ನೌಕರರು ಕಚೇರಿಗೆ‌ ಬರುವುದಾದರೂ ಹೇಗೆ?

ರಾಜ್ಯದ ಸರಕಾರಿ ಸಿಬ್ಬಂದಿ ಪರಿಸ್ಥಿತಿ ಆಯೋಮಯ -ಕರ್ತವ್ಯಕ್ಕೆ ಹಾಜರಾಗಲು ಎಲ್ಲ ಇಲಾಖೆ ಸಿಬ್ಬಂದಿಗೆ ಸೂಚನೆ – ಆದರೆ ವಾಹನ ಸೌಲಭ್ಯ, ಸಾಮಾಜಿಕ ಅಂತರದ ವ್ಯವಸ್ಥೆ ಇಲ್ಲ – ಶಶಿಧರ ಹೆಗಡೆ, ಬೆಂಗಳೂರು. ಲಾಕ್‌ಡೌನ್‌ ಸಡಿಲಿಕೆ ಹಿನ್ನೆಲೆಯಲ್ಲಿ ಕಚೇರಿ ಕರ್ತವ್ಯಕ್ಕೆ ಹಾಜರಾಗುವಂತೆ ನಾನಾ ಇಲಾಖೆಗಳ ಕೆಳ ಹಂತದ ಸಿಬ್ಬಂದಿಗಳಿಗೆ ರಾಜ್ಯ ಸರಕಾರ ಸೂಚಿಸಿದೆ. ಆದರೆ ಇದಕ್ಕೆ ಪೂರಕವಾಗಿ ಸರಕಾರ ಸೂಕ್ತ ವ್ಯವಸ್ಥೆ ಮಾಡಿಲ್ಲ. ಸಿಬ್ಬಂದಿ ಕಚೇರಿಗೆ ಬರಲು ವಾಹನ ಸೌಕರ್ಯವಿಲ್ಲ. ಜತೆಗೆ ಕೆಲಸ ಮಾಡುವ ಸ್ಥಳದಲ್ಲಿ ಸಾಮಾಜಿಕ ಅಂತರ […]

Read More

ರೈತರಿಗೆ ಟೋಲ್‌ ಹೊರೆ: ಕೃಷಿ ಉತ್ಪನ್ನ ಸಾಗಣೆಗೆ ಸದ್ಯ ಸುಂಕ ವಿಧಿಸದಂತೆ ರೈತರ ಮೊರೆ

– ಆರ್‌. ತುಳಸಿಕುಮಾರ್‌, ಬೆಂಗಳೂರು / ಸುನೀಲ್‌ ಕುಮಾರ್,‌ ಕೋಲಾರ. ವಿಕ ವಿಶೇಷ: ದರ ಕುಸಿತದಿಂದ ಕಂಗಾಲಾಗಿರುವ ರೈತರೀಗ ಟೋಲ್‌ ಹೊಡೆತದಿಂದ ಕಂಗೆಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳನ್ನು ಸಾಗಣೆ ಮಾಡಲು ವಾಹನಗಳ ಅಭಾವವಿರುವುದರ ನಡುವೆಯೇ, ಹೆದ್ದಾರಿಗಳಲ್ಲಿ ಟೋಲ್‌ ಶುಲ್ಕ ಪಾವತಿಸುವ ಹೊರೆ ಬಿದ್ದಿದೆ. ಕೋವಿಡ್‌-19 ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ಸಾಗಣೆಗೆ ಅಡ್ಡಿಯಾಗದಂತೆ ಕೇಂದ್ರ ಸರಕಾರವು ಟೋಲ್‌ ಸಂಗ್ರಹಕ್ಕೆ ತಾತ್ಕಾಲಿಕ ತಡೆಯೊಡ್ಡಿತ್ತು. ಇದು ರೈತರಿಗೆ ಅನುಕೂಲ ಮಾಡಿಕೊಟ್ಟಿತ್ತು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ ಮತ್ತಿತರ […]

Read More

ಸರಕಾರಿ ಸಿಬ್ಬಂದಿಗೆ ಕರ್ತವ್ಯದ ಕರೆ – ಕಡೆಗಣಿಸದಿರಿ ಸೂಕ್ತ ಸುರಕ್ಷತೆಗೆ ಮೊರೆ

ಕರ್ತವ್ಯಕ್ಕೆ ಹಾಜರಾಗುವಂತೆ ಎಲ್ಲ ಸರಕಾರಿ ಇಲಾಖೆಗಳ ಕೆಳ ಹಂತದ ಸಿಬ್ಬಂದಿಗೆ ರಾಜ್ಯ ಸರಕಾರ ಸೂಚಿಸಿದೆ. ಲಾಕ್‌ಡೌನ್‌ ಸಡಿಲಿಕೆಯಿಂದಾಗಿ ಒಂದೊಂದೇ ವಲಯಗಳು ಕಾರ್ಯಾರಂಭ ಮಾಡುವುದು ಅಗತ್ಯವಾಗಿದೆ. ಅದರಲ್ಲೂ ಅಗತ್ಯ ಸೇವೆಗೆ ಸಂಬಂಧಿಸಿದ 18 ಇಲಾಖೆಗಳ ಎಲ್ಲ ವೃಂದದ ನೌಕರರು ಕೆಲಸ ಆರಂಭಿಸುವುದು, ಮುಂದಿನ ದಿನಗಳ ಜನಜೀವನ ಸುಗಮವಾಗಿರಲು ಅನಿವಾರ‍್ಯವಾಗಿದೆ. ಯಾರ್ಯಾರು ಬಂದು ಕೆಲಸ ನಿರ್ವಹಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಈಗಾಗಲೇ ಆದೇಶ ನೀಡಿದ್ದಾರೆ. ಆದರೆ ಇದಕ್ಕೆ ಪೂರಕವಾದ ವ್ಯವಸ್ಥೆ ಮಾಡುವುದನ್ನು ಸರಕಾರ ಮರೆತಿದೆ. ಉದಾಹರಣೆಗೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವ […]

Read More

‘ಜಮೀರ ಹಮ್ಮೀರ’ ಎಂದ್ರೆ ಕಾಂಗ್ರೆಸ್‌ಗೆ ಸಂಕಷ್ಟ ತಪ್ಪಿದ್ದಲ್ಲ

-ಯಾವುದೇ ಕೋಮಿನ ನಾಯಕರ ಅತಿರೇಕದ ನಡವಳಿಕೆ ಅರಗಿಸಿಕೊಳ್ಳುವ ಸ್ಥಿತಿಯಲ್ಲಿ ಕಾಂಗ್ರೆಸ್ ಈಗ ಇಲ್ಲ. – ಶಶಿಧರ ಹೆಗಡೆ, ಬೆಂಗಳೂರು ಅಲ್ಪಸಂಖ್ಯಾತರ ಓಲೈಕೆ ರಾಜಕಾರಣದ ಪಿತಾಮಹ ಎಂದರೆ ಕಾಂಗ್ರೆಸ್ ಪಕ್ಷ. ಅದರಲ್ಲೂ ಮುಸ್ಲಿಂ ತುಷ್ಟೀಕರಣದಲ್ಲಿ ಪುರಾತನ ಕಾಂಗ್ರೆಸ್ ಪಕ್ಷದ ಚರಿತ್ರೆ ‘ಕಿರೀಟಪ್ರಾಯ’ವಾದುದು. ಮುಲಾಯಂ, ಲಾಲೂ, ದೀದಿ, ನಿತೀಶ್ ಕುಮಾರ್‌ರಂಥವರು ಪ್ರವರ್ಧಮಾನಕ್ಕೆ ಬರುವ ಮೊದಲು ಮುಸಲ್ಮಾನರ ದಷ್ಟಿಯಲ್ಲಿ ಕಾಂಗ್ರೆಸ್ ಯಾವತ್ತಿಗೂ ಚಾಂಪಿಯನ್ ಆಗಿತ್ತು. ಆದರೆ, ಕಾಂಗ್ರೆಸ್ ಹೊರತಾಗಿಯೂ ದೇಶದ ರಾಜಕಾರಣದಲ್ಲಿ ತಮ್ಮನ್ನು ಆಧರಿಸುವವರು ಸಿಕ್ಕಾಗ ಮುಸಲ್ಮಾನರ ನಿಷ್ಠೆಯೂ ಮುಲಾಯಂ, ಲಾಲೂಗಳತ್ತ […]

Read More

ಬಸವ ಜಯಂತಿಯ ಶುಭಾಶಯಗಳು

12ನೆಯ ಶತಮಾನದಲ್ಲೇ ಸಮ ಸಮಾಜ, ಸರ್ವೋದಯದ ಸಮಾಜದ ಕನಸು ಕಂಡ ಬಸವಣ್ಣ ಕ್ರಾಂತಿಯನ್ನು ಮೊಳಗಿಸಿ, ಇಡೀ ಜಗತ್ತಿಗೇ ಬೆಳಕಾದರು. ಅಂದು ಬಸವಾದಿ ಶರಣರು ಬಿತ್ತಿದ ವಿಚಾರಗಳು ಇಂದಿನ ಸಮಸ್ಯೆಗಳಿಗೂ ಪರಿಹಾರವನ್ನು ಕಲ್ಪಿಸುವ ಆದರ್ಶದ ಮಾರ್ಗಗಳಾಗಿವೆ. ವರ್ತಮಾನದ ಬಿಕ್ಕಟ್ಟುಗಳು, ತಲ್ಲಣಗಳಿಗೆ ಬಸವಣ್ಣ ಹೇಗೆ ಪ್ರಸ್ತುತ ಎಂಬುದನ್ನು ಈ ಲೇಖನದಲ್ಲಿ ವಿವರಿಸಲಾಗಿದೆ. ನಾಡನ್ನು ಕಟ್ಟುವ ಕಲ್ಯಾಣದ ಪ್ರಜ್ಞೆ ಬಸವಣ್ಣ – ಡಾ. ಬಿ.ವಿ.ವಸಂತಕುಮಾರ್ ಬಸವಣ್ಣ ಎಂಬುದು ಒಂದು ವ್ಯಕ್ತಿಯ ಹೆಸರು ಮಾತ್ರವಲ್ಲ, ಬಸವಣ್ಣ ಎಂಬುದು ಅವಿನಾಶಿಯಾದ ಅನಂತತೆಯ ಘನ ವ್ಯಕ್ತಿತ್ವವದ […]

Read More

ಶವಸಂಸ್ಕಾರದ ಘನತೆ ಕಾಪಾಡಿ – ಕೊರೊನಾ ರೋಗಿಗಳ ಅಂತ್ಯಕ್ರಿಯೆಯಿಂದ ಅಪಾಯವಿಲ್ಲ

ರಾಜ್ಯದ ಮಂಗಳೂರಿನಲ್ಲಿ, ಮುಂಬಯಿ- ಚೆನ್ನೈ ಮುಂತಾದ ಹಲವು ಕಡೆ ಕೋವಿಡ್ ಕಾಯಿಲೆಗೆ ಬಲಿಯಾದವರ ಮೃತದೇಹಗಳ ಅಂತಿಮ ಸಂಸ್ಕಾರಕ್ಕೆ ಕೆಲವರು ಸ್ಥಳೀಯ ನಿವಾಸಿಗಳು ಅಡ್ಡಿಪಡಿಸಿರುವುದು ವರದಿಯಾಗಿದೆ. ಮಂಗಳೂರಿನ ಹಲವು ಕಡೆ ಗ್ರಾಮಸ್ಥರು ಪ್ರತಿರೋಧ ಮಾಡಿದ್ದು, ಕಡೆಗೂ ಒಂದು ಕಡೆ ಹೇಗೋ ಅಂತ್ಯಕ್ರಿಯೆ ನಡೆದಿದೆ. ಮುಂದೆ ನಿಂತು ಸಂಸ್ಕಾರ ನಡೆಸಬೇಕಿದ್ದ ಶಾಸಕರೊಬ್ಬರು ಸಕಾರಣವಿಲ್ಲದೆ ಅಡ್ಡಿಪಡಿಸಿದ್ದಾರೆ. ಚೆನ್ನೈಯಲ್ಲಿ ಒಂದು ಕಡೆ ಕೋವಿಡ್‌ಗೆ ಬಲಿಯಾದ ನರರೋಗ ವೈದ್ಯರೊಬ್ಬರ ಶವವನ್ನು ಸುಡುವುದಕ್ಕೆ ಬಿಡದೆ, ಆಂಬುಲೆನ್ಸ್‌ನಲ್ಲಿದ್ದ ವೈದ್ಯರು ಸೇರಿದಂತೆ ಎಲ್ಲರ ಮೇಲೂ ದಾರುಣವಾಗಿ ಹಲ್ಲೆ ನಡೆಸಿದ […]

Read More

ಕೋವಿಡ್ ಕಷ್ಟದಲ್ಲಿ ನಿಮ್ಮ ಸಂಸದರು ಏನು‌ ಮಾಡ್ತಿದ್ದಾರೆ? ಯಾರು ಬೆಸ್ಟ್, ಯಾರು ಕಳಪೆ..

ಇದ್ದಕ್ಕಿದ್ದಂತೆ ಕಾಣಿಸಿಕೊಂಡ ಕೊರೊನಾದಿಂದ ಒಟ್ಟೊಟ್ಟಿಗೆ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟು ಉಂಟಾಯಿತು. ಲಾಕ್‌ಡೌನ್‌ನಿಂದ ಹತ್ತು ಹಲವು ಕಂಟಕಗಳು ಎದುರಾದವು. ನಿಜಕ್ಕೂ ಇದೊಂದು ಸವಾಲಿನ ಸನ್ನಿವೇಶ. ಇಂಥ ಸಂದರ್ಭದಲ್ಲಿ ನಮ್ಮ ಸಂಸದರು ಹೇಗೆ ಸ್ಪಂದಿಸಿದರು? ಜನರಿಗೆ ಹೇಗೆ ನೆರವಾದರು ಎಂಬುದರ ಕುರಿತು ವಿಕ ರಿಯಾಲಿಟಿ ಚೆಕ್ ನಡೆಸಿ ಸಂಸದರ ಸಾಧನೆಯನ್ನು ಪರಿಗಣಿಸಿ ಉತ್ತಮ, ಸಾಧಾರಣ, ಕಳಪೆಯೆನ್ನುವ ಗ್ರೇಡ್ ನೀಡಿದೆ. ಉತ್ತಮ:  -ನಾರಾಯಣ ಸ್ವಾಮಿ ದಾಸೋಹ ಚಿತ್ರದುರ್ಗ ಸಂಸದ ನಾರಾಯಣ ಸ್ವಾಮಿ ಅಧಿಕಾರಿಗಳ ಜತೆ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದಾರೆ. […]

Read More

ಕರ್ನಾಟಕದಲ್ಲಿ‌ ಸೈಲೆಂಟ್ ಸೋಂಕಿನ‌ ಕೈಚಳಕ

ಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕುಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕು – 445 ಕೇಸ್ಗಳ ಪೈಕಿ 300 ಮಂದಿಗೆ ರೋಗ ಲಕ್ಷಣವಿಲ್ಲ- ಸೋಂಕಿತರ ಗುರುತಿಸಿ ಚಿಕಿತ್ಸೆ ನೀಡುವುದೇ ಸವಾಲು ವಿಕ ಬ್ಯೂರೊ ಬೆಂಗಳೂರು: ಅತ್ಯಂತ ವೇಗವಾಗಿ ಎಲ್ಲಕಡೆ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಯಾವುದೇ ಲಕ್ಷಣಗಳಿಲ್ಲದೆ ಒಳಗಿಂದೊಳಗೆ ಕೊರೆಯುತ್ತಿರುವುದು ಈಗ ಆತಂಕ ಸೃಷ್ಟಿಸಿದೆ. ಗಂಟಲು ನೋವು, ಕೆಮ್ಮು ಮತ್ತು ಜ್ವರ ಇವು ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತಿದ್ದರೂ ರಾಜ್ಯದಲ್ಲಿ ದಾಖಲಾದ 445 ಪ್ರಕರಣಗಳ ಪೈಕಿ 300 (67%) ಮಂದಿಗೆ ಇಂಥ […]

Read More

ನಿಮ್ಮ‌ ಜಿಯೋ ಡಾಟಾ ಫೇಸ್‌ಬುಕ್‌ ಪಾಲಾಗುತ್ತಿದೆಯೇ? ಸಿಸಿಐ/ಟ್ರಾಯ್ ಮುಂದಿನ ಹೆಜ್ಜೆ ಏನು?

ಏಜೆನ್ಸೀಸ್ ಹೊಸದಿಲ್ಲಿ/ಬೆಂಗಳೂರು ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊದ ಶೇ.10ರಷ್ಟು ಷೇರುಗಳನ್ನು ಜುಕರ್‌ಬರ್ಗ್ ಒಡೆತನದ ಫೇಸ್‌ಬುಕ್‌  ಖರೀದಿಸುವುದು ಕೇವಲ 43,574 ಕೋಟಿ ರೂ.ಗಳ ಡೀಲ್ ಆಗಿ ಉಳಿದಿಲ್ಲ. ಷೇರುಗಳ ಮಾರಾಟ ಮಾತ್ರ ಇದಲ್ಲ, ಇದಕ್ಕೂ ಆಚೆ ಸಾರ್ವಜನಿಕರ ಅಮೂಲ್ಯ ಡೇಟಾದ ಸಂಗತಿ ಈಗ ಮುಂಚೂಣಿಗೆ ಬಂದಿದೆ. ಉಭಯ ಕಂಪನಿಗಳು ಕೋಟ್ಯಂತರ ಗ್ರಾಹಕರು ಅಥವಾ ಬಳಕೆದಾರರ ಖಾಸಗಿ ವಿವರಗಳನ್ನು (ಡೇಟಾ) ಒಳಗೊಂಡಿವೆ. ಮುಂಬರುವ ದಿನಗಳಲ್ಲಿ‌ ಇನ್ನೂ ಕೋಟ್ಯಂತರ ಗ್ರಾಹಕರ ಮಾಹಿತಿಗಳು ಉಭಯ ಕಂಪನಿಗಳ ಕೈಸೇರುವ ನಿರೀಕ್ಷೆ ಇದೆ. ವಿಶ್ವಾದ್ಯಂತ ನಾನಾ […]

Read More

ಕಠಿಣ ಕ್ರಮಗಳು ಅಗತ್ಯ – ಆದಾಯ ಹೆಚ್ಚಿಸಲು ಪರ್ಯಾಯ ಮಾರ್ಗ ಅಗತ್ಯ

ಕೊರೊನಾ ವೈರಸ್ ಹರಡುವುದನ್ನು ತಪ್ಪಿಸಲು ಹೇರಲಾಗಿರುವ ‘ಲಾಕ್ಡೌನ್’ ನಿಂದಾಗಿ ಆರ್ಥಿಕ ಚಟುವಟಿಕೆಗಳೆಲ್ಲವೂ ಸ್ಥಗಿತವಾಗಿವೆ. ಪರಿಣಾಮ ಸರಕಾರದ ಬೊಕ್ಕಸವೂ ಬರಿದಾಗುತ್ತಿದೆ. ಇದು ಅನಿರೀಕ್ಷಿತವೇನಲ್ಲ. ಆದರೆ, ಪರಿಸ್ಥಿತಿಯನ್ನು ಎದುರಿಸುವ ನಿಟ್ಟಿನಲ್ಲಿ ಸರಕಾರ ಕೈಗೊಳ್ಳುತ್ತಿರುವ ಕ್ರಮಗಳು ಯಾವ ರೀತಿ ಪರಿಣಾಮ ಬೀರಲಿವೆ ಎಂಬುದರ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ. ಖಜಾನೆ ಖಾಲಿಯಾಗುತ್ತಿದೆ ಎಂದು ಹೇಳುತ್ತ ಕೂರುವುದರಲ್ಲೂ ಯಾವುದೇ ಅರ್ಥವಿಲ್ಲ. ದೀರ್ಘಕಾಲೀನ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು ಸಮಯೋಚಿತ ನಿರ್ಧಾರಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರಗಳು ಕೈಗೊಳ್ಳಬೇಕು ಮತ್ತು ಅವುಗಳ ಕುರಿತಾದ ಸಂಪೂರ್ಣ ಮಾಹಿತಿಯನ್ನು ಜನರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top