ರಾಮ ಚಳವಳಿಗೆ ಹನುಮ ನಾಡಿನ ಸಾಥ್

ಪಿತೃವಾಕ್ಯ ಪರಿಪಾಲನೆಗೆ ವನಾಭಿಗಮನ ಮಾಡಿದ ಶ್ರೀರಾಮ ಹದಿನಾಲ್ಕು ವರ್ಷದ ಬಳಿಕ ಅಯೋಧ್ಯೆಗೆ ಮರಳಿದ. ರಾಮನಿಗೆ ಪಟ್ಟಾಭಿಷೇಕವೂ ಆಯಿತು. ಈ ಪವಿತ್ರ ಕ್ಷಣಗಳನ್ನು ಕಣ್ತುಂಬಿಸಿಕೊಳ್ಳುತ್ತ ಇಕ್ಷ್ವಾಕು ವಂಶದ ರಾಜ ಪರಿವಾರದ ಜತೆಜತೆಗೇ ಓಡಾಡಿಕೊಂಡಿದ್ದವ ಅಂಜನಾದೇವಿಯ ಗರ್ಭ ಸಂಜಾತ ಆಂಜನೇಯ. ಈ ಆಂಜನೇಯ ಶ್ರೀ ರಾಮನ ಕಿಂಕರ. ಜತೆಗೆ ಕನ್ನಡದ ನೆಲದ ಮಹಾಮಹಿಮ. ಈಗ ಆಧುನಿಕ ಭಾರತದಲ್ಲಿ ಶ್ರೀರಾಮನ ಜನ್ಮಭೂಮಿಯಲ್ಲಿಯೇ ಭುವನ ಮನೋಹರವಾದ ರಾಮಮಂದಿರ ನಿರ್ಮಾಣಗೊಳ್ಳಲಿದೆ. ಮಂದಿರಕ್ಕಾಗಿ ನಡೆದ ಹೋರಾಟದಲ್ಲಿಯೂ ಕರ್ನಾಟಕದ ಪವಿತ್ರ ಭೂಮಿಯ ಕೊಡುಗೆ ಅನನ್ಯವಾದುದು. ಯಜ್ಞಸದೃಶವಾದ ಈ […]

Read More

ಅತೃಪ್ತಿ, ಗೊಂದಲ ಸಲ್ಲ – ಅಸಮಾಧಾನಕ್ಕೆ ಕಾರಣವಾದ ನಿಗಮ/ಮಂಡಳಿ ನೇಮಕ

ವಿಚಿತ್ರ ಸಂದರ್ಭದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದು, ಇದೀಗ ಒಂದು ಸಂವತ್ಸರವನ್ನು ಪೂರೈಸಿ, ಮುನ್ನಡೆಯುತ್ತಿದೆ. ಅನಿರೀಕ್ಷಿತ ಸನ್ನಿವೇಶದಲ್ಲಿ ಅಧಿಕಾರಕ್ಕೆ ಬಂದ ಬಿಎಸ್‌ವೈ ನೇತೃತ್ವದ ಬಿಜೆಪಿ ಸರಕಾರ ಈ ಒಂದು ವರ್ಷದ ಅವಧಿಯಲ್ಲಿ ಅನೇಕ ಸವಾಲುಗಳನ್ನು ಎದುರಿಸಿ ಮುಂದಡಿ ಇಡುತ್ತಿದೆ. ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರು ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರ್ನಾಟಕದ ಉತ್ತರದ ಕೆಲವು ಜಿಲ್ಲೆಗಳಲ್ಲಿ ಭೀಕರ ಪ್ರವಾಹ ಉಂಟಾಯಿತು. ಅನೇಕರು ಮನೆ ಮಠಗಳನ್ನು ಕಳೆದುಕೊಂಡು ನಿರ್ಗತಿಕರಾದರು. ರಾಜಕೀಯ ಕಾರಣಕ್ಕೆ ಸಂಪುಟ ವಿಸ್ತರಣೆಯಾಗುವುದು ವಿಳಂಬವಾದಾಗ ಸಿಎಂ ಏಕಾಂಗಿಯಾಗಿ […]

Read More

ಪ್ರಾಣಿ ಪ್ರೀತಿಯಲ್ಲಿ ನಿರಾಳವಾಗುವ ಸಿಎಂ

ಶಶಿಧರ ಹೆಗಡೆ ಬೆಂಗಳೂರು. ಮುಖ್ಯಮಂತ್ರಿ ಹುದ್ದೆಯಲ್ಲಿ ಒಂದು ವರ್ಷ ಕಳೆದಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಅವರು ಸಾಕಷ್ಟು ಒತ್ತಡಗಳ ನಡುವೆಯೂ ನಿರಾಳವಾಗಿರುವುದರ ಹಿಂದೆ ಗೋ ಪ್ರೀತಿಯೂ ಮಿಳಿತವಾಗಿದೆ. ಬಿಎಸ್‌ವೈ ಅವರು ಮುಂಜಾನೆ ಅಂಬಾ ಎನ್ನುವ ಕರೆ ಕೇಳುತ್ತಲೇ ತಮ್ಮ ನಿವಾಸದ ಬಲ ಪಾರ್ಶ್ವದಲ್ಲಿರುವ ಪುಟ್ಟ ಗೋಶಾಲೆಯತ್ತ ಧಾವಿಸುತ್ತಾರೆ. ಅಲ್ಲಿರುವ ಗೋವುಗಳು ಇವರನ್ನು ಕಂಡ ಕೂಡಲೇ ಪ್ರೀತಿಯ ನೋಟ ಬೀರುತ್ತವೆ. ಕರುಗಳು ಚಂಗನೆ ಜಿಗಿಯುತ್ತವೆ. ಮುಖ್ಯಮಂತ್ರಿಯವರು ಕೆಲ ಸಮಯ ಅಲ್ಲಿಯೇ ಕಳೆದು ಗೋವುಗಳ ಮೈದಡವುತ್ತಾರೆ. ಕರುಗಳನ್ನು ಮುದ್ದಾಡುತ್ತಾರೆ. ಜತೆಗೆ […]

Read More

ಮೌನ ಮುರಿದ ಕುಮಾರಸ್ವಾಮಿ – ಮುಂದಿನ ಚುನಾವಣೆಗಾಗಿ ಅಸ್ತಿತ್ವದ ಹುಡುಕಾಟಕ್ಕಿಳಿದ ಮಾಜಿ ಸಿಎಂ

– ಶಶಿಧರ ಹೆಗಡೆ. ಮೌನಕ್ಕೆ ಅಪೂರ್ವವಾದ ಶಕ್ತಿಯಿದೆ. ಮೌನ ವ್ರತಧಾರಣೆ ಮಾಡಿದವ ದಿವ್ಯಾನುಭೂತಿಗೆ ಒಳಗಾಗುತ್ತಾನೆ. ಮೌನ ಹೃದಯದ ಭಾಷೆ. ಅದು ಮರ್ಕಟ ಮನಸ್ಸನ್ನು ನಿಯಂತ್ರಿಸುತ್ತದೆ ಎನ್ನುವ ಹಾಗೆ ವ್ಯಾಖ್ಯಾನಗಳಿವೆ. ಮೌನವಾಗಿದ್ದು ಆತ್ಮಾವಲೋಕನ ಮಾಡಿಕೊಂಡವರ ಎದುರು ಹೊಸ ದಾರಿಗಳು ತೆರೆದುಕೊಳ್ಳುತ್ತವೆ. ಹಿಂದಿನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ದೊರಕುತ್ತದೆ. ಮೌನದ ಗವಿಯಿಂದ ಹೊರಬಂದು ಆಡುವ ಮಾತುಗಳಿಗೂ ಅಷ್ಟೇ ಮಹತ್ವವಿರುತ್ತದೆ. ಚತುರರಾದವರು ಮೌನ ಮತ್ತು ಮೌನೋತ್ತರ ಸಂದರ್ಭವನ್ನು ಭವಿಷ್ಯದ ದಾರಿ ಸುಗಮಗೊಳಿಸಲು ಬಳಸುತ್ತಾರೆ. ಅದರಲ್ಲೂ ರಾಜಕಾರಣಿಗಳಿಗೆ ತಂತ್ರಗಾರಿಕೆಯೇ ಜೀವದ್ರವ್ಯ. ರಾಜಕೀಯದ ಜಂಜಾಟದಲ್ಲಿ […]

Read More

ವಿಶ್ರಾಂತಿ ಪ್ರಶ್ನೆಯಿಲ್ಲ, ಕೊನೆತನಕ ಜನಸೇವೆಯೇ ಎಲ್ಲ

– ರಾಜ್ಯದಲ್ಲಿ ಪರ್ಯಾಯ ನಾಯಕತ್ವ ಇದ್ದೇ ಇದೆ, ಆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ತೀರ್ಮಾನಿಸುತ್ತಾರೆ. – ಶಶಿಧರ ಹೆಗಡೆ, ಬೆಂಗಳೂರು. ನನ್ನ ಸಾರ್ವಜನಿಕ ಜೀವನದಲ್ಲಿ 40-45 ವರ್ಷದಿಂದ ಎಂದೂ ವಿಶ್ರಾಂತಿ ತೆಗೆದುಕೊಂಡಿಲ್ಲ. ವಿಶ್ರಾಂತಿ ತೆಗೆದುಕೊಂಡರೆ ನನ್ನ ಆರೋಗ್ಯ ಕೆಟ್ಟು ಹೋಗುತ್ತದೆ. ಜೀವನದ ಕೊನೆಯ ಉಸಿರು ಇರುವವರೆಗೆ ಕರ್ತವ್ಯ ನಿರ್ವಹಿಸುತ್ತೇನೆ. ಇದಲ್ಲದೆ ಪರ್ಯಾಯ ಎನ್ನುವುದು ಇದ್ದೇ ಇರುತ್ತದೆ. ಈ ಬಗ್ಗೆ ಪ್ರಧಾನಿಯವರು ಯೋಚನೆ ಮಾಡುತ್ತಾರೆ. ರಾಜ್ಯದಲ್ಲಿ ಬಿಜೆಪಿ ಸದೃಢವಾಗಿದ್ದು, ಯಾವುದೇ ಕೊರತೆಯಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟವಾಗಿ […]

Read More

ಸಂಕಷ್ಟಗಳ ಸರಮಾಲೆ ನಡುವೆ ಸಾಧನೆಯ ಒಂದು ವರುಷ

– ಗೋವಿಂದ ಎಂ. ಕಾರಜೋಳ. ಮಾನ್ಯ ಬಿ.ಎಸ್‌. ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಇದೇ ಜುಲೈ 26ಕ್ಕೆ ಒಂದು ವರುಷವಾಗುತ್ತದೆ. ಆಡಳಿತವನ್ನು ಕನ್ನಡ ನಾಡಿನ ಜನಮೆಚ್ಚುವಂತೆ ನಿರ್ವಹಿಸುವುದು ಸುಲಭವಲ್ಲ. ದಕ್ಷ ಮತ್ತು ಪಾರದರ್ಶಕ ಆಡಳಿತಕ್ಕೆ ನಮ್ಮ ನಾಡು ಭಾರತದಲ್ಲೇ ಹೆಸರುವಾಸಿಯಾಗಿದೆ. ಖ್ಯಾತನಾಮರಾದ ಜನನಾಯಕರಲ್ಲಿ ಇಂದಿನ ಮುಖ್ಯಮಂತ್ರಿಗಳು ಮುಂಚೂಣಿಯಲ್ಲಿ ನಿಂತಿದ್ದಾರೆ. ಈ ಕಾಲಾವಧಿಯ ವಿಶೇಷತೆಯೆಂದರೆ ಹಿಂದೆಂದೂ ಕಂಡರಿಯದಷ್ಟು, ಕೇಳರಿಯದಷ್ಟು ಕಷ್ಟ ಸಂಕೋಲೆಗಳನ್ನು ಕರ್ನಾಟಕ ಈ ಒಂದು ವರುಷದ ಅವಧಿಯಲ್ಲಿ ಕಂಡಿದೆ. ಬರ, ಅತಿವೃಷ್ಟಿ, ಪ್ರವಾಹ, ಪ್ರಕೃತಿವಿಕೋಪ […]

Read More

ಉಪನ್ಯಾಸಕರ ನೇಮಕ ನಿರಾಳ – ಸಿಎಂ ಅಸ್ತು | 2 ದಿನದಲ್ಲಿ ಕೌನ್ಸೆಲಿಂಗ್ ದಿನಾಂಕ ಪ್ರಕಟ

ವಿಕ ಸುದ್ದಿಲೋಕ ಬೆಂಗಳೂರು: ನೂತನವಾಗಿ ಆಯ್ಕೆಯಾಗಿರುವ ಸರಕಾರಿ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಕೌನ್ಸೆಲಿಂಗ್ ನಡೆಸಲು ಮುಖ್ಯಮಂತ್ರಿ  ಬಿ.ಎಸ್. ಯಡಿಯೂರಪ್ಪ ಅವರು ಗುರುವಾರ ಅನುಮೋದನೆ ನೀಡಿದ್ದಾರೆ. ಈ ಸಂಬಂಧ ಇನ್ನು ಎರಡು ದಿನದ ಒಳಗೆ ಕೌನ್ಸೆಲಿಂಗ್ ದಿನಾಂಕ ಘೋಷಿಸಲಾಗುತ್ತದೆ ಎಂದು ಸಿಎಂ ಅವರ ಕಚೇರಿ ಮೂಲಗಳು ಖಚಿತ ಪಡಿಸಿವೆ. ಉಪನ್ಯಾಸಕರ ಸ್ಥಳ ನಿಯುಕ್ತಿಗಾಗಿ ಕೌನ್ಸೆಲಿಂಗ್ ನಡೆಸಲು ಆರ್ಥಿಕ ಇಲಾಖೆಧಿಯಿಂದಲೂ ಹಸಿರು ನಿಶಾನೆ ದೊರೆತಿದೆ. ಇದರೊಂದಿಗೆ ಉಪನ್ಯಾಸಕರ ಹುದ್ದೆ ಭರ್ತಿಗೆ ಹಿಡಿದಿದ್ದ ಗ್ರಹಣ ಸರಿಯುವ ಕಾಲ ಸನ್ನಿಹಿತವಾಗಿದೆ. ಇದರೊಂದಿಗೆ […]

Read More

ಕಾಂಗ್ರೆಸ್‌ಗೊಂದು ಕರ್ನಾಟಕ ಮಾದರಿ

ಡಿಕೆಶಿ ಪಟ್ಟಾಭಿಷೇಕದ ಹುರುಪು, ರಾಷ್ಟ್ರೀಯ ಕಾಂಗ್ರೆಸ್‌ನಲ್ಲೂ ಪುನಶ್ಚೇತನದ ಮಿಂಚು. – ಶಶಿಧರ ಹೆಗಡೆ. ‘ಕೃಷ್ಣ ಸಾರಥ್ಯ’ದೊಂದಿಗೆ 1999ರ ವಿಧಾನಸಭೆ ಚುನಾವಣೆ ಎದುರಿಸಲು ಕಾಂಗ್ರೆಸ್‌ ವರಿಷ್ಠ ಮಂಡಳಿಯಲ್ಲಿ ಸಹಮತ ಮೂಡಿತ್ತು. ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರೂ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ (ಎಸ್‌.ಎಂ.ಕೃಷ್ಣ) ಅವರಿಗೊಂದು ಅವಕಾಶ ನೀಡಲು ಒಲವು ತೋರಿದ್ದರು. ಆದರೆ, ಕೃಷ್ಣ ಹೆಸರು ಪ್ರಕಟವಾಗುವ ಹಂತದಲ್ಲಿ ಯಾರೋ ಪಿನ್‌ ಇಟ್ಟಿದ್ದರು. ಅಖಾಡದ ರಾಜಕಾರಣ ಕೃಷ್ಣ ಅವರಿಗೆ ಒಗ್ಗಿ ಬರುವುದಿಲ್ಲ. ಅವರದ್ದು ಹೈಫೈ ಶೈಲಿ. ಸದಾ ಟೆನ್ನಿಸ್‌ ಆಡುತ್ತ […]

Read More

ಬಿಜೆಪಿ ಸೇವೆಗೆ ಮೋದಿ ಸಪ್ತಸೂತ್ರ

– ಕಾರ್ಯಕರ್ತರನ್ನು ಹುರಿದುಂಬಿಸಿದ ಪ್ರಧಾನಿ – ಪ್ರಧಾನಿಗೆ ಮೋದಿ, ಅಧ್ಯಕ್ಷ ನಡ್ಡಾಗೆ ರಾಜ್ಯದ ಕೊರೊನಾ ಮಾಹಿತಿ ನೀಡಿದ ರವಿಕುಮಾರ್. ಹೊಸದಿಲ್ಲಿ: ಕೊರೊನಾ ಸಂಕಷ್ಟದ ಸಂದರ್ಭದಲ್ಲಿಜನರ ನೆರವಿಗೆ ಧಾವಿಸಿರುವ ಬಿಜೆಪಿ ಕಾರ್ಯಕರ್ತರ ಗುಣಗಾನ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಹೆಚ್ಚಿನ ಸೇವೆಗೆ ಅನುಕೂಲವಾಗುವ ದಿಸೆಯಲ್ಲಿ ಕಾರ್ಯಕರ್ತರಿಗೆ ಸಪ್ತ ಸೂತ್ರಗಳನ್ನು ನೀಡಿದ್ದಾರೆ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ಕಾರ್ಯಕರ್ತರು ಯಾವ ರೀತಿ ಜನರ ನೆರವಿಗೆ ಧಾವಿಸಿದ್ದಾರೆ ಎಂಬ ಕುರಿತು ‘ಸೇವಾ ಹಿ ಸಂಘಟನಾ ಅಭಿಯಾನ್’ ವರ್ಚುವಲ್ ಸಭೆಯಲ್ಲಿ ಮಾಹಿತಿ ಪಡೆದ ಬಳಿಕ […]

Read More

ಎಸ್ಎಸ್ಎಲ್‌ಸಿ ಪರೀಕ್ಷೆ ಪೂರ್ಣ ಸಕ್ಸೆಸ್

– ಕೋವಿಡ್ ಆತಂಕದ ನಡುವೆಯೂ ಶೇ.90ರಷ್ಟು ವಿದ್ಯಾರ್ಥಿಗಳು ಹಾಜರು. ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್-19ನಿಂದಾಗಿ ತೀವ್ರ ಆತಂಕದೊಂದಿಗೆ ಜೂ.25ರಿಂದ ಆರಂಭವಾಗಿದ್ದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಂಡಿತು. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗೆ ಶೇ.98.10ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ‘‘ಕೊರೊನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸವಾಲಾಗಿತ್ತು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೆರಿ, ಮಹಾರಾಷ್ಟ್ರಗಳಲ್ಲಿ ಅಲ್ಲಿನ ಸರಕಾರಗಳು ಪರೀಕ್ಷೆ ಮುಂದೂಡಿವೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ನಡೆಸಿದ ಪ್ರಯತ್ನ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top