ಮತ್ತೆ ವಿಸ್ತರಣಾವಾದದ ಸುಳಿಯಲ್ಲಿ ವಿಶ್ವ ಸಮುದಾಯ

ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಕಳೆದುಕೊಂಡಾಗ ಉಂಟಾಗುವ ಅನರ್ಥವಿದು ನ್ಯಾಟೊ ಎಂದೇ ಪ್ರಸಿದ್ಧಿಯಾಗಿರುವ ನಾರ್ಥ್‌ ಅಟ್ಲಾಂಟಿಕ್‌ ಟ್ರೀಟಿ ಆರ್ಗನೈಸೇಷನ್‌ನ ಧ್ಯೇಯೋದ್ದೇಶವೇನೋ ಮಹತ್ತರವಾಗಿದೆ. ಅದು ಸಾರುತ್ತದೆ- ‘‘ಪ್ರಜಾತಾಂತ್ರಿಕ ಮೌಲ್ಯಗಳನ್ನು ಪ್ರೋತ್ಸಾಹಿಸುತ್ತಾ, ರಾಷ್ಟ್ರ-ರಾಷ್ಟ್ರಗಳ ನಡುವಿನ ಸಮಸ್ಯೆಗಳನ್ನು ಸರಿಪಡಿಸಿ, ಪರಸ್ಪರ ನಂಬಿಕೆ ಹೆಚ್ಚಿಸುವುದು ಹಾಗೂ ದೀರ್ಘಾವಧಿಯಲ್ಲಿ ಸಂಘರ್ಷಗಳನ್ನು ತಡೆಯುವುದು ನ್ಯಾಟೋದ ಉದ್ದೇಶ. ಜತೆಗೆ, ರಕ್ಷ ಣೆ ಮತ್ತು ಭದ್ರತೆ ವಿಷಯದಲ್ಲಿ ಪರಸ್ಪರ ಸಂಪರ್ಕ ಹಾಗೂ ಸಹಕಾರ ಮನೋಭಾವದಲ್ಲಿ ಹೆಗಲಿಗೆ ಹೆಗಲು ನೀಡುತ್ತಾ, ಸದಸ್ಯ ರಾಷ್ಟ್ರಗಳನ್ನು ಸಬಲೀಕರಣಗೊಳಿಸುವುದು ಪರಮ ಧ್ಯೇಯವಾಗಿದೆ.’’ ರಷ್ಯಾ-ಉಕ್ರೇನ್‌ ಸಮರ ಸಂದರ್ಭದಲ್ಲಿ […]

Read More

ಹಿಜಾಬ್‌ ವಿವಾದದ ಮೂಲಕ ಮೂಲಭೂತವಾದಿಗಳ ಕೈ ಮೇಲಾಗದಿರಲಿ

  ಒಂದು ಹೆಜ್ಜೆ ಮುಂದೆ, ಎರಡು ಹೆಜ್ಜೆ ಹಿಂದೆ ಎಂಬಂತಾಗಬಾರದು ಕರ್ನಾಟಕದ ಒಂದು ಸರಕಾರಿ ಶಿಕ್ಷ ಣ ಸಂಸ್ಥೆಯಿಂದ ಆರಂಭವಾದ ಹಿಜಾಬ್‌ ವಿವಾದ ಇಂದು ದೇಶದಲ್ಲಿಸುದ್ದಿಯಾಗಿ, ಅಂತಾರಾಷ್ಟ್ರೀಯ ಮಟ್ಟಕ್ಕೂ ವ್ಯಾಪಿಸಿದೆ. ಹಿಜಾಬ್‌ ಎನ್ನುವುದು ಇಸ್ಲಾಂನ ಭಾಗವೇ? ಸಮವಸ್ತ್ರಕ್ಕೆ ಅದು ಹೊಂದಿಕೆ ಆಗುತ್ತದೆಯೇ? ಕಳೆದ ವರ್ಷ ಹಿಜಾಬ್‌ ಧರಿಸದ ಯುವತಿಯರು ಇದ್ದಕ್ಕಿದ್ದಂತೆ ಧರಿಸಿದ್ದೇಕೆ? ಎಂಬೆಲ್ಲವಿಚಾರಗಳು ಸಾಮಾಜಿಕವಾಗಿ ಚರ್ಚೆಯಾಗುತ್ತಿವೆ. ಈಗಾಗಲೆ ನ್ಯಾಯಾಲಯವೂ ಅತ್ಯಂತ ಆಸ್ಥೆಯಿಂದ ಹಾಗೂ ಜವಾಬ್ದಾರಿಯುತವಾಗಿ ನಿರಂತರ ವಿಚಾರಣೆ ನಡೆಸುತ್ತಿರುವುದರಿಂದ, ಆ ವಿಚಾರದ ತೀರ್ಪನ್ನು ಗೌರವಾನ್ವಿತ ನ್ಯಾಯಾಲಯಕ್ಕೇ ಬಿಟ್ಟುಬಿಡೋಣ.ಆದರೆ […]

Read More

ಸಂಸ್ಕೃತ ಎಂದರೆ ಕೆಲವರಿಗೆ ಯಾಕಿಷ್ಟು ಕಣ್ಣುರಿ?

ದ್ವೇಷ ವ್ಯಾಮೋಹಗಳನ್ನು ಬಿಟ್ಟು ಸಂಸ್ಕೃತಿಯ ವಾಹನಕವಾಗಿ ಭಾಷೆಗಳನ್ನು ಕಲಿಯೋಣ ಸಂಸ್ಕೃತವು ಜಗತ್ತಿನ ಬಹುತೇಕ ಭಾಷೆಗಳ ತಾಯಿ!ಹೀಗೆಂದ ಕೂಡಲೆ ಭಾಷಾ ಶಾಸ್ತ್ರಜ್ಞರು ಎನಿಸಿಕೊಂಡವರ ಕಿವಿ ನೆಟ್ಟಗಾಗುತ್ತದೆ. ಇವರಿಗೆ ಭಾಷೆಯ ಉಗಮ, ಬೆಳವಣಿಗೆಯ ಕಿಂಚಿತ್ತೂ ಅರಿವಿಲ್ಲ ಎನ್ನುವವರು ಒಂದಿಷ್ಟು ಮಂದಿ ಇದ್ದರೆ, ಉದ್ದೇಶಪೂರ್ವಕವಾಗಿ ಸಂಸ್ಕೃತದ ಪಾರಮ್ಯವನ್ನು ಮೆರೆಸುತ್ತಿದ್ದಾರೆ ಎನ್ನುವವರೂ ಇನ್ನೊಂದಿಷ್ಟು ಮಂದಿ ಇದ್ದಾರೆ. ಸಂಸ್ಕೃತ ಎಂದರೆ ಪುರೋಹಿತಶಾಹಿಗಳ ಭಾಷೆ ಎನ್ನುವ ಪುಣ್ಯಾತ್ಮ ಪ್ರಗತಿಪರರೂ ಇದ್ದಾರೆ! ಹೀಗೆ, ಸಂಸ್ಕೃತ ಎಂದ ಕೂಡಲೆ ವಿರೋಧ ವ್ಯಕ್ತಪಡಿಸುವ ಒಂದು ವರ್ಗ ಇಂದಿಗೂ ಸಕ್ರಿಯವಾಗಿದೆ. ಅದರ […]

Read More

ಪರದೂಷಣೆಗಿಂತ ಆತ್ಮಾವಲೋಕನವೇ ಉದ್ಧಾರದ ಹಾದಿ

ಅಸ್ಪೃಶ್ಯತೆಯ ಆಚರಣೆ ನಿವಾರಣೆಯಾಗಬೇಕು, ಮತಾಂತರದ ಫ್ಯಾಕ್ಟರಿಗಳೂ ತೊಲಗಬೇಕು ವೇದ, ಉಪನಿಷತ್ತು, ಪುರಾಣ ಮತ್ತು ಹಿಂದೂ ಧರ್ಮದ ಹೆಸರಿನಲ್ಲಿರುವ ಎಲ್ಲ ಪವಿತ್ರ ಗ್ರಂಥಗಳನ್ನೂ ಒಪ್ಪುತ್ತೇನೆ ಎಂದು 1921ರಲ್ಲಿ ಯಂಗ್‌ ಇಂಡಿಯಾದಲ್ಲಿ ಬರೆದ ಮಹಾತ್ಮಾ ಗಾಂಧೀಜಿಯವರೇ, ‘‘ಈ ಧರ್ಮಗ್ರಂಥಗಳಲ್ಲಿ ಅಸ್ಪೃಶ್ಯತೆ ಎಂಬುದಕ್ಕೆ ದೈವಿಕ ಪ್ರಮಾಣಗಳು ಇವೆ ಎಂದಾದರೆ, ಈ ಭೂಮಿಯ ಮೇಲಿನ ಯಾವ ಶಕ್ತಿಯೂ ನನ್ನನ್ನು ಹಿಂದೂ ಧರ್ಮಕ್ಕೆ ಬಂಧಿಸಿಡಲಾರದು. ಈ ಇಡೀ ಧರ್ಮವನ್ನೇ ನಾನು ಕೊಳೆತ ಹಣ್ಣೊಂದನ್ನು ಹೊರ ಬಿಸಾಡುವಂತೆ ಎಸೆಯುತ್ತೇನೆ,’’ ಎಂದು 1934ರ ಜನವರಿ 26ರಂದು ತಾವು […]

Read More

ಮತಾಂಧತೆ ಕೊನೆಗೊಳ್ಳಲಿ, ಮಾನವತೆ ಮೇಳೈಸಲಿ

  ವೈವಿಧ್ಯತೆಯನ್ನು ಕಾಯ್ದುಕೊಳ್ಳುವ, ಪರಸ್ಪರರನ್ನು ಗೌರವಿಸುವ ಸಹಜ ಆಶಯಕ್ಕೆ ಮತಾಂತರ ದೊಡ್ಡ ಹೊಡೆತ.   ರೋಮನ್ನರು ಜೆರುಸಲೇಂ ಮೇಲೆ ಆಕ್ರಮಣ ನಡೆಸಿ, ಹತ್ಯಾಕಾಂಡಕ್ಕೆ ಇಳಿದಾಗ ಯಹೂದಿಗಳು ತಮ್ಮ ಪ್ರಾಣ ಉಳಿಸಿಕೊಳ್ಳಲು ತಾವಿದ್ದ ನೆಲವನ್ನು ತೊರೆಯಲೇಬೇಕಿತ್ತು. ಅನಿವಾರ್ಯವಾಗಿ ಗುಂಪು ಗುಂಪಾಗಿ ದೇಶಾಂತರ ಹೊರಟರು. ಆಗ ಯಹೂದಿಗಳ ಒಂದು ತಂಡ ಭಾರತದ ಕೇರಳವನ್ನು ಅರಸಿ ಬಂತು. ಆ ವೇಳೆಗಾಗಲೇ, ಯಹೂದಿಗಳು ಕೇರಳದ ಜತೆ ಅನೇಕ ವರ್ಷಗಳಿಂದ ಸಮುದ್ರ ಮಾರ್ಗದ ಮೂಲಕ ವ್ಯಾಪಾರ-ವ್ಯವಹಾರದ ಸಂಬಂಧ ಹೊಂದಿದ್ದರು. ಹಾಗಾಗಿ ಭಾರತದಲ್ಲಿ ಆಸರೆ ಸಿಗಬಹುದು, […]

Read More

ಬಲವಂತದ ಮತಾಂತರದಿಂದ ಭಾರತದ ಬಹುತ್ವಕ್ಕೆ ಆಪತ್ತು

ಮತಾಂತರ ನಿಷೇಧ ಕಾನೂನನ್ನು ಬಹುತ್ವದ ನೆಲೆಯಲ್ಲಿ ನೋಡುವ ಅಗತ್ಯವಿದೆ ಪ್ರತಿ ವರ್ಷ ದೇಶಾದ್ಯಂತ ನವರಾತ್ರಿ ಉತ್ಸವವನ್ನು ಎಲ್ಲೆಲ್ಲೂ ಸಂಭ್ರಮದೊಂದಿಗೆ ಆಚರಿಸಲಾಗುತ್ತದೆ. ಆದರೆ, ಎಲ್ಲ ಕಡೆಯೂ ನವರಾತ್ರಿಯ ಸ್ವರೂಪ, ರೀತಿ ನೀತಿ, ಆಚರಣಾ ವಿಧಾನ ಒಂದೇ ರೀತಿ ಇರುವುದಿಲ್ಲ. ಕರ್ನಾಟಕದ ಹಳೆ ಮೈಸೂರು ಭಾಗಗಳಲ್ಲಿ ದಸರಾ ಎಂಬ ಹೆಸರಿನಲ್ಲಿ ದೇವಿಯ ಆರಾಧನೆ ನಡೆಯುತ್ತದೆ. ಶರನ್ನವರಾತ್ರಿಯಲ್ಲಿ ಮನೆ ಮನೆಯಲ್ಲಿ ಗೊಂಬೆಗಳನ್ನು ಒಪ್ಪ ಓರಣವಾಗಿ ಜೋಡಿಸಿ ಮೈಸೂರು ಜನ ಖುಷಿ ಪಡುತ್ತಾರೆ. ಕರ್ನಾಟಕದ ಇತರೆ ಭಾಗಗಳಲ್ಲಿ ನವರಾತ್ರಿಯ 9 ದಿನ ದೇವಿ […]

Read More

ವಿಗ್ರಹ ಭಂಜನೆಯಲ್ಲ, ಜನಪ್ರೀತಿಯ ಹೊಸ ವಿಗ್ರಹ ನಿರ್ಮಿಸಿ

ಆಧುನಿಕ ಭಾರತ ಎದುರಿಸುತ್ತಿರುವ ಸವಾಲುಗಳಿಗೆ ಪರಿಹಾರ ಸೂಚಿಸುವ ಅಜೆಂಡಾ ಬೇಕು ಶ್ರೀಕೃಷ್ಣನ ಜನ್ಮಭೂಮಿ ಮಥುರಾದಲ್ಲೂ ಅಯೋಧ್ಯೆಯ ಮಾದರಿಯಲ್ಲಿ ಭವ್ಯ ಮಂದಿರ ನಿರ್ಮಾಣ ಮಾಡುತ್ತೇವೆ ಎಂದು ಉತ್ತರ ಪ್ರದೇಶ ಉಪಮುಖ್ಯಮಂತ್ರಿ ಕೇಶವ ಪ್ರಸಾದ ಮೌರ್ಯ ಅಧಿಕೃತವಾಗಿಯೇ ಟ್ವೀಟ್‌ ಮೂಲಕ ಘೋಷಣೆ ಮಾಡಿದ್ದಾರೆ. ಅಯೋಧ್ಯೆ ಬಳಿಕ ಮಥುರಾದೆಡೆಗೆ ನಮ್ಮ ಪಯಣ ಎಂದು ಸಂಘ-ಪರಿವಾರ ಮೊದಲಿನಿಂದಲೂ ಹೇಳುತ್ತಲೇ ಇದೆ. ಆದರೆ, ಉತ್ತರ ಪ್ರದೇಶ ಸರಕಾರದಲ್ಲಿ ಅಧಿಕೃತ ಹೊಣೆ ಹೊಂದಿರುವ ಒಬ್ಬ ಜವಾಬ್ದಾರಿಯುತ ಮಂತ್ರಿಯೇ ಇಂಥದ್ದೊಂದು ಹೇಳಿಕೆ ನೀಡಿರುವುದು ವಿಶೇಷ.ಪರಿಣಾಮ, ಜಗತ್ತಿಗೆ ಜೀವನ […]

Read More

ನ ಖಾನೇ ದೂಂಗಾ ಸಾಕಾರ ಆಗುವುದು ಯಾವಾಗ?

ಭ್ರಷ್ಟರ ಬೇನಾಮಿ ಆಸ್ತಿಯನ್ನು ಸರಕಾರವೇಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬುದು ಕುತೂಹಲ! ‘ನ ಖಾನೇ ದೂಂಗಾ’ ಸಾಕಾರ ಆಗುವುದು ಯಾವಾಗ?ಭ್ರಷ್ಟರ ಬೇನಾಮಿ ಆಸ್ತಿಯನ್ನು ಸರಕಾರವೇಕೆ ಮುಟ್ಟುಗೋಲು ಹಾಕಿಕೊಳ್ಳುವುದಿಲ್ಲ ಎಂಬುದು ಕುತೂಹಲ!– ಹರಿಪ್ರಕಾಶ್‌ ಕೋಣೆಮನೆನಮ್ಮ ರಾಜ್ಯದಲ್ಲಿ ಲೋಕಾಯುಕ್ತ ಎನ್ನುವ ಸಂಸ್ಥೆಯೊಂದಿತ್ತು. ಅದು ದುಷ್ಟರ ಪಾಲಿಗೆ ಸಿಂಹಸ್ವಪ್ನವಾಗಿತ್ತು. ಪಂಚಾಯಿತಿ ಗುಮಾಸ್ತನೆಂಬ ಎಸ್‌ಎಸ್‌ಎಲ್‌ಸಿ ಕಾರಕೂನನಿಂದ ಹಿಡಿದು ವಿಧಾನಸೌಧದ ಸಚಿವರ ಆಪ್ತ ಕಾರ್ಯದರ್ಶಿ ಎಂಬ ಐಎಎಸ್‌ ಕಾರಕೂನರವರೆಗೆ- ಎಲ್ಲರನ್ನೂ ಬಲಿ ಹಾಕುತ್ತಿತ್ತು. ಅವರೊಬ್ಬರಿದ್ದರು, ವೆಂಕಟಾಚಲ ಎಂಬ ನ್ಯಾಯಮೂರ್ತಿಗಳು. ಅವರು ಲೋಕಾಯುಕ್ತರಾದ ಬಳಿಕ, ಎಲ್ಲ ಕಡೆ […]

Read More

ವಿಚಾರನಿಷ್ಠೆ ಮರೆತವರ ಪಕ್ಷಾಂತರ ಅವಾಂತರ

ಆಯಾರಾಮ್ ಗಯಾರಾಮ್‌ಗಳ ದೆಸೆಯಿಂದ ಪ್ರಬುದ್ಧ ರಾಜಕಾರಣದ ಅಣಕ ಅವರ ಹೆಸರು ಗಯಾಲಾಲ್. ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯಿಸಿದ್ದ ಶಾಸಕ. ಅಕಾರದಲ್ಲಿರುವ ಪಕ್ಷದ ಜತೆಗೆ ಇರಬೇಕು, ಸದಾಕಾಲ ಅಕಾರದಲ್ಲಿಯೇ ಇರಬೇಕು ಎನ್ನುವ ಹಪಾಹಪಿಯಲ್ಲಿ ಕಾಂಗ್ರೆಸ್‌ನಿಂದ ಜನತಾ ಪಾರ್ಟಿಗೆ ಜಿಗಿದರು. ಅಲ್ಲೇಕೊ ವಾತಾವರಣ ಸರಿಯಾಗಲಿಲ್ಲ, ಮತ್ತೆ ಕಾಂಗ್ರೆಸಿಗೆ ಬಂದರು. ಮತ್ತೆ ಕೇವಲ ೯ ದಿನದಲ್ಲಿ ಜನತಾ ಪಾರ್ಟಿಗೆ ಜಿಗಿದರು. ಸಂಯುಕ್ತ ರಂಗವನ್ನು ಬಿಟ್ಟು ಮತ್ತೆ ಕಾಂಗ್ರೆಸಿನೆಡೆಗೆ ಪ್ರಯಾಣ ಮಾಡಿದರು. ಹೀಗೆ ಕೇವಲ ೧೫ ದಿನದ ಅವಯಲ್ಲಿ ಪಕ್ಷಾಂತರಗಳನ್ನು ಮಾಡಿದರು […]

Read More

ಮುಂದಿನ ನೇರ ಹಣಾಹಣಿಗೆ ಉಪಸಮರ ದಿಕ್ಸೂಚಿ

ಹಾನಗಲ್ ಸೋಲು ಸಿಎಂ ಬೊಮ್ಮಾಯಿಗೆ ಆಘಾತ | ಪರಾಭವಗೊಂಡ ಜೆಡಿಎಸ್ ತ್ರಿಕೋನ ಸ್ಪರ್ಧೆಯಿಂದಲೂ ಔಟ್? ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಚ್ಚರಿ ಅಲ್ಲ, ಆದರೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ೩೦ ಸಾವಿರಕ್ಕೂ ಅಕ ಮತಗಳ ಅಂತರದಿಂದ ಗೆದ್ದಿರುವುದು ಅನಿರೀಕ್ಷಿತ ಮತ್ತು ಬಿಜೆಪಿ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಸಹಜವಾಗಿ ಕಾರಣವಾಗಿದೆ. ಆದರೆ, ಪ್ರತಿಷ್ಠಿತ ಹಾನಗಲ್ ಕ್ಷೇತ್ರದ ಸೋಲು ಬಿಜೆಪಿ ಪಾಳಯದಲ್ಲಿ ಸಿಂದಗಿ ಕ್ಷೇತ್ರದ ಅಭೂತಪೂರ್ವ ಗೆಲುವಿನ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top