ಉಡುಪಿ ಫಸ್ಟ್, ವಿಜಯಪುರ ಲಾಸ್ಟ್

– ದಕ್ಷಿಣ ಕನ್ನಡ 2, ಕೊಡಗು ಜಿಲ್ಲೆಗೆ 3ನೇ ಸ್ಥಾನ – 88 ಕಾಲೇಜುಗಳು ಝೀರೋ, 92 ಕಾಲೇಜು ಶತಕ ಸಾಧನೆ – ಕೊರೊನಾ ಭಯದ ಮಧ್ಯೆಯೇ ಇಂಗ್ಲಿಷ್ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳು ವಿಕ ಸುದ್ದಿಲೋಕ ಬೆಂಗಳೂರು ಪಿಯು ದ್ವಿತೀಯ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಜಿಲ್ಲಾವಾರು ಫಲಿತಾಂಶದಲ್ಲಿ ಈ ಬಾರಿಯೂ ಉಡುಪಿ ಶೇ.90.71 ರಿಸಲ್ಟ್ನೊಂದಿಗೆ ಪ್ರಥಮ ಸ್ಥಾನದಲ್ಲಿದ್ದರೆ, ವಿಜಯಪುರ(ಶೇ.54.22) ಕೊನೆಯ ಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ದಕ್ಷಿಣ ಕನ್ನಡ(ಶೇ.90.71) ಇದ್ದರೆ ಮೂರನೇ ಸ್ಥಾನದಲ್ಲಿ ಕೊಡಗು ಜಿಲ್ಲೆ(ಶೇ.81.53) ಇದೆ. […]

Read More

ಗ್ರಾಮೀಣರ ಸಫಲ ಸಾಧನೆ- ಮುಂದಿನ ಕಲಿಕೆಯತ್ತ ಗಮನ ಬೇಕು

ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. ಪ್ರತಿ ವರ್ಷದಂತೆ ಈ ಬಾರಿಯೂ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ವಿಜ್ಞಾನದಲ್ಲಿ ಕಳೆದ ವರ್ಷಕ್ಕಿಂತ ಶೇ.9ರಷ್ಟು ಹೆಚ್ಚಿನ ಹಾಗೂ ಕಲಾ ಮತ್ತು ವಾಣಿಜ್ಯ ವಿಭಾಗದಲ್ಲಿ ಕಡಿಮೆ ಫಲಿತಾಂಶ ಬಂದಿದೆ. ಈ ಬಾರಿ ನಗರ ಪ್ರದೇಶದ ವಿದ್ಯಾರ್ಥಿಗಳಿಗೆ ಹೆಚ್ಚು ಕಡಿಮೆ ಹತ್ತಿರದಲ್ಲೇ ಗ್ರಾಮೀಣ ವಿದ್ಯಾರ್ಥಿಗಳು ಸಹ ಫಲಿತಾಂಶ ಪಡೆದಿರುವುದು ಒಂದು ಅಚ್ಚರಿಯ ಹಾಗೂ ಶ್ಲಾಘನೀಯ ವಿಚಾರ. ರೂಢಿಯಂತೆ ಕರಾವಳಿಯ ಜಿಲ್ಲೆಗಳು ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದಿವೆ. ಗ್ರಾಮೀಣ […]

Read More

ಬಡತನದಲ್ಲೂ ಅರಳಿದ “ಕಲೆ’

ದ್ವಿತೀಯ ಪಿಯು 61.80% ರಿಸಲ್ಟ್ | ಕಲಾ ವಿಭಾಗದಲ್ಲಿ ಗ್ರಾಮಾಂತರ ವಿದ್ಯಾರ್ಥಿಗಳ ಸಾಧನೆ ಸಾರ್ವಕಾಲಿಕ ಗರಿಷ್ಠ ಫಲಿತಾಂಶ | ಕೊರೊನಾ ಅವಧಿಯ ಇಂಗ್ಲಿಷ್ ಪರೀಕ್ಷೆಯಲ್ಲಿ ಹೆಚ್ಚು ನಪಾಸು. ವಿಕ ಸುದ್ದಿಲೋಕ ಬೆಂಗಳೂರು : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಈ ಬಾರಿ ಸರಾಸರಿ ಶೇ.61.80ರಷ್ಟು ವಿದ್ಯಾರ್ಥಿಗಳು ಪಾಸಾಗುವ ಮೂಲಕ ಸಾರ್ವಕಾಲಿಕ ದಾಖಲೆ ಫಲಿತಾಂಶ ಪ್ರಕಟವಾಗಿದೆ. ಈ ನಡುವೆ ಕಷ್ಟನಷ್ಟ, ಸೌಕರ್ಯ ಕೊರತೆಗಳನ್ನೂ ಮೀರಿ ಹಲವಾರು ವಿದ್ಯಾರ್ಥಿಗಳು ಟಾಪರ್‌ಗಳಾಗಿ ಹೊರಹೊಮ್ಮಿದ್ದಾರೆ. ಮುಖ್ಯವಾಗಿ ಕಲಾ ವಿಭಾಗದಲ್ಲಿ ಟಾಪ್ ಸ್ಥಾನ ಪಡೆದಿರುವ ಬಹುತೇಕ […]

Read More

ಬನ್ನಿ, ನಮಗಿದು ಯೋಧರಾಗುವ ಯೋಗ

ಇಡೀ ಮಾನವ ಕುಲಕ್ಕೆ ಕಂಟಕವಾಗುತ್ತಿರುವ ಕೊರೊನಾ ಸೋಂಕು ಉಲ್ಬಣಗೊಳ್ಳುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಬಹಳಷ್ಟು ವೈದ್ಯರು ತಮ್ಮ ಕುಟುಂಬ, ಪ್ರೀತಿ ಪಾತ್ರರನ್ನು ತೊರೆದು ನಾಲ್ಕು ತಿಂಗಳಿಂದ ರೋಗಿಗಳ ಆರೈಕೆಯಲ್ಲಿ ಟೊಂಕ ಕಟ್ಟಿ ನಿಂತಿದ್ದಾರೆ. ಭಯಗ್ರಸ್ಥ ಸೋಂಕಿತರಲ್ಲಿ ಧೈರ್ಯ ತುಂಬಿ, ಆತ್ಮಸ್ಥೈರ್ಯವನ್ನೇ ಮದ್ದಾಗಿಸುತ್ತಿದ್ದಾರೆ. ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಹೊರ ಕಾಲಿಟ್ಟಿರೆ ಇವರ ಮನದಲ್ಲಿ ಸಾರ್ಥಕ್ಯದ ಭಾವ. ಸ್ವತಃ ಸೋಂಕಿಗೆ ತೆರೆದುಕೊಳ್ಳುವ ಅಪಾಯವಿದ್ದರೂ ಲೆಕ್ಕಿಸದೇ ಕಾರ್ಯನಿರ್ವಹಿಸುತ್ತಿರುವ ವೈದ್ಯರ ಸೇವಾ ಮನೋಭಾವ, ಕಾರ್ಯತತ್ವರತೆ ನಾಡಿನ ಎಲ್ಲವೈದ್ಯ ಸಮೂಹಕ್ಕೆ ಸ್ಫೂರ್ತಿಯಾಗಲಿ… ಟೆಲಿ ಮೆಡಿಸಿನ್ […]

Read More

ಕೊರೊನಾ ಯೋಧರ ಕೊರತೆ – ವೈದ್ಯರೇ, ಸಮಾಜ ನಿಮ್ಮನ್ನೇ ನಂಬಿದೆ

ರಾಜ್ಯದಲ್ಲಿ ಕೊರೊನಾ ಸೋಂಕಿನ ಏರಿಕೆಯಿಂದ ಆಗಿರುವ ಹಲವು ದುಷ್ಪರಿಣಾಮಗಳ ನಡುವೆ, ವೈದ್ಯರ ಕೊರತೆಯೂ ಒಂದು ಹಾಗೂ ಹೆಚ್ಚು ಗಂಭೀರವಾದುದು. ಸರಕಾರಿ ಆಸ್ಪತ್ರೆಗಳಲ್ಲಿ ಮೊದಲೇ ವೈದ್ಯರ ಕೊರತೆಯಿದೆ. ನಿಗದಿತ ಸರಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಸೇವೆ ಕಡ್ಡಾಯಗೊಂಡಿರುವ ವೈದ್ಯರು ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಒಂದು ವಾರ ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡಿದರೆ ಎರಡು ವಾರ ಐಸೋಲೇಶನ್‌ ಆಗಬೇಕಿರುವುದರಿಂದ ವೈದ್ಯರ ಸಂಖ್ಯೆ ಸಹಜವಾಗಿಯೇ ಇಳಿಮುಖವಾಗುತ್ತದೆ. ಅದರಲ್ಲೂ ಕೆಲವು ವೈದ್ಯರಿಗೆ ಸೋಂಕು ತಗುಲಿರುವುದರಿಂದ ಕ್ವಾರಂಟೈನ್‌ ಆಗಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೆಲವೇ ಆಸ್ಪತ್ರೆಗಳು ಮಾತ್ರ […]

Read More

ವೈದ್ಯ ಯೋಧರೇ ಜೀವ ಉಳಿಸಿ

– ಸೇನಾನಿಗಳ ಕೈಯಲ್ಲಿದೆ ಕೊರೊನಾ ಮಣಿಸುವ ತಾಕತ್ತು | ಗಡಿ ಮೀರದಂತೆ ತಡೆಯಿರಿ – ಆತಂಕ, ಭಯ, ಬೇಡಿಕೆಗಳನ್ನು ಬದಿಗಿಡಿ | ನಿಮ್ಮನ್ನೇ ನಂಬಿದವರನ್ನು ಮೊದಲು ಕಾಪಾಡಿ. ವಿಕ ಸುದ್ದಿಲೋಕ ಬೆಂಗಳೂರು. ಭಾರತೀಯ ಯೋಧರು ಪಾಕಿಸ್ತಾನ, ಚೀನಾ ಗಡಿಯಲ್ಲಿ ಕೆಚ್ಚೆದೆಯ ಹೋರಾಟದ ಮೂಲಕ ವೈರಿಗಳನ್ನು ಹಿಮ್ಮೆಟ್ಟಿಸಿ ದೇಶದ ಜನರ ಹೃದಯ ಗೆಲ್ಲುತ್ತಿದ್ದಾರೆ. ಇತ್ತ ಕೊರೊನಾ ಎಂಬ ಕಣ್ಣಿಗೆ ಕಾಣದ ವೈರಿಯ ವಿರುದ್ಧ ನಿರ್ಣಾಯಕ ಹೋರಾಟಕ್ಕೆ ನಿಂತ ವೈದ್ಯಲೋಕವನ್ನೂ ಜನ ವೀರ ಯೋಧರಂತೆ ಕಾಣುತ್ತಿದ್ದಾರೆ, ಕೈ ಮುಗಿಯುತ್ತಿದ್ದಾರೆ… ಸರ್ವ […]

Read More

ಆನ್‌ಲೈನ್‌ ಕ್ಲಾಸ್‌ಗೆ ಸವಾಲುಗಳು : ಉಳ್ಳವರ – ಇಲ್ಲದವರ ಅಂತರ ಹೆಚ್ಚಾಗದಿರಲಿ

ಖಾಸಗಿ ಶಾಲೆಗಳು ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸುವುದಕ್ಕೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ‘ಇದು ಸಂವಿಧಾನದ 21 ಹಾಗೂ 21ಎ ವಿಧಿಯಯನ್ವಯ ಪ್ರಜೆಗಳಿಗೆ ದತ್ತವಾಗಿರುವ ಬದುಕಿನ ಹಾಗೂ ಶಿಕ್ಷಣದ ಹಕ್ಕನ್ನು ನಿರಾಕರಿಸಿದಂತಾಗಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರಿಂದ, ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ರಹದಾರಿ ದೊರೆತಂತಾಗಿದೆ. ಆದರೆ ಈ ಆದೇಶ, ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ಅಥವಾ ಆನ್‌ಲೈನ್‌ ಕ್ಲಾಸುಗಳನ್ನು ಕಡ್ಡಾಯ ಮಾಡಲು […]

Read More

ಅಂತ್ಯಕ್ರಿಯೆ ಮಾನವೀಯ ಆಗಿರಲಿ

– ಕೊರೊನಾ ಸೋಂಕಿನಿಂದ ಮೃತಪಟ್ಟವರ ಬಗ್ಗೆ ಅನಗತ್ಯ ಭಯ ಬೇಡ – ಸುರಕ್ಷಿತ ಕ್ರಮದೊಂದಿಗೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿದರೆ ಅಪಾಯವಿಲ್ಲ. ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಸೋಂಕಿನಿಂದ ದಾರುಣವಾಗಿ ಮೃತಪಡುವವರ ಅಂತಿಮ ಸಂಸ್ಕಾರ ಪ್ರಕ್ರಿಯೆ ಮತ್ತಷ್ಟು ದಯನೀಯವಾಗುತ್ತಿದೆ. ಶವ ಸಂಸ್ಕಾರದಿಂದ ರೋಗ ಹರಡಬಹುದೆಂಬ ಅನಗತ್ಯ ಭೀತಿ ಜನರಲ್ಲಿ ಆವರಿಸಿರುವುದೇ ಈ ಪರಿಸ್ಥಿತಿಗೆ ಕಾರಣವಾಗಿದೆ. ಅಂತ್ಯಸಂಸ್ಕಾರದ ವೇಳೆ ಸಮೀಪದ ಬಂಧುಗಳು ಸುರಕ್ಷಿತ ಕ್ರಮಗಳೊಂದಿಗೆ ಭಾಗವಹಿಸಬಹುದು ಎಂಬ ಅಂಶ ಕೇಂದ್ರ ಸರಕಾರದ ಮಾರ್ಗಸೂಚಿಯಲ್ಲೇ ಇದೆ. ಸುರಕ್ಷಿತ ವಿಧಾನ ಅನುಸರಿಸಿ ಸಮೀಪದ ಬಂಧುಗಳು […]

Read More

ವೈದ್ಯರು ಬೇಕಾಗಿದ್ದಾರೆ

– ಆರೋಗ್ಯ ಇಲಾಖೆಯಲ್ಲಿ 30% ಹುದ್ದೆ ಖಾಲಿ, ಖಾಸಗಿಯಲ್ಲೂ ಸಮಸ್ಯೆ – ಹೆಲ್ತ್ ಯೋಧರಿಗೂ ಸೋಂಕು | ಗುತ್ತಿಗೆ ವೈದ್ಯರ ಪದತ್ಯಾಗ ಬೆದರಿಕೆ. ಕಾರ್ತಿಕ್ ಯು.ಎಚ್. ಬೆಂಗಳೂರು : ಕೊರೊನಾ ವಿರುದ್ಧದ ಹೋರಾಟದಲ್ಲಿ ಸೇನಾನಿಗಳಂತೆ ಹೋರಾಡುವ ವೈದ್ಯ ಸಿಬ್ಬಂದಿಗಳ ಕೊರತೆ ರಾಜ್ಯದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೇ ವೈದ್ಯರು ಮತ್ತು ವೈದ್ಯ ಸಿಬ್ಬಂದಿಗಳ ಹುದ್ದೆ ಖಾಲಿ ಇದೆ. ಇದರ ಜತೆಗೆ ಹಲವಾರು ವೈದ್ಯರು, ಸಿಬ್ಬಂದಿ ಸೋಂಕು, ಭೀತಿ ಮತ್ತಿತರ ಕಾರಣಗಳಿಗಾಗಿ ಗೈರುಹಾಜರಾಗುತ್ತಿದ್ದಾರೆ. ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳೆರಡರಲ್ಲೂ […]

Read More

ಕೊರೊನಾ ತುರ್ತು ಪರಿಸ್ಥಿತಿ – ಕೈ ಮೀರಿ ಹೋಗುವ ಮುನ್ನ ಎಚ್ಚೆತ್ತುಕೊಳ್ಳಿ

ಕಳೆದ ಒಂದು ವಾರದಿಂದ ರಾಜ್ಯದಲ್ಲಿ, ಮುಖ್ಯವಾಗಿ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಗಾಬರಿಯಾಗುವಷ್ಟು ಏರುತ್ತಿದೆ. ಕಳೆದೆರಡು ದಿನಗಳಿಂದ ಬೆಂಗಳೂರಿನಲ್ಲೇ ಹೊಸ ರೋಗಿಗಳ ಸಂಖ್ಯೆ ಪ್ರತಿದಿನ ಒಂದು ಸಾವಿರಕ್ಕಿಂತಲೂ ಹೆಚ್ಚು ವರದಿಯಾಗುತ್ತಿದೆ. ಭಾನುವಾರ ರಾಜ್ಯದಲ್ಲಿ ಕೋವಿಡ್‌ನಿಂದ 37 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಸೋಂಕಿತರ ಪ್ರಮಾಣ 20 ಸಾವಿರದ ಗಡಿ ದಾಟಿದೆ. ಇದು ಆರೋಗ್ಯ ತುರ್ತು ಪರಿಸ್ಥತಿಯೇ ಸರಿ. ಇತ್ತೀಚೆಗೆ ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರದಿಂದ ಶ್ಲಾಘನೆ ಪಡೆದ ರಾಜ್ಯದಲ್ಲಿ, ವಾಸ್ತವ ಸ್ಥಿತಿ ಹಾಗಿಲ್ಲ ಎಂಬುದು ರುಜುವಾತಾಗಿದೆ. ಕೊರೊನಾದ ರುದ್ರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top