ಲಾಕ್‌ಡೌನ್‌ನಲ್ಲೂ ಬಾಲೆಯರಿಗೆ ವೆಡ್ಲಾಕ್ – ನಾಲ್ಕು ಕಡೆ ಮದುವೆ, 37 ವಿವಾಹಗಳಿಗೆ ಕೊನೆಯ ಕ್ಷಣದಲ್ಲಿ ತಡೆ

ವಿಕ ಬ್ಯೂರೊ ಬೆಂಗಳೂರು: ಕೊರೊನಾ ವೈರಸ್ ನಿಯಂತ್ರಣಕ್ಕೆ ಹೇರಲಾಗಿರುವ ‘ಲಾಕ್‌ಡೌನ್‌’ ಅವಧಿಯನ್ನೇ ಅವಕಾಶ ಮಾಡಿಕೊಂಡಿರುವ ಕೆಲವು ಪೋಷಕರು ಬಾಲ್ಯ ವಿವಾಹಗಳನ್ನು ನಡೆಸಿದ ಘಟನೆಗಳು ರಾಜ್ಯದ ಅಲ್ಲಲ್ಲಿ ವರದಿಯಾಗಿವೆ. ಹಲವೆಡೆ ಅಧಿಕಾರಿಗಳ ಪ್ರಯತ್ನದಿಂದಾಗಿ ಮದುವೆಗಳನ್ನು ತಡೆಯಲಾಗಿದೆ. ಕರ್ನಾಟಕ ಮಕ್ಕಳ ಹಕ್ಕು ರಕ್ಷಣಾ ಆಯೋಗ ಹಾಗೂ ಮಕ್ಕಳ ಸಹಾಯವಾಣಿಗೆ ಲಾಕ್‌ಡೌನ್‌ ಅವಧಿಯಲ್ಲಿ ಬಾಲ್ಯ ವಿವಾಹ ಕುರಿತು ಸಾಕಷ್ಟು ಕರೆಗಳು ಬಂದಿವೆ. ಕೆಲವು ಕಡೆ ಅಧಿಕಾರಿಗಳ ತಂಡ ಸಕಾಲಕ್ಕೆ ತೆರಳಿ ಬಾಲ್ಯವಿವಾಹವನ್ನು ತಡೆಯಲು ಯಶಸ್ವಿಯಾಗಿವೆ. ಸಂಪ್ರದಾಯ, ಹಿರಿಯ ಆಸೆ ಈಡೇರಿಸುವ ನೆಪ […]

Read More

ಭಾರತದಲ್ಲಿ ಹೂಡಿಕೆ ಸಾಧ್ಯತೆ – ಸೂಕ್ತ ಯೋಜನೆ, ಇಚ್ಛಾಶಕ್ತಿ ಬೇಕು

ಕೊರೊನಾ ಸೋಂಕಿನ ಕಾರಣವಾಗಿ ಚೀನಾದಿಂದ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಭಾರತಕ್ಕೆ ಸ್ಥಳಾಂತರವಾಗುವ ನಿರೀಕ್ಷೆ ಇದ್ದು, ಈ ಅವಕಾಶವನ್ನು ಬಳಸಿಕೊಳ್ಳುವಂತೆ ರಾಜ್ಯಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ. ರಾಜ್ಯಗಳಿಗೆ ಇವುಗಳ ಹೂಡಿಕೆಯನ್ನು ಆಕರ್ಷಿಸಲು ಸಮಗ್ರ ಯೋಜನೆಯನ್ನು ರೂಪಿಸಬೇಕು ಎಂದು ಮೋದಿಯವರು ತಿಳಿಸಿದ್ದಾರೆ. ಇದು ಒಂದು ಪೂರ್ವ ಸೂಚನೆ ಅಷ್ಟೇ. ಹೀಗಾಗುವ ಸಾಧ್ಯತೆ ನಿಚ್ಚಳವಾಗಿ ಕಾಣಿಸುತ್ತಿದೆ. ಯಾಕೆಂದರೆ ಇತ್ತೀಚೆಗೆ ಅಮೆರಿಕ, ಜಪಾನ್ ಮತ್ತಿತರ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ತಗ್ಗಿಸಲು ನಿರ್ಧರಿಸಿವೆ. ಜಪಾನ್ ಈಗಾಗಲೇ ಇದಕ್ಕಾಗಿ ಪ್ರತ್ಯೇಕ ಯೋಜನೆಯನ್ನು […]

Read More

ಲಾಕ್‌ಡೌನ್‌ ತೆರವಿಗೆ ನಾವು ತಯಾರಾ?

ಮೇ 3 ಹತ್ತಿರ ಬರುತ್ತಿದೆ. ಪ್ರಧಾನಿ ನರೇಂದ್ರ ಮೋದಿಯವರು ಈ ಮೊದಲು ಹೇಳಿದಂತೆ ನಮ್ಮ ಲಾಕ್‌ಡೌನ್‌ ಅಂದು ಕೊನೆಗೊಳ್ಳಬೇಕು. ಆದರೆ ನಾವು ಲಾಕ್‌ಡೌನ್‌ ತೆರವಿಗೆ ಸಂಪೂರ್ಣ ಸಜ್ಜಾಗಿದ್ದೇವಾ? ಮೇ 3ರಂದು ಲಾಕ್‌ಡೌನ್‌ ಭಾಗಶಃ ತೆರವಾಗಬಹುದು ಎಂದೇ ಎಲ್ಲರ ನಂಬಿಕೆ. ಶಾಲೆಗಳು, ಕಾಲೇಜುಗಳು ಕಾರ್ಯಾರಂಭಿಸಬಹುದು. ಆದರೆ ಬಾರ್‌ಗಳು, ಮಾಲ್‌ಗಳು, ಥಿಯೇಟರ್‌ಗಳು ಓಪನ್ ಆಗಲಿಕ್ಕಿಲ್ಲ. ಬಹಳ ಬೇಗನೆ ಲಾಕ್‌ಡೌನ್‌ ತೆರವು ಮಾಡಿದರೆ ಅದರ ಪರಿಣಾಮ ಸೋಂಕು ಅಧಿಕಗೊಂಡು ಸಾವಿರಾರು ಮಂದಿ ಸಾಯಬಹುದು. ಬಹಳ ತಡವಾಗಿ ತೆರವು ಮಾಡಿದರೂ ಆರ್ಥಿಕತೆಗೆ ಹೆಚ್ಚಿನ […]

Read More

ವಿಡಿಯೊ ಮೂಲಕ ಈರುಳ್ಳಿ ಮರ್ಯಾದೆ ಹೆಚ್ಚಿಸಿದ ರೈತ ಮಹಿಳೆ – ಫೋನ್ ಮಾಡಿ ಆತ್ಮಸ್ಥೈರ್ಯ ತುಂಬಿದ ಸಿಎಂ ಯಡಿಯೂರಪ್ಪ

– ಪ್ರಕಾಶ್ ಬಬ್ಬೂರು ಹಿರಿಯೂರು. ರೈತರು ಬೆಳೆದ ಈರುಳ್ಳಿಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ವಿಡಿಯೊ ಮಾಡಿ ಅಳಲು ತೋಡಿಕೊಂಡಿದ್ದ ರೈತ ಮಹಿಳೆ ಹಿರಿಯೂರಿನ ಕಾಟನಾಯಕಹಳ್ಳಿ ಗ್ರಾಮದ ವಸಂತ ಕುಮಾರಿ ಅವರಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಫೋನ್ ಮಾಡಿ ಆತ್ಮಸ್ಥೈರ್ಯ ತುಂಬಿದ್ದಾರೆ. ಇದರ ಬೆನ್ನಿಗೇ ಅಧಿಕಾರಿಗಳ ದಂಡೇ ಕಾಟನಾಯಕಹಳ್ಳಿಗೆ ದೌಡಾಯಿಸಿದೆ. ಈ ಮೂಲಕ, ಈ ಮಹಿಳೆ ಈರುಳ್ಳಿಗೆ ಮಾರ್ಕೆಟ್ ಸಿಗುವಂತೆ ಮಾಡಿದ್ದಾರೆ. ಪತಿ ಪ್ರತಾಪ್ ಜತೆಗೊಡಿ ವಸಂತಕುಮಾರಿ ಸುಮಾರು ಮೂರೂವರೆ ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದಾರೆ. 130 ಚೀಲ ಇಳುವರಿ […]

Read More

ಕೊರೊನಾ ಗೆಲ್ಲುವ ಹಾದಿಯಲ್ಲಿ ಕರುನಾಡು, ಸಂಘಟಿತ ಹೋರಾಟಕ್ಕೆ ಸಿಕ್ಕ ಫಲ

– ರಾಘವೇಂದ್ರ ಭಟ್, ಬೆಂಗಳೂರು: ದೇಶದಲ್ಲೇ ಮೊದಲ ಕೊರೊನಾ ಸಾವು ಸಂಭವಿಸಿದ್ದು ಕಲಬುರಗಿಯಲ್ಲಿ. ಮಾರ್ಚ್ 9ರಂದು ಮೊದಲ ಪ್ರಕರಣ ದಾಖಲಾಗಿ ಹಲವು ವಾರಗಳ ಕಾಲ ರಾಜ್ಯ ಸೋಂಕಿನ ಪ್ರಕರಣಗಳಲ್ಲಿ ಮೂರನೇ ಸ್ಥಾನದಲ್ಲಿತ್ತು. ಮುಂದಿನ ದಿನಗಳಲ್ಲಿ ಭಾರಿ ಅಪಾಯ ಕಾದಿದೆ ಎನ್ನುವ ಸಂಕೇತವೊಂದು ಆಗ ದೊರಕಿತ್ತು. ಆದರೆ, ರಾಜ್ಯದ ಸರಕಾರ, ಅಧಿಕಾರಿಗಳು ಮತ್ತು ಜನರ ಸಂಘಟಿತ ಪ್ರಯತ್ನದ ಫಲವಾಗಿ ದೇಶದಲ್ಲೇ ಕೊರೊನಾ ಅತ್ಯಂತ ನಿಯಂತ್ರಣದಲ್ಲಿರುವ ರಾಜ್ಯಗಳ ಪೈಕಿ ಕರ್ನಾಟಕ ಮುಂಚೂಣಿಯಲ್ಲಿದೆ. ಮಹಾರಾಷ್ಟ್ರ, ಗುಜರಾತ್, ದಿಲ್ಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ […]

Read More

ನೌಕರರ ಸೇವೆ ರದ್ದು ಸಲ್ಲ – ಸರಕಾರ ತನ್ನ ಸೂಚನೆ ತಾನೇ ಮುರಿಯದಿರಲಿ

ಲಾಕ್‌ಡೌನ್  ಸಂದರ್ಭದಲ್ಲಿ‌ ಯಾರನ್ನೂ ಕೆಲಸದಿಂದ ತೆಗೆಯಬಾರದು ಎಂದು ಖಾಸಗಿ ಸಂಸ್ಥೆಗಳಿಗೆ ಸೂಚಿಸಿದ್ದ ಸರಕಾರ, ತನ್ನದೇ ಕಚೇರಿಗಳಲ್ಲಿ ಕೆಲಸ ಮಾಡುತ್ತಿದ್ದ 416 ಜನರಿಗೆ ಸೇವೆಯಿಂದ ಮುಕ್ತಿ ನೀಡಿದೆ. ಮಧ್ಯಾಹ್ನ ಉಪಾಹಾರ ಯೋಜನೆಯಡಿ ರಾಜ್ಯದ ಎಲ್ಲ ಶೈಕ್ಷ ಣಿಕ ಜಿಲ್ಲೆ ಮತ್ತು ತಾಲೂಕು ಮಟ್ಟದ ಕಚೇರಿಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಮತ್ತು ಡಿ ದರ್ಜೆ ನೌಕರರನ್ನು ಮಾರ್ಚ್ 31ರ ನಂತರ ಸೇವೆಯಿಂದ ಬಿಡುಗಡೆ ಮಾಡಲಾಗಿದೆ. ಇವರೆಲ್ಲರೂ ಸುಮಾರು 12 ವರ್ಷಗಳಿಂದ ಇಲ್ಲಿ ಕೆಲಸ […]

Read More

ಈ ಘಟನೆ ಈ ಸ್ವರೂಪ ಪಡೆದುಕೊಂಡಿದ್ದೇ ಕರ್ನಾಟಕ ಪೊಲೀಸರ ವೈಫಲ್ಯಕ್ಕೆ ಮತ್ತೊಂದು ಸಾಕ್ಷಿ ಮತ್ತು ಪುರಾವೆ!!

ತಪ್ಪು ಯೋಧನದ್ದೋ ಪೊಲೀಸರದೋ? ತನಿಖೆಗೆ ಆದೇಶ – ಮಾಸ್ಕ್‌ ಧರಿಸದ ಕಮಾಂಡೊನ ಬಂಧನದ ವಿವಾದ ಸ್ಫೋಟ – ಬಂಧನ ಖಂಡಿಸಿ ಸಿಆರ್‌ಪಿಎಫ್‌ನಿಂದ ರಾಜ್ಯ ಡಿಜಿಪಿಗೆ ಪತ್ರ – ಯೋಧನ ಸೆರೆಗೆ ಕಾರಣ ಅನುಚಿತ ವರ್ತನೆ: ಪೊಲೀಸರ ಸಮರ್ಥನೆ ಬೆಳಗಾವಿ: ಚಿಕ್ಕೋಡಿ ತಾಲೂಕಿನ ಸದಲಗಾ ಗ್ರಾಮದಲ್ಲಿ ಏ.23ರಂದು ಸಿಆರ್‌ಪಿಎಫ್‌ ಕೋಬ್ರಾ ಕಮಾಂಡೋ ಘಟಕದ ಯೋಧ ಮತ್ತು ಪೊಲೀಸ್‌ ಸಿಬ್ಬಂದಿ ನಡುವಿನ ಜಟಾಪಟಿ – ಯೋಧನ ಬಂಧನ ರಾಷ್ಟ್ರಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ. ಈ ಘಟನೆಯ ತನಿಖೆ ನಡೆಸುವಂತೆ ಒತ್ತಾಯಿಸಿ ಸಿಆರ್‌ಪಿಎಫ್‌ […]

Read More

ವಿಶಿಷ್ಟ ಸಂತ ಶ್ರೀ ರಾಮಾನುಜಾಚಾರ್ಯ

ಇಂದು ಶ್ರೀ ರಾಮಾನುಜಾಚಾರ್ಯ ಜಯಂತಿ – ವಿಜಯ್‌ ಹೆಮ್ಮಿಗೆ 11ನೇ ಶತಮಾನ ಕಂಡ ಅಪರೂಪದ ಸಂತ ಶ್ರೀ ರಾಮಾನುಜರು. ಜಾತಿ, ಮತ, ವರ್ಗ, ಲಿಂಗ ಭೇದವಿಲ್ಲದೆ ಎಲ್ಲರೂ ಮುಕ್ತಿ ಮಾರ್ಗದಲ್ಲಿ ಹೋಗಬಹುದೆಂಬುದನ್ನು ಸಾರಿದವರು. ಕರ್ನಾಟಕಕ್ಕೂ ಆಗಮಿಸಿ ಸುಮಾರು 32 ವರ್ಷ ಈ ನಾಡಿನಾದ್ಯಂತ ಸಂಚರಿಸಿ ಭಕ್ತಿಯನ್ನು ಎಲ್ಲ ವರ್ಗದವರಿಗೂ ಪರಿಚಯಿಸಿದ ಸಂತರು. ಅಂದಿನ ಕಾಲದಲ್ಲೇ ಅಸ್ಪೃಶ್ಯತೆಯನ್ನು ಸಮಾಜದಿಂದ ತೊಡೆದು ಹಾಕಿದ ಪ್ರಥಮ ಆಚಾರ್ಯರು ಇವರು. ಸಮಾಜದಲ್ಲಿ ತೀರ ಹಿಂದುಳಿದ ಜನಾಂಗದವರನ್ನು ತಮ್ಮ ಹತ್ತಿರ ಕರೆದು ಅವರಿಗೆ ದೇವಾಲಯ […]

Read More

ಜ್ಞಾನಸೂರ್ಯ, ಅದ್ವಿತೀಯ ಸಂತ ಶಂಕರ

ಇಂದು ಶ್ರೀ ಶಂಕರಾಚಾರ್ಯ ಜಯಂತಿ. – ಸ್ವಾಮಿ ವೀರೇಶಾನಂದ ಸರಸ್ವತೀ, ಅಧ್ಯಕ್ಷರು, ರಾಮಕೃಷ್ಣ-ವಿವೇಕಾನಂದ ಆಶ್ರಮ, ತುಮಕೂರು.  ಭಗವಾನ್‌ ಶ್ರೀ ರಾಮಕೃಷ್ಣರು ಹೇಳುತ್ತಾರೆ: ”ಲೋಕ ಶಿಕ್ಷಣ ಕಾರ್ಯವು ಯಾರೆಂದರೆ ಅವರಿಂದ ಸಾಧ್ಯವಿಲ್ಲ. ಅದಕ್ಕೆ ಜಗನ್ಮಾತೆಯ ಲೈಸೆನ್ಸ್‌ ಬೇಕು. ಅವಳು ಹಿಂದೆ ಶುಕದೇವನಿಗೆ, ನಾರದರಿಗೆ, ಶ್ರೀ ಶಂಕರಾಚಾರ್ಯರಿಗೆ ಲೋಕಶಿಕ್ಷಣಕ್ಕೆ ಲೈಸೆನ್ಸ್‌ ನೀಡಿದ್ದಳು. ಈಗ ನರೇಂದ್ರ(ಮುಂದೆ ಸ್ವಾಮಿ ವಿವೇಕಾನಂದರು)ನಿಗೆ ನೀಡಿದ್ದಾಳೆ…” ಭಾರತೀಯ ದಾರ್ಶನಿಕರಲ್ಲಿ ಮುಕುಟಪ್ರಾಯರು, ವಿಶ್ವದ ಅತ್ಯಂತ ಶ್ರೇಷ್ಠ ವ್ಯಕ್ತಿಗಳಲ್ಲೊಬ್ಬರೆನಿಸಿದ ಶಂಕರರು ಅನುಭಾವಿ ಸಂತ, ತತ್ತ್ವಜ್ಞಾನಿ, ಭಕ್ತ, ಸಮಾಜ ಸುಧಾರಕ, ಅದ್ಭುತ ಬರಹಗಾರ, […]

Read More

ಕರ್ನಾಟಕ‌ ಸದ್ಯದಮಟ್ಟಿಗೆ ಸುರಕ್ಷಿತ…

ರಾಜ್ಯದಲ್ಲಿ ಮೂರೇ ಹೊಸ ಪ್ರಕರಣ ಬೆಂಗಳೂರು: ರಾಜ್ಯದಲ್ಲಿ ಹೊಸದಾಗಿ ಮೂವರು ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಇದರೊಂದಿಗೆ ಕೊರೊನಾ ಸೋಂಕಿತರ ಸಂಖ್ಯೆ 503ಕ್ಕೇರಿದೆ. ಬೆಂಗಳೂರು ನಗರದಲ್ಲಿ ಸೋಂಕಿತ ಮಹಿಳೆ ಭಾನುವಾರ ಕೊನೆಯುಸಿರೆಳೆದ್ದಾರೆ. ಕೆಲ ದಿನಗಳಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಭಾನುವಾರ ಮಾತ್ರ ಅತಿ ಕಡಿಮೆ ಸಂಖ್ಯೆಯಲ್ಲಿ ಪ್ರಕರಣಗಳು ಕಂಡು ಬಂದಿರುವುದು ಕರ್ನಾಟಕದಲ್ಲಿ ನಿರಾಳ ಭಾವ ಮೂಡಿಸಿದೆ. ಕಲಬುರಗಿಯಲ್ಲಿ 2 ಹಾಗೂ ದಕ್ಷಿಣ ಕನ್ನಡದಲ್ಲಿ1 ಪ್ರಕರಣ ಪತ್ತೆಯಾಗಿದೆ. ಬೆಂಗಳೂರಿನ ಹಂಪಿನಗರದ ನಿವಾಸಿ, 45 ವರ್ಷದ ಮಹಿಳೆ ಚಿಕಿತ್ಸೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top