ಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕುಬೆಚ್ಚಿ ಬೀಳಿಸುತ್ತಿದೆ ಸೈಲೆಂಟ್ ಸೋಂಕು – 445 ಕೇಸ್ಗಳ ಪೈಕಿ 300 ಮಂದಿಗೆ ರೋಗ ಲಕ್ಷಣವಿಲ್ಲ- ಸೋಂಕಿತರ ಗುರುತಿಸಿ ಚಿಕಿತ್ಸೆ ನೀಡುವುದೇ ಸವಾಲು ವಿಕ ಬ್ಯೂರೊ ಬೆಂಗಳೂರು: ಅತ್ಯಂತ ವೇಗವಾಗಿ ಎಲ್ಲಕಡೆ ವ್ಯಾಪಿಸುತ್ತಿರುವ ಕೊರೊನಾ ವೈರಸ್ ಯಾವುದೇ ಲಕ್ಷಣಗಳಿಲ್ಲದೆ ಒಳಗಿಂದೊಳಗೆ ಕೊರೆಯುತ್ತಿರುವುದು ಈಗ ಆತಂಕ ಸೃಷ್ಟಿಸಿದೆ. ಗಂಟಲು ನೋವು, ಕೆಮ್ಮು ಮತ್ತು ಜ್ವರ ಇವು ಕೊರೊನಾ ಲಕ್ಷಣಗಳು ಎಂದು ಹೇಳಲಾಗುತ್ತಿದ್ದರೂ ರಾಜ್ಯದಲ್ಲಿ ದಾಖಲಾದ 445 ಪ್ರಕರಣಗಳ ಪೈಕಿ 300 (67%) ಮಂದಿಗೆ ಇಂಥ […]
Read More
ಏಜೆನ್ಸೀಸ್ ಹೊಸದಿಲ್ಲಿ/ಬೆಂಗಳೂರು ಮುಕೇಶ್ ಅಂಬಾನಿಯವರ ರಿಲಯನ್ಸ್ ಜಿಯೊದ ಶೇ.10ರಷ್ಟು ಷೇರುಗಳನ್ನು ಜುಕರ್‌ಬರ್ಗ್ ಒಡೆತನದ ಫೇಸ್‌ಬುಕ್ ಖರೀದಿಸುವುದು ಕೇವಲ 43,574 ಕೋಟಿ ರೂ.ಗಳ ಡೀಲ್ ಆಗಿ ಉಳಿದಿಲ್ಲ. ಷೇರುಗಳ ಮಾರಾಟ ಮಾತ್ರ ಇದಲ್ಲ, ಇದಕ್ಕೂ ಆಚೆ ಸಾರ್ವಜನಿಕರ ಅಮೂಲ್ಯ ಡೇಟಾದ ಸಂಗತಿ ಈಗ ಮುಂಚೂಣಿಗೆ ಬಂದಿದೆ. ಉಭಯ ಕಂಪನಿಗಳು ಕೋಟ್ಯಂತರ ಗ್ರಾಹಕರು ಅಥವಾ ಬಳಕೆದಾರರ ಖಾಸಗಿ ವಿವರಗಳನ್ನು (ಡೇಟಾ) ಒಳಗೊಂಡಿವೆ. ಮುಂಬರುವ ದಿನಗಳಲ್ಲಿ ಇನ್ನೂ ಕೋಟ್ಯಂತರ ಗ್ರಾಹಕರ ಮಾಹಿತಿಗಳು ಉಭಯ ಕಂಪನಿಗಳ ಕೈಸೇರುವ ನಿರೀಕ್ಷೆ ಇದೆ. ವಿಶ್ವಾದ್ಯಂತ ನಾನಾ […]
Read More
– ಮಾತೃಭಾಷೆಯೇ ಬೋಧನಾ ಮಾಧ್ಯಮ ಎಂಬ ಆಂಧ್ರ ಹೈಕೋರ್ಟ್ ತೀರ್ಪು ಕಣ್ಣು ತೆರೆಸಲಿ -ನಿರಂಜನಾರಾಧ್ಯ ವಿ.ಪಿ. ಆಂಧ್ರಪ್ರದೇಶ ಸರಕಾರವು ತನ್ನ ರಾಜ್ಯದಲ್ಲಿನ ಎಲ್ಲಾ ಮಾತೃಭಾಷಾ ಮಾಧ್ಯಮದ ಶಾಲೆಗಳನ್ನು ಆಂಗ್ಲಭಾಷೆಯ ಬೋಧನಾ ಮಾಧ್ಯಮದ ಶಾಲೆಗಳನ್ನಾಗಿ ಪರಿವರ್ತಿಸುವ ಮಹತ್ವದ ಎರಡು ಸರಕಾರಿ ಆದೇಶಗಳನ್ನು ಆಂಧ್ರಪ್ರದೇಶದ ಹೈಕೋರ್ಟ್ ರದ್ದುಪಡಿಸಿ, ಏಪ್ರಿಲ್ 15ರಂದು ಐತಿಹಾಸಿಕ ತೀರ್ಪು ನೀಡಿದೆ. ವಿಪುಲವಾಗಿ ಲಭ್ಯವಿರುವ ಐತಿಹಾಸಿಕ ಪುರಾವೆ, ಸಂಶೋಧನೆ ಹಾಗೂ ಕಾನೂನಿನ ಅಂಶಗಳನ್ನು ಕಡೆಗಣಿಸಿ, ಕೇವಲ ಮತ ಬ್ಯಾಂಕ್ ರಾಜಕಾರಣಕ್ಕಾಗಿ ಮನಬಂದಂತೆ ನೀತಿಗಳನ್ನು ರೂಪಿಸುವ ಸರಕಾರಗಳಿಗೆ ಈ […]
Read More
ಕೊರೊನಾ ವೈರಸ್(ಕೋವಿಡ್ 19) ಸೃಷ್ಟಿಸಿರುವ ತಲ್ಲಣಕ್ಕೆ ಇಡೀ ಜಗತ್ತೇ ಸ್ತಬ್ಧವಾಗಿದೆ. ಚೀನಾ, ಅಮೆರಿಕ, ಇಟಲಿ, ಜರ್ಮನಿ ಹಾಗೂ ಸ್ಪೇನ್‌ನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೋವಿಡ್ 19 ಎದುರಿಸಲಾಗಿದೇ ಮಕಾಡೆ ಮಲಗಿವೆ. ಈ ದೇಶಗಳಲ್ಲಿ ಸೋಂಕಿಗೆ ಒಳಗಾಗುವವರು ಮತ್ತು ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಲಕ್ಷ ಮತ್ತು ಸಾವಿರ ಲೆಕ್ಕದಲ್ಲಿದೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ಕೊರೊನಾ ಉಪಟಳವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಗ್ಗೂಡಿ ಹೋರಾಡುತ್ತಿದ್ದು, ಅದರ ಫಲ ಈಗ ನಿಚ್ಚಳವಾಗುತ್ತಿದೆ. ಲಾಕ್‌ಡೌನ್ ಹೆಚ್ಚು ಪರಿಣಾಮಕಾರಿಯಾಗುತ್ತಿದೆ […]
Read More
– ಕಿರಣ್‌ಕುಮಾರ್ ಡಿ.ಕೆ. ಹದಗೆಟ್ಟ ಅರ್ಥವ್ಯವಸ್ಥೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಹರಸಾಹಸಪಡುತ್ತಿದ್ದ ಕೇಂದ್ರ ಸರಕಾರಕ್ಕೆ ಮತ್ತೆ ಪುಟಿದೇಳಲು ಕೊರೊನಾ ಲಾಕ್‌ಡೌನ್ ಅವಕಾಶ ನೀಡಿದೆ! ಕೊರೊನಾ ವೈರಸ್ ನಿಯಂತ್ರಣ ಹಾಗೂ ಆರ್ಥಿಕ ಪುನಶ್ಚೇತನ ಈ ಎರಡೂ ಸವಾಲುಗಳನ್ನು ಮೆಟ್ಟಿನಿಲ್ಲುವುದು ಸುಲಭವಲ್ಲವಾದರೂ ದೇಶಾದ್ಯಂತ ಸೋಂಕಿನ ಪ್ರಮಾಣ ಸಂಪೂರ್ಣ ನಿಯಂತ್ರಣಕ್ಕೆ ಬರುವ ಮೊದಲೇ ಆರ್ಥಿಕತೆಗೆ ಚೇತರಿಕೆ ನೀಡುವತ್ತ ಗಂಭೀರವಾಗಿ ಹೆಜ್ಜೆ ಇರಿಸಲು ಕೇಂದ್ರ ಸರಕಾರ ಮುಂದಡಿ ಇಡಲಾರಂಭಿಸಿದೆ. ದೇಶಾದ್ಯಂತ ಉತ್ಪಾದಕತೆಗೇ ಬ್ರೇಕ್ ಬಿದ್ದಿದೆ. ಹಣಕಾಸಿನ ಹರಿವು ಸಂಪೂರ್ಣ ಸ್ತಬ್ಧ ಎನ್ನುವಂತಾಗಿದೆ. ಹೀಗಿರುವಾಗ ಕೊರೊನಾ […]
Read More
– ಬ್ಯಾರಿಕೇಡ್ ಕಿತ್ತೆಸೆದು ಅಟ್ಟಹಾಸ ಮೆರೆದ 200 ಜನರ ತಂಡ, ಸೋಂಕು ತಡೆಗೆ ಅಸಹಕಾರ ಬೆಂಗಳೂರು: ಸೀಲ್‌ಡೌನ್ ಆದ ಬೆಂಗಳೂರಿನ ಪಾದರಾಯನಪುರ ವಾರ್ಡ್‌ನಲ್ಲಿ ನೂರಾರು ಕಿಡಿಗೇಡಿಗಳು ಬ್ಯಾರಿಕೇಡ್ ಹಾಗೂ ಕಬ್ಬಿಣದ ತಗಡುಗಳನ್ನು ಕಿತ್ತೆಸೆದು ದಾಂಧಲೆ ನಡೆಸಿದ್ದಾರೆ. ಕೊರೊನಾ ಸೋಂಕಿತರ ದ್ವಿತೀಯ ಸಂಪರ್ಕದಲ್ಲಿದ್ದ 58 ಶಂಕಿತರನ್ನು ಕ್ವಾರಂಟೈನ್‌ನಲ್ಲಿಡಲು ಬಿಬಿಎಂಪಿ ಹಾಗೂ ಆರೋಗ್ಯಾಧಿಕಾರಿಗಳು ಭಾನುವಾರ ಸ್ಥಳಕ್ಕೆ ತೆರಳಿದ ವೇಳೆ ಉದ್ರಿಕ್ತ ಗುಂಪು ಪೊಲೀಸರಿಗೇ ಸವಾಲು ಹಾಕಿ ಅಟ್ಟಹಾಸ ಮಾಡಿದೆ. ಈಗಾಗಲೇ ವಾರ್ಡ್‌ನಲ್ಲಿ11 ಮಂದಿ ಕೋವಿಡ್-19 ಸೋಂಕಿತರಿದ್ದು, ಅವರೊಂದಿಗೆ ದ್ವಿತೀಯ ಸಂಪರ್ಕದಲ್ಲಿದ್ದ […]
Read More
ಚೀನಾ ವೈರಸ್ ಎಂದೇ ಕರೆಸಿಕೊಳ್ಳುವ ಕೋವಿಡ್-19 ಜಗತ್ತಿನಾದ್ಯಂತ ವ್ಯಾಪಿಸುತ್ತಿದೆ. ಹಿಂದೆಂದೂ ಕಂಡರಿಯದ ಸಾವು-ನೋವು, ಕಷ್ಟ-ನಷ್ಟ ಎದುರಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವುದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿದೆ. ವಿಶ್ವ ಆರೋಗ್ಯ ಸಂಸ್ಥೆ ಸೇರಿದಂತೆ ಜಗತ್ತಿನ ಎಲ್ಲಾ ವೈದ್ಯಕೀಯ ಹಾಗೂ ವೈರಾಣು ತಜ್ಞರು, ವಿಜ್ಞಾನಿಗಳು ಬಹಳಷ್ಟು ತಲೆಕೆಡಿಸಿಕೊಂಡು ಈ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ಕಂಡುಹಿಡಿಯುವಲ್ಲಿ ನಿರತರಾಗಿದ್ದಾರೆ. ಇಂತಹ ವಿಷಮ ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿ ನಿರೀಕ್ಷೆಗೂ ಮೀರಿ ಎದುರಿಸುತ್ತಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಸಕಾಲಿಕ ಹಾಗೂ ಸಮರ್ಪಕ ನಿರ್ಧಾರಗಳನ್ನು […]
Read More
ಹೊಸದಿಲ್ಲಿ: ವಿಶ್ವಾದ್ಯಂತ ತಲ್ಲಣ ಮೂಡಿಸಿ ಇದುವರೆಗೆ 1.61 ಲಕ್ಷ ಜನರನ್ನು ಬಲಿ ಪಡೆದಿರುವ ಮಹಾಮಾರಿ ಕೊರೊನಾ ವೈರಾಣು ಮಾನವ ನಿರ್ಮಿತ ಎಂದು ನೊಬೆಲ್ ಪುರಸ್ಕೃತ ಫ್ರಾನ್ಸ್‌ನ ವೈದ್ಯಕೀಯ ತಜ್ಞ ಡಾ. ಲಕ್ ಮಾಂಟೆಗ್ನೈರ್ ಆರೋಪಿಸಿದ್ದಾರೆ. ಕೊರೊನಾದಲ್ಲಿರುವ ವೈರಾಣು ಕಣಗಳ ಅಧ್ಯಯನ ನಡೆಸಿರುವ ಅವರು, ವುಹಾನ್‌ನಲ್ಲಿನ ‘ನ್ಯಾಷನಲ್ ಬಯೋಸೇಫ್ಟಿ’ ಪ್ರಯೋಗಾಲಯದಲ್ಲಿಯೇ ಕೊರೊನಾ ವೈರಾಣು ಸೃಷ್ಟಿಯಾಗಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. “ಕೊರೊನಾ ವೈರಾಣು ರಚನೆಯನ್ನು ಗಮನಿಸಿದರೆ ಅದರಲ್ಲಿ ಎಚ್‌ಐವಿ ಮತ್ತು ಮಲೇರಿಯಾ ಕ್ರಿಮಿಯ ರಚನೆಗಳು ಹಾಗೂ ಕೆಲವು ಸೂಕ್ಷ್ಮಾಣು ಅಂಶಗಳು […]
Read More
– ಸರಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್ – 1,000 ಆಂಗ್ಲಮಾದ್ಯಮ ಶಾಲೆಗಳನ್ನು ತೆರೆಯುವ ತಪ್ಪನ್ನು ತಿದ್ದಿಕೊಳ್ಳುತ್ತ ಕರ್ನಾಟಕ ಸರಕಾರ? ಎಲ್ಲ ಶಾಲೆಗಳನ್ನೂ ಇಂಗ್ಲಿಷ್ ಮೀಡಿಯಂ ಆಗಿ ಪರಿವರ್ತಿಸುವ ಆಂಧ್ರ ಸರಕಾರದ ಎರಡು ಆದೇಶಗಳನ್ನು ಹೈಕೋರ್ಟ್ ವಜಾಗೊಳಿಸಿದೆ. ಇದು ವೈಎಸ್‌ಆರ್ ಕಾಂಗ್ರೆಸ್‌ನ ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರಕಾರದ ಪಾಲಿಗೆ ದೊಡ್ಡ ಹಿನ್ನಡೆ. ಆಂಧ್ರ ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ, ನಿನಾಲಾ ಜಯಸೂರ್ಯ ಅವರು ಮಹತ್ವದ ತೀರ್ಪನ್ನು ನೀಡಿದ್ದಾರೆ. ಎಲ್ಲ ತೆಲುಗು ಮಾಧ್ಯಮದ ಶಾಲೆಗಳನ್ನೂ ಆಂಗ್ಲ ಮಾಧ್ಯಮದ ಶಾಲೆಗಳಾಗಿ ರೂಪಿಸಲು ಸರಕಾರ ಮುಂದಾಗಿದ್ದು, ಇದನ್ನು […]
Read More
ಮನೆಯಿಂದ ಕೆಲಸ ಮಾಡುವುದು, ವರ್ಕಿಂಗ್ ಫ್ರಮ್ ಹೋಮ್, ಐಟಿ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೆ ಹೊಸ ವಿಷಯವೇನೂ ಅಲ್ಲ. ವಾರಕ್ಕೊಂದು ದಿನವೋ ತಿಂಗಳಿಗೆರಡು ದಿನವೋ ಮನೆಯಿಂದ ಕೆಲಸ ಮಾಡುವ ಆಯ್ಕೆಯನ್ನು ಅನೇಕ ಸಂಸ್ಥೆಗಳು ಬಹಳ ವರ್ಷಗಳಿಂದಲೇ ತಮ್ಮ ಉದ್ಯೋಗಿಗಳಿಗೆ ನೀಡುತ್ತ ಬಂದಿವೆ. ಆಫೀಸಿಗೆ ಹೋಗುವ ಅಗತ್ಯವೇ ಇಲ್ಲದೆ, ಸದಾಕಾಲವೂ ಮನೆಯಿಂದಲೇ ಕೆಲಸ ಮಾಡುವ ಸೌಲಭ್ಯ ಒದಗಿಸಿರುವ ಸಂಸ್ಥೆಗಳೂ ಇವೆ. ಈ ರೀತಿ ಕೆಲವರಿಗಷ್ಟೇ ಸೀಮಿತವಾಗಿದ್ದ ಸೌಲಭ್ಯವನ್ನು ಎಲ್ಲರಿಗೂ ವಿಸ್ತರಿಸಿದ್ದು, ಐಚ್ಛಿಕವಾಗಿದ್ದುದನ್ನು ಕಡ್ಡಾಯವಾಗಿಸಿದ್ದು ಕೋವಿಡ್-19ರ ಹೆಚ್ಚುಗಾರಿಕೆ. ಕಣ್ಣಿಗೆ […]
Read More