ಮತ್ತೆ ಕೊರೊನಾಘಾತದ ಆತಂಕ – ವಿದೇಶದಿಂದ ಕರೆ ತರುವ ಮುನ್ನ ಯೋಚಿಸಿ

ಕೊರೊನಾ ವೈರಸ್(ಕೋವಿಡ್ 19) ಹರಡುವುದನ್ನು ತಡೆಯಲು ಹೇರಲಾಗಿದ್ದ ಲಾಕ್‌ಡೌನ್‌ ಭಾಗಶಃ ತರೆವಿನೊಂದಿಗೆ ದೇಶ ಸಹಜ ಸ್ಥಿತಿಯತ್ತ ಮರಳುವ ಯತ್ನದಲ್ಲಿದೆ. ಇಷ್ಟೆಲ್ಲ ಬಿಗಿ ಕ್ರಮಗಳ ನಂತರವೂ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 50 ಸಾವಿರದ ಗಡಿಯನ್ನು ತಲುಪುತ್ತಿದೆ. ಕೊರೊನಾದಿಂದ 1500ಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದಾರೆ. ಸೋಂಕಿತರ ಪ್ರಮಾಣ ಏರುಗತಿಯಲ್ಲಿರುವಾಗಲೇ ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಕರೆ ತರುವ ಪ್ರಯತ್ನಕ್ಕೆ ಸರಕಾರ ಮುಂದಾಗಿರುವುದು ಎಲ್ಲೆಡೆ ಮತ್ತೊಂದು ಸುತ್ತಿನ ಆತಂಕ ಸೃಷ್ಟಿಸಿದೆ. ಸರಕಾರ ನೀಡಿರುವ ಮಾಹಿತಿಯ ಪ್ರಕಾರ ಮೊದಲ ಹಂತದಲ್ಲಿ 14,800 ಜನರನ್ನು […]

Read More

ಕಡು ಸಾಹಸದಲ್ಲಿ ಕೊನೆಗೊಂಡ ಧೀರರ ಬದುಕು

– ಕರ್ನಲ್ ಆಶುತೋಷ್ ಕುಟುಂಬದ ದೇಶಭಕ್ತಿ ಅಪಾರ – ಪತಿಯ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದ ಪಲ್ಲವಿ ಶರ್ಮ. ಜೈಪುರ: ‘‘ದೇಶ ರಕ್ಷ ಣೆ ವೇಳೆ ಪತಿ ಹುತಾತ್ಮರಾಗಿರುವುದು ನನಗೆ ಹೆಮ್ಮೆಯ ವಿಚಾರ. ಅದಕ್ಕಾಗಿ ಕಣ್ಣೀರು ಹಾಕಲಾರೆ. ದೇಶಕ್ಕಾಗಿ ತ್ಯಾಗ ಮಾಡುವುದು ಗೌರವದ ವಿಚಾರ,’’ ಇದು ಹಂದ್ವಾರದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕರ್ನಲ್ ಆಶುತೋಷ್ ಶರ್ಮಾ ಅವರ ಪತ್ನಿ ಪಲ್ಲವಿ ಶರ್ಮಾ ಅವರ ಮನದಾಳದ ಮಾತು.‘‘ಆಶುತೋಷ್ ಅವರು ನಮ್ಮನ್ನು ಅಗಲಿದ್ದಾರೆಂಬ ನೋವು ಕಾಡದು. ಅವರ ಶೌರ್ಯ ಸಾಹಸ ಮತ್ತು […]

Read More

ಗಿಲ್ಗಿಟ್-ಬಾಲ್ಟಿಸ್ತಾನ್ ಪಾಕ್ ಆಟಕ್ಕೆ, ಭಾರತ ಪಾಠ

ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಲು ಮುಂದಾಗಿರುವ ಪಾಕಿಸ್ತಾನದ ಕ್ರಮಕ್ಕೆ ಭಾರತ ತೀವ್ರ ವಿರೋಧ ಒಡ್ಡಿದೆ. ಆಕ್ರಮಿತ ಪ್ರದೇಶವನ್ನು ತಕ್ಷಣವೇ ಖಾಲಿ ಮಾಡುವಂತೆ ಎಚ್ಚರಿಕೆ ನೀಡಿದೆ. ಪಾಕ್ ಆಕ್ರಮಿತ ಕಾಶ್ಮೀರದ ವಿಚಾರದಲ್ಲಿ ಭಾರತ ಇಷ್ಟು ನೇರ ಸಂದೇಶ ನೀಡಿರುವುದು ಇದೇ ಮೊದಲು. ಇತ್ತೀಚೆಗೆ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಒಂದು ತೀರ್ಪು ನೀಡಿ, ಗಿಲ್ಗಿಟ್- ಬಾಲ್ಟಿಸ್ತಾನದಲ್ಲಿ ಚುನಾವಣೆ ನಡೆಸಬಹುದು ಎಂದು 2018ರಲ್ಲಿ ಸರಕಾರ ಮಾಡಿದ್ದ ಸಂವಿಧಾನ ತಿದ್ದುಪಡಿಯನ್ನು ಅನುಮೋದಿಸಿದೆ. ಇದಕ್ಕೆ ಭಾರತದ ವಿದೇಶಾಂಗ ಇಲಾಖೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಗಿಲ್ಗಿಟ್ […]

Read More

ರೈತರಿಗೆ ಕೊಟ್ಟ ಭರವಸೆ ಈಡೇರಿಸಿ – ಬೆಳೆಗಳಿಗೆ ನ್ಯಾಯಯುತ ಬೆಲೆ ಸಿಗಲಿ

ಲಾಕ್‌ಡೌನ್‌ನಿಂದ ಕೃಷಿಕರಿಗೆ ಸಂಕಷ್ಟವಾದ ಸಂದರ್ಭದಲ್ಲಿ, ಕೃಷಿಕರಿಗೆ ಕೃಷಿ ಚಟುವಟಿಕೆಗಳಿಗೆ ಹಾಗೂ ತಾವು ಬೆಳೆದ ಬೆಳೆಗಳ ಮಾರಾಟಕ್ಕೆ ಮುಕ್ತ ವಾತಾವರಣ ಕಲ್ಪಿಸುವುದಾಗಿ ಸರಕಾರ ಭರವಸೆ ನೀಡಿತ್ತು. ಆದರೆ ಈ ಭರವಸೆ ಸಕಾಲದಲ್ಲಿ ಈಡೇರದೆ ಇರುವುದರಿಂದ ರೈತರು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಲೆ ಮತ್ತು ಮಾರಾಟ ವ್ಯವಸ್ಥೆ ಸಿಗದೆ ಕೃಷಿಕರ ಸಂಕಟ ಮುಂದುವರಿದಿದೆ. ಸಾವಿರಾರು ರೈತರು ಸರಿಯಾದ ಬೆಲೆ ಇಲ್ಲ ಎಂಬ ಕಾರಣದಿಂದ ನಿಂಬೆ ಹಣ್ಣು, ಕಲ್ಲಂಗಡಿ ಸೇರಿದಂತೆ ಹಲವು ಬೆಳೆಗಳನ್ನು ಗದ್ದೆಯಲ್ಲೇ ಬಿಟ್ಟಿದ್ದಾರೆ. ಈರುಳ್ಳಿ […]

Read More

ಕುಡುಕರ ಸಾಮ್ರಾಜ್ಯದ ಲಾಕ್‌ ಓಪನ್‌!

50 ದಿನಗಳ ನಂತರ ಇಂದಿನಿಂದ ಮದ್ಯ ಮಾರಾಟ ಆರಂಭ ವಿಕ ಸುದ್ದಿಲೋಕ ಬೆಂಗಳೂರು. ಸುಮಾರು ಐವತ್ತು ದಿನಗಳಿಂದ ಮದ್ಯದ ಘಾಟಿನ ಸುಳಿವಿಲ್ಲದೆ ಬರಗೆಟ್ಟವರಂತಾಗಿರುವ ಎಣ್ಣೆಪ್ರಿಯರು ‘ಅಮಲು ತೈಲ’ಕ್ಕಾಗಿ ತುದಿಗಾಲ ಮೇಲೆ ನಿಂತಿದ್ದಾರೆ. ಕೊರೊನಾದಿಂದಾಗಿ ಬಂದ್‌ ಆಗಿದ್ದ ಮದ್ಯ ಮಾರಾಟ ಸೋಮವಾರದಿಂದ ಆರಂಭವಾಗಲಿದ್ದು, ಮೊದಲ ದಿನವೇ ಮದ್ಯಪ್ರಿಯರು ಮುಗಿಬಿದ್ದರೆ ಕಂಟ್ರೋಲ್‌ ಮಾಡೋದು ಹೇಗೆ ಎಂಬ ಚಿಂತೆಯಲ್ಲಿ ಪೊಲೀಸರಿದ್ದಾರೆ! ನಿರ್ಬಂಧಿತ ಪ್ರದೇಶ ಹೊರತುಪಡಿಸಿ ಉಳಿದೆಲ್ಲೆಡೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಆದರೆ ಅದು ಚಿಲ್ಲರೆ ಮಾರಾಟ ಮಳಿಗೆಗಳು, ವೈನ್‌ ಶಾಪ್‌ಗಳು […]

Read More

ಜನರ ನಡುವೆ ಕಾವ್ಯದ ಸೇತುವೆ

ಎಚ್‌.ಎಸ್‌.ವೆಂಕಟೇಶಮೂರ್ತಿ ಹಿರಿಯ ಕವಿ ನಿಸಾರ್‌ ಅವರ ಮೊದಲ ಧ್ವನಿಸುರುಳಿ, ಕನ್ನಡದ ಮೊದಲ ಭಾವಗೀತೆಗಳ ಧ್ವನಿಸುರುಳಿ ಹೊರಬಂದಾಗ, ನಾನು ಹಾಗೂ ಬಿ ಆರ್‌ ಲಕ್ಷ್ಮಣ ರಾವ್‌ ಗಾಂಧಿ ಬಜಾರಿನಲ್ಲಿ ಹೋಗುತ್ತಿದ್ದಾಗ ಎದುರಿಗೆ ಸಿಕ್ಕರು. ಆಗ ಅವರ ಮನೆ ಜಯನಗರದಲ್ಲಿತ್ತು. ಮನೆಗೆ ಕರೆದುಕೊಂಡು ಹೋದರು. ಕ್ಯಾಸೆಟ್‌ ಕೇಳಿಸಿದರು. ಆಗ ಅದೆಲ್ಲ ನಮಗೆ ಹೊಸತು. ನಿಸಾರ್‌ ಅವರಿಗೂ ಹೊಸತೊಂದು ಸಂಚಲನದ ಭಾಗವಾದ ಉತ್ಸಾಹ. ಈ ಉತ್ಸಾಹ ಅವರಲ್ಲಿ ಕಡೆಯವರೆಗೂ ಇತ್ತು. ಹೊಸಬರ ಕಾವ್ಯ ತಪ್ಪದೆ ಓದಿ ಮೆಚ್ಚುಗೆ ಹೇಳುತ್ತಿದ್ದರು. ನಾನೆಂದರೆ ಅವರಿಗೆ […]

Read More

ಕಾವ್ಯ ನಿತ್ಯೋತ್ಸವ ಮುಗಿಸಿದ ನಿಸಾರ್‌

ಕನ್ನಡಿಗರ ಅಭಿಮಾನದ ನಿತ್ಯಮಂತ್ರವೆನಿಸುವ ನಿತ್ಯೋತ್ಸವ ಹಾಡು ಕೊಟ್ಟ, ರಾಜಕಾರಣಿಗಳಿಗೆ ಚಾಟಿ ಏಟಾಗಿ ಕುರಿಗಳು ಸಾರ್‌ ಕುರಿಗಳು ಪದ್ಯ ರಚಿಸಿದ, ಬೆಣ್ಣೆ ಕದ್ದ ನಮ್ಮ ಕೃಷ್ಣ ಎಂದು ಪುಳಕಗೊಳಿಸಿದ ಕವಿ ನಿಸಾರ್‌ ಅಹಮದ್‌ ಇನ್ನು ನೆನಪು. ಕನ್ನಡದ ಕಾವ್ಯ ರಸಿಕರ ಎದೆಯಾಳದಿಂದ ಸದಾ ಪುಟಿದು ಬರುವ ಹಾಡು ‘ನಿತ್ಯೋತ್ಸವ.’ ಶಿವಮೊಗ್ಗೆಯ ತುಂಗಾನದಿಯ ಬಳುಕು, ಜೋಗ ಜಲಪಾತದಿಂದ ಹುಟ್ಟಿಕೊಂಡ ಬೆಳಕು, ಸಹ್ಯಾದ್ರಿಯ ಕಬ್ಬಿಣದ ಗಣಿಯ ಉತ್ತುಂಗದ ನಿಲುಕು, ತೇಗ ಗಂಧ ನಿತ್ಯ ಹರಿದ್ವರ್ಣ ತರುಗಳು, ಕನ್ನಡಿಗರ ಸದ್ವಿಕಾಸ ಶೀಲ ನಡೆ […]

Read More

ವಲಸೆ ಕಾರ್ಮಿಕರ ತಲ್ಲಣ – ಇನ್ನಷ್ಟು ವ್ಯವಸ್ಥಿತ ಪ್ರಯಾಣ ಬೇಕಿತ್ತು

ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ದುಡಿಯುತ್ತಿದ್ದ ದೊಡ್ಡ ಸಂಖ್ಯೆಯ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳುತ್ತಿದ್ದಾರೆ. ಭಾನುವಾರ ಒಂದೇ ದಿನ ಸುಮಾರು 12 ಸಾವಿರ ಕಾರ್ಮಿಕರು ತಮ್ಮೂರುಗಳಿಗೆ ತೆರಳಿದ್ದು, ಮುಂದಿನ ಕೆಲ ದಿನಗಳಲ್ಲಿ ಒಂದು ಲಕ್ಷದಷ್ಟು ಮಂದಿ ಊರು ಬಿಡಬಹುದು ಎಂಬ ಅಂದಾಜಿದೆ. ಬೆಂಗಳೂರಿನ ಮೆಜೆಸ್ಟಿಕ್‌ ಬಸ್‌ ನಿಲ್ದಾಣದಲ್ಲಿ ಎಲ್ಲಿ ನೋಡಿದರೂ ಕಾರ್ಮಿಕರು ತಮ್ಮ ಹೆಂಡತಿ, ಮಕ್ಕಳೊಂದಿಗೆ ಬಂದು ಕೂತಿದ್ದಾರೆ. ಇವರನ್ನು ಯಾವುದೇ ಗೊಂದಲ, ಗದ್ದಲಗಳಿಲ್ಲದೆ ಊರಿಗೆ ಕಳುಹಿಸಲು ಸರಕಾರ ಹರಸಾಹಸ ಪಡುತ್ತಿದೆ. ಹಲವು ಸಂಸ್ಥೆಗಳು ಇವರಿಗೆ ಉಚಿತ […]

Read More

ಪ್ರತಿಪಕ್ಷಗಳ ಸಂಘಟಿತ ಕೊರೊನಾ ಹೋರಾಟ

ಹೋರಾಟ ಕೊರೊನಾ ವಿರುದ್ಧವೋ, ರಾಜ್ಯ ಸರಕಾರಕ್ಕೆ ಚುರುಕು ಮುಟ್ಟಿಸಲೋ? – ಶಶಿಧರ ಹೆಗಡೆ ಪೂರ್ವ ದಿಕ್ಕಿನಲ್ಲಿ ಉದಯಿಸುವ ಸೂರ್ಯ ಪಶ್ಚಿಮದಲ್ಲಿ ಅಸ್ತಂಗತನಾಗುತ್ತಾನೆ. ಇದು ಸೃಷ್ಟಿ ಸಹಜವಾದ ಕರಾರುವಾಕ್‌ ಕ್ರಿಯೆ. ರಾಜಕಾರಣ ಹಾಗಲ್ಲ. ರಾಜಕಾರಣದ ದಿಕ್ಕು ಯಾವಾಗ ಬೇಕಾದರೂ ಬದಲಾಗಬಹುದು. ಯಾವ ತಿರುವನ್ನಾದರೂ ಪಡೆಯಬಹುದು. ಅದರಲ್ಲಿ ವೈಯಕ್ತಿಕ ಆಸೆ, ಆಕಾಂಕ್ಷೆ ಹಾಗೂ ಲೋಕಕಲ್ಯಾಣವೂ ಮಿಳಿತವಾಗಿರುತ್ತದೆ. ಹಾವು, ಮುಂಗುಸಿಯಂತೆ ದ್ವೇಷ ಸಾಧಿಸಿದವರು ರಾತ್ರಿ ಬೆಳಗಾಗುವುದರ ಒಳಗೆ ಮಗ್ಗಲು ಬದಲಿಸಿ ಪರಸ್ಪರರ ಹೆಗಲ ಮೇಲೆ ಕೈಹಾಕಿಕೊಳ್ಳಬಹುದು. ಇಂತಹ ಮಜಕೂರಿಗಳು ರಾಜಕಾರಣದಲ್ಲಿ ಮಾತ್ರ […]

Read More

ಸೈಯದ್‌ ಅಕ್ಬರುದ್ದೀನ್‌ ದಿ ಗ್ರೇಟ್‌…

– ರಮೇಶ್‌ ಕುಮಾರ್‌ ನಾಯಕ್‌. ವಿದೇಶಾಂಗ ಇಲಾಖೆಯ ವಕ್ತಾರ ಮತ್ತು ವಿಶ್ವಸಂಸ್ಥೆಯಲ್ಲಿ ಕಾಯಂ ಪ್ರತಿನಿಧಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹಿರಿಮೆ ಹೆಚ್ಚಿಸಿದ್ದ ಸೈಯದ್‌ ಅಕ್ಬರುದ್ದೀನ್‌ ಇತ್ತೀಚೆಗೆ ನಿವೃತ್ತರಾಗಿದ್ದಾರೆ. ದೇಶದ ಹಿತಾಸಕ್ತಿ ರಕ್ಷ ಣೆಯಲ್ಲಿ ಅವರಿಗಿದ್ದ ಬದ್ಧತೆ ಯುವ ಅಧಿಕಾರಿಗಳಿಗೆ ಮಾದರಿ. ಅದು ಕಾಶ್ಮೀರಕ್ಕಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರದ ಮೋದಿ ಸರಕಾರ ಕಿತ್ತು ಬಿಸಾಕಿದ ಹೊತ್ತು. ಸುದೀರ್ಘ ಕಾಲದಿಂದ ಚರ್ಚೆಯಲ್ಲಿದ್ದ 370ನೇ ವಿಧಿ ರದ್ದತಿ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಬೆಳವಣಿಗೆ ಗಡಿಯಾಚೆಗಿನ ಪುಂಡ ದೇಶ ಪಾಕಿಸ್ತಾನದ ಮರ್ಮಾಂಗದ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top