ಕೊರೊನಾ ನಡುವೆಯೇ ನಂ.1 ಆಗುವ ಪಣ

– ಲೈಸೆನ್ಸ್ ಸಿಗುವ ಮೊದಲೇ ಉದ್ಯಮ ಸ್ಥಾಪನೆಗೆ ಸುಗ್ರೀವಾಜ್ಞೆ. ಕೊರೊನಾ ಸಂಕಷ್ಟ ಕಾಲ ಕರ್ನಾಟಕದ ಪಾಲಿಗೆ ವರವಾಗಲಿದೆ. ಕೈಗಾರಿಕೆಗಳ ಪುನಶ್ಚೇತನಕ್ಕೆ ಸರ್ವ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಹೊಸ ಕೈಗಾರಿಕೆಗಳ ಸ್ಥಾಪನೆಗೂ ಹಲವು ಹೊಸ ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದೆ. ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿ ಕೈಗಾರಿಕಾ ರಾಜ್ಯವಾಗಿ ರೂಪಿಸುವ ಪ್ರಯತ್ನದ ಭಾಗವಿದು ಎಂಬ ಅಭಿಪ್ರಾಯ ಕರುನಾಡ ಕಟ್ಟೋಣ ಬನ್ನಿ ಸಂವಾದದಲ್ಲಿ ಕೇಳಿಬಂತು. ವಿಕ ಸುದ್ದಿಲೋಕ ಬೆಂಗಳೂರು ಕೈಗಾರಿಕೆಗಳ ಪುನಶ್ಚೇತನ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿ […]

Read More

ಉದ್ಯಮಸ್ನೇಹಿ ಕರ್ನಾಟಕ

– ಉದ್ಯಮ ಸ್ಥಾಪನೆ ಇನ್ನಷ್ಟು ಸರಳ | ಗ್ರಾಮಾಂತರಕ್ಕೂ ಕೈಗಾರಿಕೆ ವಿಸ್ತರಣೆ – ಕೊರೊನಾ ಸಂಕಷ್ಟ ಸದವಕಾಶವಾಗಿ ಬಳಕೆ | ಸಚಿವ ಜಗದೀಶ್ ಶೆಟ್ಟರ್ ಘೋಷಣೆ (ಕೈಗಾರಿಕಾ ಪುನಶ್ಚೇತನ ಚಿಂತನ-ಮಂಥನ) ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾ ಸಂಕಷ್ಟ ಕಾಲವನ್ನು ಕೈಗಾರಿಕಾಭಿವೃದ್ಧಿಯ ಸದವಕಾಶವಾಗಿ ಬಳಸಿಕೊಳ್ಳಲು ರಾಜ್ಯ ಸರಕಾರ ನಿರ್ಧರಿಸಿದೆ. ಶೀಘ್ರವೇ ಹೊಸ ಕೈಗಾರಿಕಾ ನೀತಿಯನ್ನು ಪ್ರಕಟಿಸುವ ಮೂಲಕ ರಾಜ್ಯವನ್ನು ದೇಶದ ನಂಬರ್ ಒನ್ ಉದ್ಯಮಸ್ನೇಹಿ ರಾಜ್ಯವಾಗಿ ರೂಪಿಸಲು ಮುಂದಾಗಿದೆ. ಇದು ರಾಜ್ಯದಲ್ಲಿ ಉದ್ಯಮ ವಲಯ ಬೆಳವಣಿಗೆಗೆ, ಉದ್ಯೋಗ ಸೃಷ್ಟಿಗೆ […]

Read More

ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ – ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ

– ಕೋರೆ-ಕತ್ತಿ ಫೈಟ್‌ ನಡುವೆ ಕಡಾಡಿ, ಗಸ್ತಿ ಎಂಟ್ರಿ. – ಘಟಾನುಘಟಿಗಳನ್ನು ಬದಿಗೊತ್ತಿ ಪಕ್ಷ ನಿಷ್ಠರಿಗೆ ಗಿಫ್ಟ್‌. ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯಸಭೆ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸುತ್ತಿದ್ದ ಮತ್ತು ಭಿನ್ನಮತದ ಮೂಲಕ ಒತ್ತಡ ಹಾಕುತ್ತಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್‌ ಭರ್ಜರಿ ಶಾಕ್‌ ಕೊಟ್ಟಿದೆ. ಚರ್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ, ಪಕ್ಷ ನಿಷ್ಠರಾದ ಸಾಮಾನ್ಯ […]

Read More

ಜನಜೀವನ ಇನ್ನಷ್ಟು ಮುಕ್ತ

ಇಂದಿನಿಂದ ಟೆಂಪಲ್‌, ಮಾಲ್‌, ಹೋಟೆಲ್‌ ಓಪನ್‌ | ಷರತ್ತುಗಳು ಅನ್ವಯ. ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ.  ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಮಾಲ್‌ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. […]

Read More

ರಾಜ್ಯಸಭೆ ಚುನಾವಣೆ ನೆಪದಲ್ಲಿ ಕಣ್‌ಕಣ್ಣ ಸಲಿಗೆ – ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿಗಿದು ಮೇಲ್ಮನೆಯ ರಹದಾರಿಯೇ?

– ಶಶಿಧರ ಹೆಗಡೆ.  ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ’ ಎನ್ನುವ ಮಾತಿಗೆ ಪದೇ ಪದೆ ಮೌಲ್ಯ ದೊರಕುತ್ತದೆ. ಈ ಮೌಲ್ಯವರ್ಧನೆಯ ಕೀರ್ತಿಯೂ ರಾಜಕಾರಣಿಗಳಿಗೇ ಸಲ್ಲಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಹಳೆಯ ಅಂಗಿ ಕಳಚಿಟ್ಟು ಹೊಸ ಶರ್ಟ್ ಧರಿಸಿದಷ್ಟೇ ಸುಲಭವಾಗಿ ಪಕ್ಷ ಬದಲಿಸುತ್ತಾರೆ. ಚುನಾವಣಾ ಅಖಾಡದಲ್ಲಿ ಶರಂಪರ ಜಗಳವಾಡಿಕೊಂಡವರು ‘ಅಧಿಕಾರದ ಅನಿವಾರ್ಯತೆ’ ಬಂದೊದಗಿದಾಗ ಗಾಢಾಲಿಂಗನ ಮಾಡಿಕೊಳ್ಳಬಲ್ಲರು. ಅಧಿಕಾರದ ಮೋಹ ಪಾಶದ ಬಲೆಗೆ ಸಿಲುಕಿದವರು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ರಭಸದಿಂದ ಬಂದು ಒಂದೇ ಬಿಂದುವಿನಲ್ಲಿ ಸಂಧಿಸಬಲ್ಲರು. ಅಂತರಂಗದ ರಾಗ, ದ್ವೇಷವನ್ನು […]

Read More

ಸಾವರ್ಕರ್ ಫ್ಲೈಓವರ್ ಫೈಟ್

– ಸ್ವಾತಂತ್ರ್ಯವೀರನ ನಾಮಕರಣಕ್ಕೆ ಕಾಂಗ್ರೆಸ್, ಜೆಡಿಎಸ್ ವಿರೋಧ – ಕ್ಯಾಂಟೀನ್‌ಗೆ ಇಂದಿರಾ ಗಾಂಧಿ ಹೆಸರಿಟ್ಟಿರಲಿಲ್ಲವೇ ಎಂದ ಬಿಜೆಪಿ. ವಿಕ ಸುದ್ದಿಲೋಕ ಬೆಂಗಳೂರು : ಬೆಂಗಳೂರಿನ ಯಶವಂತಪುರ ಮಾರ್ಗವಾಗಿ ಯಲಹಂಕ ಮತ್ತು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಫ್ಲೈಓವರ್‌ಗೆ ಸ್ವಾತಂತ್ರ್ಯ ಯೋಧ ವೀರ ಸಾವರ್ಕರ್ ಹೆಸರಿಡುವ ವಿಚಾರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ತೀವ್ರ ಜಟಾಪಟಿ ನಡೆದಿದೆ. ಈ ವಾದ-ವಿವಾದದ ನಡುವೆಯೇ, ಮೇಲ್ಸೇತುವೆ ಉದ್ಘಾಟನೆ ಸಮಾರಂಭವನ್ನು ರಾಜ್ಯ ಸರಕಾರ ಮುಂದೂಡಿದೆ.ಫ್ಲೈಓವರ್‌ಗೆ ವೀರ ಸಾವರ್ಕರ್ ಹೆಸರಿಡಲು ಫೆಬ್ರವರಿಯಲ್ಲಿ ಬಿಬಿಎಂಪಿ ಸಭೆಯಲ್ಲಿ ನಿರ್ಣಯಿಸಲಾಗಿತ್ತು. […]

Read More

1ರಿಂದ ಮಂದಿರ ಓಪನ್ – ಹೋಟೆಲ್‌ಗಳ ಆರಂಭಕ್ಕೂ ಸಿಎಂ ಯಡಿಯೂರಪ್ಪ ಸಮ್ಮತಿ

ವಿಕ ಸುದ್ದಿಲೋಕ ಬೆಂಗಳೂರು: ಸುಮಾರು ಎರಡು ತಿಂಗಳ ಬಳಿಕ ರಾಜ್ಯಾದ್ಯಂತ ಜೂನ್ 1ರಿಂದ ದೇವಸ್ಥಾನಗಳು, ಹೋಟೆಲ್‌ಗಳು ಪುನರಾರಂಭಗೊಳ್ಳಲಿವೆ.  ಮಾಲ್‌ಗಳೂ ತೆರೆಯುವ ನಿರೀಕ್ಷೆ ಇದೆ. ಕೊರೊನಾ ಸುರಕ್ಷತಾ ವ್ಯವಸ್ಥೆಯೊಂದಿಗೆ, ಸಾಮಾಜಿಕ ಅಂತರದ ಎಚ್ಚರ ಕಾಪಾಡಿಕೊಂಡು ಧಾರ್ಮಿಕ ದತ್ತಿ ಇಲಾಖೆಯ ಎಲ್ಲ ಮಂದಿರಗಳಲ್ಲಿ ಭಕ್ತರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಮಂಗಳವಾರ ತಿಳಿಸಿದ್ದಾರೆ. ಇದರ ಜತೆಗೆ, ಈ ಹಿಂದೆ ಘೋಷಿಸಿದಂತೆ 52 ದೇವಸ್ಥಾನಗಳಲ್ಲಿ ಆನ್‌ಲೈನ್‌ ಸೇವೆ ಮುಂದುವರಿಯಲಿದೆ ಎಂದವರು ಹೇಳಿದ್ದಾರೆ. ಸಿಎಂ ಯಡಿಯೂರಪ್ಪ ಈ […]

Read More

ಹೋಟೆಲ್ ಓಪನ್‌ಗೆ ಕ್ಷಣಗಣನೆ

– ವಿಮಾನ, ರೈಲು ಸಂಚಾರದ ಆರಂಭದ ಹಿನ್ನೆಲೆಯಲ್ಲಿ ಆಹಾರ, ವಸತಿ ವ್ಯವಸ್ಥೆ ಅನಿವಾರ್ಯ – ಶೀಘ್ರವೇ ದೇಗುಲಗಳೂ ತೆರೆಯುವ ಸಾಧ್ಯತೆ | ಜನಜೀವನ ವೇಗವಾಗಿ ಮರಳಿ ಹಳಿಗೆ. – ಎಚ್.ಪಿ.ಪುಣ್ಯವತಿ,  ಬೆಂಗಳೂರು.  ಕೊರೊನಾ ನಡುವೆಯೇ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯ ಎಂಬ ಸಂದೇಶಕ್ಕೆ ಪೂರಕವಾಗಿ ಜನಜೀವನ ವೇಗವಾಗಿ ಮರಳಿ ಹಳಿಗೆ ಬರುತ್ತಿದೆ. ಇದರ ಭಾಗವಾಗಿ, ರಾಜ್ಯದಲ್ಲಿ ಹೋಟೆಲ್‌ಗಳ ಮರು ಆರಂಭಕ್ಕೂ ಕ್ಷಣಗಣನೆ ಆರಂಭವಾಗಿದೆ. ಜತೆಗೆ ಕೆಲವೇ ದಿನಗಳಲ್ಲಿ ದೇವಾಲಯಗಳ ಬಾಗಿಲುಗಳೂ  ತೆರೆಯಲಿವೆ. ಲಾಕ್‌ಡೌನ್‌ ಸಡಿಲಿಕೆ ನಂತರ ವಾಣಿಜ್ಯ ಚಟುವಟಿಕೆಗಳು […]

Read More

ರೈತರ ವಿರೋಧಕ್ಕೆ ಡೋಂಟ್‌ಕೇರ್‌ – ಜನಾಕ್ರೋಶ ಧಿಕ್ಕರಿಸಿ ಎಪಿಎಂಸಿ ತಿದ್ದುಪಡಿ ಕಾಯಿದೆಗೆ ಸಂಪುಟ ಅಸ್ತು

– ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ ಬಾಕಿ, ಪ್ರತಿಪಕ್ಷಗಳಿಂದ ಹೋರಾಟದ ಎಚ್ಚರಿಕೆ ವಿಕ ಸುದ್ದಿಲೋಕ ಬೆಂಗಳೂರು : ರೈತರು, ರೈತ ಸಂಘಟನೆಗಳು, ಪ್ರತಿಪಕ್ಷಗಳು ಹಾಗೂ ಇನ್ನಿತರ ಬಳಕೆದಾರರ ರಾಜ್ಯವಾಪಿ ತೀವ್ರ ವಿರೋಧದ ನಡುವೆಯೂ ವಿವಾದಿತ ಎಪಿಎಂಸಿ ಕಾಯಿದೆ ತಿದ್ದುಪಡಿ ಪ್ರಸ್ತಾಪಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸಲು ಈಗಾಗಲೇ ರಾಜ್ಯಪಾಲರಿಗೆ ಶಿಫಾರಸು ಮಾಡಲಾಗಿದೆ. ಇದಕ್ಕೆ ರಾಜ್ಯಪಾಲರ ಅಂಕಿತ ಬೀಳುವುದೊಂದು ಬಾಕಿಯಿದೆ. ಈ ಸಂಬಂಧ ಒತ್ತಡ ತಂದಿದ್ದ ಕೇಂದ್ರ ಸರಕಾರ ‘ಮಾದರಿ ಕಾಯಿದೆ’ಯ ಪ್ರತಿಯನ್ನೂ ಕಳುಹಿಸಿಕೊಟ್ಟಿತ್ತು. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top