ಶಿಕ್ಷಣದ ಪ್ರಗತಿಗೆ ಉನ್ನತ ಮಾರ್ಗದರ್ಶನವೇ ದಾರಿ

 -ವಿದ್ಯಾರ್ಥಿಗಳಿಗೂ ಶಿಕ್ಷಣ ಸಂಸ್ಥೆಗಳಿಗೂ ‘ಮೆಂಟರ್‌’ ವ್ಯವಸ್ಥೆ ಕಲ್ಪಿಸುವುದು ಸರಕಾರದ ನೀತಿಯಾಗಬೇಕು. ಪ್ರೊ.ಎಂ.ಆರ್‌.ದೊರೆಸ್ವಾಮಿ. ವೈಯಕ್ತಿಕ ಮತ್ತು ಸಾಂಸ್ಥಿಕ ಸಾಮರ್ಥ್ಯ‌ ಹಾಗೂ ಸಬಲೀಕರಣಗೊಳಿಸುವುದೇ ಕ್ರಿಯಾಶೀಲ ಶಿಕ್ಷ ಣ ಸಂಸ್ಥೆಗಳ ಶ್ರೇಷ್ಠತೆಯ ಕುರುಹು. ಅವು ಶೈಕ್ಷ ಣಿಕ ಸೇವೆಯ ಗುಣಮಟ್ಟ ಮತ್ತು ಸಂಸ್ಥೆಗಳ ಫಲಿತಾಂಶವನ್ನು ನಿರೂಪಿಸುತ್ತವೆ. ಮಾರ್ಗದರ್ಶನದ ವಿಭಿನ್ನ ಆಯಾಮಗಳನ್ನು ಮತ್ತು ಅದನ್ನು ಮಾನವ ಕಾರ್ಯಕ್ಷ ಮತೆ ಮತ್ತು ಸಾಂಸ್ಥಿಕ ಸೇವೆಗಳ ವರ್ಧಕವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬುದನ್ನು ಅನ್ವೇಷಿಸಲು ಇಚ್ಛಿಸುತ್ತೇನೆ. (ಮಾರ್ಗದರ್ಶಕ ಪದವನ್ನು ಗ್ರೀಕ್‌ ಮೂಲದ ಪದವಾಗಿಯೇ ಗ್ರಹಿಸಿದರೂ ಅಮೆರಿಕ ಮತ್ತು […]

Read More

ಚೀನಾದ ಜೊತೆ ಮಾತುಕತೆ ಭಾರತ ಸ್ನೇಹಕ್ಕೆ ಬದ್ಧ, ಸಮರಕ್ಕೂ ಸಿದ್ಧ

ಚೀನಾದ ಜೊತೆಗೆ ಲಡಾಕ್‌ ಗಡಿಭಾಗದಲ್ಲಿ ತಲೆದೋರಿದ ಬಿಕ್ಕಟ್ಟನ್ನು ದ್ವಿಪಕ್ಷೀಯ ಮಾತಕತೆ ಮೂಲಕ ಶಾಂತಿಯುತ ರೀತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಉಭಯ ದೇಶಗಳ ಮಿಲಿಟರಿ ಮಟ್ಟದ ಸಂಧಾನ ಸಭೆ ತೀರ್ಮಾನಿಸಿದೆ. ಒಂದು ತಿಂಗಳಿಂದ ಎರಡು ರಾಷ್ಟ್ರಗಳ ನಡುವೆ ಉದ್ಭವಿಸಿರುವ ಸಂಘರ್ಷ ಸ್ಥಿತಿ ಶಮನಕ್ಕಾಗಿ ಶನಿವಾರ ಎರಡೂ ದೇಶಗಳ ಉನ್ನತ ಸೇನಾಧಿಕಾರಿಗಳ ಸಭೆ ನಡೆದಿದ್ದು, ಅದರಲ್ಲಿ ಈ ನಿರ್ಧಾರವಾಗಿದೆ. ಇದೇ ವೇಳೆಗೆ ‘‘ಸಂಘರ್ಷದಿಂದ ಸಮಸ್ಯೆ ಇತ್ಯರ್ಥಗೊಳ್ಳುವುದಿಲ್ಲ. ಇದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು. ಅನಗತ್ಯ ಹಸ್ತಕ್ಷೇಪ ಹಾಗೂ ಶಕ್ತಿಪ್ರದರ್ಶನಕ್ಕೆ ಮುಂದಾದರೆ ನಾವು ಕೈಕಟ್ಟಿ ಕೂಡುವುದಿಲ್ಲ,’’ […]

Read More

ಜಿ7 – ಅಮೆರಿಕದ ಕರೆ – ಚೀನಾದ ಕರಕರೆ – ಚೀನಾಗೆ ಮುಸುಕಿನ ಗುದ್ದು

ಜಾಗತಿಕ ವಾಣಿಜ್ಯ, ಆರ್ಥಿಕ ಸಮೀಕರಣವನ್ನು ತಿದ್ದಿ ಬರೆಯುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಜಿ7 ಗಂಪಿನಲ್ಲಿ ಭಾರತವನ್ನೂ ಸೇರಿಸಿಕೊಳ್ಳಬೇಕು ಎಂಬುದು ಅವರ ವಾದ. ಇದು ಯಾಕೆ ಹಾಗೂ ಇದರ ಪರಿಣಾಮಗಳೇನು? ಜಿ7 ದೇಶಗಳ ಈ ವರ್ಷದ (46ನೇ) ಶೃಂಗಸಭೆ ಜೂನ್‌ 10- 12ರಂದು ಅಮೆರಿಕದ ಕ್ಯಾಂಪ್‌ ಡೇವಿಡ್‌ನಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದೂಡಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ: ‘‘ಹೊಸ ಜಾಗತಿಕ ಸನ್ನಿವೇಶದಲ್ಲಿ ಜಿ7 ಎಂಬುದು ಅಪ್ರಸ್ತುತ ಸಂಘಟನೆಯಾಗಿದೆ. ಭಾರತ, […]

Read More

ಜನಜೀವನ ಇನ್ನಷ್ಟು ಮುಕ್ತ

ಇಂದಿನಿಂದ ಟೆಂಪಲ್‌, ಮಾಲ್‌, ಹೋಟೆಲ್‌ ಓಪನ್‌ | ಷರತ್ತುಗಳು ಅನ್ವಯ. ಎರಡೂವರೆ ತಿಂಗಳ ಬಳಿಕ ಸೃಷ್ಟಿಯಾಗಲಿದೆ ಸಂಚಲನ | ಪ್ರವಾಸಿ ತಾಣಗಳೂ ರೆಡಿ.  ವಿಕ ಸುದ್ದಿಲೋಕ ಬೆಂಗಳೂರು. ಕೊರೊನಾದಿಂದಾಗಿ ಅಸ್ತವ್ಯಸ್ತಗೊಂಡಿದ್ದ ವಾಣಿಜ್ಯ ಕ್ಷೇತ್ರ ಮತ್ತು ಜನಜೀವನವನ್ನು ಮರಳಿ ಹಳಿಗೆ ತರುವ ಅತಿ ದೊಡ್ಡ ಕ್ರಮವಾಗಿ ಸೋಮವಾರದಿಂದ ರಾಜ್ಯಾದ್ಯಂತ ದೇವಾಲಯಗಳು, ಹೋಟೆಲ್‌ಗಳು ಮತ್ತು ವಾಣಿಜ್ಯ ಮಾಲ್‌ಗಳನ್ನು ಮತ್ತೆ ತೆರೆಯಲಾಗುತ್ತಿದೆ. ಇದರೊಂದಿಗೆ ಸುಮಾರು ಎರಡುವರೆ ತಿಂಗಳಿನಿಂದ ಸ್ಥಗಿತಗೊಂಡಿದ್ದ ಆತಿಥ್ಯ ಕ್ಷೇತ್ರ, ಧಾರ್ಮಿಕ ಮತ್ತು ವ್ಯಾಪಾರಿ ವಲಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಲಿದೆ. […]

Read More

ಬಾಹ್ಯಾಕಾಶಕ್ಕೆ ಏಣಿ ಹಾಕಿದ ಸಾಹಸಿ

ತಮ್ಮದೇ ದಾರಿ ಮತ್ತು ಗುರಿಗಳನ್ನು ಬೆನ್ನತ್ತಿ ಹೋಗುವ ಧೈರ್ಯಶಾಲಿಗಳಿಗೆ ಇಲಾನ್ ಮಸ್ಕ್ ದೊಡ್ಡ ಐಕಾನ್. -ಕೆ. ವೆಂಕಟೇಶ್. ಆತ ಮಹಾಮೌನಿಯಾಗಿದ್ದ. ಆತಂಕಿತರಾದ ಪೋಷಕರು ಈತ ಕಿವುಡನಿರಬೇಕು ಎಂದು ಭಾವಿಸಿದ್ದರು. ಶಾಲೆಯಲ್ಲಿ ಚಿಲ್ಟೇರಿಯಂತಿದ್ದ ಈತನನ್ನು ಎಲ್ಲರೂ ಆಟದ ವಸ್ತು ಮಾಡಿಕೊಂಡಿದ್ದರು. ಪ್ರಾಥಮಿಕ ಶಾಲೆಯಲ್ಲಿ ಮೆಟ್ಟಿಲುಗಳ ಮೇಲಿಂದ ತಳ್ಳಿ ಮಜಾ ತೆಗೆದುಕೊಂಡಿದ್ದರು. ಈತ ಆಸ್ಪತ್ರೆ ಸೇರಿದ. ಒಂದು ರೀತಿಯಲ್ಲಿ ಅಂತರ್ಮುಖಿಯಾದ ಆತ ಸದಾ ಆಕಾಶವನ್ನೇ ದಿಟ್ಟಿಸುತ್ತಿದ್ದ. ಪೋಷಕರು, ಶಿಕ್ಷಕರು ಮತ್ತು ಸಹಪಾಠಿಗಳು ಅಂದುಕೊಂಡಿದ್ದಕ್ಕಿಂತ ವಿಭಿನ್ನವಾಗಿದ್ದ ಆತನಲ್ಲಿ ದೈಹಿಕ ನ್ಯೂನತೆಯೇನೂ ಇರಲಿಲ್ಲ. […]

Read More

ಕವಲು ದಾರಿಯಲ್ಲಿ ನಿಂತು ಮುಗಿಯದ ಪ್ರಶ್ನೆಗಳ ಕಂತು

– ಹರೀಶ್ ಕೇರ.  ಶಾಲೆಗಳು ಯಾವಾಗ ಆರಂಭ? ಗೊತ್ತಿಲ್ಲ. ಕೊರೊನಾ ಸೋಂಕಿನ ಗ್ರಾಫ್ ಯಾವಾಗ ಇಳಿಯುತ್ತದೆ? ಗೊತ್ತಿಲ್ಲ. ಮತ್ತೆ ನಾವೆಲ್ಲ ಯಾವಾಗ ಕೈ ಕುಲುಕಬಹುದು? ಯಾವಾಗ ಅಪ್ಪಿಕೊಳ್ಳಬಹುದು? ಊರಿಗೆ ಹೋದವರು ಯಾವಾಗ ಹಿಂದಿರುಗಬಹುದು? ಪರದೇಶಗಳಲ್ಲಿರುವವರು ಯಾವಾಗ ಬರಬಹುದು? ಐಸಿಯುನಲ್ಲಿರುವವರು ಮನೆಗೆ ಮರಳಬಹುದೇ? ಮಾಸ್ಕ್ ಹಾಕಿದ ಮುಖಗಳ ಹಿಂದೆ ಯಾರಿದ್ದಾರೆ? ಕೊರೊನಾ ಹೋದ ಮೇಲೆ ಬದುಕುಳಿದವರ ಜೀವನ ಹೇಗಿರುತ್ತದೆ? ಆಗಲೂ ಸಣ್ಣಪುಟ್ಟ ಸಂಗತಿಗಳಿಗೆ ನಕ್ಕು ಹಗುರಾಗುವಷ್ಟು ಶಕ್ತಿ ನಮ್ಮಲ್ಲಿ ಉಳಿದಿರಬಹುದಾ? ಯಾವುದೂ ಗೊತ್ತಿಲ್ಲ. ಕತೆ, ಕಾದಂಬರಿ ಬರೆಯುವವರು ಮೊದಲ […]

Read More

ಹಿಮದಲ್ಲಿ ಅರಳಿದ ನೆನಪಿನ ಹೂವು ಪಾಮುಕ್

ಭಾರತದಂತೆಯೇ ಸೆಕ್ಯುಲರ್ ಚಿಂತನೆ ಹಾಗೂ ಧಾರ್ಮಿಕ ಮೂಲಭೂತವಾದಗಳ ನಡುವೆ ನಲುಗುತ್ತಿರುವ ನಾಡು ಟರ್ಕಿಯಿಂದ ಬಂದ ಕಾದಂಬರಿಗಾರ ಒರ್ಹಾನ್ ಪಾಮುಕ್. ಟರ್ಕಿಯ ಬದುಕಿನ ಸಂಕೀರ್ಣ ಚಿತ್ರಣ ನೀಡುವ ಪಾಮುಕ್‌ನ ‘ಸ್ನೋ’ ಕಾದಂಬರಿಯನ್ನು ಕನ್ನಡಕ್ಕೆ ತಂದ ಲೇಖಕಿ ಇಲ್ಲಿ ಬರೆದಿದ್ದಾರೆ. – ಕೆ.ಎಸ್. ವೈಶಾಲಿ. ಅಸಂಖ್ಯಾತ ಆಂತರಿಕ ತಿಕ್ಕಾಟಗಳು, ಘರ್ಷಣೆಗಳಲ್ಲಿ ಕಳೆದುಹೋಗಿದ್ದ ನಾಡೊಂದು ಆಧುನಿಕತೆಯತ್ತ ಸಾಗುತ್ತ ಒಂದು ಪ್ರಜಾತಂತ್ರ ರಾಷ್ಟ್ರವಾಗಿ ಬದಲಾಗುವುದು ಕಳೆದ ಶತಮಾನದ ಬಹುಮುಖ್ಯ ಚಲನೆಗಳಲ್ಲೊಂದು. ಅದರಲ್ಲೂ ಭಾರತದಂತಹ ವಸಾಹತೀಕರಣಗೊಂಡ ರಾಷ್ಟ್ರಗಳಿಗೆ ಅದೊಂದು ಬೇಗುದಿಯ ಇತಿಹಾಸ. ಯುರೋಪ್ ಹಾಗೂ […]

Read More

ರಾಜ್ಯಸಭೆ ಚುನಾವಣೆ ನೆಪದಲ್ಲಿ ಕಣ್‌ಕಣ್ಣ ಸಲಿಗೆ – ರಾಜ್ಯದಲ್ಲಿ ಕಾಂಗ್ರೆಸ್- ಜೆಡಿಎಸ್ ಮರು ಮೈತ್ರಿಗಿದು ಮೇಲ್ಮನೆಯ ರಹದಾರಿಯೇ?

– ಶಶಿಧರ ಹೆಗಡೆ.  ‘ರಾಜಕಾರಣದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ’ ಎನ್ನುವ ಮಾತಿಗೆ ಪದೇ ಪದೆ ಮೌಲ್ಯ ದೊರಕುತ್ತದೆ. ಈ ಮೌಲ್ಯವರ್ಧನೆಯ ಕೀರ್ತಿಯೂ ರಾಜಕಾರಣಿಗಳಿಗೇ ಸಲ್ಲಬೇಕು. ರಾಜಕಾರಣಿಗಳು ಮನಸ್ಸು ಮಾಡಿದರೆ ಹಳೆಯ ಅಂಗಿ ಕಳಚಿಟ್ಟು ಹೊಸ ಶರ್ಟ್ ಧರಿಸಿದಷ್ಟೇ ಸುಲಭವಾಗಿ ಪಕ್ಷ ಬದಲಿಸುತ್ತಾರೆ. ಚುನಾವಣಾ ಅಖಾಡದಲ್ಲಿ ಶರಂಪರ ಜಗಳವಾಡಿಕೊಂಡವರು ‘ಅಧಿಕಾರದ ಅನಿವಾರ್ಯತೆ’ ಬಂದೊದಗಿದಾಗ ಗಾಢಾಲಿಂಗನ ಮಾಡಿಕೊಳ್ಳಬಲ್ಲರು. ಅಧಿಕಾರದ ಮೋಹ ಪಾಶದ ಬಲೆಗೆ ಸಿಲುಕಿದವರು ಪರಸ್ಪರ ವಿರುದ್ಧ ದಿಕ್ಕಿನಲ್ಲಿದ್ದರೂ ರಭಸದಿಂದ ಬಂದು ಒಂದೇ ಬಿಂದುವಿನಲ್ಲಿ ಸಂಧಿಸಬಲ್ಲರು. ಅಂತರಂಗದ ರಾಗ, ದ್ವೇಷವನ್ನು […]

Read More

ವಾಹನ ಖರೀದಿ ಭರ್ಜರಿ

– ಲಾಕ್ ಓಪನ್ ಬಳಿಕ ಭಾರಿ ಚೇತರಿಕೆ ಕಂಡ ಆಟೊಮೊಬೈಲ್ ಉದ್ಯಮ – ಕಾರು, ದ್ವಿಚಕ್ರ ವಾಹನ ಖರೀದಿಗೆ ಎಲ್ಲೆಡೆ ಉತ್ಸಾಹ | ನೋಂದಣಿ ಹೆಚ್ಚಳ – ನಾಗಪ್ಪ ನಾಗನಾಯಕನಹಳ್ಳಿ ಬೆಂಗಳೂರು.  ಲಾಕ್‌ಡೌನ್‌ ಸಡಿಲಿಕೆ ಬಳಿಕ ಆಟೊಮೊಬೈಲ್ ಮಾರುಕಟ್ಟೆ ಭಾರಿ ಚೇತರಿಕೆ ಕಂಡಿದೆ. ರಾಜ್ಯಾದ್ಯಂತ ಹೊಸ ವಾಹನಗಳ ಖರೀದಿಯ ಉತ್ಸಾಹ ಕಾಣಿಸುತ್ತಿರುವುದು ಉದ್ಯಮ ವಲಯದಲ್ಲಿ ಆಶಾವಾದ ಮೂಡಿಸಿದೆ. ಆರ್ಥಿಕ ಸಂಕಷ್ಟ , ಸಂಬಳ ಕಡಿತ, ಉದ್ಯೋಗ ನಷ್ಟ ಮೊದಲಾದ ಕಾರಣದಿಂದ ಜನರು ವಾಹನ ಖರೀದಿಗೆ ಹಿಂದೇಟು ಹಾಕಬಹುದು […]

Read More

ಸ್ವ ಪ್ರಯತ್ನಕ್ಕೆ ಅತಿ ದೊಡ್ಡ ಉದಾಹರಣೆ ಎಂದರೆ ಅದು ಹೆಚ್ಚೆನ್ . ಇವತ್ತಿಗೆ ಅವರು ಹುಟ್ಟಿ ಒಂದು ನೂರು ವರ್ಷ .

ವಾದಿರಾಜ ಸಾಮರಸ್ಯ – ಫೇಸ್ ಬುಕ್ ವಾಲ್‌ ನಿಂದ… School dropout ಹುಡುಗನೊಬ್ಬ ಗೌರಿಬಿದನೂರು ಸಮೀಪದ ಹೊಸೂರಿನಿಂದ ನೆಡೆದು ಬಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಸೇರಿ ಅಲ್ಲಿಯೇ ಕಾಲೇಜು ಓದಿ , ಮೇಷ್ಟ್ರಾಗಿ , ಅಮೇರಿಕಾದಲ್ಲಿ ಪಿಹೆಚ್ಡಿ ಮಾಡಿ , ಅದೇ ಕಾಲೇಜಿನಲ್ಲಿ ಪ್ರಿನ್ಸಿಪಾಲಾಗಿ , ವಿಶ್ವವಿದ್ಯಾಲಯದ ಉಪಕುಲಪತಿಯಾಗಿ , ನಿವೃತ್ತಿಯನಂತರ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಯಾಗಿ , ಕೊನೆಗೆ ಅಧ್ಯಕ್ಷರಾದದ್ದು ವಿಸ್ಮಯದ ಕಥೆ . ಹೆಚ್ ನರಸಿಂಹಯ್ಯನವರ ಆತ್ಮಕಥೆ – ಹೋರಾಟದ ಹಾದಿ – ಓದಿ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top