ವಿಚಾರನಿಷ್ಠೆ ಮರೆತವರ ಪಕ್ಷಾಂತರ ಅವಾಂತರ

ಆಯಾರಾಮ್ ಗಯಾರಾಮ್‌ಗಳ ದೆಸೆಯಿಂದ ಪ್ರಬುದ್ಧ ರಾಜಕಾರಣದ ಅಣಕ

ಅವರ ಹೆಸರು ಗಯಾಲಾಲ್. ಹರಿಯಾಣ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯಿಸಿದ್ದ ಶಾಸಕ. ಅಕಾರದಲ್ಲಿರುವ ಪಕ್ಷದ ಜತೆಗೆ ಇರಬೇಕು, ಸದಾಕಾಲ ಅಕಾರದಲ್ಲಿಯೇ ಇರಬೇಕು ಎನ್ನುವ ಹಪಾಹಪಿಯಲ್ಲಿ ಕಾಂಗ್ರೆಸ್‌ನಿಂದ ಜನತಾ ಪಾರ್ಟಿಗೆ ಜಿಗಿದರು. ಅಲ್ಲೇಕೊ ವಾತಾವರಣ ಸರಿಯಾಗಲಿಲ್ಲ, ಮತ್ತೆ ಕಾಂಗ್ರೆಸಿಗೆ ಬಂದರು. ಮತ್ತೆ ಕೇವಲ ೯ ದಿನದಲ್ಲಿ ಜನತಾ ಪಾರ್ಟಿಗೆ ಜಿಗಿದರು. ಸಂಯುಕ್ತ ರಂಗವನ್ನು ಬಿಟ್ಟು ಮತ್ತೆ ಕಾಂಗ್ರೆಸಿನೆಡೆಗೆ ಪ್ರಯಾಣ ಮಾಡಿದರು. ಹೀಗೆ ಕೇವಲ ೧೫ ದಿನದ ಅವಯಲ್ಲಿ ಪಕ್ಷಾಂತರಗಳನ್ನು ಮಾಡಿದರು ಗಯಾಲಾಲ್. ೧೯೬೭ರಲ್ಲಿ ಇವರು ನಡೆಸಿದ ಪಕ್ಷಾಂತರದ ಅಟಾಟೋಪ ಭಾರತದ ರಾಜಕಾರಣದಲ್ಲಿ ‘ಆಯಾ ರಾಮ್ ಗಯಾ ರಾಮ್ !’ ಎಂಬ ಕುಖ್ಯಾತಿಯ ಘೋಷಣೆಯೇ ಸೃಷ್ಟಿಯಾಯಿತು. ಇದಾದ ಬಳಿಕ, ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ‘ಸಮಯ-ಸಂದರ್ಭ’ ನೋಡಿಕೊಂಡು ಹಾರುವ ಎಲ್ಲ ರಾಜಕಾರಣಿಗಳಿಗೂ ಆಯಾ ರಾಮ್, ಗಯಾ ರಾಮ್ ಪರಂಪರೆಗೆ ಸೇರಿದ ಅವಕಾಶವಾದಿ ರಾಜಕಾರಣಿಗಳು ಎಂದೇ ಈಗಲೂ ಕಾಲೆಳೆಯುತ್ತಿದ್ದೇವೆ.
“ಇತ್ತೀಚೆಗೆ ರಾಜಕಾರಣ ಕೆಟ್ಟುಹೋಗಿದೆ ಕಣ್ರೀ. ನಮ್ಮ ಕಾಲದಲ್ಲಿ ಎಂತೆಂಥಾ ಒಳ್ಳೆಯವರಿದ್ರು ಗೊತ್ತಾ,” ಎಂದು ಗತ ಇತಿಹಾಸದ ನೆನಪುಗಳ ಲೋಕದಲ್ಲಿ ಬದುಕುವವರು ನಮ್ಮಲ್ಲಿ ಹೆಚ್ಚು. ಅವರೂ ನೆನಪಿಟ್ಟುಕೊಳ್ಳಬೇಕಾದ ಸಂಗತಿ ಏನೆಂದರೆ, ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ೨೦ ವರುಷಗಳಲ್ಲಿಯೇ ಇಂಥದ್ದೊಂದು ರೋಗವನ್ನು ಗಯಾಲಾಲ್ ಮತ್ತವನ ಪರಂಪರೆಯ ಜನ ಶುರು ಮಾಡಿದ್ದರು. ಸುಮಾರು ಒಂದು ಸಾವಿರ ವರ್ಷದ ಗುಲಾಮಗಿರಿಯನ್ನು ತೊಲಗಿಸಿ ‘ಸ್ವರಾಜ್ಯ’ ಸ್ಥಾಪನೆ ಮಾಡಿಕೊಳ್ಳಬೇಕೆಂಬ ನಮ್ಮ ಸ್ವಾತಂತ್ರ್ಯ ಹೋರಾಟಗಾರರ ೪೭ರ ಬಯಕೆ, ೬೭ರ ಸುಮಾರಿಗೆ ಮಣ್ಣುಪಾಲಾಗಲು ಆರಂಭವಾಗಿತ್ತು. ನೂರಾರು ವರುಷಗಳ ಕಾಲ ಸೆಣೆಸಾಡಿದ್ದೇ ಅಕಾರ ಹಿಡಿಯಲು ಎನ್ನುವಂತಹ ಸ್ವಾರ್ಥದ ಕಳೆ ಆಗಲೇ ಚಿಗುರಿಕೊಂಡಿತ್ತು. ಹರ್ಯಾಣದ ಗಯಾಲಾಲ್ ಪ್ರಕರಣದ ನಂತರ ದೇಶದ ರಾಜಕಾರಣದಲ್ಲಿ, ಅನೇಕ ರಾಜ್ಯಗಳಲ್ಲಿ ಪಕ್ಷಾಂತರದ ಚಾಳಿ ಮುಂದುವರಿಯಿತು. ೧೯೬೭ ಹಾಗೂ ೧೯೭೧ರಲ್ಲಿ ನಡೆದ ಲೋಕಸಭೆ ಹಾಗೂ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗಳ ವೇಳೆಗೆ ಈ ಪಕ್ಷಾಂತರವೆಂಬ ಪಿಡುಗಿನ ಕಳೆ ಹೆಮ್ಮರವಾಗಿ ಬೆಳೆದು ಎಲ್ಲೆಲ್ಲೂ ಹಬ್ಬಿ ನಿಂತಿತ್ತು. ಅದರ ರೆಂಬೆ-ಕೊಂಬೆಗಳು ಭಾರತವನ್ನೇ ಆವರಿಸಿದ್ದವು !
ಒಂದು ಅಂದಾಜಿನ ಪ್ರಕಾರ, ಈ ಎರಡೂ ಚುನಾವಣೆಗಳ ಬಳಿಕ ದೇಶದ ಒಟ್ಟು ೪ ಸಾವಿರ ಶಾಸಕರ ಪೈಕಿ ಅರ್ಧದಷ್ಟು ಮಂದಿ ತಮ್ಮ ಮಾತೃ ಪಕ್ಷಗಳನ್ನು ಬದಲಾವಣೆ ಮಾಡಿದವರೇ ಆಗಿದ್ದರು.
ಇಂತಹವರನ್ನು ತಡೆದು ಪ್ರಜಾಪ್ರಭುತ್ವದ ಮರ್ಯಾದೆಯನ್ನು ಉಳಿಸಬೇಕು ಎನ್ನುವ ಕಾರಣಕ್ಕೇ ದೇಶದ ಮಹೋನ್ನತ ಸಂವಿಧಾನಕ್ಕೆ ಎರಡು ಬಾರಿ ತಿದ್ದುಪಡಿಯಾಗಿದೆ. ೧೯೬೭ರಿಂದ ಆರಂಭವಾದ ಪಕ್ಷಾಂತರ ಪಿಡುಗಿಗೆ ಅನೇಕ ಸರಕಾರಗಳು ಉರುಳಿ ಹೋದವು. ಮೊರಾರ್ಜಿ ದೇಸಾಯಿ ಅವರ ನೇತೃತ್ವದ ದೇಶದ ಮೊದಲ ಕಾಂಗ್ರೆಸೇತರ ಸರಕಾರ ಕೂಡ, ೭೬ ಸಂಸದರ ಪಕ್ಷಾಂತರದಿಂದಲೇ ಪತನವಾಯಿತು. ಅನೇಕ ರಾಜ್ಯ ಸರಕಾರಗಳು ಉರುಳಿ ಹೋದವು. ಚುನಾಯಿತ ಸರಕಾರಗಳನ್ನು ತಮ್ಮ ಸ್ವಾರ್ಥಕ್ಕಾಗಿ ಮನಬಂದಂತೆ ಕೆಡವುವ ಈ ಪಕ್ಷಾಂತರಕ್ಕೆ ಕಡಿವಾಣ ಹಾಕಬೇಕು ಎಂಬ ಕೂಗು ದೇಶಾದ್ಯಂತ ಜೋರಾಯಿತು. ಜನರ ಒತ್ತಡಕ್ಕೆ ಮಣಿದ ರಾಜೀವ್ ಗಾಂ ನೇತೃತ್ವದ ಸರಕಾರ ೧೯೮೫ರಲ್ಲಿ ಸಂವಿಧಾನದ ೫೨ನೇ ತಿದ್ದುಪಡಿ ಮೂಲಕ ಪಕ್ಷಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತಂತು. ಹೊಸದಾಗಿ ಸಂವಿಧಾನದ ೧೦ನೇ ಶೆಡ್ಯೂಲ್‌ಗೆ ಸೇರಿದ ಈ ಕಾಯಿದೆ, ಪಕ್ಷಾಂತರಕ್ಕೆ ಅನೇಕ ನಿಬಂಧನೆಗಳನ್ನು ಹೇರಿತು. ಪಕ್ಷದ ವಿಪ್ ಉಲ್ಲಂಘಿಸುವಂತಿಲ್ಲ, ಮೂಲಪಕ್ಷ ಬಿಟ್ಟು ಇನ್ನೊಂದು ಪಕ್ಷ ಸೇರುವಂತಿಲ್ಲ ಎಂಬ ಶಿಸ್ತನ್ನು ಹೆಣೆಯಲಾಯಿತು. ಜತೆಗೆ ಈ ನಿಯಮ ಮೀರಿದರೆ ಚುನಾಯಿತ ಪ್ರತಿನಿಯ ಹುದ್ದೆಯನ್ನೇ ಅನರ್ಹಗೊಳಿಸುವ ಸುಪ್ರೀಂ ಅಕಾರವನ್ನು ಸದನದ ಸ್ಪೀಕರ್‌ಗೆ ನೀಡಿತು. ಆದರೂ ಪಕ್ಷಾಂತರ ನಿಲ್ಲಲಿಲ್ಲ. ೧೯೬೭ರಲ್ಲಿ ಪಕ್ಷಾಂತರಗೊಂಡ ಈ ಪಿಡುಗಿನ ಪಿತಾಮಹ ಗಯಾಲಾಲ್‌ಗೆ ಅಕಾರವೊಂದೇ ತನ್ನ ಸ್ವಾರ್ಥದ ಗುರಿಯಾಗಿತ್ತೇನೋ! ಆದರೆ, ೧೯೮೫ರ ಬಳಿಕ ಪಿಡುಗಿಗೆ ಮದ್ದು ಕಂಡುಹಿಡಿದ ಬಳಿಕವೂ ಕಾಣಿಸಿಕೊಂಡ ಪಕ್ಷಾಂತರಿಗಳಿಗೆ, ಅಕಾರ ಮಾತ್ರವಲ್ಲ, ಕೋಟಿ ಕೋಟಿ ಹಣವೂ ಬೇಕಾಯಿತು. ಹಾಗಾಗಿ, ಶಾಸನಬದ್ಧ ಕಾಯಿದೆ ಇದ್ದರೂ ಪಕ್ಷಾಂತರ ನಿಲ್ಲಲಿಲ್ಲ. ನಿರಾಂತಕವಾಗಿ ಮುಂದುವರಿಯಿತು. ಚಿಂತೆಗೆ ಬಿದ್ದ ಪ್ರಜಾಪ್ರಭುತ್ವವಾದಿಗಳು ಕಾಯಿದೆಯನ್ನು ಮತ್ತಷ್ಟು ಬಲಗೊಳಿಸುವ ಚರ್ಚೆ ಕೈಗೆತ್ತಿಕೊಂಡರು. ನಂತರ ಅನೇಕ ಸಮಿತಿಗಳ ಶಿಫಾರಸು ಆಧರಿಸಿ ೨೦೦೩ರಲ್ಲಿ ಸಂವಿಧಾನಕ್ಕೆ ೯೧ನೇ ತಿದ್ದುಪಡಿ ತರುವ ಮೂಲಕ ಪಕ್ಷಾಂತರ ನಿಷೇಧವನ್ನು ಮತ್ತಷ್ಟು ಬಲಗೊಳಿಸಲಾಯಿತು. ಇದಾದ ಬಳಿಕವೂ, ಅಂದರೆ ಕಳೆದ ಎರಡು ದಶಕದಲ್ಲಿ ಏನಾಗುತ್ತಿದೆ ಎಂದು ನೋಡಿದರೆ, ನಿರಾಶೆಯಾಗುತ್ತದೆ. ಹಣ ಮತ್ತು ಅಕಾರಕ್ಕಾಗಿ ಆಯಾರಾಂ ಸಂತಾನ ಪಡೆ, ಪಕ್ಷಾಂತರ ನಿಷೇಧ ಕಾಯಿದೆಯಲ್ಲಿರುವ ವಿನಾಯಿತಿಗಳನ್ನು ಬಳಸಿಕೊಳ್ಳುತ್ತದೆ. ಉದಾಹರಣೆಗೆ ನಿರ್ದಿಷ್ಟ ಪಕ್ಷದ ಮೂರನೇ ಒಂದರಷ್ಟು ಚುನಾಯಿತ ಪ್ರತಿನಿಗಳು ಪಕ್ಷ ತೊರೆಯಬಹುದು!
೨೦೨೧ರಲ್ಲಿ ಪಶ್ಚಿಮ ಬಂಗಾಳದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಿಂದ ಜಯ ಗಳಿಸಿದ್ದವರು ಮುಕುಲ್ ರಾಯ್. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ರಾಯ್, ೨೦೧೭ರಲ್ಲಿ ಬಿಜೆಪಿ ಕಡೆ ವಾಲಿದ್ದರು. ೨೦೨೧ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಕಾರಕ್ಕೆ ಬರುವುದು ಖಚಿತ ಎಂದು ಭಾವಿಸಿ, ಚುನಾವಣೆಗೆ ಮೂರು ವರುಷ ಇರುವಂತೆ ಬಿಜೆಪಿಗೆ ಪಕ್ಷಾಂತರಗೊಂಡಿದ್ದರು. ೨೦೨೧ರ ಫಲಿತಾಂಶ ಮುಕುಲ್ ನಿರೀಕ್ಷೆಯಂತೆ ಆಗಲಿಲ್ಲ. ಮಮತಾ ಬ್ಯಾನರ್ಜಿ ಅವರ ಪಕ್ಷವೇ ಅಕಾರಕ್ಕೆ ಬಂತು. ಮುಕುಲ್ ರಾಯ್ ತಡಮಾಡಲಿಲ್ಲ. ಟಿಎಂಸಿ ಪಕ್ಷಕ್ಕೆ ಮರಳಿದರು. ಜತೆಗೆ, ಇನ್ನಿಬ್ಬರು ಬಿಜೆಪಿ ಶಾಸಕರನ್ನು ಟಿಎಂಸಿಗೆ ಕರೆತಂದರು!
ಈ ನಡೆಯ ವಿರುದ್ಧ ಸೊಲ್ಲೆತ್ತಿದ ಬಿಜೆಪಿ ನಾಯಕ ಸುವೇಂದು ಅಕಾರಿ, ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಈ ಎಲ್ಲರನ್ನೂ ಅನರ್ಹಗೊಳಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಹಾಗಂತ, ಸುವೇಂದು ಅಕಾರಿ ಪಕ್ಷನಿಷ್ಠೆಯ ಯೋಧ ಎಂದು ಭಾವಿಸಬೇಡಿ. ಇವರು ಕೂಡ, ತೀರಾ ಇತ್ತೀಚಿನವರೆಗೂ ಮಮತಾ ಬ್ಯಾನರ್ಜಿ ಅವರ ಆಪ್ತರೇ ಆಗಿದ್ದವರು. ಅಕಾರ ಬರುತ್ತೆ ಎಂಬ ಆಸೆಯಲ್ಲಿ ಬಿಜೆಪಿ ಸೇರಿದವರು. ಒಂದು ಹಂತದಲ್ಲಿ, ಸುವೇಂದು ಅಕಾರಿ ಕೂಡ ಮಮತಾ ಕಡೆಗೇ ತೆರಳಲಿದ್ದಾರೆ ಎಂಬ ಮಾತುಗಳು ದಟ್ಟವಾಗಿ ಕೇಳಿಬಂದವು. ಆದರೆ, ಅದಾಗಲೇ ಅನೇಕ ಶಾಸಕರನ್ನು ಕಳೆದುಕೊಂಡಿದ್ದ ಬಿಜೆಪಿ, ವಿಧಾನಸಭೆ ಪ್ರತಿಪಕ್ಷ ನಾಯಕನ ಸ್ಥಾನ ಎಂಬ ಅಕಾರ ನೀಡುವ ಮೂಲಕ ಅವರನ್ನು ಪಕ್ಷದಲ್ಲೆ ಉಳಿಸಿಕೊಳ್ಳಲು ಯಶಸ್ವಿಯಾಗಿದೆ.
ಪಶ್ಚಿಮ ಬಂಗಾಳದಿಂದ ಗೋವಾದತ್ತ ಬರೋಣ. ಚಿಕ್ಕ ಭೂಪ್ರದೇಶ ಹೊಂದಿದ್ದರೂ ಗೋವಾ ರಾಜ್ಯದಲ್ಲಿ ಬಹಳಷ್ಟು ಪಕ್ಷಾಂತರ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಬಿಜೆಪಿ, ಕಾಂಗ್ರೆಸ್ ಜತೆಗೆ ಎಂಜಿಪಿಯಂತಹ ಕೇವಲ ಒಬ್ಬರೇ ಶಾಸಕರನ್ನು ಹೊಂದಿರುವ ಪಕ್ಷಗಳು ರಾಜ್ಯ ರಾಜಕಾರಣವನ್ನು ಅಲುಗಾಡಿಸುತ್ತವೆ. ರಾಷ್ಟ್ರೀಯ ಪಕ್ಷಗಳು ಎನ್ನಿಸಿಕೊಂಡವರು ಇವರ ಮಾತು ಕೇಳುವ ಸನ್ನಿವೇಶ ನಿರ್ಮಾಣವಾಗಿದೆ.
ನೆರೆಯ ಮಹಾರಾಷ್ಟ್ರದಲ್ಲಂತೂ ಇತ್ತೀಚಿನ ದಿನಗಳಲ್ಲಿ ಜ್ವಲಂತ ಉದಾಹರಣೆಗಳು ಕಣ್ಣಮುಂದಿವೆ. ಇನ್ನೇನು ಸರಳ ಬಹುಮತಕ್ಕೆ ಬಿಜೆಪಿ ಹತ್ತಿರವಿದೆ ಎನ್ನುವಂತೆ ೨೦೧೯ರ ವಿಧಾನಸಭೆ ಚುನಾವಣೆ ಫಲಿತಾಂಶ ಬಂದ ಕೂಡಲೆ, ರಾಷ್ಟ್ರೀಯವಾದಿ ಕಾಂಗ್ರೆಸ್‌ನ(ಎನ್‌ಸಿಪಿ) ಅಜಿತ್ ಪವಾರ್ ಬಿಜೆಪಿ ಜತೆಗೆ ಕೈಜೋಡಿಸಿದರು. ನಾಟಕೀಯ ಬೆಳವಣಿಗೆಯಲ್ಲಿ ಫಡ್ನವೀಸ್ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿಯೂ ಆಯಿತು. ಸರಕಾರ ರಚನೆಯಾದ ನಂತರದ ೪೮ ಗಂಟೆಯೊಳಗೆ ರಾಜ್ಯದ ಭ್ರಷ್ಟಾಚಾರ ನಿಗ್ರಹ ದಳವು ಅನೇಕ ಪ್ರಕರಣಗಳ ವಿಚಾರಣೆಯನ್ನು ಮುಕ್ತಾಯಗೊಳಿಸಿತು. ಅದರಲ್ಲಿ, ಈ ಹಿಂದೆ ಅಜಿತ್ ಪವಾರ್ ನಿರಾವರಿ ಸಚಿವರಾಗಿದ್ದಾಗ ನಡೆಸಿದ್ದರು ಎನ್ನಲಾದ ೭೦ ಸಾವಿರ ಕೋಟಿ ರೂ. ಮೊತ್ತದ ನೀರಾವರಿ ಹಗರಣಗಳೂ ಇದ್ದವು ಎನ್ನಲಾಯಿತು. ೪೮ ಗಂಟೆ ಉಪಮುಖ್ಯಮಂತ್ರಿಯಾಗಿ ಅದರ ಫಲ ಉಂಡ ನಂತರ ರಾಜೀನಾಮೆ ನೀಡಿದರು, ಫಡ್ನವೀಸ್ ನೇತೃತ್ವದ ಬಿಜೆಪಿ ಸರಕಾರ ಪತನವಾಯಿತು. ನಂತರ ಮಾತೃಪಕ್ಷಕ್ಕೆ ವಾಪಸಾದರು.
ಅತ್ತ, ೭೦ರ ದಶಕದಿಂದ ರಾಷ್ಟ್ರೀಯವಾದ, ಹಿಂದುತ್ವವನ್ನು ಬೆಂಬಲಿಸಿಕೊಂಡು ಬಿಜೆಪಿ ಸಖ್ಯ ಹೊಂದಿದ್ದ ಶಿವಸೇನೆ, ಕಾಂಗ್ರೆಸ್ ಹಾಗೂ ಎನ್‌ಸಿಪಿ ಜತೆಗೆ ಕೈಜೋಡಿಸಿತು. ಶಿವಸೇನೆ ಸಂಸ್ಥಾಪಕ ಬಾಳ ಠಾಕ್ರೆ ಅವರು ಜೀವನದುದ್ದಕ್ಕೂ ವಿರೋಸಿಕೊಂಡು ಬಂದ ಸಿದ್ಧಾಂತ ಹಾಗೂ ಪಕ್ಷಗಳೊಂದಿಗೆ ಸೇರಿ ಶಿವಸೇನೆ ಸರಕಾರ ರಚಿಸಿತು. ಬಾಳ ಠಾಕ್ರೆ ಅವರ ಪುತ್ರ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾದರೆ, ೧೫ ವರ್ಷದಲ್ಲಿ ನಾಲ್ಕನೇ ಬಾರಿಗೆ ಅಜಿತ್ ಪವಾರ್, ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಆದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರು ನೀಡಿದ ತೀರ್ಪನ್ನು ಜನಪ್ರತಿನಿಗಳು ಗೌರವಿಸಬೇಕು. ಅದು ಅವರ ಕರ್ತವ್ಯ. ಹಾಗಾಗಿಯೇ ಒಮ್ಮೆ ಒಂದು ಪಕ್ಷದಿಂದ ಜಯಿಸಿದ ನಂತರ ನಡುವೆ ಬೇರೊಂದು ಸಿದ್ಧಾಂತ, ಪಕ್ಷದ ಜತೆಗೆ ಕೈಜೋಡಿಸುವುದನ್ನು ತಪ್ಪು ಎನ್ನಲಾಗುತ್ತದೆ. ಆದರೆ ಜನಪ್ರತಿನಿಗಳು ಇದಕ್ಕೂ ದಾರಿ ಕಂಡುಕೊಂಡಿದ್ದಾರೆ. ಶಾಸಕ ಸ್ಥಾನವನ್ನ ಹೊಂದಿ ಮತ್ತೊಂದು ಪಕ್ಷಕ್ಕೆ ಹೋದರೆ ತಾನೆ ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯವಾಗುತ್ತದೆ? ಇಲ್ಲಿ ರಾಜೀನಾಮೆ ನೀಡಿ ಬೇರೆ ಪಕ್ಷಕ್ಕೆ ಹೋದರೆ? ಹಾಗಾಗಿಯೇ ಈಗ ಕರ್ನಾಟಕದಲ್ಲಿ ಅಸ್ತಿತ್ವದಲ್ಲಿರುವ ರಾಜ್ಯ ಸರಕಾರದ ಅಸ್ತಿತ್ವಕ್ಕೂ ಕಾರಣರಾದ ೧೭ ಶಾಸಕರು ಕಾಂಗ್ರೆಸ್‌ನಿಂದ ಬಂದವರು. ಅವರು ಅನುಸರಿಸಿದ್ದೂ ಇದೇ ಮಾರ್ಗವನ್ನು. ಇನ್ನೊಂದು ಪಕ್ಷಕ್ಕೆ ಬಂದು ಅಲ್ಲಿನ ಟಿಕೆಟ್ ಪಡೆದು ಚುನಾವಣೆ ಜಯಿಸಿದರೆ, ಜನರೇ ಆಯ್ಕೆ ಮಾಡಿರುತ್ತಾರೆ ಅಲ್ಲವೇ, ಹಾಗಾಗಿ ಇದು ಅಕ್ರಮ ಆಗುವುದಿಲ್ಲ. ಸದ್ಯಕ್ಕೆ ಇದನ್ನು ‘ಆಪರೇಷನ್’, ರಿವರ್ಸ್ ಆಪರೇಷನ್ ಎಂಬ ಹೆಸರಿನಲ್ಲಿ ಕರೆಯಲಾಗುತ್ತಿದೆ.
ಇತ್ತೀಚೆಗೆ ಒಂದು ಸಣ್ಣ ವಿಡಿಯೋ ನೋಡುತ್ತಿದ್ದೆ. ಯಕ್ಷಗಾನ ಪಾತ್ರಧಾರಿಗಳು ಮೋಹಿನಿ ಭಸ್ಮಾಸುರ ಪ್ರಹಸನ ಆಡುತ್ತಿರುತ್ತಾರೆ. ತನಗೆ ವಿಭೂತಿ ತಂದುಕೊಡಲೆಂದು ಭಸ್ಮಾಸುರನನ್ನು ಶಿವ ಸೃಷ್ಟಿಸುತ್ತಾನೆ. ಆದರೆ ಜನರು ಸಾಯದೆ, ಸುಡುವುದು ಕಡಿಮೆಯಾಗುವುದರಿಂದ ಬೂದಿ ಪ್ರಮಾಣವೂ ಕಡಿಮೆ ಆಗುತ್ತದೆ. ಯಾರ ತಲೆಯ ಮೇಲೆ ಕೈಯಿಟ್ಟರೆ ಅವರು ಭಸ್ಮವಾಗುವ ವರವನ್ನು ಭಸ್ಮಾಸುರನಿಗೆ ನೀಡುತ್ತಾನೆ ಶಿವ. ಆ ರಕ್ಕಸನೋ ಸ್ವತಃ ಶಿವನ ತಲೆಯ ಮೇಲೆಯೇ ಕೈಯಿಡಲು ಓಡಿಸಿಕೊಂಡು ಹೋಗುತ್ತಾನೆ. ಈ ಸಮಯದಲ್ಲಿ ವಿಷ್ಣು ಮೋಹಿನಿಯ ರೂಪದಲ್ಲಿ ಬಂದು, ಬೆರಗುಗೊಳಿಸಿ ಭಸ್ಮಾಸುರನನ್ನು ತನ್ನ ಕೈಯಿಂದಲೇ ಸಾಯುವಂತೆ ಮಾಡುತ್ತಾನೆ. ವಿಡಿಯೋ ಕೊನೆಯಲ್ಲಿ, “ಅಕಾರ ಎಂದಿಗೂ ಕೆಟ್ಟವರ ಕೈಗೆ ಹೋಗಬಾರದು. ಎಲ್ಲರೂ ಜಾಗ್ರತೆಯಿಂದ ಮತ ಚಲಾಯಿಸಿ,” ಎಂಬ ಸಂದೇಶ ನೀಡಲಾಗುತ್ತದೆ. ಹಾಗಾದರೆ ಪಕ್ಷಾಂತರ ಎನ್ನುವುದಕ್ಕೆ ಜನರೇ ಆಶೀರ್ವಾದ ನೀಡಲು ನಿರ್ಧರಿಸಿದ್ದಾರೆಯೇ? ಎಂಬ ಪ್ರಶ್ನೆ ಹಾಗೂ ಆತಂಕ ಮೂಡುತ್ತದೆ.
೭೦ರ ದಶಕದಲ್ಲಿ ಪಕ್ಷಾಂತರದ ಅತಿ ದೊಡ್ಡ ಫಲಾನುಭವಿ ಆಗಿದ್ದದ್ದು ಕಾಂಗ್ರೆಸ್ ಪಕ್ಷ. ಕಾಂಗ್ರೆಸ್ ಅಕಾರಕ್ಕೆ ಬಂತು ಎಂದರೆ ಕೆಲವು ರಾಜ್ಯ ಸರಕಾರಗಳು ಅಲುಗಾಡುತ್ತವೆ ಎನ್ನುವ ವಾತಾವರಣವಿತ್ತು. ಈಗಿನ ಸಂದರ್ಭದಲ್ಲಿ ಇದು ಬಿಜೆಪಿ ಕಡೆಗೆ ತಿರುಗಿದೆ. ಪಕ್ಷಾಂತರವನ್ನು ಅತ್ಯಂತ ಲೀಲಾಜಾಲವಾಗಿ ಹಾಗೂ ವೃತ್ತಿಪರವಾಗಿ ನಡೆಸುವ ಪಕ್ಷ ಎನ್ನುವ ಹಣೆಪಟ್ಟಿಯನ್ನು ಈ ಪಕ್ಷ ಕಟ್ಟಿಕೊಂಡಿದೆ. ಆಪರೇಷನ್ ಕಮಲ ಎನ್ನುವಂತಹ ಬ್ರ್ಯಾಂಡ್ ಸೃಷ್ಟಿಯಾಗಿದ್ದೇ ಈ ಬಿಜೆಪಿಯಿಂದ, ಅದೂ ನಮ್ಮ ಕರ್ನಾಟಕದಿಂದಲೇ ಎನ್ನುವುದು ದುರ್ದೈವ.
ನಿಜಕ್ಕೂ ಬಿಜೆಪಿಯಂತಹ ಕೇಡರ್ ಆಧಾರಿತ ಪಕ್ಷಕ್ಕೆ ಪಕ್ಷಾಂತರ ಎನ್ನುವುದು ಅವಶ್ಯಕತೆ ಇದೆಯೇ? ಬೇರೆ ಪಕ್ಷದಿಂದ ನಾಯಕರನ್ನು ಕರೆದುಕೊಂಡು ಬರಬೇಕು ಎನ್ನುವುದಾದರೆ ತನ್ನದೇ ಪಕ್ಷದಲ್ಲಿರುವ ಕಾರ್ಯಕರ್ತರು ಇರುವುದು ಬ್ಯಾನರ್, ಬಂಟಿಂಗ್ ಅಂಟಿಸಿ ಘೋಷಣೆ ಕೂಗಲು ಮಾತ್ರವೇ? ಬಿಜೆಪಿಯನ್ನು ಇತರೆ ಪಕ್ಷಗಳಿಗಿಂತ ಭಿನ್ನ ವಿಚಾರಧಾರೆಯ ಪಕ್ಷ ಎನ್ನುವ ಕಾಲವೊಂದಿತ್ತು. ಆದರೆ ಸತತ ಪಕ್ಷಾಂತರಗಳಿಂದಾಗಿ ಬಿಜೆಪಿ ಹಾಗೂ ಇತರೆ ಪಕ್ಷಗಳ ಕಾರ್ಯವೈಖರಿಯಲ್ಲಿ ಬಹುತೇಕ ಸಾಮ್ಯತೆ ಇದೆ. ರಾಷ್ಟ್ರೀಯ ಮಹತ್ವದ ಒಂದೆರಡು ವಿಚಾರಗಳನ್ನು ಹೊರತುಪಡಿಸಿ ಆಡಳಿತ ಕ್ರಮ, ಚುನಾವಣೆ ಎದುರಿಸುವ ರೀತಿ, ಅಕಾರಿಗಳನ್ನು ನಡೆಸಿಕೊಳ್ಳುವ ವಿಚಾರಗಳಲ್ಲಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿಯಲ್ಲಿ ಯಾವ ವ್ಯತ್ಯಾಸವೂ ಕಾಣುವುದೇ ಇಲ್ಲ. ಎಲ್ಲ ಪಕ್ಷಗಳೂ ಒಂದೇ ರೀತಿ ಆದರೆ ಐದು ವರ್ಷಕ್ಕೆ ಒಮ್ಮೆ ಚುನಾವಣೆ ನಡೆಸುವ ಅವಶ್ಯಕತೆ ಏನಿದೆ? ಅವರ ಕಡೆಯವರು ಎಪ್ಪತ್ತು ವರ್ಷ ಅಕಾರ ನಡೆಸಿದ್ದಾರೆ, ನಮಗೂ ಅವಕಾಶ ನೀಡಿ ಎನ್ನುವುದೇ ಕಾರಣವಾದರೆ ಇಡೀ ಚುನಾವಣೆ ಪ್ರಕ್ರಿಯೆ ವ್ಯರ್ಥ.
ಸೈದ್ಧಾಂತಿಕ ಭಿನ್ನತೆ ಎನ್ನುವ ಅಂಶ ಕೇವಲ ಚುನಾವಣೆ ಪ್ರಚಾರಕ್ಕೆ ಸೀಮಿತವಾಗುತ್ತಿರುವ ಸಂದರ್ಭದಲ್ಲಿ ನಾವಿದ್ದೇವೆ. ಬಿಜೆಪಿ ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಸುವ ಅವಶ್ಯಕತೆ ಇದೆ. ತಾನು ಅಕಾರದಲ್ಲಿದ್ದಾಗ ಕಾಂಗ್ರೆಸ್ ವಿವಿಧ ರಾಜ್ಯ ಸರಕಾರಗಳೊಂದಿಗೆ ನಡೆದುಕೊಂಡ ರೀತಿ, ಪಕ್ಷಾಂತರಕ್ಕೆ ಉತ್ತೇಜನ ನೀಡಿದ ಕಾರಣದಿಂದಾಗಿ ಆ ಪಕ್ಷ ಇಂದು ಯಾವ ಸ್ಥಿತಿಯಲ್ಲಿದೆ ಎನ್ನುವುದು ಕಣ್ಣಿಗೆ ಕಾಣುತ್ತಿದೆ. ರಾಜಕಾರಣದಲ್ಲಿ ಅಕಾರದಲ್ಲಿರುವುದು ಅತಿ ಮುಖ್ಯ ಎನ್ನುವುದು ಸತ್ಯ. ಆದರೆ ಕಾಂಗ್ರೆಸ್ ಹಾದಿಯಲ್ಲಿ ಬಿಜೆಪಿ ಸಾಗಬಾರದು ಎಂದಾದರೆ, ಒಂದೆರಡು ಚುನಾವಣೆ ತಡವಾದರೂ ತೊಂದರೆಯಿಲ್ಲ, ಸರಿ ದಾರಿಯಲ್ಲೇ ನಡೆಯುತ್ತೇವೆ ಎನ್ನುವ ಸಂಕಲ್ಪ ತೊಡಬೇಕಿದೆ. ಬೇರೆ ಪಕ್ಷದಿಂದ ಬಂದವರಾದರೂ ಒಂದೆರಡು ವರ್ಷ ಸಂಘಟನೆಯಲ್ಲಿ ಪಳಗಿಸಿ, ಒಗ್ಗಿಸಿ, ತಮ್ಮವರನ್ನಾಗಿಸಿಕೊಂಡ ನಂತರ ಚುನಾವಣೆಗೆ ಅವಕಾಶ ನೀಡುವ ಸಂಪ್ರದಾಯ ಪಾಲಿಸಬೇಕಿದೆ.
ಇದು ಪಕ್ಷಗಳ ಏಳುಬೀಳಿನ ವಿಚಾರವಾದರೆ, ಇತ್ತ ಪಕ್ಷಾಂತರ ಹೆಚ್ಚಾಗುತ್ತಿರುವಂತೆ ಕಾಯ್ದೆಯನ್ನು ಮತ್ತಷ್ಟು ಬಿಗಿ ಮಾಡಲಾಗುತ್ತಿದೆ. ಈಗಾಗಲೆ ಎರಡು ಬಾರಿ ಸಂವಿಧಾನದ ತಿದ್ದುಪಡಿ ಕಂಡಿದ್ದರೂ ಅವ್ಯಾಹತವಾಗಿ ಪಕ್ಷಾಂತರ ನಡೆಯುತ್ತಿದೆ. ಈಗಾಗಲೆ ಶಾಸಕರ ವೈಯಕ್ತಿಕ ಅಭಿಪ್ರಾಯಗಳಿಗೆ ಬೆಲೆ ಇಲ್ಲದಂತಾಗಿದೆ. ವಿಧಾನಸಭೆ, ವಿಧಾನ ಪರಿಷತ್ತು ಹಾಗೂ ಸಂಸತ್ತಿನಲ್ಲಿ ಪಕ್ಷಗಳೂ ಹೇಳಿದ್ದಕ್ಕೆ ಶಾಸಕರು ಕೇಳಬೇಕು ಎನ್ನುವುದು ಅನಿವಾರ್ಯವಾಗಿದೆ. ಪ್ರತಿ ಮಸೂದೆ, ಪ್ರತಿ ಚುನಾವಣೆಗಳಲ್ಲೂ ವಿಪ್ ಹೊರಡಿಸಿ ಶಾಸಕರನ್ನು ನಿಯಂತ್ರಣದಲ್ಲಿ ಇರಿಸಲಾಗುತ್ತಿದೆ. ಸ್ವತಃ ಶಾಸಕರೇ ತಂದುಕೊಂಡ ಪರಿಸ್ಥಿತಿ ಇದು. ದಶಕದಿಂದ ದಶಕಕ್ಕೆ ನಮ್ಮ ಪ್ರಜಾಪ್ರಭುತ್ವ ಪ್ರಬುದ್ಧತೆಯನ್ನು ಬೆಳೆಸಿಕೊಳ್ಳಬೇಕು. ಒಂದೆಡೆ ಜನಪ್ರತಿನಿಗಳು ಎನ್ನಿಸಿಕೊಂಡವರು ಕಾನೂನಿನ ದುರ್ಬಲತೆಗಳನ್ನು ಬಳಸಿಕೊಂಡು ತಮಗಿಷ್ಟ ಬಂದಂತೆ ನಡೆಯುತ್ತಿದ್ದಾರೆ. ಇತ್ತ ಸಾಮಾನ್ಯ ಜನರು, ಅಂಥವರನ್ನು ಬೆಂಬಲಿಸುವ ಮೂಲಕ, ಪ್ರಜಾಪ್ರಭುತ್ವದ ಅಪ್ರಬುದ್ಧತೆಗೆ ಕೊಡುಗೆ ನೀಡುತ್ತಿದ್ದಾರೆಯೇ ಎನ್ನುವ ಅನುಮಾನವೂ ಇದೆ.
ಅಕಾರದ ಆಸೆ, ಹಣ ಮತ್ತು ತಪ್ಪಿ ಕಾರಣಗಳಿಗಾಗಿ ನಿಷ್ಠೆ ಬದಲಿಸುವ ಕೆಲವು ಶಾಸಕರು, ಸಂಸದರ ಪ್ರಜಾಸತ್ತಾತ್ಮಕವಲ್ಲದ ನಡೆಗಳನ್ನು ತಡೆಯಬೇಕಾದ ಅಗತ್ಯವಿದೆ ಎಂದು ಇತ್ತೀಚಿಗೆ ಸುಪ್ರೀಂ ಕೋರ್ಟ್ ಹೇಳಿದೆ. ಪಕ್ಷಾಂತರ ನಿಷೇಧ ಕಾಯಿದೆ ಜಾರಿಯಲ್ಲಿರುವ ನೆಲದಲ್ಲಿ ನ್ಯಾಯಾಲಯ ಈ ಮಾತು ಹೇಳಿದೆ ಎಂದರೆ, ಇದು ಒಂದು ರೀತಿಯಲ್ಲಿ ಕಾನೂನಿನ ಅಸಹಾಯಕತೆಯಷ್ಟೆ. ಹಾಗಾಗಿ, ಪ್ರಜಾಪ್ರಭುತ್ವವನ್ನು ಪ್ರಬುದ್ಧತೆಯತ್ತ ಕೊಂಡೊಯ್ಯಲು ಇಡೀ ಸಮಾಜ ಒಟ್ಟಾಗಿ ಆಲೋಚಿಸುವ ಅಗತ್ಯತೆ ಇದೆ ಅಲ್ಲವೇ?
ಭಾರತೀಯ ಪ್ರಜಾಪ್ರಭುತ್ವದಲ್ಲಿ ಎಲ್ಲ ರಾಜಕೀಯ ಪಕ್ಷಗಳು, ಎಲ್ಲ ರಾಜಕೀಯ ವಿಚಾರಧಾರೆಗಳು, ಎಲ್ಲ ಸಿದ್ಧಾಂತಗಳು ಸಕ್ರಿಯವಾಗಿರಬೇಕು, ಜೀವಂತವಾಗಿರಬೇಕು ಎಂಬುದು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸಾಗಿತ್ತು. ಅಂತೆಯೇ, ಸ್ವಾತಂತ್ರ್ಯ ಬಳಿಕ ರಚನೆಯಾದ ನೆಹರು ಮಂತ್ರಿಮಂಡಲದಲ್ಲಿ ಎಲ್ಲ ಪಕ್ಷಗಳ ಮುಖಂಡರೂ ಇದ್ದರು. ೧೯೫೧ರ ಮೊದಲ ಚುನಾವಣೆ ಬಳಿಕ ಕಾಂಗ್ರೆಸ್ ಜನಾದೇಶದ ಮೂಲಕ ಅಕಾರಕ್ಕೆ ಬಂದರೂ, ನೆಹರು ಅವರು ಪ್ರಬುದ್ಧ ಪ್ರತಿಪಕ್ಷಗಳ ಮುಖಂಡರೂ ಸಂಸತ್‌ಗೆ ಇರಲಿ ಎಂದೇ ಭಾವಿಸಿದ್ದರು. ಅಂತೆಯೇ ಅಟಲ್ ಬಿಹಾರಿ ವಾಜಪೇಯಿ ಅವರ ರ್ಸ್ಪಸಿದ್ದ ಲೋಕಸಭಾ ಕ್ಷೇತ್ರಕ್ಕೆ ನೆಹರು ಚುನಾವಣಾ ಪ್ರಚಾರಕ್ಕೆ ಹೋಗಿರಲಲ್ಲವಂತೆ

 

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top