ಸಿಂಹಸದೃಶ ವ್ಯಕ್ತಿತ್ವದ ಮುಖರ್ಜಿ

– ತರುಣ್‌ ವಿಜಯ್‌. ಭಾರತೀಯ ರಾಜಕಾರಣದಲ್ಲಿ ಸಿಂಹಸದೃಶ ವ್ಯಕ್ತಿತ್ವದವರಾಗಿದ್ದ ಶ್ಯಾಮಪ್ರಸಾದ ಮುಖರ್ಜಿ ಅವರ 119ನೇ ಜನ್ಮದಿನವನ್ನು ಜುಲೈ 6ರಂದು ಆಚರಿಸಿದೆವು. ಅವರು ಬಹಳ ಕಾಲ ಬದುಕಿದ್ದರೆ ಇಂದಿನ ರಾಜಕೀಯದ ಸ್ವರೂಪವೇ ಬೇರೆ ರೀತಿ ಇರುತ್ತಿತ್ತು. ಆಧುನಿಕ ಅಮೆರಿಕದ ರಾಜಕೀಯವನ್ನು ಅಬ್ರಹಾಂ ಲಿಂಕನ್‌ ಹೇಗೆ ಪ್ರಭಾವಿಸಿದರೋ ಹಾಗೆಯೇ ಶ್ಯಾಮಪ್ರಸಾದ್‌ ಮುಖರ್ಜಿ ಭಾರತವನ್ನು ಪ್ರಭಾವಿಸಿದರು. ಎರಡೇ ದಶಕಗಳ ಕ್ಲುಪ್ತ ಕಾಲದ ರಾಜಕೀಯ ಜೀವನದಲ್ಲಿ ಅವರು ದೇಶದ ಹಿಂದೂಗಳ ಜೀವನವನ್ನು, ಅವರ ಸುರಕ್ಷತೆಯನ್ನು ಎತ್ತಿ ಹಿಡಿದರು. 1953ರಲ್ಲಿಯೇ ಜಮ್ಮು- ಕಾಶ್ಮೀರ ಭಾರದಲ್ಲಿ […]

Read More

ದೇಸಿ ಆ್ಯಪ್‌ಗಳಲ್ಲಿ ಸಂಚಲನ

– ಚೀನಾ ಬ್ಯಾನ್‌ ವರದಾನ | ಪರ್ಯಾಯ ಆ್ಯಪ್‌ಗೆ ಹೆಚ್ಚಿದ ಬೇಡಿಕೆ. ಹೊಸದಿಲ್ಲಿ: ಟಿಕ್‌ಟಾಕ್‌, ಹೆಲೋ ಸೇರಿದಂತೆ ಚೀನಾ ಮೂಲದ 59 ಮೊಬೈಲ್‌ ಆ್ಯಪ್‌ಗಳ ನಿಷೇಧದಿಂದ ಭಾರತದ ಸ್ಟಾರ್ಟ್‌ಅಪ್‌ಗಳಿಗೆ ಉತ್ತಮ ಅವಕಾಶಗಳ ಬಾಗಿಲು ತೆರೆದಂತಾಗಿದೆ. ಚೀನಾ ಅಪ್ಲಿಕೇಷನ್‌ಗಳಿಗೆ ಪ್ರತಿಯಾಗಿ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ಸ್ವದೇಶಿ ಆ್ಯಪ್‌ಗಳಿಗೆ ಭಾರಿ ಬೇಡಿಕೆ ಬಂದಿದೆ. ಚಿಂಗಾರಿ, ಬೊಲೊ ಇಂಡ್ಯಾ, ಸ್ವೂಪ್‌ ಇತ್ಯಾದಿಗಳು ಗ್ರಾಹಕರನ್ನು ಸೆಳೆಯಲು ಕಸರತ್ತು ತೀವ್ರಗೊಳಿಸಿವೆ. ಟಿಕ್‌-ಟಾಕ್ ಬ್ಯಾನ್‌ ಆದ ಮರುದಿನವೇ ಭಾರತದಲ್ಲಿ ‘ಚಿಂಗಾರಿ’ ಆ್ಯಪ್‌ ಡೌನ್‌ಲೋಡ್‌ ಸಂಖ್ಯೆ ಗಂಟೆಗೆ ಸುಮಾರು 1 ಲಕ್ಷ ತಲುಪಿದೆ. ಒಂದು ಗಂಟೆಯಲ್ಲಿವೀಕ್ಷಿಸುವ […]

Read More

ಜಾರ್ಜ್ ಪ್ರತಿಪಾದಿಸಿದ್ದ ಆತ್ಮನಿರ್ಭರ ಮಂತ್ರ

ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಇಂದಿಗೆ (ಜೂನ್ 25) 45 ವರ್ಷ. ಎಮರ್ಜೆನ್ಸಿ ಹೀರೊ, ಜನನಾಯಕ ಜಾರ್ಜ್ ಫರ್ನಾಂಡಿಸ್ ಅವರು ಪ್ರತಿಪಾದಿಸುತ್ತಿದ್ದ ಸ್ವದೇಶಿ, ಸ್ವಾವಲಂಬನೆ, ಉದ್ಯೋಗ ಸೃಷ್ಟಿ, ಆತ್ಮನಿರ್ಭರ ವಿಚಾರಗಳು ಈಗ ಹೆಚ್ಚು ಪ್ರಸ್ತುತವಾಗಿವೆ. – ಅನಿಲ್ ಹೆಗ್ಡೆ. 1974ರ ಐತಿಹಾಸಿಕ ರೈಲು ಮುಷ್ಕರದ ನೇತೃತ್ವ ವಹಿಸಿದ್ದ ಕರ್ನಾಟಕದ ಹೆಮ್ಮೆಯ ಪುತ್ರ ಜಾರ್ಜ್ ಫರ್ನಾಂಡಿಸ್ ತುರ್ತುಪರಿಸ್ಥಿತಿಯಲ್ಲಿ ಭೂಮಿಗತ ಕ್ರಾಂತಿಕಾರಿ ಆಂದೋಲನ ನಡೆಸಿ ನಂತರ ಬರೋಡಾ ಡೈನಮೈಟ್ ಮೊಕದ್ದಮೆಯಲ್ಲಿ ಬಂಧನಕ್ಕೊಳಗಾಗಿ ಜೈಲಿನಿಂದಲೇ ಬಿಹಾರಿನ ಮುಜಫರ್‌ ಪುರದಿಂದ 3.34 […]

Read More

ಆರ್ಥಿಕತೆಯ ಹೊಸ ಗಾಳಿ ಕೇಂದ್ರ- ರಾಜ್ಯಗಳ ಸಮಗ್ರ ಸಹಕಾರ

ಮುಂದಿನ ದಿನಗಳಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ. ದೇಶದಲ್ಲಿನ ಕೋವಿಡ್‌-19 ಪರಿಸ್ಥಿತಿ, ಅನ್‌ಲಾಕ್‌ 1.0 ಜಾರಿಯ ಪರಿಣಾಮ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು 15 ರಾಜ್ಯಗಳ ಸಿಎಂಗಳೊಂದಿಗೆ ಬುಧವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಕೋವಿಡ್‌ ಸಂದರ್ಭ ಬಳಸಿಕೊಂಡು ಆರೋಗ್ಯ ಸೇವೆಗಳ ವಿಸ್ತರಣೆಗೆ ನಾವು ಒತ್ತು ನೀಡಬೇಕೆಂಬ ಆಶಯವನ್ನೂ ಅವರು ಪ್ರತಿಪಾದಿಸಿದ್ದಾರೆ. ಮತ್ತೊಮ್ಮೆ ಲಾಕ್‌ಡೌನ್‌ ಮಾಡಲಾಗುವುದಿಲ್ಲ […]

Read More

ಚೀನಾವನ್ನು ಕಟ್ಟಿ ಹಾಕೋಣ – ಆರ್ಥಿಕ, ರಾಜತಾಂತ್ರಿಕ ಮಾರ್ಗವೇ ಸೂಕ್ತ

ಐದು ವಾರಗಳಿಂದ ಪೂರ್ವ ಲಡಾಖ್ ಗಡಿಯಲ್ಲಿ ನಿಂತಿದ್ದ ಭಾರತ ಮತ್ತು ಚೀನಾ ಸೇನಾಪಡೆಗಳು ಹಿಂದೆ ಸರಿಯುತ್ತಿದ್ದ ಹೊತ್ತಿನಲ್ಲಿಯೇ ಸಂಘರ್ಷ ಭುಗಿಲೆದ್ದಿದ್ದು, ಕರ್ನಲ್ ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದಾರೆ ಎಂದು ಹೇಳಲಾಗಿದೆ. ಗಡಿ ಸಂಘರ್ಷ ಶಮನಗೊಳಿಸಲು ರಾಜತಾಂತ್ರಿಕ ಮತ್ತು ಸೇನಾಧಿಕಾರಿಗಳ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದ್ದ ಸಂದರ್ಭದಲ್ಲಿಯೇ ಮತ್ತೆ ಉದ್ವಿಗ್ನತೆ ತಲೆದೋರಿರುವುದು ಗಡಿ ಬಿಕ್ಕಟ್ಟನ್ನು ಮತ್ತಷ್ಟು ಜಟಿಲಗೊಳಿಸಿದೆ. ಚೀನಾ ಭಾರತದ ಜೊತೆಗೆ ಗಡಿಯ ವಿಚಾರದಲ್ಲಿ ನಿತ್ಯ ರಂಪಾಟ ಮಾಡಿಕೊಂಡೇ ಬರುತ್ತಿದೆ. ಜೊತೆಗೆ, ಪಾಕಿಸ್ತಾನ ಮತ್ತು ನೇಪಾಳದಂಥ ರಾಷ್ಟ್ರಗಳನ್ನೂ ಭಾರತದ ವಿರುದ್ಧ […]

Read More

ಆತ್ಮನಿರ್ಭರತೆಯ ದಾರಿ ದೀರ್ಘವಿದೆ!

– ವಿನುತಾ ಗೌಡ. ಇತ್ತೀಚೆಗೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಹಸರಕಾರ್ಯವಾಹ ಮುಕುಂದರು ಆತ್ಮನಿರ್ಭರತೆಯ ಬಗೆಗಿನ ವೆಬಿನಾರ್‌ ಒಂದರಲ್ಲಿ ಮಾತನಾಡುತ್ತಾ ಅಪರೂಪದ ಸಂಗತಿಯೊಂದನ್ನು ಪ್ರಸ್ಥಾಪಿಸಿದ್ದರು. ಕೃಷಿ, ಕೈಗಾರಿಕೆ, ಉದ್ದಿಮೆ ಮತ್ತು ರಕ್ಷ ಣಾ ಬಲಗಳಲ್ಲಿ ಆತ್ಮನಿರ್ಭರತೆಯ ಅನುಷ್ಠಾನ ಹೇಗೆ, ಎತ್ತ ಮುಂತಾದ ಚರ್ಚೆಗಳ ನಡುವೆಯೂ ಆತ್ಮನಿರ್ಭರಕ್ಕೆ ಒಂದು ವಿಭಿನ್ನ ದೃಷ್ಟಿಕೋನವಿದೆ ಎಂಬುದನ್ನು ಅವರು ತಿಳಿಸಿದ್ದರು. ಸ್ವಾವಲಂಬನೆ ಮತ್ತು ಆತ್ಮನಿರ್ಭರ ಪದಗಳಿಗಿರುವ ತೀರಾ ಹತ್ತಿರದ ಸಂಬಂಧಗಳನ್ನು ವಿವರಿಸುತ್ತಾ, ‘‘ಆತ್ಮನಿರ್ಭರ- ಸ್ವಾವಲಂಬನೆ ಎನ್ನುವುದು ಕೇವಲ ಆರ್ಥಿಕ ದೃಷ್ಟಿಕೋನಕ್ಕೆ ಸಂಬಂಧಿಸಿದ ಸಂಗತಿಯಲ್ಲ. ಅದಕ್ಕೂ […]

Read More

ಸ್ವದೇಶಿ, ಜಾಗತೀಕರಣ ನಡುವಿನ ಆಯ್ಕೆ ಯಾವುದು?

– ಸ್ವಾವಲಂಬನೆಯೊಂದಿಗೆ ವೈಶ್ವಿಕ ಗ್ರಾಮ ಬಲಗೊಳಿಸುವ ಭಾರತೀಯ ಚಿಂತನೆ – ಹರಿಪ್ರಕಾಶ್ ಕೋಣೆಮನೆ.  ಕೊರೊನಾ ವೈರಸ್‌ನಿಂದ ಪಾರಾಗುವುದು ಹೇಗೆ ಎಂಬುದೇ ಮೂರು ತಿಂಗಳ ಹಿಂದೆ ನಮ್ಮೆದುರಿನ ಬೃಹತ್ ಸವಾಲಾಗಿತ್ತು. ಕಾರಣ ಎದುರಾಗಿದ್ದ ಜೀವ ಭಯ! ಅದೊಂದು ಜೀವನ್ಮರಣದ ಪ್ರಶ್ನೆ ಎಂಬಂತೆಯೇ ಸರಕಾರವೂ ಯೋಚನೆಗೆ ಬಿದ್ದಿತ್ತು. ಆದರೆ ಈಗ ಅದು ನಮ್ಮ ಚಿಂತನೆಯ ಕೇಂದ್ರ ವಸ್ತುವಲ್ಲ. ಕೊರೊನಾದೊಂದಿಗೆ ಬದುಕಲು ಕಲಿಯಿರಿ ಎಂದು ಸರಕಾರ ಹಾಗೂ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಮುನ್ನವೇ, ಅದರೊಟ್ಟಿಗೆ ಬದುಕಲು ಕಲಿಯಲಾರಂಭಿಸಿದ್ದೇವೆ. ಆದರೆ, ಈಗ […]

Read More

ಪ್ಯಾಕೇಜ್ ಅನುಷ್ಠಾನ ಮುಖ್ಯ – ಬೃಹತ್ ನೆರವು ಸಂತ್ರಸ್ತರನ್ನು ತಲುಪಲಿ

ಸೋಮವಾರ ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಸಂವಾದ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮಂಗಳವಾರ ದೇಶವನ್ನುದ್ದೇಶಿಸಿ ಮಾತನಾಡಿ, 20 ಲಕ್ಷ ಕೋಟಿ ರೂಪಾಯಿಗಳ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ. ಕೊರೊನಾ ಲಾಕ್‌ಡೌನ್‌ನಿಂದ ಉಂಟಾಗಿರುವ ಆರ್ಥಿಕ ಬೇಗುದಿಯನ್ನು ತಕ್ಕಮಟ್ಟಿಗೆ ತಣಿಸಲು ಈ ಪ್ಯಾಕೇಜ್ ನೆರವಾಗಬಹುದು ಎಂದು ಆಶಿಸಬಹುದು. ಇದು ಜಿಡಿಪಿಯ ಶೇ.10ರಷ್ಟಿದ್ದು, ಗಣನೀಯ ಪ್ರಮಾಣದ ನೆರವೇ ಆಗಿದೆ. ರೈತರು, ಸಣ್ಣ ಹಾಗೂ ಕಿರು ಉದ್ಯಮಗಳು, ಕೈಗಾರಿಕೆ, ಮಧ್ಯಮ ವರ್ಗದವರಿಗೆ ಈ ಪ್ಯಾಕೇಜ್ ಸಲ್ಲಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಕೊರೊನಾ ಸಮರವನ್ನು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top