ದುಷ್ಟ ಚೀನಾಗೆ ತಿರುಗೇಟು

– ಭಾರತ-ಚೀನಾ ಗಡಿಯಲ್ಲಿ ಯೋಧರ ಸಂಘರ್ಷ – ಕರ್ನಲ್ ಸಹಿತ 20 ಯೋಧರು ಹುತಾತ್ಮ – ಯುದ್ಧೋನ್ಮಾದಕ್ಕೆ ಭಾರತ ದಿಟ್ಟ ಉತ್ತರ, ಚೀನಾದ 43 ಸೈನಿಕರೂ ಬಲಿ – ಡ್ರ್ಯಾಗನ್ ವಿರುದ್ಧ ದೇಶಾದ್ಯಂತ ಜನಾಕ್ರೋಶ ಹೊಸದಿಲ್ಲಿ: ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ತಾರಕಕ್ಕೇರಿದೆ. ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಗಡಿಯಲ್ಲಿ ಸೋಮವಾರ ರಾತ್ರಿ ಉಭಯ ದೇಶಗಳ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಕರ್ನಲ್ ಸಮೇತ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಘರ್ಷಣೆಯಲ್ಲಿ ಸ್ಥಳದಲ್ಲೇ ಮೂವರು […]

Read More

ಆರ್ಥಿಕ ಸ್ವಾವಲಂಬನೆಗೆ ಸ್ವದೇಶಿ ಮಂತ್ರ

– ಎನ್‌.ರವಿಕುಮಾರ್‌. ಇಂದು ದೇಶಗಳ ಮಧ್ಯೆ ನಡೆಯುತ್ತಿರುವುದು ಆರ್ಥಿಕ ಯುದ್ಧ. ಭಾರತ ಮತ್ತು ಚೀನಾ ದೇಶಗಳ ಮಧ್ಯೆ ನಡೆಯುತ್ತಿರುವುದು ಕೂಡ ಭೌಗೋಳಿಕ ಯುದ್ಧವಲ್ಲ; ಈ ಆರ್ಥಿಕ ಯುದ್ಧವೇ. ಚೀನಾ ಮೌನವಾಗಿ ನಡೆಸಿರುವ ಆರ್ಥಿಕ ಅಕ್ರಮಣ ನಮ್ಮ ಜನರ ಗಮನಕ್ಕೆ ಬರುತ್ತಿಲ್ಲ. ಭಾರತದಂತೆ ಚೀನಾ ಕೂಡ ಕೃಷಿ ಪ್ರಧಾನವಾಗಿತ್ತು. 70ರ ದಶಕದ ನಂತರ ಅದು ಉತ್ಪಾದನಾ ಶಕ್ತಿಯಾಗಿ ಬದಲಾವಣೆಯಾಯಿತು. ಇಂದು ಜಗತ್ತಿನ ಆರ್ಥಿಕ ಶಕ್ತಿ ಅಮೆರಿಕ ನಂತರ ಸ್ಥಾನ ಚೀನಾದ್ದು. ಇಂದು ಚೀನಾದ ಜಿಡಿಪಿ ಭಾರತದ 3ರಷ್ಟಿದೆ. ಚೀನಾದ […]

Read More

ಕೊರೊನಾ ನಡುವೆಯೇ ನಂ.1 ಆಗುವ ಪಣ

– ಲೈಸೆನ್ಸ್ ಸಿಗುವ ಮೊದಲೇ ಉದ್ಯಮ ಸ್ಥಾಪನೆಗೆ ಸುಗ್ರೀವಾಜ್ಞೆ. ಕೊರೊನಾ ಸಂಕಷ್ಟ ಕಾಲ ಕರ್ನಾಟಕದ ಪಾಲಿಗೆ ವರವಾಗಲಿದೆ. ಕೈಗಾರಿಕೆಗಳ ಪುನಶ್ಚೇತನಕ್ಕೆ ಸರ್ವ ಕ್ರಮಗಳನ್ನು ಕೈಗೊಳ್ಳುವ ಜತೆಗೆ ಹೊಸ ಕೈಗಾರಿಕೆಗಳ ಸ್ಥಾಪನೆಗೂ ಹಲವು ಹೊಸ ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದೆ. ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿ ಕೈಗಾರಿಕಾ ರಾಜ್ಯವಾಗಿ ರೂಪಿಸುವ ಪ್ರಯತ್ನದ ಭಾಗವಿದು ಎಂಬ ಅಭಿಪ್ರಾಯ ಕರುನಾಡ ಕಟ್ಟೋಣ ಬನ್ನಿ ಸಂವಾದದಲ್ಲಿ ಕೇಳಿಬಂತು. ವಿಕ ಸುದ್ದಿಲೋಕ ಬೆಂಗಳೂರು ಕೈಗಾರಿಕೆಗಳ ಪುನಶ್ಚೇತನ ಮತ್ತು ಹೊಸ ಕೈಗಾರಿಕೆಗಳ ಸ್ಥಾಪನೆಯಲ್ಲಿ ಕರ್ನಾಟಕವನ್ನು ದೇಶದಲ್ಲೇ ಮುಂಚೂಣಿ […]

Read More

ಗಿಲ್ಗಿಟ್‌ ವಿಚಾರದಲ್ಲಿ ಭಾರತದ ನಿಲುಮೆಗೆ ಚೀನಾ ಗಿರಗಿಟ್ಲೆ

ಸ್ವಾವಲಂಬನೆಯ ಮೂಲಕ ವ್ಯಾಪಾರ ವಹಿವಾಟಿನಲ್ಲೂ ಚೀನಾವನ್ನು ಮಣಿಸಬೇಕು. – ಹರಿಪ್ರಕಾಶ್‌ ಕೋಣೆಮನೆ. ಚೀನಾದ ವುಹಾನ್‌ ಪ್ರಾಂತ್ಯದಿಂದ ಹರಡಿದ ಕೊರೊನಾ ಎಂಬ ವೈರಸ್‌ ಇಡೀ ಜಗತ್ತಿನ ತಲ್ಲಣಕ್ಕೆ ಕಾರಣವಾಗಿದೆ. ಇಡೀ ಮನುಕುಲಕ್ಕೆ ವೈರಸ್‌ ಹರಡಲು ಕಾರಣವಾದ ಅದೇ ಚೀನಾ ಭಾರತಕ್ಕೆ ಸದಾ ಮಗ್ಗಲು ಮುಳ್ಳು. ಈಗ ಕೊರೊನಾ ಕಾಟದ ಜತೆಗೆ ಮಿಲಿಟರಿ ಬೆದರಿಕೆ ಒಡ್ಡುತ್ತಿದೆ. ಇದಕ್ಕೆ ಭಾರತವೇನು ಹೆದರಿಲ್ಲ. ಈಗಂತೂ ಗಟ್ಟಿ ನಾಯಕತ್ವವೇ ಇರುವುದರಿಂದ, ಹೆದರಿಸುವ ಸ್ಥಾನದಲ್ಲೂ ಇದೆ. ಹಾಗೆ ಸುಮ್ಮನೇ 2017ರ ಸನ್ನಿವೇಶವನ್ನು ಒಮ್ಮೆ ನೆನಪಿಸಿಕೊಳ್ಳೋಣ. ಭಾರತ- […]

Read More

ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ – ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ

– ಕೋರೆ-ಕತ್ತಿ ಫೈಟ್‌ ನಡುವೆ ಕಡಾಡಿ, ಗಸ್ತಿ ಎಂಟ್ರಿ. – ಘಟಾನುಘಟಿಗಳನ್ನು ಬದಿಗೊತ್ತಿ ಪಕ್ಷ ನಿಷ್ಠರಿಗೆ ಗಿಫ್ಟ್‌. ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯಸಭೆ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸುತ್ತಿದ್ದ ಮತ್ತು ಭಿನ್ನಮತದ ಮೂಲಕ ಒತ್ತಡ ಹಾಕುತ್ತಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್‌ ಭರ್ಜರಿ ಶಾಕ್‌ ಕೊಟ್ಟಿದೆ. ಚರ್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ, ಪಕ್ಷ ನಿಷ್ಠರಾದ ಸಾಮಾನ್ಯ […]

Read More

ರಾಜ್ಯಸಭೆ ಚುನಾವಣೆ ನೆಪದಲ್ಲಿ ಕಣ್‌ಕಣ್ಣ ಸಲಿಗೆ – ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿಗಿದು ಮೇಲ್ಮನೆಯ ರಹದಾರಿಯೇ?

– ಶಶಿಧರ ಹೆಗಡೆ.  ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ’ ಎನ್ನುವ ಮಾತಿಗೆ ಪದೇ ಪದೆ ಮೌಲ್ಯ ದೊರಕುತ್ತದೆ. ಈ ಮೌಲ್ಯವರ್ಧನೆಯ ಕೀರ್ತಿಯೂ ರಾಜಕಾರಣಿಗಳಿಗೇ ಸಲ್ಲಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಹಳೆಯ ಅಂಗಿ ಕಳಚಿಟ್ಟು ಹೊಸ ಶರ್ಟ್ ಧರಿಸಿದಷ್ಟೇ ಸುಲಭವಾಗಿ ಪಕ್ಷ ಬದಲಿಸುತ್ತಾರೆ. ಚುನಾವಣಾ ಅಖಾಡದಲ್ಲಿ ಶರಂಪರ ಜಗಳವಾಡಿಕೊಂಡವರು ‘ಅಧಿಕಾರದ ಅನಿವಾರ್ಯತೆ’ ಬಂದೊದಗಿದಾಗ ಗಾಢಾಲಿಂಗನ ಮಾಡಿಕೊಳ್ಳಬಲ್ಲರು. ಅಧಿಕಾರದ ಮೋಹ ಪಾಶದ ಬಲೆಗೆ ಸಿಲುಕಿದವರು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ರಭಸದಿಂದ ಬಂದು ಒಂದೇ ಬಿಂದುವಿನಲ್ಲಿ ಸಂಧಿಸಬಲ್ಲರು. ಅಂತರಂಗದ ರಾಗ, ದ್ವೇಷವನ್ನು […]

Read More

ಹೊಸ ಗೆಳೆಯ ಆಸ್ಪ್ರೇಲಿಯ – ಕಿರಿಕಿರಿಯ ನೆರೆಹೊರೆಗೊಂದು ಎಚ್ಚರಿಕೆ

ಭಾರತವು ಆಸ್ಪ್ರೇಲಿಯದ ಜೊತೆ ಮಹತ್ವದ ಒಂದು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ. ಇನ್ನು ಮುಂದೆ ಭಾರತ ಹಾಗೂ ಆಸ್ಪ್ರೇಲಿಯ ಪರಸ್ಪರರ ನೆಲಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದು. ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ‘ಆನ್‌ಲೈನ್‌ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡು, ರಕ್ಷಣೆ ಸೇರಿ ಏಳು ಕ್ಷೇತ್ರಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ‘ಮ್ಯೂಚುವಲ್‌ ಲಾಜಿಸ್ಟಿಕ್ಸ್‌ ಸಪೋರ್ಟ್‌ ಅಗ್ರಿಮೆಂಟ್‌’ ಕ್ರಾಂತಿಕಾರಕವಾಗಿದ್ದು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ […]

Read More

ಚೀನಾ ಸೊಕ್ಕಿಗೆ ಭಾರತ ಸಡ್ಡು

– ಭಾರತ- ಆಸ್ಪ್ರೇಲಿಯಾ ವರ್ಚುವಲ್ ಶೃಂಗ.  – ವ್ಯೂಹಾತ್ಮಕ ಒಪ್ಪಂದಕ್ಕೆ ಉಭಯ ದೇಶಗಳ ಸಹಿ.  – ಪರಸ್ಪರ ಸೇನಾ ನೆಲೆ ಬಳಸಿಕೊಳ್ಳಲು ಸಮ್ಮತಿ | ಡ್ರ್ಯಾಗನ್‌ಗೆ ಅಂಕುಶ.  ಹೊಸದಿಲ್ಲಿ: ಚೀನಾ ಗಡಿಯಲ್ಲಿ ಕದನ ಕಾರ್ಮೋಡಗಳು ಎದ್ದಿರುವಾಗಲೇ ಭಾರತವು ಸೇನಾ ನೆಲೆಗಳನ್ನು ಬಳಸಿಕೊಳ್ಳುವ ಕುರಿತು ಆಸ್ಪ್ರೇಲಿಯಾ ಜತೆ ಮಹತ್ವದ ರಕ್ಷಣಾ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ್ದು, ವಿಶ್ವದ ಗಮನ ಸೆಳೆದಿದೆ. ಗಡಿ ಸಾರ್ವಭೌಮತೆ ವಿಷಯದಲ್ಲಿ ರಾಜಿ ಮಾಡಿಕೊಳ್ಳುವ ಮಾತೇ ಇಲ್ಲ ಎಂದು ಖಚಿತಪಡಿಸುತ್ತ ಬಂದಿರುವ ಭಾರತ, ಲಡಾಖ್ ವಲಯದ […]

Read More

ಅಚ್ಚುಮೆಚ್ಚಿನ ಜನನಾಯಕ ಮೋದಿ

– ಗೋವಿಂದ ಕಾರಜೋಳ.   ‘ಜನನಾಯಕ’ ಎನ್ನುವ ಪದವೊಂದಿದೆ. ಸಾಧನೆಗಿಂತ ಸೇವೆಗೆ ಹೊಂದುವ ಅರ್ಥ ಕೊಡುವ ಪದ ಇದು. ನರೇಂದ್ರ ದಾಮೋದರ ಮೋದಿಯವರು ವಿಶ್ವದ ಜನನಾಯಕರಲ್ಲೊಬ್ಬರು. ವಿಶ್ವ ಸಮುದಾಯದೆತ್ತರಕ್ಕೆ ಭಾರತೀಯರ ಜನ-ಸೇವಾ ಕಾರ್ಯಗಳನ್ನು ಎತ್ತಿ ತೋರಿದ ಮಹಾನ್ ನಾಯಕ. ಶಾಂತಿ-ಸಹಬಾಳ್ವೆಯ ನಿರೂಪಕ, ನಿರ್ಮಾಪಕ, ದಿಗ್ದರ್ಶಕ, ಸ್ವಚ್ಛ ಭಾರತ ನಿರ್ಮಾತೃ. ಆಯುಷ್ಮಾನ್ ಭಾರತ ರೂವಾರಿ ಹಾಗೂ ಅಂತ್ಯೋದಯ ಚಿಂತನೆಗಳ ಕಾರ್ಯಸಾಧಕ. ಪ್ರಧಾನಿ ಮೋದಿ ಜನಕಲ್ಯಾಣಕ್ಕಾಗಿ ನೂರೆಂಟು ಕಾರ್ಯಯೋಜನೆಗಳನ್ನು ರೂಪಿಸಿ ಕಾರ್ಯಗತಗೊಳಿಸಿದುದನ್ನು ಕಳೆದ ಆರು ವರ್ಷಗಳ ಅವಧಿಯಲ್ಲಿ ರಾಷ್ಟ್ರದ ಜನತೆ ಕಂಡಿದ್ದಾರೆ. […]

Read More

ಎಲ್ಲ ವಲಯ ಖಾಸಗಿಗೆ ಮುಕ್ತ: ನಿರ್ಮಲಾ ಸೀತಾರಾಮನ್

– ಚೀನಾದಿಂದ ಕಂಪನಿಗಳು ಬರಲು ಸೂಕ್ತ ವಾತಾವರಣ ಸೃಷ್ಟಿಸಬೇಕು. ಐದು ನಿರಂತರ ಪ್ರೆಸ್‌ಮೀಟ್‌ಗಳ ಮೂಲಕ ಜಗತ್ತಿನ ಮೂರನೇ ಅತಿ ದೊಡ್ಡ ಪ್ಯಾಕೇಜ್ ಘೋಷಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ಈ ಬಗ್ಗೆ ಹೆಚ್ಚಿನ ವಿವರಗಳನ್ನು ವಿಜಯ ಕರ್ನಾಟಕದ ಸಹೋದರ ಪತ್ರಿಕೆ ‘ಟೈಮ್ಸ್ ಆಫ್ ಇಂಡಿಯಾ’ದ ರಾಜೀವ ದೇಶಪಾಂಡೆ, ಸಿದ್ಧಾರ್ಥ, ಸುರೋಜಿತ್ ಗುಪ್ತಾ ಜೊತೆಗೆ ನಡೆಸಿದ ಈ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. – ಪ್ಯಾಕೇಜ್‌ಗೆ ನೀವು ಪರಿಗಣಿಸಿದ ಅಂಶಗಳೇನು? – ಲಾಕ್‌ಡೌನ್‌ ಘೋಷಿಸಿದ ಗಳಿಗೆಯಿಂದಲೂ ಇದರ ಅವಶ್ಯಕತೆ ನಮ್ಮ ಗಮನದಲ್ಲಿತ್ತು. […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top