ಪೊಲೀಸರಿಗೆ ಸವಾಲ್‌

ಒಂದೇ ದಿನ ಐವರಿಗೆ ಸೋಂಕು |  ಕರಾವಳಿಯ 4 ಠಾಣೆ ಸೀಲ್‌ಡೌನ್.   ‌ಸೂಕ್ತ ತರಬೇತಿ, ರಕ್ಷಣಾ ಪರಿಕರವಿಲ್ಲದೆ ಅಪಾಯಕ್ಕೆ ಸಿಲುಕುವ ಸಿಬ್ಬಂದಿ. ವಿಕ ಸುದ್ದಿಲೋಕ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಪೊಲೀಸರೂ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ಒಂದೇ ದಿನ ಕರಾವಳಿಯ ನಾಲ್ವರು ಮತ್ತು ಹಾಸನ ಒಬ್ಬ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಜತೆಗೆ 150ಕ್ಕೂ ಅಧಿಕ ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೊರೊನಾ […]

Read More

ಸ್ವದೇಶಿ ಭಾರತಕ್ಕೆ ಕೊರೊನಾ ಪ್ರೇರಣೆಯಾಗಲಿ

– ನಾ. ತಿಪ್ಪೇಸ್ವಾಮಿ. ಕೊರೊನಾ ಮಹಾಮಾರಿಯಿಂದಾಗಿ ಅಮೆರಿಕ, ರಷ್ಯಾ, ಚೀನಾ, ಸ್ಪೇನ್ ಮುಂತಾದ ಶ್ರೀಮಂತ ರಾಷ್ಟ್ರಗಳು ತತ್ತರಿಸಿ ಹೋಗಿವೆ. ಅತ್ಯಧಿಕ ಸಂಖ್ಯೆಯಲ್ಲಿಸಾವು ನೋವುಗಳು ಸಂಭವಿಸಿವೆ. ಈ ವೈರಸ್ ಭಾರತದಲ್ಲಿಯೂ ಹರಡಿದೆ. ಆದರೆ ಅಷ್ಟೊಂದು ದೊಡ್ಡ ಪ್ರಮಾಣದ ಪ್ರಾಣಹಾನಿಯನ್ನು ಮಾಡಲಿಲ್ಲ. ಇದಕ್ಕೆ ಮುಖ್ಯ ಕಾರಣ ಭಾರತದ ನಾಯಕತ್ವ ತೆಗೆದುಕೊಂಡ ನಿರ್ಣಯಗಳು ಹಾಗೂ ಈ ದೇಶದಲ್ಲಿಆಚರಣೆಯಲ್ಲಿರುವ ರೀತಿ ನೀತಿಗಳು. ಪ್ರಧಾನಿ ಮೋದಿ ಮಾ.22ರಂದು 21ದಿನಗಳ ಕಾಲ ಲಾಕ್‌ಡೌನ್‌ ಘೋಷಿಸಿದರು. ಇದು ಅನೇಕರನ್ನು ದಿಗ್ಭ್ರಮೆಗೊಳಿಸಿತು. 130 ಕೋಟಿ ಜನರಿರುವ ಭಾರತದಲ್ಲಿ ಅನೇಕ […]

Read More

ಕೊರೊನಾ ಜತೆಗೇ ಬದುಕು – ಲಾಕ್‌ಡೌನ್‌ ಕಲಿಸಿದ ಅನುಭವವೇ ನಮಗೆ ದಾರಿ

ಇಡೀ ಜಗತ್ತನ್ನೇ ಕಂಗೆಡಿಸಿರುವ ಕೊರೊನಾ ವೈರಸ್(ಕೋವಿಡ್-19) ಕೂಡಲೇ ನಿರ್ನಾಮ ಆಗಲಿದೆಯೇ, ದೀರ್ಘಕಾಲದವರೆಗೆ ಇರಲಿದೆಯೇ ಎಂಬ ಚರ್ಚೆಗಳು ನಡೆಯುತ್ತಿರುವಾಗಲೇ, ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂಎಚ್ಒ), ‘‘ಕೋವಿಡ್-19 ಕೂಡ ಎಚ್ಐವಿ ರೀತಿಯಲ್ಲಿ ದೀರ್ಘಕಾಲಿನ ಸೋಂಕು ರೋಗವಾಗಿ ಉಳಿಯುವ ಸಾಧ್ಯತೆ ಇದ್ದು, ಇದರ ಜತೆಗೇ ಜೀವನ ನಡೆಸುವ ವಿಧಾನಗಳನ್ನು ಕಂಡುಕೊಳ್ಳಬೇಕಿದೆ,’’ ಎಂದು ಹೇಳಿದೆ. ಇದೇ ರೀತಿಯ ಅಭಿಪ್ರಾಯವನ್ನು ಕೆಲವು ದಿನಗಳ ಹಿಂದೆ ಭಾರತ ಸರಕಾರದ ಆರೋಗ್ಯ ಇಲಾಖೆ ಕೂಡ ವ್ಯಕ್ತಪಡಿಸಿ, ‘‘ನಾವು ಕೊರೊನಾ ವೈರಾಣುವಿನೊಂದಿಗೆ ಬದುಕುವುದನ್ನು ಕಲಿಯಬೇಕಿದೆ,’’ ಎಂದು ಹೇಳಿತ್ತು. ಕೊರೊನಾ ವೈರಸ್ […]

Read More

ದಾದಿ ಸೇವೆಯ ಆದಿ

ಕಣ್ಣೆದುರೇ ಮಗು ಇದ್ದರೂ ಮುದ್ದಾಡಲು ಆಗದ ಸ್ಥಿತಿ… ಹೆರಿಗೆ ದಿನಾಂಕ ಹತ್ತಿರವೇ ಇದ್ದರೂ ಕರ್ತವ್ಯದ ಕರೆಯೇ ಮೇಲು… ಅಮ್ಮಾ, ನಿನ್ನ ನೋಡಬೇಕು ಎನ್ನುವ ಒಡಲ ಕುಡಿಗಳ ಅಳಲು… ಎಂಥದ್ದೇ ಪರಿಸ್ಥಿತಿಯಲ್ಲೂ ರೋಗಿಗಳ ಆರೈಕೆ ಮಾಡಬೇಕೆಂಬ ವೃತ್ತಿಪ್ರಜ್ಞೆ… ಕೊರೊನಾ ಸಂದರ್ಭದಲ್ಲಿ ಆರೈಕೆ ಮಾಡುತ್ತಿರುವ ದಾದಿಯರ ಬಿಡಿ ಬಿಡಿ ಭಾವಗಳಿವು. ಅಂತರಾಷ್ಟ್ರೀಯ ದಾದಿಯರ ದಿನದ ನೆಪದಲ್ಲಿ ಅವರ ನಿಸ್ವಾರ್ಥ ಸೇವೆಯನ್ನು ಸ್ಮರಿಸುವ ಸುಯೋಗ ನಮಗೆಲ್ಲರಿಗೂ ದೊರೆತಿದೆ. ನಾವಿಲ್ಲಿ ಕೆಲವು ದಾದಿಯರ ಸೇವೆಯ ಕತೆಯನ್ನು ನಿಮ್ಮ ಮುಂದೆ ಹರವಿಟ್ಟಿದ್ದೇವೆ. ಓದಿಕೊಳ್ಳಿ. ಹೆರಿಗೆಗೆ […]

Read More

ಆನ್‌ಲೈನ್‌ನಲ್ಲೇ ಜಪ, ತಪ, ಪೂಜೆ, ಧ್ಯಾನ

ಕೊರೊನಾದಿಂದ ಬದಲಾದ ಟ್ರೆಂಡ್‌: ಯೂಟ್ಯೂಬ್‌ನಲ್ಲೇ ಪೂಜೆ ನೇರ ಪ್ರಸಾರ, ನಿತ್ಯ ಪ್ರವಚನ, ಸತ್ಸಂಗ – ಗೌರಿಪುರ ಚಂದ್ರು ಬೆಂಗಳೂರು. ಕೊರೊನಾ ಲಾಕ್‌ಡೌನ್‌ನಿಂದಾಗಿ ಮಠ, ಮಂದಿರಗಳಿಗೆ ಹೋಗುವುದು ನಿಂತಿದೆ. ಆದರೆ ಆನ್‌ಲೈನ್‌ ಮಾರ್ಗದ ಮೂಲಕ ಮನೆಮನೆಗಳಲ್ಲಿ ಭಕ್ತಿ ದಾಸೋಹ ಮುಂದುವರಿದಿದೆ. ಸ್ಕೈಪ್‌, ಫೇಸ್‌ಬುಕ್‌ ಪೇಜ್‌ ಹಾಗೂ ವಿಡಿಯೊ ಚಾಟಿಂಗ್‌ ಮೂಲಕ ವೇದ, ಉಪನಿಷತ್‌, ಸುಧಾಮಂಗಳ ಪಾಠ ಕಲಿಯುವವರ ಸಂಖ್ಯೆ ಹೆಚ್ಚಿದೆ. ಪ್ರವಚನ ಪ್ರಿಯರು, ಅಧ್ಯಾತ್ಮ ಆಸಕ್ತರು ಯೂಟ್ಯೂಬ್‌ ಮೊರೆ ಹೋಗುತ್ತಿದ್ದಾರೆ. ಫೇಸ್‌ಬುಕ್‌ನಲ್ಲೂ ಸ್ಪಿರಿಚುಯಲ್‌ ಉಪನ್ಯಾಸಗಳು ನಿತ್ಯ ಬಿತ್ತರವಾಗುತ್ತಿವೆ. ಉತ್ತರಾದಿಮಠದ […]

Read More

ಕೊರೊನಾ ಜತೆಗೇ ನಡೆಯಲಿ ಜೀವನ – ವೈರಾಣುವಿಗೆ ಹೆದರಿ ಕೂರಲಾಗದು, ಎದುರಿಸಿ ನಿಲ್ಲುವ ದೈಹಿಕ, ಮಾನಸಿಕ ಶಕ್ತಿಯೊಂದೇ ದಿವ್ಯಾಸ್ತ್ರ

– ಮಲ್ಲಿಕಾರ್ಜುನ ತಿಪ್ಪಾರ/ಕಿರಣ್ ಕುಮಾರ್ ಡಿ.ಕೆ Yes, the show must go on… ನಾವೀಗ ಕೊರೊನಾ ವೈರಸ್ ಜತೆಗೆ ಬದುಕುವುದನ್ನು ಕಲಿಯಲೇಬೇಕಿದೆ. ಯಾಕೆಂದರೆ, ಸದ್ಯಕ್ಕೆ ಈ ಕೊರೊನಾಗೆ ಪರಿಹಾರವಿಲ್ಲ. ಇರುವ ಪರಿಹಾರ ಮಾರ್ಗಗಳನ್ನು ಅಳವಡಿಸಿ, ಬಳಸಿ ನೋಡಿದ್ದಾಯಿತು. ಈ ಅನುಭವ ಹಾಗೂ ಈ ಹಿಂದಿನ ರೋಗಗಳ ಇತಿಹಾಸದ ಹಿನ್ನೆಲೆಯಲ್ಲಿ ನಾವೀಗ ಕಂಡುಕೊಳ್ಳಬೇಕಾಗಿರುವ ಸತ್ಯ; ನಮ್ಮ ಬದುಕು ಇನ್ನೇನಿದ್ದರೂ ಕೊರೊನಾ ಜೊತೆಗೇ ನಡೆಯಬೇಕು. ಆದರೆ, ಅದಕ್ಕೊಂದು ಕ್ರಮ ವಿಧಿಸಿಕೊಳ್ಳಬೇಕಷ್ಟೇ. ಕೊರೊನಾ ವೈರಸ್‌ಗಿಂತಲೂ ಮಿಗಿಲಾದ, ಅತಿಭಯಂಕರ ವೈರಸ್‌ಗಳನ್ನು ಈ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top