ಇದು ಗ್ರೇಡಿಂಗ್, ಯಾವುದೂ ಟಾಪ್ ಅಲ್ಲ

– ಯಾವ ಜಿಲ್ಲೆಯೂ ನಂ.1 ಅಲ್ಲ, ಕೊನೆ ಸ್ಥಾನಿಯೂ ಇಲ್ಲ: ಶಿಕ್ಷಣ ಇಲಾಖೆ ಸ್ಪಷ್ಟನೆ. ಬೆಂಗಳೂರು: ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆಗಳ ಸಾಧನೆಗೆ ಗ್ರೇಡಿಂಗ್ ಮಾನದಂಡವನ್ನು ರೂಪಿಸಿದ್ದರೂ ಕೆಲವರು ತಮ್ಮದೇ ಜಿಲ್ಲೆ ಟಾಪರ್ ಎಂದು ಘೋಷಿಸಿಕೊಳ್ಳುವ ಮೂಲಕ ಗೊಂದಲ ಸೃಷ್ಟಿಯಾಗಿದೆ. ಕೆಲವರಿಗೆ ತಮ್ಮ ಜಿಲ್ಲೆಯ ಸ್ಥಾನಮಾನ ಕುಸಿದಿರುವ ಬಗ್ಗೆ ಬೇಸರವೂ ಆಗಿದೆ. ಆದರೆ, ಶಿಕ್ಷಣ ಇಲಾಖೆಯ ಪ್ರಕಾರ, ಈ ಬಾರಿ ಯಾವುದೇ ಜಿಲ್ಲೆ ಟಾಪ್ ಅಲ್ಲ, ಯಾವ ಜಿಲ್ಲೆಯನ್ನೂ ಕೊನೆಯ ಸ್ಥಾನಿ ಎಂದು ಗುರುತಿಸಲಾಗಿಲ್ಲ. 10 […]

Read More

ಪ್ರಾಕೃತಿಕ ವಿಕೋಪ ಎದುರಿಸೋಣ – ತುರ್ತು ಕಾರ್ಯಾಚರಣೆ, ಪರಿಹಾರ ಜತೆ ಸಾಗಲಿ

ಕಳೆದ ವರ್ಷ ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಬಂದ ಮಾಸದಲ್ಲೇ ಈ ವರ್ಷವೂ ಅದು ಮರುಕಳಿಸುತ್ತಿದೆ. ಹಾಗೆಯೇ ಎರಡು ವರ್ಷಗಳ ಹಿಂದೆ ಕೊಡಗಿನಲ್ಲಿ ಭಾರಿ ಪ್ರಮಾಣದ ಭೂಕುಸಿತ ಉಂಟಾಗಿ ಹಲವು ಮಂದಿಯನ್ನು ಬಲಿ ತೆಗೆದುಕೊಂಡು ನೂರಾರು ಮಂದಿಯನ್ನು ನಿರಾಶ್ರಿತರನ್ನಾಗಿಸಿತ್ತು. ನಿನ್ನೆ ತಲಕಾವೇರಿಯಲ್ಲಿ ಅಂಥದೇ ಇನ್ನೊಂದು ದುರಂತ ಸಂಭವಿಸಿದ್ದು, ಹಲವರು ಜೀವಂತ ಸಮಾಧಿಯಾಗಿರುವ ಶಂಕೆ ಇದೆ. ಭಾರಿ ಮಳೆ ಸುರಿಯುತ್ತಲೇ ಇರುವುದರಿಂದ ದುರಂತಗಳ ಸಂಖ್ಯೆ ನಾವು ಬೇಡವೆಂದರೂ ಹೆಚ್ಚಾಗಬಹುದು; ಮುನ್ನೆಚ್ಚರಿಕೆ ಹಾಗೂ ತಕ್ಷಣದ ರಕ್ಷಣಾ ಕಾರ್ಯಾಚರಣೆಗಳು ಈಗ […]

Read More

ಅಖಿಲ ಭಾರತ ಸೇವೆಗೆ ಕನ್ನಡಿಗರು – ಕೆಪಿಎಸ್‌ಸಿಗೆ ಯುಪಿಎಸ್‌ಸಿ ಮಾದರಿ

ಕೇಂದ್ರ ಲೋಕಸೇವಾ ಆಯೋಗವು(ಯುಪಿಎಸ್‌ಸಿ) ಐಎಎಸ್, ಐಪಿಎಸ್ ಮತ್ತು ಇತರ ಅಖಿಲ ಭಾರತ ಸೇವೆಗಳಿಗೆ ಅಭ್ಯರ್ಥಿಗಳ ಆಯ್ಕೆಗೆ ನಡೆಸಿದ ವಾರ್ಷಿಕ ಪರೀಕ್ಷಾ ಫಲಿತಾಂಶ ಪ್ರಕಟವಾಗಿದೆ. ವಿಶೇಷವೆಂದರೆ ಕರ್ನಾಟಕದಿಂದ ಗಣನೀಯ ಪ್ರಮಾಣದ ಪ್ರತಿಭಾವಂತರು ಅಖಿಲ ಭಾರತ ಆಡಳಿತ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಅದರಲ್ಲೂ ಸಣ್ಣ ಪುಟ್ಟ ಪಟ್ಟಣಗಳು, ಗ್ರಾಮೀಣ ಪ್ರದೇಶದ ಪ್ರತಿಭಾನ್ವಿತರು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿರುವುದು ಹೊಸ ಭರವಸೆ ಮೂಡಿಸಿದೆ. ಯುಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿ ಆಯ್ಕೆಯಾದ ಒಟ್ಟು 927 ಅಭ್ಯರ್ಥಿಗಳ ಪೈಕಿ ಕರ್ನಾಟಕದ 40 ಪ್ರತಿಭಾನ್ವಿತರಿರುವುದು ವಿಶೇಷ. ಈ ಬೆಳವಣಿಗೆ ಸಾವಿರಾರು […]

Read More

ರಾಮ ಚಳವಳಿಗೆ ಹನುಮ ನಾಡಿನ ಸಾಥ್

ಪಿತೃವಾಕ್ಯ ಪರಿಪಾಲನೆಗೆ ವನಾಭಿಗಮನ ಮಾಡಿದ ಶ್ರೀರಾಮ ಹದಿನಾಲ್ಕು ವರ್ಷದ ಬಳಿಕ ಅಯೋಧ್ಯೆಗೆ ಮರಳಿದ. ರಾಮನಿಗೆ ಪಟ್ಟಾಭಿಷೇಕವೂ ಆಯಿತು. ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತ ಇಕ್ಷ್ವಾಕು ವಂಶದ ರಾಜ ಪರಿವಾರದ ಜತೆಜತೆಗೇ ಓಡಾಡಿಕೊಂಡಿದ್ದವ ಅಂಜನಾದೇವಿಯ ಗರ್ಭ ಸಂಜಾತ ಆಂಜನೇಯ. ಈ ಆಂಜನೇಯ ಶ್ರೀ ರಾಮನ ಕಿಂಕರ. ಜತೆಗೆ ಕನ್ನಡದ ನೆಲದ ಮಹಾಮಹಿಮ. ಈಗ ಆಧುನಿಕ ಭಾರತದಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿಯೇ ಭುವನ ಮನೋಹರವಾದ ರಾಮಮಂದಿರ ನಿರ್ಮಾಣಗೊಳ್ಳಲಿದೆ. ಮಂದಿರಕ್ಕಾಗಿ ನಡೆದ ಹೋರಾಟದಲ್ಲಿಯೂ ಕರ್ನಾಟಕದ ಪವಿತ್ರ ಭೂಮಿಯ ಕೊಡುಗೆ ಅನನ್ಯವಾದುದು. ಯಜ್ಞಸದೃಶವಾದ ಈ […]

Read More

ಕೊರೊನಾ ನಡುವೆ ಶಿಕ್ಷಕರ ಸ್ಫೂರ್ತಿಯ ಸೆಲೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಅನೇಕರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ವೈದ್ಯರು, ದಾದಿಯರು, ಪೊಲೀಸರು, ಪೌರಕಾರ್ಮಿಕರು ಹಾಗೂ ಶಿಕ್ಷಕರು ಮುಂಚೂಣಿಯಲ್ಲಿದ್ದಾರೆ. ಕೊರೊನಾ ಯೋಧರ ಸಾಲಿನಲ್ಲಿ ಬರುವ ಶಿಕ್ಷಕರು ಜೀವದ ಹಂಗು ತೊರೆದು ಹೇಗೆ ಕೆಲಸ ಮಾಡುತ್ತಿದ್ದಾರೆ? ಪ್ರತಿಕೂಲ ಪರಿಸ್ಥಿತಿಯಲ್ಲೂ ಹೇಗೆ ಕೆಲಸ ನಿರ್ವಹಿಸುತ್ತಿದ್ದಾರೆ? ಶಿಕ್ಷಕರ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ. ಜಾಗೃತಿ ಮೂಡಿಸಿದ ‘ಉಷಾ’ ಲಾಕ್‌ಡೌನ್‌ ಸಮಯದಲ್ಲೂ ತಮ್ಮದೇ ಆದ ಸುರಕ್ಷಾ ಮಾರ್ಗಗಳ ಮೂಲಕ ಶಾಲೆಯ ಮಕ್ಕಳು ಆಟ ಪಾಠ ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಂಡಿದ್ದಾರೆ. ಕೊರೊನಾ ಕುರಿತು ಮಕ್ಕಳು […]

Read More

72.5% ಸೋಂಕಿತರಿಗೆ ಸಣ್ಣ ಲಕ್ಷಣವೂ ಇಲ್ಲ!

51422 ಒಟ್ಟು ಸೋಂಕಿತರು 35995 ಸೋಂಕುರಹಿತರು 1032 ಸಾವಿಗೀಡಾದವರು ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವುದು ನಿಜವಾದರೂ ಅದೇ ಹೊತ್ತಿಗೆ ಸೋಂಕುರಹಿತರ ಪ್ರಮಾಣವೂ ಹೆಚ್ಚಿರುವುದು ಸ್ವಲ್ಪ ನೆಮ್ಮದಿ ನೀಡಿದೆ. ರಾಜ್ಯದ 51422 ಸೋಂಕಿತರ ಪೈಕಿ 37,280 ಮಂದಿಯಲ್ಲಿ ಯಾವ ಕನಿಷ್ಠ ಲಕ್ಷಣಗಳೂ ಇಲ್ಲ. ಹೊಸದಾಗಿ ದಾಖಲಾಗುತ್ತಿರುವ ಪ್ರಕರಣಗಳಲ್ಲಿ ಮಾತ್ರ ಸ್ವಲ್ಪ ಮಟ್ಟಿಗೆ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಲಕ್ಷಣರಹಿತರು ಹೆಚ್ಚಾದಷ್ಟೂ ಅವರ ಚಿಕಿತ್ಸೆ ಸಮಸ್ಯೆ ಕಡಿಮೆಯಾಗುತ್ತದೆ. ಮತ್ತು ಲಕ್ಷಣ ಇರುವವರ ಚಿಕಿತ್ಸೆಗೆ ಹೆಚ್ಚು ಅವಕಾಶ ದೊರೆಯುತ್ತದೆ. ಕೆಲವು ಜಿಲ್ಲೆಗಳಲ್ಲಂತೂ ಶೇ. […]

Read More

ಸಾವಿನ ವಾಸ್ತವಿಕ ವರದಿಗೆ ಓದುಗರ ಶ್ಲಾಘನೆ

ದಶಕಗಳ ಕಾಲ ಕಾಯಿಲೆ ಇದ್ದರೂ ಬದುಕಿರುವವರು ಮಾತ್ರವಲ್ಲ, ಆರೋಗ್ಯವಂತ ವ್ಯಕ್ತಿಗಳೂ ಕೂಡ ಅತಿರಂಜಿತ ಸುದ್ದಿಯಿಂದಾಗಿ ಭಯಭೀತರಾಗಿ ಮಾನಸಿಕವಾಗಿ ಸಾಯುತ್ತಿದ್ದುದನ್ನು ನಾನು ಗಮನಿಸಿದ್ದೇನೆ. ಆದರೆ ಗುರುವಾರದ ‘ವಿಜಯ ಕರ್ನಾಟಕ’ ಪತ್ರಿಕೆಯ ಮುಖಪುಟ ವರದಿ ಹಾಗೂ ಸಂಪಾದಕೀಯವನ್ನು ಓದಿದರೆ ಜನರಿಗೆ ಧೈರ್ಯ ಬರುವುದು ಖಂಡಿತ. ಮಾಧ್ಯಮಗಳು ಸದ್ಯ ಮಾಡಬೇಕಿರುವುದು ಇಂಥ ಕೆಲಸವನ್ನೇ ಹೊರತು ಹೆದರುವವರ ಮೇಲೆ ಹಾವು ಎಸೆಯುವುದಲ್ಲ. ಸಕಾಲದಲ್ಲಿ ತಮ್ಮ ಪತ್ರಿಕೆಯಲ್ಲಿ ಕೊರೊನಾ ಕುರಿತು ವಾಸ್ತವವನ್ನು ಬಿಚ್ಚಿಟ್ಟಿದ್ದೀರಿ. ಧನ್ಯವಾದಗಳು. – ಬಿ.ಎಂ.ಶಿವಕುಮಾರ್ ಬೆಂಗಳೂರು ಕೊರೊನಾ ಸಾವು ಶೇ.25ರಷ್ಟು ಮಾತ್ರ […]

Read More

ಕೋವಿಡ್‌ ಜ್ಞಾನವೇ ಆಯುಧ – ಆತಂಕರಹಿತ ರೋಗನಿರೋಧಕ ವ್ಯವಸ್ಥೆಯ ಅಗತ್ಯ

ದಿನ ಕಳೆದಂತೆ ಕೊರೊನಾ ಸೋಂಕಿನ ಬಗ್ಗೆ ಹೊಸ ಹೊಸ ಮಾಹಿತಿಗಳು ದೊರೆಯುತ್ತಿವೆ. ದೊರೆಯುತ್ತಿರುವ ಅಂಕಿ- ಅಂಶ, ಮಾಹಿತಿಗಳನ್ನು ಬಗೆದು ನೋಡಿದರೆ ನಾವು ಇದುವರೆಗೆ ಕೋವಿಡ್‌ ಬಗ್ಗೆ ನಂಬಿಕೊಂಡು ಬಂದಿರುವ ಹಲವು ಸಂಗತಿಗಳನ್ನೇ ನಿರಾಕರಿಸಬಹುದಾದ ಹಾಗಿದೆ. ಉದಾಹರಣೆಗೆ, ಕೋವಿಡ್‌ ಪಾಸಿಟಿವ್‌ ಬಂದ ಎಲ್ಲರನ್ನೂ ಸಾಂಸ್ಥಿಕ ಕ್ವಾರಂಟೈನ್‌ ಮಾಡಬೇಕು ಎಂದು ಆರಂಭದಲ್ಲಿ ಹೇಳಲಾಗಿತ್ತು. ಆದರೆ ಈಗ ನಮ್ಮ ರಾಜ್ಯ ಸರಕಾರ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಕೂಡ, ಲಕ್ಷಣಗಳಿಲ್ಲದ ಸೋಂಕಿತರು ಅಷ್ಟೇನೂ ಅಪಾಯದ ಅಂಚಿನಲ್ಲಿರುವವರಲ್ಲ, ಹಾಗಾಗಿ ಅವರು ಮನೆ ಕ್ವಾರಂಟೈನ್‌ನಲ್ಲಿದ್ದರೆ […]

Read More

ದಿನವೂ ಲಕ್ಷಾಂತರ ಜನರಿಗೆ ಸೋಂಕು ತಗಲುವ ಸಾಧ್ಯತೆಯಿಲ್ಲ! – ಊಹಾತ್ಮಕ, ಉತ್ಪ್ರೇಕ್ಷಿತ ಅಂಕಿ ಸಂಖ್ಯೆಗಳಿಗೆ ಕಿವಿಗೊಡಬೇಡಿ, ಅನಗತ್ಯ ಭೀತಿ ಬಿಟ್ಹಾಕಿ

– ಸುಧೀಂದ್ರ ಹಾಲ್ದೊಡ್ಡೇರಿ. ನೀವು ಇತ್ತೀಚಿನ ದಿನಗಳಲ್ಲಿ ‘ಡೇಟಾ ಸೈನ್ಸ್’, ‘ಬಿಗ್‌ ಡೇಟಾ’, ‘ಡೇಟಾ ಅನಾಲಿಟಿಕ್ಸ್’, ‘ಡೇಟಾ ಮೈನಿಂಗ್’ ಮುಂತಾದ ಶಬ್ದಗಳನ್ನು ಕೇಳಿರುತ್ತೀರಿ. ಇವೆಲ್ಲವೂ ಬೃಹತ್ ಪ್ರಮಾಣದ ಅಂಕಿ-ಅಂಶಗಳ ಆಧಾರದ ಮೇಲೆ ಮಾರುಕಟ್ಟೆಯಲ್ಲಿ ಯಾವ ವಸ್ತುವಿಗೆ, ಯಾವ ಸಮಯದಲ್ಲಿ ಎಷ್ಟು ಬೇಡಿಕೆಯಿರುತ್ತದೆಂಬುದನ್ನು ಗಣಿತ ಮಾದರಿಗಳ ಮೂಲಕ ಕಂಡುಕೊಳ್ಳಲು ಬಳಸುತ್ತಿರುವ ಕಂಪ್ಯೂಟರ್ ಕ್ಷೇತ್ರದ ಸಲಕರಣೆಗಳು. ಸದ್ಯದ ಬಳಕೆ, ವರ್ಷದಿಂದ ವರ್ಷಕ್ಕೆ ಬಳಕೆಯಲ್ಲಿನ ಏರಿಕೆಗಳ ಆಧಾರದ ಮೇಲೆ ಮುಂಬರುವ ದಿನಗಳಲ್ಲಿ ಮಾರುಕಟ್ಟೆ ಹೇಗಿರುತ್ತದೆಂಬ ಅಂದಾಜು ನೀಡುವ ಲೆಕ್ಕಾಚಾರವೇ ‘ಪ್ರಿಡಿಕ್ಟಿವ್ ಅನಲಿಟಿಕ್ಸ್’. […]

Read More

ಉಡುಪಿ ಫಸ್ಟ್, ವಿಜಯಪುರ ಲಾಸ್ಟ್

– ದಕ್ಷಿಣ ಕನ್ನಡ 2, ಕೊಡಗು ಜಿಲ್ಲೆಗೆ 3ನೇ ಸ್ಥಾನ – 88 ಕಾಲೇಜುಗಳು ಝೀರೋ, 92 ಕಾಲೇಜು ಶತಕ ಸಾಧನೆ – ಕೊರೊನಾ ಭಯದ ಮಧ್ಯೆಯೇ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ವಿಕ ಸುದ್ದಿಲೋಕ ಬೆಂಗಳೂರು ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿಯೂ ಉಡುಪಿ ಶೇ.90.71 ರಿಸಲ್ಟ್ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ(ಶೇ.54.22) ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(ಶೇ.90.71) ಇದ್ದರೆ ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ(ಶೇ.81.53) ಇದೆ. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter

[subscribe2 hide="unsubscribe"]
 

Back To Top