ಕಾಂಗ್ರೆಸ್‌ಗೊಂದು ಕರ್ನಾಟಕ ಮಾದರಿ

ಡಿಕೆಶಿ ಪಟ್ಟಾಭಿಷೇಕದ ಹುರುಪು, ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ಪುನಶ್ಚೇತನದ ಮಿಂಚು. – ಶಶಿಧರ ಹೆಗಡೆ. ‘ಕೃಷ್ಣ ಸಾರಥ್ಯ’ದೊಂದಿಗೆ 1999ರ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ವರಿಷ್ಠ ಮಂಡಳಿಯಲ್ಲಿ ಸಹಮತ ಮೂಡಿತ್ತು. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರೂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್‌.ಎಂ.ಕೃಷ್ಣ) ಅವರಿಗೊಂದು ಅವಕಾಶ ನೀಡಲು ಒಲವು ತೋರಿದ್ದರು. ಆದರೆ, ಕೃಷ್ಣ ಹೆಸರು ಪ್ರಕಟವಾಗುವ ಹಂತದಲ್ಲಿ ಯಾರೋ ಪಿನ್‌ ಇಟ್ಟಿದ್ದರು. ಅಖಾಡದ ರಾಜಕಾರಣ ಕೃಷ್ಣ ಅವರಿಗೆ ಒಗ್ಗಿ ಬರುವುದಿಲ್ಲ. ಅವರದ್ದು ಹೈಫೈ ಶೈಲಿ. ಸದಾ ಟೆನ್ನಿಸ್‌ ಆಡುತ್ತ […]

Read More

ಯುವಜನ ಕಡಿಮೆಯಾಗುತ್ತಿದ್ದಾರೆ

ದೇಶದ ಜನಸಂಖ್ಯೆಯ ಅರ್ಧಕ್ಕಿಂತಲೂ ಹೆಚ್ಚು ಮಂದಿ 25ಕ್ಕಿಂತ ಹೆಚ್ಚು ವಯಸ್ಸಿನವರು! ಇತಿಹಾಸದಲ್ಲೇ ವೊತ್ತ ವೊದಲ ಬಾರಿಗೆ, ಭಾರತದ ಅರ್ಧಕ್ಕಿಂತಲೂ ಹೆಚ್ಚು ಜನಸಂಖ್ಯೆ ಈಗ 25 ವರ್ಷದವರು ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರು. ಪುರುಷ- ಸ್ತ್ರೀ ಎಂಬ ವ್ಯತ್ಯಾಸವಿಲ್ಲದೆ, ನಗರ- ಹಳ್ಳಿ ಎಂಬ ವ್ಯತ್ಯಾಸವಿಲ್ಲದ ಸರಾಸರಿ ಚಿತ್ರಣ ಹೀಗಿದೆ. ಭಾರತೀಯ ರಿಜಿಸ್ಟ್ರಾರ್‌ ಜನರಲ್‌ ಮತ್ತು ಜನಗಣತಿ ಕಮಿಷನರ್‌ ನಡೆಸಿದ ಮಾದರಿ ನೋಂದಣಿ ವ್ಯವಸ್ಥೆ-2018ರ ವರದಿಯಲ್ಲಿ ಈ ವಿಚಾರ ಕಂಡುಬಂದಿದೆ. ಇದರಿಂದ ಏನು ತಿಳಿಯಬಹುದು? ಏನೆಂದರೆ, ಭಾರತದ ಜನಸಂಖ್ಯೆ ಹೆಚ್ಚು […]

Read More

ಎಸ್ಎಸ್ಎಲ್‌ಸಿ ಪರೀಕ್ಷೆ ಪೂರ್ಣ ಸಕ್ಸೆಸ್

– ಕೋವಿಡ್ ಆತಂಕದ ನಡುವೆಯೂ ಶೇ.90ರಷ್ಟು ವಿದ್ಯಾರ್ಥಿಗಳು ಹಾಜರು. ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್-19ನಿಂದಾಗಿ ತೀವ್ರ ಆತಂಕದೊಂದಿಗೆ ಜೂ.25ರಿಂದ ಆರಂಭವಾಗಿದ್ದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಂಡಿತು. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗೆ ಶೇ.98.10ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ‘‘ಕೊರೊನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸವಾಲಾಗಿತ್ತು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೆರಿ, ಮಹಾರಾಷ್ಟ್ರಗಳಲ್ಲಿ ಅಲ್ಲಿನ ಸರಕಾರಗಳು ಪರೀಕ್ಷೆ ಮುಂದೂಡಿವೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ನಡೆಸಿದ ಪ್ರಯತ್ನ […]

Read More

ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡಲು ನಿರ್ಧಾರ

ಅತಿಥಿಗಳ ಕಷ್ಟಕ್ಕೆ ಕಾಯಂ ಉಪನ್ಯಾಸಕರ ಸ್ಪಂದನೆ. ವಿಕ ಸುದ್ದಿಲೋಕ ಬೆಳಗಾವಿ. ಕೊರೊನಾ ಹೊಡೆತಕ್ಕೆ ದುಡಿಮೆ ಕಳೆದುಕೊಂಡು ಅತಂತ್ರರಾಗಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ನೆರವಿಗೆ ಕಾಯಂ ಉಪನ್ಯಾಸಕರು ಧಾವಿಸಿದ್ದಾರೆ. ತಮ್ಮ ಒಂದು ದಿನದ ವೇತನವನ್ನು ಅತಿಥಿ ಉಪನ್ಯಾಸಕರಿಗೆ ನೀಡುವುದಾಗಿ ಕರ್ನಾಟಕ ರಾಜ್ಯ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಪ್ರಕಟಿಸಿದೆ. ಕೆಲ ಉಪನ್ಯಾಸಕರು ಮೂರು ತಿಂಗಳು ತಲಾ ಒಂದು ದಿನದ ವೇತನ ಕೊಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಘೋಷಣೆ ಮಾಡುವ ಮೂಲಕ ಅತಿಥಿ ಉಪನ್ಯಾಸಕರ ಕಷ್ಟಕ್ಕೆ ಕೈ […]

Read More

ಹಾಲು ಮಾರಾಟಕ್ಕೂ ಕೊರೊನಾ ಎಫೆಕ್ಟ್

-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಹೆಚ್ಚಿದ ಉತ್ಪಾದನೆ, ಕುಸಿದ ಬೇಡಿಕೆ-ಶಾಲೆ, ಹೋಟೆಲ್‌ಗಳಿಂದ ಡಿಮಾಂಡಿಲ್ಲ. ಸಂತೋಷ್‌ ಕಾಚಿನಕಟ್ಟೆ ಶಿವಮೊಗ್ಗ. ರಾಜ್ಯದೆಲ್ಲೆಡೆ ಜನತೆಗೆ ಕ್ಷೀರಾಮೃತ ಉಣಿಸುವ, ರೈತರು ಮತ್ತು ಹೈನುಗಾರಿಕೆ ಪಾಲಿನ ಜೀವಾಳ ಎನಿಸಿದ ರಾಜ್ಯ ಸಹಕಾರ ಹಾಲು ಉತ್ಪಾದಕರ ಒಕ್ಕೂಟ(ಕೆಎಂಎಫ್‌)ಕ್ಕೂ ಕೊರೊನಾ ಸಂಕಷ್ಟ ತಂದಿಟ್ಟಿದೆ. ರೈತರಿಂದ ಹಾಲನ್ನು ಸಂಗ್ರಹಿಸಿ ಪೇಟೆ, ಪಟ್ಟಣಗಳಲ್ಲಿನ ಗ್ರಾಹಕರಿಗೆ ತಲುಪಿಸುವ ಸೇತುವೆಯಾಗಿ ಕೆಲಸ ಮಾಡುವ ಹಾಲು ಒಕ್ಕೂಟಕ್ಕೆ ಕೊರೊನಾ ಆರ್ಥಿಕ ಪೆಟ್ಟು ನೀಡಿದೆ. ಒಂದೆಡೆ ಹಾಲಿನ ಉತ್ಪಾದನೆ ಹೆಚ್ಚಾದ ಸಂತಸ ಮೂಡಿಸಿದರೆ, ಮತ್ತೊಂದು ಕಡೆ ಉತ್ಪಾದನೆಯಾದ […]

Read More

ಇನ್ನು ಮನೆಯಲ್ಲೇ ಚಿಕಿತ್ಸೆ

-ಲಕ್ಷಣರಹಿತರು ಆಸ್ಪತ್ರೆ ಸೇರಬೇಕಿಲ್ಲ -ಗಂಭೀರ ರೋಗಿಗಳ ಜೀವ ರಕ್ಷಣೆಗೆ ಆದ್ಯತೆ -ತಜ್ಞರ ಸಲಹೆಗೆ ಸರಕಾರದ ಒಪ್ಪಿಗೆ -ಹೋಮ್‌ ಐಸೊಲೇಶನ್‌ ಬಗ್ಗೆ ಶೀಘ್ರ ಮಾರ್ಗಸೂಚಿ ವಿಕ ಸುದ್ದಿಲೋಕ ಬೆಂಗಳೂರು.  ಬೆಂಗಳೂರಿನಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಇನ್ನು ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದು, ಆಸ್ಪತ್ರೆಗಳು ತುಂಬಿಕೊಳ್ಳುತ್ತಿವೆ. […]

Read More

ಅಬ್ಬಾ… ಸಸ್ಪೆಂಡ್‌ ಅಂದ್ರೆ ಹಬ್ಬ!

– ವರ್ಗಾವಣೆ ತಪ್ಪಿಸಿಕೊಳ್ಳಲು ಶಾಲಾ ಶಿಕ್ಷಕರ ಹೊಸ ಸಿಲೆಬಸ್‌ – ಆರ್‌.ಶ್ರೀಧರ್‌ ರಾಮನಗರ. ಹೊಸದಾಗಿ ನಿಯೋಜನೆಗೊಂಡ ಶಾಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಪ್ಪು ಮಾಡುವುದು. ಆ ಮೂಲಕ ಸಸ್ಪೆಂಡ್‌ ಆಗುವುದು. ಇಲಾಖಾ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತುಪಡಿಸಿ ತಾವು ಕೆಲಸ ಮಾಡುತ್ತಿದ್ದ ಹಳೆಯ ಶಾಲೆಯಲ್ಲೇ ಮರು ನಿಯೋಜನೆಗೊಳ್ಳುವುದು…! ಹೇಗೆ ಪ್ಲ್ಯಾನ್‌? ಹೌದು, ಕೆಲವು ಶಿಕ್ಷಕರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಇಂಥದೊಂದು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ. ಈ ಜಿಲ್ಲೆಯೊಂದರಲ್ಲೇ ಆಗಿರುವ 105 ಶಿಕ್ಷಕರ ಅಮಾನತು […]

Read More

ಸಾವು ತಡೆಯೋಣ

– 11 ದಿನದ ಅವಧಿಯಲ್ಲಿ102 ಬಲಿ | ಬೆಂಗಳೂರಿನಲ್ಲೇ ಹೆಚ್ಚು – ಗಂಭೀರ ರೋಗಿಗಳು, ಹಿರಿಯರ ತುರ್ತು ಚಿಕಿತ್ಸೆಗೆ ವ್ಯವಸ್ಥೆ ಅಗತ್ಯ ಬೆಂಗಳೂರು: ರಾಜ್ಯದಲ್ಲಿಕೊರೊನಾ ಸೋಂಕಿತರ ಜತೆಗೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಪ್ರಸಕ್ತ ಸೋಂಕನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಇದೆ. ಆದರೆ, ಕನಿಷ್ಠ ಸಾವನ್ನಾದರೂ ತಡೆಯುವಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂಬ ಬೇಡಿಕೆ ತೀವ್ರವಾಗಿದೆ. ರಾಜ್ಯದಲ್ಲಿ ಇದುವರೆಗೆ ಮೃತಪಟ್ಟವರ ಸಂಖ್ಯೆ 227. ಕಳೆದ ಎರಡೇ ದಿನದಲ್ಲಿ40 ಸೇರಿದಂತೆ 11 ದಿನದಲ್ಲಿ103 ಮಂದಿ ಪ್ರಾಣ […]

Read More

ಅತಿಥಿ ಉಪನ್ಯಾಸಕರು ಅತಂತ್ರ

ಪ್ರಮೋದ ಹರಿಕಾಂತ ಬೆಳಗಾವಿ/ಎನ್‌.ಡಿ.ತಿಪ್ಪೇಸ್ವಾಮಿ ಬಳ್ಳಾರಿ. ಹಲವು ವರ್ಷಗಳಿಂದ ಪದವಿ ಕಾಲೇಜುಗಳಲ್ಲಿ ಕಡಿಮೆ ವೇತನಕ್ಕೆ ದುಡಿಸಿಕೊಂಡಿದ್ದ ಅತಿಥಿ ಉಪನ್ಯಾಸಕರನ್ನು ರಾಜ್ಯ ಸರಕಾರ ಕೊರೊನಾ ಕಾರಣಕ್ಕೆ ಕೈ ಬಿಟ್ಟಿದ್ದರಿಂದ ಸಾವಿರಾರು ಅತಿಥಿ ಉಪನ್ಯಾಸಕರು ಅತಂತ್ರರಾಗಿದ್ದಾರೆ. ಆರ್ಥಿಕ ಸಂಕಷ್ಟ ಮತ್ತು ಮಾನಸಿಕ ಒತ್ತಡದಿಂದ ಸುಮಾರು ಎಂಟು ಅತಿಥಿ ಉಪನ್ಯಾಸಕರು ಈಗಾಗಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಲವರು ಕೂಲಿ ಕೆಲಸಕ್ಕೆ ಇಳಿದಿದ್ದಾರೆ. ಹೀಗಿರುವಾಗಲೇ ಈ ವರ್ಷ ಅತಿಥಿ ಉಪನ್ಯಾಸಕರ ಸೇವೆಯನ್ನೇ ಕಡಿತ ಮಾಡುವ ಕುರಿತು ಸರಕಾರದ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಇದು ಅತಿಥಿ ಉಪನ್ಯಾಸಕರನ್ನು ಇನ್ನಷ್ಟು […]

Read More

ಮನೆ ಆರೈಕೆ ಉಪಕ್ರಮ – ಗಂಭೀರ ರೋಗಿಗಳಿಗೆ ಹಾಸಿಗೆ ಉಳಿಸೋಣ

ರಾಜ್ಯದಲ್ಲಿ ಕೊರೊನಾ ಸೋಂಕಿತರಾಗಿ ಸಣ್ಣಪುಟ್ಟ ಲಕ್ಷಣಗಳಿಂದ ಗುಣಮುಖರಾಗುವ ಹಾಗೂ ಪಾಸಿಟಿವ್‌ ಆಗಿದ್ದೂ ಯಾವುದೇ ಲಕ್ಷಣಗಳನ್ನು ತೋರಿಸದ ರೋಗಿಗಳು ಸಾಕಷ್ಟಿದ್ದಾರೆ. ಇಂಥವರನ್ನೂ ಪತ್ತೆ ಹಚ್ಚಿ ಈಗ ನಿಗದಿತ ಸರಕಾರಿ ಕೋವಿಡ್‌ ಚಿಕಿತ್ಸಾ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗಿನ ಪರಿಸ್ಥಿತಿ ಹೇಗಿದೆಯೆಂದರೆ, ಎಲ್ಲ ಕಡೆಯೂ ಆಸ್ಪತ್ರೆಗಳಲ್ಲಿ ಹಾಸಿಗೆಗಳು ಭರ್ತಿಯಾಗುತ್ತಿವೆ ಹಾಗೂ ವೈದ್ಯ ಸಿಬ್ಬಂದಿಯ ಸಂಖ್ಯೆಯೂ ಸಾಕಷ್ಟಿಲ್ಲ. ಇದರಿಂದಾಗಿ, ಕೋವಿಡ್‌ ರೋಗಿಗಳ ಪರಿಸ್ಥಿತಿ ಉಲ್ಬಣಗೊಂಡರೆ ಗತಿಯೇನು ಎಂಬ ಆತಂಕ ಆ ರೋಗಿಗಳನ್ನೂ, ಅವರ ಸಂಬಂಧಿಕರನ್ನೂ ಹಾಗೂ ಇತರರನ್ನೂ ಕಾಡುತ್ತಿದೆ. ಇದನ್ನು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top