ಭಾರತದ ‘ಕ್ವೀನ್’ ಮೇಲೆ ವಿದೇಶಿ ಔಷಧ ಲಾಬಿ ಕಣ್ಣು

ಭಾರತದಲ್ಲಿ ಉತ್ಪಾದನೆಯಾಗುವ ಮಲೇರಿಯಾ ಔಷಧ ಹೈಡ್ರೋಕ್ಲೋರೋಕ್ವಿನ್(ಎಚ್‌ಸಿಕ್ಯೂ)ನ ವ್ಯಾಪಾರವನ್ನು ಹದಗೆಡಿಸುವ ವಿದೇಶಿ ಔಷಧ ಕಂಪನಿಗಳ ಲಾಬಿ ಬಯಲಾಗಿದೆ. ಸುಳ್ಳು ಡೇಟಾ ಸಂಗ್ರಹ, ಅದನ್ನು ಆಧರಿಸಿ ವಿವಾದಿತ ಪ್ರಬಂಧ ಪ್ರಕಟಣೆ, ಅದನ್ನಾಧರಿಸಿ ಔಷಧದ ಮೇಲೆ ನಿರ್ಬಂಧ, ಮತ್ತೆ ತೆರವು – ಇತ್ಯಾದಿ ನಾಟಕೀಯ ಘಟನೆಗಳು ಹೀಗಿವೆ. ಜಗತ್ತಿನ ಪ್ರತಿಷ್ಠಿತ ವೈದ್ಯಕೀಯ ನಿಯತಕಾಲಿಕ ‘ಲ್ಯಾನ್ಸೆಟ್’ ಕಳೆದ ವಾರ ಒಂದು ಸಂಶೋಧನ ಪ್ರಬಂಧವನ್ನು ಪ್ರಕಟಿಸಿತು. ಭಾರತ, ಅಮೆರಿಕ ಸೇರಿದಂತೆ ಜಗತ್ತಿನ ಹಲವು ಕಡೆ ಕೋವಿಡ್ ಪ್ರಕರಣಗಳಲ್ಲಿ ರೋಗಿಗೆ ಹೈಡ್ರೋಕ್ಲೋರೋಕ್ವಿನ್(ಎಚ್‌ಸಿಕ್ಯೂ) ಔಷಧ ನೀಡಲಾಗುತ್ತಿದೆ. ಇದು […]

Read More

ಮೊದಲು ಕನ್ನಡಿಗನೋ, ಭಾರತೀಯನೋ?

ಕರ್ನಾಟಕ ಮಾತೆ ಭಾರತ ಜನನಿಯ ತನುಜಾತೆ ಎಂದ ಕುವೆಂಪು ಅವರನ್ನು ನೆನಪಿಸಿಕೊಳ್ಳೋಣ. -ಡಾ. ರೋಹಿಣಾಕ್ಷ ಶಿರ್ಲಾಲು. ಮೇಲ್ಸೇತುವೆಯೊಂದಕ್ಕೆ ಸ್ವಾತಂತ್ರ್ಯವೀರ ಸಾವರ್ಕರ್ ಹೆಸರು ಪ್ರಸ್ತಾಪಗೊಂಡಾಗ ಅವರು ಕನ್ನಡಿಗರಲ್ಲ, ಕರ್ನಾಟಕದೊಳಗೆ ಕನ್ನಡಿಗರ ಹೆಸರನ್ನೇ ಇಡಬೇಕು ಎಂದು ಆರಂಭಗೊಂಡ ವಾದ ‘ಮೊದಲು ನಾನು ಕನ್ನಡಿಗ, ನಂತರ ಭಾರತೀಯ, ಕರ್ನಾಟಕದಿಂದ ಭಾರತ’ ಎನ್ನುವ ಮಾತುಗಳಾಗಿ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದೆ. ತಮ್ಮನ್ನು ತಾವು ಕನ್ನಡಪರ ಹೋರಾಟಗಾರರೆಂದು ಕರೆದುಕೊಳ್ಳುವ ಕೆಲವರು ತಮ್ಮ ಕನ್ನಡ ಹೋರಾಟದ ಮುಖವಾಣಿಯಂತೆ ಈ ಮಾತುಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಹಾಗಾದರೆ ಕನ್ನಡದ […]

Read More

ಸಿಗಲಿದೆ ದೇವರ ದರುಶನ, ಸೇವೆಗೆ ಕಾಯಬೇಕು ಸ್ವಲ್ಪ ದಿನ

ಜೂನ್ 8 ರಿಂದ ದೇವಸ್ಥಾನಗಳಲ್ಲಿ ಭಕ್ತರ ಪ್ರವೇಶಕ್ಕೆ ಸರಕಾರ ಅನುವು ಮಾಡಿಕೊಟ್ಟಿದೆ. ಕೊರೊನಾ ಹಿನ್ನೆಲೆಯಲ್ಲಿ ಕಟ್ಟೆಚ್ಚರ ವಹಿಸಬೇಕಾಗಿರುವುದರಿಂದ ಹೆಚ್ಚಿನ ದೇಗುಲಗಳು ದರ್ಶನಕ್ಕೆ ಮಾತ್ರ ಅವಕಾಶ ನೀಡಲು ನಿರ್ಧರಿಸಿವೆ. ಧರ್ಮಸ್ಥಳದಲ್ಲಿ ಸೇವೆ, ಅನ್ನದಾಸೋಹ, ಛತ್ರದ ವ್ಯವಸ್ಥೆ ಇರುತ್ತದೆ. ಆದರೆ, ಹೆಚ್ಚಿನ ಕಡೆಗಳಲ್ಲಿ ಅನ್ನದಾಸೋಹ ಸಾಧ್ಯತೆ ಕಡಿಮೆ. ಉಡುಪಿ, ಶೃಂಗೇರಿ ಸೇರಿದಂತೆ ಹಲವು ದೇಗುಲಗಳು ಒಂದು ವಾರ ಬಿಟ್ಟು ತೆರೆದುಕೊಳ್ಳುವ ಸಾಧ್ಯತೆ ಇದೆ. – ಜೂನ್ 8ರಂದು ಭಕ್ತರಿಗೆ ಬಾಗಿಲು ತೆರೆಯಲು ರಾಜ್ಯದ ದೇಗುಲಗಳಲ್ಲಿ ಸಿದ್ಧತೆ | ಕೆಲವು ಕಡೆ […]

Read More

ಶಿಕ್ಷಣ ಪಿತಾಮಹ ಎಚ್. ನರಸಿಂಹಯ್ಯ

– ವಿಜಯ್‌ಕುಮಾ‌ರ್‌  ಎಚ್. ಕೆ.  ಡಾ. ಹೆಚ್.ಎನ್ ಎಂದೇ ಪ್ರಖ್ಯಾತರಾದ ಹೊಸೂರು ನರಸಿಂಹಯ್ಯನವರು ಜೂನ್ 6, 1920ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಗ್ರಾಮದಲ್ಲಿ ಬಡ ಹಿಂದುಳಿದ ಕುಟುಂಬದಲ್ಲಿ ಹುಟ್ಟಿದರು. ತಂದೆ ಹನುಮಂತಪ್ಪ, ತಾಯಿ ವೆಂಕಟಮ್ಮ, ತಂಗಿ ಗಂಗಮ್ಮ. ಮನೆಯಲ್ಲಿ ಮಾತಾಡುವ ಭಾಷೆ ಕನ್ನಡವೆಂದರೆ ಹೆಚ್ಚು ಪ್ರೀತಿ. ಶಾಲೆಯಲ್ಲಿ ಪಠ್ಯದ ಜೊತೆಗೆ ಸ್ವಾತಂತ್ರ್ಯ ಚಳವಳಿಗಳ ಬಗ್ಗೆ, ಜಾತೀಯತೆ, ಅಸ್ಪೃಶ್ಯತೆ ಬಗ್ಗೆ ಶಿಕ್ಷ ಕರು ತಿಳಿಸುತ್ತಿದ್ದದ್ದು ಇವರ ಮೇಲೆ ಪ್ರಭಾವ ಬೀರಿತ್ತು. ಗಾಂಧೀಜಿಯವರ ಸರಳಜೀವನದಿಂದ ಪ್ರಭಾವಿತರಾಗಿದ್ದರು. ಮುಂದಿನ […]

Read More

ಇಎಂಐ ವಿನಾಯಿತಿ ಅಲ್ಲ – ಗ್ರಾಹಕನಿಗೆ ಇನ್ನಷ್ಟು ಹಣಕಾಸಿನ ಹೊರೆ

ಸಾಲ ಮರುಪಾವತಿಯ ಅವಧಿ ಮುಂದೂಡಿಕೆಗೆ ಅವಕಾಶ ನೀಡಿರುವ ಆರ್‌ಬಿಐ, ಈ ಅವಧಿಯ ಬಡ್ಡಿ ಮನ್ನಾ ಮಾಡದಿರುವುದಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಲದ ಇಎಂಐ ಕಟ್ಟಲು ಅವಧಿಯನ್ನು ಮಾರ್ಚ್‌ನಿಂದ ಆಗಸ್ಟ್‌ವರೆಗೆ, ಆರು ತಿಂಗಳ ಕಾಲ ಮುಂದೂಡಿದೆ. ಆದರೆ ಇದೇ ಅವಧಿಯಲ್ಲಿ ಸಾಲಕ್ಕೆ ಬಡ್ಡಿ ಸಂಗ್ರಹಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಇದು ಅನಿವಾರ್ಯ ಎಂದು ಕೋರ್ಟ್‌ಗೆ ನೀಡಿದ ವಿವರಣೆಯಲ್ಲಿ ಆರ್‌ಬಿಐ  ಹೇಳಿದೆ. ಆರ್‌ಬಿಐ ನೀಡಿರುವ ಈ ಸೌಲಭ್ಯವೇ ಒಂದು ಬಗೆಯಲ್ಲಿ ವಿಚಿತ್ರ. ಇದನ್ನು ಒಂದೇ ಮಾತಿನಲ್ಲಿ […]

Read More

ದರ್ಶನಕ್ಕೆ ಬೇಡ ಆತುರ

– ಸೋಮವಾರ ದೇಗುಲ ತೆರೆದರೂ ಹೆಚ್ಚಿನೆಡೆ ದರುಶನಕ್ಕೆ ಸೀಮಿತ – ಸೇವೆ ಆರಂಭ ಸ್ವಲ್ಪ ವಿಳಂಬ | ಜನದಟ್ಟಣೆ ತಪ್ಪಿಸುವುದು ಉತ್ತಮ ವಿಕ ಸುದ್ದಿಲೋಕ ಬೆಂಗಳೂರು. ಸೋಮವಾರದಿಂದ ಭಕ್ತರ ಪ್ರವೇಶಕ್ಕೆ ಅವಕಾಶ ನೀಡಲು ರಾಜ್ಯದ ಹೆಚ್ಚಿನ ದೇವಾಲಯಗಳಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ಆದರೆ, ಬಹುತೇಕ ದೇವಾಲಯಗಳಲ್ಲಿ ಸದ್ಯಕ್ಕೆ ದರ್ಶನಕ್ಕೆ ಮಾತ್ರ ಅವಕಾಶ ನೀಡುವ ಚಿಂತನೆ ನಡೆದಿದ್ದು, ದೇವರ ಸೇವೆಗಳು ಕೆಲವು ದಿನ ಬಿಟ್ಟು ಆರಂಭಗೊಳ್ಳಲಿವೆ. ಕೇಂದ್ರ ಸರಕಾರ ವಿಧಿಸಿರುವ ಮಾರ್ಗದರ್ಶಿ ಸೂತ್ರಗಳ ಅಡಿಯಲ್ಲಿ ದೇವಾಲಯಗಳು ಭಕ್ತರಿಗೆ ಅವಕಾಶ […]

Read More

ಬಿಷ್ಣೊಯಿಗಳ ಪರಿಸರಪ್ರೇಮ

– ಸುನೀಲ್‌ ಬಾರ್ಕೂರ್‌.  ಕೆಲದಿನಗಳ ಹಿಂದಿನ ಮಾತು. ಭಾರತಾದ್ಯಂತ ಲಾಕ್‌ಡೌನ್‌ ಜಾರಿಯಲ್ಲಿದ್ದು ಜನ ಮನೆಗಳಲ್ಲಿಯೇ ಬಂದಿಯಾಗಿರುವ ಸಂದರ್ಭ, ರಾಜಸ್ಥಾನದ ಜೋಧಪುರ ಜೈಸಲ್ಮೇರ್‌ ಹೆದ್ದಾರಿಯ ಭಾಲುರಾಜ್ವಾ ಎಂಬ ಪುಟ್ಟಹಳ್ಳಿಯ ಅರಣ್ಯ ಪ್ರದೇಶಕ್ಕೆ ಮಧ್ಯರಾತ್ರಿಯಲ್ಲಿ ಲಗ್ಗೆಯಿಟ್ಟ ನಾಲ್ಕು ಜನ ಬಂದೂಕುಧಾರಿಗಳ ತಂಡವೊಂದು ಕೃಷ್ಣಮೃಗಗಳನ್ನು ಬೇಟೆಯಾಡಲು ಯಶಸ್ವಿಯಾಯಿತು. ಅಲ್ಲಿಂದ ಅವರು ಕಾಲ್ಗೀಳಲು ಮುಂದಾಗುತ್ತಿದ್ದಾಗ ಹದಿನೇಳು ವರ್ಷದ ಯುವಕನೊಬ್ಬ ಧುತ್ತನೆ ಬಂದು ಅಡ್ಡಲಾಗಿ ನಿಂತ. ಇದನ್ನು ನಿರೀಕ್ಷಿಸದ ತಂಡದಲ್ಲೊಬ್ಬ ಬಂದೂಕು ತೋರಿಸಿದ. ಆ ಯುವಕನೂ ಬಲು ಘಾಟಿಯೇ. ಅವರ ಬಂದೂಕಿನಲ್ಲಿ ಗುಂಡುಗಳು ಖಾಲಿಯಾದುದನ್ನರಿತಿದ್ದ […]

Read More

ಹಸಿರು ಕಾಣದ ಉತ್ತರ ಕರ್ನಾಟಕ – ವಿಶೇಷ ಅಭಿಯಾನ ನಡೆಸಿದರೂ ಫಲ ಕಾಣದ ಅರಣ್ಯೀಕರಣ

– ಶಶಿಧರ ಹೆಗಡೆ, ಬೆಂಗಳೂರು : ಪ್ರತಿ ವರ್ಷ ಮುಂಗಾರಿನಲ್ಲಿ ರಾಜ್ಯಾದ್ಯಂತ ಕೋಟ್ಯಂತರ ಸಸಿಗಳನ್ನು ನೆಟ್ಟರೂ ಬರಡು ಪ್ರದೇಶದ ಜಿಲ್ಲೆಗಳು ಹಸಿರು ವಲಯದಿಂದ ಬಹಳ ದೂರವೇ ಉಳಿದಿವೆ. ಬ್ರಿಟಿಷ್ ಆಡಳಿತದ ಕಾಲದಿಂದಲೂ ‘ಫಾರೆಸ್ಟ್ ಡಿಸ್ಟ್ರಿಕ್ಟ್’ ಎನಿಸಿಕೊಂಡಿರುವ ಉತ್ತರ ಕನ್ನಡ ಮಾತ್ರ ಈಗಲೂ ರಾಜ್ಯದಲ್ಲಿ ಅತ್ಯಧಿಕ ಅರಣ್ಯ ಹೊಂದಿರುವ ಹಚ್ಚ ಹಸಿರಿನ ಜಿಲ್ಲೆಯೆಂಬ ಹೆಗ್ಗಳಿಕೆ ಉಳಿಸಿಕೊಂಡಿದೆ. ರಾಜ್ಯದ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯ ಬಿಡುಗಡೆ ಮಾಡಿರುವ ವರದಿ ಅನುಸಾರ ಉತ್ತರ ಕನ್ನಡ ಜಿಲ್ಲೆ ಮಾತ್ರ ಹಚ್ಚ ಹಸಿರಿನ ವಲಯದಲ್ಲಿದೆ. […]

Read More

ಕ್ವಾರಂಟೈನ್ ಮೇಲೆ ನಿಂತಿದೆ ನಾಡಿನ ಆರೋಗ್ಯ ಭವಿಷ್ಯ

ಪರೀಕ್ಷೆಯೇ ಸವಾಲು | ಆಸ್ಪತ್ರೆಗಳನ್ನು ಇನ್ನಷ್ಟು ಸುಸಜ್ಜಿತಗೊಳಿಸುವ ತುರ್ತು | ಕೆಲವೆಡೆ ಲಾಕ್‌ಡೌನ್‌ ಅನಿವಾರ್ಯ. ವಿಕ ಬ್ಯೂರೊ, ಬೆಂಗಳೂರು. ವಲಸೆ ಕಾರ್ಮಿಕರ ಆಗಮನದಿಂದ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ದಿನೇದಿನೆ ಏರುತ್ತಿದೆ. ಬಂದವರೆಲ್ಲ ಕ್ವಾರಂಟೈನ್‌ನಲ್ಲಿದ್ದಾರೆ ನಿಜ. ಆದರೆ ಈ ವ್ಯವಸ್ಥೆ ಅಷ್ಟೇನು ಪ್ರಬಲವಾಗಿಲ್ಲ. ಇದನ್ನು ಸಬಲಗೊಳಿಸದೆ ಇದ್ದರೆ ಇಡೀ ರಾಜ್ಯ ಅಪಾಯಕ್ಕೆ ಸಿಲುಕಿಕೊಳ್ಳುತ್ತದೆ. ಸೋಂಕು ಸಮುದಾಯದ ಹಂತಕ್ಕೆ ಹಬ್ಬಿಕೊಳ್ಳುತ್ತದೆ. ಇಲ್ಲಿರುವ ವಿವರಗಳು ರಾಜ್ಯ ಇನ್ನಷ್ಟು ಶಕ್ತಿ ಮತ್ತು ಸಂಪನ್ಮೂಲಗಳನ್ನು ಹೆಚ್ಚಿಸುವ ತುರ್ತನ್ನು ಹೇಳುತ್ತಿವೆ. ಪರೀಕ್ಷಾ ಪ್ರಕ್ರಿಯೆ ಮತ್ತು ವರದಿ […]

Read More

ಹೊಸ ಗೆಳೆಯ ಆಸ್ಪ್ರೇಲಿಯ – ಕಿರಿಕಿರಿಯ ನೆರೆಹೊರೆಗೊಂದು ಎಚ್ಚರಿಕೆ

ಭಾರತವು ಆಸ್ಪ್ರೇಲಿಯದ ಜೊತೆ ಮಹತ್ವದ ಒಂದು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ. ಇನ್ನು ಮುಂದೆ ಭಾರತ ಹಾಗೂ ಆಸ್ಪ್ರೇಲಿಯ ಪರಸ್ಪರರ ನೆಲಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದು. ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ‘ಆನ್‌ಲೈನ್‌ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪಾಲ್ಗೊಂಡು, ರಕ್ಷಣೆ ಸೇರಿ ಏಳು ಕ್ಷೇತ್ರಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ‘ಮ್ಯೂಚುವಲ್‌ ಲಾಜಿಸ್ಟಿಕ್ಸ್‌ ಸಪೋರ್ಟ್‌ ಅಗ್ರಿಮೆಂಟ್‌’ ಕ್ರಾಂತಿಕಾರಕವಾಗಿದ್ದು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top