ಕೆಲಸಕ್ಕೆ ಬೇಕಾಗಿದ್ದಾರೆ

– ಉದ್ಯೋಗ ನಷ್ಟದ ನಡುವೆಯೂ ಆಶಾಕಿರಣ | ಹಲವು ಕ್ಷೇತ್ರಗಳಲ್ಲಿ ಬೇಡಿಕೆ ಸೃಷ್ಟಿ – ಕಾರ್ಮಿಕರ ವಲಸೆಯಿಂದ ಸ್ಥಳೀಯರಿಗೆ ಭರವಸೆ | ದೇಶಾದ್ಯಂತ ಹೊಸ ಟ್ರೆಂಡ್. ವಿಕ ಸುದ್ದಿಲೋಕ ಬೆಂಗಳೂರು:  ಲಾಕ್‌ಡೌನ್‌ ಸಡಿಲಿಕೆಯಾಗುತ್ತಿದ್ದಂತೆಯೇ ರಾಜ್ಯದಲ್ಲಿ ಕೈಗಾರಿಕೆ ಮತ್ತು ವ್ಯವಹಾರೋದ್ಯಮಗಳು ನಿಧಾನವಾಗಿ ಚಿಗುರಿಕೊಳ್ಳುತ್ತಿವೆ. ಈ ನಡುವೆ, ಉದ್ಯೋಗಿಗಳಿಗೂ ಬೇಡಿಕೆ ಸೃಷ್ಟಿಯಾಗಿ ಆಶಾವಾದ ಮೂಡಿಸಿದೆ.ಲಾಕ್‌ಡೌನ್‌ನಿಂದಾಗಿ ಆರ್ಥಿಕ ಕ್ಷೇತ್ರ ತತ್ತರಿಸಿ ಹೋಗಿದ್ದು, ಕೈಗಾರಿಕೆ, ವ್ಯಾಪಾರೋದ್ಯಮಗಳು ಸಂಕಷ್ಟಕ್ಕೆ ಸಿಲುಕಿದ್ದವು. ಸಾವಿರಾರು ಮಂದಿ ಉದ್ಯೋಗ ಕಳೆದುಕೊಂಡು ಜಾಬ್‌ಲಾಸ್‌ನ ಹೊಡೆತವೂ ತೀವ್ರವಾಗಿತ್ತು. ಈ ನಡುವೆ, ಆರ್ಥಿಕ […]

Read More

ಕಳವಾಗಿದ್ದ ಬೈಕ್ ಮನೆಗೆ ಪಾರ್ಸೆಲ್ ಬಂದಾಗ!

– 15 ದಿನದ ಬಳಿಕ ಮಾಲೀಕನಿಗೆ ಹಿಂದಿರುಗಿಸಿದ ಕಳ್ಳ – ಕೊಯಮತ್ತೂರಿನಲ್ಲೊಂದು ಅಪರೂಪದ ಘಟನೆ ಕೊಯಮತ್ತೂರು: ಕೊರೊನಾ ಬಿಕ್ಕಟ್ಟಿನ ಸಮಯದಲ್ಲಿ ಹೊಸದು ಸಂಪಾದಿಸುವುದಿರಲಿ, ಇರುವುದನ್ನು ಉಳಿಸಿಕೊಂಡರೆ ಸಾಕು ಎಂಬ ಪರಿಸ್ಥಿತಿ ಬಹುತೇಕ ಜನರದ್ದು. ಅಂಥದ್ದರಲ್ಲಿ ನಿಲ್ಲಿಸಿದ್ದ ಸ್ಥಳದಿಂದ ಬೈಕ್ ಮಾಯವಾದರೆ ಮಾಲೀಕನ ಸ್ಥಿತಿ ಹೇಗಿರಬಹುದು? ಆದರೆ 15 ದಿನದಲ್ಲೇ ಆ ಬೈಕ್ ಮನೆಗೆ ಪಾರ್ಸಲ್ ಬಂದರೆ ಆತನಿಗೆ ಹೇಗಾಗಬಹುದು? ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಂಥದ್ದೇ ಅಪರೂಪದ ಘಟನೆ ನಡೆದಿದೆ. ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಊರಿಗೆ ಮರಳಲು ವಾಹನವಿಲ್ಲದೆ ಬೈಕ್ […]

Read More

ಕೊರೊನಾ ಕುತ್ತಿಗೆಗೆ ಹಾಕಬಹುದೆ ವಿಟಮಿನ್‌ ಡಿ ಕುಣಿಕೆ?

– ಡಿ ಜೀವಸತ್ವ ಕಡಿಮೆಯಾದರೆ ಸೋಂಕಿನ ಹಾವಳಿ, ಹೆಚ್ಚಾದರೆ ಪ್ರತಿರೋಧದ ಸುಂಟರಗಾಳಿ. – ಸುಧೀಂದ್ರ ಹಾಲ್ದೊಡ್ಡೇರಿ. ಕೋವಿಡ್‌-19 ಹಾವಳಿ ಕುರಿತಂತೆ ಜಗತ್ತಿನಾದ್ಯಂತ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಗಳು ಜರುಗುತ್ತಿರುವುದು ನಿಮಗೆ ಗೊತ್ತು. ಅಮೆರಿಕದ ಇಲಿನಾಯ್ಸ್‌ನಲ್ಲಿರುವ ನಾರ್ಥ್‌ ವೆಸ್ಟರ್ನ್‌ ಯೂನಿವರ್ಸಿಟಿಯ ವೈದ್ಯ ವಿಜ್ಞಾನಿಗಳು ತಮ್ಮ ಅಧ್ಯಯನಕ್ಕೆ ಕೋವಿಡ್‌-19 ಸೋಂಕಿನಿಂದ ಹೆಚ್ಚು ನಲುಗಿದ ದೇಶಗಳಾದ ಚೀನಾ, ಫ್ರಾನ್ಸ್‌, ಜರ್ಮನಿ, ಇಟಲಿ, ಇರಾನ್‌, ಸೌತ್‌ಕೊರಿಯ, ಸ್ಪೇನ್‌, ಸ್ವಿಝರ್‌ಲೆಂಡ್‌, ಬ್ರಿಟನ್‌ ಹಾಗೂ ಅಮೆರಿಕವನ್ನು ಆಯ್ದುಕೊಂಡರು. ಈ ಎಲ್ಲ ದೇಶಗಳಲ್ಲಿ ಸೋಂಕಿನಿಂದ ಸತ್ತವರ ಆಸ್ಪತ್ರೆ ದಾಖಲೆಗಳನ್ನು […]

Read More

ಕರಿಯ ಬಿಳಿಯ ಕಲಹ, ಕೆಂಪಾದ ಅಮೆರಿಕ

ಕೊರೊನಾ ವೈರಸ್ ಹಾವಳಿಯ ನಡುವೆಯೂ ಸಾವಿರಾರು ಜನ ಅಮೆರಿಕದಲ್ಲಿ ರಸ್ತೆಗಿಳಿದು ಪ್ರತಿಭಟಿಸುತ್ತಿದ್ದಾರೆ. ಜಾರ್ಜ್ ಫ್ಲಾಯ್ಡ್ ಎಂಬ ಕಪ್ಪು ವರ್ಣೀಯನನ್ನು ಪೊಲೀಸರು ಕೊಂದು ಹಾಕಿದ ನಂತರ ಈ ಪ್ರತಿಭಟನೆಯ ಜ್ವಾಲೆ ಭುಗಿಲೆದ್ದಿದೆ. ಅಮೆರಿಕದ ಆಳದಲ್ಲಿ ಸದಾ ಜೀವಂತವಾಗಿರುವ ವರ್ಣದ್ವೇಷ ಮತ್ತೊಮ್ಮೆ ಭುಗಿಲೆದ್ದಿದೆ. ಶ್ವೇತವರ್ಣೀಯರು- ಕಪ್ಪುವರ್ಣೀಯರ ನಡುವೆ ತಲೆಮಾರುಗಳಿಂದ ಹರಿದುಬಂದ ದ್ವೇಷ ಪ್ರಕಟವಾಗಲು ಮತ್ತೊಂದು ಘಟನೆ ಕಾರಣವಾಗಿದೆ. ಹೆಚ್ಚಿನ ಸಲ ನಡೆಯುವಂತೆ, ಈ ಬಾರಿಯೂ ಅದಕ್ಕೆ ಕಾರಣರಾದವರು ಶ್ವೇತವರ್ಣೀಯ ಪೊಲೀಸರು. ಕರಿಯ ಅಮೆರಿಕನ್ನರ ಜೊತೆಗೆ ಸದಾ ಒರಟುತನ, ಅಸೂಕ್ಷ್ಮ ರೀತಿಯಲ್ಲಿ […]

Read More

ಬೆಂಬಲ ಬೆಲೆ ಸ್ವಾಗತಾರ್ಹ – ಕೃಷಿ, ಉದ್ಯಮಕ್ಕೆ ಉತ್ತೇಜನಕಾರಿ ಕ್ರಮಗಳು

ಕೃಷಿ ವಲಯಕ್ಕೆ ಇನ್ನಷ್ಟು ಉತ್ತೇಜನ ನೀಡುವಂಥ ಕ್ರಮಗಳನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. 14 ಹಿಂಗಾರು ಬೆಳೆಗಳ ಬೆಂಬಲ ಬೆಲೆಯನ್ನು ಏರಿಸಿದೆ. ವಿವಿಧ ಬೆಳೆಗಳಿಗೆ ಶೇ.50ರಿಂದ ಶೇ. 83ರವರೆಗೆ ಗರಿಷ್ಠ ಬೆಂಬಲ ಬೆಲೆ ಏರಿಸಲಾಗಿದೆ. ಭತ್ತ, ಜೋಳ, ಸಜ್ಜೆ, ರಾಗಿ, ಹತ್ತಿ ಮುಂತಾದವು ಬೆಲೆ ಏರಿಕೆಯ ಲಾಭ ಪಡೆದಿವೆ. ಅಲ್ಪಾವಧಿ ಕೃಷಿ ಸಾಲಗಳ ಮರುಪಾವತಿಯ ಅವಧಿಯನ್ನು ವಿಸ್ತರಿಸಿದೆ. ರೈತರ ಲಾಭವನ್ನು ಶೇ.50ರಷ್ಟು ಹೆಚ್ಚಿಸಲು ಕ್ರಮ ತೆಗೆದುಕೊಂಡಿದೆ. ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ ನೀಡಲು ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ಮಧ್ಯಮ ಗಾತ್ರದ […]

Read More

ರೈತರಿಗೆ ಬಂಪರ್ ಕೊಡುಗೆ

– 14 ಮುಂಗಾರು ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಏರಿಕೆ | ರೈತರ ಲಾಭ 50% ಹೆಚ್ಚಳಕ್ಕೆ ಕ್ರಮ. – ಸಣ್ಣ ಕೈಗಾರಿಕೆಗೆ ಮತ್ತಷ್ಟು ನೆರವಿನ ಪ್ಯಾಕೇಜ್ | ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ. – 50%-83%: ವಿವಿಧ ಬೆಳೆಗಳಿಗೆ ಹೆಚ್ಚಿಸಲಾದ ಎಂಎಸ್‌ಪಿ ಪ್ರಮಾಣ. – 2020- 21: ಕನಿಷ್ಠ ಬೆಂಬಲ ಬೆಲೆ ಹೆಚ್ಚಳ ಅನ್ವಯವಾಗುವ ಅವಧಿ. – 35 ಲಕ್ಷ ಹೆಕ್ಟೇರ್ ಈಗಾಗಲೇ ಭತ್ತ ನಾಟಿ ಆರಂಭವಾಗಿರುವ ಕೃಷಿ ಭೂಮಿ. ಹೊಸದಿಲ್ಲಿ: ಲಾಕ್‌ಡೌನ್‌, ಬೆಲೆ ಕುಸಿತ, […]

Read More

ಅಂತರಿಕ್ಷವೇರಿದ ಮೊದಲ ಖಾಸಗಿ ತೇರು

– ಸುಧೀಂದ್ರ ಹಾಲ್ದೊಡ್ಡೇರಿ.  ಬಸ್ಸಿರಲಿ, ವಿಮಾನವಿರಲಿ ಸಾರಿಗೆ ಸೇವೆ ‘ಖಾಸಗಿ’ ಎಂದರೆ ನಮ್ಮ ಜನರಿಗೆ ರೋಮಾಂಚನ. ಖಾಸಗಿಯೆಂದರೆ ಸೇವೆ ಉತ್ಕೃಷ್ಟವಾಗಿರಲೇಬೇಕು ಎಂಬ ನಿರೀಕ್ಷೆ. ಈ ವಿಷಯದಲ್ಲಿ ಅಮೆರಿಕವೂ ಹೊರತಲ್ಲ. ಮೊನ್ನೆ ಶನಿವಾರ ರಾತ್ರಿ ಫ್ಲಾರಿಡಾದ ಕೇಪ್‌ ಕ್ಯಾನವೆರಲ್‌ನಲ್ಲಿ ಲಕ್ಷಾಂತರ ಮಂದಿ ನೆರೆದಿದ್ದರು. ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ನೂರಾರು ನೌಕೆಗಳನ್ನು ಬಾಹ್ಯಾಕಾಶಕ್ಕೆ ತೂರಿದೆ. ಅವೆಲ್ಲದರ ಉಡ್ಡಯನ ಸಮಯದಲ್ಲಿ ಇಷ್ಟೊಂದು ಜನ ಜಮಾಯಿಸಿರಲಿಲ್ಲ. ಆದರೆ, ಈ ಬಾರಿ ಸಾರ್ವಜನಿಕ ಪ್ರವೇಶಕ್ಕೆ ನೂರೆಂಟು ನಿರ್ಬಂಧಗಳಿದ್ದರೂ ಜನ ಕಾದಿದ್ದರು. ಮಾಧ್ಯಮ ಪ್ರತಿನಿಧಿಗಳು, […]

Read More

ಗ್ರಾಮೀಣ ಆರ್ಥಿಕತೆ ಮೇಲೆತ್ತಿದ ಕ್ಷೀರ ಕ್ರಾಂತಿ

ಬಡತನದಿಂದ ಬಳಲುತ್ತಿದ್ದ ಭಾರತದ ಗ್ರಾಮೀಣ ಜನತೆ ತುಸುವಾದರೂ ಹಣದ ಮುಖ ನೋಡಲು ಸಾಧ್ಯವಾದದ್ದು ಕ್ಷೀರ ಕ್ರಾಂತಿಯಿಂದ. ಮಹಿಳೆಯರು ಸ್ವಾವಲಂಬಿಗಳಾಗಲು, ಮಕ್ಕಳು ಪೌಷ್ಟಿಕ ಆಹಾರ ಪಡೆಯಲು ಕಾರಣವಾದ ಈ ಕ್ಷೀರ ಕ್ರಾಂತಿ, ಹಸಿರು ಕ್ರಾಂತಿಯ ಜೊತೆಗೇ ಉಲ್ಲೇಖಿಸಬೇಕಾದ್ದು. 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ದೊರೆತಾಗ, ನಮ್ಮ ಜನತೆಗೆ ಅಗತ್ಯವಾದಷ್ಟು ಆಹಾರಧಾನ್ಯ ಬೆಳೆಯುತ್ತಿರಲಿಲ್ಲ. ಇದನ್ನು ನಿವಾರಿಸಲು ಬೃಹತ್‌ ಕೃಷಿಕ್ಷೇತ್ರಗಳ ಬಳಕೆ, ಆಧುನಿಕ ಯಂತ್ರೋಪಕರಣಗಳು, ರಸಗೊಬ್ಬರಗಳು, ಹೈಬ್ರಿಡ್‌ ತಳಿಗಳು ಇತ್ಯಾದಿಗಳನ್ನು ಬಳಸಿ ‘ಹಸಿರು ಕ್ರಾಂತಿ’ ನಡೆಸಲಾಯಿತು. 60ರ ದಶಕದಲ್ಲಿ ಇದಕ್ಕೆ ವೇಗ ದೊರೆಯಿತು. […]

Read More

ಪರ್ಯಾಯ ಕೀಟನಾಶಕಗಳು ಬೇಕು

ಆಯ್ದ ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ ಮಾಡಿದ್ದು, ಈ ಕುರಿತ ಕರಡು ಪ್ರಸ್ತಾವನೆಯನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿದೆ. ಸರಕಾರದ ಒಲವು ಇವುಗಳ ನಿಷೇಧದತ್ತಲೇ ಇರುವಂತಿದೆ. ಇಲ್ಲಿ ಆತಂಕಕ್ಕೆ ಕಾರಣವಾಗಿರುವುದು, ಪ್ರಸ್ತಾವಿತ 27 ಕೀಟನಾಶಕಗಳು ಹಲವು ದಶಕಗಳಿಂದ ರೈತರು ಹೆಚ್ಚಾಗಿ ಬಳಸುತ್ತಿರುವ, ಕಡಿಮೆ ಅಪಾಯಕಾರಿಯಾಗಿರುವ, ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ ಹಾಗೂ ಅಗ್ಗದ ಜನರಿಕ್‌ ಕೀಟನಾಶಕಗಳಾಗಿವೆ. ಒಂದೆಡೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ, ಕೊರೊನಾ ಕಾಲದ ಲಾಕ್‌ಡೌನ್‌ ಮತ್ತು ‘ಕೃಷಿ ಒಳಸುರಿ’ಗಳ ಬೆಲೆಯೇರಿಕೆಗಳಿಂದ ಹೈರಾಣಾಗಿರುವ ರೈತರು ಪರ್ಯಾಯ […]

Read More

ಅಗ್ಗದ ಕೀಟನಾಶಕ ಬ್ಯಾನ್‌?

– 27 ಪೆಸ್ಟಿಸೈಡ್ಸ್‌ ನಿಷೇಧಕ್ಕೆ ಕೇಂದ್ರದ ಪ್ರಸ್ತಾಪ – ಪರ್ಯಾಯ ನಾಶಕಗಳು ದುಬಾರಿ ಆತಂಕ. ಕಿರಣ್‌ ಕುಮಾರ್‌ ಡಿ. ಕೆ ಬೆಂಗಳೂರು.   ಹಲವು ದಶಕಗಳಿಂದ ಜನಪ್ರಿಯವಾಗಿರುವ ಹಾಗೂ ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ 27 ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ಕರಡು ಪ್ರಸ್ತಾವನೆ ಸಿದ್ಧಪಡಿಸಿದೆ. ಇವುಗಳಲ್ಲಿ ಹೆಚ್ಚಿನವು ಕಡಿಮೆ ಅಪಾಯಕಾರಿಯಾಗಿರುವ ಅಗ್ಗದ ಜನರಿಕ್‌ ಕೀಟನಾಶಕಗಳೇ ಆಗಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ಈಗಾಗಲೇ ಅಧಿಕ ನಿರ್ವಹಣಾ ವೆಚ್ಚ ಹಾಗೂ ಬೆಳೆದ ಉತ್ಪನ್ನಗಳಿಗೆ ದರ ಕುಸಿತದಿಂದ ಹೈರಾಣಾಗಿರುವ ರೈತರು, ದುಬಾರಿ ದರ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top