ಬಾಕಿ ಎಲ್ಲ ಧರ್ಮಗಳು ಕಾಲಕಾಲಕ್ಕೆ ಸುಧಾರಣೆಗೆ ಒಗ್ಗಿಕೊಂಡಿವೆ. ಹಾಗೇ ಇಸ್ಲಾಂ ಶಾಂತಿಪ್ರಿಯ ಧರ್ಮ, ಹಿಂಸೆಯನ್ನು ಬೋಧನೆ ಮಾಡುವುದಿಲ್ಲ ಎಂದರಷ್ಟೆ ಸಾಲದು. ಆಚರಣೆಯಲ್ಲೂ ಬರಬೇಕು. ಬದಲಾವಣೆಗೆ ತೆರೆದುಕೊಳ್ಳಬೇಕು ಎಂದಿದ್ದಾರೆ ತಸ್ಲೀಮಾ ನಸ್ರಿನ್. ಹೌದಲ್ಲವೇ? ಕಟ್ಟಿಕೊಂಡಿರುವ ಭಯಂಕರ ಭ್ರಮೆಯನ್ನು ಕಳಚಿಹಾಕಲು, ಜಗತ್ತಿನಲ್ಲಿ ಹೊಸ ರೀತಿಯ ಚರ್ಚೆಯೊಂದು ಶುರುವಾಗಲು ಚಾರ್ಲಿ ಹೆಬ್ಡೋ ಕಾರ್ಟೂನ್ ಪತ್ರಿಕೆ ಮೇಲೆ ಬರ್ಬರ ಭಯೋತ್ಪಾದಕ ದಾಳಿಯೇ ನಡೆಯಬೇಕಾಯಿತು ನೋಡಿ. ಭಾರತದ ವಿಷಯವನ್ನು ಬದಿಗಿಟ್ಟೇ ಆಲೋಚಿಸೋಣ. ಇಲ್ಲಿ ಜಾತೀಯತೆ ಇದೆ, ಧಾರ್ಮಿಕ ತಾರತಮ್ಯವಿದೆ, ಆರ್‍ಎಸ್‍ಎಸ್, ವಿಶ್ವ ಹಿಂದು ಪರಿಷತ್, […]
Read More
ಮತಾಂತರ, ಮರುಮತಾಂತರದ ಗದ್ದಲದಲ್ಲಿ ಸಂಸತ್ತಿನ ಚಳಿಗಾಲದ ಅಧಿವೇಶನ ಕಳೆದುಹೋಯಿತು. ಪ್ರಧಾನಿ ಮೋದಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಹಟ ಹಿಡಿದಿದ್ದವು. ಅಷ್ಟಕ್ಕೂ ಈ ಮತಾಂತರ, ಮರುಮತಾಂತರಕ್ಕೂ ಮೋದಿ ಸರ್ಕಾರಕ್ಕೂ ಏನಾದರೂ ಸಂಬಂಧ ಉಂಟೇನು? ಲೋಕಸಭಾ ಚುನಾವಣೆಯಲ್ಲಿ ಅನುಭವಿಸಿದ ಸೋಲಿನ ನಿರಾಸೆ, ಅದರ ಪರಿಣಾಮವಾಗಿ ಕಾಡುತ್ತಿರುವ ಹತಾಶೆ, ಕೊರಗಿನಿಂದ ಹೊರಬರಲಾಗದೆ ಚಡಪಡಿಸುತ್ತಿರುವ ಕಾಂಗ್ರೆಸ್ ಹಾಗೂ ಅದರ ಸಹವರ್ತಿ ಪಕ್ಷಗಳಿಗೆ `ಘರ್ ವಾಪಸಿ’ ಅನ್ನುವ ಪದ ಬಹಳ ಕರ್ಕಶವಾಗಿ ಕೇಳಿಸುತ್ತಿರುವಂತಿದೆ. ಲೋಕಸಭಾ ಚುನಾವಣೆ ಎಷ್ಟೊಂದು ಸಂಸದರ ಪಾಲಿಗೆ `ಘರ್ ವಾಪಸಿ’ […]
Read More
ಮತಾಂತರದ ವಿಚಾರದಲ್ಲಿ ಬ್ರಿಟಿಷ್ ಸಂಸದ ವೆಲ್ಬ್‌ಫೋರ್ಸ್ ರ ಪಳೆಯುಳಿಕೆಗಳಂತೆ ಆಡುವ ನಮ್ಮ ಸಂಸದರಿಗೆ ನಮ್ಮ ಸಂವಿಧಾನದ ಆಶಯ, ನ್ಯಾಯಾಲಯಗಳ ತೀರ್ಪು, ತಜ್ಞ ಆಯೋಗಗಳ ವರದಿಗಳು ಹೇಳಿದ ಸತ್ಯ ಯಾಕೆ ಪಥ್ಯವಾಗುವುದಿಲ್ಲ? ವಿಧಾನಮಂಡಳದ ಅಧಿವೇಶನವೇ ಇರಲಿ, ಸಂಸತ್ ಅಧಿವೇಶನವೇ ಇರಲಿ, ಪ್ರತಿ ಬಾರಿಯೂ ಅದು ಮುಕ್ತಾಯವಾದಾಗ ನಮ್ಮ ಮನದಲ್ಲಿ ಅಚ್ಚಾಗಿ ಉಳಿಯುವುದು ವಿಷಾದದ ಛಾಯೆ ಮಾತ್ರ! ವಿಪರ್ಯಾಸವಲ್ಲವೇ? ಈಗಿನ ಬಹುತೇಕ ಶಾಸಕರು, ಸಂಸದರಿಗೆ ಜನರ ಸಮಸ್ಯೆ, ಪರದಾಟಗಳ ನೈಜ ಅರಿವಿಲ್ಲ. ಅರಿತುಕೊಳ್ಳುವ ಆಸಕ್ತಿಯೂ ಇಲ್ಲ. ಯಾವುದೇ ಗಂಭೀರ […]
Read More
ಕ್ಷೇತ್ರ ಮರುವಿಂಗಡಣಾ ಆಯೋಗಗಳು ಭೌಗೋಳಿಕವಾಗಿ ದೊಡ್ಡದಾಗಿರುವ, ಹೆಚ್ಚು ಮತದಾರರನ್ನು ಹೊಂದಿರುವ ಜಮ್ಮು ಪ್ರಾಂತ್ಯಕ್ಕೆ ಕಡಿಮೆ ವಿಧಾನಸಭಾ ಕ್ಷೇತ್ರಗಳನ್ನು ಹಂಚಿಕೆ ಮಾಡಿರುವುದರ ಮರ್ಮವೇನು ಗೊತ್ತೇ? ಈ ಚುನಾವಣೆಗೆ ಅಂತಾರಾಷ್ಟ್ರೀಯ ಮಹತ್ವ ಇತ್ತು. ಅನುಮಾನವೇ ಬೇಡ. ಎಂಟು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯ ನಂತರದಲ್ಲಿ ದೇಶದ ಒಳಗೆ ಮತ್ತು ಹೊರಜಗತ್ತಿನಲ್ಲಿ ಅತಿ ಹೆಚ್ಚು ಜನರು ಕುತೂಹಲ-ಕಾತರದಿಂದ ಗಮನಿಸಿದ್ದು ಜಮ್ಮು ಮತ್ತು ಕಾಶ್ಮೀರದ ಚುನಾವಣೆಯನ್ನು ಎಂದರೆ ಅತಿಶಯೋಕ್ತಿಯಾಗಲಾರದು. ಎಲ್ಲರ ಮನದಲ್ಲಿ ಗಿರಕಿ ಹೊಡೆಯುತ್ತಿದ್ದ ಪ್ರಶ್ನೆ ಒಂದೇ ಆಗಿತ್ತು- ಲೋಕಸಭಾ ಚುನಾವಣೆಯಲ್ಲಿ […]
Read More
ಪ್ರತ್ಯೇಕ ಕಾಶ್ಮೀರದ ಮೇಲೆ ಕಣ್ಣಿಟ್ಟಿದ್ದ ಶೇಕ್ ಅಬ್ದುಲ್ಲಾ ಆರಂಭದಲ್ಲೇ ಬ್ರಿಟಿಷರ ಬೆಂಬಲ ಪಡೆದುಕೊಂಡಿದ್ದು ಮಾತ್ರವಲ್ಲ, ನೆಹರು ಮತ್ತು ಕಾಂಗ್ರೆಸ್ಸಿನ ದೌರ್ಬಲ್ಯವನ್ನು ಬಳಸಿಕೊಂಡರು. ಪ್ರತ್ಯೇಕ ಪಾಕಿಸ್ತಾನ ಬೇಡಿಕೆ ಮುಂದಿಟ್ಟಿದ್ದ ಜಿನ್ನಾಗಿಂತಲೂ ತಾನು ನೆಹರುಗೆ ಹೆಚ್ಚು ಆಪ್ತನೆಂಬಂತೆ ನಡೆದುಕೊಂಡರು. ಭಯೋತ್ಪಾದನೆ ಮತ್ತು ಪ್ರತ್ಯೇಕತಾವಾದದ ವಿಚಾರ ಬಂದರೆ ನಮಗೆ ಈಗ ಮೊದಲು ನೆನಪಾಗುವುದು ಕಾಶ್ಮೀರ. ಅದಕ್ಕೂ ಹೆಚ್ಚಾಗಿ ಕಾಶ್ಮೀರದ ವಿಷಯದಲ್ಲಿ ನ್ಯಾಷನಲ್ ಕಾನ್ಫರೆನ್ಸ್‍ನ ಉಮರ್ ಅಬ್ದುಲ್ಲಾ, ಪಿಡಿಪಿಯ ಮೆಹಬೂಬಾ ಮುಫ್ತಿ ಮುಂತಾದವರೆಲ್ಲ ಈಗಲೂ ಮುಂದಿಡುತ್ತಿರುವ ವಿತಂಡವಾದವನ್ನು ನೋಡಿದರೆ ಬೇಸರವಾಗುತ್ತದೆ. ಇದೇ ಕಾಶ್ಮೀರಿ […]
Read More
ಜಮ್ಮು-ಕಾಶ್ಮೀರದ ಐತಿಹಾಸಿಕ ಮತ್ತು ಭೌಗೋಳಿಕ ಮಹತ್ವವನ್ನು ಚೆನ್ನಾಗಿ ಅರಿತಿದ್ದ ಬ್ರಿಟಿಷರು ಅದಕ್ಕೆ ಕಿಂಚಿತ್ತೂ ಚ್ಯುತಿಯಾಗದಂತೆ ನಡೆದುಕೊಂಡಿದ್ದರು. ಆದರೆ ಆ ಸಂಗತಿಯನ್ನು ನೆಹರು ಸರ್ಕಾರ ಅರಿಯದೇ ಹೋದದ್ದು ನಿಜಕ್ಕೂ ಅಚ್ಚರಿಯ ಸಂಗತಿಯಲ್ಲವೇ? ಹಾಲಿ ನಡೆಯುತ್ತಿರುವ ಜಮ್ಮು-ಕಾಶ್ಮೀರದ ಚುನಾವಣೆ ಗುಲಾಮ್ ನಬಿ ಆಜಾದ್ ನೇತೃತ್ವದ ಕಾಂಗ್ರೆಸ್, ಮೆಹಬೂಬಾ ಮುಫ್ತಿ ಸಯೀದರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಮತ್ತು ಉಮರ್ ಅಬ್ದುಲ್ಲಾ ಅವರ ನ್ಯಾಷನಲ್ ಕಾನ್ಫರೆನ್ಸ್ ಇತ್ಯಾದಿ ಪಕ್ಷಗಳ ಪಾಲಿಗೆ ಮತ್ತೊಂದು ಆವರ್ತಿ ರಾಜಕೀಯ ಅಧಿಕಾರದ ಗದ್ದುಗೆ ಹಿಡಿಯುವ ಕಸರತ್ತಿಗೆ ವೇದಿಕೆ […]
Read More
ಜಗತ್ತಿನಲ್ಲಿ ಹಲವರು ಅಮೆರಿಕವನ್ನು ಇಷ್ಟಪಡುತ್ತಾರೆ, ಕೆಲವರು ವಿರೋಧ ಮಾಡುತ್ತಾರೆ. ಆದರೆ ಎಲ್ಲರೂ ಅಮೆರಿಕದ ಆಗು ಹೋಗನ್ನು ಗಮನಿಸಿಯೇ ಗಮನಿಸುತ್ತಾರೆ ಏಕೆಂದರೆ…. ನವೆಂಬರ್ 4, 2008- ಇತಿಹಾಸದ ಪುಟದಲ್ಲಿ ಅಮೆರಿಕ ಹೊಸ ಅಧ್ಯಾಯ ಬರೆದ ದಿನ. ಇಡೀ ಜಗತ್ತಿನಲ್ಲಿ ಹೊಸ ಆಲೋಚನೆ, ಹೊಸ ಸಂಚಲನಕ್ಕೆ ಮುನ್ನುಡಿ ಬರೆದ ಕ್ಷಣ ಅದು. ಕರಿಯ ವರ್ಣದ ನಾಯಕನೊಬ್ಬ ಮೊಟ್ಟಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದ. ಮರುಗಳಿಗೆಯಿಂದಲೇ ಹೊರಜಗತ್ತು ಅಮೆರಿಕವನ್ನು ನೋಡುವ ರೀತಿಯೇ ಬದಲಾಗುವಂತೆ ಕಂಡಿತು. ಚುನಾವಣಾ ಗೆಲುವಿಗಿಂತಲೂ, […]
Read More
ವಿಶ್ವ ವಾಣಿಜ್ಯ ಕೇಂದ್ರದ ಮೇಲಿನ ದಾಳಿಯ ಬಳಿಕ ಉಗ್ರರ ಸಮೂಲ ನಾಶದ ಪಣತೊಟ್ಟು ಅಬ್ಬರಿಸಿದ ಅಮೆರಿಕ ಸರ್ಕಾರ 9/11ರ ಸ್ಮಾರಕ ನಿರ್ಮಾಣಕ್ಕೆ ಏಕೆ ಹಣಕಾಸು ನೆರವು ನೀಡಲಿಲ್ಲ? ಆ ದೇಶ ಎದುರಿಸುತ್ತಿರುವ ಸವಾಲುಗಳ ಮೂಲ ಎಲ್ಲಿದೆ? ಅಮೆರಿಕ ಅಂದರೇನೇ ಹಾಗೆ. ಅಲ್ಲಿನ ಕಷ್ಟನಷ್ಟ, ಸುಖದುಃಖದ ವಿಚಾರ ಏನೇ ಇರಲಿ, ನಾವು ಮಾತ್ರವಲ್ಲ ಇವತ್ತು ಇಡೀ ಜಗತ್ತಿನ ನೂರಾರು ದೇಶಗಳ ಕೋಟ್ಯಂತರ ಜನರು ಆ ದೇಶದ ಕಡೆಗೆ ಆಸೆಗಣ್ಣಿನಿಂದ ನೋಡುತ್ತಿದ್ದಾರೆ. ಕೆಲವರಂತೂ ಅಲ್ಲೊಂದು ಸಣ್ಣ ಚಾಕರಿಯಾದರೂ ಸಿಗುತ್ತದಾ […]
Read More
ಎಬೋಲಾ ಜಗತ್ತು ಕಂಡ ಅತ್ಯಂತ ಕ್ರೂರ ಕಾಯಿಲೆ ಎಂಬುದರಲ್ಲಿ ಅನುಮಾನವೇ ಇಲ್ಲ. ಪೂರ್ವ ಆಫ್ರಿಕಾದ ಬಹಳಷ್ಟು ದೇಶಗಳು ಆ ಕಾಯಿಲೆಯಿಂದ ನಲುಗಿಹೋಗಿವೆ. ಎಬೋಲಾ ಸೋಂಕು ಕಾಣಿಸಿಕೊಂಡ ವ್ಯಕ್ತಿಯನ್ನು ಆತ ಜೀವಂತ ಇರುವಾಗಲೇ ಮನೆಯಾಚೆ ಹಾಕಿಬಿಡುತ್ತಾರೆಂಬ ವಿಚಾರವನ್ನು ಕೇಳಿದ್ದೀರಾ… ಪೋಲಿಯೋ ವಿರುದ್ಧ ಭಾರತ ವಿಕ್ರಮ ಸಾಧಿಸಿದೆ. ಹೀಗಾಗಿ ಆ ಕಾಯಿಲೆ ಭಾರತದ ಮಟ್ಟಿಗೆ ಈಗ ಇತಿಹಾಸ. ಹೃದ್ರೋಗದ ಬಗ್ಗೆ ಜನಸಾಮಾನ್ಯರಿಗೂ ತಿಳಿವಳಿಕೆ ಬಂದು ಹದಿನೈದು ಇಪ್ಪತ್ತು ವರ್ಷಗಳಾಗಿರಬಹುದು. ಅಲ್ಲಿಯವರೆಗೆ ಅದು ಶ್ರೀಮಂತರ ಕಾಯಿಲೆ, ಪಟ್ಟಣವಾಸಿಗಳ ಕಾಯಿಲೆ ಅಂತಲೇ ಭಾವಿಸಲಾಗಿತ್ತು. […]
Read More
ಅಮೆರಿಕದಂತಹ ದೇಶದಲ್ಲಿ ಸುತ್ತುವಾಗ ವಿಮಾನ ನಿಲ್ದಾಣದಿಂದ ಹಿಡಿದು ಹೋದಲ್ಲಿ ಬಂದಲ್ಲಿ ಬೂಟು, ಬೆಲ್ಟಿನಿಂದ ಹಿಡಿದು ಎಲ್ಲವನ್ನೂ ಬಿಚ್ಚಿ ಸ್ಕಾೃನ್ ಮಾಡುವಾಗ ಕಿರಿಕಿರಿ ಅನಿಸುತ್ತದೆ. ಆದರೆ ಅಂತಿಮವಾಗಿ ಅದೇ ಸರಿ ಎಂಬ ತೀರ್ಮಾನಕ್ಕೆ ಬರಬೇಕಾಗುತ್ತದೆ. ಅದು ಈಗ ನಾವು ಮಾಡುತ್ತಿರುವ ಆಲೋಚನೆ. ದಿನೇದಿನೆ ಹೆಚ್ಚುತ್ತಿರುವ ಅಸುರಕ್ಷತೆ ಭೀತಿಗೆ ಪರಿಹಾರ ಕಂಡುಕೊಳ್ಳಬೇಕು. ದೇಶದ ಇಂಚಿಂಚು ನೆಲವನ್ನು ಆಕ್ರಮಿಸಿಕೊಳ್ಳುತ್ತಿರುವ ಭಯೋತ್ಪಾದನೆಯನ್ನು ಮಟ್ಟಹಾಕಬೇಕು, ಸುಂದರ ಕಾಶ್ಮೀರವನ್ನು ಕಾಪಾಡಿಕೊಳ್ಳಬೇಕು. ಈ ವಿಷಯಗಳಲ್ಲಿ ನಮ್ಮ ಸರ್ಕಾರ ಸರಿಯಾದ ಹೆಜ್ಜೆ ಇಡಬೇಕು, ತಂತ್ರಗಾರಿಕೆ ರೂಪಿಸಬೇಕು ಅಂತೆಲ್ಲ ನಾವು […]
Read More