ಸಾರ್ವಜನಿಕ ಜೀವನದಲ್ಲಿ ನಡವಳಿಕೆ ಮುಖ್ಯ

– ಶಶಿಧರ ಹೆಗಡೆ.   ‘ಹೇಳುವುದು ಕಾಶಿ ಕಾಂಡ. ತಿನ್ನುವುದು ಮಶಿ ಕೆಂಡ’ ಎಂಬ ಮಾತೊಂದಿದೆ. ಅಂದರೆ ವೇದಾಂತ ಹೇಳುವುದಕ್ಕೆ-ಬದನೆಕಾಯಿ ತಿನ್ನುವುದಕ್ಕೆ ಅನ್ನುತ್ತಾರಲ್ಲ. ಇದೂ ಹಾಗೆಯೇ! ಎಷ್ಟೋ ಬಾರಿ ನುಡಿಗೂ ನಡೆಗೂ ಹೊಂದಾಣಿಕೆ ಇರುವುದಿಲ್ಲ. ಸಾಮಾನ್ಯವಾಗಿ ರಾಜಕಾರಣಿಗಳು ಇಂತಹ ಆರೋಪಕ್ಕೆ ಗುರಿಯಾಗುತ್ತಾರೆ. ರಾಜಕಾರಣಿಗಳೆಲ್ಲರನ್ನೂ ಒಂದೇ ತಕ್ಕಡಿಯಲ್ಲಿಟ್ಟು ತೂಗುವುದೂ ಸರಿಯಲ್ಲ. ಯಾಕೆಂದರೆ ಸಾರ್ವಜನಿಕ ಬದುಕಿನಲ್ಲಿ ಹೇಗಿರಬೇಕೆಂದು ತೋರಿಸಿಕೊಟ್ಟ ಆದರ್ಶಪ್ರಾಯರು ಅನೇಕರಿದ್ದಾರೆ. ಗುಲಗಂಜಿಯಷ್ಟು ಪ್ರಾಮಾಣಿಕತೆ, ಬದ್ಧತೆ ಹೊಂದಿದವರು ನಮ್ಮ ನಡುವೆ ಇನ್ನೂ ಇದ್ದಾರೆ. ಮೆದುಳಿಗೂ ನಾಲಿಗೆಗೂ ಲಿಂಕ್‌ ತಪ್ಪಿ ಹೋದಂತೆ ಬಡಬಡಿಸುವವರೂ […]

Read More

ಹೋಟೆಲ್ ಓಪನ್‌ಗೆ ಕ್ಷಣಗಣನೆ

– ವಿಮಾನ, ರೈಲು ಸಂಚಾರದ ಆರಂಭದ ಹಿನ್ನೆಲೆಯಲ್ಲಿ ಆಹಾರ, ವಸತಿ ವ್ಯವಸ್ಥೆ ಅನಿವಾರ್ಯ – ಶೀಘ್ರವೇ ದೇಗುಲಗಳೂ ತೆರೆಯುವ ಸಾಧ್ಯತೆ | ಜನಜೀವನ ವೇಗವಾಗಿ ಮರಳಿ ಹಳಿಗೆ. – ಎಚ್.ಪಿ.ಪುಣ್ಯವತಿ,  ಬೆಂಗಳೂರು.  ಕೊರೊನಾ ನಡುವೆಯೇ ಬದುಕು ಕಟ್ಟಿಕೊಳ್ಳುವುದು ಅನಿವಾರ್ಯ ಎಂಬ ಸಂದೇಶಕ್ಕೆ ಪೂರಕವಾಗಿ ಜನಜೀವನ ವೇಗವಾಗಿ ಮರಳಿ ಹಳಿಗೆ ಬರುತ್ತಿದೆ. ಇದರ ಭಾಗವಾಗಿ, ರಾಜ್ಯದಲ್ಲಿ ಹೋಟೆಲ್‌ಗಳ ಮರು ಆರಂಭಕ್ಕೂ ಕ್ಷಣಗಣನೆ ಆರಂಭವಾಗಿದೆ. ಜತೆಗೆ ಕೆಲವೇ ದಿನಗಳಲ್ಲಿ ದೇವಾಲಯಗಳ ಬಾಗಿಲುಗಳೂ  ತೆರೆಯಲಿವೆ. ಲಾಕ್‌ಡೌನ್‌ ಸಡಿಲಿಕೆ ನಂತರ ವಾಣಿಜ್ಯ ಚಟುವಟಿಕೆಗಳು […]

Read More

ಮನರಂಜನೆ ಮನೆ ಮನ ಕೆಡಿಸದಿರಲಿ

– ಡಾ. ರೋಹಿಣಾಕ್ಷ ಶಿರ್ಲಾಲು.  ಲಾಕ್‌ಡೌನ್‌ ಕಾಲಘಟ್ಟದಲ್ಲಿ ನಮ್ಮ ಬಹುತೇಕ ಖಾಸಗಿ ಮನರಂಜನಾ ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಎಪಿಸೋಡ್‌ಗಳು ಚಿತ್ರೀಕರಣವಿಲ್ಲದೆ ಮುಕ್ತಾಯವಾಗಿವೆ. ಜನ ಮನೆಯಿಂದ ಹೊರಗೆ ಹೋಗಲಾರದೆ ಮನೆಯಲ್ಲೇ ಕುಳಿತುಕೊಳ್ಳಬೇಕಾದ ಅನಿವಾರ್ಯತೆ ಬಂದುದರಿಂದ, ಮನರಂಜನೆಗಾಗಿ ಟಿವಿ ಚಾನೆಲ್‌ಗಳನ್ನೇ ಅವಲಂಬಿಸಬೇಕಾಗಿ ಬಂದಾಗ ಸರಕಾರಿ ದೂರದರ್ಶನ ಚಾನೆಲ್ ಬಹುವರ್ಷಗಳ ಹಿಂದೆ ಪ್ರಸಾರ ಮಾಡಿದ್ದ ರಾಮಾಯಣ, ಮಹಾಭಾರತ ಮೊದಲಾದ ಜನಪ್ರಿಯ ಪೌರಾಣಿಕ ಧಾರಾವಾಹಿಗಳನ್ನು ಪ್ರಸಾರ ಮಾಡಿತು. ಈ ಪ್ರಸಾರಗಳು ದಾಖಲೆಯನ್ನೇ ನಿರ್ಮಿಸಿತು. ದೇಶಾದ್ಯಂತ ಕೋಟ್ಯಂತರ ಟಿವಿ ವೀಕ್ಷ ಕರು ಈ […]

Read More

ಪರಾವಲಂಬಿ ಕೊರೊನಾ ವೈರಸ್ ಸೋಲಿಸಲು ಸ್ವಾವಲಂಬಿ ಭಾರತ!

-ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ.   2019 ರ ಡಿಸೆಂಬರ್ ಕೊನೆಯಲ್ಲಿ ಚೀನಾದ ವುಹಾನ್‌ನಲ್ಲಿ ಕೊರೊನಾ ವೈರಾಣುವಿನ ಹಾವಳಿ ಆರಂಭವಾಗುತ್ತಿದ್ದಂತೆ ಎಚ್ಚೆತ್ತುಕೊಂಡ ಕಮ್ಯುನಿಸ್ಟ್ ಸರಕಾರ ಸುತ್ತಮುತ್ತಲಿನ ಐದು ನಗರಗಳಲ್ಲಿರುವ 5 ಕೋಟಿ ಜನರಿಗೆ ಊರು ಬಿಟ್ಟು ಹೋಗದಂತೆ ನಿಷೇಧಾಜ್ಞೆ ಹೊರಡಿಸಿತು. ಮನೆ ಬಿಟ್ಟು ಬರದಂತೆ ಕಟ್ಟೆಚ್ಚರ ವಹಿಸಿ, ಅವರ ಮನೆಗಳನ್ನೇ ಹೊರಗಡೆಯಿಂದ ಸೀಲ್ ಮಾಡಿ ಮುಚ್ಚಲಾಯಿತು. ಮನೆಯೊಳಗೆ ಸಿಲುಕಿದವರು ಹೊಟ್ಟೆಗೆ ತಿಂದರೋ ಬಿಟ್ಟರೂ ಲೆಕ್ಕಿಸದೆ ಊರಿಗೆ ಊರನ್ನೇ ನಿರ್ಮಲಗೊಳಿಸಲು 560 ಟನ್ ಸೋಂಕು ನಿವಾರಕ ಕಳಿಸಿ, ವುಹಾನ್‌ನಲ್ಲಿ ವೈರಾಣು ಪಸರಿಸದಂತೆ […]

Read More

ರೆಪೊ ದರ ಇಳಿಕೆ ಯಾರಿಗೆ ಲಾಭ? – ಗ್ರಾಹಕನಿಗೆ ಲಾಭವಿಲ್ಲದ ಬಡ್ಡಿದರ ವ್ಯರ್ಥ

ಕೊರೊನಾ ಹಾವಳಿ ಮತ್ತು ಲಾಕ್‌ಡೌನ್‌ನ ಪರಿಣಾಮ ಕಳೆದ ಎರಡು ತಿಂಗಳಿನಿಂದ ನಿಶ್ಚೇತನಗೊಂಡಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಅಲ್ಪಾವಧಿಯ ಸಾಲದ ಬಡ್ಡಿ ದರವನ್ನು (ರೆಪೊ) ಶೇ.4.4ರಿಂದ ಶೇ.4ಕ್ಕೆ ಕಡಿತಗೊಳಿಸಿದೆ. ಮಾರ್ಚ್‌ನಲ್ಲೂ ರೆಪೊ ದರ ಕಡಿತಗೊಳಿಸಲಾಗಿತ್ತು. 2019 ಮತ್ತು ಈ ವರ್ಷದ ಅವಧಿಯಲ್ಲಿ ಒಟ್ಟಾರೆ ಎಂಟಕ್ಕೂ ಅಧಿಕ ಬಾರಿ ರೆಪೊ ದರ ಇಳಿಸಲಾಗಿದೆ. ಇದರ ಜೊತೆಗೆ ಸಾಲ ಕಂತು ಪಾವತಿಯ ಮುಂದೂಡಿಕೆಯ ಐಚ್ಛಿಕ ಸೌಲಭ್ಯವನ್ನೂ ಆರ್‌ಬಿಐ ವಿಸ್ತರಿಸಿದೆ. ರೆಪೊ ದರ ಇಳಿಕೆಯ […]

Read More

ಸಾಲ ಅಗ್ಗ, ಠೇವಣಿ ನಷ್ಟ – ಆರ್ಥಿಕತೆಗೆ ಶಕ್ತಿ ತುಂಬಲು ಆರ್‌ಬಿಐ ಹರಸಾಹಸ

– ಸಾಲಗಳ ಇಎಂಐ ಆಗಸ್ಟ್ ತನಕ ಮುಂದೂಡಿಕೆ – ರಿಸರ್ವ್ ಬ್ಯಾಂಕ್ ರೆಪೊ ದರ 4.4%ನಿಂದ 4%ಗೆ ಕಡಿತ – ಗೃಹ, ವಾಹನ, ಕಾರ್ಪೊರೇಟ್ ಸಾಲ ಇಳಿಕೆ ಸಂಭವ – ಸಾಲಗಾರರಿಗೆ ಇಳಿದ ಹೊರೆ, ಠೇವಣಿ ದಾರರಿಗೆ ನಷ್ಟ ಮುಂಬಯಿ: ಕೋವಿಡ್-19 ಬಿಕ್ಕಟ್ಟು ಮತ್ತು ಲಾಕ್‌ಡೌನ್‌ ಪರಿಣಾಮ ಸ್ಥಗಿತವಾಗಿರುವ ಆರ್ಥಿಕ ಚಟುವಟಿಕೆಗಳಿಗೆ ಚೈತನ್ಯ ತುಂಬಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಅನಿರೀಕ್ಷಿತವಾಗಿ ತನ್ನ ಅಲ್ಪಾವಧಿಯ ಸಾಲದ ಬಡ್ಡಿ ದರವನ್ನು (ರೆಪೊ) ಶೇ.4.4ರಿಂದ ಶೇ.4ಕ್ಕೆ ಕಡಿತಗೊಳಿಸಿದೆ. ಕಳೆದ […]

Read More

ಮೊದಲು ಸೋಂಕು ತಂದವರು ಯಾರು?

– ಮಂಜುನಾಥ ಅಜ್ಜಂಪುರ. ಅಂಕಣ: ಮರೆಯಲಾಗದ ಇತಿಹಾಸ ಕೊರೊನಾ ಸಾಂಕ್ರಾಮಿಕ ರೋಗದ ಎದುರು ಅಮೆರಿಕ ಜರ್ಝರಿತವಾಗಿದೆ. ಅಲ್ಲಿನ ಅಧ್ಯಕ್ಷರು ರೋಗ ಹರಡಿದ ಚೀನಾವನ್ನು ದೂಷಿಸಿದ್ದಾರೆ. ಇತಿಹಾಸದ ಪುಟಗಳೇ ವಿಚಿತ್ರ. ಅದರ ಪುಟಪುಟಗಳಲ್ಲಿ ನಿರಪರಾಧಿಗಳ- ಮುಗ್ಧರ ರಕ್ತವೇ ಹರಿದಿದೆ. ಇಂದಿನ ಅಮೆರಿಕ ಎಂಬ ದೇಶದಲ್ಲಿರುವ ಬಹುಸಂಖ್ಯಾತರು ಯೂರೋಪ್‌ ಮೂಲದ ಶ್ವೇತವರ್ಣೀಯ ಕ್ರೈಸ್ತರು. ಕೆಲವು ಶತಮಾನಗಳ ಹಿಂದೆ, ಇದೇ ಯೂರೋಪಿಯನ್ನರೇ ಉತ್ತರ-ದಕ್ಷಿಣ ಅಮೆರಿಕ ಖಂಡಗಳಲ್ಲಿದ್ದ ಕೋಟಿಕೋಟಿ ಮೂಲನಿವಾಸಿಗಳನ್ನು ಚಿನ್ನದ ಆಸೆಗಾಗಿ ಕೊಂದು ಹಾಕಿದರು. ಈ ಹಂತಕ ಪಡೆ ತಮ್ಮೊಂದಿಗೆ ಕೊಂಡೊಯ್ದ […]

Read More

ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲಿರುವ ಮೆಗಾ ಪ್ಯಾಕೇಜ್

(ಆತ್ಮನಿರ್ಭರ ಭಾರತ್ ಭಾಗ 4) ಕೃಷಿ ವಲಯದ ಮಾರುಕಟ್ಟೆ ಸುಧಾರಣೆಗೆ ಹಲವು ದೀರ್ಘಕಾಲೀನ ಪರಿಣಾಮ ಬೀರಬಲ್ಲ ಯೋಜನೆಗಳನ್ನು ಆತ್ಮನಿರ್ಭರ ಭಾರತ್ ಯೋಜನೆಯಲ್ಲಿ ಪ್ರಕಟಿಸಿರುವುದು ವಿಶೇಷ. ಪ್ರತಿ ರಾಜ್ಯಗಳಲ್ಲಿ ಕೃಷಿ ಸಂಬಂಧಿತ ಕಿರು ಉದ್ದಿಮೆ ಘಟಕ ಅಭಿವೃದ್ಧಿಪಡಿಸಲು 10,000 ಕೋಟಿ ರೂ. ಮೀಸಲಿಟ್ಟಿರುವುದು, ಕೃಷಿ ಮಾರುಕಟ್ಟೆ ನಿಯಮಗಳನ್ನು ಸಡಿಲಗೊಳಿಸುತ್ತಿರುವುದು, ಕೃಷಿ ಉತ್ಪನ್ನ ಮುಕ್ತ ವ್ಯಾಪಾರಕ್ಕೆ ಇ-ಟ್ರೇಡಿಂಗ್, ಮೀನುಗಾರಿಕೆ ನೆರವು, ಅಗತ್ಯ ವಸ್ತುಗಳ ಕಾಯಿದೆ ವ್ಯಾಪ್ತಿಯಿಂದ ಈರುಳ್ಳಿ, ಆಲೂಗಡ್ಡೆ ಇತ್ಯಾದಿಗಳನ್ನು ಬೇರ್ಪಡಿಸಿರುವುದು, ಕರ್ನಾಟಕದ ರಾಗಿ ಸೇರಿ ಸ್ಥಳೀಯ ವಿಶಿಷ್ಟ ಧಾನ್ಯಗಳನ್ನು […]

Read More

ಜೀವನ ಉಳಿಸಲು ಜೀವವೈವಿಧ್ಯ

ಮೇ 22 ವಿಶ್ವ ಜೀವವೈವಿಧ್ಯ ದಿನ. ಜೀವ ವೈವಿಧ್ಯತೆಯ ಮಹತ್ವವನ್ನು ಅರ್ಥ ಮಾಡಿಸಲು ವಿಶ್ವ ಸಂಸ್ಥೆ ಈ ದಿನವನ್ನು ಮುಡಿಪಾಗಿಟ್ಟಿದೆ. ಕೊರೊನಾ ಕಾಡುತ್ತಿರುವ ಹೊತ್ತಿನಲ್ಲಿಈ ದಿನ ಪ್ರಸ್ತುತ. ‘‘ಇನ್ನಾದರೂ ನಮ್ಮ ಜೀವವೈವಿಧ್ಯವನ್ನು ಅರ್ಥ ಮಾಡಿಕೊಂಡು ಅದನ್ನ ಉಳಿಸಲು ಪಣ ತೊಡದಿದ್ದರೆ ಮಾನವನೂ ಸರ್ವನಾಶವಾಗುವ ದಿನ ದೂರವಿಲ್ಲ,’’ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಸಿದೆ. ಹೆಚ್ಚುತ್ತಿರುವ ಕೊರೊನಾ ವೈರಸ್ ಹಾವಳಿಯ ಹಿನ್ನೆಲೆಯಲ್ಲಿಈ ಮಾತು. ಭೂಮಿಯಲ್ಲಿ ಗಿಡಮೂಲಿಕೆ, ಕ್ರಿಮಿಕೀಟಗಳೂ ಸೇರಿದಂತೆ ಕೋಟ್ಯಂತರ ಜೀವಿಗಳಿವೆ. ಇವುಗಳ ಜೀವನ ಒಂದಕ್ಕೊಂದು ಹೆಣೆದುಕೊಂಡಿವೆ. ಆಹಾರ […]

Read More

ಧ್ವನಿವರ್ಧಕ ನಿಯಂತ್ರಣಕ್ಕೆ ಕಠಿಣ ಕ್ರಮ ಅಗತ್ಯ

– ಡಾ. ಮಲ್ಲಿಕಾರ್ಜುನ ಗುಮ್ಮಗೋಳ. ಅನ್ಯರಿಗೆ ಇರಸುಮುರಸು ಆಗುವ ಧ್ವನಿವರ್ಧಕ ಬಳಕೆಯನ್ನು ಮಸೀದಿಗಳು ನಿಲ್ಲಿಸಬೇಕು ಎಂದು ಲೇಖಕ, ಚಿತ್ರ ಸಾಹಿತಿ ಜಾವೇದ್ ಅಕ್ತರ್ ಟ್ವೀಟ್ ಮಾಡಿದ್ದಾರೆ. ‘‘ಯಾವ ಧರ್ಮವೂ ಧ್ವನಿವರ್ಧಕದ ಮೂಲಕ ಪ್ರಾರ್ಥನೆ ಮಾಡಬೇಕೆಂದು ಪ್ರತಿಪಾದಿಸುವುದಿಲ್ಲ. ಆದ್ದರಿಂದ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಬೇಕು,’’ ಎಂದು ಅಲಹಾಬಾದ್ ಹೈಕೋರ್ಟ್ ನೀಡಿದ ಆದೇಶದ ಬೆನ್ನಲ್ಲೆ ಬಂದಿರುವ ಈ ಟ್ವೀಟ್‌ಗೆ ಹೆಚ್ಚಿನ ಮಹತ್ವವಿದೆ. ಅದೇ ಸಮುದಾಯದ ಮತಧರ್ಮದ ಬಗ್ಗೆ ಹೆಚ್ಚು ತಿಳಿದುಕೊಂಡ ವ್ಯಕ್ತಿ, ಈ ಆಚರಣೆಗಳಲ್ಲಿ ಅರ್ಥವಿಲ್ಲ ಎಂದು ಹೇಳುವುದರಲ್ಲಿ ಅರ್ಥವಿದೆ. ಧಾರ್ಮಿಕ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top