– ಗುಂಡೇಟಿನ ಬದಲು ಕಲ್ಲೇಟಿನ ತಂತ್ರ ಬಳಕೆ | ದೊಣ್ಣೆ, ತಂತಿಗಳಿಂದ ಸುತ್ತಿದ ಬಾಲ್ ಸಹ ಚೀನೀಯರ ಅಸ್ತ್ರ! ಹೊಸದಿಲ್ಲಿ: ಚೀನಾ ಸೇನೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಪಡೆಗಳ ಮೇಲೆ ಆಕ್ರಮಣ ನಡೆಸಲು ನೈತಿಕತೆ ಮರೆತು ಉಗ್ರರಂತೆ ಕೀಳುಮಟ್ಟದ ತಂತ್ರಗಾರಿಕೆಗಳನ್ನು ಬಳಸುತ್ತಿದೆ. ಕಳೆದ ತಿಂಗಳು ಸಿಕ್ಕಿಂ ಗಡಿಯಲ್ಲಿ ಉಭಯ ದೇಶಗಳ ಸೈನಿಕರ ನಡುವೆ ಮಾರಾಮಾರಿಯಾದಾಗಲೂ ಕಲ್ಲು, ದೊಣ್ಣೆಗಳನ್ನು ಬಳಸಲಾಗಿತ್ತು. ಸೋಮವಾರ ರಾತ್ರಿ ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿಯೂ ಒಂದೇ ಒಂದು ಗುಂಡು ಹಾರಿಲ್ಲ. ಬದಲಿಗೆ ಕಲ್ಲು ತೂರಾಟ […]
Read More
– ಭಾರತ-ಚೀನಾ ಗಡಿಯಲ್ಲಿ ಯೋಧರ ಸಂಘರ್ಷ – ಕರ್ನಲ್ ಸಹಿತ 20 ಯೋಧರು ಹುತಾತ್ಮ – ಯುದ್ಧೋನ್ಮಾದಕ್ಕೆ ಭಾರತ ದಿಟ್ಟ ಉತ್ತರ, ಚೀನಾದ 43 ಸೈನಿಕರೂ ಬಲಿ – ಡ್ರ್ಯಾಗನ್ ವಿರುದ್ಧ ದೇಶಾದ್ಯಂತ ಜನಾಕ್ರೋಶ ಹೊಸದಿಲ್ಲಿ: ಭಾರತ-ಚೀನಾ ಗಡಿಯಲ್ಲಿ ಸಂಘರ್ಷ ತಾರಕಕ್ಕೇರಿದೆ. ಪೂರ್ವ ಲಡಾಖ್‌ನ ಗಲ್ವಾನ್ ಕಣಿವೆ ಗಡಿಯಲ್ಲಿ ಸೋಮವಾರ ರಾತ್ರಿ ಉಭಯ ದೇಶಗಳ ಯೋಧರ ನಡುವೆ ನಡೆದ ಘರ್ಷಣೆಯಲ್ಲಿ ಭಾರತದ ಕರ್ನಲ್ ಸಮೇತ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಘರ್ಷಣೆಯಲ್ಲಿ ಸ್ಥಳದಲ್ಲೇ ಮೂವರು […]
Read More
ಅದು 1993ರ ಮಾರ್ಚ್ 8. ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ದೊಡ್ಡ ಕಾರ್ಯಾಚರಣೆಯೊಂದಕ್ಕೆ ಸಿದ್ಧವಾಗಿದ್ದರು. ಬೆಳ್ಳಿಯ ಕಳ್ಳ ಸಾಗಾಣಿಕೆ ನಡೆಯುತ್ತಿದೆ ಎಂಬ ಮಾಹಿತಿ ಪಡೆದಿದ್ದ ಅವರು ಅಂದಿನ ದಕ್ಷಿಣ ಕನ್ನಡ ಜಿಲ್ಲೆಯ (ಈಗ ಉಡುಪಿ ಜಿಲ್ಲೆ) ಪಡುಬಿದ್ರಿ ಜಂಕ್ಷನ್‌ನಲ್ಲಿ ಕಾದು ಕುಳಿತಿದ್ದರು. ಮಂಗಳೂರಿನಿಂದ ಉತ್ತರ ಕನ್ನಡದ ಕಾರವಾರದವರೆಗಿನ ಸುಮಾರು 110 ಕಿ.ಮೀ. ಉದ್ದದ ಕರಾವಳಿ ಅದಾಗಲೇ ಚಿನ್ನ ಮತ್ತು ಇತರ ವಸ್ತುಗಳ ಕಳ್ಳ ಸಾಗಾಣಿಕೆಗೆ ಫೇಮಸ್ ಆಗಿತ್ತು. ಸುಂದರವಾದ ಕಡಲ ತೀರಗಳು ಅಕ್ರಮ ಸಾಗಾಟಕ್ಕೆ ರಾಜಮಾರ್ಗವನ್ನೇ […]
Read More
– ಎನ್.ರವಿಕುಮಾರ್. ಇಂದು ದೇಶಗಳ ಮಧ್ಯೆ ನಡೆಯುತ್ತಿರುವುದು ಆರ್ಥಿಕ ಯುದ್ಧ. ಭಾರತ ಮತ್ತು ಚೀನಾ ದೇಶಗಳ ಮಧ್ಯೆ ನಡೆಯುತ್ತಿರುವುದು ಕೂಡ ಭೌಗೋಳಿಕ ಯುದ್ಧವಲ್ಲ; ಈ ಆರ್ಥಿಕ ಯುದ್ಧವೇ. ಚೀನಾ ಮೌನವಾಗಿ ನಡೆಸಿರುವ ಆರ್ಥಿಕ ಅಕ್ರಮಣ ನಮ್ಮ ಜನರ ಗಮನಕ್ಕೆ ಬರುತ್ತಿಲ್ಲ. ಭಾರತದಂತೆ ಚೀನಾ ಕೂಡ ಕೃಷಿ ಪ್ರಧಾನವಾಗಿತ್ತು. 70ರ ದಶಕದ ನಂತರ ಅದು ಉತ್ಪಾದನಾ ಶಕ್ತಿಯಾಗಿ ಬದಲಾವಣೆಯಾಯಿತು. ಇಂದು ಜಗತ್ತಿನ ಆರ್ಥಿಕ ಶಕ್ತಿ ಅಮೆರಿಕ ನಂತರ ಸ್ಥಾನ ಚೀನಾದ್ದು. ಇಂದು ಚೀನಾದ ಜಿಡಿಪಿ ಭಾರತದ 3ರಷ್ಟಿದೆ. ಚೀನಾದ […]
Read More
ಕೊರೊನಾ ಹಿನ್ನೆಲೆಯಲ್ಲಿ ಅಡಕತ್ತರಿಯಲ್ಲಿ ಸಿಲುಕಿರುವ ವ್ಯವಸ್ಥೆಗಳಲ್ಲಿ ಶಿಕ್ಷಣವೂ ಪ್ರಮುಖವಾಗಿದೆ. ಮಕ್ಕಳು, ಪೋಷಕರು, ಶಿಕ್ಷಣ ಸಂಸ್ಥೆಗಳು ಮಾತ್ರವಲ್ಲ ಸ್ವತಃ ಸರಕಾರವೂ ಶಿಕ್ಷಣದ ಮುಂದಿನ ಹೆಜ್ಜೆಗಳನ್ನು ನಿರ್ಧರಿಸಲು ಹೆಣಗಾಡುತ್ತಿದೆ. ಏರುತ್ತಿರುವ ಸೋಂಕಿನಿಂದಾಗಿ ಶಾಲೆಗಳನ್ನು ಸದ್ಯೋಭವಿಷ್ಯದಲ್ಲಿ ತೆರೆಯುವ ಸ್ಥಿತಿ ಇಲ್ಲ. ಸರಕಾರವೇ ಶಾಲೆ ತೆರೆಯಲು ಮುಂದಾದರೂ ಪೋಷಕರು ಕಳುಹಿಸಿಕೊಡುವ ಮನೋಸ್ಥಿತಿಯಲ್ಲಿಲ್ಲ. ಈ ನಡುವೆ, ಖಾಸಗಿ ಶಿಕ್ಷಣ ಸಂಸ್ಥೆಗಳು ಆನ್‌ಲೈನ್ ಪಾಠದ ಮೂಲಕ ತಮ್ಮ ವ್ಯವಸ್ಥೆಯನ್ನು ಮುಂದುವರಿಸಲು ಪ್ರಯತ್ನಿಸಿದವು. ಆದರೆ, ಸರಕಾರ ಅದಕ್ಕೂ ಕಡಿವಾಣ ಹಾಕಿದೆ. ಎಲ್‌ಕೆಜಿಯಿಂದ ಐದನೇ ತರಗತಿವರೆಗಿನ ಮಕ್ಕಳಿಗೆ ಆನ್‌ಲೈನ್ […]
Read More
– 8ರಿಂದ 10ನೇ ಕ್ಲಾಸ್‌ಗೆ ಅಂತರ್ಜಾಲ ಶಿಕ್ಷಣ ಓಕೆ ಎಂಬ ಅಭಿಮತ – ಖಾಸಗಿಯಂತೆ ಸರಕಾರಿ ಶಾಲೆ ಮಕ್ಕಳಿಗೂ ಸಿಗಲಿ ಆನ್‌ಲೈನ್ ಶಿಕ್ಷಣ. – ವಿಕ ಫೋಕಸ್. ಜಯಂತ್ ಗಂಗವಾಡಿ, ಬೆಂಗಳೂರು. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ನೀಡುವುದಕ್ಕೆ ಸರಕಾರ ನಿರ್ಬಂಧ ವಿಧಿಸಿರುವ ಬಗ್ಗೆ ಸಾರ್ವತ್ರಿಕ ಬೆಂಬಲ ವ್ಯಕ್ತವಾಗಿರುವ ನಡುವೆಯೇ, ಎಂಟರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಈ ಮಾದರಿಯಲ್ಲಿ ಶಿಕ್ಷಣ ನೀಡಲು ತಕ್ಷಣ ವ್ಯವಸ್ಥೆ ರೂಪಿಸಬೇಕು ಎಂಬ ಆಗ್ರಹ ಕೇಳಿಬಂದಿದೆ. ಈ ಶಿಕ್ಷಣ ಕೇವಲ ಖಾಸಗಿ […]
Read More
ಏಷ್ಯಾದ ಕುಬೇರ ಮುಕೇಶ್ ಅಂಬಾನಿಯ ಸಾಧನೆಯ ಕಥನದಲ್ಲಿ ಮನೋಜ್ ಮೋದಿ ಅವರದು ಪ್ರಮುಖ ಪಾತ್ರ. – ಹ.ಚ.ನಟೇಶ ಬಾಬು. ಭಾರತ ಮಾತ್ರವಲ್ಲ ಏಷ್ಯಾದಲ್ಲಿಯೇ ನಂ.1 ಕುಬೇರ ಎನ್ನುವ ಹೆಗ್ಗಳಿಕೆ ಮುಕೇಶ್ ಅಂಬಾನಿ ಅವರದು. ಹುರುನ್ ಸಿದ್ಧಪಡಿಸಿದ ಶ್ರೀಮಂತರ ಡೇಟಾ ಗಮನಿಸುವುದಾದರೆ, 2019ರಲ್ಲಿ ಮುಕೇಶ್ ಸಂಪತ್ತಿಗೆ 9.39 ಲಕ್ಷ ಕೋಟಿ ರೂ. ಸೇರಿಕೊಂಡಿದೆ. ದಿನದ ಲೆಕ್ಕದಲ್ಲಿ ಇದನ್ನು ವಿಭಾಗಿಸುವುದಾದರೆ, ಅವರ ಸಂಪತ್ತು ದಿನಕ್ಕೆ ಸರಾಸರಿ 237 ಕೋಟಿ ರೂ. ವೃದ್ಧಿಯಾಗಿದೆ. ಗಂಟೆಗೆ 10.7 ಕೋಟಿ ರೂ., ನಿಮಿಷಕ್ಕೆ 16 […]
Read More
– ಶಶಿಧರ ಹೆಗಡೆ. ನ್ಯಾಯ ನಿರ್ಣಯದ ವಿಚಾರ ಬಂದಾಗ ಸರ್ವಶ್ರೇಷ್ಠ ಹೋಲಿಕೆಗಾಗಿ ‘ಹಂಸಕ್ಷೀರ ನ್ಯಾಯ’ವೆಂದು ಹೇಳುವುದುಂಟು. ಹಂಸವೆಂದರೆ ಪಕ್ಷಿ. ಕ್ಷೀರವೆಂದರೆ ಹಾಲು. ಹಾಗಾಗಿ ಈ ಹೋಲಿಕೆಯೇ ವಿಚಿತ್ರವೆನಿಸಬಹುದು. ಹಂಸ ಪಕ್ಷಿ, ಕ್ಷೀರ ಮತ್ತು ನ್ಯಾಯಕ್ಕೆ ಎಲ್ಲಿಂದೆಲ್ಲಿಯ ಸಂಬಂಧವೆಂದು ಕೇಳಬಹುದು. ಪ್ರಾಯಶಃ ಇದೇ ಕಾರಣದಿಂದ ಈ ನುಡಿಕಟ್ಟು ಒಗಟಾಗಿಯೇ ಉಳಿದುಬಿಟ್ಟಿರಬಹುದು. ಹಂಸಪಕ್ಷಿಯ ಎದುರು ಕ್ಷೀರ ತುಂಬಿದ ಪಾತ್ರೆಯನ್ನು ಇಟ್ಟರೆ ಅದು ಕ್ಷೀರಪಾನವೊಂದನ್ನೇ ಮಾಡುತ್ತದೆ! ಅಂದರೆ ಹಾಲಿಗೆ ನೀರು ಬೆರೆಸಿ ಕೊಟ್ಟಿದ್ದಾರೆ ಎಂದುಕೊಳ್ಳಿ. ಹಂಸಪಕ್ಷಿಯು ಹಾಲನ್ನಷ್ಟೇ ಹೀರಿಕೊಳ್ಳುತ್ತದೆ. ಅರ್ಥಾತ್ ಹಾಲಿನೊಂದಿಗೆ […]
Read More
– ಎನ್.ರವಿಶಂಕರ್. ಕೊರೊನಾ ಸಂಕಷ್ಟವನ್ನು ಎದುರಿಸುವ ನಮ್ಮ ತಂತ್ರಗಾರಿಕೆಯಲ್ಲಿ ಕೊನೆಗೆ ‘ಹೊಂದಾಣಿಕೆ’ಯೇ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮಿ, ನಾವು ಆತ್ಮನಿರ್ಭರರಾಗಿ ಬದುಕಲು ಕಲಿಯಬೇಕು ಎನ್ನುವ ಪಾಠ ಪ್ರಮುಖವಾಯ್ತು. ಕಳೆದ ಅಂಕಣದಲ್ಲಿ, ದೇಶಗಳು ಆತ್ಮನಿರ್ಭರರಾಗುವುದು ಮತ್ತು ಉದಾರನೀತಿ ಅನುಸರಿಸುವುದು ಪರಸ್ಪರ ವಿರೋಧಿ ಧೋರಣೆಗಳಾಗಿರಬೇಕಾಗಿಲ್ಲ ಎನ್ನುವ ಬಗ್ಗೆ ಬರೆದಿದ್ದೆ. ಅದು ಅಂತಾರಾಷ್ಟ್ರೀಯ ವಿಚಾರವಾಯ್ತು. ಅದಕ್ಕೂ ಮುನ್ನ ನಾವು ಪರಿಹರಿಸಿಕೊಳ್ಳಬೇಕಾದ್ದು ದೇಶದೊಳಗಿನ ಮತ್ತು ರಾಜ್ಯದೊಳಗಿನ ಸಂಕಷ್ಟಗಳನ್ನು. ಅದೃಷ್ಟವಶಾತ್, ಈ ಸಂಕಷ್ಟ ಸಮಯವನ್ನು ಸಂಕ್ರಮಣ ಕಾಲ ಎಂದು ನೋಡುವ ಸಕಾರಾತ್ಮಕ ಮನಃಸ್ಥಿತಿಯುಳ್ಳವರು (ವಿಜಯ ಕರ್ನಾಟಕ […]
Read More
ಕರ್ನಾಟಕದಲ್ಲಿ ಕೃಷಿಕರಲ್ಲದವರಿಗೆ ಕೃಷಿಭೂಮಿ ಕೊಳ್ಳಲು ಅನುಕೂಲವಾಗುವಂತೆ 1961ರ ಭೂ ಸುಧಾರಣೆ ಕಾಯಿದೆಗೆ ತಿದ್ದುಪಡಿ ತರಲು ರಾಜ್ಯ ಸರಕಾರ ಇತ್ತೀಚಿಗೆ ನಿರ್ಧರಿಸಿದೆ. ಈ ಬೆಳವಣಿಗೆ ಸಂಚಲನ ಸೃಷ್ಟಿಸಿರುವ ಸಂದರ್ಭ ದೇಶದ ಇತರ ರಾಜ್ಯಗಳ ಭೂ ಸುಧಾರಣೆ ನೀತಿಗಳ ಅವಲೋಕನ ಇಲ್ಲಿದೆ. 1. ತಮಿಳುನಾಡು ತಮಿಳುನಾಡಿನಲ್ಲಿ 1961ರ ಭೂಸುಧಾರಣೆ ಕಾಯಿದೆಗೆ ಹಲವಾರು ಸಲ ತಿದ್ದುಪಡಿಗಳಾಗಿದೆ. ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಬಹುದು. ಕೃಷಿ ಉದ್ದೇಶಕ್ಕಾಗಿಯೇ ಕೊಳ್ಳುವುದಿದ್ದರೆ ಕುಟುಂಬವೊಂದು ಗರಿಷ್ಠ 59.95 ಎಕರೆಯಷ್ಟು ಪಡೆಯಬಹುದು. ಬಂಜರು ಭೂಮಿಯಾಗಿದ್ದರೆ ಜಿಲ್ಲಾಧಿಕಾರಿ ಅನುಮೋದನೆ ಪಡೆದು ಕೃಷಿಯೇತರ […]
Read More