ರಾಮ ಮಂದಿರ ನಿರ್ಮಾಣ ಎಂದರೆ ರಾಷ್ಟ್ರೀಯ ಹೆಮ್ಮೆ ಮರು ಪ್ರತಿಷ್ಠಾಪನೆ

– ಪ್ರಫುಲ್ಲ ಕೇತ್ಕರ್. ಭಾರತದ ಇತಿಹಾಸದಲ್ಲಿ 2020ರ ಆಗಸ್ಟ್ 5ರಂದು ಹೊಸ ಅಧ್ಯಾಯ ಆರಂಭವಾಗಲಿದೆ. ಜನ್ಮಸ್ಥಳ ಅಯೋಧ್ಯೆಯಲ್ಲಿ ರಾಮ ಮಂದಿರ ಮರು ನಿರ್ಮಾಣದ ಕಾರ್ಯ ಆರಂಭವಾಗಲಿದ್ದು, ಭಿನ್ನ ರೀತಿಯಲ್ಲಿ ಈ ಯುಗದ ಪ್ರಮುಖ ಘಟನೆಯಾಗಿ ದಾಖಲಾಗಲಿದೆ. ಈ ಕೊರೊನಾ ಸಾಂಕ್ರಾಮಿಕದಿಂದಾಗಿ ಭೌತಿಕವಾಗಿ ಬಹಳಷ್ಟು ಜನರಿಗೆ ಈ ಘಟನೆಯಲ್ಲಿ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ. ಆದರೆ, ಅನೇಕ ವೇದಿಕೆಗಳ ಮೂಲಕ ಇಡೀ ಜಗತ್ತು ಈ ಕಾರ್ಯಕ್ರಮವನ್ನು ನೇರ ಪ್ರಸಾರದಲ್ಲಿ ನೋಡಲಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ರಾಮಜನ್ಮಭೂಮಿ ಹೋರಾಟಕ್ಕೆ ಮಾರ್ಗದರ್ಶನ […]

Read More

ಕೊರೊನಾ ಲಸಿಕೆಯ ಮೇಲೆ ಸೈಬರ್ ದಗಾಕೋರರ ಕಣ್ಣು

ಸುಧೀಂದ್ರ ಹಾಲ್ದೊಡ್ಡೇರಿ. ಕನ್ನಡದಲ್ಲೊಂದು ಆಡು ಮಾತಿದೆ – ಸಂತೆ ನೆರೆಯುವ ಮುನ್ನವೇ ಗಂಟು ಕಳ್ಳರು ನೆರೆದಿರುತ್ತಾರೆ. ಈ ಮಾತು ಸದ್ಯಕ್ಕೆ ಕೋವಿಡ್-19 ಲಸಿಕೆ ತಯಾರಿಕಾ ಮಾರುಕಟ್ಟೆಗೂ ಅನ್ವಯಿಸುವಂತಿದೆ. ಜನರ ಬಳಕೆಗೆ ಯಾವ ದೇಶದ ಲಸಿಕೆ ಮೊದಲು ಬರಬಹುದೆಂದು ಕಾತುರದಿಂದ ಕಾಯುತ್ತಿರುವಾಗಲೇ ಅಮೆರಿಕ, ಬ್ರಿಟನ್, ಹಾಗೂ ಕೆನಡಾ ದೇಶಗಳಲ್ಲಿನ ಲಸಿಕೆ ಸಂಶೋಧಕರ ಕಂಪ್ಯೂಟರ್‌ಗೆ ಲಗ್ಗೆಯಾಗಿರುವ ಸುದ್ದಿ ಬಂದಿದೆ. ಲಸಿಕೆಗೆ ಯಾವ ರಾಸಾಯನಿಕಗಳು ಬಳಕೆಯಾಗುತ್ತಿವೆ, ಎಷ್ಟು ಪ್ರಮಾಣದಲ್ಲಿ ಅವುಗಳನ್ನು ಬೆರೆಸಲಾಗಿದೆ, ಯಾವ ಅನುಪಾತದಲ್ಲಿ ಬೆರೆಸಿದಾಗ ಉತ್ತಮ ಪರಿಣಾಮ ದೊರೆತಿದೆ, ರಾಸಾಯನಿಕಗಳನ್ನು […]

Read More

ನಿರ್ಧಾರ ಅಚಲವಾಗಿರಲಿ – ಶಾಲೆ ಆರಂಭದ ಬಗ್ಗೆ ಸಚಿವರ ವಿಶಿಷ್ಟ ಕ್ರಮ

ಕೊರೊನಾದಿಂದ ಅಸ್ತವ್ಯಸ್ತಗೊಂಡಿರುವ ಜನಜೀವನವನ್ನು ಮತ್ತೆ ಮೊದಲಿನ ಸ್ಥಿತಿಗೆ ತರುವ ಸಂಬಂಧ ‘ಅನ್‌ಲಾಕ್‌’ ಪ್ರಕ್ರಿಯೆ ಜಾರಿಯಲ್ಲಿದೆ. ಅದೇ ರೀತಿ, ಶಾಲೆಗಳನ್ನು ಆರಂಭಿಸಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆಗಳೂ ನಡೆಯುತ್ತಿವೆ. ಶಾಲೆ ಆರಂಭದ ವಿಷಯದಲ್ಲಿ ಪೋಷಕರ ಆತಂಕವೂ ಸಹಜವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್‌ಕುಮಾರ್ ಅವರು ಸಮಾಜದ ಎಲ್ಲವರ್ಗದ ತಜ್ಞರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ. ಅದರಂತೆ, ಸೋಮವಾರ ಸಚಿವರು ‘ವಿಜಯ ಕರ್ನಾಟಕ’ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳ ಸಂಪಾದಕರ ಜತೆ ಚರ್ಚಿಸಿದ್ದಾರೆ. ಕೊರೊನಾ ಮಧ್ಯೆಯೂ […]

Read More

ಶೈಕ್ಷಣಿಕ ಚಟುವಟಿಕೆ ಶೀಘ್ರ ಆರಂಭಿಸಿ – ಪತ್ರಿಕಾ ಸಂಪಾದಕರ ಜತೆಗಿನ ವೆಬಿನಾರ್‌ನಲ್ಲಿ ಸಚಿವರಿಗೆ ಸಲಹೆ

ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಸಂಕಷ್ಟ ಸಮಯದಲ್ಲೂ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು. ತಂತ್ರಜ್ಞಾನ ಸೇರಿದಂತೆ ಲಭ್ಯ ಇರುವ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಶೈಕ್ಷಣಿಕ ಚಟುವಟಿಕೆಯನ್ನು ಶೀಘ್ರದಲ್ಲೇ ಆರಂಭಿಸಬೇಕು. ಈ ಸಂಬಂಧ ರಾಜ್ಯ ಸರಕಾರ ಸರಕಾರ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಕನ್ನಡದ ಪ್ರಮುಖ ಪತ್ರಿಕೆಗಳ ಸಂಪಾದಕರು ಸರಕಾರಕ್ಕೆ ಸಲಹೆ ನೀಡಿದರು. ಕೋವಿಡ್ ಸಂದರ್ಭದಲ್ಲಿ ಆನ್‌ಲೈನ್‌ ಶಿಕ್ಷ ಣ ಮತ್ತು ಶಾಲಾ ಚಟುವಟಿಕೆಗಳನ್ನು ಯಾವಾಗ ಪ್ರಾರಂಭಿಸಬೇಕು ಕುರಿತು ಅಭಿಪ್ರಾಯ ಸಂಗ್ರಹಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷ ಣ ಸಚಿವ ಎಸ್. […]

Read More

ಸಹಜ ಬದುಕಿನತ್ತ ಗಮನ – ಲಾಕ್‌ಡೌನ್‌ಗಳು ಇತಿಹಾಸ ಸೇರಲಿವೆ

ಒಂದೆಡೆ ಕೋವಿಡ್‌ ಕೇಸುಗಳು ಅನಿಯಂತ್ರತವಾಗಿ ಏರುತ್ತಿರುವಂತೆಯೇ, ಇನ್ನೊದೆಡೆ ಕೊರೊನೋತ್ತರ ಬದುಕಿನಲ್ಲಿ ಚೈತನ್ಯವನ್ನು ಇಮ್ಮಡಿಸುವ ಪ್ರಕ್ರಿಯೆಗಳು ಆರಂಭಗೊಂಡಿವೆ. ಆಗಸ್ಟ 1ರಿಂದ ಕೊರೊನಾ ಲಾಕ್‌ಡೌನ್‌ ನಿರ್ಬಂಧಗಳು ಇನ್ನಷ್ಟು ಸಡಿಲಿಕೆಯಾಗುವ ನಿರೀಕ್ಷೆ ಇದ್ದು ಥಿಯಟರ್‌ ಹಾಗೂ ಜಿಮ್‌ಗಳ ಕಾರ್ಯಾರಂಭಕ್ಕೆ ಷರತ್ತು ಬದ್ಧ ಅನುಮತಿ ಸಿಗುವ ನಿರೀಕ್ಷೆ ಇದೆ. ಗುಣಮುಖರ ಪ್ರಮಾಣ ಏರುಗತಿಯಲ್ಲಿರುವುದು ಹಾಗೂ ಅದರೊಟ್ಟಿಗೆ ಬದುಕುವುದು ಜನರಿಗೆ ಅಭ್ಯಾಸವಾಗಿರುವ ಹಿನ್ನೆಲೆಯಲ್ಲಿ ಈ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಇನ್ನು ರಾಜ್ಯದಲ್ಲಿ, ಶಾಲೆಗಳ ಆರಂಭ ಅನಿಶ್ಚಿತತೆಯಿಂದ ಕೂಡಿರುವುದರಿಂದ ಸಾರ್ವಜನಿಕ ಶಿಕ್ಷಣ ಇಲಾಖೆ, ಈ ಬಾರಿ 1ರಿಂದ […]

Read More

ಕೊಟ್ಟಿಗೆಯಲ್ಲೇ ಐಟಿ ಆಫೀಸ್‌

ತವರಿಗೆ ಮರಳಿದ ಟೆಕ್ಕಿಗಳಿಗೆ ನೆಟ್‌ವರ್ಕ್‌ ಸಮಸ್ಯೆ. ಗುರುದತ್ತ ಭಟ್‌ ಕಾರವಾರ. ಐಟಿ ಉದ್ಯೋಗಿಗಳು ಬೃಹತ್‌ ನಗರಗಳ ಐಶಾರಾಮಿ ಕಚೇರಿಗಳಲ್ಲೇ ಕೆಲಸ ಮಾಡಬೇಕು ಎಂಬ ಅಲಿಖಿತ ನಿಯಮವನ್ನು ಕೊರೊನಾ ಮುರಿದು ಹಾಕಿದೆ. ವರ್ಕ್‌ ಫ್ರಂ ಹೋಮ್‌ ವ್ಯವಸ್ಥೆಯಡಿ ಹಳ್ಳಿ ಮನೆಯ ಕೊಟ್ಟಿಗೆಗಳೂ ಕೂಡ ಐಟಿ ಉದ್ಯೋಗಿಗಳಿಗೆ ಕಚೇರಿಯಾಗಿವೆ. ಕೊರೊನಾ ಸೋಂಕು ವ್ಯಾಪಕವಾದ ಬಳಿಕ ಬೆಂಗಳೂರು, ಮುಂಬಯಿ, ಪೂನಾ ಸೇರಿದಂತೆ ಹಲವು ಬೃಹತ್‌ ನಗರಗಳಲ್ಲಿನ ಐಟಿ ಕಚೇರಿಗಳು ತಮ್ಮ ಉದ್ಯೋಗಿಗಳಿಗೆ ಮನೆಧಿಯಿಂದ ಕೆಲಸ ಮಾಡಲು ಅವಕಾಶ ನೀಡಿವೆ. ನಗರಗಳಲ್ಲಿ ಕೆಲಸ […]

Read More

ಅಮೆರಿಕ- ಚೀನಾ ಸಂಬಂಧ ಕದಡಿದ ಕಡಲು

ಅಮೆರಿಕ ಹಾಗೂ ಚೀನ ದೇಶಗಳ ನಡುವಿನ ವೈಷಮ್ಯ ದಿನೇ ದಿನೆ ಉಲ್ಬಣಿಸುತ್ತಿದೆ. ಉಭಯ ದೇಶಗಳ ವೈಷಮ್ಯಕ್ಕೆ ಕಾರಣವಾದ ಬೆಳವಣಿಗೆಗಳೇನು? ಅವು ಹೇಗೆ ಮುಂದುವರಿದಿವೆ? ರಾಯಭಾರ ಕಚೇರಿಗಳು ಕ್ಲೋಸ್‌ ಎರಡು ದಿನ ಹಿಂದೆ, ಚೀನಾದ ರಾಯಭಾರ ಕಚೇರಿಯ ಮೂಲಕ ನಮ್ಮ ದೇಶದ ರಹಸ್ಯಗಳನ್ನು ಅಲ್ಲಿಗೆ ಕದ್ದು ಸಾಗಿಸಲಾಗುತ್ತಿದೆ ಎಂದು ಆರೋಪಿಸಿದ ಅಮೆರಿಕ, ಹ್ಯೂಸ್ಟನ್‌ನಲ್ಲಿದ್ದ ಆ ಕಚೇರಿಯನ್ನು ಮುಚ್ಚಿಸಿತು. ಇದಕ್ಕೆ ಪ್ರತಿಯಾಗಿ, ಚೆಂಗ್ಡುವಿನಲ್ಲಿದ್ದ ಅಮೆರಿಕದ ರಾಯಭಾರಿ ಕಚೇರಿಯನ್ನು ಚೀನಾ ಮುಚ್ಚಿಸಿದೆ. ಇದಕ್ಕೂ ಮೊದಲು, ಚೀನಾದ ಇಬ್ಬರು ಪ್ರಜೆಗಳು ತನ್ನ ಮಿಲಿಟರಿ […]

Read More

ಸರಕಾರಿ ಆಸ್ಪತ್ರೆ ಬಲಪಡಿಸಿ – ಕೋವಿಡ್‌ ಕಾಲದಲ್ಲಿ ಸರಕಾರವೇ ಆಶಾಕಿರಣ

ದುಡ್ಡಿದ್ದವರಿಗೆ ಖಾಸಗಿ ಆಸ್ಪತ್ರೆ, ಬಡವರಿಗೆ ಸರಕಾರಿ ಆಸ್ಪತ್ರೆ ಎಂಬ ಸಮೀಕರಣ ಇದುವರೆಗೂ ನಮ್ಮ ದೇಶದಲ್ಲಿತ್ತು. ಯಾವಾಗ ಕೊರೊನಾ ಬಂದು ಎಲ್ಲ ಕಡೆಯೂ ಹಬ್ಬಿ ರೋಗಿಗಳ ಸಂಖ್ಯೆ ಊಹಿಸಲಾಗದಷ್ಟು ಹೆಚ್ಚಾಯಿತೋ, ಆಗ ಸರಕಾರಿ ಆಸ್ಪತ್ರೆಗಳ ಮಹತ್ವ ಮತ್ತು ಕಾರ್ಯಭಾರ ಎಲ್ಲರಿಗೆ ಅರ್ಥವಾಗತೊಡಗಿದೆ. ಕೋವಿಡ್‌ ರೋಗಿಗಳ ಸಂಖ್ಯೆ ಹೆಚ್ಚಾಗಿ ರಾಜಧಾನಿಯ ದೊಡ್ಡ ಸರಕಾರಿ ಆಸ್ಪತ್ರೆಗಳು ತುಂಬಿವೆ; ಜಿಲ್ಲಾಸ್ಪತ್ರೆಗಳೂ ತುಂಬಿ ತುಳುಕುತ್ತಿವೆ. ಸರಕಾರ ಎಷ್ಟೇ ಕಾಯಿದೆ ಕಾನೂನು ರೂಪಿಸಿದರೂ ಎಚ್ಚರಿಕೆ ನೀಡಿದರೂ ಖಾಸಗಿ ಆಸ್ಪತ್ರೆಗಳು ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುತ್ತಿವೆ. ಹತ್ತಾರು […]

Read More

ಉತ್ತೇಜನಕಾರಿ ಕೈಗಾರಿಕಾ ನೀತಿ – ಕೊರೊನೋತ್ತರ ದಿನಗಳಿಗೆ ಭರವಸೆಯ ಬೆಳಕು

ಮುಂದಿನ 5 ವರ್ಷಗಳಲ್ಲಿ 20 ಲಕ್ಷ ಉದ್ಯೋಗ ಸೃಷ್ಟಿಸುವ ಮಹತ್ವಾಕಾಂಕ್ಷೆಯ ನೂತನ ಕೈಗಾರಿಕಾ ನೀತಿ 2020-25ಕ್ಕೆ ರಾಜ್ಯ ಸಚಿವ ಸಂಪುಟ ಸಭೆ ಗುರುವಾರ ಒಪ್ಪಿಗೆ ನೀಡಿದೆ. ಈ ನೂತನ ನೀತಿಯ ಫಲವಾಗಿ 5 ವರ್ಷದಲ್ಲಿ 5 ಲಕ್ಷ ಕೋಟಿ ರೂ. ಬಂಡವಾಳ ಹರಿದು ಬರುವ ನಿರೀಕ್ಷೆಯಿದೆ. ಬೆಂಗಳೂರು ಹೊರತು ಪಡಿಸಿ 2ನೇ ಮತ್ತು 3ನೇ ಹಂತದ ನಗರಗಳಿಗೂ ಉದ್ಯಮ ವಲಯ ವಿಸ್ತರಿಸಲು ಈ ನೀತಿ ಸಹಾಯಕವಾಗಲಿದೆ ಎಂದು ಸಚಿವರು ಹೇಳಿದ್ದಾರೆ. ವರ್ಷಾಂತ್ಯದಲ್ಲಿ ನಡೆಸಲು ಉದ್ದೇಶಿಸಲಾಗಿರುವ ವಿಶ್ವ ಬಂಡವಾಳ […]

Read More

ಕೊರೊನಾವನ್ನೂ ಮೀರಿಸುತ್ತಿದೆ ಖಿನ್ನತೆ, ಕಳಂಕದ ಭೀತಿ

– ಆತಂಕ, ಭಯದಿಂದ ಮನೋತಜ್ಞರ ಮೊರೆಹೋದ ಜನ | ರಾಜ್ಯ ಸರಕಾರದ ಟೆಲಿ ಕನ್ಸಲ್ಟೆನ್ಸಿಗೆ 3 ಲಕ್ಷ ಕರೆ. ಮಂಜುನಾಥ ನಾಗಲೀಕರ್, ಬೆಂಗಳೂರು. ಕೊರೊನಾ ಸೋಂಕಿಗಿಂತ ಅದಕ್ಕೆ ಸಂಬಂಸಿದ ಕಳಂಕ, ಭಯ, ಸಾಮಾಜಿಕ ಅಂತರ ಮತ್ತು ಸಹಜ ಜೀವನದಿಂದ ಪ್ರತ್ಯೇಕವಾಗಿರಬೇಕಾದ ಪರಿಸ್ಥಿತಿಯೇ ವೈದ್ಯಕೀಯ ಸಮುದಾಯ ಮತ್ತು ರಾಜ್ಯದ ಜನರನ್ನು ತೀವ್ರವಾಗಿ ಕಾಡುತ್ತಿದೆ. ಸೋಂಕಿತರು ಅಥವಾ ಸೋಂಕು ಹರಡಬಾರದು ಎಂಬ ಕಾರಣಕ್ಕೆ ಮಾಡಿದ ಕ್ವಾರಂಟೈನ್‌ನಿಂದ ಆದ ಮಾನಸಿಕ ಒತ್ತಡದಿಂದ ಕಾಪಾಡಲು 3 ಲಕ್ಷ ಕ್ಕೂ ಹೆಚ್ಚು ಜನರೊಂದಿಗೆ ರಾಜ್ಯದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top