ಇಂಗ್ಲಿಷ್‌ ಮೀಡಿಯಂಗೆ ಜೈ ಎಂದ ಜಗನ್‌ಗೆ ಹಿನ್ನಡೆ

– ಸರಕಾರದ ಆದೇಶ ರದ್ದುಗೊಳಿಸಿದ ಹೈಕೋರ್ಟ್‌
– 1,000 ಆಂಗ್ಲಮಾದ್ಯಮ ಶಾಲೆಗಳನ್ನು ತೆರೆಯುವ ತಪ್ಪನ್ನು ತಿದ್ದಿಕೊಳ್ಳುತ್ತ ಕರ್ನಾಟಕ ಸರಕಾರ?
ಎಲ್ಲ ಶಾಲೆಗಳನ್ನೂ ಇಂಗ್ಲಿಷ್‌ ಮೀಡಿಯಂ ಆಗಿ ಪರಿವರ್ತಿಸುವ ಆಂಧ್ರ ಸರಕಾರದ ಎರಡು ಆದೇಶಗಳನ್ನು ಹೈಕೋರ್ಟ್‌ ವಜಾಗೊಳಿಸಿದೆ. ಇದು ವೈಎಸ್‌ಆರ್‌ ಕಾಂಗ್ರೆಸ್‌ನ ಜಗನ್‌ಮೋಹನ್‌ ರೆಡ್ಡಿ ನೇತೃತ್ವದ ಸರಕಾರದ ಪಾಲಿಗೆ ದೊಡ್ಡ ಹಿನ್ನಡೆ. ಆಂಧ್ರ ಹೈಕೋರ್ಟ್‌ನ ವಿಭಾಗೀಯ ಪೀಠದ ನ್ಯಾಯಮೂರ್ತಿ ಜೆ.ಕೆ.ಮಹೇಶ್ವರಿ, ನಿನಾಲಾ ಜಯಸೂರ್ಯ ಅವರು ಮಹತ್ವದ ತೀರ್ಪನ್ನು ನೀಡಿದ್ದಾರೆ. ಎಲ್ಲ ತೆಲುಗು ಮಾಧ್ಯಮದ ಶಾಲೆಗಳನ್ನೂ ಆಂಗ್ಲ ಮಾಧ್ಯಮದ ಶಾಲೆಗಳಾಗಿ ರೂಪಿಸಲು ಸರಕಾರ ಮುಂದಾಗಿದ್ದು, ಇದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದನ್ನು ಎಲೂರು ಮೂಲದ ಡಾ.ಶ್ರೀನಿವಾಸ
ಗುಂಟಪಲ್ಲಿ ದಾಖಲಿಸಿದ್ದರು.

ರಾಜ್ಯ ಸರಕಾರದ ಮಾಧ್ಯಮ ನೀತಿಯನ್ನು ತಳ್ಳಿ ಹಾಕಿದ ಹೈಕೋರ್ಟ್‌, ‘‘ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯೋತ್ತರ ಭಾರತದ ಇತಿಹಾಸವನ್ನು ಗಮನಿಸಿ. 1955ರ ರಾಜ್ಯ ಮರು ವಿಂಗಡನೆ ಆಯೋಗದ ವರದಿ, ಶಿಕ್ಷಣ ಕಾಯ್ದೆಗೆ ಸಂಬಂಧಿಸಿದ ರಾಷ್ಟ್ರೀಯ ಶಿಕ್ಷಣ ನೀತಿ-1968 ಮತ್ತು ನಾನಾ ವರದಿಗಳು ಮಾತೃ ಭಾಷಾ ಶಿಕ್ಷಣಕ್ಕೆ ಒತ್ತು ನೀಡಿವೆ. ಅದರಲ್ಲೂ 1ರಿಂದ 7ನೇ ತರಗತಿವರೆಗಿನ ಶಿಕ್ಷಣವು ಮಾತೃಭಾಷೆಯಲ್ಲೇ ಇರಬೇಕು ಎಂದು ಹೇಳಿವೆ,’’ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.

‘‘ಆಂಧ್ರ ಸರಕಾರವು ತನ್ನ ಆದೇಶದ ಮೂಲಕ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಇತರೆ ವರದಿಗಳನ್ನು ಬದಿಗೆ ತಳ್ಳುವಂತಿಲ್ಲ. ಸರಕಾರದ ಆದೇಶವನ್ನು ಒಪ್ಪಲಾಗದು. ನಾನಾ ಸಾಂವಿಧಾನಿಕ ನಿಬಂಧನೆಗಳನ್ನು ರಾಜ್ಯ ಸರಕಾರದ ಆದೇಶವು ಮೀರಿದೆ,’’ ಎಂದು ತೀರ್ಪಿನಲ್ಲಿ ಕೋರ್ಟ್‌ ಹೇಳಿದೆ. ಶಿಕ್ಷಣ ಹಕ್ಕಿನ ಸೆಕ್ಷನ್‌ 29(2), 1982ರ ಕಾಯ್ದೆಯ ಸೆಕ್ಷನ್‌ 7(3) ಮತ್ತು (4), ಕೇಂದ್ರದ ನಿಯಮ 8 ಮತ್ತು 23, ಅಲ್ಲದೇ ರಾಜ್ಯದ ನಿಯಮ 25ಕ್ಕೆ ವಿರೋಧಾಭಾಸವಾಗುವಂತೆ
ರಾಜ್ಯ ಸರಕಾರವು ಆದೇಶ ಹೊರಡಿಸಿದೆ ಎಂದು ಕೋರ್ಟ್‌ ಹೇಳಿದೆ.

ನ್ಯಾಯಾಲಯವು ಮಹತ್ವದ ತೀರ್ಪನ್ನು ನೀಡಿದೆ. ಮಾತೃಭಾಷಾ ಶಿಕ್ಷ ಣವು ಸಂವಿಧಾನದ ಮುಲಭೂತ ಹಕ್ಕಲ್ಲವೆಂದು ವಾದಿಸಿ ಅದು ಪಾಲಕರ ಹಕ್ಕೆಂದು
ಪ್ರತಿಪಾದಿಸಿದ ತೀರ್ಪನ್ನು ಈ ಮಹತ್ವದ ತೀರ್ಪು ಸರಿಪಡಿಸಿ ಸಂವಿಧಾನಬದ್ಧ ಹಕ್ಕನ್ನು ಪರಿಚ್ಛೇದ 19 (1) ಆಧರಿಸಿ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ, ಕರ್ನಾಟಕ ಸರಕಾರವು 1,000 ಆಂಗ್ಲ ಮಾಧ್ಯಮ ಶಾಲೆಗಳನ್ನು ತೆರೆಯುವ ಹಿಂದಿನ ತೀರ್ಮಾನವನ್ನು ಹಿಂಪಡೆದು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಬೇಕಿದೆ.- ನಿರಂಜನಾರಾಧ್ಯ ವಿ.ಪಿ.,ಅಭಿವೃದ್ಧಿ ಶಿಕ್ಷ ಣ ತಜ್ಞ

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top