ಗಡಿ ಮೀರಿದರೆ ಅವಘಡ

– ಲಾಕ್ ಸಡಿಲಿಕೆಯಿಂದ ಜಿಲ್ಲಾಡಳಿತಗಳಿಗೆ ಎದುರಾಗಿದೆ ಅಗ್ನಿ ಪರೀಕ್ಷೆ – ರಾಜ್ಯ, ಅಂತರ್ಜಿಲ್ಲಾ ಗಡಿ ಪ್ರವೇಶದ ಮೇಲೆ ಕಣ್ಣಿಡದಿದ್ರೆ ಡೇಂಜರ್ ವಿಕ ಬ್ಯೂರೊ ಬೆಂಗಳೂರು: ಹಸಿರು ಮತ್ತು ಕಿತ್ತಳೆ ವಲಯದಲ್ಲಿ ಮೇ 4ರಿಂದ ಜನ ಮತ್ತು ವಾಹನ ಸಂಚಾರ ನಿರ್ಬಂಧ ಸಡಿಲಗೊಳ್ಳುವುದರಿಂದ ಜನರು ಸ್ವಲ್ಪ ನಿರಾಳರಾಗಬಹುದು. ಆದರೆ, ಇದರೊಂದಿಗೆ ಅಂತಾರಾಜ್ಯ ಮತ್ತು ಅಂತರ್ಜಿಲ್ಲಾ ಸಂಚಾರಕ್ಕೂ ಅವಕಾಶ ಸಿಗುವುದರಿಂದ ಸ್ವಲ್ಪವೇ ಮೈಮರೆತರೂ ಅಪಾಯಕ್ಕೆ ಒಳಗಾಗುವ ಸಾಧ್ಯತೆ ಇದೆ. ಲಾಕ್‌ಡೌನ್‌ನ ಕಠಿಣ ನಿರ್ಬಂಧಗಳಿದ್ದ ಸಮಯದಲ್ಲೇ ಮಂಡ್ಯ ಜಿಲ್ಲೆಯೊಂದಕ್ಕೇ ಮಹಾರಾಷ್ಟ್ರದಿಂದ ಸಾವಿರಗಟ್ಟಲೆ […]

Read More

ಕೊರೊನೋತ್ತರ ಸುರಕ್ಷಿತ ಬದುಕಿಗೆ 16 ಸೂತ್ರಗಳು

– ಭವಿಷ್ಯದ ದಿನಗಳಲ್ಲಿ ನಮ್ಮ ಜೀವನ, ಚಿಂತನೆಗಳಲ್ಲೇ ಬಹುದೊಡ್ಡ ಬದಲಾವಣೆ ಆಗಬೇಕಿದೆ – ಹರಿಪ್ರಕಾಶ್ ಕೋಣೆಮನೆ. ಮಹಾಯುದ್ಧ ನಡೆದರೆ ಇಲ್ಲವೇ ಪ್ರಕೃತಿ ವಿಕೋಪದಿಂದ ರಾಷ್ಟ್ರದ ಭೌತಿಕ ಬದುಕು ಧ್ವಂಸವಾದರೆ ಮತ್ತೆ ಅಂಥ ರಾಷ್ಟ್ರಗಳು ಮರುನಿರ್ಮಾಣವಾಗಿರುವ ಕಥೆಗಳು ಇತಿಹಾಸದಲ್ಲಿ ಸಿಗುತ್ತವೆ. ಹಿರೋಷಿಮಾ, ನಾಗಸಾಕಿ ದುರಂತದಿಂದ ನಾಶವಾದ ಜಪಾನ್‌ನಿಂದ ಹಿಡಿದು, ತೀರಾ ಇತ್ತೀಚಿಗೆ ಭೂಕಂಪದಿಂದ ಸಂಪೂರ್ಣ ನೆಲಕಚ್ಚಿ ಹೋಗಿದ್ದ ನೇಪಾಳದಂಥ ರಾಷ್ಟ್ರಗಳು ಮತ್ತೆ ಎಲೆ ಎತ್ತಿ ನಿಂತಿರುವ ಬಗೆಯನ್ನು ಓದಿದ್ದೀರಿ, ಕಂಡಿದ್ದೀರಿ. ಆದರೆ, ಕೊರೊನಾ ಎಂಬ ಅಣುಗಾತ್ರದ ಅಗೋಚರ ಶತ್ರುವೊಬ್ಬ […]

Read More

ಪೊಲೀಸ್ ಇಲಾಖೆಗೆ ಕಳಂಕ – ಪ್ರತಿಷ್ಠಿತ ತಪ್ಪಿತಸ್ಥರ ತನಿಖೆಯಾಗಲಿ

ಪೊಲೀಸರ ವಿಶ್ವಾಸಾರ್ಹತೆಗೆ ಧಕ್ಕೆ ತರುವಂಥ ಘಟನೆ ಕಲಬುರಗಿಯಲ್ಲಿ ನಡೆದಿದೆ. ಪ್ರತಿಷ್ಠಿತರು ಜೂಜಾಡಿ ಸಿಕ್ಕಿಬಿದ್ದರೂ ಅವರ ವಿರುದ್ಧ ಕೇಸು ದಾಖಲಿಸದೆ ಹಣವನ್ನು ಮಾತ್ರ ವಶಪಡಿಸಿಕೊಂಡು ಹೋಗಿರುವುದು, ಡಿವಿಆರ್ ಸಾಕ್ಷಿ ನಾಶ ಮಾಡಿರುವುದು, ಇಬ್ಬರು ಸಿಪಿಐಗಳು ಪ್ರಕರಣಕ್ಕೆ ಸಂಬಂಧಿಸಿ ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡಿರುವುದು ಗೊತ್ತಾಗಿದೆ. ಲಾಕ್‌ಡೌನ್‌ ಉಲ್ಲಂಘನೆ, ಜೂಜಾಟಗಳು ಅಪರಾಧಗಳಾದರೆ, ಪ್ರತಿಷ್ಠಿತರು ಎಂಬ ಹೆಸರಿನಲ್ಲಿ ಅದನ್ನು ಮುಚ್ಚಿಹಾಕಿರುವುದು ಮತ್ತಷ್ಟು ದೊಡ್ಡ ಅಪರಾಧ. ಈ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಡ ಬಂದಿದೆ. ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ […]

Read More

ರೊಮ್ಯಾಂಟಿಕ್‌ ಯುಗ ಪುರುಷ

ರಿಷಿ ಕಪೂರ್ ನಿಧನ, ಕಂಬನಿ ಮಿಡಿದ ಭಾರತ ಮೂರು ದಶಕಗಳ ಕಾಲ ಬಾಲಿವುಡ್‌ನ ‘ರೊಮ್ಯಾಂಟಿಕ್‌ ಹೀರೋ’ ಆಗಿ ಮೆರೆದ ರಿಷಿ ಕಪೂರ್‌ ಗುರುವಾರ ಬೆಳಗ್ಗೆ ನಿಧನರಾದರು. ಎರಡು ವರ್ಷಗಳಿಂದ ರಕ್ತದ ಕ್ಯಾನ್ಸರ್(ಲುಕೇಮಿಯಾ)ನಿಂದ ಬಳಲುತ್ತಿದ್ದ ಅವರಿಗೆ 67 ವರ್ಷ ವಯಸ್ಸಾಗಿತ್ತು. ಅನಾರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬುಧವಾರ ರಾತ್ರಿಯೇ ಅವರನ್ನು ಮುಂಬಯಿನ ಎಚ್.ಎನ್.ರಿಲಯನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಬೆಳಗ್ಗೆ ಕೊನೆಯುಸಿರೆಳೆದರು. ಭಾರತೀಯ ಸಿನಿಮಾಕ್ಕೆ ಅನನ್ಯ ಕೊಡುಗೆ ನೀಡಿರುವ ಕಪೂರ್‌ ಕುಟುಂಬದ ಮೂರನೇ ತಲೆಮಾರಿನ ನಟರಾಗಿದ್ದ ರಿಷಿ […]

Read More

ಕಾರ್ಮಿಕ ವಲಯದಲ್ಲಿ ಕಾರ್ಮುಗಿಲು

ಕೊರೊನಾ ಸೋಂಕಿನ ಕಾರಣದಿಂದ ಜಗತ್ತಿನೆಲ್ಲೆಡೆ ನಿಂತು ಹೋಗಿರುವ ಎಲ್ಲ ಬಗೆಯ ಆರ್ಥಿಕ ಚಟುವಟಿಕೆಗಳಿಂದಾಗಿ, ದೊಡ್ಡ ಪ್ರಮಾಣದಲ್ಲಿರುವ ಕಾರ್ಮಿಕ ವಲಯ ತತ್ತರಿಸುತ್ತಿದೆ. ಬಡವರು, ಕೆಳ ಮಧ್ಯಮವರ್ಗ ಹಾಗೂ ಮಧ್ಯಮವರ್ಗದಲ್ಲಿ ಹಂಚಿಹೋಗಿರುವ ಈ ಜನತೆಯ ಪಡಿಪಾಟಲು ಬಗ್ಗೆ ಈ ಕಾರ್ಮಿಕರ ದಿನ(ಮೇ 1) ಒಂದು ಚಿಂತನೆ. ದಿ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ (ಸಿಎಂಐಇ) ಲೆಕ್ಕಾ ಹಾಕಿರುವಂತೆ, ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿಯೇ ಇದುವರೆಗೆ ಕೆಲಸ ಕಳೆದುಕೊಂಡಿರುವವರ ಸಂಖ್ಯೆ 14 ಕೋಟಿ. ಈ ಬಿಕ್ಕಟ್ಟಿಗೆ ಮೊದಲು ನಿರುದ್ಯೋಗ ದರ 8 […]

Read More

ಸಾವುಗಳನ್ನು ತಡೆಯುವ ಸವಾಲು – ಮುನ್ನೆಚ್ಚರಿಕೆಯೊಂದಿಗೆ ಆರ್ಥಿಕ ಚಟುವಟಿಕೆ

ಲಾಕ್‌ಡೌನ್‌ ಸುದೀರ್ಘ ಕಾಲಕ್ಕೆ ಮುಂದುವರಿದರೆ, ಕೊರೊನಾ ಸೊಂಕಿನಿಂದ ಸಾಯುವವರಿಗಿಂತಲೂ ಹಸಿವಿನಿಂದ ಸಾಯುವವರ ಸಂಖ್ಯೆಯೇ ಅಧಿಕವಾಗಲಿದೆ ಎಂದು ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಕೋಟ್ಯಂತರ ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರು, ಸ್ವಯಂ ಉದ್ಯೋಗಿಗಳು ಲಾಕ್‌ಡೌನ್‌ನಿಂದಾಗಿ ತಮ್ಮ ಜೀವನೋಪಾಯವನ್ನೇ ಕಳೆದುಕೊಂಡು ಕೂತಿದ್ದಾರೆ ಎಂದಿದ್ದಾರೆ. ಭಾರತದಲ್ಲಿ ಕೊರೊನಾ ವೈರಸ್‌ನಿಂದ ಸಂಭವಿಸುವ ಸಾವಿನ ದರ 0.25-0.5 ಶೇ. ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದರೆ ಈ ಪ್ರಮಾಣ ಅತಿ ಕಡಿಮೆ. ಆದರೆ ಭಾರತದಂತಹ ದುಡಿಯುವ ಜನ ಇರುವ […]

Read More

ಕೊರೊನಾ ವಿರುದ್ಧ ಗೆಲುವಿಗೆ ಪಂಚಸೂತ್ರ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ ವೈರಸ್(ಕೋವಿಡ್ 9) ಅನ್ನು ಹತ್ತಿರಕ್ಕೂ ಸುಳಿಯದಂತೆ ರಾಜ್ಯದ ಕೆಲವು ಜಿಲ್ಲಾಡಳಿತಗಳು ನೋಡಿಕೊಂಡಿವೆ. ಆಡಳಿತಕ್ಕೆ ಜನರು ಕೈ ಜೋಡಿಸಿದ ಪರಿಣಾಮ ಇಂದಿಗೂ ಈ ಜಿಲ್ಲೆಗಳು ಸೋಂಕುರಹಿತವಾಗಿವೆ. ಹಸಿರು ಪಟ್ಟಿಯಲ್ಲಿರುವ ರಾಜ್ಯದ 10 ಜಿಲ್ಲೆಗಳ ಯಶಸ್ಸಿನ ಹಿಂದಿನ ಪಂಚಸೂತ್ರಗಳು ಯಾವವು? ಇಲ್ಲಿದೆ ಕುತೂಹಲಕಾರಿ ಮಾಹಿತಿ.   ಮಾರಿ ಹಿಮ್ಮೆಟ್ಟಿಸಿದ ಹಾವೇರಿ – ಅನಗತ್ಯ ಹೊರಗೆ ಬಂದವರಿಗೆ ಲಾಠಿ ರುಚಿ. ಮುಖ್ಯರಸ್ತೆ ಬಂದ್, ಒಳಮಾರ್ಗಕ್ಕೂ ತಡೆ – ಶಾಸಕರು, ಸಚಿವರು ಅಧಿಕಾರಿಗಳ ಸಭೆ ನಡೆಸಿ ಮಾಸ್ಕ್ […]

Read More

ಸಿಆರ್‌ಪಿಎಫ್ ಯೋಧನ ಮೇಲೆ ಪೊಲೀಸ್ ಉಗ್ರಾವತಾರಕ್ಕೆ ಜನಾಕ್ರೋಶ – ಪಿಎಸ್ಐ ಅಮಾನತು, ಪೊಲೀಸರ ವಿರುದ್ಧ ದೂರು ದಾಖಲಿಸಲಿರುವ ಸಿಆರ್‌ಪಿಎಫ್

ವಿಕ ಸುದ್ದಿಲೋಕ ಬೆಳಗಾವಿ: ಮಾಸ್ಕ್ ಧರಿಸಿಲ್ಲ ಎನ್ನುವ ಕಾರಣಕ್ಕೆ ಜಟಾಪಟಿ ನಡೆದು ಪೊಲೀಸರಿಂದ ಬಂಧನಕ್ಕೊಳಗಾಗಿದ್ದ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಗ್ರಾಮದ ಕಮಾಂಡೊ ಸಚಿನ್ ಸಾವಂತ್ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಜನರ ಆಕ್ರೋಶ ರಾಜ್ಯ ಸರಕಾರದ ವಿರುದ್ಧ ತಿರುಗಿದೆ. ಪೊಲೀಸರು ಸಚಿನ್ ಅವರ ಹಿಂಭಾಗಕ್ಕೆ ರಕ್ತ ಹೆಪ್ಪುಗಟ್ಟುವಂತೆ ಹೊಡೆದಿದ್ದಾರೆ ಎನ್ನುವ ಫೋಟೊ ವೈರಲ್ ಆಗಿದೆ. ಜತೆಗೆ ಮಹಿಳಾ ಸಿಬ್ಬಂದಿ ಸೇರಿ 15 ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎಂಬ ಆರೋಪವೂ ಕೇಳಿ ಬರುತ್ತಿದೆ. ಯೋಧನನ್ನು ಪೊಲೀಸರು ಅಮಾನುಷವಾಗಿ ಥಳಿಸಿದ್ದಾರೆ […]

Read More

ಕೋವಿಡ್ ಲಸಿಕೆ ಮನುಷ್ಯನ ಮೇಲೆ ಪ್ರಯೋಗಕ್ಕೆ ಓಕೆ

ಜಗತ್ತನ್ನೇ ಪೀಡಿಸುತ್ತಿರುವ ಕೊರೊನಾ ವೈರಸ್‌ಗೆ ಬ್ರಹ್ಮಾಸ್ತ್ರವಾಗಬಲ್ಲ ಲಸಿಕೆ ಸಂಶೋಧನೆಗೆ ವೇಗ ಬಂದಿದೆ. ಈ ವಾರ ಲಸಿಕೆ ಸಂಶೋಧನೆ ಮಾನವ ಪ್ರಯೋಗ ಹಂತ ತಲುಪಿದೆ. ಇದರ ಬಗ್ಗೆ ಒಂದಿಷ್ಟು ನೋಟ ಇಲ್ಲಿದೆ. ಯಾವುದೇ ರೋಗಕ್ಕೆ ಲಸಿಕೆ ಕಂಡುಹಿಡಿಯುವ ಪ್ರಕ್ರಿಯೆಯಲ್ಲಿ ಎರಡು ಮುಖ್ಯವಾದ ಹಂತಗಳು. 1. ಪ್ರಾಣಿಗಳ ಮೇಲಿನ ಪ್ರಯೋಗ. 2. ಮನುಷ್ಯರ ಮೇಲಿನ ಪ್ರಯೋಗ. ಸದ್ಯ ನೊವೆಲ್ ಕೊರೊನಾ ವೈರಸ್ ಲಸಿಕೆಯನ್ನು ಕಂಡುಹಿಡಿಯುವ ಪ್ರಯತ್ನ ಎರಡನೇ ಹಂತ ತಲುಪಿದೆ. ಮೊದಲ ಹಂತದಲ್ಲಿ ಕೋವಿಡ್-19ನ ದುರ್ಬಲ ವೈರಾಣುಗಳನ್ನು ಸಂಸ್ಕರಿಸಿ ಅದನ್ನು […]

Read More

ನೀಟ್ ಪರೀಕ್ಷೆ ಸರ್ವಮಾನ್ಯ – ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೂ ಅನ್ವಯ

ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅಲ್ಪ ಸಂಖ್ಯಾತ, ಖಾಸಗಿ ಶಾಲೆಗಳಿಗೆ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಂತಿಮ ಶರಾ ಬರೆದಿದೆ. ಇದರೊಂದಿಗೆ ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ನಡೆದುಕೊಂಡು ಬಂದಿದ್ದ ತಾರತಮ್ಯಕ್ಕೆ ಮಂಗಳ ಹಾಡಿದಂತಾಗಿದೆ. ಇನ್ನು ಮುಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿವಿಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಪದವಿ ಮತ್ತು ಸ್ನಾತಕೋತ್ತರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top