ಕರ್ನಾಟಕದಲ್ಲಿ‌ ಸೈಲೆಂಟ್ ಸೋಂಕಿನ‌ ಕೈಚಳಕ

ಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕುಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕು – 445 ಕೇಸ್ಗಳ ಪೈಕಿ 300 ಮಂದಿಗೆ ರೋಗ ಲಕ್ಷಣವಿಲ್ಲ- ಸೋಂಕಿತರ ಗುರುತಿಸಿ ಚಿಕಿತ್ಸೆ ನೀಡುವುದೇ ಸವಾಲು ವಿಕ ಬ್ಯೂರೊ ಬೆಂಗಳೂರು: ಅತ್ಯಂತ ವೇಗವಾಗಿ ಎಲ್ಲಕಡೆ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಯಾವುದೇ ಲಕ್ಷಣಗಳಿಲ್ಲದೆ ಒಳಗಿಂದೊಳಗೆ ಕೊರೆಯುತ್ತಿರುವುದು ಈಗ ಆತಂಕ ಸೃಷ್ಟಿಸಿದೆ. ಗಂಟಲು ನೋವು, ಕೆಮ್ಮು ಮತ್ತು ಜ್ವರ ಇವು ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತಿದ್ದರೂ ರಾಜ್ಯದಲ್ಲಿ ದಾಖಲಾದ 445 ಪ್ರಕರಣಗಳ ಪೈಕಿ 300 (67%) ಮಂದಿಗೆ ಇಂಥ […]

Read More

ಕಡಿಮೆಯಾಗುತ್ತಿದೆ ಸೋಂಕು ಆದರೆ, ಹೆಚ್ಚಾಗುತ್ತಿದೆ ಸಾವಿನ ಪ್ರಮಾಣ

ಕೊರೊನಾ ವೈರಸ್(ಕೋವಿಡ್ 19) ಸೃಷ್ಟಿಸಿರುವ ತಲ್ಲಣಕ್ಕೆ ಇಡೀ ಜಗತ್ತೇ ಸ್ತಬ್ಧವಾಗಿದೆ. ಚೀನಾ, ಅಮೆರಿಕ, ಇಟಲಿ, ಜರ್ಮನಿ ಹಾಗೂ ಸ್ಪೇನ್‌ನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೋವಿಡ್ 19 ಎದುರಿಸಲಾಗಿದೇ ಮಕಾಡೆ ಮಲಗಿವೆ. ಈ ದೇಶಗಳಲ್ಲಿ ಸೋಂಕಿಗೆ ಒಳಗಾಗುವವರು ಮತ್ತು ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಲಕ್ಷ ಮತ್ತು ಸಾವಿರ ಲೆಕ್ಕದಲ್ಲಿದೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ಕೊರೊನಾ ಉಪಟಳವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಗ್ಗೂಡಿ ಹೋರಾಡುತ್ತಿದ್ದು, ಅದರ ಫಲ ಈಗ ನಿಚ್ಚಳವಾಗುತ್ತಿದೆ. ಲಾಕ್‌ಡೌನ್‌ ಹೆಚ್ಚು ಪರಿಣಾಮಕಾರಿಯಾಗುತ್ತಿದೆ […]

Read More

ಇರೋಣ ಮನೆಯಲ್ಲಿ ಬೆಚ್ಚಗೆ, ತೋರೋಣ ಸೇನಾನಿಗಳಿಗೆ ಮೆಚ್ಚುಗೆ

ಲಾಕ್‌ಡೌನ್‌ನಿಂದ ಕಲಿತ ಪಾಠಗಳನ್ನು ಜೀವಮಾನ ಪರ್ಯಂತ ಅಳವಡಿಸಿಕೊಂಡರೆ ಅಪಾಯ ದೂರ.  ಕೊರೊನಾ ಲಾಕ್‌ಡೌನ್‌ ಏಪ್ರಿಲ್‌ 14ಕ್ಕೆ ಅಂತ್ಯ ಕಾಣುವುದೇ ಅಥವಾ ಮುಂದುವರಿಯುವುದೇ ಎಂಬ ಒಂದು ಪ್ರಶ್ನೆ ಭಾರತದ ಕೋಟಿ ಕೋಟಿ ಜನರನ್ನು ಮೂರು ದಿನಗಳ ಹಿಂದಿನವರೆಗೂ ಕಾಡುತ್ತಿತ್ತು. ಅದನ್ನು ಎಲ್ಲರೂ ತಮ್ಮೊಳಗೆ ತಾವು ಕೇಳಿಕೊಳ್ಳುತ್ತಿದ್ದರು. ಆದರೆ, ಈಗ ಲಾಕ್‌ಡೌನ್‌ ಮೇ 3ರವರೆಗೆ ಅಧಿಕೃತವಾಗಿ ವಿಸ್ತರಣೆಯಾಗಿರುವುದರಿಂದ 14ರ ಕುತೂಹಲಕ್ಕೆ ತೆರೆ ಬಿದ್ದಾಗಿದೆ. ಬೆನ್ನಲ್ಲಿಯೇ ಏಪ್ರಿಲ್‌ 20ರ ಬಳಿಕ ಈಗ ಜಾರಿಯಲ್ಲಿರುವ ಲಾಕ್‌ಡೌನ್‌-2ರ ಬಿಗಿ ಏನಾದರೂ ಸಡಿಲ ಆಗುವುದೇ? ಮೇ […]

Read More

ಲಾಕ್‌ಡೌನ್‌: ಸೋಂಕು ಇಳಿಸದಿದ್ದರೆ ಭಾರತ ತ್ರಿಶಂಕು

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಮೂರು ವಾರಗಳ ಲಾಕ್‌ಡೌನ್‌ ಅನ್ನು ಭಾರತ ಮುಗಿಸಿದೆ. ಮೇ 3ರವರೆಗೆ ಮತ್ತೆ ವಿಸ್ತರಿಸಲಾಗಿದೆ. ಈ ನಡುವೆ, ಲಾಕ್‌ಡೌನ್‌ನಿಂದ ಭಾರತಕ್ಕೆ ಆದ ಪ್ರಯೋಜನ ಏನು? ಲಾಕ್‌ಡೌನ್‌ ಮಾಡದಿದ್ದರೆ ಏನಾಗುತ್ತಿತ್ತು? ಮೂರು ವಾರಗಳಿಂದ ಲಾಕ್‌ಡೌನ್‌ ಅನುಭವಿಸುತ್ತಿರುವ ಭಾರತ ಮತ್ತೂ ಹದಿನೆಂಟು ದಿನಗಳ ಲಾಕ್‌ಡೌನ್‌ಗೆ ಒಳಪಟ್ಟಿದೆ. ಈ ಅವಧಿಯಲ್ಲಿ, ಹೊಸ ಕೋವಿಡ್‌-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೇರಳ ಕೊರೊನಾ ವೈರಸ್‌ನ್ನು ತಡೆಗಟ್ಟುವುದು ಹೇಗೆ ಎಂಬುದಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಿದೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಲಾಕ್‌ಡೌನ್‌ […]

Read More

ಕುಡಿಯುವ ನೀರಿನ ಆತಂಕ: ಸಾಂಕ್ರಾಮಿಕಗಳ ತಡೆಗೆ ಶುದ್ಧ ನೀರು ಅಗತ್ಯ

ಕೊರೊನಾ ಸೋಂಕನ್ನು ಎದುರಿಸಲು ರಾಜ್ಯಾಡಳಿತ ಸಮರೋಪಾದಿಯಲ್ಲಿ ಸಜ್ಜಾಗಿದೆ. ಸರಕಾರದ ಈ ಸನ್ನದ್ಧತೆಯನ್ನು ನಾವು ಶ್ಲಾಘಿಸಲೇಬೇಕು. ಆರೋಗ್ಯ ಸೇವೆ, ಗೃಹ ಸಚಿವಾಲಯ ಎಲ್ಲವೂ ಕೊರೊನಾ ಸೋಂಕಿನ ಹಿಂದೆ ಬಿದ್ದಿವೆ. ಒಟ್ಟಾರೆ ಆಡಳಿತವೇ ಕೋವಿಡ್‌ ಕೇಂದ್ರಿತವಾಗಿದೆ ಎಂದರೂ ತಪ್ಪಿಲ್ಲ. ಈ ಮಧ್ಯೆ ಇನ್ನೊಂದು ಮುಖ್ಯ ವಿಚಾರ ಹಿನ್ನೆಲೆಗೆ ಸರಿದಿದೆ – ಕುಡಿಯುವ ನೀರು. ಪ್ರತಿಬಾರಿ ಬೇಸಿಗೆ ಬಂದಾಗಲೂ ಈ ವಿಚಾರ ಮುನ್ನೆಲೆಗೆ ಬರುತ್ತದೆ. ಯಾಕೆಂದರೆ ಸಮಸ್ಯೆ ಬಿಗಡಾಯಿಸುವುದೇ ಆಗ. ಈ ಬಾರಿ ಪೂರ್ವಸಿದ್ಧತೆ ಇಲ್ಲದ ಕಾರಣ ಬಿರುಬೇಸಿಗೆಯ ಕುಡಿಯುವ ನೀರಿನ […]

Read More

ಅಭದ್ರತೆ ಭಯ ಬಿಟ್ಹಾಕಿ – ಉದ್ಯೋಗ ಕೌಶಲ ಹೆಚ್ಚಿಸಿಕೊಳ್ಳಲು ಇಲ್ಲಿವೆ ಟಿಪ್ಸ್

– ರಾಮಸ್ವಾಮಿ ಹುಲಕೋಡು ಕೊರೊನಾ ವೈರಸ್ ದಾಳಿಯಿಂದ ಇಡೀ ಜಗತ್ತಿನ ಆರ್ಥಿಕತೆ ಕುಸಿದು ಬಿದ್ದಿದೆ. ಹಿಂದೆಂದೂ ಕಂಡಿರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ಯೋಗ ಮಾರುಕಟ್ಟೆಯ ಮೇಲೂ ಇದು ನೇರ ಪರಿಣಾಮ ಬೀರಿದೆ. ಹೀಗಾಗಿ ಈಗಾಗಲೇ ಉದ್ಯೋಗದಲ್ಲಿರುವವರು, ಉದ್ಯೋಗದ ನಿರೀಕ್ಷೆಯಲ್ಲಿರುವ ಅಭದ್ರತೆಯಿಂದಲೇ ದಿನ ದೂಡುವಂತಾಗಿದೆ. ನಮ್ಮ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಈಗ ಶೇ.30ಕ್ಕಿಂತೂ ಹೆಚ್ಚಿದೆ ಎಂದು ವಿವಿಧ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಮುಂದೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಗಳಿವೆ. ಇಂಥ ಸಂದರ್ಭದಲ್ಲಿ ಈಗ ಉದ್ಯೋಗ ಮಾಡುತ್ತಿರುವವರು ಮತ್ತು ಉದ್ಯೋಗದ ನಿರೀಕ್ಷೆಯಲ್ಲಿರುವವರು ಏನು […]

Read More

ಕೊರೊನಾ ಸಂಕಷ್ಟದಲ್ಲಿರುವವರಿಗೆ ಭರವಸೆ ಬಾಗಿಲು‌..

ಡೋಂಟ್ ವರಿ, ಎಲ್ಲ ಬಾಗಿಲುಗಳೂ ಮುಚ್ಚಿಲ್ಲ! ಲಾಕ್‌ಡೌನ್ ನಡುವೆಯೂ ಹಲವು ವಲಯಗಳಲ್ಲಿ ಚುರುಕಿನ ವಹಿವಾಟು ಕೊರೊನಾಘಾತದ ನಡುವೆಯೂ ಆಶಾಕಿರಣ ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ದಿನ ಬಳಕೆ ವಸ್ತು ತಯಾರಿ ಕಂಪನಿಗಳ ಷೇರು ವೌಲ್ಯ ವೃದ್ಧಿ, ಔಷಧ ರಫ್ತಿನಿಂದ ಭಾರಿ ಲಾಭ – ಕೇಶವ ಪ್ರಸಾದ್ ಬಿ. ಬೆಂಗಳೂರು ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಭಾರಿ ಪ್ರಹಾರ ಮಾಡಿದೆ. ಸುದೀರ್ಘ ಲಾಕ್‌ಡೌನ್‌ನಿಂದಾಗಿ ಕೈಗಾರಿಕೋದ್ಯಮಕ್ಕೆ ಗರ ಬಡಿದಂತಾಗಿರುವುದು ನಿಜ. ಹಾಗಂತ ಪೂರ್ಣ ನಿರಾಶರಾಗಬೇಕಿಲ್ಲ. ಕೊರೊನಾ ಬಿಕ್ಕಟ್ಟು ಹಲವು […]

Read More

ವೆಚ್ಚ ಕಡಿತ ಇಲ್ಲಿಂದಲೇ ಆರಂಭವಾಗಲಿ ಸಿಎಂ ಸಾಹೇಬರೆ…

ವೆಚ್ಚ ಕಡಿತದ ಪ್ರಸ್ತಾವನೆ ಓಕೆ, ನಿಗಮ, ಮಂಡಳಿ ನೇಮಕ ಬೇಕೆ? ಕೊರೊನಾ ಮಹಾಮಾರಿ ದೇಶದ ಆರ್ಥಿಕತೆ ಮೇಲೆ ಬೀರಿರುವ ಪರಿಣಾಮ ನಿರೀಕ್ಷೆಗೂ ಮೀರಿದ್ದು. ಆರ್ಥಿಕ ಮುಗ್ಗಟ್ಟನ್ನು ನಿಭಾಯಿಸುವ ಕ್ರಮವಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಪಾಲರು, ಕೇಂದ್ರ ಸಚಿವರು ಹಾಗೂ ಸಂಸದರ ವೇತನವನ್ನು ಶೇ.30ರಷ್ಟು ವೇತನವನ್ನು ಒಂದು ವರ್ಷದ ಅವಧಿಗೆ ಕಡಿತ ಮಾಡುವ ತೀರ್ಮಾನವನ್ನು ಕೇಂದ್ರ ಸರಕಾರ ಪ್ರಕಟಿಸಿದೆ. ಇದೇ ಮಾದರಿಯಲ್ಲಿರಾಜ್ಯ ಸರಕಾರವೂ ಕ್ರಮಕ್ಕೆ ಮುಂದಾಗಿದೆ. ”ಸಚಿವರು, ಶಾಸಕರ ವೇತನವನ್ನು 2 ವರ್ಷದ ಅವಧಿಗೆ ಶೇ.30ರಷ್ಟು ಕಡಿತಗೊಳಿಸುವ ತೀರ್ಮಾನವನ್ನು ಸಂಪುಟ […]

Read More

ಇದೊಂದು ಇರ್ಲಿಲ್ಲಾ ಅಂದ್ರೆ ಭಾರತ ಸೇಫಾಗಿತ್ತು..

ತಬ್ಲಿಘಿ ನಂಜೇ ಸಾವಿರ! – 17 ರಾಜ್ಯಗಳಲ್ಲಿನ 1023 ಕೇಸಿಗೆ ನಿಜಾಮುದ್ದೀನ್‌ ನಂಟು – 22 ಸಾವಿರ ಜನರು ಕ್ವಾರಂಟೈನ್‌ – ಶತಕದ ಬಾಗಿಲಿಗೆ ಬಂದ ಸಾವಿನ ಸಂಖ್ಯೆ – ರಾಜ್ಯದಲ್ಲೂ16 ಹೊಸ ಕೇಸ್‌ ಪತ್ತೆ ಹೊಸದಿಲ್ಲಿ: ದೇಶದಲ್ಲಿ ಕೊರೊನಾ ಸೋಂಕು ಪ್ರಕರಣಗಳ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಮೂರು ಸಾವಿರದ ಗಡಿ ದಾಟಿದೆ. ಆದರೆ, ಸೋಂಕಿನ ಪ್ರಮಾಣದಲ್ಲಿ ಸಿಂಹಪಾಲು ಪ್ರಕರಣಗಳು ನೇರವಾಗಿ ದಿಲ್ಲಿಯಲ್ಲಿ ನಡೆದ ತಬ್ಲಿಘಿ ಸಮಾವೇಶದೊಂದಿಗೆ ನಂಟು ಹೊಂದಿರುವುದು ಬೆಳಕಿಗೆ ಬಂದಿದೆ. ಕರ್ನಾಟಕ, ತಮಿಳುನಾಡು, […]

Read More

ಸಾಮಾಜಿಕ ಹೊಣೆಗಾರಿಕೆ ಇರಲಿ: ಸಮುದಾಯ ಕಾಯಿಲೆ ಹರಡುವಿಕೆ ತಡೆಯಬೇಕು

ದಿಲ್ಲಿಯ ನಿಜಾಮುದ್ದೀನ್‌ ತಬ್ಲಿಘ್‌-ಇ-ಜಮಾತ್‌ ಮಸೀದಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನೂರಾರು ಮಂದಿಗೆ ಕೊರೊನಾ ಸೋಂಕು ತಗುಲಿರುವ ಶಂಕೆ ವ್ಯಕ್ತವಾಗಿರುವುದು ದೇಶದ ಆತಂಕಕ್ಕೆ ಕಾರಣವಾಗಿದೆ. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕ, ಪಶ್ಚಿಮ ಬಂಗಾಳ, ಬಿಹಾರ ಹಾಗೂ ಇತರ ರಾಜ್ಯಗಳಿಗೆ ಸೇರಿದ ಸಾವಿರಾರು ಮಂದಿ ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾಗಿ ನಾನಾ ಕಡೆ ಸಂಚರಿಸಿರುವುದು ಆತಂಕ ಹೆಚ್ಚಾಗುವಂತೆ ಮಾಡಿದೆ. ತಬ್ಲಿಘ್‌-ಇ-ಜಮಾತ್‌ ಸಭೆಯಲ್ಲಿ ಭಾಗವಹಿಸಿ ವಾಪಸಾದ ಕರ್ನಾಟಕದ ಸಿರಾದ ವೃದ್ಧ, ಆಂಧ್ರ ಮತ್ತು ತೆಲಂಗಾಣದ ತಲಾ ಓರ್ವರು ಸೇರಿ ಒಟ್ಟು ಹತ್ತಕ್ಕೂ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top