ಕೋವಿಡ್‌ ಲೆಕ್ಕಾಚಾರಕ್ಕೊಂದು ಸೂತ್ರ

ಕೊರೊನಾ ವೈರಾಣು ಸೋಂಕು ಸಮುದಾಯದಲ್ಲಿ ಯಾವಾಗ ಹೆಚ್ಚಾಗುತ್ತದೆ, ಯಾವಾಗ ಇಳಿಯುತ್ತದೆ ಎಂಬುದನ್ನು ಮುಂಚಿತವಾಗಿಯೇ ಲೆಕ್ಕ ಹಾಕಲು ಸಾಧ್ಯವೇ ಎಂದು ಬಹಳಷ್ಟು ಗಣಿತ ತಜ್ಞರು, ವಿಜ್ಞಾನಿಗಳು ಪ್ರಯತ್ನಿಸುತ್ತಲೇ ಇದ್ದಾರೆ. ಅದರಲ್ಲಿ ಮೈಖೇಲ್‌ ಲೆವಿಟ್‌ ಎಂಬ ನೊಬೆಲ್‌ ಪುರಸ್ಕೃತ ಕೆಮಿಸ್ಟ್ರಿ ವಿಜ್ಞಾನಿಯೊಬ್ಬರು ಬಹುತೇಕ ಯಶಸ್ವಿಯಾಗಿದ್ದಾರೆ. ಅವರು ಕೋವಿಡ್‌ನ ಏರಿಳಿತ ಲೆಕ್ಕಹಾಕುವ ಸೂತ್ರವೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಹೇಳುವ ಪ್ರಕಾರ, ಜಾಗತಿಕವಾಗಿ ಕೋವಿಡ್‌ ಸೋಂಕು ಇಳಿಯುವ ಕಾಲ ಹತ್ತಿರವಾಗಿದೆ. ಆತಂಕ ಬೇಡ. ಇದನ್ನು ತಡೆಯಲು ನಾವು ಅನುಸರಿಸಬೇಕಾದ ಸರಳ ಕ್ರಮಗಳೆಂದರೆ ಸೋಶಿಯಲ್‌ ಡಿಸ್ಟೆನ್ಸ್‌ ಮತ್ತು ಮಾಸ್ಕ್‌ ಧಾರಣೆ ಮಾತ್ರ.

ಕೆಲವು ಕಿವಿಮಾತುಗಳು
ಅವರು ಹೇಳುವ ಕಿವಿಮಾತುಗಳೆಂದರೆ- ಒಟ್ಟಾರೆ ಎಷ್ಟು ಪ್ರಕರಣಗಳು ಇವೆಯೆಂದು ನೋಡಬೇಡಿ. ಬದಲು ಪ್ರತಿದಿನದ ಪ್ರಕರಣಗಳ ಬೆಳವಣಿಗೆಯನ್ನು ನೋಡಿ. ಸಮೂಹ ಮಾಧ್ಯಮಗಳು ಕೋವಿಡ್‌ ಸೋಂಕನ್ನು ಅತಿರಂಜಿತಗೊಳಿಸುತ್ತಿವೆ. ಇಟಲಿಯಲ್ಲಿ ಬಲವಾದ ‘ಆ್ಯಂಟಿ ವ್ಯಾಕ್ಸೀನ್‌ ಚಳವಳಿ’ ಇದೆ. ಅಲ್ಲಿನ ಸಾವುಗಳ ಅಧಿಕ ಸಂಖ್ಯೆಗೆ ಅದು ಕಾರಣವಾಗಿರಬಹುದು. ಕೊರೊನಾದ ಬಗ್ಗೆ ಅತಿಯಾದ ಆತಂಕ ತೋರಿಸುವುದು ನಿರುದ್ಯೋಗ, ಖಿನ್ನತೆ, ಆತ್ಮಹತ್ಯೆಗಳಂಥ ಇನ್ನೂ ದೊಡ್ಡ ಸಮಸ್ಯೆಗಳಿಗೆ ಕಾರಣ ಆಗಬಹುದು.

ಭಾರತದ ಲೆಕ್ಕಾಚಾರ
ಮೈಖೆಲ್‌ ಲೆವಿಟ್‌ ಅವರ ಸೂತ್ರವನ್ನು ಅನುಸರಿಸಿ, ಬಾಂಬೆ ಐಐಟಿಯ ಕಂಪ್ಯೂಟರ್‌ ಸೈನ್ಸ್‌ ವಿಭಾಗದ ಪ್ರಾಧ್ಯಾಪಕ ಭಾಸ್ಕರನ್‌ ರಮಣ್‌ ಎಂಬವರು ಭಾರತದ ಹಲವು ರಾಜ್ಯಗಳ ಅಂಕಿ ಅಂಶಗಳನ್ನು ಇಟ್ಟುಕೊಂಡು ಗ್ರಾಫ್‌ ತಯಾರಿಸಿದ್ದಾರೆ. ಅದರ ಪ್ರಕಾರ ಮುಂದೆ ಎಷ್ಟು ದಿನಗಳಿಗೆ ದೇಶದ ಅಥವಾ ಆಯಾ ರಾಜ್ಯದ ಸೋಂಕು ಹೆಚ್ಚಳ ಮುಂದುವರಿಯಲಿದೆ ಎಂಬುದನ್ನು ತರ್ಕಿಸಿದ ಗ್ರಾಫ್‌ಗಳನ್ನು ಇಲ್ಲಿ ನೀಡಲಾಗಿದೆ. ಇದು ಜುಲೈ 13ರಂದು ಮಾಡಿದ ಲೆಕ್ಕಾಚಾರ.

ಇಟಲಿ
ಜನಸಂಖ್ಯೆ- 6 ಕೋಟಿ, ಕೋವಿಡ್‌ ಸಾವು- 35,000. ಡಿಪಿಎಂ (ಡೆತ್‌ ಪರ್‌ ಮಿಲಿಯನ್‌ (ಹತ್ತು ಲಕ್ಷಕ್ಕೆ ಸಾವು)- 583. ಸೋಂಕು ಹರಡುವಿಕೆ ಬಹುತೇಕ ಮುಗಿದಿದೆ.

ಭಾರತ
ಜನಸಂಖ್ಯೆ- 137 ಕೋಟಿ. ಕೋವಿಡ್‌ ಸಾವು- 23,700. ಡಿಪಿಎಂ- 17 (ಇದುವರೆಗೆ). ಗ್ರಾಫ್‌ನ ಪ್ರಕಾರ ಸೋಂಕು ಇಳಿಯಲು ಇನ್ನೂ ಎರಡೂವರೆ ತಿಂಗಳು ಬೇಕು.

ಮುಂಬಯಿ
ಜನಸಂಖ್ಯೆ- 2 ಕೋಟಿ. ಕೋವಿಡ್‌ ಸಾವು- 5300. ಡಿಪಿಎಂ- 265. ಸೋಂಕು ಹಿಡಿತಕ್ಕೆ ಬರಲು ಇನ್ನೂ ಎರಡು ವಾರ ಬೇಕು. ಸಾವುಗಳು 6500 ತಲುಪಬಹುದು.

ದಿಲ್ಲಿ
ಜನಸಂಖ್ಯೆ- 2 ಕೋಟಿ. ಕೋವಿಡ್‌ ಸಾವು- 3400. ಡಿಪಿಎಂ- 170. ಸೋಂಕು ಹಿಡಿತಕ್ಕೆ ಬರಲು ಇನ್ನೂ ಎರಡುವರೆ ವಾರ ಬೇಕು. ಸಾವುಗಳು 4500 ತಲುಪಲಿವೆ.

ಕರ್ನಾಟಕ
ಕರ್ನಾಟಕದ ಗ್ರಾಫ್‌ ಈಗಷ್ಟೇ ಆರಂಭವಾಗಿದೆ ಎಂದು ಗ್ರಾಫ್‌ ಸೂಚಿಸುತ್ತಿದೆ. ಅಂದರೆ ಕೆಟ್ಟ ದಿನಗಳು ಇನ್ನೂ ಮುಂದಿವೆ.

ಗುಜರಾತ್‌
ಜನಸಂಖ್ಯೆ- 6.3 ಕೋಟಿ. ಕೋವಿಡ್‌ ಸಾವು- 2100. ಡಿಪಿಎಂ- 33. ಸೂಚ್ಯಂಕ ಒಂದನ್ನು ತಲುಪಿದ್ದು, ಸೋಂಕಿನ ಹರಡುವಿಕೆ ಬಹುತೇಕ ಸ್ಥಗಿತಗೊಂಡಂತಿದೆ.

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top