ಪರಿಶಿಷ್ಟ ಸಮುದಾಯ ನಾಯಕರ ವಿಶಿಷ್ಟ ರಾಜಕಾರಣ

– ಮಹದೇವ್ ಪ್ರಕಾಶ್. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ರಾಜಕೀಯದಲ್ಲಿ ಪರಮಾಧಿಕಾರ ದೊರೆಯುವುದು ಅಷ್ಟು ಸುಲಭದ ಮಾತಲ್ಲ. ಶತಮಾನಗಳ ಶೋಷಣೆಗೆ ಗುರಿಯಾಗಿರುವ ಇಂತಹ ಸಮುದಾಯಗಳಿಗೆ ಡಾ. ಬಿ.ಆರ್.ಅಂಬೇಡ್ಕರ್ ಅವರು ಸಂವೈಧಾನಿಕ ರಕ್ಷಣೆ ನೀಡಿದ್ದರೂ, ಪರಮಾಧಿಕಾರ ಈ ಸಮುದಾಯಗಳಿಗೆ ಗಗನ ಕುಸುಮವೇ ಆಗಿದೆ. ಪ್ರಧಾನಿ ಹುದ್ದೆಯಂತೂ ಕನಸಿನಲ್ಲಿ ನೆನೆಸಲು ಸಾಧ್ಯವಿಲ್ಲ. 1979ರಲ್ಲಿ ಬಾಬು ಜಗಜೀವನ್ ರಾಂ ಯಶಸ್ವಿಯಾಗಿ ಉಪಪ್ರಧಾನಿ ಹುದ್ದೆಗೇರಿದ ಪರಿಶಿಷ್ಟ ಸಮುದಾಯದ ಅಗ್ರಗಣ್ಯ ನಾಯಕ. ಇನ್ನೇನು ಜಗಜೀವನ್ ರಾಂ ಪ್ರಧಾನಿ ಆಗಿಯೇಬಿಟ್ಟರು ಅನ್ನುವಂಥ ವಾತಾವರಣ ಸೃಷ್ಟಿಯಾಗಿತ್ತು. […]

Read More

ಈಡೇರಿದ ದಶಕಗಳ ಕನಸು – ಅಯೋಧ್ಯೆಯಲ್ಲಿಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ(ಜೂ.10)ರಂದು ಶಿಲಾನ್ಯಾಸ ನಡೆಯಲಿದೆ. ರಾಮಜನ್ಮಭೂಮಿ ವ್ಯಾಪ್ತಿಯಲ್ಲೇ ಇರುವ ‘ಕುಬೇರ ತಿಲ’ ಮಂದಿರದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡುವುದರೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ‘‘ಲಂಕಾ ಮೇಲಿನ ದಾಳಿಗೂ ಮುನ್ನ ಶ್ರೀರಾಮಚಂದ್ರನು ಶಿವನನ್ನು ಪ್ರಾರ್ಥಿಸಿದ್ದ. ಅದೇ ಸಂಪ್ರದಾಯವನ್ನು ಈಗ ಪಾಲಿಸುತ್ತಿದ್ದೇವೆ. ರುದ್ರಾಭಿಷೇಕದ ಬಳಿಕವೇ ರಾಮ ಮಂದಿರ ಶಿಲಾನ್ಯಾಸದ ಕಾರ್ಯಕ್ರಮಗಳು ಆರಂಭವಾಗಲಿವೆ,’’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಕ್ತಾರರಾದ ಮಹಾಂತ ಕಮಲನಯನ ದಾಸ್ […]

Read More

ಸಿದ್ಧತೆ ಸಮರ್ಪಕವಾಗಿರಲಿ – ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಭವಿಷ್ಯ, ಆರೋಗ್ಯ ಮುಖ್ಯ

ಎಸ್ಎಸ್ಎಲ್ಸಿ ಪರೀಕ್ಷೆಯು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟವಾಗಿದ್ದು, ಭವಿಷ್ಯದ ಶಿಕ್ಷಣದ ಅಡಿಪಾಯವನ್ನು ಹಾಕುತ್ತದೆ. ಆದರೆ, ಕೊರೊನಾ ಎಫೆಕ್ಟ್‌ನಿಂದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಸ್ಥಿತಿ ಅತಂತ್ರವಾಗಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಪರೀಕ್ಷೆಗಳನ್ನು ನಡೆಸಬೇಕೆ, ಬೇಡವೆ ಎಂದು ತೀರ್ಮಾನಿಸವುದರಲ್ಲಿ ಕಾಲ ಕಳೆದುಹೋಯಿತು. ಕೊನೆಗೂ ಜೂ.25ರಿಂದ ಪರೀಕ್ಷೆಗೆ ದಿನಾಂಕ ನಿಗದಿಪಡಿಸಲಾಯಿತು. ಯಾವುದೇ ಕಾರಣಕ್ಕೂ ಎಸ್ಸೆಸ್ಸೆಲ್ಸಿ ಪರೀಕ್ಷೆ ರದ್ದು ಮಾಡುವುದಿಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಹೇಳಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಪರೀಕ್ಷೆ ನಡೆಸುವುದು ಒಳ್ಳೆಯ ಬೆಳವಣಿಗೆಯೇ ಸರಿ. […]

Read More

ಎಸ್ಸೆಸ್ಸೆಲ್ಸಿ ಪರೀಕ್ಷೆ ಖಚಿತ

– ಸುರಕ್ಷತಾ ಕ್ರಮಗಳೊಂದಿಗೆ ಎಕ್ಸಾಮ್: ಸುರೇಶ್ ಕುಮಾರ್. – ತಮಿಳುನಾಡು, ಪುದುಚೆರಿ, ತೆಲಂಗಾಣದಲ್ಲಿ ಪರೀಕ್ಷೆ ರದ್ದು. ವಿಕ ಸುದ್ದಿಲೋಕ ಉಡುಪಿ/ಬೆಂಗಳೂರು. ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಸುರಕ್ಷತಾ ಕ್ರಮಗಳೊಂದಿಗೆ ಖಚಿತವಾಗಿ ನಡೆಸುತ್ತೇವೆ, ಈ ಬಗ್ಗೆ ವಿದ್ಯಾರ್ಥಿಗಳು ಗೊಂದಲಕ್ಕೊಳಗಾಗಬಾರದು ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ತಿಳಿಸಿದ್ದಾರೆ. ಎಸ್ಎಸ್ಎಲ್ಸಿ ಪರೀಕ್ಷೆಗೆ ಸಂಬಂಧಿಸಿ ಸುಳ್ಳು ವದಂತಿ ಹರಡುವ ಕಿಡಿಗೇಡಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆ ತಮಿಳುನಾಡು, ಪುದುಚೆರಿ ಮತ್ತು ತೆಲಂಗಾಣ […]

Read More

ಶರಾವತಿಗೆ ಮತ್ತೆ ಕಂಟಕ

– ಭೂಗರ್ಭದಲ್ಲಿ ವಿದ್ಯುತ್ ಉತ್ಪಾದನೆ ಯೋಜನೆ | ಕಣಿವೆಯ ಒಡಲು ಕೊರೆದು ಸಮೀಕ್ಷೆ. ವಿವೇಕ ಮಹಾಲೆ, ಶಿವಮೊಗ್ಗ. ಹಲವಾರು ಯೋಜನೆಗಳ ಭಾರ ಹೇರಿಕೊಂಡು ನಲುಗುತ್ತಿರುವ ಶರಾವತಿ ಕಣಿವೆಗೆ ಮತ್ತೊಂದು ಕಂಟಕ ಎದುರಾಗಿದೆ. ಕಳೆದ ವರ್ಷವಷ್ಟೇ ಬೆಂಗಳೂರಿಗೆ ನೀರು ಹರಿಸುವ ಯೋಜನೆ ವಿರುದ್ಧ ಧ್ವನಿ ಎತ್ತಿದ್ದ ಇಲ್ಲಿನ ಜನ ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗುತ್ತಿದ್ದಾರೆ. ಬೆಂಗಳೂರಿಗೆ ನೀರು ಹರಿಸುವ ಯೋಜನೆ ಕೈಬಿಟ್ಟಿದ್ದ ರಾಜ್ಯ ಸರಕಾರ ಈಗ ಮತ್ತೊಂದು ಯೋಜನೆ ಮೂಲಕ ಆತಂಕ ಮೂಡಿಸಿದೆ. ಪಶ್ಚಿಮಘಟ್ಟದ ಹೃದಯ ಭಾಗವಾಗಿರುವ ಶರಾವತಿ ಕಣಿವೆಯಲ್ಲಿ […]

Read More

ಸ್ವರ್ಣೋದ್ಯಮ ಇದೀಗ ಭರ್ಜರಿ ಶೈನಿಂಗ್

– ಲಾಕ್‌ಡೌನ್‌ ಸಡಿಲಿಕೆ ಬಳಿಕ ಹಿಂದಿಗಿಂತಲೂ ಹೆಚ್ಚು ಡಿಮ್ಯಾಂಡ್ – ಚಿನ್ನ, ಬೆಳ್ಳಿ ಈಗ ಸಿಕ್ಕಾಪಟ್ಟೆ ಖರೀದಿ. ಎಚ್ ಪಿ ಪುಣ್ಯವತಿ, ಬೆಂಗಳೂರು : ಲಾಕ್‌ಡೌನ್‌ ಸಡಿಲಿಕೆ ನಂತರ ಚಿನ್ನಾಭರಣಗಳ ಉದ್ಯಮ ನಿರೀಕ್ಷೆಗೂ ಮೀರಿ ಚೇತರಿಕೆ ಕಂಡಿದೆ. ಲಾಕ್‌ಡೌನ್‌ಗೆ ಮೊದಲು ರಾಜ್ಯದಲ್ಲಿ ತಿಂಗಳಿಗೆ ಗರಿಷ್ಠ 850 ಕೆಜಿ ಚಿನ್ನ ಮಾರಾಟವಾಗುತ್ತಿದ್ದರೆ, ಜೂನ್ 1ರಿಂದ 7ರವರೆಗಿನ ಒಂದೇ ವಾರದಲ್ಲಿ 280 ಕೆಜಿ ಚಿನ್ನ ವ್ಯಾಪಾರ ಆಗಿದೆ. ಅಂದರೆ, ಚಿನ್ನ, ಬೆಳ್ಳಿ ಆಭರಣಗಳ ಖರೀದಿ ಪ್ರಮಾಣ ಹಿಂದಿಗಿಂತಲೂ ಶೇ. 40-45ರಷ್ಟು  ಏರಿಕೆಯಾಗಿದೆ. […]

Read More

ಬರಲಿವೆ ಕಿಲ್ಲರ್‌ ರೋಬಾಟ್‌!

ಅಮೆರಿಕ ಹಾಗೂ ಚೀನಾಗಳು ಸದ್ದಿಲ್ಲದೆ ಕಿಲ್ಲರ್‌ ರೋಬಾಟ್‌ಗಳನ್ನು ತಯಾರಿಸುತ್ತಿವೆ ಎಂಬ ಗುಸುಗುಸು ಮಿಲಿಟರಿ ವಲಯದಲ್ಲೇ ಇದೆ. ಇವುಗಳನ್ನು ನಿಷೇಧಿಸಬೇಕು ಎಂಬ ಕೂಗು ಎದ್ದಿದೆ. ಏನಿದು ಕೊಲೆಗಾರ ಯಂತ್ರ? ಅವುಗಳಿಂದ ಏನು ಅಪಾಯ? ಯುದ್ಧರಂಗದಲ್ಲಿ ಮಾನವರಿಲ್ಲದೆ ಬರೀ ಯಂತ್ರಗಳು ಹೊಡೆದಾಡುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಮುಂದುವರಿದ ದೇಶವೊಂದರ ದೈತ್ಯ ರೋಬಾಟ್‌ಗಳು ಪಕ್ಕದ ಬಲಹೀನ ದೇಶದ ಗಡಿಯೊಳಗೆ ನುಗ್ಗಿ ಸೈನಿಕರನ್ನು ಹುಳಗಳಂತೆ ಜಜ್ಜಿಹಾಕುವುದನ್ನು ಕಲ್ಪಿಸಿಕೊಳ್ಳಿ. ಅಥವಾ ಇದ್ದಕ್ಕಿದ್ದಂತೆ ಆಕಾಶದಿಂದ ಸಾವಿರಾರು ಡ್ರೋನ್‌ಗಳು ಇದ್ದಕ್ಕಿದ್ದಂತೆ ಬೆಂಕಿಯ ಮಳೆ ಸುರಿಸುವುದನ್ನು ಊಹಿಸಿಕೊಳ್ಳಿ. ಮಿಲಿಟರಿಯಲ್ಲಿ ಕೊಲೆಗಾರ […]

Read More

ಟಿಕೆಟ್‌ ಆಕಾಂಕ್ಷಿಗಳಿಗೆ ಶಾಕ್‌ – ರಾಜ್ಯಸಭೆಗೆ ಬಿಜೆಪಿಯಿಂದ ಅಚ್ಚರಿಯ ಆಯ್ಕೆ

– ಕೋರೆ-ಕತ್ತಿ ಫೈಟ್‌ ನಡುವೆ ಕಡಾಡಿ, ಗಸ್ತಿ ಎಂಟ್ರಿ. – ಘಟಾನುಘಟಿಗಳನ್ನು ಬದಿಗೊತ್ತಿ ಪಕ್ಷ ನಿಷ್ಠರಿಗೆ ಗಿಫ್ಟ್‌. ವಿಕ ಸುದ್ದಿಲೋಕ ಬೆಂಗಳೂರು. ರಾಜ್ಯಸಭೆ ಟಿಕೆಟ್‌ಗಾಗಿ ಭಾರಿ ಲಾಬಿ ನಡೆಸುತ್ತಿದ್ದ ಮತ್ತು ಭಿನ್ನಮತದ ಮೂಲಕ ಒತ್ತಡ ಹಾಕುತ್ತಿದ್ದ ಆಕಾಂಕ್ಷಿಗಳಿಗೆ ಬಿಜೆಪಿ ಹೈಕಮಾಂಡ್‌ ಭರ್ಜರಿ ಶಾಕ್‌ ಕೊಟ್ಟಿದೆ. ಚರ್ಚೆಯಲ್ಲೇ ಇಲ್ಲದಿದ್ದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸುವ ಮೂಲಕ ಅಚ್ಚರಿ ಮೂಡಿಸಿದೆ. ಈ ಮೂಲಕ, ಪಕ್ಷ ನಿಷ್ಠರಾದ ಸಾಮಾನ್ಯ […]

Read More

ಆತ್ಮನಿರ್ಭರತೆಯ ದಾರಿ ದೀರ್ಘವಿದೆ!

– ವಿನುತಾ ಗೌಡ. ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದರು ಆತ್ಮನಿರ್ಭರತೆಯ ಬಗೆಗಿನ ವೆಬಿನಾರ್‌ ಒಂದರಲ್ಲಿ ಮಾತನಾಡುತ್ತಾ ಅಪರೂಪದ ಸಂಗತಿಯೊಂದನ್ನು ಪ್ರಸ್ಥಾಪಿಸಿದ್ದರು. ಕೃಷಿ, ಕೈಗಾರಿಕೆ, ಉದ್ದಿಮೆ ಮತ್ತು ರಕ್ಷ ಣಾ ಬಲಗಳಲ್ಲಿ ಆತ್ಮನಿರ್ಭರತೆಯ ಅನುಷ್ಠಾನ ಹೇಗೆ, ಎತ್ತ ಮುಂತಾದ ಚರ್ಚೆಗಳ ನಡುವೆಯೂ ಆತ್ಮನಿರ್ಭರಕ್ಕೆ ಒಂದು ವಿಭಿನ್ನ ದೃಷ್ಟಿಕೋನವಿದೆ ಎಂಬುದನ್ನು ಅವರು ತಿಳಿಸಿದ್ದರು. ಸ್ವಾವಲಂಬನೆ ಮತ್ತು ಆತ್ಮನಿರ್ಭರ ಪದಗಳಿಗಿರುವ ತೀರಾ ಹತ್ತಿರದ ಸಂಬಂಧಗಳನ್ನು ವಿವರಿಸುತ್ತಾ, ‘‘ಆತ್ಮನಿರ್ಭರ- ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಅದಕ್ಕೂ […]

Read More

ಮೌಲ್ಯಗಳಿಗೆ ಬಿಜೆಪಿ ಮಣೆ ನಿಷ್ಠೆ, ಸೇವೆಯೇ ಆದರ್ಶ ಎಂದ ಹೈಕಮಾಂಡ್

ರಾಜ್ಯದಿಂದ ತೆರವಾಗಿರುವ ನಾಲ್ಕು ರಾಜ್ಯಸಭೆ ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯ ಅಭ್ಯರ್ಥಿಗಳ ಹೆಸರು ಬಹುತೇಕ ಅಂತಿಮಗೊಂಡಿದೆ. ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಎಚ್‌.ಡಿ.ದೇವೇಗೌಡರು ಅಭ್ಯರ್ಥಿಗಳಾಗಿರುವುದರಲ್ಲಿ ಏನೂ ಅಚ್ಚರಿಯಿಲ್ಲ. ಈಗಾಗಲೇ ಇವರ ಪ್ರಾತಿನಿಧ್ಯವನ್ನು ಜನ ದಶಕಗಳಿಂದ ಕಂಡಿದ್ದಾರೆ. ಬಿಜೆಪಿಯಿಂದಲೂ ಬಲಾಢ್ಯರಾದ ಹಲವು ವ್ಯಕ್ತಿಗಳ ಹೆಸರು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಕೇಳಿಬಂದಿತ್ತು. ಆದರೆ ಅಚ್ಚರಿ ಎನ್ನುವಂತೆ ಅನಾಮಿಕರಾದ ಇಬ್ಬರ ಆಯ್ಕೆಯಾಗಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಬೆಳಗಾವಿಯ ಈರಣ್ಣ ಕಡಾಡಿ ಹಾಗೂ ರಾಯಚೂರಿನ ಅಶೋಕ ಗಸ್ತಿ ಅವರಿಗೆ ಟಿಕೆಟ್‌ ಪ್ರಕಟಿಸಿ ಬಿಜೆಪಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top