ಹಾನಗಲ್ ಸೋಲು ಸಿಎಂ ಬೊಮ್ಮಾಯಿಗೆ ಆಘಾತ | ಪರಾಭವಗೊಂಡ ಜೆಡಿಎಸ್ ತ್ರಿಕೋನ ಸ್ಪರ್ಧೆಯಿಂದಲೂ ಔಟ್?
ಸಿಂದಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಅಚ್ಚರಿ ಅಲ್ಲ, ಆದರೆ ಅದೇ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ ೩೦ ಸಾವಿರಕ್ಕೂ ಅಕ ಮತಗಳ ಅಂತರದಿಂದ ಗೆದ್ದಿರುವುದು ಅನಿರೀಕ್ಷಿತ ಮತ್ತು ಬಿಜೆಪಿ ಪಾಳಯದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲು ಸಹಜವಾಗಿ ಕಾರಣವಾಗಿದೆ. ಆದರೆ, ಪ್ರತಿಷ್ಠಿತ ಹಾನಗಲ್ ಕ್ಷೇತ್ರದ ಸೋಲು ಬಿಜೆಪಿ ಪಾಳಯದಲ್ಲಿ ಸಿಂದಗಿ ಕ್ಷೇತ್ರದ ಅಭೂತಪೂರ್ವ ಗೆಲುವಿನ ಖುಷಿಯನ್ನೂ ಅನುಭವಿಸಲಾಗದ ಸಂದಿಗ್ಧಕ್ಕೆ ದೂಡಿದೆ.
ಹಾನಗಲ್ ಏಕೆ ಮುಖ್ಯ?
ಬಿಜೆಪಿ ಹಾನಗಲ್ ಕ್ಷೇತ್ರವನ್ನು ಗೆದ್ದುಕೊಳ್ಳುವುದು ಹಲವು ಕಾರಣಗಳಿಗೆ ಪ್ರಮುಖವಾಗಿತ್ತು. ಬಿಜೆಪಿ ಹಿರಿಯ ನಾಯಕ ಸಿಎಂ ಉದಾಸಿ ನಾಲ್ಕು ಬಾರಿ ಪ್ರತಿನಿದ್ದರು. ಒಂದು ರೀತಿಯಲ್ಲಿ ಹಾನಗಲ್ ಬಿಜೆಪಿಯ ಗಂಡುಮೆಟ್ಟಿನ ಕ್ಷೇತ್ರ ಎಂದರೆ ತಪ್ಪಲ್ಲ. ಎರಡನೆಯದು ಲಿಂಗಾಯತ ಮತದಾರರೇ ಈ ಕ್ಷೇತ್ರದಲ್ಲಿ ನಿರ್ಣಾಯಕವಾಗಿದ್ದೂ ಬಿಜೆಪಿ ಸೋತಿರುವುದು. ಮೂರನೆಯದು ಎಲ್ಲದಕ್ಕಿಂತ ಪ್ರಮುಖವಾಗಿ ಗಮನಿಸಬೇಕಾದ ಅಂಶ. ಅದು ಸಿಎಂ ಬಸವರಾಜ ಬೊಮ್ಮಾಯಿ ಅವರ ತವರು ಜಿ ಮತ್ತು ಅವರು ಪ್ರತಿನಿಸುವ ಶಿಗ್ಗಾಂವಿಗೆ ಹೊಂದಿಕೊಂಡಿರುವ ಕ್ಷೇತ್ರ.
ಬೊಮ್ಮಾಯಿಗೆ ಪ್ರತಿಷ್ಠೆ ಪ್ರಶ್ನೆ ಏಕೆ?
ಸಿಎಂ ಬೊಮ್ಮಾಯಿ ಚಾಣಾಕ್ಷ ರಾಜಕಾರಣಿ ಎಂಬುದರಲ್ಲಿ ಎರಡು ಮಾತಿಲ್ಲ. ಅವರ ರಾಜಕೀಯ ಅನುಭವಕ್ಕೆ ಸುದೀರ್ಘ ಸಕ್ರಿಯ ರಾಜಕಾರಣದ ಅನುಭವ ಹಾಗು ಕೌಟುಂಬಿಕ ಹಿನ್ನೆಲೆ ಎರಡೂ ಕಾರಣ. ಆದರೆ ಬೊಮ್ಮಾಯಿ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷದ ನೇತೃತ್ವ ವಹಿಸಿಕೊಂಡು ಜನಾದೇಶ ಪಡೆದು ಮುಖ್ಯಮಂತ್ರಿ ಆದವರಲ್ಲ. ಸಾಂದರ್ಭಿಕವಾಗಿ ಸಿಎಂ ಪಟ್ಟ ಅಲಂಕರಿಸಿರುವವರು. ಸಾಲದ್ದಕ್ಕೆ ಬೊಮ್ಮಾಯಿ ಅವರ ನಾಯಕತ್ವದ ಮುಂದಿನ ಸಾರ್ವತ್ರಿಕ ಚುನಾವಣೆ ಎದುರಿಸಲಾಗುವುದೆಂದು ಬಿಜೆಪಿ ಉನ್ನತ ನಾಯಕರು ಹೇಳುತ್ತಿzರೆ. ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ಸೆಮಿ ಫೈನಲ್ ರೀತಿಯಲ್ಲಿ ಈಗ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಹಾನಗಲ್ ಕ್ಷೇತ್ರವನ್ನೂ ಗೆದ್ದುಕೊಂಡುಬಿಟ್ಟಿದ್ದರೆ ಬೊಮ್ಮಾಯಿ ನಾಯಕತ್ವಕ್ಕೆ ಹೊಸ ಮೆರುಗು, ಹೊಸ ಶಕ್ತಿ ಬರುತ್ತಿತ್ತು. ಆ ದೃಷ್ಟಿಯಿಂದ ನೋಡಿದರೆ ಹಾನಗಲ್ ಕ್ಷೇತ್ರದ ಸೋಲು ಬೊಮ್ಮಾಯಿ ನಾಯಕತ್ವಕ್ಕೆ ರಾಜಕೀಯವಾಗಿ ದೊಡ್ಡ ಆಘಾತವನ್ನೇ ನೀಡಿದೆ.
ಲಿಂಗಾಯತ ಮತಬ್ಯಾಂಕ್ ವಿಚಾರ
ಹಾನಗಲ್ ಕ್ಷೇತ್ರದ ಬಿಜೆಪಿ ಸೋಲನ್ನು ಈ ಕೋನದಿಂದಲೂ ನೋಡಬೇಕಿದೆ. ಮಧ್ಯ ಕರ್ನಾಟಕಕ್ಕೆ ಹೊಂದಿಕೊಂಡಿರುವ ಹುಬ್ಬಳ್ಳಿ ಮತ್ತು ಹಳೇ ಮುಂಬೈ ಕರ್ನಾಟಕದ ಭಾಗವಾಗಿರುವ ಹಾವೇರಿ ಸೇರಿದಂತೆ ಇತರ ಜಿಗಳು ಬಿಜೆಪಿ ಗಂಡುಮೆಟ್ಟಿನ ನೆಲವೆಂದೇ ಜನಜನಿತ. ಅದಕ್ಕೆ ಕಾರಣ ಆ ಭಾಗದ ಲಿಂಗಾಯತ ಮತ ಬ್ಯಾಂಕ್ ಬಿಜೆಪಿ ಬೆನ್ನಿಗೆ ನಿಂತಿರುವುದು. ಕೆಲ ತಿಂಗಳ ಹಿಂದೆ ಯಡಿಯೂರಪ್ಪ ಅವರನ್ನು ಬಲವಂತದಿಂದ ಸಿಎಂ ಹುzಯಿಂದ ಕೆಳಗಿಳಿಸಿದ ಬಳಿಕ ಲಿಂಗಾಯತ ಮತದಾರರು ಬಿಜೆಪಿ ವಿಷಯದಲ್ಲಿ ಮುನಿಸಿಕೊಂಡಿzರೆಂಬ ಮಾತಿತ್ತು. ಸಿಎಂ ಮತ್ತು ಸಚಿವರಾದಿಯಾಗಿ ಘಟಾನುಘಟಿಗಳ ದಂಡು ಎಲ್ಲ ರೀತಿಯ ಪ್ರಯತ್ನ ಮಾಡಿದ ನಂತರವೂ ಹಾನಗಲ್ ಕ್ಷೇತ್ರದಲ್ಲಿ ಸೋಲಾಗಿರುವುದು ಬಿಜೆಪಿ ನಾಯಕರು ಆತ್ಮವಿಮರ್ಶೆ ಮಾಡಿಕೊಳ್ಳುವಂತೆ ಮಾಡಿದೆ ಎಂದರೆ ತಪ್ಪಾಗದು.
ಕಾಂಗ್ರೆಸ್‌ಗೆ ಬೂಸ್ಟ್
ಉಪಚುನಾವಣೆ ಫಲಿತಾಂಶ ಮುಂದಿನ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಅಲ್ಲ ಎಂದು ಎಲ್ಲ ಪಕ್ಷಗಳು ಹೇಳುತ್ತಿರುವುದು ನಿಜವೇ ಆದರೂ, ಸಿಂದಗಿ ಕ್ಷೇತ್ರದಲ್ಲಿ ಕಳೆದ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಕಾಂಗ್ರೆಸ್ ಈ ಸಲ ೬೦ ಸಾವಿರಕ್ಕೂ ಹೆಚ್ಚು ಮತ ಪಡೆದು ಎರಡನೇ ಸ್ಥಾನಕ್ಕೆ ಪ್ರಮೋಶನ್ ಪಡೆದಿರುವುದು ಹಾಗೂ ಹಾನಗಲ್ ಕ್ಷೇತ್ರದಲ್ಲಿ ವಿಜಯದ ಪತಾಕೆ ಹಾರಿಸಿರುವುದು ಮುಂದಿನ ಸಾರ್ವತ್ರಿಕ ಚುನಾವಣೆ ದೃಷ್ಟಿಯಿಂದ ಆ ಪಕ್ಷಕ್ಕೆ ಟಾನಿಕ್ ನೀಡಿದ ಎಂದೇ ವಿಶ್ಲೇಷಿಸಬೇಕಾಗುತ್ತದೆ.
ನೇರಾನೇರ ಸ್ಪರ್ಧೆ
ಈ ಉಪಚುನಾವಣೆ ಫಲಿತಾಂಶದಿಂದ ಇನ್ನೂ ಒಂದು ಸಂದೇಶ ರವಾನೆ ಆಗಿದೆ, ಅದೆಂದರೆ ಇನ್ನು ಮುಂದೆ ರಾಜ್ಯದ ಚುನಾವಣೆ ರಾಜಕಾರಣದಲ್ಲಿ ತ್ರಿಕೋನ ಪೈಪೋಟಿ ಬದಲು ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಪೈಪೋಟಿ ಉಂಟಾಗುವ ಸಾಧ್ಯತೆಯೇ ಹೆಚ್ಚು. ಉಪಚುನಾವಣೆ ನಡೆದ ಸಿಂದಗಿ ಹಾಗೂ ಹಾನಗಲ್ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ಹೀನಾಯ ಸೋಲನುಭವಿಸಿರುವುದು ಈ ತರ್ಕಕ್ಕೆ ಇಂಬು ನೀಡಿದಂತಾಗಿದೆ. ಅದರಲ್ಲೂ ಜೆಡಿಎಸ್ ಶಾಸಕರ ನಿಧನದಿಂದ ತೆರವಾದ ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಸೋಲು ಈ ವಾದಕ್ಕೆ ಹೆಚ್ಚು ಪುಷ್ಟಿ ನೀಡುವಂತಾಗಿದೆ.