ನೆರೆಯ ಚೀನಾ ಕೇವಲ ಇಪ್ಪತ್ತು ವರ್ಷಗಳಲ್ಲಿ ಜಗತ್ತಿನ ಬಲಾಢ್ಯ ಆರ್ಥಿಕ ಶಕ್ತಿಯಾಗಿ ತಲೆ ಎತ್ತಿ ನಿಲ್ಲಲು ಸಾಧ್ಯವಾಗಿದ್ದು ಅಲ್ಲಿನ ನಾಯಕರ ಇಚ್ಛಾಶಕ್ತಿಯ ಫಲವಾಗಿ. ಅನಿರೀಕ್ಷಿತವಾಗಿ ಭಾರಿ ಆರ್ಥಿಕ ಆಘಾತ ಅನುಭವಿಸಿದರೂ ಅಷ್ಟೇ ಆತ್ಮವಿಶ್ವಾಸದಿಂದ ಹೂಂಕರಿಸುತ್ತಿರುವುದೂ ಅದೇ ಇಚ್ಛಾಶಕ್ತಿಯಿಂದಲೇ. ಇದು ನಮಗೇಕೆ ಮಾದರಿ ಆಗುವುದಿಲ್ಲ? *** ಕಳೆದ ವರ್ಷ ಇದೇ ವೇಳೆಗೆ ನಾನು ಅಮೆರಿಕ ಪ್ರವಾಸದಲ್ಲಿದ್ದೆ. ಆಗ ಆ ದೇಶದಲ್ಲಿ ಪ್ರತ್ಯಕ್ಷ ಕಂಡ ಅನೇಕ ಸಂಗತಿಗಳನ್ನು ಒಬ್ಬ ಪತ್ರಕರ್ತನಾಗಿ ಎಂದೂ ಮರೆಯಲು ಸಾಧ್ಯವಿಲ್ಲ. ಅವುಗಳ ಪೈಕಿ ಎರಡು ಘಟನೆಗಳನ್ನು […]
Read More
ನಮಗೆ ನಿಜಕ್ಕೂ ಸ್ವಾತಂತ್ರ್ಯ ಸಿಕ್ಕಿದೆಯೇ? ಹೌದು ಎನ್ನುವುದಾದರೆ ಅದನ್ನು ಉಳಿಸಿಕೊಳ್ಳುವಷ್ಟು ವಿಚಾರವಂತಿಕೆಯನ್ನು ಬೆಳೆಸಿಕೊಂಡಿದ್ದೇವೆಯೇ? ಸ್ವಾತಂತ್ರೃ ಸಿಕ್ಕಿದ್ದು ನಮ್ಮನ್ನಾಳುವ ರಾಜಕಾರಣಿಗಳಿಗೆ ಮಾತ್ರವೋ ಹೇಗೆ? ಪ್ರಶ್ನೆಗಳ ಸರಮಾಲೆಯೇ ಉದ್ಭವಿಸುತ್ತದೆ. ಪ್ರಾಥಮಿಕ ಶಾಲೆ, ಹೈಸ್ಕೂಲು ಓದುವಾಗಿನ ಸ್ವಾತಂತ್ರ್ಯ ದಿನೋತ್ಸವದ ಆ ನೆನಪುಗಳು ಅದೆಷ್ಟು ಚೆಂದ ಅಂತೀರಿ. ಆಗೆಲ್ಲ ಇರುತ್ತಿದ್ದುದು ಸರ್ಕಾರ ಕೊಡುತ್ತಿದ್ದ ಒಂದು ಜೊತೆ ಯೂನಿಫಾಮು. ಅದನ್ನೇ ಒಗೆದು ಶುಭ್ರವಾಗಿಸಿ ಆ ದಿನಕ್ಕೆ ರೆಡಿ ಆಗುತ್ತಿದ್ದ ಸಂಭ್ರಮವನ್ನು ಪದಗಳಿಂದ ವರ್ಣಿಸಲಾಗದು. ಆ ಘೊಷಣೆ, ಪುಟಾಣಿಗಳ ಭಾಷಣ, ಕೊನೆಯಲ್ಲಿ ಕೊಡುವ ಪೆಪ್ಪರುಮೆಂಟು… ಬಿಡಿ, […]
Read More
ಲಾಡೆನ್ ಸೆರೆಹಿಡಿಯಲು ಪಾಕಿಸ್ತಾನದ ಸೇನೆ ಮತ್ತು ಸರ್ಕಾರದ ನೆರವು ಪಡೆಯುವುದು ಅಮೆರಿಕಕ್ಕೆ ಅಸಾಧ್ಯದ ಕೆಲಸವೇನಾಗಿರಲಿಲ್ಲ ಅಥವಾ ಆತನನ್ನು ಜೀವಂತವಾಗಿಯೇ ಸೆರೆಹಿಡಿಯಬಹುದಿತ್ತು. ಆದರೆ ಅಮೆರಿಕ ಹಾಗೆ ಮಾಡಲಿಲ್ಲ. ಕೊನೆಗೆ ಆತನ ಶವ ಕೂಡ ಯಾರಿಗೂ ಸಿಗಗೊಡಲಿಲ್ಲ ! ಏನಿದರ ಮರ್ಮ ? ಇದೆಂಥ ವಿಚಿತ್ರವೋ ನಾ ಕಾಣೆ! ಪಾಕಿಸ್ತಾನದ ಐಎಸ್ಐನಿಂದ ನೇರ ಪ್ರೇರಣೆ ಪಡೆದು ಭಾರತದಲ್ಲಿ ರಕ್ತಹರಿಸಲು ಬಂದ ಭಯಂಕರ ಪಾತಕಿಗೆ ಕರುಣೆ ತೋರಿಸಬೇಕಿತ್ತೇನು? ಯಾಕುಬ್ ಮೆಮನ್ನನ್ನು ಗಲ್ಲು ಶಿಕ್ಷೆಗೆ ಒಳಪಡಿಸುವಾಗ ಭಾರತದಲ್ಲಿ ನಡೆದ ಪ್ರಹಸನಗಳನ್ನು ನೋಡಿದಾಗ ಇಂತಹ […]
Read More
ಪ್ರಕ್ಷುಬ್ಧಗೊಂಡ ಕಾಶ್ಮೀರದಲ್ಲಿ ರಾಜಕೀಯ ಅಧಿಕಾರ ಹಂಚಿಕೆ ಮಾಡಿಕೊಳ್ಳುವ ರಿಸ್ಕ್ ತೆಗೆದುಕೊಂಡ ಪ್ರಧಾನಿ ಮೋದಿ ಇಡೀ ಪಾಕಿಸ್ತಾನದೊಂದಿಗೆ ದ್ವಿಮುಖ ಮಾತುಕತೆಗೆ (ಸೇನೆ ಮತ್ತು ಸರ್ಕಾರ) ಸಮ್ಮಿತಿಸುವ ಮೂಲಕ ಹೊಸ ಶಕೆ ಆರಂಭಿಸಿದ್ದಾರೆಂದೇ ರಾಜತಾಂತ್ರಿಕ ವಲಯದಲ್ಲಿ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಪರಿಣಾಮವನ್ನು ಕಾದು ನೋಡಬೇಕಷ್ಟೆ. ದೇವದುರ್ಲಭ ದೇಶಭಕ್ತ ಯೋಧರನ್ನು ನೋಡನೋಡುತ್ತಲೇ ಕಳೆದುಕೊಂಡ ನೋವು ಎಂದೂ ಮಾಯಲು ಸಾಧ್ಯವಿಲ್ಲ. ನೋವಿನ ನೆನಪಿನ ಬೆನ್ನಲ್ಲೇ ಕಾರ್ಗಿಲ್ ವಿಜಯದ ಹೆಮ್ಮೆಯ ದಿನವೂ ಬರುತ್ತದೆ. ಆ ರೋಮಾಂಚನದ ಘಳಿಗೆಗೆ ಎಂಟು ದಿನಗಳಷ್ಟೇ ಬಾಕಿ. ಕಾಲ ಎಷ್ಟು ಸರಾಗವಾಗಿ […]
Read More
ಲೋಕಾಯುಕ್ತ ಮಾತ್ರವಲ್ಲ, ಸಾರ್ವಜನಿಕ ವ್ಯವಸ್ಥೆಯಲ್ಲಿರುವ ಎಲ್ಲರೂ ತಪ್ಪು ಮಾಡಿ ದಕ್ಕಿಸಿಕೊಳ್ಳುವುದು ಪಕ್ಕಕ್ಕಿರಲಿ, ಅಪವಾದ, ಅನುಮಾನಗಳಿಗೆ ಆಸ್ಪದವೇ ಇರದಂತೆ ನಡೆದುಕೊಳ್ಳುವುದು ಹೊಣೆಗಾರಿಕೆಯ ಲಕ್ಷಣ. ಜವಾಬ್ದಾರಿ ಸ್ಥಾನಗಳಲ್ಲಿರುವವರಿಂದ ಜನ ಅದನ್ನು ನಿರೀಕ್ಷಿಸಬಹುದೇ? ನಮ್ಮ ಲೋಕಾಯುಕ್ತದ ಅಣ್ಣ ಲೋಕಪಾಲ ಅನ್ನುವುದು ಈಗಲೂ ಕಣ್ಣಿಗೆ ಕಾಣಿಸದ ‘ಗುಡ್ಡದ ಭೂತ’ವೆ. ಹೀಗೆ ಹೇಳುವುದಕ್ಕೂ ಕಾರಣವಿದೆ. ಲೋಕಪಾಲ ವ್ಯವಸ್ಥೆಯೊಂದು ಜಾರಿಗೆ ಬಂದರೆ ಈ ದೇಶದಲ್ಲಿ ಎಲ್ಲವೂ ಸರಿಯಾಗಿಬಿಡುತ್ತದೆ ಎಂಬ ಹುಸಿನಂಬಿಕೆಯೊಂದು ಬೆಳೆದುಬಿಟ್ಟಿದೆ. ಅದೊಂದಾದರೆ ಸಾಕು, ವ್ಯವಸ್ಥೆಯಲ್ಲಿ […]
Read More
ಬಿಜೆಪಿ ವರಿಷ್ಠರಿಗೆ ಪಕ್ಷದ ಭವಿಷ್ಯದ ಚಿಂತೆ ಕಿಂಚಿತ್ತಾದರೂ ಇದ್ದರೆ, ಹಗರಣದ ನೆರಳಿನಲ್ಲಿ ಯುಪಿಎ ಸರ್ಕಾರದ ಸಾಲುಸಾಲು ಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ತಲೆದಂಡ ಪಡೆದ ನೆನಪು ತುಸುವಾದರೂ ಇದ್ದರೆ, ಮೊದಲು ಸುಷ್ಮಾ ಮತ್ತು ವಸುಂಧರಾ ರಾಜೆ ರಾಜೀನಾಮೆ ಪಡೆಯಬೇಕು. ಸರ್ಕಾರ ನಡೆಸುವುದು ಅಂದರೆ ಅಷ್ಟು ಸಲೀಸೇ? ಕುರ್ಚಿ ಅಂದರೆ ಸುಖದ ಸುಪ್ಪತ್ತಿಗೆ ಮಾತ್ರವೇ? ಸರ್ಕಾರದ ಚುಕ್ಕಾಣಿ ಹಿಡಿದವರು ಕೀರ್ತಿಯ ಹಾರ ತುರಾಯಿಗಳಿಗೆ ಮಾತ್ರ ಕೊರಳೊಡ್ಡಿದರೆ ಸಾಕೇ? ಅದರ ಜೊತೆಜೊತೆಗೇ ಬರುವ ಅಪಮಾನ, ಅಪವಾದ, ಕಳಂಕಗಳಿಗೂ ಹೆಗಲು ಕೊಡುವುದು ಬೇಡವೇ? […]
Read More
ಇತ್ತೀಚಿನ ಎರಡು-ಮೂರು ಸಂದರ್ಭಗಳಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ತಾನು ಸಾಗಿ ಬಂದ ಹಾದಿ, ಮುಂದೆ ಸಾಗಬೇಕಾದ ಗುರಿಯೆಡೆಗೆ ಅಲಕ್ಷ್ಯಮಾಡಿ, ಮುಖ್ಯವಾಗಿ ತನ್ನ ಐಡೆಂಟಿಟಿಯನ್ನೇ ಮರೆತಂತೆ ವರ್ತಿಸುತ್ತಿರುವುದನ್ನು ಕಂಡಾಗ ಅಚ್ಚರಿಯಾಗುತ್ತದೆ. ಹೆಸರಾಂತ ಐರಿಷ್ ಸಾಹಿತಿ ಜಾರ್ಜ್ ಬರ್ನಾರ್ಡ್ ಷಾ ಪರಿಚಯ ಎಲ್ಲರಿಗೂ ಇದೆ. ಸಾಹಿತ್ಯ ಕೃಷಿಗಾಗಿ ಪ್ರತಿಷ್ಠಿತ ಅಕಾಡೆಮಿ ಪ್ರಶಸ್ತಿ, ನೊಬೆಲ್ ಪುರಸ್ಕಾರ ಮತ್ತು ಆಸ್ಕರ್ ಅವಾರ್ಡನ್ನು ಪಡೆದ ಏಕೈಕ ಲೇಖಕ ಎಂಬ ದಾಖಲೆ ಇವರ ಹೆಸರಲ್ಲೇ ಇರುವುದು ವಿಶೇಷ. ಷಾ ಕುರಿತು ಹೇಳಲೇಬೇಕಾದ ಮತ್ತೊಂದು ವಿಷಯವಿದೆ. ಅದೇನೆಂದರೆ […]
Read More
`ಇಂಡಿಯಾಸ್ ಚಾನ್ಸ್ ಟು ಫ್ಲೈ’ ಎಂದು ಜಗದ್ವಿಖ್ಯಾತ ಇಕಾನಮಿಸ್ಟ್ ಮ್ಯಾಗಜಿನ್ ಹೇಳುತ್ತದೆ. `ರಿಫಾರ್ಮರ್ ಇನ್ ಚೀಫ್’ ಎಂದು `ಟೈಮ್’ ಮ್ಯಾಗಜಿನ್‌ನಲ್ಲಿ ಅಮೆರಿಕ ಅಧ್ಯಕ್ಷ ಒಬಾಮಾ ಅವರು ಮೋದಿಯನ್ನು ಬಣ್ಣಿಸುತ್ತಾರೆ. ನಮ್ಮವರು `ಅಚ್ಛೇ ದಿನ್ ಆಗಯಾ ಕ್ಯಾ’ ಎಂದು ಕಟಕಿಯಾಡುತ್ತಾರೆ. ಈ ವೈರುಧ್ಯಕ್ಕೆ ಏನನ್ನೋಣ? ಇದನ್ನು ಬೇಕಾದರೆ ಮೇ ತಿಂಗಳ ವಿಶೇಷತೆ ಅಂತ ಕರೆಯಬಹುದೇನೋ… ಒಂದೇ ತಿಂಗಳಲ್ಲಿ ಈಕಡೆ ಸಿದ್ದರಾಮಯ್ಯ ಸರ್ಕಾರ ಎರಡನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರೆ, ಆ ಕಡೆ ಮೋದಿ ಸರ್ಕಾರ ಮೊದಲ ವರ್ಷದ ಸಂಭ್ರಮಾಚರಣೆಗೆ ಅಣಿಯಾಗಿದೆ. […]
Read More
ಅರಸು ಚಿಂತನೆಯ ನೆರಳಲ್ಲಿ ಮತ್ತು ರಾಮಕೃಷ್ಣ ಹೆಗಡೆ ಅವರ ಗರಡಿಯಲ್ಲಿ ರಾಜಕೀಯದಲ್ಲಿ ಹಂತಹಂತವಾಗಿ ಮೇಲೇರಿ ಸಿಎಂ ಪಟ್ಟದವರೆಗೆ ತಲುಪಿದ ಸಿದ್ದರಾಮಯ್ಯ, ಅಧಿಕಾರದ ಉತ್ತರಾರ್ಧದಲ್ಲಾದರೂ ತಮ್ಮ ಮೂಲತನವನ್ನು ನೆನಪಿಸಿಕೊಂಡು ಆಡಳಿತದಲ್ಲಿ ಸ್ವಂತಿಕೆಯ ಛಾಪೊತ್ತುವರೇ? ಅಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಕ್ರಮ ಗಣಿಗಾರಿಕೆ ವಿರುದ್ಧ ಬೆಂಗಳೂರಿನಿಂದ ಬಳ್ಳಾರಿಗೆ ನಡೆಸಿದ ಪಾದಯಾತ್ರೆಯ ನೆನಪು ಈಗಲೂ ಹಚ್ಚಹಸಿರು. ರಾಜ್ಯ ರಾಜಕೀಯದ ಪಾಲಿಗೆ ಅದೇ ಪರಿವರ್ತನೆಯ ರಣಕಹಳೆ ಆದದ್ದು ಎಲ್ಲರಿಗೂ ತಿಳಿದಿರುವ ವಿಚಾರ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿಡಿದಿದ್ದ ಗ್ರಹಣ ಬದಿಗೆ ಸರಿಯಲೂ ಅದೇ […]
Read More
ಕೈಗಾರಿಕೆಗಳಿಲ್ಲದೆ ದೇಶದ ಮುನ್ನಡೆ ಎಂಬುದು ಕನಸಿನ ಮಾತು ಎಂದು ಈ ದೇಶದಲ್ಲಿ ಮೊದಲು ಹೇಳಿದ್ದು ರಾಹುಲ್ ಮುತ್ತಜ್ಜ ಚಾಚಾ ನೆಹರು. ಹಾಗಾದರೆ ನೆಹರು ಅವರಿಗೂ ಕೈಗಾರಿಕೋದ್ಯಮಿಗಳು ಕಪ್ಪ ಸಲ್ಲಿಸಿದ್ದರು, ಅದಕ್ಕಾಗಿ ಅವರು ಹಾಗೆ ಹೇಳುತ್ತಿದ್ದರು ಅಂತ ಹೇಳಬಹುದೇ? *** ಭರವಸೆಯ ಬೆಟ್ಟವನ್ನೇ ನಿರ್ವಿುಸಿದ ರಾಹುಲ್ ಇಷ್ಟು ಬೇಗ ನಿರಾಸೆ ಮೂಡಿಸಿಬಿಟ್ಟರೆ ಹೇಗೆ! ಇತ್ತ ಸಂಸತ್ತಿನಲ್ಲಿ ಭೂಸ್ವಾಧೀನ ಮಸೂದೆಯಂತಹ ಮಹತ್ವದ ವಿಷಯದ ಮೇಲೆ ಚರ್ಚೆ ನಡೆಸಲು ತಯಾರಿ ನಡೆದಿದ್ದರೆ ಅತ್ತ ಕಡೆ ಕಾಂಗ್ರೆಸ್ನ ಭವಿಷ್ಯದ ಭರವಸೆಯ ನಾಯಕ […]
Read More