ಇನ್ನು ಮನೆಯಲ್ಲೇ ಚಿಕಿತ್ಸೆ

-ಲಕ್ಷಣರಹಿತರು ಆಸ್ಪತ್ರೆ ಸೇರಬೇಕಿಲ್ಲ -ಗಂಭೀರ ರೋಗಿಗಳ ಜೀವ ರಕ್ಷಣೆಗೆ ಆದ್ಯತೆ -ತಜ್ಞರ ಸಲಹೆಗೆ ಸರಕಾರದ ಒಪ್ಪಿಗೆ -ಹೋಮ್‌ ಐಸೊಲೇಶನ್‌ ಬಗ್ಗೆ ಶೀಘ್ರ ಮಾರ್ಗಸೂಚಿ ವಿಕ ಸುದ್ದಿಲೋಕ ಬೆಂಗಳೂರು.  ಬೆಂಗಳೂರಿನಲ್ಲಿ ಯಾವುದೇ ರೋಗ ಲಕ್ಷಣಗಳಿಲ್ಲದ ಸೋಂಕಿತರಿಗೆ ಇನ್ನು ಮುಂದೆ ಮನೆಯಲ್ಲೇ ಚಿಕಿತ್ಸೆ ನೀಡಲು ರಾಜ್ಯ ಸರಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಗಂಭೀರ ಸಮಸ್ಯೆ ಎದುರಿಸುತ್ತಿರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಜೀವ ರಕ್ಷಣೆ ಮಾಡುವ ನಿಟ್ಟಿನಲ್ಲಿಈ ಕ್ರಮ ಕೈಗೊಳ್ಳಲಾಗಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರುತ್ತಿದ್ದು, ಆಸ್ಪತ್ರೆಗಳು ತುಂಬಿಕೊಳ್ಳುತ್ತಿವೆ. […]

Read More

ಕೈಗಾರಿಕೆ ಉತ್ತೇಜನ ಕ್ರಮ – ಉದ್ಯಮ ಕ್ಷೇತ್ರ ನಳನಳಿಸಲು ನೆರವಾಗಲಿ

ಕೈಗಾರಿಕೆಗಳನ್ನು ಆರಂಭಿಸುವುದಕ್ಕೆ ಉತ್ತೇಜನ ನೀಡಲು ಕ್ರಾಂತಿಕಾರಕವಾದ ಕ್ರಮಕ್ಕೆ ರಾಜ್ಯ ಸರಕಾರ ಮುಂದಾಗಿದೆ. ಉದ್ಯಮಿಗಳು ಮೊದಲು ಕೈಗಾರಿಕೆ ಆರಂಭಿಸಿ ಬಳಿಕ ಸಂಬಂಧಿತ ಅನುಮೋದನೆ ಪಡೆಯುವ ಪ್ರಕ್ರಿಯೆಗೆ ಮುಂದಾಗಬಹುದು. ಈ ಸಂಬಂಧ ಕರ್ನಾಟಕ ಇಂಡಸ್ಟ್ರಿಯಲ್‌ ಫೆಸಿಲಿಟೇಷನ್‌ ಕಾಯಿದೆ- 2002ಕ್ಕೆ ತಿದ್ದುಪಡಿ ತರುವ ತೀರ್ಮಾನವನ್ನು ಸಂಪುಟ ಸಭೆ ಕೈಗೊಂಡಿದೆ. ರಾಜ್ಯದ ಉನ್ನತಾಧಿಕಾರ ಸಮಿತಿ ಅನುಮೋದನೆ ಪಡೆದ ಉದ್ಯಮಿಗಳು ಗುರುತಿಸಲಾದ ಭೂಮಿಯಲ್ಲಿ ಕೈಗಾರಿಕೆ ಸ್ಥಾಪನೆ ಚಟುವಟಿಕೆ ಆರಂಭಿಸಬಹುದು. ನಂತರದ 3 ವರ್ಷಗಳಲ್ಲಿ ಕಟ್ಟಡ ನಿರ್ಮಾಣ, ಪರಿಸರ ಮಂಡಳಿ ನಿರಾಕ್ಷೇಪಣ ಪತ್ರ ಸೇರಿ ಸಂಬಂಧಿಸಿದ […]

Read More

ಕೈಗಾರಿಕೋದ್ಯಮಕ್ಕೆ ಟಾನಿಕ್

– ಕೈಗಾರಿಕೆ ಸೌಲಭ್ಯ ಕಾಯಿದೆಗೆ ತಿದ್ದುಪಡಿ, ಸುಗ್ರೀವಾಜ್ಞೆ ಶೀಘ್ರ – ಜಿಲ್ಲಾ ಸಮಿತಿ ಒಪ್ಪಿಗೆ ಸಿಕ್ಕ ಕೂಡಲೇ ಚಟುವಟಿಕೆ ಆರಂಭಕ್ಕೆ ಅಸ್ತು ವಿಕ ಸುದ್ದಿಲೋಕ ಬೆಂಗಳೂರು ಕೊರೊನಾ ಸಂಕಷ್ಟದಿಂದ ನೆಲ ಕಚ್ಚುತ್ತಿರುವ ಆರ್ಥಿಕತೆಗೆ ಕೈಗಾರಿಕೆ ಮೂಲಕ ಪುನಶ್ಚೇತನ ನೀಡಲು ರಾಜ್ಯ ಸಚಿವ ಸಂಪುಟ ಸಭೆ ಮಹತ್ವದ ನಿರ್ಧಾರ ಕೈಗೊಂಡಿದೆ. ಅದರಂತೆ ರಾಜ್ಯ, ಜಿಲ್ಲಾಮಟ್ಟದ ಉನ್ನತಾಧಿಕಾರ ಸಮಿತಿಯಿಂದ ಅನುಧಿಮೋದನೆ ಸಿಕ್ಕ ತಕ್ಷ ಣವೇ ಕಟ್ಟಡ ನಿರ್ಮಾಣ ಸೇರಿ ಮೂಲಸೌಕರ್ಯ ಸಂಬಂಧಿತ ಚಟುವಟಿಕೆಯನ್ನು ಕೈಗಾರಿಕಾ ಸಂಸ್ಥೆಗಳು ಪ್ರಾರಂಭಿಸಬಹುದು. ಈ ಸಂಬಂಧ […]

Read More

ಇಂದಿನಿಂದ ಎಸ್ಸೆಸ್ಸೆಲ್ಸಿ ಅಗ್ನಿಪರೀಕ್ಷೆ – ಸಂಕಷ್ಟ ಕಾಲದ ಪರೀಕ್ಷೆಗೆ ಸಕಲ ಕ್ರಮ – ವಿದ್ಯಾರ್ಥಿಗಳಿಗೆ ಶುಭಾಶಯ

ವಿಕ ಸುಕದ್ದಿಲೋಕ ಬೆಂಗಳೂರು. ಕೋವಿಡ್-19 ಆತಂಕದ ನಡುವೆ ಗುರುವಾರದಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಪರೀಕ್ಷೆಯ ಸುರಕ್ಷತೆ ವಿಚಾರವಾಗಿ ಮೊದಲಿದ್ದ ಆತಂಕ ದೂರವಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಎದುರಿಸಲು ಸಜ್ಜಾಗಿರುವುದು ಎಲ್ಲೆಡೆ ಕಂಡು ಬಂದಿದೆ. ಪೋಷಕರು, ಶಿಕ್ಷಕರು, ಗಣ್ಯರು ಹಾಗೂ ಊರಿನ ಜನರು ವಿದ್ಯಾರ್ಥಿಗಳ ಬೆನ್ನಿಗೆ ನಿಂತು ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಎಲ್ಲೆಡೆ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸೇಷನ್ ಸೇರದಂತೆ ಸಕಲ ಸುರಕ್ಷತಾ ಕ್ರಮಗಳೊಂದಿಗೆ ಸಿದ್ಧತೆಗಳನ್ನು ನಡೆಸಲಾಗಿದೆ. ಕೆಲವೆಡೆ ಶಾಲೆಗಳು ತಳಿರು-ತೋರಣಗಳಿಂದ ವಿದ್ಯಾರ್ಥಿಗಳನ್ನು ಸ್ವಾಗತಿಸಲು […]

Read More

ಸಿಎಂ ಚಾಟಿಗೆ ಸಾವಿರ ಹಾಸಿಗೆ, 50 ಆ್ಯಂಬುಲೆನ್ಸ್ – ಬಿಬಿಎಂಪಿ ವೈಫಲ್ಯದ ವಿಕ ವಿಸ್ತೃತ ವರದಿಗೆ ಎಚ್ಚೆತ್ತ ರಾಜ್ಯ ಸರಕಾರ

ವಿಕ ಸುದ್ದಿಲೋಕ ಬೆಂಗಳೂರು. ಸೋಂಕಿತರ ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆಗಳಿಲ್ಲದಿರುವುದು ಮತ್ತು ಆ್ಯಂಬುಲೆನ್ಸ್‌ಗಳಿಲ್ಲದೆ ರೋಗಿಗಳು ಪರದಾಡುತ್ತಿರುವ ದೂರುಗಳು ಕೇಳಿಬಂದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಬಿಬಿಎಂಪಿ, ಕೋವಿಡ್ ನಿರ್ವಹಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದೆ. ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಚಾಟಿ ಬೀಸಿದ್ದರು. ಹೀಗಾಗಿ, ಸೋಂಕಿತರ ಚಿಕಿತ್ಸೆಗೆ ಹಾಸಿಗೆ ವ್ಯವಸ್ಥೆ ಮತ್ತು ಅವರನ್ನು ಆಸ್ಪತ್ರೆಗೆ ದಾಖಲಿಸಲು ಅಗತ್ಯವಿರುವ ಆ್ಯಂಬುಲೆನ್ಸ್‌ಗಳನ್ನು ಒದಗಿಸಲಾಗಿದೆ. ಮೃತಪಟ್ಟ ಸೋಂಕಿತರನ್ನು ಚಿತಾಗಾರಗಳಿಗೆ ಸಾಗಿಸಲು ವಾಹನಗಳನ್ನು ನಿಯೋಜಿಸಲಾಗಿದೆ. ನಗರದಲ್ಲಿ ಸೋಂಕಿತರನ್ನು ಆಸ್ಪತ್ರೆಗೆ […]

Read More

ಬೆಂಗಳೂರು ಹೈ ಅಲರ್ಟ್

6 ಕಡೆ ಸೀಲ್ಡೌನ್ | ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ಉನ್ನತ ಮಟ್ಟದ ಸಭೆ. ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್ ನಿಯಂತ್ರಣ ಸಂಬಂಧದಲ್ಲಿ ಬಿಬಿಎಂಪಿ ಪ್ರಮಾದವೆಸಗಿದ ಬಳಿಕ ಎಚ್ಚೆತ್ತುಕೊಂಡಿರುವ ರಾಜ್ಯ ಸರಕಾರ ಬೆಂಗಳೂರಿನ ಕೆಆರ್ ಮಾರ್ಕೆಟ್, ವಿವಿ ಪುರ, ಸಿದ್ದಾಪುರ, ಕಲಾಸಿಪಾಳ್ಯ, ಚಾಮರಾಜಪೇಟೆ, ಚಿಕ್ಕಪೇಟೆ ಸೇರಿದಂತೆ ಕೊರೊನಾ ವಿಪರೀತವಾಗಿ ಪ್ರಸರಣವಾಗುತ್ತಿರುವ ಪ್ರದೇಶದಲ್ಲಿ ಸೀಲ್‌ಡೌನ್‌ ಮಾಡಲು ಆದೇಶಿಸಿದೆ. ಹಾಗೆಯೇ ಕೊರೊನಾ ವ್ಯಾಪಿಸುತ್ತಿರುವ ಕಡೆ ಲಾಕ್‌ಡೌನ್‌ ಕ್ರಮ ಅನುಸರಿಸಲು ಸೂಚಿಸಲಾಗಿದೆ. ಬೆಂಗಳೂರಿನಲ್ಲಿ ಕೋವಿಡ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಗೃಹ ಕಚೇರಿ […]

Read More

ಕೊರೊನಾ ಟೆಸ್ಟ್ ರಾಜಧಾನಿ ಫೇಲ್

– ಸರಕಾರದ ಶಕ್ತಿ ಕೇಂದ್ರದಲ್ಲೇ ವೈಫಲ್ಯ | ಸೋಂಕಿತರ ನರಳಾಟ | ಇತರ ಜಿಲ್ಲಾಡಳಿತಗಳೇ ಬೆಸ್ಟ್ – ಇಲಾಖೆ, ಅಧಿಕಾರಿಗಳ ನಡುವೆ ಸಮನ್ವಯವೇ ಇಲ್ಲ| ಹೊಣೆ ಮರೆತ ಬಿಬಿಎಂಪಿ ಆಯುಕ್ತ ವಿಕ ಸುದ್ದಿಲೋಕ ಬೆಂಗಳೂರು. ರಾಜಧಾನಿಯಲ್ಲಿ ಕೊರೊನಾ ಪರಿಸ್ಥಿತಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದೆ. ಕೊರೊನಾ ನಿಯಂತ್ರಣದಲ್ಲಿ ದೇಶದಲ್ಲೇ ಬೆಸ್ಟ್ ಎಂಬ ಹೆಗ್ಗಳಿಕೆ ಪಡೆದ ಕರ್ನಾಟಕ ತನ್ನ ಶಕ್ತಿ ಕೇಂದ್ರದಲ್ಲೇ ಸೋಂಕಿಗೆ ಕಡಿವಾಣ ಹಾಕಲು, ಸೋಂಕಿತರಿಗೆ ಸೂಕ್ತ ಚಿಕಿತ್ಸೆ ನೀಡಲು ವಿಫಲವಾಗುತ್ತಿದೆ. ಸುಸಜ್ಜಿತ ಆಸ್ಪತ್ರೆಗಳು, ಮುಖ್ಯಮಂತ್ರಿಯೂ ಸೇರಿದಂತೆ ಇಡೀ […]

Read More

ಆರ್ಥಿಕತೆಯ ಹೊಸ ಗಾಳಿ ಕೇಂದ್ರ- ರಾಜ್ಯಗಳ ಸಮಗ್ರ ಸಹಕಾರ

ಮುಂದಿನ ದಿನಗಳಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ. ದೇಶದಲ್ಲಿನ ಕೋವಿಡ್‌-19 ಪರಿಸ್ಥಿತಿ, ಅನ್‌ಲಾಕ್‌ 1.0 ಜಾರಿಯ ಪರಿಣಾಮ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು 15 ರಾಜ್ಯಗಳ ಸಿಎಂಗಳೊಂದಿಗೆ ಬುಧವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಕೋವಿಡ್‌ ಸಂದರ್ಭ ಬಳಸಿಕೊಂಡು ಆರೋಗ್ಯ ಸೇವೆಗಳ ವಿಸ್ತರಣೆಗೆ ನಾವು ಒತ್ತು ನೀಡಬೇಕೆಂಬ ಆಶಯವನ್ನೂ ಅವರು ಪ್ರತಿಪಾದಿಸಿದ್ದಾರೆ. ಮತ್ತೊಮ್ಮೆ ಲಾಕ್‌ಡೌನ್‌ ಮಾಡಲಾಗುವುದಿಲ್ಲ […]

Read More

ಬಿಜೆಪಿ ಅಭ್ಯರ್ಥಿ ಆಯ್ಕೆ ಮತ್ತು ಹಂಸಕ್ಷೀರ ನ್ಯಾಯ!

– ಶಶಿಧರ ಹೆಗಡೆ. ನ್ಯಾಯ ನಿರ್ಣಯದ ವಿಚಾರ ಬಂದಾಗ ಸರ್ವಶ್ರೇಷ್ಠ ಹೋಲಿಕೆಗಾಗಿ ‘ಹಂಸಕ್ಷೀರ ನ್ಯಾಯ’ವೆಂದು ಹೇಳುವುದುಂಟು. ಹಂಸವೆಂದರೆ ಪಕ್ಷಿ. ಕ್ಷೀರವೆಂದರೆ ಹಾಲು. ಹಾಗಾಗಿ ಈ ಹೋಲಿಕೆಯೇ ವಿಚಿತ್ರವೆನಿಸಬಹುದು. ಹಂಸ ಪಕ್ಷಿ, ಕ್ಷೀರ ಮತ್ತು ನ್ಯಾಯಕ್ಕೆ ಎಲ್ಲಿಂದೆಲ್ಲಿಯ ಸಂಬಂಧವೆಂದು ಕೇಳಬಹುದು. ಪ್ರಾಯಶಃ ಇದೇ ಕಾರಣದಿಂದ ಈ ನುಡಿಕಟ್ಟು ಒಗಟಾಗಿಯೇ ಉಳಿದುಬಿಟ್ಟಿರಬಹುದು. ಹಂಸಪಕ್ಷಿಯ ಎದುರು ಕ್ಷೀರ ತುಂಬಿದ ಪಾತ್ರೆಯನ್ನು ಇಟ್ಟರೆ ಅದು ಕ್ಷೀರಪಾನವೊಂದನ್ನೇ ಮಾಡುತ್ತದೆ! ಅಂದರೆ ಹಾಲಿಗೆ ನೀರು ಬೆರೆಸಿ ಕೊಟ್ಟಿದ್ದಾರೆ ಎಂದುಕೊಳ್ಳಿ. ಹಂಸಪಕ್ಷಿಯು ಹಾಲನ್ನಷ್ಟೇ ಹೀರಿಕೊಳ್ಳುತ್ತದೆ. ಅರ್ಥಾತ್‌ ಹಾಲಿನೊಂದಿಗೆ […]

Read More

ಕೃಷಿ, ಉದ್ಯಮ ಜಂಟಿ ಹೆಜ್ಜೆ

– ಭೂಸುಧಾರಣೆ ಕಾಯಿದೆ ತಿದ್ದುಪಡಿಯ ಒಳಿತು-ಕೆಡುಕಿನ ವಾದ ತಾರಕಕ್ಕೆ – ಕೃಷಿ ಕೃಶವಾಗದಿರಲಿ, ಕೈಗಾರಿಕೆಗಳಿಗೂ ಅವಕಾಶ ಸಿಗಲಿ ಎಂಬ ಆಶಯ. ವಿಕ ಸುದ್ದಿಲೋಕ, ಬೆಂಗಳೂರು. ರಾಜ್ಯ ಸರಕಾರದ ಉದ್ದೇಶಿತ ಭೂಸುಧಾರಣೆ ಕಾಯಿದೆ ತಿದ್ದುಪಡಿ ಪ್ರಸ್ತಾಪದ ಪರ ವಿರೋಧ ಚರ್ಚೆ ತೀವ್ರವಾಗಿದೆ. ಕಾಯಿದೆ ತಿದ್ದುಪಡಿಯಿಂದ ಕರ್ನಾಟಕದಲ್ಲಿ ರೈತರಿಗೆ, ಕೃಷಿ ವಲಯಕ್ಕೆ ಯಾವುದೇ ಹಿನ್ನಡೆ ಆಗದೆ ಕೈಗಾರಿಕಾ ಕ್ರಾಂತಿಗೆ ಅನುವು ಮಾಡಿಕೊಡುತ್ತದೆ ಎನ್ನುವುದು ಸರಕಾರದ ನಿಲುವು. ಇದೇ ವೇಳೆ ಈ ತಿದ್ದುಪಡಿ ರಾಜ್ಯದ ರೈತರಿಗೆ ಮಾರಕ ಎಂಬ ವಾದವನ್ನು ಪ್ರತಿಪಕ್ಷ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top