ಮೊಳಗಲಿ ತಂತ್ರಾಂಶ ಕನ್ನಡ ಮಂತ್ರ

ತಂತ್ರಜ್ಞಾನದಲ್ಲಿ ಹಿಂದುಳಿಯುವ ಯಾವ ಭಾಷೆಯೂ ಏಳಿಗೆ ಹೊಂದುವುದು ಸಾಧ್ಯವಿಲ ಎಂಬ ವಾತಾವರಣ ಈಗ ನಿರ್ಮಾಣವಾಗಿದೆ. ಕನ್ನಡಕ್ಕೂ ಇದು ಅನ್ವಯ. ತಂತ್ರಾಂಶ ವಿಚಾರದಲ್ಲಿ ಕನ್ನಡದಲ್ಲಿ ಹಲವು ಕೆಲಸಗಳು ಆಗಿದ್ದರೂ, ತುರ್ತಾಗಿ ಗಮನಹರಿಸಬೇಕಾದ ಕೆಲ ಸಂಗತಿಗಳಿವೆ.   ಡಾ.ಕೆ.ಚಿದಾನಂದ ಗೌಡ ಗಣಕಯಂತ್ರದ ಬಳಕೆಯು ಇಂದು ಸರ್ವವ್ಯಾಪಿಯಾಗುತ್ತಿದೆ. ಆದರೆ ಈಗ ಇದರ ಬಳಕೆಯಲ್ಲಿ ಇಂಗ್ಲಿಷಿನದ್ದೇ ಸಿಂಹಪಾಲು. ಎಷ್ಟೋ ಮಂದಿ ತಾವು ಗಣಕಯಂತ್ರಗಳನ್ನು ಬಳಸುವುದರಿಂದ ಇಂಗ್ಲಿಷ್ ಅನಿವಾರ್ಯ, ಹಾಗಾಗಿ ಕನ್ನಡವನ್ನು ಬಳಸದವರಾಗಿದ್ದೇವೆ ಎಂಬ ತಪ್ಪು ಅಭಿಪ್ರಾಯ ಹೊಂದಿದ್ದಾರೆ. ಹೀಗಾಗಿ, ಕರ್ನಾಟಕದ ಆಡಳಿತ ಭಾಷೆ […]

Read More

ಕಲಿಕೆಯ ಕ್ರಮದಲ್ಲಿ ಕನ್ನಡದ ಉಳಿವು

ಯೂರೋಪಿನ ದೇಶಗಳೆಲ್ಲ ಭಾಷೆಯ ಆಧಾರದ ಮೇಲೆಯೇ ರಚಿತವಾಗಿವೆ. ಆ ದೇಶಗಳಲ್ಲಿ ಹೀಗೆ ಪರಭಾಷಾ ಮಾಧ್ಯಮದ ಶಾಲೆಗಳು ತಲೆಯೆತ್ತಿ ದೇಶಭಾಷೆಗಳನ್ನು ನುಂಗುವ ಸನ್ನಿವೇಶವುಂಟಾದರೆ ಅಲ್ಲಿಯ ನ್ಯಾಯಾಲಯಗಳು ಹೇಗೆ ಸ್ಪಂದಿಸಬಹುದು? ಪೋಷಕರ ಇಚ್ಛಾಸ್ವಾತಂತ್ರೃದ ಅಡಿಯಲ್ಲಿ ದೇಶಭಾಷೆಗಳ ಭವಿಷ್ಯ ಏನಾಗಬಹುದು? ಇಂಥ ಪ್ರಶ್ನೆಗಳನ್ನು ನಮ್ಮ ಸಮಾಜವೂ ನ್ಯಾಯಾಲಯಗಳೂ ಎದುರಿಸಬೇಕಾಗುತ್ತದೆಯಲ್ಲವೆ? ಡಾ.ಎಸ್‌.ಎಲ್‌.ಭೈರಪ್ಪ ನ್ಯಾಯಾಲಯವು ತೀರ್ಮಾನಿಸಬೇಕಾಗಿದ್ದುದು ಶಿಕ್ಷಣದ ಮೂಲಭೂತತತ್ತ್ವವನ್ನು. ಈ ತತ್ತ್ವವನ್ನು ಪ್ರಪಂಚದ ಖ್ಯಾತ ಶಿಕ್ಷಣವೇತ್ತರು, ಸರ್ಕಾರವೇ ನೇಮಿಸಿದ ಆಯೋಗಗಳು ಹಾಗೂ ಗಾಂಧೀಜಿಯಂಥ ಪ್ರಯೋಗಶೀಲರು ಚರ್ಚಿಸಿ ಮಾತೃಭಾಷೆಯೇ ಕಲಿಕೆಗೆ ಸಮರ್ಥ ಸಾಧನವೆಂದು ತೀರ್ಮಾನಿಸಿರುವುದರಿಂದ ನ್ಯಾಯಾಲಯವು […]

Read More

ಚಿಂತನಶಕ್ತಿಗೆ ಮಾತೃಭಾಷೆಯೇ ಭದ್ರಬುನಾದಿ

ಲೇಖಕನು ಬರೆಯುವ ಒಂದೊಂದು ಶಬ್ದವೂ ಶತಮಾನಗಳ ಸಾಂಸ್ಕೃತಿಕ ಇತಿಹಾಸವನ್ನು ಹೀರಿ ಬೆಳೆದಿರುತ್ತದೆ; ಆಡುಮಾತು ಮತ್ತು ಜಾನಪದ ಸಾಹಿತ್ಯಗಳಿಂದ ಅರ್ಥ ಮತ್ತು ಧ್ವನಿ ಸಮೃದ್ಧಿಯನ್ನು ಗಳಿಸಿ ಕೊಂಡಿರುತ್ತದೆ. ಆದ್ದರಿಂದ ಆ ಭಾಷೆಯಲ್ಲಿ ಮಾತ್ರ ಆ ಜೀವನವನ್ನು ಸಮರ್ಥವಾಗಿ ಅಭಿವ್ಯಕ್ತಪಡಿಸಲು ಸಾಧ್ಯ. – ಡಾ. ಎಸ್. ಎಲ್. ಭೈರಪ್ಪ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವರ್ಷದಿಂದ ವರ್ಷಕ್ಕೆ ಹೆಚ್ಚುವ ಜನಸಂದಣಿಯನ್ನು ನೋಡುವಾಗ ಕನ್ನಡದ ಭವಿಷ್ಯದ ಬಗೆಗೆ ಭರವಸೆ ಬೆಳೆಯುತ್ತದೆ. ಆದರೆ ಕನ್ನಡದ ಅಡಿಪಾಯವು ಒಳಗಿಂದ ಒಳಗೆ ಕುಸಿಯುತ್ತಿರುವುದರ ಲೆಕ್ಕಾಚಾರ […]

Read More

ಭಾಷೆಯ ಸ್ಥಾನಮಾನ: ಬೇರೆ ರಾಜ್ಯಗಳಲ್ಲಿ…

ಕರ್ನಾಟಕದ ಭಾಷಾ ಚಳವಳಿಗಳು ಭಾಷೆಯೊಂದನ್ನೇ ಮುಖ್ಯವಾಗಿಸಿಕೊಂಡು ಹೋರಾಟ ಮಾಡುತ್ತ ಬಂದಿದ್ದರಿಂದ ಜನ ಚಳವಳಿಯ ವಿಷಯಗಳಿಗೂ ಭಾಷಾ ಚಳವಳಿಯ ವಿಷಯಗಳಿಗೂ ಅಂತರ್ ಸಂಬಂಧವೊಂದು ಏರ್ಪಡಲಿಲ್ಲ. ಕನ್ನಡಪರ ಚಿಂತನಾವಲಯ ಮತ್ತು ಹೋರಾಟದ ನಡುವೆ ಅಗತ್ಯ ಪ್ರಮಾಣದ ಬೆಸುಗೆ ಸಾಧ್ಯವಾಗದ್ದು ಕರ್ನಾಟಕದ ಇನ್ನೊಂದು ವೈರುಧ್ಯ. -ಬರಗೂರು ರಾಮಚಂದ್ರಪ್ಪ ಕರ್ನಾಟಕದ ಭಾಷಾ ಸಮಸ್ಯೆ ಕುರಿತು ಮಾತನಾಡುವಾಗ ಅನೇಕ ವಿದ್ವಾಂಸರು ಮತ್ತು ಹೋರಾಟಗಾರರು ಬೇರೆ ರಾಜ್ಯಗಳಲ್ಲಿ ಭಾಷಾ ಸಮಸ್ಯೆಯೇ ಇಲ್ಲವೆನ್ನುವಂತೆ ಮಾಹಿತಿ ಕೊಡುವ ಪರಿಪಾಠವಿದೆ. ವಿಶೇಷವಾಗಿ ತಮಿಳುನಾಡನ್ನು ಪ್ರಸ್ತಾಪಿಸಿ ಅಲ್ಲಿ ಎಲ್ಲವೂ ತಮಿಳುಮಯವಾಗಿದೆಯೆಂದೂ ಕರ್ನಾಟಕದಲ್ಲಿ […]

Read More

ಆತಂಕದ ಅಲೆಯಲ್ಲಿ ತೇಲುತ್ತಿರುವ ಕನ್ನಡ

ಇಂಗ್ಲಿಷ್ ಮೂಲಕ ಕಲಿಸುವ ಮತ್ತು ಅನುದಾನ ಪಡೆಯದ ಶಾಲೆಗಳನ್ನು ನಡೆಸುತ್ತಿರುವವರು ತಮ್ಮ ಆಯ್ಕೆಯೇ ಪಾಲಕರ ಆಯ್ಕೆ ಎಂದು ತೀರ್ಮಾನಿಸಿಬಿಟ್ಟಿದ್ದಾರೆ. ಸರ್ಕಾರ ಏನೂ ಮಾಡಲಾಗದ ಹಂತವನ್ನು ತಲುಪಿದೆ ಎಂದು ಈಗ ನಂಬಬೇಕಾಗಿಬಿಟ್ಟಿದೆ.  -ಕೆ. ವಿ. ನಾರಾಯಣ ತಾಯ್ನುಡಿಯಲ್ಲಿ ಕಲಿಕೆ ನಡೆಯುವುದಕ್ಕೆ ಈಗ ಮೊದಲಿಗಿಂತ ಹಲವಾರು ಅಡೆತಡೆಗಳು ಹೆಚ್ಚಾಗಿ ಉಂಟಾಗಿವೆ. ಅದರಲ್ಲೂ 2014ರಲ್ಲಿ ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಗಮನಿಸಿ ಈಗ ಕೈಚೆಲ್ಲಿ ಕೂರುವವರು ಹೆಚ್ಚಾಗಿದ್ದಾರೆ. ಇನ್ನೂ ಕೆಲವರು ಮುಂದುವರೆದು, ಸಂವಿಧಾನಕ್ಕೆ ತಿದ್ದುಪಡಿಯನ್ನು ತಂದು ಕಲಿಕೆಯು ತಾಯ್ನುಡಿಯಲ್ಲೇ ನಡೆಯುವಂತೆ ಮಾಡಬೇಕೆಂಬ […]

Read More

ಕನ್ನಡಕ್ಕಾಗಿ ಕೈ ಎತ್ತೋಣ ಬನ್ನಿ

ಕನ್ನಡದ ಪಾಲಿಗೆ ಅಸ್ತಿತ್ವದ ಆತಂಕ ಕಾಡುತ್ತಿರುವ ದಿನಗಳಿವು ಎಂಬ ಭಾವನೆ ಬಲಗೊಳ್ಳುತ್ತಿದೆ. ಆ ವಿಚಾರದಲ್ಲಿ ಈ ಸಲದ ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ರಚನಾತ್ಮಕ ಚರ್ಚೆ ಮತ್ತು ಅಗತ್ಯ ನಿರ್ಣಯಗಳಾಗಿರುವುದು ಒಂದು ಉತ್ತಮ ಬೆಳವಣಿಗೆ. ವಿಶೇಷ ಅಂದರೆ ಕನ್ನಡ ಸಾಹಿತ್ಯ ಸಮ್ಮೇಳನದ ಆಶಯಕ್ಕೆ ಪೂರಕವಾಗಿ `ವಿಜಯವಾಣಿ’ ಒಂದು ಮುಂಚೂಣಿ ಪತ್ರಿಕೆಯಾಗಿ ವಿಶಿಷ್ಟವಾಗಿ ಆಲೋಚಿಸಿದ್ದು ಲಕ್ಷಾಂತರ ಓದುಗರ ಮನಸ್ಸಿನಲ್ಲಿ ಅಚ್ಚಾಗಿರಲು ಸಾಕು. ಸದಾ ಹೊಸತನ, ಹೊಸ ಪ್ರಯೋಗ, ನವೀನ ಚಿಂತನೆ, ಜನಪರ ಆಲೋಚನೆಗಳಿಂದ ಅಲ್ಪಾವಧಿಯಲ್ಲಿ ಕನ್ನಡ ನಾಡಿನ ಉದ್ದಗಲಕ್ಕೂ ಮನೆಮಾತಾಗಿರುವ […]

Read More

ಕೇಜ್ರಿ ಗೆಲುವಲ್ಲಿ ಬಿಜೆಪಿಯ ಪ್ರಮಾದದ ಕಾಣಿಕೆಯೇ ದೊಡ್ಡದು

ಈ ಫಲಿತಾಂಶವನ್ನು ಪ್ರಜಾತಂತ್ರದ ಸೌಂದರ್ಯ ಮತ್ತು ಶಕ್ತಿ ಎಂದು ಕರೆಯುವುದೇ ಸರಿಯಾದ್ದು. ಎರಡು ವರ್ಷಗಳ ಹಿಂದೆ ಆಮ್ ಆದ್ಮಿ ಪಕ್ಷದ ಅರವಿಂದ ಕೇಜ್ರಿವಾಲ್ ಅವರನ್ನು ಅಧಿಕಾರದ ಹತ್ತಿರಕ್ಕೆ ತಂದು ನಿಲ್ಲಿಸಿದ್ದ ದೆಹಲಿ ಮತದಾರರು ಈ ಬಾರಿ ಪೂರ್ಣ ಅಧಿಕಾರ ನೀಡಿ ಅದೇನು ಮಾಡುತ್ತೀರೋ ಮಾಡಿ ನೋಡೋಣ ಎಂಬ ಸ್ಪಷ್ಟ ಜನಾದೇಶ ಕೊಟ್ಟಿದ್ದಾರೆ. ಒಂದು ಪ್ರಬುದ್ಧ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾರರು ಇದಕ್ಕಿಂತ ಉತ್ತಮವಾಗಿ ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ನಿರೀಕ್ಷಿಸಲು ಅಸಾಧ್ಯ ಬಿಡಿ. ದೆಹಲಿ ವಿಧಾನಸಭೆ ಚುನಾವಣೆಯ ಈ ಅಭೂತಪೂರ್ವ […]

Read More

ವಿಜಯವಾಣಿ ಸ್ಥಾಪಕ ಸಂಪಾದಕ ತಿಮ್ಮಪ್ಪ ಭಟ್ ನಿವೃತ್ತಿ

* ಪತ್ರಿಕೋದ್ಯಮದಲ್ಲಿ 35 ವರ್ಷಗಳ ಸಾರ್ಥಕ ಸೇವೆ * ಆತ್ಮೀಯ ಬೀಳ್ಕೊಡುಗೆ     ಅತ್ಯಲ್ಪ ಅವಧಿಯಲ್ಲಿ ಕನ್ನಡಿಗರ ಧ್ವನಿಯಾಗಿ ರೂಪುಗೊಂಡಿರುವ ವಿಜಯವಾಣಿ ದಿನಪತ್ರಿಕೆಯ ಸ್ಥಾಪಕ ಸಂಪಾದಕ ತಿಮ್ಮಪ್ಪ ಭಟ್ ಶುಕ್ರವಾರ ನಿವೃತ್ತರಾದರು. 35 ವರ್ಷಗಳ ಹಿಂದೆ ಕನ್ನಡಪ್ರಭ ಪತ್ರಿಕೆ ಮೂಲಕ ವೃತ್ತಿಜೀವನ ಪ್ರಾರಂಭಿಸಿದ್ದ ತಿಮ್ಮಪ್ಪ ಭಟ್ ಅವರು ಮುಂದೆ ಅದೇ ಪತ್ರಿಕೆಯ ಬೆಳಗಾವಿ ಆವೃತ್ತಿ ಮುಖ್ಯಸ್ಥರಾಗಿ, ಬಳಿಕ ಉಷಾಕಿರಣ ಪತ್ರಿಕೆಯ ಸುದ್ದಿಸಂಪಾದಕರಾಗಿ, ಟೈಮ್ಸ್ ಆಫ್ ಇಂಡಿಯಾ ಕನ್ನಡ ಪತ್ರಿಕೆಯ ಸ್ಥಾನಿಕ ಸಂಪಾದಕರಾಗಿ, ಉದಯವಾಣಿ ಪತ್ರಿಕೆಯ ಸಂಪಾದಕರಾಗಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top