ರವಿ ಕಾಣದ್ದನ್ನು ಕವಿ ಕಾಣುತ್ತಾನೆ! ತನ್ನ ಕಲ್ಪನಾಶಕ್ತಿಯಿಂದ. ಹಾಗೆಯೇ ಕವಿ ಕಾಣದ್ದನ್ನು ನಮ್ಮ ದೇಶದ ನವೋದ್ಯಮಿಗಳು ಕಂಡಿದ್ದಾರೆ. ಕಳೆದ 15 ವರ್ಷಗಳಲ್ಲಿ ಅವರು ಹುಟ್ಟಿಹಾಕಿರುವ ಸಾವಿರಾರು ಉದ್ಯಮಗಳು ಈ ಕೊರೊನಾ ಕಾಲದಲ್ಲಿ ನಮ್ಮನ್ನು ಕಾಯುತ್ತಿವೆ. ಕವಿಗೆ ಕಲ್ಪನೆ ಹೇಗೋ, ನವೋದ್ಯಮಿ / ಆಂತ್ರಪ್ರನರ್‌ಗೆ ‘ವಿಷನ್’ ಅಂದರೆ ಹಾಗೆ! ಸಣ್ಣ ಕಿಚ್ಚಿನ ಕಿಡಿಯಿಂದ ಆರಂಭಗೊಂಡು ಇಂದು ಬೃಹತ್ ಉದ್ಯಮಗಳಾಗಿ ಬೆಳೆದಿರುವ ಅದೆಷ್ಟೋ ನವೋದ್ಯಮಗಳೊಂದಿಗೆ ಅವುಗಳ ಆರಂಭಾವಸ್ಥೆಯಿಂದಲೇ ಸಲಹೆಗಾರನಾಗಿ ಕೆಲಸ ಮಾಡುವ ಸೌಭಾಗ್ಯ ನನಗೂ ನನ್ನ ಸಂವಹನ ಸಲಹಾ ಸಂಸ್ಥೆಗೂ […]
Read More
ರಾಜ್ಯಕಾರಣ : ಬಿಎಸ್‌ವೈ ಎದುರು ಆರೋಗ್ಯ ಕ್ಷೇತ್ರಕ್ಕೆ ಕಾಯಕಲ್ಪ ನೀಡುವ ಸವಾಲು – ಶಶಿಧರ ಹೆಗಡೆ. ರಾಮರಾಜ್ಯ ನಿರ್ಮಾಣವೆನ್ನುವುದು ಸುಂದರ ಕನಸು. ವಾಸ್ತವದಲ್ಲಿ ರಾಮರಾಜ್ಯ ಕಟ್ಟಿ ನಿಲ್ಲಿಸುವುದು ಸುಲಭ ಸಾಧ್ಯವಲ್ಲ. ಆದರೆ, ಅಧಿಕಾರದ ಗದ್ದುಗೆಯೇರಿದವರಿಗೆ ದೂರದರ್ಶಿತ್ವ ಅವಶ್ಯಕ. ರಾಮನಂತೆ ರಾಜ್ಯವಾಳಲು ಆಗದಿದ್ದರೂ ತುಘಲಕ್ ದರ್ಬಾರು ಸಲ್ಲ ಎಂಬ ವಿವೇಕ ಜಾಗೃತವಾಗಿರಬೇಕು. ಯಾಕೆಂದರೆ ಶ್ರೀರಾಮ ಯಾವತ್ತಿಗೂ ರಾಜಾರಾಮ ಎನಿಸಿಕೊಂಡಿದ್ದ. ಪ್ರಜಾರಂಜಕನೂ ಆಗಿದ್ದ ರಾಮ ಭಾರತೀಯ ಪರಂಪರೆಯಲ್ಲಿ ಆದರ್ಶಪ್ರಾಯ ವ್ಯಕ್ತಿ. ನಮ್ಮ ಮುಂದಿರುವ ಉತ್ಕೃಷ್ಟ ಪ್ರತಿಮೆ ರಾಮನಾದರೆ ಲಂಗುಲಗಾಮಿಲ್ಲದ ನಿರ್ಧಾರ ಕೈಗೊಂಡು ಪ್ರಜಾಪೀಡಕನೆನಿಸಿದ್ದವನು […]
Read More
ಬಾವಲಿಗಳಿಂದ ಕೋವಿಡ್-19 ಬರಲ್ಲ ಐಸಿಎಂಆರ್, ವಿಜ್ಞಾನಿಗಳ ಅಭಿಪ್ರಾಯ | ಮರಗಳನ್ನು ಕಡಿಯದಿರಲು ಮನವಿ ವಿಕ ಸುದ್ದಿಲೋಕ ಬೆಂಗಳೂರು : ಬಾವಲಿಗಳಿಂದ ಕೊರೊನಾ ವೈರಸ್(ಕೋವಿಡ್-19)ಗೆ ಹರಡುತ್ತಿದೆ ಎಂಬ ತಪ್ಪು ಮಾಹಿತಿಯನ್ನು ನಂಬಿದ ಅನೇಕರು ತಮ್ಮ ಮನೆ ಮಂದೆ ಇರುವ ಗಿಡ, ಮರಗಳ ಕೊಂಬೆಗಳನ್ನು ಕಡಿಯತ್ತಿರುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಆದರೆ, ಭಾರತೀಯ ವೈದ್ಯಕೀಯ ಸಂಶೋಧನಾ ಸಮಿತಿ (ಐಸಿಎಂಆರ್) ಮತ್ತು ತಜ್ಞರು ಬಾವಲಿಗಳು ಕೋವಿಡ್-19 ವಾಹಕಗಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇತ್ತೀಚೆಗಷ್ಟೇ ಕೇರಳ, ಹಿಮಾಚಲ ಪ್ರದೇಶ, ಪುದುಚೇರಿ ಮತ್ತು ತಮಿಳುನಾಡು ಪ್ರದೇಶ ವ್ಯಾಪ್ತಿಯ […]
Read More
ದೇಶದ 30% ಸೋಂಕಿಗೆ ತಬ್ಲಿಘಿ ಸಮಾವೇಶ ಲಿಂಕ್ – ದೇಶಾದ್ಯಂತ ಪತ್ತೆಯಾದ ಒಟ್ಟು ಕೊರೊನಾ ಪ್ರಕರಣಗಳು 14,378 – ತಬ್ಲಿಘಿ ಜಮಾತ್ ಸಮಾವೇಶದ ನಂಟಿರುವ ಸೋಂಕಿತರು 4,291 – ಕೇಂದ್ರ ಆರೋಗ್ಯ ಸಚಿವಾಲಯದಿಂದ ಅಧಿಕೃತ ಮಾಹಿತಿ ಏಜೆನ್ಸೀಸ್ ಹೊಸದಿಲ್ಲಿ ದೇಶದಲ್ಲಿ ದಾಖಲಾದ ಕೊರೊನಾ ಸೋಂಕು ಪ್ರಕರಣಗಳಲ್ಲಿ ಶೇಕಡಾ 30ಕ್ಕೆ ತಬ್ಲಿಕ್ ಜಮಾತ್ ಸಮಾವೇಶದ ನಂಟು ಇದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ‘‘ದೇಶಾದ್ಯಂತ ಶನಿವಾರ ಮಧ್ಯಾಹ್ನದವರೆಗಿನ ವರದಿ ಪ್ರಕಾರ ಒಟ್ಟು 14,378 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, […]
Read More
ವಿಕ ಸುದ್ದಿಲೋಕ ಬೆಂಗಳೂರು: ಹಲವು ಕಡೆಗಳಲ್ಲಿ ಅವರ ಮೇಲೆ ಹಲ್ಲೆನಡೆಯಿತು, ಕೆಲವೆಡೆ ಅವರ ಕಡತಗಳನ್ನು ಕಿತ್ತೆಸೆದರು, ಬಾಯಿಗೆ ಬಂದಂತೆ ನಿಂದಿಸಿದರು.. ಆದರೂ ಅವರು ತಮ್ಮ ಕರ್ತವ್ಯದಿಂದ ಹಿಂದೆ ಸರಿಯಲಿಲ್ಲ. ಮೂಲಸೌಕರ್ಯಗಳಿಲ್ಲ, ರೋಗಗಳ ಆತಂಕ ತುಂಬಿರುವ ಜಾಗಗಳಲ್ಲಿ ಅವರು ಒಬ್ಬಂಟಿಯಾಗಿ ಸಂಚರಿಸಬೇಕು.. ಅಷ್ಟಾದರೂ ಅವರು ಎದೆಗುಂದಲಿಲ್ಲ. ಸಕಾಲದಲ್ಲಿ ವೇತನ ನೀಡಲಿಲ್ಲವೆಂದು ಬೀದಿಗಿಳಿದು ಪ್ರತಿಭಟಿಸಿದ್ದರು. ಆದರೆ, ಸಂಕಷ್ಟದ ಈ ಕಾಲದಲ್ಲಿ ಅದನ್ನೇ ಬಳಸಿ ಬ್ಲ್ಯಾಕ್‌ಮೇಲ್ ಮಾಡಲಿಲ್ಲ. – ಇದು ಕೊರೊನಾ ವಿರುದ್ಧ ಸಮರದಲ್ಲಿ ನೈಜ ಸೇನಾನಿಗಳಾಗಿ ಊರೂರುಗಳಲ್ಲಿ ಕಾರ್ಯಾಚರಿಸುತ್ತಿರುವ ಆಶಾ […]
Read More
ಹೊಸದಿಲ್ಲಿ: ಚೀನಾದಲ್ಲಿ ಸರ್ವರ್ ಹೊಂದಿರುವ ಟೆಲಿ ಕಾನರೆನ್ಸಿಂಗ್ ಆ್ಯಪ್ ‘ಜೂಮ್’ ಬಳಕೆ ನಿಷೇಸಿ ಟೆಕ್ ದಿಗ್ಗಜ ‘ಗೂಗಲ್’ ತನ್ನ ಸಿಬ್ಬಂದಿಗೆ ಸೂಚನೆ ರವಾನಿಸಿದ ಬೆನ್ನಲ್ಲೇ, ಕೇಂದ್ರ ಗೃಹ ಸಚಿವಾಲಯವೂ ಅದಕ್ಕೆ ಕಡಿವಾಣ ಹಾಕಲು ನಿರ್ದೇಶನಗಳನ್ನು ಹೊರಡಿಸಿದೆ. ‘ಜೂಮ್’ ಸುರಕ್ಷಿತವಲ್ಲ ಹಾಗೂ ಮಾಹಿತಿಗಳು ಸೈಬರ್ ಖದೀಮರ ಪಾಲಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ. ಕೊರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ‘ವರ್ಕ್ ಫ್ರಮ್ ಹೋಮ್’ನಲ್ಲಿ ನಿರತವಾಗಿರುವ ಮಂದಿ, ತಮ್ಮ ಕಚೇರಿ ಮುಖ್ಯಸ್ಥರು ಹಾಗೂ ಸಹೋದ್ಯೋಗಿಗಳ ಜತೆ ಸಂವಾದ ನಡೆಸಲು ‘ಜೂಮ್’ […]
Read More
ಅಮೆರಿಕ, ಜಪಾನ್ ಸೇರಿ ಅನೇಕ ರಾಷ್ಟ್ರಗಳು ಚೀನಾದ ಅವಲಂಬನೆಯನ್ನು ಗಣನೀಯವಾಗಿ ಕಡಿತಗೊಳಿಸಲು ನಿರ್ಧರಿಸಿವೆ. ಕೋವಿಡ್-19 ಬಿಕ್ಕಟ್ಟು ಚೀನಾಗೆ ದುಬಾರಿಯಾಗಿ ಪರಿಣಮಿಸುವ ನಿರೀಕ್ಷೆ ಇದೆ. ಇಂಥ ಸನ್ನಿವೇಶದಲ್ಲಿ ಚೀನಾಕ್ಕೆ ಪರ್ಯಾಯವಾಗಿ ಭಾರತ ಹೊಸ ಅವಕಾಶಗಳನ್ನು ತನ್ನದಾಗಿಸಿಕೊಂಡು, ಗಣನೀಯ ಬೆಳವಣಿಗೆಯನ್ನು ಸಾಧಿಸುವ ನಿರೀಕ್ಷೆ ಇದೆ. ವಿಶ್ವದ ಬಹುತೇಕ ರಾಷ್ಟ್ರಗಳು ಚೀನಾವನ್ನು ‘ಜಗತ್ತಿನ ಉತ್ಪಾದನೆಯ ಕಾರ್ಖಾನೆ’ ಎಂದು ಸಂತಸದಿಂದ ಕರೆಯುತ್ತಿತ್ತು. ನಾನಾ ರಾಷ್ಟ್ರಗಳು ಚೀನಾದ ಅಗ್ಗದ ಮಾಲುಗಳಿಂದ ಸಂಸ್ಕರಿತ, ಉತ್ತಮ ದರ್ಜೆಯ ಪ್ರಾಡಕ್ಟ್‌ಗಳ ತನಕ ಎಲ್ಲವನ್ನೂ ಸ್ವೀಕರಿಸುತ್ತಿತ್ತು. ವ್ಯಾಪಾರದ ಮೂಲಕ ಚೀನಾ […]
Read More
– ವಿಮಾನಯಾನ ಶುರುವಾದ ಕೂಡಲೇ ಮರಳಲು ಕಂಪನಿಗಳ ಸೂಚನೆ – ಕೆಲವು ಉದ್ಯಮಿಗಳೂ ಅತಂತ್ರ – ವಿಜಯ ಕೋಟ್ಯಾನ್, ಮಂಗಳೂರು ಕೊರೊನಾ ಮಹಾಮಾರಿ ದೇಶದಲ್ಲಿ ಕಾರ್ಮಿಕ ವಲಯವನ್ನು ಕಂಗಾಲುಗೊಳಿಸಿರುವಂತೆಯೇ ಭಾರತದಿಂದ ಕೊಲ್ಲಿ ರಾಷ್ಟ್ರಗಳಿಗೆ ಹೋಗಿ ದುಡಿಯುತ್ತಿರುವ ಕಾರ್ಮಿಕ ವರ್ಗವನ್ನೂ ಚಿಂತೆಗೀಡು ಮಾಡಿದೆ. ಒಂದು ಮೂಲದ ಪ್ರಕಾರ ಅಲ್ಲಿರುವ ಸುಮಾರು 10 ಲಕ್ಷ ಭಾರತೀಯರು ಉದ್ಯೋಗ ಕಳೆದುಕೊಳ್ಳುವ ಅಪಾಯದಲ್ಲಿದ್ದಾರೆ. ವಿದೇಶಕ್ಕೆ ಹೋಗಿರುವ ಭಾರತೀಯರಲ್ಲಿ ಶೇ. 30 ಮಂದಿ ಅರಬ್ ರಾಷ್ಟ್ರಗಳಾದ ಕುವೈಟ್, ಒಮಾನ್, ಬಹರೈನ್, ಕತಾರ್, ಸೌದಿ, ಯುಎಇ […]
Read More
ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಘೋಷಿಸಿದ ಮೂರು ವಾರಗಳ ಲಾಕ್‌ಡೌನ್ ಅನ್ನು ಭಾರತ ಮುಗಿಸಿದೆ. ಮೇ 3ರವರೆಗೆ ಮತ್ತೆ ವಿಸ್ತರಿಸಲಾಗಿದೆ. ಈ ನಡುವೆ, ಲಾಕ್‌ಡೌನ್‌ನಿಂದ ಭಾರತಕ್ಕೆ ಆದ ಪ್ರಯೋಜನ ಏನು? ಲಾಕ್‌ಡೌನ್ ಮಾಡದಿದ್ದರೆ ಏನಾಗುತ್ತಿತ್ತು? ಮೂರು ವಾರಗಳಿಂದ ಲಾಕ್‌ಡೌನ್ ಅನುಭವಿಸುತ್ತಿರುವ ಭಾರತ ಮತ್ತೂ ಹದಿನೆಂಟು ದಿನಗಳ ಲಾಕ್‌ಡೌನ್‌ಗೆ ಒಳಪಟ್ಟಿದೆ. ಈ ಅವಧಿಯಲ್ಲಿ, ಹೊಸ ಕೋವಿಡ್-19 ಪ್ರಕರಣಗಳ ಸಂಖ್ಯೆ ಇಳಿಮುಖವಾಗಿದೆ. ಕೇರಳ ಕೊರೊನಾ ವೈರಸ್‌ನ್ನು ತಡೆಗಟ್ಟುವುದು ಹೇಗೆ ಎಂಬುದಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಿದೆ. ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿ ಲಾಕ್‌ಡೌನ್ […]
Read More
ಕೆಲವು ದೊಡ್ಡ ನಗರಗಳು ಕೋವಿಡ್-19 ಕಾಟವನ್ನು ತಡೆಯಲಾಗದೆ ಏದುಸಿರು ಬಿಡುತ್ತಿದ್ದರೆ, ಕೆಲವು ಸಣ್ಣ ಪಟ್ಟಣಗಳು ಅತ್ಯಂತ ಯಶಸ್ವಿಯಾಗಿ ಕೊರೊನಾ ಹಾವಳಿಯನ್ನು ಎದುರಿಸಿ ನಿಂತು ಮುಗುಳುನಗೆ ಬೀರುತ್ತಿವೆ. ಆ ನಗರಗಳು ಯಾವುವು, ಅವು ಹೇಗೆ ಸೋಂಕನ್ನು ಬಾಗಿಲಾಚೆ ನಿಲ್ಲಿಸಿವೆ? ಒಂದು ತಿಂಗಳ ಹಿಂದೆ ಕೋವಿಡ್ ಸೋಂಕಿನ ಕೆಂಪು ವಲಯ ಅಂತಲೇ ಗುರುತಿಸಲಾಗಿದ್ದ ರಾಜಸ್ಥಾನದ ಭಿಲ್ವಾರಾ ನಗರದ ಇಂದಿನ ಚಿತ್ರಣವೇ ಬೇರೆ. ಅಲ್ಲಿದ್ದ 28 ಕೋವಿಡ್ ಸೋಂಕು ಪಾಸಿಟಿವ್ ಪ್ರಕರಣಗಳಲ್ಲಿ 25 ಮಂದಿ ಗುಣಮುಖರಾಗಿದ್ದಾರೆ. ಇಬ್ಬರು ಮೃತಪಟ್ಟಿದ್ದಾರೆ. ಭಿಲ್ವಾರಾದಂತೆ ಸೋಂಕು […]
Read More