ಇದು ಪ್ರಾಣಾರ್ಪಣೆಯೇ? ನೀವೇ ಹೇಳಿ…

ರಾಜೀವ್ ಹತ್ಯೆಯಾಗಿ ಇಪ್ಪತ್ಮೂರು ವರ್ಷ ಕಳೆದರೂ ಸೋನಿಯಾ ಮತ್ತು ಅವರ ಮಕ್ಕಳು ದೇಶಕ್ಕಾಗಿ ಇಂದಿರಾ ಹಾಗೂ ರಾಜೀವ್ ಪ್ರಾಣತ್ಯಾಗ ಮಾಡಿದರು ಎಂದು ಪ್ರಲಾಪಿಸುವುದು ಎಷ್ಟು ಸರಿ? ಇದು ಪ್ರಾಣಾರ್ಪಣೆಯೋ, ಅನ್ಯಾಯವಾಗಿ ತೆಗೆದುಕೊಂಡ ಬಲಿಯೋ? ಆಲೋಚಿಸಬೇಡವೇ? ಮೊದಮೊದಲು ಪ್ರಧಾನಿ ಮನಮೋಹನ್ ಸಿಂಗ್ ಮೌನದ ಕುರಿತು ವ್ಯಾಪಕ ಟೀಕೆಯನ್ನು ಕೇಳುತ್ತಿದ್ದೆವು. ಆದರೆ ಕ್ರಮೇಣ ಅದೊಂದು ದೊಡ್ಡ ತಮಾಷೆಯ ವಸ್ತುವಾಯಿತು. ಆದರೆ ಅದೇ ಮನಮೋಹನ ಸಿಂಗ್‍ರಿಗೆ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿದ್ದ ಎಂ.ಕೆ. ನಾರಾಯಣನ್ ಮಹಾ ನಿಷ್ಕ್ರಿಯರಾಗಿದ್ದರು. ಅದು ಅನೇಕ ಜನರಿಗೆ ಗೊತ್ತಿರಲಿಕ್ಕಿಲ್ಲ. […]

Read More

ಎಂಕೆಎನ್ ಮಮಕಾರದ ಹಿಂದಿನ ಅಚ್ಚರಿ ಅಂದರೆ…

ಮುಂದೊಂದು ದಿನ ದೇಶದ ಭದ್ರತೆ, ಮಿಲಿಟರಿ ದೌರ್ಬಲ್ಯ, ಪೊಲೀಸ್ ವ್ಯವಸ್ಥೆಯ ವೈಫಲ್ಯ, ಗುಪ್ತಚರ ವಿಭಾಗದ ಆತ್ಮವಂಚನೆ, ದೇಶದ್ರೋಹದೊಂದಿಗೂ ರಾಜಿ ಮಾಡಿಕೊಳ್ಳಬೇಕಾದ ಕಾಲ ಬರಬಹುದೇ? ಯೋಚನೆ ಮಾಡುತ್ತ ಹೋದರೆ ಅಚ್ಚರಿ, ಆತಂಕ ಒಟ್ಟೊಟ್ಟಿಗೇ ಆಗುತ್ತದೆ.   ಯಾವುದನ್ನು ಇನ್ನು ಬದಲಾಯಿಸಲು ಸಾಧ್ಯವೇ ಇಲ್ಲವೆಂದು ಅನ್ನಿಸಲು ಶುರುವಾಗುತ್ತದೆಯೋ ಆಗ ನಿಧಾನವಾಗಿ ಪರಿಸ್ಥಿತಿಯೊಂದಿಗೆ ರಾಜಿ ಮಾಡಿಕೊಳ್ಳಲು ಮನಸ್ಸು ಅಣಿಯಾಗಿಬಿಡುತ್ತದೆಯೇ?!- ಹಾಗೇ ಯೋಚನೆ ಮಾಡಿ ನೋಡಿ. ಭ್ರಷ್ಟಾಚಾರದ ವಿಚಾರದಲ್ಲಿ ಈಗ ಇಂಥದ್ದೇ ಮಾನಸಿಕತೆ ನಮ್ಮ ದೇಶದಲ್ಲಿ ಬಲವಾಗುತ್ತಿದೆ. `ರಾಜಕಾರಣದಲ್ಲಿ ಭ್ರಷ್ಟಾಚಾರ ಇದ್ದದ್ದೇ  ಅದನ್ನು […]

Read More

ಕ್ವಟ್ರೋಚಿ ತೋಡಿದ ಖೆಡ್ಡಾ ಈಗಲೂ ಅಭೇದ್ಯ ಗೊತ್ತಾ?

ಭ್ರಷ್ಟಾಚಾರವನ್ನು ಬುಡಸಮೇತ ಕಿತ್ತುಹಾಕಬೇಕೆಂಬುದರಲ್ಲಿ ಯಾವ ಅನುಮಾನವಿಲ್ಲ ನಿಜ. ಎಲ್ಲರೂ ಯಾವ ಹಗರಣದಿಂದ ದೇಶದ ಬೊಕ್ಕಸ ಎಷ್ಟು ಬರಿದಾಯಿತು ಅಂತ ಮಾತ್ರ ಲೆಕ್ಕ ಹಾಕುತ್ತಿದ್ದೇವಲ್ಲ? ಹಗರಣದ ಹಿಂದಿರುವ ಕಾಣದ ಕೈನ ಕರಾಮತ್ತಿನ ಕುರಿತು ಯೋಚಿಸುವುದೇ ಇಲ್ಲವಲ್ಲ. ಕಳೆದುಕೊಂಡ ದುಡ್ಡನ್ನು ಮತ್ತೆ ಗಳಿಸಬಹುದು, ಹೋದ ಜೀವ, ಕಳೆದುಕೊಂಡ ನಾಯಕರನ್ನು ತರಲಾದೀತೇ?   ಈ ದೇಶದ ಎಲ್ಲ ದುರಂತಗಳು, ದುರ್ದೆಸೆಯ ಕೊಂಡಿ ಕೊನೆಗೆ ಹೋಗಿ ತಳುಕು ಹಾಕಿಕೊಳ್ಳುವುದು ರೋಮನ್ ಕ್ಯಾಥೋಲಿಕ್ ಕ್ರೈಸ್ತರ ತವರು ಇಟಲಿ ಮತ್ತು ಅಮೆರಿಕ ಎಂಬ ಎರಡು ದೇಶಗಳೊಂದಿಗೆ ಎಂಬುದನ್ನು […]

Read More

ಇವರು ಬಿಟ್ಟ ಬಾಣವ ಹಿಂಪಡೆಯುವುದರ ಮರ್ಮವೇನು?

ಕಾಂಗ್ರೆಸ್ ಪ್ರಚಾರ ಜಾಹೀರಾತುಗಳಲ್ಲಿ ಯುವ ಸಮುದಾಯದ ಜತೆ ನಿಂತ ರಾಹುಲ್ `ನಾನಲ್ಲ, ನಾವು’ ಎನ್ನುತ್ತಿದ್ದಾರಲ್ಲ ಆ ನಾವುಗಳು ಯಾರು? ಹೈಕೋರ್ಟು, ಸುಪ್ರೀಂ ಕೋರ್ಟು, ವಿಶೇಷ ತನಿಖಾ ತಂಡಗಳೆಲ್ಲ ಕ್ಲೀನ್‍ಚಿಟ್ ಕೊಟ್ಟ ನಂತರವೂ ಅದೇ ವ್ಯಕ್ತಿ ಕೊಲೆಗಡುಕ, ಸಾವಿನ ವ್ಯಾಪಾರಿ ಅಂತ ಜರಿಯಲು ಇವರ್ಯಾರು?   ನರೇಂದ್ರ ಮೋದಿ ಪ್ರಧಾನಿ ಆಗುವುದನ್ನು ಶತಾಯಗತಾಯ ತಡೆಯಲೇಬೇಕು, ಅದಿಲ್ಲದೇ ಹೋದರೆ ದೇಶದಲ್ಲಿ ಅನಾಹುತವೇ ನಡೆದುಹೋಗುತ್ತದೆ ಅಂತ ಮೊನ್ನೆ ಮೊನ್ನೆ ನಮ್ಮ ಪ್ರಸಿದ್ಧ ಸಾಹಿತಿಗಳೆಲ್ಲ ಸೇರಿ ತೀರ್ಮಾನ ಕೊಟ್ಟುಬಿಟ್ಟರಲ್ಲ, ಅದು ಸಾಹಿತ್ಯ ಲೋಕದಲ್ಲಿ […]

Read More

ಈ ನಿಗೂಢ ಭೇದಿಸುವವರು ಯಾರು?

ಮುಖರ್ಜಿ ಬೆಂಕಿಯ ಉಂಡೆ ಅಂತಿಟ್ಟುಕೊಳ್ಳೋಣ, ದೀನದಯಾಳ್ ಉಪಾಧ್ಯಾಯರಂಥ ಸೌಮ್ಯವಾದಿಯ ಹತ್ಯೆಗೆ ಏನು ಕಾರಣ? ರಾಜೀವ್ ದೀಕ್ಷಿತ್ ಸಾವಿನ ಹಿಂದಿನ ನಿಗೂಢ ಏನು? ಬಾಬಾ ರಾಮದೇವ್, ನರೇಂದ್ರ ಮೋದಿ ಅವರ ವಿಷಯದಲ್ಲಿ ದೇಶದ ಒಳಗೂ-ಹೊರಗೂ ವಿರೋಧಿಗಳು ಹಲ್ಲು ಕಡಿಯುತ್ತಿದ್ದಾರಲ್ಲ ಏಕೆ?     1968, ಫೆಬ್ರವರಿ 10ರ ಮುಂಜಾನೆ ಏಳಕ್ಕೆ ಸರಿಯಾಗಿ ಲಖನೌ ರೈಲು ನಿಲ್ದಾಣದಲ್ಲಿ ಸೆಲ್ಡಾ-ಪಟನಾ  ಎಕ್ಸ್ ಪ್ರೆಸ್ಕ್ಸ್‍ ರೈಲು ಹತ್ತಿ ಹೊರಟ ಪಂಡಿತ್ ದೀನದಯಾಳ್ ಉಪಾಧ್ಯಾಯರು ಮರುದಿನ ಮುಂಜಾನೆ ಹೆಚ್ಚು ಕಡಿಮೆ ಅದೇ ಸಮಯಕ್ಕೆ ಪಟನಾ […]

Read More

ದುರಂತಗಳ ಸರಮಾಲೆಯಲ್ಲಿ ಆ ಎರಡು ರತ್ನಗಳು?

ಭಾರತ ವಿಜ್ಞಾನದಲ್ಲಿ ಮಹೋನ್ನತ ಎತ್ತರಕ್ಕೆ ಏರಬೇಕೆಂಬ ಕನಸು ಕಂಡಿದ್ದ ವಿಜ್ಞಾನಿ ವಿಕ್ರಂ ಸಾರಾಭಾಯ್ ಏಕಾಏಕಿ ಹೊರಟು ಹೋಗಲು ಕಾರಣ ಏನು? ದೇಶದ ಏಕತೆ ಅಖಂಡತೆಗಾಗಿ ಬಡಿದಾಡಿ ಪ್ರಾಣಾರ್ಪಣೆ ಮಾಡಿದ ಶ್ಯಾಮಪ್ರಸಾದ್ ಮುಖರ್ಜಿ ಸಾವಿನ ತನಿಖೆಯಾಗುವುದಿಲ್ಲ ಯಾಕೆ?   ಮೊನ್ನೆ ಮೊನ್ನೆಯಷ್ಟೇ ನಿಗೂಢವಾಗಿ ಕಣ್ಮರೆಯಾದ ಮಲೇಷ್ಯಾ ವಿಮಾನಕ್ಕಾಗಿ ಹುಡುಕಾಟ ನಡೆಸಲು ಅಮೆರಿಕವೂ ಸೇರಿದಂತೆ ಜಗತ್ತಿನ ಬಹುತೇಕ ದೇಶಗಳು ನಾಮುಂದು ತಾಮುಂದು ಎನ್ನುತ್ತ ಬಂದದ್ದು ಗೊತ್ತಲ್ಲವೇ? ಕೊನೆಗೆ ಇದೆಲ್ಲ ರಗಳೆಯೇ ಬೇಡ ಅಂತ ಮಲೇಷ್ಯಾ ಸರ್ಕಾರವೇ ಆ ವಿಚಾರದಲ್ಲಿ ಒಂದು […]

Read More

ಹಠಕ್ಕೆ ಬಿದ್ದ ಸಂಜಯ ಹೊರಟು ಹೋದರೇ?

ಸಂಜಯ್‍ಗೆ ವಿಮಾನ ಹಾರಾಟದ ತರಬೇತಿ ನೀಡುತ್ತಿದ್ದ ಪೈಲಟ್ ಸಕ್ಸೇನಾ ಆವತ್ತೇಕೆ ಹಾರಾಟಕ್ಕೆ ರೆಡಿ ಇರಲಿಲ್ಲ.. ವಿಮಾನದಲ್ಲಿ ಇಂಧನ ಖಾಲಿ ಆಗಿದ್ದು ಸ್ವತಃ ಪೈಲಟ್‍ಗೂ ಗೊತ್ತಿರಲಿಲ್ಲವೇ? ಸಂಜಯ ಆ ಪರಿ ಹಠಕ್ಕೆ ಬಿದ್ದು ಹೊರಟು ಹೋದರೇ?! ಇಂದಿರಾ ಗಾಂಧಿ ಜೀವನದ ಒಂದೊಂದು ಘಟನೆಯೂ ರೋಚಕ… ಅವರ ಜೀವನದ ಇಂಟರೆಸ್ಟಿಂಗ್ ತಿರುವುಗಳು ಅವರ ಯೌವನದ ದಿನಗಳಿಂದಲೇ ಆರಂಭವಾಗಿ ಮುಂದೆ ಪ್ರಧಾನಿ ಪಟ್ಟವೇರಿ, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ, ಆಪ್ತೇಷ್ಟರ ಷಡ್ಯಂತ್ರಕ್ಕೆ ಸಿಲುಕಿ ಹಂತಕರ ಗುಂಡಿಗೆ ಪ್ರಾಣಾರ್ಪಣೆ ಮಾಡುವವರೆಗೂ ಮುಂದುವರೆದುಕೊಂಡು […]

Read More

ಇಂದಿರೆಯ ಮನೆಯ ನಿಗೂಢತೆ ಬಗೆದಷ್ಟೂ ಆಳಕ್ಕೆ !

ಐರನ್ ಲೇಡಿ ಇಂದಿರಾ ಈ ಲೋಕಬಿಟ್ಟು ಹೋಗಿ ಇಷ್ಟು ವರ್ಷ ಆಯಿತು ಖರೆ, ಆದರೆ ಅವರ ಮನೆಯ ನಿಗೂಢಗಳ ಬಗ್ಗೆ ಓದುಗರಿಗಿರುವ ಕುತೂಹಲ, ಕಾತರ ಎಷ್ಟು ಗರಿಗರಿ ಅಂತೀರಾ?ಅದಕ್ಕೇ ಅಂತ ಕಾಣುತ್ತದೆ ವಿದ್ವಾಂಸರಾದ ನಾರಾಯಣಾಚಾರ್ಯರು `Beyond The Tigers` ಪುಸ್ತಕವನ್ನು ಕಳಿಸಿಕೊಟ್ಟಿದ್ದಾರೆ. ಒಂದು ಲೇಖನ ಆ ಪರಿ ಕುತೂಹಲ ಕೆರಳಿಸುತ್ತಾ, ಸೆನ್ಸೇಶನ್ ಕ್ರಿಯೇಟ್ ಮಾಡುತ್ತಾ, ಚರ್ಚೆಗೆ ಗ್ರಾಸವಾಗುತ್ತ್ತಾ? ನಿಜಕ್ಕೂ ಅಚ್ಚರಿಯಾಗುತ್ತದೆ. ನಗರವಾಲಾ ಪ್ರಕರಣಕ್ಕೆ ಸಂಬಂಧಿಸಿ ಇಂದಿರೆಯ ಮನೆಯ ಮತ್ತೊಂದು ಹೆಣ್ಣು ಧ್ವನಿ ಯಾರದ್ದು? ನನಗೆ ಗೊತ್ತು… ಆ […]

Read More

ಇಂದಿರೆಯ ಮನೆಯ ಮತ್ತೊಂದು ಹೆಣ್ಣು ದನಿ ಯಾರದು?

ನಿಜ ಏನೆಂಬುದು ಗೊತ್ತಿದ್ದರೂ ಅದನ್ನು ನುಂಗಲೂ ಆಗದ, ಉಗುಳಲೂ ಆಗದ ಉಭಯಸಂಕಟಕ್ಕೆ ಸಿಲುಕಿದ ಇಂದಿರಾ ತಮ್ಮನ್ನೇ ತಾವು ದುರಂತಕ್ಕೆ ಒಡ್ಡಿಕೊಂಡರೇ? ಹೌದು ಎನ್ನುವುದಕ್ಕೆ ಹಲವಾರು ಪುರಾವೆಗಳು ಸಿಗುತ್ತವೆ. ಇಂದಿರಾ ಸಾವು ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಆದ ನಷ್ಟ ಅನ್ನಬಹುದೇ? ಖಂಡಿತ ಅಲ್ಲ, ಅದು ಇಡೀ ದೇಶಕ್ಕೆ ಆದ ನಷ್ಟ! ನಷ್ಟ ಅನ್ನುವುದಕ್ಕಿಂತ ಅದೊಂದು ದೊಡ್ಡ ಆಘಾತ. ಈಗ ಕಾಂಗ್ರೆಸ್ ಪಕ್ಷಕ್ಕೆ ಎದುರಾಗಿರುವ ಸ್ಥಿತಿಯನ್ನು ಒಮ್ಮೆ ಅವಲೋಕಿಸಿದರೆ ಈ ಮಾತು ಹೆಚ್ಚು ಸುಲಭವಾಗಿ ಅರ್ಥ ಆಗಬಹುದು. ಆದರೇನು ಮಾಡುವುದು, […]

Read More

ಒಂದು ಸರ್ಕಾರ ಇಷ್ಟು ಬೇಗ ಹೊಳಪು ಕಳಕೊಂಡರೆ ಹೇಗೆ?

ಜಾತಿ ಬಲವಿಲ್ಲದೆ, ಕೃತಕ ಇಮೇಜು ಸೃಷ್ಟಿಸುವ ಗೋಜಿಗೆ ಹೋಗದೆ ಕೇವಲ ರಾಜಕೀಯ ಜಾಣ್ಮೆ ಮತ್ತು ಆಡಳಿತಾತ್ಮಕ ಕೈಚಳಕದಿಂದಲೇ ರಾಜಕೀಯ ಸವಾಲುಗಳನ್ನು ಮಾತ್ರವಲ್ಲ, ಚುನಾವಣೆಯನ್ನೂ ಜಯಿಸಬಹುದು ಎಂಬುದಕ್ಕೆ ಹೆಗಡೆ ಸರ್ಕಾರದ ಕಾಲಘಟ್ಟ ಒಂದು ಉತ್ತಮ ಉದಾಹರಣೆ ಆಗಬಲ್ಲದು. ಮೊದಲ ಬಾರಿ ರಾಜ್ಯದಲ್ಲಿ ಜನತಾ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದಾಗ ನಾವೆಲ್ಲ ಹನ್ನೆರಡು ಹದಿಮೂರು ವರ್ಷದ ಹುಡುಗರಾಗಿದ್ದಿರಬಹುದು. ಯಾವುದನ್ನೂ ಸೀರಿಯಸ್ ಆಗಿ ಗಮನಿಸುವ ವಯಸ್ಸು ಅದಲ್ಲ. ಆದರೂ ಅದೇಕೋ ರಾಮಕೃಷ್ಣ ಹೆಗಡೆ ಕಾಲದ ರಾಜಕೀಯ ನೆನಪುಗಳು ಇವತ್ತಿಗೂ ಮನಸ್ಸಿನಲ್ಲಿ ಹಸಿರಾಗಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top