ಪೊಲೀಸರಿಗೆ ಸವಾಲ್‌

ಒಂದೇ ದಿನ ಐವರಿಗೆ ಸೋಂಕು |  ಕರಾವಳಿಯ 4 ಠಾಣೆ ಸೀಲ್‌ಡೌನ್.  

‌ಸೂಕ್ತ ತರಬೇತಿ, ರಕ್ಷಣಾ ಪರಿಕರವಿಲ್ಲದೆ ಅಪಾಯಕ್ಕೆ ಸಿಲುಕುವ ಸಿಬ್ಬಂದಿ.

ವಿಕ ಸುದ್ದಿಲೋಕ ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಡುವೆಯೇ ಪೊಲೀಸರೂ ಸೋಂಕಿಗೆ ಒಳಗಾಗುತ್ತಿರುವುದು ಆತಂಕ ಮೂಡಿಸಿದೆ. ಭಾನುವಾರ ಒಂದೇ ದಿನ ಕರಾವಳಿಯ ನಾಲ್ವರು ಮತ್ತು ಹಾಸನ ಒಬ್ಬ ಸಿಬ್ಬಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ಠಾಣೆಗಳನ್ನು ಸೀಲ್‌ಡೌನ್‌ ಮಾಡಲಾಗಿದೆ. ಜತೆಗೆ 150ಕ್ಕೂ ಅಧಿಕ ಮಂದಿ ಪೊಲೀಸರನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಕೊರೊನಾ ವಾರಿಯರ್ಸ್‌ಗಳಾಗಿ ಬೀದಿ ಬೀದಿಗಳಲ್ಲಿ ಕಾರ್ಯಾಚರಿಸುತ್ತಿರುವ ಪೊಲೀಸ್‌ ಸಿಬ್ಬಂದಿ ಎಷ್ಟೊಂದು ಅಪಾಯವನ್ನು ಎದುರಿಸುತ್ತಿದ್ದಾರೆ ಎನ್ನುವುದಕ್ಕೆ ಈ ಪ್ರಕಣಗಳು ಸಾಕ್ಷಿಯಾಗಿವೆ. ಕರಾವಳಿಯ ನಾಲ್ಕೂ ಸೋಂಕುಗಳಿಗೆ ಮುಂಬಯಿಯಿಂದ ವಲಸೆ ಬಂದವರ ಸಂಪರ್ಕವೇ ಕಾರಣವಾಗಿದೆ. ಅವರ ದಾಖಲೆ ಪರಿಶೀಲನೆ, ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡುವ ವೇಳೆ ಸೋಂಕು ತಗುಲಿರುವ ಸಾಧ್ಯತೆ ಇದೆ. ಮುಂಬಯಿಯಲ್ಲಿ ಸಾವಿರಾರು ಪೊಲೀಸರು ಸೋಂಕಿಗೆ ಒಳಗಾಗುತ್ತಿರುವುದು ಮಾತ್ರವಲ್ಲ, ಸಾವನ್ನಪ್ಪುತ್ತಿರುವುದರಿಂದ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಅವರಿಗೆ ಸೂಕ್ತ ತರಬೇತಿ, ರಕ್ಷಣಾ ಪರಿಕರಗಳನ್ನು ಒದಗಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.

ಅಪಾಯದಲ್ಲಿದ್ದಾರೆ ಪೊಲೀಸ್‌:

-ಚೆಕ್‌ಪೋಸ್ಟ್‌ಗಳಲ್ಲಿ, ಠಾಣೆಗಳಲ್ಲಿ ದಾಖಲೆ ಪರಿಶೀಲನೆ ವೇಳೆ ಸುರಕ್ಷತಾ ಕ್ರಮಗಳಿಲ್ಲ. – ಆಧಾರ್‌ ಕಾರ್ಡ್‌ಗಳನ್ನು ನೇರವಾಗಿ ಕೈಯಲ್ಲೇ ಸ್ವೀಕರಿಸಲಾಗುತ್ತಿದೆ. – ಕ್ವಾರಂಟೈನ್‌ ಕೇಂದ್ರಗಳಿಗೆ ಪದೇಪದೆ ಭೇಟಿ ಅನಿವಾರ್ಯತೆಯಿಂದ ಆತಂಕ ಉಂಟಾಗಿದೆ. – ಕಳ್ಳರು, ಸಮಾಜಘಾತುಕರನ್ನು ಹಿಡಿಯುವಾಗಲೇ ಕೆಲವರಿಗೆ ಸೋಂಕು ತಗುಲಿದೆ. – ಕೆಲವು ವಿಷಯಗಳ ಬಗ್ಗೆ ಬೆಂಗಳೂರಿನಲ್ಲಿತರಬೇತಿ ನೀಡಿದ್ದರೂ ಎಲ್ಲರಿಗೂ ತಲುಪಿಲ್ಲ.

ಪೊಲೀಸರ ರಕ್ಷಣೆ ಹೇಗೆ?

– ಬೀದಿಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸರು ಸುರಕ್ಷತೆಗಾಗಿ ಪಿಪಿಇ ಕಿಟ್‌ ಧರಿಸುವುದು ಕಷ್ಟ. ಆದರೆ, ಚೆಕ್‌ ಪೋಸ್ಟ್‌, ಠಾಣೆಗಳಲ್ಲಿ ದಾಖಲೆ ಪರಿಶೀಲನೆ ಮಾಡುವವರು ಧರಿಸಬಹುದು. – ಪೊಲೀಸರಾದರೂ ಆಗಾಗ ಸ್ಯಾನಿಟೈಸರ್‌ಗಳನ್ನು ಬಳಸಿದರೆ ಸೋಂಕು ತಡೆಯಬಹುದು. – ದಾಖಲೆ ಪರಿಶೀಲನೆಗೆ ಡಿಜಿಟಲ್‌ ವ್ಯವಸ್ಥೆ ಮಾಡಬಹುದು.

ಸೀಲ್‌ಡೌನ್‌ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಪಿಪಿಇ ಕಿಟ್‌ ನೀಡಲಾಗಿದೆ. ರಕ್ಷಣಾ ಕ್ರಮಗಳ ಬಗ್ಗೆ ತರಬೇತಿ ಕೂಡಾ ನೀಡಲಾಗಿದೆ. ಸಿಬ್ಬಂದಿ ಕಡ್ಡಾಯವಾಗಿ ಸೂಚನೆ ಪಾಲಿಸಬೇಕು ಎಂದು ಖಡಕ್‌ ಸೂಚನೆ ನೀಡಲಾಗಿದೆ.- ಭಾಸ್ಕರ್‌ರಾವ್‌, ಬೆಂಗಳೂರು ನಗರ ಪೊಲೀಸ್‌ ಕಮಿಷನರ್.

‌ಎಲ್ಲೆಲ್ಲಿ ಎಷ್ಟು ಸೋಂಕು?

ಬಾಗಲಕೋಟೆ 04,

ಉಡುಪಿ 03,

ಬೆಂಗಳೂರು ನಗರ 02,

ಬೆಂ.ಗ್ರಾಮಾಂತರ, ಮಂಡ್ಯ, ಕಲಬುರಗಿ, ದ.ಕನ್ನಡ, ಹಾಸನ, ಬಿಜಾಪುರ, ದಾವಣಗೆರೆ ತಲಾ 01.

150ಕ್ಕೂ ಅಧಿಕ ಮಂದಿಗೆ ಕ್ವಾರಂಟೈನ್‌

ಮಹಾರಾಷ್ಟ್ರದಲ್ಲಿ ಗಂಭೀರ ಸ್ಥಿತಿ:

*1,758: ಕೊರೊನಾ ಸೋಂಕಿತ ಪೊಲೀಸರ ಸಂಖ್ಯೆ

*87: 24 ಗಂಟೆಯಲ್ಲಿಸೋಂಕು ಪತ್ತೆಯಾದವರು

*18: ಕೊರೊನಾಗೆ ಬಲಿಯಾದ ಪೊಲೀಸ್‌ ಸಿಬ್ಬಂದಿ 

* ಹೈದರಾಬಾದ್‌ನಲ್ಲೂ ಒಬ್ಬ ಪೊಲೀಸ್‌ ಸಾವು

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top