ಗಿಲ್ಗಿಟ್‌ ವಿಚಾರದಲ್ಲಿ ಭಾರತದ ನಿಲುಮೆಗೆ ಚೀನಾ ಗಿರಗಿಟ್ಲೆ

ಸ್ವಾವಲಂಬನೆಯ ಮೂಲಕ ವ್ಯಾಪಾರ ವಹಿವಾಟಿನಲ್ಲೂ ಚೀನಾವನ್ನು ಮಣಿಸಬೇಕು. – ಹರಿಪ್ರಕಾಶ್‌ ಕೋಣೆಮನೆ. ಚೀನಾದ ವುಹಾನ್‌ ಪ್ರಾಂತ್ಯದಿಂದ ಹರಡಿದ ಕೊರೊನಾ ಎಂಬ ವೈರಸ್‌ ಇಡೀ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಇಡೀ ಮನುಕುಲಕ್ಕೆ ವೈರಸ್‌ ಹರಡಲು ಕಾರಣವಾದ ಅದೇ ಚೀನಾ ಭಾರತಕ್ಕೆ ಸದಾ ಮಗ್ಗಲು ಮುಳ್ಳು. ಈಗ ಕೊರೊನಾ ಕಾಟದ ಜತೆಗೆ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ. ಇದಕ್ಕೆ ಭಾರತವೇನು ಹೆದರಿಲ್ಲ. ಈಗಂತೂ ಗಟ್ಟಿ ನಾಯಕತ್ವವೇ ಇರುವುದರಿಂದ, ಹೆದರಿಸುವ ಸ್ಥಾನದಲ್ಲೂ ಇದೆ. ಹಾಗೆ ಸುಮ್ಮನೇ 2017ರ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಳ್ಳೋಣ. ಭಾರತ- […]

Read More

ಭಾರತೀಯ ಆ್ಯಪ್‌ಗಳಿಗೆ ಧ್ವನಿ ನೀಡಿ

– ತರುಣ್‌ ವಿಜಯ್‌. ಮುಂಬೈ ದಾಳಿಯ ಭಯೋತ್ಪಾದಕ ದಾವೂದ್‌ ಇಬ್ರಾಹಿಂ ಕೊರೊನಾ ಸೋಂಕಿಗೆ ಒಳಗಾಗಿದ್ದಾನೆ ಎಂದು ಸಂತೋಷದಿಂದ ಹೇಳುವ ಕೆಲವು ಟ್ವೀಟ್‌ಗಳು ಮತ್ತು ಸುದ್ದಿ ತುಣುಕುಗಳನ್ನು ನೋಡಿದೆ. ಅವನು ಚೇತರಿಸಿಕೊಳ್ಳಬೇಕೆಂದು ಪ್ರಾರ್ಥಿಸಿ. ಯಾಕೆಂದರೆ ನಮ್ಮ ಭದ್ರತಾ ಸಿಬ್ಬಂದಿಯ ಗುಂಡುಗಳಿಂದ ಸಾಯಲು ಅಥವಾ ಮುಂಬೈಗೆ ತಂದು ಗಲ್ಲಿಗೇರಿಸಲ್ಪಡಲು ಆತ ಅರ್ಹನಾಗಿದ್ದಾನೆ. ನಾವು ಯಾವ ಬಗೆಯ ರಾಷ್ಟ್ರ ಅಂತ ಯೋಚಿಸೋಣ. ನಮ್ಮ ಜನರು ಮತ್ತು ಸೈನಿಕರ ಮೇಲೆ ದಾಳಿ ಮಾಡುವ, ನಮ್ಮ ಮಣ್ಣಿನ ಮೇಲೆ ಯುದ್ಧ ಸಾರುವ ದಾಳಿಕೋರರನ್ನು ಮುಕ್ತವಾಗಿ […]

Read More

ಮೊದಲು ಉದ್ಯಮ, ಬಳಿಕ ಪರ್ಮಿಷನ್ – ಉದ್ಯಮಸ್ನೇಹಿ ಹೊಸ ಕೈಗಾರಿಕೆ ನೀತಿ ಕರಡು ಸಿದ್ಧ

– ಕೆಂಚೇಗೌಡ ಬೆಂಗಳೂರು.  ಕೊರೊನೋತ್ತರ ಸಂದರ್ಭದಲ್ಲಿ ರಾಜ್ಯದ ಆರ್ಥಿಕತೆ ನಿರೀಕ್ಷಿಸಿದ್ದಕ್ಕಿಂತ ಬೇಗ ಸುಧಾರಿಸುವ ಭರವಸೆ ಮೂಡಲಾರಂಭಿಸಿದೆ. ಇದರ ನಡುವೆ ವಿದೇಶಿ ಕಂಪನಿಗಳಿಂದ ಹೂಡಿಕೆ ಆಕರ್ಷಿಸುವ ಸರಕಾರದ ಪ್ರಯತ್ನ ಕೈಗೂಡುವ ವಿಶ್ವಾಸವಿದ್ದು, ಉದ್ಯಮಸ್ನೇಹಿ ಹೊಸ ಕೈಗಾರಿಕಾ ನೀತಿ ಪ್ರಕಟಿಸಲು ಸಿದ್ಧತೆ ನಡೆದಿದೆ. 2019-24ನೇ ಸಾಲಿಗೆ ಸಿದ್ಧಗೊಂಡಿದ್ದ  ಹೊಸ ಕೈಗಾರಿಕೆ ನೀತಿ ಕರಡು ಅಂತಿಮಗೊಂಡಿದ್ದರೂ ಲಾಕ್‌ಡೌನ್‌ ಕಾರಣಕ್ಕೆ ತಡೆ ಹಿಡಿಯಲಾಗಿತ್ತು. ಕರಡು ಪರಿಷ್ಕರಿಸಿ ಅಂತಿಮಗೊಳಿಸುವ ಕೆಲಸವನ್ನು ಹಣಕಾಸು ಹಾಗೂ ಕೈಗಾರಿಕಾ ಇಲಾಖೆ ನಡೆಸಿದೆ.ನೂತನ ನೀತಿಯ ಕರಡು ಕೊರೊನಾ ಸನ್ನಿವೇಶದ ಬಳಿಕ […]

Read More

ಬರಲಿವೆ ಕಿಲ್ಲರ್‌ ರೋಬಾಟ್‌!

ಅಮೆರಿಕ ಹಾಗೂ ಚೀನಾಗಳು ಸದ್ದಿಲ್ಲದೆ ಕಿಲ್ಲರ್‌ ರೋಬಾಟ್‌ಗಳನ್ನು ತಯಾರಿಸುತ್ತಿವೆ ಎಂಬ ಗುಸುಗುಸು ಮಿಲಿಟರಿ ವಲಯದಲ್ಲೇ ಇದೆ. ಇವುಗಳನ್ನು ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಏನಿದು ಕೊಲೆಗಾರ ಯಂತ್ರ? ಅವುಗಳಿಂದ ಏನು ಅಪಾಯ? ಯುದ್ಧರಂಗದಲ್ಲಿ ಮಾನವರಿಲ್ಲದೆ ಬರೀ ಯಂತ್ರಗಳು ಹೊಡೆದಾಡುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಮುಂದುವರಿದ ದೇಶವೊಂದರ ದೈತ್ಯ ರೋಬಾಟ್‌ಗಳು ಪಕ್ಕದ ಬಲಹೀನ ದೇಶದ ಗಡಿಯೊಳಗೆ ನುಗ್ಗಿ ಸೈನಿಕರನ್ನು ಹುಳಗಳಂತೆ ಜಜ್ಜಿಹಾಕುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಇದ್ದಕ್ಕಿದ್ದಂತೆ ಆಕಾಶದಿಂದ ಸಾವಿರಾರು ಡ್ರೋನ್‌ಗಳು ಇದ್ದಕ್ಕಿದ್ದಂತೆ ಬೆಂಕಿಯ ಮಳೆ ಸುರಿಸುವುದನ್ನು ಊಹಿಸಿಕೊಳ್ಳಿ. ಮಿಲಿಟರಿಯಲ್ಲಿ ಕೊಲೆಗಾರ […]

Read More

ಚೀನಾದ ಜೊತೆ ಮಾತುಕತೆ ಭಾರತ ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧ

ಚೀನಾದ ಜೊತೆಗೆ ಲಡಾಕ್‌ ಗಡಿಭಾಗದಲ್ಲಿ ತಲೆದೋರಿದ ಬಿಕ್ಕಟ್ಟನ್ನು ದ್ವಿಪಕ್ಷೀಯ ಮಾತಕತೆ ಮೂಲಕ ಶಾಂತಿಯುತ ರೀತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಉಭಯ ದೇಶಗಳ ಮಿಲಿಟರಿ ಮಟ್ಟದ ಸಂಧಾನ ಸಭೆ ತೀರ್ಮಾನಿಸಿದೆ. ಒಂದು ತಿಂಗಳಿಂದ ಎರಡು ರಾಷ್ಟ್ರಗಳ ನಡುವೆ ಉದ್ಭವಿಸಿರುವ ಸಂಘರ್ಷ ಸ್ಥಿತಿ ಶಮನಕ್ಕಾಗಿ ಶನಿವಾರ ಎರಡೂ ದೇಶಗಳ ಉನ್ನತ ಸೇನಾಧಿಕಾರಿಗಳ ಸಭೆ ನಡೆದಿದ್ದು, ಅದರಲ್ಲಿ ಈ ನಿರ್ಧಾರವಾಗಿದೆ. ಇದೇ ವೇಳೆಗೆ ‘‘ಸಂಘರ್ಷದಿಂದ ಸಮಸ್ಯೆ ಇತ್ಯರ್ಥಗೊಳ್ಳುವುದಿಲ್ಲ. ಇದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು. ಅನಗತ್ಯ ಹಸ್ತಕ್ಷೇಪ ಹಾಗೂ ಶಕ್ತಿಪ್ರದರ್ಶನಕ್ಕೆ ಮುಂದಾದರೆ ನಾವು ಕೈಕಟ್ಟಿ ಕೂಡುವುದಿಲ್ಲ,’’ […]

Read More

ಹೊಸ ಗೆಳೆಯ ಆಸ್ಪ್ರೇಲಿಯ – ಕಿರಿಕಿರಿಯ ನೆರೆಹೊರೆಗೊಂದು ಎಚ್ಚರಿಕೆ

ಭಾರತವು ಆಸ್ಪ್ರೇಲಿಯದ ಜೊತೆ ಮಹತ್ವದ ಒಂದು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ. ಇನ್ನು ಮುಂದೆ ಭಾರತ ಹಾಗೂ ಆಸ್ಪ್ರೇಲಿಯ ಪರಸ್ಪರರ ನೆಲಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದು. ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ‘ಆನ್‌ಲೈನ್‌ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡು, ರಕ್ಷಣೆ ಸೇರಿ ಏಳು ಕ್ಷೇತ್ರಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ‘ಮ್ಯೂಚುವಲ್‌ ಲಾಜಿಸ್ಟಿಕ್ಸ್‌ ಸಪೋರ್ಟ್‌ ಅಗ್ರಿಮೆಂಟ್‌’ ಕ್ರಾಂತಿಕಾರಕವಾಗಿದ್ದು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ […]

Read More

ಚೀನಾ ಸೊಕ್ಕಿಗೆ ಭಾರತ ಸಡ್ಡು

– ಭಾರತ- ಆಸ್ಪ್ರೇಲಿಯಾ ವರ್ಚುವಲ್ ಶೃಂಗ.  – ವ್ಯೂಹಾತ್ಮಕ ಒಪ್ಪಂದಕ್ಕೆ ಉಭಯ ದೇಶಗಳ ಸಹಿ.  – ಪರಸ್ಪರ ಸೇನಾ ನೆಲೆ ಬಳಸಿಕೊಳ್ಳಲು ಸಮ್ಮತಿ | ಡ್ರ್ಯಾಗನ್‌ಗೆ ಅಂಕುಶ.  ಹೊಸದಿಲ್ಲಿ: ಚೀನಾ ಗಡಿಯಲ್ಲಿ ಕದನ ಕಾರ್ಮೋಡಗಳು ಎದ್ದಿರುವಾಗಲೇ ಭಾರತವು ಸೇನಾ ನೆಲೆಗಳನ್ನು ಬಳಸಿಕೊಳ್ಳುವ ಕುರಿತು ಆಸ್ಪ್ರೇಲಿಯಾ ಜತೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ವಿಶ್ವದ ಗಮನ ಸೆಳೆದಿದೆ. ಗಡಿ ಸಾರ್ವಭೌಮತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಖಚಿತಪಡಿಸುತ್ತ ಬಂದಿರುವ ಭಾರತ, ಲಡಾಖ್ ವಲಯದ […]

Read More

ಚೀನಾ ಕಾಯಿದೆಗೆ ಊಹೂಂ ಅನ್ನುತ್ತಿದೆ ಹಾಂಕಾಂಗ್

ಹಾಂಕಾಂಗ್‌ನ ಸ್ವಾಯತ್ತತೆಯನ್ನು ಸಂಪೂರ್ಣ ನಿರಾಕರಿಸಿ, ತನ್ನ ಸರ್ವಾಧಿಪತ್ಯವನ್ನು ಅಲ್ಲಿ ಸ್ಥಾಪಿಸಲು ಚೀನಾ ಮುಂದಾಗಿದೆ. ಇದು ಹಾಂಕಾಂಗ್‌ನಲ್ಲಿ ಇನ್ನೊಂದು ಸುತ್ತಿನ ಪ್ರತಿರೋಧದ ಅಲೆ ಹಾಗೂ ಅಮೆರಿಕದೊಂದಿಗಿನ ಸಂಬಂಧದಲ್ಲಿ ಮತ್ತಷ್ಟು ಬಿರುಕು ಮೂಡಿಸಲಿದೆ. ಕಾಯಿದೆಯಲ್ಲಿ ಏನಿದೆ? ಹೊಸ ಕಾಯಿದೆಯ ಬಗ್ಗೆ ಚೀನಾ ಹೇಳುವ ಪ್ರಕಾರ ಅದು ‘ಒಂದೇ ದೇಶ, ಎರಡು ಆಡಳಿತ’ ಪದ್ಧತಿಯನ್ನು ಬಲಪಡಿಸಲಿದೆ. ಆದರೆ ಇದು ಸಾಧ್ಯವಿಲ್ಲ. ಯಾಕೆಂದರೆ, ಹೊಸ ಕಾಯಿದೆಯಲ್ಲಿ ಹಾಂಕಾಂಗ್ ಎಲ್ಲ ನಿರ್ಣಯಗಳಿಗೂ ಚೀನಾದ ಸರಕಾರಕ್ಕೆ ಕಾಯಬೇಕಾಗಿದೆ. ಹೊಸ ಕಾಯಿದೆಯ ಪ್ರಕಾರ ದೇಶದ ಸ್ವಾಯತ್ತತೆಗಾಗಿ ಒತ್ತಾಯಿಸುವುದು, […]

Read More

ನೇಪಾಳಕ್ಕೂ ಚೀನಾ ಕುಮ್ಮಕ್ಕು- ಭಾರತದ ಗಡಿ ಪ್ರದೇಶಗಳು ತನ್ನದೆಂದ ನೇಪಾಳ

ಭಾರತ ಜತೆ ನೇರವಾಗಿ ಮುಖಾಮುಖಿಯಾಗದ ಚೀನಾ ದೇಶವು ನೇಪಾಳ, ಪಾಕಿಸ್ತಾನಗಳ ಮೂಲಕ ಗಡಿಯಲ್ಲಿ ತಂಟೆಯನ್ನು ಜೀವಂತವಾಗಿಟ್ಟಿರುತ್ತದೆ. ಭಾರತದಲ್ಲಿರುವ ಗಡಿಗಳನ್ನು ತನ್ನದೆಂದು ನೇಪಾಳ ಹೊಸ ನಕಾಶೆಯನ್ನು ಬಿಡುಗಡೆ ಮಾಡಿದ್ದು, ಈ ನಡೆಯ ಹಿಂದೆ ಚೀನಾದ ಕುಮ್ಮಕ್ಕಿದೆ ಎಂಬ ವಿಶ್ಲೇಷಣೆ ನಡೆಯುತ್ತಿದೆ. ಭಾರತದ ಗಡಿಯಲ್ಲಿರುವ ಲಿಪುಲೇಖ, ಕಾಲಾಪಾನಿ ಮತ್ತು ಲಿಂಪಿಯಧುರಾ ಪ್ರದೇಶಗಳನ್ನು ತನ್ನದೆಂದು ಸಾಬೀತುಪಡಿಸಲು ಈ ಪ್ರದೇಶಗಳನ್ನು ಒಳಗೊಂಡ ಹೊಸ ರಾಜಕೀಯ ನಕಾಶೆಯನ್ನು ನೇಪಾಳ ಬಿಡುಗಡೆ ಮಾಡಿದೆ. ಈ ಮೂಲಕ ಭಾರತ ಮತ್ತು ನೇಪಾಳ ಮಧ್ಯೆ ಗಡಿ ಸಮಸ್ಯೆ ತಲೆದೋರಿದೆ. […]

Read More

ಭಾರತದಲ್ಲಿ ಹೂಡಿಕೆ ಸಾಧ್ಯತೆ – ಸೂಕ್ತ ಯೋಜನೆ, ಇಚ್ಛಾಶಕ್ತಿ ಬೇಕು

ಕೊರೊನಾ ಸೋಂಕಿನ ಕಾರಣವಾಗಿ ಚೀನಾದಿಂದ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಸ್ಥಳಾಂತರವಾಗುವ ನಿರೀಕ್ಷೆ ಇದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತೆ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ರಾಜ್ಯಗಳಿಗೆ ಇವುಗಳ ಹೂಡಿಕೆಯನ್ನು ಆಕರ್ಷಿಸಲು ಸಮಗ್ರ ಯೋಜನೆಯನ್ನು ರೂಪಿಸಬೇಕು ಎಂದು ಮೋದಿಯವರು ತಿಳಿಸಿದ್ದಾರೆ. ಇದು ಒಂದು ಪೂರ್ವ ಸೂಚನೆ ಅಷ್ಟೇ. ಹೀಗಾಗುವ ಸಾಧ್ಯತೆ ನಿಚ್ಚಳವಾಗಿ ಕಾಣಿಸುತ್ತಿದೆ. ಯಾಕೆಂದರೆ ಇತ್ತೀಚೆಗೆ ಅಮೆರಿಕ, ಜಪಾನ್ ಮತ್ತಿತರ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ನಿರ್ಧರಿಸಿವೆ. ಜಪಾನ್ ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಯೋಜನೆಯನ್ನು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top