ಚೀನಾದ ಜೊತೆಗೆ ಲಡಾಕ್ ಗಡಿಭಾಗದಲ್ಲಿ ತಲೆದೋರಿದ ಬಿಕ್ಕಟ್ಟನ್ನು ದ್ವಿಪಕ್ಷೀಯ ಮಾತಕತೆ ಮೂಲಕ ಶಾಂತಿಯುತ ರೀತಿಯಲ್ಲಿ ಇತ್ಯರ್ಥಪಡಿಸಿಕೊಳ್ಳಲು ಉಭಯ ದೇಶಗಳ ಮಿಲಿಟರಿ ಮಟ್ಟದ ಸಂಧಾನ ಸಭೆ ತೀರ್ಮಾನಿಸಿದೆ. ಒಂದು ತಿಂಗಳಿಂದ ಎರಡು ರಾಷ್ಟ್ರಗಳ ನಡುವೆ ಉದ್ಭವಿಸಿರುವ ಸಂಘರ್ಷ ಸ್ಥಿತಿ ಶಮನಕ್ಕಾಗಿ ಶನಿವಾರ ಎರಡೂ ದೇಶಗಳ ಉನ್ನತ ಸೇನಾಧಿಕಾರಿಗಳ ಸಭೆ ನಡೆದಿದ್ದು, ಅದರಲ್ಲಿ ಈ ನಿರ್ಧಾರವಾಗಿದೆ. ಇದೇ ವೇಳೆಗೆ ‘‘ಸಂಘರ್ಷದಿಂದ ಸಮಸ್ಯೆ ಇತ್ಯರ್ಥಗೊಳ್ಳುವುದಿಲ್ಲ. ಇದನ್ನು ಚೀನಾ ಅರ್ಥ ಮಾಡಿಕೊಳ್ಳಬೇಕು. ಅನಗತ್ಯ ಹಸ್ತಕ್ಷೇಪ ಹಾಗೂ ಶಕ್ತಿಪ್ರದರ್ಶನಕ್ಕೆ ಮುಂದಾದರೆ ನಾವು ಕೈಕಟ್ಟಿ ಕೂಡುವುದಿಲ್ಲ,’’ […]
Read More
ಸಾಲ ಮರುಪಾವತಿಯ ಅವಧಿ ಮುಂದೂಡಿಕೆಗೆ ಅವಕಾಶ ನೀಡಿರುವ ಆರ್‌ಬಿಐ, ಈ ಅವಧಿಯ ಬಡ್ಡಿ ಮನ್ನಾ ಮಾಡದಿರುವುದಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾಲದ ಇಎಂಐ ಕಟ್ಟಲು ಅವಧಿಯನ್ನು ಮಾರ್ಚ್‌ನಿಂದ ಆಗಸ್ಟ್‌ವರೆಗೆ, ಆರು ತಿಂಗಳ ಕಾಲ ಮುಂದೂಡಿದೆ. ಆದರೆ ಇದೇ ಅವಧಿಯಲ್ಲಿ ಸಾಲಕ್ಕೆ ಬಡ್ಡಿ ಸಂಗ್ರಹಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಇದು ಅನಿವಾರ್ಯ ಎಂದು ಕೋರ್ಟ್‌ಗೆ ನೀಡಿದ ವಿವರಣೆಯಲ್ಲಿ ಆರ್‌ಬಿಐ ಹೇಳಿದೆ. ಆರ್‌ಬಿಐ ನೀಡಿರುವ ಈ ಸೌಲಭ್ಯವೇ ಒಂದು ಬಗೆಯಲ್ಲಿ ವಿಚಿತ್ರ. ಇದನ್ನು ಒಂದೇ ಮಾತಿನಲ್ಲಿ […]
Read More
ಭಾರತವು ಆಸ್ಪ್ರೇಲಿಯದ ಜೊತೆ ಮಹತ್ವದ ಒಂದು ಒಪ್ಪಂದಕ್ಕೆ ಗುರುವಾರ ಸಹಿ ಹಾಕಿದೆ. ಇನ್ನು ಮುಂದೆ ಭಾರತ ಹಾಗೂ ಆಸ್ಪ್ರೇಲಿಯ ಪರಸ್ಪರರ ನೆಲಗಳನ್ನು ರಕ್ಷಣಾ ಕಾರ್ಯಾಚರಣೆಗೆ ಬಳಸಿಕೊಳ್ಳಬಹುದು. ಉಭಯ ದೇಶಗಳ ನಡುವೆ ನಡೆದ ಉನ್ನತ ಮಟ್ಟದ ‘ಆನ್‌ಲೈನ್ ಶೃಂಗಸಭೆ’ಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಆಸ್ಪ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಪಾಲ್ಗೊಂಡು, ರಕ್ಷಣೆ ಸೇರಿ ಏಳು ಕ್ಷೇತ್ರಗಳ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದರು. ಈ ‘ಮ್ಯೂಚುವಲ್ ಲಾಜಿಸ್ಟಿಕ್ಸ್ ಸಪೋರ್ಟ್ ಅಗ್ರಿಮೆಂಟ್’ ಕ್ರಾಂತಿಕಾರಕವಾಗಿದ್ದು ಯುದ್ಧ ವಿಮಾನಗಳ ದುರಸ್ತಿ, ಇಂಧನ ಮರುಪೂರಣ […]
Read More
ಜುಲೈ 1ನೇ ತಾರೀಕಿನಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳನ್ನು ಆರಂಭಿಸುವ ಚಿಂತನೆ ಮುನ್ನೆಲೆಗೆ ಬಂದಿದೆ. ರಾಜ್ಯದ ಎಲ್ಲ ಸರಕಾರಿ ಶಾಲೆಗಳ ಕಚೇರಿ ಸಿಬ್ಬಂದಿ, ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರು ಜೂನ್ 5ರಿಂದಲೇ ಕಚೇರಿ ಕರ್ತವ್ಯಕ್ಕೆ ಹಾಜರಾಗಬೇಕು ಹಾಗೂ ಜೂನ್ 8ರಿಂದ ದಾಖಲಾತಿ ಪ್ರಕ್ರಿಯೆ ಆರಂಭಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಜೂನ್ 10ರಿಂದ 15ರವರೆಗೆ ಎಸ್‌ಡಿಎಂಸಿ ಸಭೆಗಳು ನಡೆಯಬೇಕು, ಜೂನ್ 15ರಿಂದ 20ರವರೆಗೆ ಶಾಲೆಯಿಂದ ಹೊರಗುಳಿದವರಿಗಾಗಿ ದಾಖಲಾತಿ ಆಂದೋಲನ ನಡೆಯಲಿದೆ ಎಂದೂ ಆಯುಕ್ತರು ನಿರ್ದೇಶಿಸಿದ್ದಾರೆ. […]
Read More
ಕೃಷಿ ವಲಯಕ್ಕೆ ಇನ್ನಷ್ಟು ಉತ್ತೇಜನ ನೀಡುವಂಥ ಕ್ರಮಗಳನ್ನು ಕೇಂದ್ರ ಸರಕಾರ ತೆಗೆದುಕೊಂಡಿದೆ. 14 ಹಿಂಗಾರು ಬೆಳೆಗಳ ಬೆಂಬಲ ಬೆಲೆಯನ್ನು ಏರಿಸಿದೆ. ವಿವಿಧ ಬೆಳೆಗಳಿಗೆ ಶೇ.50ರಿಂದ ಶೇ. 83ರವರೆಗೆ ಗರಿಷ್ಠ ಬೆಂಬಲ ಬೆಲೆ ಏರಿಸಲಾಗಿದೆ. ಭತ್ತ, ಜೋಳ, ಸಜ್ಜೆ, ರಾಗಿ, ಹತ್ತಿ ಮುಂತಾದವು ಬೆಲೆ ಏರಿಕೆಯ ಲಾಭ ಪಡೆದಿವೆ. ಅಲ್ಪಾವಧಿ ಕೃಷಿ ಸಾಲಗಳ ಮರುಪಾವತಿಯ ಅವಧಿಯನ್ನು ವಿಸ್ತರಿಸಿದೆ. ರೈತರ ಲಾಭವನ್ನು ಶೇ.50ರಷ್ಟು ಹೆಚ್ಚಿಸಲು ಕ್ರಮ ತೆಗೆದುಕೊಂಡಿದೆ. ಬೀದಿ ವ್ಯಾಪಾರಿಗಳಿಗೆ ಸುಲಭ ಸಾಲ ನೀಡಲು ವ್ಯವಸ್ಥೆಯನ್ನು ಆರಂಭಿಸಲಾಗುತ್ತಿದೆ. ಮಧ್ಯಮ ಗಾತ್ರದ […]
Read More
ಆಯ್ದ ಕೀಟನಾಶಕಗಳ ನಿಷೇಧಕ್ಕೆ ಕೇಂದ್ರ ಸರಕಾರ ನಿರ್ಧಾರ ಮಾಡಿದ್ದು, ಈ ಕುರಿತ ಕರಡು ಪ್ರಸ್ತಾವನೆಯನ್ನು ಸಾರ್ವಜನಿಕ ಚರ್ಚೆಗೆ ಬಿಟ್ಟಿದೆ. ಸರಕಾರದ ಒಲವು ಇವುಗಳ ನಿಷೇಧದತ್ತಲೇ ಇರುವಂತಿದೆ. ಇಲ್ಲಿ ಆತಂಕಕ್ಕೆ ಕಾರಣವಾಗಿರುವುದು, ಪ್ರಸ್ತಾವಿತ 27 ಕೀಟನಾಶಕಗಳು ಹಲವು ದಶಕಗಳಿಂದ ರೈತರು ಹೆಚ್ಚಾಗಿ ಬಳಸುತ್ತಿರುವ, ಕಡಿಮೆ ಅಪಾಯಕಾರಿಯಾಗಿರುವ, ಪರಿಣಾಮಕಾರಿ ಫಲಿತಾಂಶ ನೀಡುತ್ತಿರುವ ಹಾಗೂ ಅಗ್ಗದ ಜನರಿಕ್ ಕೀಟನಾಶಕಗಳಾಗಿವೆ. ಒಂದೆಡೆ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ, ಕೊರೊನಾ ಕಾಲದ ಲಾಕ್‌ಡೌನ್ ಮತ್ತು ‘ಕೃಷಿ ಒಳಸುರಿ’ಗಳ ಬೆಲೆಯೇರಿಕೆಗಳಿಂದ ಹೈರಾಣಾಗಿರುವ ರೈತರು ಪರ್ಯಾಯ […]
Read More
ಲಕ್ಷಾಂತರ ವಲಸೆ ಕಾರ್ಮಿಕರಿಗೆ ನೆಲೆ ನೀಡಿದ್ದ ರಾಜಧಾನಿ ಬೆಂಗಳೂರಿನತ್ತ ಮತ್ತೆ ಮರು ವಲಸೆ ಪರ್ವ ಆರಂಭವಾಗಿದೆ. ಇವರೆಲ್ಲ ಲಾಕ್‌ಡೌನ್ ಸಂದರ್ಭದಲ್ಲಿ ಉಂಟಾದ ದುಡಿಮೆ ನಷ್ಟ, ಹಸಿವುಗಳಿಂದ ಕಂಗೆಟ್ಟು ತಂತಮ್ಮ ಗ್ರಾಮಗಳತ್ತ ತೆರಳಿದ್ದವರು. ಈಗಾಗಲೇ ಜೂನ್ 1ರಿಂದ ಹಲವು ಉದ್ಯಮಗಳನ್ನು ಆರಂಭಿಸಲು ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ನಿರೀಕ್ಷೆಗೂ ಮೊದಲೇ ಉದ್ದಿಮೆಗಳು ಮತ್ತೆ ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇವರು ಮರಳಿ ಬರಲು ಸಿದ್ಧರಾಗಿದ್ದಾರೆ. ಇವರ ಮರುವಲಸೆಯ ಸಂದರ್ಭದಲ್ಲಿ ಕೋಲಾಹಲ, ಗೊಂದಲ ಉಂಟಾಗಿತ್ತು. ಅಂಥದೊಂದು ಬಿಕ್ಕಟ್ಟು ಮತ್ತೆ ಸೃಷ್ಟಿಯಾಗದಂತೆ ನೋಡಿಕೊಳ್ಳುವುದು ಸರಕಾರ […]
Read More
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ದಿನಾಂಕ ನಿಗದಿಯಾಗಿದೆ. ಪರೀಕ್ಷೆಗಳನ್ನು ಯಾವಾಗ ನಡೆಸಬೇಕು, ನಡೆಸಬೇಕೋ ಬೇಡವೋ, ನಡೆಸಿದರೆ ಹೇಗೆ, ನಡೆಸದಿದ್ದರೆ ಏನು ತೊಂದರೆ ಮುಂತಾದ ಚರ್ಚೆಗಳು ಸಾರ್ವಜನಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ನಡೆಯುತ್ತಿವೆ. ಜೂನ್ 25ರಿಂದ ಜುಲೈ 4ರವರೆಗೆ ಸರಕಾರ ಪರೀಕ್ಷೆ ನಿಗದಿಪಡಿಸಿದೆ. ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವಾಗ ಪರೀಕ್ಷೆಯ ಹೆಸರಿನಲ್ಲಿ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸುವುದು ಅವರನ್ನು ಕೊರೊನಾ ಆತಂಕಕ್ಕೆ ತಳ್ಳಿದಂತಾಗಬಹುದು ಮತ್ತು ಒತ್ತಡ ಸೃಷ್ಟಿಗೆ ಕಾರಣವಾಗಬಹುದು. ಇದರಿಂದ ಅವರು ಪರೀಕ್ಷೆಯನ್ನೂ ಸರಿಯಾಗಿ ಬರೆಯಲಾಗದೆ ಹೋಗಬಹುದು ಎಂಬ ವಾದದಲ್ಲಿ ಭಾಗಶಃ ಸತ್ಯವಿದೆ. […]
Read More
ರಾಜ್ಯ ಕಾನೂನು ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಕೋಲಾರದಲ್ಲಿ ಸಮಸ್ಯೆ ಹೇಳಿಕೊಳ್ಳಲು ಬಂದ ರೈತ ಮಹಿಳೆಯರಿಗೆ ಅವಾಚ್ಯ ಪದ ಬಳಸಿ ನಿಂದಿಸಿ ಸುದ್ದಿಯಾಗಿದ್ದಾರೆ. ಇದು ರಾಜ್ಯ ರೈತ ಸಂಘದವರ ಪ್ರತಿಭಟನೆ, ಪ್ರತಿಪಕ್ಷಗಳ ತೀವ್ರ ಟೀಕೆಗಳಿಗೂ ಕಾರಣವಾಗಿದ್ದು, ಮುಖ್ಯಮಂತ್ರಿ ಯಡಿಯೂರಪ್ಪನವರು ಕೂಡ ಮಾಧುಸ್ವಾಮಿಯವರ ನಡೆಯನ್ನು ಖಂಡಿಸಿದ್ದಾರೆ. ತದನಂತರ ಮಾಧುಸ್ವಾಮಿ ಅವರು ಕ್ಷಮೆ ಕೇಳಿದ್ದು, ಅಲ್ಲೂಕೂಡ ತಮ್ಮ ವರ್ತನೆಯನ್ನು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಹಿಂದೆಯೂ ಅವರು ಕೆಲವು ಒರಟು ಮಾತನಾಡಿದ ಉದಾಹರಣೆ ಇವೆ. ಒಟ್ಟಾರೆಯಾಗಿ ಇದು ಜವಾಬ್ದಾರಿಯುತ ಜನ ಪ್ರತಿನಿಧಿಯೊಬ್ಬರು ನಡೆದುಕೊಳ್ಳಬೇಕಾದ […]
Read More
ಹೊಸದಿಲ್ಲಿ: ಬಡ ಕುಟುಂಬಗಳ ಆರೋಗ್ಯ ರಕ್ಷಣೆಯ ಮಹಾತ್ವಾಕಾಂಕ್ಷೆಯೊಂದಿಗೆ 2018ರಲ್ಲಿಶುರುವಾದ ಆಯುಷ್ಮಾನ್ ಭಾರತ್ ಆರೋಗ್ಯ ವಿಮಾ ಯೋಜನೆಯಡಿ ಚಿಕಿತ್ಸೆ ಪಡೆದ ಫಲಾನುಭವಿಗಳ ಸಂಖ್ಯೆ 1 ಕೋಟಿಯ ಮೈಲುಗಲ್ಲುದಾಟಿದೆ. 53 ಕೋಟಿ ಜನರು ಆಯುಷ್ಮಾನ್ ಕಾರ್ಡ್ ಪಡೆದುಕೊಂಡಿದ್ದಾರೆ. ದೇಶದ 21,565 ಆಸ್ಪತ್ರೆಗಳಲ್ಲಿಈ ಯೋಜನೆಯಡಿ ಉಚಿತ ಆರೋಗ್ಯ ಸೇವೆ ಪಡೆದ ಫಲಾನುಭವಿಗಳ ಸಂಖ್ಯೆ ಒಂದು ಕೋಟಿ ದಾಟುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಅವರು ಈ ವಿಷಯವನ್ನು ಟ್ವಿಟರ್ ಮೂಲಕ ಪ್ರಕಟಿಸಿ ಜನರ ಆರೋಗ್ಯ ರಕ್ಷಣೆ ಬಗ್ಗೆ ಸರಕಾರಕ್ಕಿರುವ ಆದ್ಯತೆಯನ್ನು ಇದು ತೋರಿಸುತ್ತದೆ […]
Read More