ಕಾಶಿಯ ಜ್ಞಾನವಾಪಿ ಮಸೀದಿಯ ಆವರಣದಲ್ಲಿ 31 ವರ್ಷದ ನಂತರ ಪೂಜೆ ನಡೆಯುತ್ತಿದ್ದಂತೆಯೇ ದೇಶಾದ್ಯಂತ ಹಿಂದೂಗಳಲ್ಲಿ ಸಂಚಲನ ಸೃಷ್ಟಿಯಾಗಿದೆ. ಅಯೋಧ್ಯೆಯ ರೀತಿಯಲ್ಲೇ ಕಾಶಿಯಲ್ಲೂ ವಿಶ್ವೇಶ್ವರನ ಭವ್ಯ ಮಂದಿರವನ್ನು ಕಾಣಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ. ********************** 1992ರ ಡಿಸೆಂಬರ್ 6ರಂದು ಅಯೋಧ್ಯೆಯಲ್ಲಿ ಬಾಬರಿ ಕಟ್ಟಡ ಧ್ವಂಸವಾಯಿತು. ಕರಸೇವಕರು ತಮ್ಮ ಕರಗಳಿಂದಲೇ ಕಲ್ಲು, ಕಬ್ಬಿಣ ಹಿಡಿದು ಮೂರು ಗುಮ್ಮಟಗಳನ್ನು ಕೆಡವಿದರು. ಅಂದು ಕರಸೇವೆಯ ಎಚ್ಚರಿಕೆ ನೀಡಿ ಸರ್ಕಾರವನ್ನು ಬಗ್ಗಿಸಲು ಜನರನ್ನು ಹುರಿದುಂಬಿಸಿದ್ದ ನಾಯಕರು ಜನರನ್ನು ನಿಯಂತ್ರಿಸಲು ಸತತ ಪ್ರಯತ್ನ ನಡೆಸಿದರು. ಆದರೆ ನಾಯಕರ […]
Read More
ಕಾಂಗ್ರೆಸ್ ಮನಸ್ಸು ಮಾಡಿದರೆ ಮುಂದೊಂದು ದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಬಹುದು. ಆದರೆ, ಕಾಂಗ್ರೆಸ್‌ಗೆ ರಾಮನನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ, ರಾಮ ಈ ದೇಶದ ಕಣಕಣದಲ್ಲಿ ಬೆರೆತುಹೋಗಿದ್ದಾನೆ. ————– ಭಾರತದಲ್ಲಿ ಪ್ರಜಾಪ್ರಭುತ್ವ (democracy) ವ್ಯವಸ್ಥೆ ಹೊಸದಲ್ಲ, ಅದರ ಈಗಿನ ಸ್ವರೂಪವಷ್ಟೆ ಹೊಸತು. ಅನಾದಿಕಾಲದಿಂದಲೂ ಭಾರತದಲ್ಲಿ ಪ್ರಜಾತಾಂತ್ರಿಕ ಸಂಸ್ಥೆಗಳು, ಪ್ರಜೆಗಳನ್ನು ಆಲಿಸುವ ವ್ಯವಸ್ಥೆ ಇದ್ದೇ ಇದೆ ಎನ್ನುವುದನ್ನು ಈ ಸರಣಿಯ ಮೊದಲ ಲೇಖನದಲ್ಲಿ ಚರ್ಚಿಸಿದೆವು. ಇಲ್ಲಿನ ಮುಸಲ್ಮಾನರ ಪೂರ್ವಜರೂ ಹಿಂದೂಗಳೇ ಆಗಿರುವುದರಿಂದ, ನೆಮ್ಮದಿಯ ಜೀವನಕ್ಕೆ ಮುಂದಾಗೋಣ ಎಂಬ ಆಲೋಚನೆ […]
Read More
2022ರಲ್ಲಿ ನಾಗಪುರದಲ್ಲಿ ನಡೆದ ರಾಷ್ಟ್ರೀಯ ಸ್ವಯಂಸೇವಕ ಸಂಘದ ತೃತೀಯ ವರ್ಷ ಸಮಾರೋಪ ಕಾರ್ಯಕ್ರಮದಲ್ಲಿ ಸರಸಂಘಚಾಲಕರಾದ ಡಾ. ಮೋಹನ್ ಭಾಗವತ್ ಅವರು ಹೇಳಿದ ಮಾತು ಸಾಕಷ್ಟು ಚರ್ಚೆಯಾಗಿತ್ತು. ಅವರು ಹೇಳಿದ್ದಿಷ್ಟು: “. . .ಈಗ ಕಾಶಿಯ ಜ್ಞಾನವಾಪಿ ವಿಚಾರ ಚಲಾವಣೆಗೆ ಬಂದಿದೆ. ಇದು ಇತಿಹಾಸ, ಅದನ್ನು ಬದಲಾಯಿಸಲು ಆಗುವುದಿಲ್ಲ. ಈ ಇತಿಹಾಸ ನಾವು ನಿರ್ಮಿಸಿದ್ದೂ ಅಲ್ಲ. ಈಗ ತಮ್ಮನ್ನು ತಾವು ಹಿಂದೂ ಎಂದು ಕರೆದುಕೊಳ್ಳುವವರೂ ಮಾಡಿಲ್ಲ, ಇಂದು ತಮ್ಮನ್ನು ತಾವು ಮುಸ್ಲಿಂ ಎಂದು ಕರೆದುಕೊಳ್ಳುವವರೂ ಮಾಡಿಲ್ಲ. ಆ ಸಮಯದಲ್ಲಿ […]
Read More
ಶ್ರೀರಾಮ ನಮ್ಮವನು ಎಂದು ಅಯೋಧ್ಯೆಯ ಮುಸ್ಲಿಮರೂ ಎದೆಯುಬ್ಬಿಸಿ ಹೇಳುತ್ತಿದ್ದಾರೆ. ಕಮ್ಯುನಿಸ್ಟ್ ಇತಿಹಾಸಕಾರರ ಸುಳ್ಳು ಪ್ರಚಾರ ವ್ಯರ್ಥವಾಗುತ್ತಿದೆ. ಇದು ಬದಲಾವಣೆಯ, ಐಕಮತ್ಯದ ಗಾಳಿ. ***************************** 2019ರಲ್ಲಿ ರಾಮ ಮಂದಿರ ಕುರಿತು ಸುಪ್ರೀಂಕೋರ್ಟ್ ತನ್ನ ಐತಿಹಾಸಿಕ ಅಂತಿಮ ತೀರ್ಪು ಪ್ರಕಟಿಸಿತು. 2.7 ಎಕರೆ ವಿವಾದಿತ ಭೂಮಿಯನ್ನು ಹಿಂದೂಗಳಿಗೆ ಕೊಡಬೇಕು, ಮುಸ್ಲಿಮರು ಮಸೀದಿ ನಿರ್ಮಿಸಿಕೊಳ್ಳಲು 5 ಎಕರೆ ಜಾಗ ಕೊಡಬೇಕು ಎಂದು ತಿಳಿಸಿತು. ಈ ತೀರ್ಪಿನ ನಂತರ ದೇಶದಲ್ಲಿ ದಂಗೆಗಳಾಗುತ್ತವೆ ಎಂದು ಎಲ್ಲರೂ ಭಾವಿಸಿದ್ದರು. ಇದಕ್ಕಾಗಿ ಕೇಂದ್ರ ಸರ್ಕಾರ ದೇಶಾದ್ಯಂತ ಬಿಗಿ […]
Read More
ರಾಮಮಂದಿರವನ್ನೇನೋ ಕಟ್ಟುತ್ತಿದ್ದೇವೆ. ಆದರೆ ರಾಮರಾಜ್ಯ ಮಾಡಬೇಕಿರುವುದು ನಮ್ಮ ಮುಂದಿನ ಕೆಲಸವಾಗಬೇಕು. ರಾಮರಾಜ್ಯದ ಆಧಾರದಲ್ಲಿ ನಾವು ದೇಶವನ್ನು ಮುನ್ನಡೆಸಬೇಕು ಎಂದಕೂಡಲೆ ಹಿಂದುತ್ವವನ್ನು ಹೇರಲಾಗುತ್ತಿದೆ ಎಂದೆಲ್ಲ ಗುಲ್ಲೆಬ್ಬಿಸುವ ಅಗತ್ಯವಿಲ್ಲ.*********************ಭಾರತಕ್ಕೆ ಸ್ವಾತಂತ್ರ್ಯ ನೀಡಬೇಕೆಂದು ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ನಿರ್ಣಯ ಮಂಡಿಸಿದಾಗ ಇದಕ್ಕೆ ವಿನ್‌ಸ್ಟನ್ ಚರ್ಚಿಲ್ ವಿರೋಧಿಸುತ್ತ, “ಭಾರತಕ್ಕೆ ಸ್ವಾತಂತ್ರ್ಯ ನೀಡುವುದರಿಂದ ಆ ದೇಶದ ಆಡಳಿತವು ನೀತಿವಿಹೀನರ ಕೈಗೆ ಹೋಗುವ ಸಾಧ್ಯತೆಯಿದೆ. ಕಳ್ಳಕಾಕರು ಹಾಗೂ ಲೂಟಿಕೋರರು ಅಧಿಕಾರಕ್ಕೆ ಬರಬಹುದು. ಮಾಫಿಯಾಗಳು ಸ್ವೇಚ್ಛೆಯಿಂದ ವರ್ತಿಸಬಹುದು ಹಾಗೂ ಗಾಳಿಯೊಂದನ್ನು ಬಿಟ್ಟು ಎಲ್ಲ ವಸ್ತುಗಳ ಮೇಲೆಯೂ ತೆರಿಗೆ ವಿಧಿಸಬಹುದು” […]
Read More
I look behind & after and find that all is right. in my deepest sorrows there is a soul of light ಡಿಸೆಂಬರ್ 26, 1900 ರಂದು ಬೇಲೂರು ಮಠದಿಂದ ಕುಮಾರಿ ಜೋಸೆಫೈನ್ ಮ್ಯಾಕ್ಡಾಳಿಗೆ ಸ್ವಾಮಿ ವಿವೇಕಾನಂದರು ಬರೆದ ಪತ್ರದಲ್ಲಿ ಈ ಸಾಲುಗಳಿವೆ. ಹಿಂದು ಮುಂದುಗಳನ್ನೆಲ್ಲಾ ಪರಿಶೀಲಿಸಿ ನೋಡುವಾಗ ಎಲ್ಲವೂ ಸರಿ ಇದೆ ಅಂತಲೇ ಅನಿಸುತ್ತದೆ. ನಮ್ಮ ಆಳದ ನೋವುಗಳಲ್ಲಿ ಬೆಳಕಿನ ಆತ್ಮವಿದೆ ಎಂಬುದು ಇದರ ಅರ್ಥ. ಎ ಐ […]
Read More
ನಮ್ಮಲ್ಲಿ ಬುದ್ಧಿಜೀವಿಗಳು ‘ವಸಾಹತುಶಾಹಿ ಮಾನಸಿಕತೆ’ ಕುರಿತು ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಈ ಎಲ್ಲ ಸಮಯದಲ್ಲಿ ವಸಾಹತು ಎಂದು ಬಳಸುತ್ತಿರುವುದು ಸುಮಾರು 200 ವರ್ಷ ಭಾರತವನ್ನು ಗುಲಾಮಗಿರಿಗೆ ತಳ್ಳಿದ್ದ ಬ್ರಿಟಿಷ್ ಅವಧಿಯದ್ದು ಮಾತ್ರ. ಯಾರು ಕೂಡ, ಬ್ರಿಟಿಷರಿಗಿಂತ ಹಿಂದೆ ಭಾರತದ ಮೇಲೆ ದಾಳಿ ನಡೆಸಿದ, ನಂತರ ಆಳ್ವಿಕೆ ನಡೆಸಿದ ಮುಸ್ಲಿಂ, ಪೋರ್ಚುಗೀಸರ ಕುರಿತು ‘ವಸಾಹತು’ ಎಂಬುದನ್ನು ಬಳಸುವುದಿಲ್ಲ ಏಕೆ ಎನ್ನುವುದೇ ಆಶ್ಚರ್ಯ. *********************** ಪ್ರಧಾನಿ ನರೇಂದ್ರ ಮೋದಿ 2022ರ ಸ್ವಾತಂತ್ರ್ಯ ದಿನಾಚರಣೆಯಂದು ಕೆಂಪುಕೋಟೆಯಿಂದ ಅಮೃತಕಾಲದ ಪಂಚಪ್ರಾಣಗಳ ಕರ್ತವ್ಯಗಳಲ್ಲಿ ಪ್ರಮುಖವಾದ ಘೊಷಣೆ […]
Read More
ಅಯೋಧ್ಯೆ ಎನ್ನುವುದು ಸಾಮಾನ್ಯ ದರೋಡೆಕೋರರಿಗೆ, ಕಳ್ಳ ಕಾಕರಿಗೆ ನೀಡಲು ಏನನ್ನೂ ಅಂದರೆ ಅಂತಸ್ತನ್ನು ಹೊಂದಿರಲಿಲ್ಲ. ಇಲ್ಲಿ ಇದ್ದದ್ದು ಹಿಂದೂಗಳ ಶ್ರದ್ಧೆ ಮಾತ್ರ.ಯಾವುದೇ ರಾಜ್ಯವನ್ನು ವಶಕ್ಕೆ ಪಡೆಯಬೇಕೆಂದರೆ ಅದರ ಆಡಳಿತದ ಮುಖ್ಯಕೇಂದ್ರವಾದ ರಾಜಧಾನಿಯನ್ನು ವಶಕ್ಕೆ ಪಡೆದರೆ ಸಾಕು ಎನ್ನುವುದು ಈಗಿನ ಯುದ್ಧನೀತಿಯಲ್ಲವೇ? ಹಾಗೆಯೇ ಇಡೀ ಅಯೋಧ್ಯೆ. ***************************** ಅಯೋಧ್ಯೆಯ ರಾಮಮಂದಿರ ಹಿಂದೂಗಳಿಗೆ ಏಕೆ ಬಹುಮುಖ್ಯ? ಅಲ್ಲೇ ಏಕೆ ಮಂದಿರ ನಿರ್ಮಾಣ ಮಾಡಬೇಕು? ದೇವರು ಎಲ್ಲ ಕಡೆ ಇದ್ದಾನೆ ಎಂದ ಮೇಲೆ ಎಲ್ಲಿ ಬೇಕಾದರೂ ಮಂದಿರ ನಿರ್ಮಾಣ ಮಾಡಬಹುದಲ್ಲವೇ? ಇಂತಹ […]
Read More
ಕೃತಕ ಬುದ್ಧಿಮತ್ತೆಗಿಂತಲೂ ಉನ್ನತವಾದ ಕೆಲಸ ಮಾಡುವ ಕೌಶಲ ಕಲಿಸುವ ಕೇಂದ್ರಗಳಾಗಿ ನಮ್ಮ ಶಿಕ್ಷಣ ಸಂಸ್ಥೆಗಳು ರೂಪುಗೊಳ್ಳಬೇಕು. ಅದಕ್ಕೆ ಎನ್ಇಪಿ ಸ್ಪಷ್ಟ ಮಾರ್ಗದರ್ಶನ ಮಾಡುತ್ತದೆ. ಇಂತಹ ಕೌಶಲ ಕಲಿಸುವ ಎನ್ಇಪಿಗಿಂತಲೂ ಕರ್ನಾಟಕ ಸರ್ಕಾರಕ್ಕೆ ಯುವ ನಿಧಿಯದ್ದೇ ಹೆಚ್ಚು ಚಿಂತೆಯಾಗಿದೆ *************************** ಒಂದು ಪತ್ರಿಕೆ, ಮಾಧ್ಯಮ ಸಂಸ್ಥೆಯ ಸಂಪಾದಕ ಎಂದ ಕೂಡಲೆ ಮುಖ್ಯವಾಗಿ ಅಗತ್ಯವಿರುವುದು ಭಾಷೆಯ ಕಲೆ. ಭಾಷೆಯ ಮೂಲಕ ಜನರಿಗೆ ವಿವಿಧ ಸಾಮಾಜಿಕ, ಆರ್ಥಿಕ, ಇನ್ನಿತರೆ ವಿಚಾರಗಳನ್ನು ಹೇಗೆ ಮುಟ್ಟಿಸಬೇಕು ಎಂಬ ಅರಿವು. ಹಾಗಾದರೆ ಅದಷ್ಟೇ ಸಾಕೆ? ಏಕೆ […]
Read More
ಡಿಸೆಂಬರ್ 13ರಂದು ಲೋಕಸಭೆಯ ಸದನದಲ್ಲಿ ಶೂನ್ಯವೇಳೆ ನಡೆಯುತ್ತಿದ್ದಾಗ ಸಾಗರ ಶರ್ಮಾ ಹಾಗೂ ಡಿ. ಮನೋರಂಜನ ಎಂಬಿಬ್ಬರು ಯುವಕರು ಗದ್ದಲ ಎಬ್ಬಿಸಿದರು. ವೀಕ್ಷಕರ ಗ್ಯಾಲರಿಯಿಂದ ದಿಢೀರನೆ ಜಿಗಿದು ಘೋಷಣೆ ಕೂಗಲು ಪ್ರಾರಂಭಿಸಿದರು. ಒಬ್ಬನಂತೂ ಸದಸ್ಯರ ಮೇಜಿನ ಮೇಲೆ ಮಂಗನಂತೆ ಜಿಗಿಯುತ್ತ ಸ್ಪೀಕರ್ ಕುರ್ಚಿ ಕಡೆಗೆ ಹೋಗುತ್ತಿದ್ದ. ಕೂಡಲೇ, ಸ್ಪೀಕರ್ ಸ್ಥಾನದಲ್ಲಿ ಆ ಸಮಯದಲ್ಲಿ ಆಸೀನರಾಗಿದ್ದ ಬಿಜೆಪಿ ಸದಸ್ಯ ರಾಜೇಂದ್ರ ಅಗರ್ವಾಲ ಅವರ ಕೈಗೆ ಸಂಸತ್ತಿನ ಅಧಿಕಾರಿಗಳು ಚೀಟಿಯೊಂದನ್ನು ನೀಡಿದರು. ಏನಾಗುತ್ತಿದೆ ಎನ್ನುವುದರ ಸ್ಪಷ್ಟ ಅರಿವಿಲ್ಲದ ಕಾರಣಕ್ಕೆ ಸ್ವತಃ ನಡುಗುವ […]
Read More