್ಷ ಬಿಜೆಪಿ ‘ಕಾದು ನೋಡುವ’ ತಂತ್ರವನ್ನು ಅನುಸರಿಸುತ್ತಿದ್ದೇನೆ ಎಂದು ಹೇಳಿಕೊಂಡಿದೆ. […]

Read More

ಕೋವಿಡ್‌ ಪ್ರತಿರೋಧ – ಬೆಂಗಳೂರಲ್ಲೇ ಕಂಡುಬಂತು ಹೆಚ್ಚಿನ ಪ್ರತಿಕಾಯ

ಭಾರತೀಯರಲ್ಲಿ ಸುಮಾರು 18 ಕೋಟಿ ಮಂದಿ ಈಗಾಗಲೇ ಕೋವಿಡ್‌ಗೆ ರೋಗನಿರೋಧಕ ಶಕ್ತಿ ಬೆಳೆಸಿಕೊಂಡಿದ್ದಾರೆಯೇ? ಹೌದು ಎನ್ನುತ್ತಿದೆ ಒಂದು ಅಧ್ಯಯನ. ಇದರಲ್ಲಿ ಬೆಂಗಳೂರಿನಲ್ಲಿ ನಡೆಸಿದ ಅಧ್ಯಯನದಲ್ಲಿ ಅತಿ ಹೆಚ್ಚಿನ ಪ್ರತಿಕಾಯ(ಆ್ಯಂಟಿಬಾಡಿ)ಗಳು ಕಂಡುಬಂದಿವೆ. ಪ್ರತಿಕಾಯಗಳೆಂದರೇನು? ಯಾವುದೇ ಕಾಯಿಲೆಯ ವೈರಸ್‌ ಅಥವಾ ಬ್ಯಾಕ್ಟೀರಿಯಾ ಮನುಷ್ಯನೊಳಗೆ ಪ್ರವೇಶಿಸಿದಾಗ, ಅದನ್ನು ಪ್ರತಿರೋಧಿಸುವ ಜೀವಕಣಗಳನ್ನು ದೇಹವೇ ಉತ್ಪತ್ತಿ ಮಾಡುತ್ತದೆ. ಇದನ್ನೇ ಪ್ರತಿಕಾಯ(ಆ್ಯಂಟಿಬಾಡಿ) ಎನ್ನುತ್ತಾರೆ. ಈ ಪ್ರತಿಕಾಯಗಳು ದೇಹದಲ್ಲಿದ್ದರೆ, ಈಗಾಗಲೇ ಆಯಾ ನಿರ್ದಿಷ್ಟ ಕಾಯಿಲೆಗೆ ಮನುಷ್ಯ ಒಂದಲ್ಲ ಒಂದು ರೀತಿಯಲ್ಲಿ ತೆರೆದುಕೊಂಡಿದ್ದಾನೆ ಎಂದೇ ಅರ್ಥ. ಆ್ಯಂಟಿಬಾಡಿ ಟೆಸ್ಟ್‌ನಲ್ಲಿ […]

Read More

ಮನ ಕಲಕುವ ಕೊರೊನೇತರರ ಸಂಕಟ

ಕೊರೊನಾ ಅಬ್ಬರದ ಮಧ್ಯೆ ಕೊರೊನೇತರ ರೋಗಿಗಳ ಗೋಳನ್ನು ಯಾರೂ ಕೇಳುತ್ತಿಲ್ಲ. ಬಹುತೇಕ ಆಸ್ಪತ್ರೆಗಳು ಇಂಥ ರೋಗಿಗಳನ್ನು ಅನುಮಾನದಿಂದ ನೋಡುತ್ತಿವೆ; ಆಸ್ಪತ್ರೆಗಳಿಗೂ ಸೇರಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಕೆಲವರು ಬೀದಿಯಲ್ಲಿ ನರಳಾಡುತ್ತ ಬಿದ್ದರೆ, ಮತ್ತೆ ಕೆಲವರು ಸೂಕ್ತ ಚಿಕಿತ್ಸೆ ಸಿಗದೇ ಸತ್ತೇ ಹೋಗುತ್ತಿದ್ದಾರೆ. ಅಂಥ ಹೃದಯವಿದ್ರಾವಕ ಇತ್ತೀಚಿನ ಕೆಲವು ಘಟನೆಗಳು ಇಲ್ಲಿವೆ. ರಕ್ತಸ್ರಾವದಿಂದ ಮಹಿಳೆ ಸಾವು ಕನಕಪುರ ತಾಲೂಕಿನ ಟಿ.ಹೊಸಹಳ್ಳಿ ಗ್ರಾಮದ 40 ವರ್ಷದ ಮಹಿಳೆಗೆ ರಕ್ತಸ್ತ್ರಾವ ಉಂಟಾಗಿತ್ತು. ಇದರಿಂದಾಗಿ ಉಸಿರಾಟದ ಸಮಸ್ಯೆಯೂ ಎದುರಾಗಿತ್ತು. ಆದರೆ, ಕನಕಪುರ, ರಾಮನಗರ, ಬೆಂಗಳೂರಿನ ಜಯದೇವ, […]

Read More

ಆರೋಗ್ಯ ಸೇವೆಯೇ ಗಂಭೀರ – ತುರ್ತುಸ್ಥಿತಿ ರೋಗಿಗಳಿಗೆ ಚಿಕಿತ್ಸೆ ಲಭ್ಯವಾಗಲಿ

ಹಿಂದೆಂದೂ ವೈದ್ಯಲೋಕ ಇಂಥದೊಂದು ಕಠೋರ, ನಿರ್ದಯಿ ವ್ಯವಸ್ಥೆಗೆ ಸಾಕ್ಷಿಯಾಗಿರಲಿಲ್ಲ. ಬೆಂಗಳೂರಿನಲ್ಲಿ ಈಗ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಹೊತ್ತುಕೊಂಡು ಆಸ್ಪತ್ರೆಗೆ ಹೋದರೂ, ಮೊದಲು ಕೋವಿಡ್‌ ಪರೀಕ್ಷೆ ಮಾಡಿಸಿಕೊಂಡು ಬನ್ನಿ, ಇಲ್ಲವೇ ಸಾಯಿರಿ ಎಂಬರ್ಥದ ಉತ್ತರಗಳೇ ಸಿಗುತ್ತಿವೆ. ರಾಜ್ಯದ ಇತರ ಕಡೆಗಳ ಆಸ್ಪತ್ರೆಗಳೂ ಇದೇ ಮಾದರಿಯನ್ನು ಅನುಸರಿಸಲಾರಂಭಿಸಿವೆ. ಶುಲ್ಕದ ಮಾತು, ಪರೀಕ್ಷೆ ನಂತರ; ರೋಗಿಯ ಪ್ರಾಣ ಉಳಿಸುವ ಹೊಣೆಯನ್ನು ಮೊದಲು ಹೊರಬೇಕಾದ ಆಸ್ಪತ್ರೆಗಳು ತಮ್ಮ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿವೆ. ಇದರಿಂದಾಗಿ ಕಳೆದ ಒಂದು ತಿಂಗಳಿನಲ್ಲಿ ಹತ್ತಾರು ರೋಗಿಗಳು ಆಸ್ಪತ್ರೆಗಳಿಗೆ […]

Read More

ಕೊರೊನೇತರರ ಕಾಪಾಡಿ

– ಕೊರೊನಾ ವರದಿ ಇಲ್ಲದೆ ನೋ ಎಂಟ್ರಿ ಎನ್ನುತ್ತಿರುವ ಆಸ್ಪತ್ರೆಗಳು – ತುರ್ತು ಪರಿಸ್ಥಿತಿಯಲ್ಲೂ ನಿಲ್ಲದ ಅಲೆದಾಟ – ಸರಕಾರದ ಅಂತಿಮ ಎಚ್ಚರಿಕೆ ಮಧ್ಯೆಯೂ ಇತರ ರೋಗಿಗಳ ಸರಣಿ ಸಾವು. – ಗಿರೀಶ್ ಕೋಟೆ ಬೆಂಗಳೂರು. ಉಸಿರಾಟದ ತೊಂದರೆ, ಹೃದ್ರೋಗ ಸಮಸ್ಯೆ, ಹೆರಿಗೆ ನೋವಿನಿಂದ ಬಳಲುತ್ತಿರುವ ವ್ಯಕ್ತಿಗೆ ಪ್ರತಿ ಕ್ಷಣವೂ ಅಮೂಲ್ಯ. ಒಂದು ಕ್ಷಣವೂ ತಡ ಮಾಡದೆ ಅವರನ್ನು ಆಸ್ಪತ್ರೆಗೆ ಕರೆತರಬೇಕು… ಇತ್ತೀಚಿನವರೆಗೂ ವೈದ್ಯ ಜಗತ್ತು ಈ ಮಾತನ್ನು ಮಂತ್ರದಂತೆ ಪಠಿಸುತ್ತಿತ್ತು. ಆದರೆ ಈಗ ಕೊರೊನಾ ರೋಗಿಗಳಷ್ಟೇ […]

Read More

ಕೊರೊನಾ ಸಂಕಷ್ಟ ಎದುರಿಸಲು ಅಷ್ಟಸೂತ್ರ

– ಪ್ರತಿ ಮನೆಯೂ ಒಂದು ವೈದ್ಯಶಾಲೆ. ಶ್ರೀಕಾಂತ್ ಹುಣಸವಾಡಿ ಬೆಂಗಳೂರು. ಕೊರೊನಾ ನಮ್ಮ ಜೀವನಶೈಲಿಯನ್ನೇ ಬದಲಿಸಿದೆ. ಶ್ರೀಮಂತರು, ಬಡವರೆನ್ನದೆ ಪ್ರತಿಯೊಬ್ಬರೂ ಹೊಸ ಆಹಾರ ಪದ್ಧತಿ, ದಿನಚರಿಗೆ ಒಗ್ಗಿಕೊಂಡಿದ್ದಾರೆ. ಕೊರೊನಾವನ್ನು ಎದುರಿಸುವ ನಿಟ್ಟಿನಲ್ಲಿ ಹೆಚ್ಚಿನವರು ನಾನಾ ತಂತ್ರಗಳನ್ನು ಅಳವಡಿಸಿಕೊಂಡಿದ್ದು, ಇದರಲ್ಲಿ ಆಯುರ್ವೇದ ಔಷಧ, ಕಷಾಯಗಳ ಬಳಕೆ, ಉತ್ತಮ ಆಹಾರ ಸೇವನೆ ಪ್ರಮುಖವಾಗಿದೆ. ಇದರ ಜತೆಗೆ ದೈಹಿಕ ದೃಢತೆಗಾಗಿ ಯೋಗ-ವ್ಯಾಯಾಮ, ಮಾನಸಿಕ ದೃಢತೆಗಾಗಿ ಧ್ಯಾನ, ದೇವರ ಪೂಜೆ, ಮಂತ್ರ ಪಠಣ, ಹೋಮಹವನಗಳು ಕೂಡಾ ಹೆಚ್ಚಾಗಿವೆ. ರಾಜ್ಯದ ನಾನಾ ಕಡೆ ನಡೆಯುತ್ತಿರುವ […]

Read More

ಕೊರೊನಾ ಲಸಿಕೆಯತ್ತ ಮೊದಲ ಹೆಜ್ಜೆ

– ಮಾನವರ ಮೇಲೆ ಪ್ರಯೋಗಕ್ಕೆ ಏಮ್ಸ್ ಸಜ್ಜು | ಆಕ್ಸ್‌ಫರ್ಡ್‌ ಮೊದಲ ಟ್ರಯಲ್ ಸಕ್ಸಸ್ ಹೊಸದಿಲ್ಲಿ: ಕೊರೊನಾ ಪ್ರಕರಣಗಳು ಸತತ ಏರುಗತಿಯಲ್ಲಿರುವ ಸಂದರ್ಭದಲ್ಲಿಯೇ ಸೋಂಕು ನಿಯಂತ್ರಿಸುವ ‘ಲಸಿಕೆ’ಯ ಆಶಾಕಿರಣ ಸೋಮವಾರ ಗೋಚರಿಸಿದೆ. ದಿಲ್ಲಿಯ ಏಮ್ಸ್‌ನಲ್ಲಿ ಸ್ವದೇಶಿ ಲಸಿಕೆ ‘ಕೊವ್ಯಾಕ್ಸಿನ್’ ಅನ್ನು ಮಾನವರ ಮೇಲೆ ಪ್ರಯೋಗಿಸುವ ಪ್ರಕ್ರಿಯೆ ಆರಂಭವಾಗಿದ್ದರೆ, ಬ್ರಿಟನ್‌ನಲ್ಲಿ ಮೊದಲ ಹಂತದಲ್ಲಿ ನಡೆದ ಕ್ಲಿನಿಕಲ್ ಟ್ರಯಲ್ಸ್ ಪರಿಣಾಮಕಾರಿಯಾಗಿದೆ ಎಂಬ ವರದಿ ಹೊರಬಿದ್ದಿದೆ. ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಮತ್ತು ನ್ಯಾಷನಲ್ ಇನ್ಸ್‌ಟಿಟ್ಯೂಟ್‌ ಆಫ್ ವೈರಾಲಜಿ ಅಭಿವೃದ್ಧಿಪಡಿಸುತ್ತಿರುವ ‘ಕೊವ್ಯಾಕ್ಸಿನ್’ […]

Read More

ಕೋವಿಡ್‌ ಲೆಕ್ಕಾಚಾರಕ್ಕೊಂದು ಸೂತ್ರ

ಕೊರೊನಾ ವೈರಾಣು ಸೋಂಕು ಸಮುದಾಯದಲ್ಲಿ ಯಾವಾಗ ಹೆಚ್ಚಾಗುತ್ತದೆ, ಯಾವಾಗ ಇಳಿಯುತ್ತದೆ ಎಂಬುದನ್ನು ಮುಂಚಿತವಾಗಿಯೇ ಲೆಕ್ಕ ಹಾಕಲು ಸಾಧ್ಯವೇ ಎಂದು ಬಹಳಷ್ಟು ಗಣಿತ ತಜ್ಞರು, ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಅದರಲ್ಲಿ ಮೈಖೇಲ್‌ ಲೆವಿಟ್‌ ಎಂಬ ನೊಬೆಲ್‌ ಪುರಸ್ಕೃತ ಕೆಮಿಸ್ಟ್ರಿ ವಿಜ್ಞಾನಿಯೊಬ್ಬರು ಬಹುತೇಕ ಯಶಸ್ವಿಯಾಗಿದ್ದಾರೆ. ಅವರು ಕೋವಿಡ್‌ನ ಏರಿಳಿತ ಲೆಕ್ಕಹಾಕುವ ಸೂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಹೇಳುವ ಪ್ರಕಾರ, ಜಾಗತಿಕವಾಗಿ ಕೋವಿಡ್‌ ಸೋಂಕು ಇಳಿಯುವ ಕಾಲ ಹತ್ತಿರವಾಗಿದೆ. ಆತಂಕ ಬೇಡ. ಇದನ್ನು ತಡೆಯಲು ನಾವು ಅನುಸರಿಸಬೇಕಾದ ಸರಳ ಕ್ರಮಗಳೆಂದರೆ ಸೋಶಿಯಲ್‌ ಡಿಸ್ಟೆನ್ಸ್‌ […]

Read More

ಶವಸಂಸ್ಕಾರದ ಯೋಧರು – ಕೊರೊನಾ ಸಾವಿನ ಭೀತಿ ತೊಲಗಲಿ

ಕೋವಿಡ್‌ ಸೋಂಕಿನಿಂದ ಮೃತಪಟ್ಟ ಕನಕಪುರದ ವ್ಯಕ್ತಿರೊಬ್ಬರ ಅಂತ್ಯ ಸಂಸ್ಕಾರವನ್ನು ನಗರಸಭೆ ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಸಂಸದ ಡಿ.ಕೆ.ಸುರೇಶ್‌ ಮುಂದೆ ನಿಂತು ನಡೆಸಿಕೊಟ್ಟಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್‌.ಪೇಟೆ ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ) ಕಾರ್ಯಕರ್ತರು ಸ್ವಯಂ ಪ್ರೇರಿತರಾಗಿ ತರಬೇತಿ ಪಡೆದು ಕೋವಿಡ್‌ ಸೋಂಕಿನಿಂದ ಮೃತಪಟ್ಟವರ ಅಂತ್ಯಸಂಸ್ಕಾರವನ್ನು ನಡೆಸುತ್ತಿದ್ದು, ಭಾನುವಾರ ಕೂಡ ಮೂವರ ಶವಸಂಸ್ಕಾರ ನಡೆಸಿದ್ದಾರೆ. ಕೋವಿಡ್‌ನಿಂದ ಯಾರೇ ಮೃತಪಟ್ಟರೂ, ಅವರ ಅಂತ್ಯಸಂಸ್ಕಾರ ನಡೆಸಲು ಪ್ರತಿ […]

Read More

ಕೊರೊನೋತ್ತರ ಸಾಹಿತ್ಯ: ಸೃಜನಶೀಲತೆಗೆ ಹೊಸ ಸ್ವರೂಪ

ಸಾಂಕ್ರಾಮಿಕ ಸೃಷ್ಟಿಸಿದ ತಳಮಳ ಯಾತನೆಗಳೇ ಮುಂದಿನ ಸಾಹಿತ್ಯದ ದಾರಿ ದೀವಿಗೆಗಳಾಗಬಹುದು. – ಡಾ. ರೋಹಿಣಾಕ್ಷ ಶಿರ್ಲಾಲು. ಸಾಹಿತ್ಯ ಕಾಲಕಾಲಕ್ಕೆ ಹೊಸ ಮಾರ್ಗವನ್ನು ತನಗೆ ತಾನೇ ಶೋಧಿಸಿಕೊಳ್ಳುತ್ತಾ ಬಂದಿದೆ. ಈ ಹಿನ್ನೆಲೆಯಲ್ಲಿ ನೋಡಿದರೆ ಕೊರೊನಾ ಸೋಂಕು ಕೂಡ ಸಾಹಿತ್ಯ ಅಭಿವ್ಯಕ್ತಿಗೆ ಹೊಸದೊಂದು ಮಾರ್ಗವನ್ನು ಕಂಡುಕೊಳ್ಳಲು ಅವಕಾಶವಾಗಬಹುದು. ಸಾಹಿತ್ಯ ಚರಿತ್ರೆಯ ಕಾಲ ವಿಂಗಡನೆಯ ವಿಭಾಗ ಕ್ರಮದೊಳಗೆ ಇನ್ನು ಮುಂದೆ ಕೊರೊನಾ ಪೂರ್ವದ ಸಾಹಿತ್ಯ, ಕೊರೊನೋತ್ತರ ಸಾಹಿತ್ಯ ಎಂಬ ವಿಭಾಗಕ್ರಮಗಳೂ ಸೇರಬಹುದಾಗಿದೆ. ಕೇವಲ ವಿಭಾಗ ಕ್ರಮದ ದೃಷ್ಟಿಯಿಂದ ಮಾತ್ರವಲ್ಲ, ಸಾಹಿತ್ಯ ಕೃತಿಗಳ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top