ಭಾರತದ ಮೂರು ರಾಜ್ಯಗಳಲ್ಲಿ ಮಿಡತೆಗಳ ದಾಳಿ ಭಾರಿ ಹಾವಳಿ ಎಬ್ಬಿಸಿದೆ. ಚಂಡಮಾರುತದಂತೆ ಬೀಸಿ ಬರುವ ಮಿಡತೆಗಳು ಕ್ಷಣಾರ್ಧದಲ್ಲಿ ಬೆಳೆದು ನಿಂತ ಬೆಳೆಯನ್ನು ಖಾಲಿ ಮಾಡುತ್ತಿವೆ. ಇವು ಎಲ್ಲಿಂದ ಬಂದವು? ಇವುಗಳಿಂದ ಏನು ನಷ್ಟ? ಒಂದು ಚಿತ್ರಣ ಇಲ್ಲಿದೆ. ರಾಜಸ್ಥಾನದಲ್ಲಿ ಮಿಡತೆಗಳು ಬಿರುಗಾಳಿಯಂತೆ ದಾಳಿ ಮಾಡಿವೆ. ಈ ಬಾರಿ ಗ್ರಾಮೀಣ ಪ್ರದೇಶದ ಹೊಲಗಳನ್ನೆಲ್ಲ ಮುಕ್ಕಿ ಮುಗಿಸಿ, ರಾಜಧಾನಿ ಜೈಪುರಕ್ಕೂ ದಾಳಿ ಮಾಡಿದ್ದು, ವಸತಿ ಪ್ರದೇಶಗಳಲ್ಲಿ ದೂಳಿನ ಮೋಡಗಳಂತೆ ಗುಂಪಾಗಿ ನೆರೆದಿರುವ ಚಿತ್ರಗಳು, ವಿಡಿಯೋಗಳನ್ನು ಅಲ್ಲಿನ ನಿವಾಸಿಗಳು ಹಂಚಿಕೊಳ್ಳುತ್ತಿದ್ದಾರೆ. ಅಕ್ಕಪಕ್ಕದ […]
Read More
ದಾವಣಗೆರೆಯಲ್ಲಿ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ದೇಶದಲ್ಲಿ ಅಲ್ಲಲ್ಲಿ ಹೀಗೆ ಕ್ವಾರಂಟೈನ್‌ನಲ್ಲಿರುವ ಕೆಲವರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ವಿರಳವಾಗಿಯಾದರೂ ವರದಿಯಾಗಿವೆ. ಕ್ವಾರಂಟೈನ್‌ನಲ್ಲಿದ್ದವರು ಓಡಿಹೋದ ಪ್ರಕರಣಗಳು ಸಾಕಷ್ಟಿವೆ. ಇನ್ನು ಹಲವರು ಅಂತಾರಾಜ್ಯ ವಿಮಾನ ಪ್ರಯಾಣ ಮಾಡಬೇಕಿದ್ದವರು, ತಾವು ತಲುಪಿದ ರಾಜ್ಯದಲ್ಲಿ ಕಡ್ಡಾಯ ಕ್ವಾರಂಟೈನ್‌ಗೆ ಒಳಗಾಗಬೇಕು ಎಂಬ ಶರತ್ತಿಗೆ ಒಪ್ಪದೆ ಹಾಗೇ ಮರಳಿದ ಘಟನೆಯೂ ನಡೆದಿದೆ. ಈ ಆತ್ಮಹತ್ಯೆಗಳು, ತಮಗೆ ಕೋವಿಡ್ ಇರಬಹುದು ಎಂಬ ಆತಂಕದಿಂದ ನಡೆದಿವೆ ಎಂದಾದರೆ ಇವರು ಅಜ್ಞಾನಕ್ಕೆ ಬಲಿಯಾಗಿದ್ದಾರೆ ಎಂದೇ ಹೇಳಬೇಕಾಗುತ್ತದೆ. […]
Read More
ಕಳೆದ ಶತಮಾನದ ಕೊನೆಯಲ್ಲಿ, ಸುಮಾರು ಐವತ್ತು ವರ್ಷಗಳ ಕಾಲ ಜಗತ್ತು ಅಮೆರಿಕ- ಸೋವಿಯತ್ ರಷ್ಯದ ಶೀತಲ ಸಮರದಿಂದ ಬಳಲಿತ್ತು. ಈಗ ಮತ್ತೊಮ್ಮೆ ಚೀನಾ ಹಾಗೂ ಅಮೆರಿಕದ ನಡುವೆ ತಿಕ್ಕಾಟ ಉಲ್ಬಣಕ್ಕೆ ಹೋಗುತ್ತಿದ್ದು, ಇನ್ನೊಂದು ಶೀತಲ ಸಮರ ಆರಂಭವಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಿದ್ದಾರೆ. ಶೀತಲ ಸಮರ ಅಂದರೇನು? ಇಪ್ಪತ್ತನೇ ಶತಮಾನದ ಉತ್ತರಾರ್ಧದಲ್ಲಿ, ಅಂದರೆ ಸುಮಾರು 1947ರಲ್ಲಿ ಎರಡನೇ ಮಹಾಯುದ್ಧ ನಿಂತ ಬಳಿಕ, ಅಮೆರಿಕ ಹಾಗೂ ಸೋವಿಯತ್ ರಷ್ಯಗಳ ನಡುವೆ ರಾಜಕೀಯ- ಆರ್ಥಿಕ ತಿಕ್ಕಾಟ ಆರಂಭವಾಯಿತು. ಮಹಾಯುದ್ಧದ ವೇಳೆ […]
Read More
– ತರುಣ್ ವಿಜಯ್. ಈ ಅಂಕಣವನ್ನು ಬರೆಯುತ್ತಿರುವಾಗ ನನ್ನ ಕಂಗಳಲ್ಲಿ ನೀರು ತುಂಬಿಕೊಳ್ಳುತ್ತಿದೆ. ಬರೆಯುವುದಕ್ಕೆ ಕಾಣುತ್ತಿಲ್ಲ ಹಾಗೂ ಕೈ ಚಲಿಸುತ್ತಿಲ್ಲ. ಒಬ್ಬಳು ವಲಸೆ ಕಾರ್ಮಿಕಳ ಚಿತ್ರ ನನ್ನ ಕಣ್ಣಿನಲ್ಲಿದೆ. ಈಕೆ ತುಂಬು ಗರ್ಭಿಣಿ, ಲಾಕ್‌ಡೌನ್ ಪರಿಣಾಮ ಉಂಟಾದ ಕೋಲಾಹಲದಲ್ಲಿ ತನ್ನ ಹಳ್ಳಿಗೆ ಮರಳುತ್ತಿದ್ದಳು. ದಾರಿಯಲ್ಲೇ ಹೆರಿಗೆಯಾಯಿತು. ನವಜಾತ ಶಿಶುವಿನ ರಕ್ತವು ಆಕೆಯ ಕಣ್ಣೀರಿನಲ್ಲಿ ಮರೆಯಾಗಿದ್ದಿರಬೇಕು. ಆಕೆ ಕಣ್ಣೀರಿಡುತ್ತಲೇ ತನ್ನ ನೂರ ಅರುವತ್ತು ಕಿಲೋಮೀಟರ್ ಪ್ರಯಾಣವನ್ನು ನಡೆದು ಪೂರೈಸಿದಳು. ನಾನು ನೋಡಿದ ಇನ್ನೊಂದು ಚಿತ್ರ ಎಂದರೆ ಎತ್ತಿನ ಬಂಡಿ […]
Read More
ರಾ.ನಂ. ಚಂದ್ರಶೇಖರ್. ಹೊರ ರಾಜ್ಯಗಳಿಂದ ಬಂದಿದ್ದ ವಲಸೆ ಕಾರ್ಮಿಕರು ಭಾರೀ ಸಂಖ್ಯೆಯಲ್ಲಿ ತಮ್ಮ ಊರುಗಳಿಗೆ ಮರಳಿದ್ದಾರೆ. ಕಾರ್ಖಾನೆಗಳು, ಕಟ್ಟಡ ನಿರ್ಮಾಣ, ಗ್ರಾನೈಟ್ ಉದ್ಯಮ ಸೇರಿ ನಿರ್ಮಾಣ ಕಾರ್ಯಗಳಲ್ಲಿ ಇವರ ಪಾಲು ದೊಡ್ಡದಾಗಿತ್ತು. ಜೊತೆಗೆ ಸೆಕ್ಯುರಿಟಿ, ಹೋಟೆಲ್, ಮಾಲ್‌ಗಳು ಸೇರಿದಂತೆ ಹಲವು ಕ್ಷೇತ್ರಗಳಿಗೂ ವ್ಯಾಪಿಸಿದ್ದರು. ಸಹಜವಾಗಿ ಈ ಎಲ್ಲ ಕ್ಷೇತ್ರಗಳಲ್ಲಿ ಕಾರ್ಮಿಕರ ಕೊರತೆ ಕಾಡಲಿದೆ. ಇಂತಹ ಪರಿಸ್ಥಿತಿ ಉದ್ಭವಿಸಿರುವುದು ಇದೇ ಮೊದಲಲ್ಲ. ಈ ಪರಿಸ್ಥಿತಿಯನ್ನು ರಾಜ್ಯ ಸರಕಾರ ಮತ್ತು ಕನ್ನಡಿಗರು ಸರಿಯಾಗಿ ಬಳಸಿಕೊಂಡರೆ ವರದಾನವಾಗಲಿದೆ. 1991ರಲ್ಲಿ ಪ್ರಕಟವಾದ ಕಾವೇರಿ […]
Read More
ಒಂದೇ ದಿನ ಐವರಿಗೆ ಸೋಂಕು | ಕರಾವಳಿಯ 4 ಠಾಣೆ ಸೀಲ್‌ಡೌನ್. ಸೂಕ್ತ ತರಬೇತಿ, ರಕ್ಷಣಾ ಪರಿಕರವಿಲ್ಲದೆ ಅಪಾಯಕ್ಕೆ ಸಿಲುಕುವ ಸಿಬ್ಬಂದಿ. ವಿಕ ಸುದ್ದಿಲೋಕ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಪೊಲೀಸರೂ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ಒಂದೇ ದಿನ ಕರಾವಳಿಯ ನಾಲ್ವರು ಮತ್ತು ಹಾಸನ ಒಬ್ಬ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಜತೆಗೆ 150ಕ್ಕೂ ಅಧಿಕ ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೊರೊನಾ […]
Read More
6 ವರ್ಷದವರೆಗಿನ ಮಕ್ಕಳು ಒಂದು ಗಂಟೆಗಿಂತ ಹೆಚ್ಚು ಸಮಯ ಸ್ಕ್ರೀನ್ ನೋಡಬಾರದು. ಶಿಶುಗಳ ಮೇಲೆ ಆನ್‌ಲೈನ್ ಶಿಕ್ಷಣ ಪ್ರಯೋಗ ಬೇಡವೇ ಬೇಡ. ಮಕ್ಕಳ ದೃಷ್ಟಿಗೆ ಭಾರಿ ತೊಂದರೆಯಾಗುವ ಅಪಾಯ. ದೈಹಿಕ, ಮಾನಸಿಕವಾಗಿಯೂ ತೊಂದರೆ ಒಡ್ಡುವ ಡಿಜಿಟಲ್ ಸ್ಕ್ರೀನ್. —— ಸರಕಾರವನ್ನು ಎಚ್ಚರಿಸಿದ ನಿಮ್ಹಾನ್ಸ್ ವರದಿ | ಮಕ್ಕಳ ಬೆಳವಣಿಗೆ ಮೇಲೆ ದುಷ್ಪರಿಣಾಮ ಎಂದ ಸಂಸ್ಥೆ. ಜಯಂತ್ ಗಂಗವಾಡಿ ಬೆಂಗಳೂರು. ‘ಯಾವುದೇ ಕಾರಣಕ್ಕೂ ಶಿಶುಗಳಿಗೆ ‘ಆನ್‌ಲೈನ್ ತರಗತಿ’ಗಳನ್ನು ನಡೆಸುವುದು ಬೇಡವೇ ಬೇಡ,’ ಎಂದು ನಿಮ್ಹಾನ್ಸ್ ಸರಕಾರಕ್ಕೆ ಸಲಹೆ ನೀಡಿದೆ. […]
Read More
– ಹರೀಶ್ ಕೇರ. ಈ ಕಾಯಿಲೆಯೆಂಬ ದಾರಿಯಲ್ಲಿ ನಮಗಿಂತ ಮೊದಲು ಇನ್ನೂ ಬೇಕಾದಷ್ಟು ಮಂದಿ ಹಾದು ಹೋಗಿದ್ದಾರೆ ಎಂಬುದು ನಮಗೆ ಗೊತ್ತಿರುತ್ತದೆ. ಆದರೆ ಆ ಕಾಯಿಲೆಯ ಹಾದಿಯನ್ನು ನಾವೇ ನಡೆಯುತ್ತಿರುವಾಗ ಮಾತ್ರ ಅದು ನಮ್ಮದೇ ಆಗಿರುತ್ತದೆ. ಆಗ ಅವರಾರಯರ ಯಾತನೆ, ಒಂಟಿತನ ಇತ್ಯಾದಿಗಳೂ ನಮ್ಮ ನೆರವಿಗೆ ಬರುವುದಿಲ್ಲ- ಎಂದು ಬರೆಯುತ್ತಾಳೆ ವರ್ಜೀನಿಯಾ ವೂಲ್ಫ್. ಹತ್ತೊಂಬತ್ತನೇ ಶತಮಾನದ ಮೊದಲರ್ಧದಲ್ಲಿ ಬದುಕಿದ್ದ ಬ್ರಿಟನ್‌ನ ಲೇಖಕಿ. ಈಕೆ ಕಾದಂಬರಿಗಾರ್ತಿಯಾಗಿದ್ದಂತೆ ಮೊದಮೊದಲ ಸ್ತ್ರೀವಾದಿ ಚಿಂತಕಿಯೂ ಆಗಿದ್ದಳು. ‘ಆನ್ ಬೀಯಿಂಗ್ ಇಲ್’ (ಕಾಯಿಲೆ ಬೀಳುವುದರ […]
Read More
– ದೀಪಾ ರವಿಶಂಕರ್. ಕೆಲವು ಕೃತಿಗಳು ನಮ್ಮ ಬದುಕು, ಹೋರಾಟ, ಸಂಬಂಧಗಳ ಪಲ್ಲಟದೊಂದಿಗೆ ಅಭಿವೃದ್ಧಿಗಾಗಿ ಪ್ರಕೃತಿ- ಜನಪದದ ಮೇಲೆ ಮನುಷ್ಯರು ನಡೆಸಿದ ಅತ್ಯಾಚಾರವನ್ನೂ ಸಾರಿ ಹೇಳುತ್ತಿರುತ್ತವೆ. ಅಂಥ ಒಂದು ಕಾದಂಬರಿ ಗಜಾನನ ಶರ್ಮ ಅವರ ‘ಪುನರ್ವಸು’. ಹಲವು ತಲೆಮಾರುಗಳ ಕತೆಯನ್ನು ಹೇಳುವ ಅನೇಕ ಕೃತಿಗಳು ನಮ್ಮಲ್ಲಿ ಬಂದಿವೆ- ಮರಳಿ ಮಣ್ಣಿಗೆ, ಮೂರು ತಲೆಮಾರು, ಸ್ವಪ್ನ ಸಾರಸ್ವತ ಇತ್ಯಾದಿ. ಹಾಗೇ ಒಂದು ಪ್ರದೇಶದ ಜನಜೀವನದ ಏರಿಳಿತ, ಸಾಂಸ್ಕೃತಿಕ ಪಲ್ಲಟಗಳ ಕತೆಯನ್ನು ಹೇಳುವ ಕೃತಿಗಳು ಕೂಡ- ಮಲೆಗಳಲ್ಲಿ ಮದುಮಗಳು, ಗ್ರಾಮಾಯಣ […]
Read More
– ಮಲ್ಲಿಕಾರ್ಜುನ ತಿಪ್ಪಾರ. ಇಸ್ರೇಲ್‌ನ ಪ್ರಶ್ನಾತೀತ ನಾಯಕ, ಪ್ರಖರ ರಾಷ್ಟ್ರವಾದಿ ಬೆಂಜಮಿನ್ ನೆತನ್ಯಾಹು ಕಟಕಟೆಯಲ್ಲಿ ನಿಲ್ಲುವ ಪರಿಸ್ಥಿತಿ ಬಂದೊದಗಿದೆ. ಕೋರ್ಟ್‌ಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಪಡೆಯುವ ಎಲ್ಲ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಭಾನುವಾರ ಅವರು ವಿಚಾರಣೆಗೆ ಹಾಜರಾಗಲಿದ್ದು, ಅದರೊಂದಿಗೆ ‘ಅಧಿಕಾರದಲ್ಲಿದ್ದಾಗಲೇ ಕಟಕಟೆ ಏರಿದ ಮೊದಲ ಪ್ರಧಾನಿ’ ಎಂಬ ಕುಖ್ಯಾತಿಯೂ ನೆತನ್ಯಾಹು ಬೆನ್ನಿಗಂಟಿದೆ. ಸುತ್ತ ವೈರಿ ರಾಷ್ಟ್ರಗಳ ಕೂಟವನ್ನೆ ಕಟ್ಟಿಕೊಂಡಿರುವ ಪುಟ್ಟ ದೇಶ ಇಸ್ರೇಲ್‌ನ ರಾಜಕಾರಣದಲ್ಲಿ ಬೆಂಜಮಿನ್ ನೆತನ್ಯಾಹು ಅವರದ್ದು ಮಹತ್ತರ ಪಾತ್ರವಿದೆ. ದಶಕಗಳಿಂದ ಇಸ್ರೇಲ್ ರಾಜಕಾರಣದಲ್ಲಿ ಪ್ರಭಾವವನ್ನು […]
Read More