ಯಾರೇ ಭೇಟಿ ಕೊಟ್ಟು ವಿಚಾರಿಸಿದರೂ ಯೋಧ ಹನುಮಂತಪ್ಪ ಬದುಕಿ ಬರುವುದು ಕಷ್ಟದ ಮಾತೇ ಆಗಿತ್ತು. ಆದರೆ ಹಾಗೆ ಮಾಡಿದ್ದರೆ ದೇಶ ಕಾಯುವ ಸೈನಿಕ ಸಮುದಾಯದಲ್ಲಿ ಕನಿಷ್ಠ ವಿಶ್ವಾಸ ತುಂಬುವ ಕೆಲಸ ಮಾಡಿದಂತಾಗುತ್ತಿತ್ತು. ರಾಹುಲ್‌ರಂಥ ನಾಯಕರು ಅದನ್ನು ಮಾಡಲಿಲ್ಲ ಎಂಬುದೇ ಬೇಸರದ ಸಂಗತಿ. ಯೋಧರು, ಸೇನೆ, ಸಮರ್ಪಣೆ ಅಂದರೇನೆ ಹಾಗೆ. ಅದಕ್ಕೆ ಜಾತಿ, ಧರ್ಮ, ಪ್ರದೇಶದ ಎಲ್ಲೆಗಳು ಇರುವುದಿಲ್ಲ. ಅದಿಲ್ಲ ಅಂದಿದ್ದರೆ ಎಲ್ಲಿಯ ಹುಬ್ಬಳ್ಳಿಯ ಬೆಟದೂರು? ಎಲ್ಲಿಯ ಸಿಯಾಚಿನ್? ಎಲ್ಲಿಯ ದೆಹಲಿ? ಹಿಮಗಡ್ಡೆಯ ಅಡಿಯಿಂದ ಎದ್ದುಬಂದು ಆಸ್ಪತ್ರೆ ಸೇರಿದ […]
Read More
ವಾಸ್ತವದಲ್ಲಿ ಕಾಲೇಜುಗಳಲ್ಲಿ, ವಿವಿಗಳಲ್ಲಿ ಈ ರೀತಿಯ ಗುಂಪುಘರ್ಷಣೆಗಳು ಹಿಂದೆಯೂ ನಡೆದಿವೆ. ಮುಂದೆಯೂ ನಡೆಯಬಹುದು. ಆದರೆ ಅದರೊಂದಿಗೆ ರಾಜಕೀಯ ಹಿತಾಸಕ್ತಿ ಬೆರೆತರೆ ಈಗ ಆಗಿರುವಂಥ ಅನಾಹುತಗಳು, ಗೊಂದಲ ಗೋಜಲುಗಳು ಹೆಚ್ಚಾಗುತ್ತಲೇ ಹೋಗುತ್ತವೆ. ಮೊದಲೇ ಹೇಳಿಬಿಡುತ್ತೇನೆ. ಈ ದೇಶದಲ್ಲಿ ಯಾರೊಬ್ಬರೂ ವಿನಾಕಾರಣ ಸಾಯಬಾರದು. ದಲಿತರು, ಬ್ರಾಹ್ಮಣರು, ಮುಸಲ್ಮಾನರು, ಅನ್ಯಜಾತಿಯ ಹಿಂದುಗಳು, ರೈತರು, ವಿದ್ಯಾರ್ಥಿಗಳು, ಯುವತಿಯರು, ಮಹಿಳೆಯರು ಎಲ್ಲರಿಗೂ ಈ ಮಾತು ಅನ್ವಯವಾಗುತ್ತದೆ. ಆದರೆ ಹಾಗೆ ಹೇಳಿದ ಮಾತ್ರಕ್ಕೆ ಸಾವುನೋವನ್ನು ನಿಲ್ಲಿಸಲಾಗುವುದಿಲ್ಲ. ಅದಕ್ಕೆ ಕಾರಣಗಳು ಹಲವು. ಇಲ್ಲಿ ಹೇಳಲು ಹೊರಟಿರುವುದು […]
Read More
ಮೋದಿ ಲಾಹೋರ್ ಭೇಟಿ ಮಾತ್ರವಲ್ಲ, ಇಬ್ಬರು ಯುವ ನೇತಾರರಾದ ರಾಜೀವ್-ಬೆನಜೀರ್ ಮಾತುಕತೆ ನಡೆಸಿದಾಗ, ವಾಜಪೇಯಿ ಬಸ್ ಯಾತ್ರೆ ಕೈಗೊಂಡಾಗಲೂ ಪಾಪಿ ಪಾಕಿಸ್ತಾನ ಹಾದಿಗೆ ಬರುತ್ತದೆ ಅಂತಲೇ ಭಾವಿಸಲಾಗಿತ್ತು. ಅದು ಸಾಧ್ಯವಾಯಿತೇ? ಅಮೆರಿಕದ ಭಯೋತ್ಪಾದನೆ ದಮನ ನೀತಿ ವಿಚಾರದಲ್ಲಿ ಒಂದು ಅನುಮಾನದ ದೃಷ್ಟಿ ಮುಂಚಿನಿಂದಲೂ ಇದ್ದೇ ಇತ್ತು. ಅಫ್ಘಾನಿಸ್ತಾನದಲ್ಲಿ ರಷ್ಯಾದ ಪ್ರಾಬಲ್ಯ ಮುರಿಯಲು ಅಲ್ಖೈದಾ ಸ್ಥಾಪಕ ಒಸಾಮ ಬಿನ್ ಲಾಡೆನ್ ಸಂತತಿಯನ್ನು ಪೋಷಿಸಿ, ಬೆಳೆಸಿದ ಅಮೆರಿಕದ ಸ್ವಾರ್ಥಪರ ನೀತಿ ಮತ್ತು ಶುದ್ಧ ಅವಿವೇಕದ ನಡೆ ಅದಕ್ಕೆ ಕಾರಣ. ಹೀಗಾಗಿ […]
Read More
ಸಿದ್ದರಾಮಯ್ಯ ಕುರ್ಚಿ ಭದ್ರ ಮಾಡಿಕೊಳ್ಳಲು ಇತ್ತೀಚಿನ ಪರಿಷತ್ ಚುನಾವಣೆಯೂ ಅನುಕೂಲಕ್ಕೆ ಬಂತು. ಅದರ ಜೊತೆಗೆ ಮುನಿಯಪ್ಪ, ಮೊಯ್ಲಿ, ಪರಮೇಶ್ವರ್, ಖರ್ಗೆ ತವರಲ್ಲಿ ಕಾಂಗ್ರೆಸ್ಗೆ ಆದ ಹಿನ್ನಡೆ ದಲಿತ ಸಿಎಂ ಗದ್ದಲವನ್ನು ಬದಿಗೆ ಸರಿಸಿತು.ಒಮ್ಮೊಮ್ಮೆ ಅನ್ನಿಸಿಬಿಡುತ್ತದೆ ಹೀಗೂ ಉಂಟೇ ಅಂತ! ರಾಜಕೀಯದಲ್ಲಾದರೆ ಜಾತಿಗೀತಿ ಲಾಬಿ ಎಲ್ಲ ಮಾಮೂಲು. ಬರಬರುತ್ತ ಅದು ಹೆಚ್ಚಾಗುತ್ತ ಹೋಗುತ್ತದೆಯೇ ಹೊರತೂ ಕಡಿಮೆ ಆಗುವ ಲಕ್ಷಣಗಳು ಯಾವ ರೀತಿಯಿಂದ ನೋಡಿದರೂ ಕಾಣಿಸುತ್ತಿಲ್ಲ. ಆದರೆ ನಮಗೆ ಅಚ್ಚರಿ ಆಗುವುದು ಪ್ರತಿಷ್ಠಿತ ಮುಖ್ಯ ಕಾರ್ಯದರ್ಶಿ ಹುದ್ದೆಗೆ ನೇಮಕಾತಿ ಸಂದರ್ಭದಲ್ಲೂ […]
Read More
ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕವೇ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ಕಳಂಕಿತ ಅಧಿಕಾರಿಯ ಪರ ನಿಂತು ವಕಾಲತ್ತು ವಹಿಸುವುದಕ್ಕಿಂತ ತನಿಖಾ ಸಂಸ್ಥೆ ಸೂಕ್ತ ತನಿಖೆ ನಡೆಸಿ ವಾಸ್ತವಾಂಶವನ್ನು ಆದಷ್ಟು ಶೀಘ್ರ ಸಾರ್ವಜನಿಕರ ಮುಂದಿಡಲಿ ಎಂದು ಹೇಳಿದ್ದರೆ ಜಾಣತನದ ಮತ್ತು ಜವಾಬ್ದಾರಿಯುತ ನಡವಳಿಕೆ ಆಗುತ್ತಿತ್ತು. ತುಂಬಾ ದೂರ ಹೋಗುವುದು ಯಾಕೆ? ಸಿಬಿಐನಂತಹ ಉನ್ನತ ತನಿಖಾ ಸಂಸ್ಥೆಯನ್ನು, ಜಾರಿ ನಿರ್ದೇಶನಾಲಯದಂತಹ ವ್ಯವಸ್ಥೆಯನ್ನು ರಾಜಕೀಯ ವಿರೋಧಿಗಳನ್ನು ಮಟ್ಟ ಹಾಕಲು ಕೇಂದ್ರದಲ್ಲಿ ಕಾಲಾನುಕಾಲಕ್ಕೆ ಬಂದ ಸರ್ಕಾರಗಳು ಯಥೇಚ್ಛವಾಗಿ ಬಳಸಿಕೊಂಡವು ಎಂಬ ಆರೋಪಗಳಿಗೆ ನಮ್ಮ ಕರ್ನಾಟಕದಲ್ಲೂ […]
Read More
ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಮತ್ತು ಅದೇ ವೇಳೆ ತನ್ನ ಪರ ಅನುಕಂಪ ಗಿಟ್ಟಿಸಿಕೊಳ್ಳುವ ಧಾವಂತದ ನಡುವೆ ಅಲ್ಪಸ್ವಲ್ಪ ನಂಬಿಕೆ ಉಳಿಸಿಕೊಂಡಿರಬಹುದಾದ ನ್ಯಾಯಾಂಗ ವ್ಯವಸ್ಥೆಗೇ ಕಳಂಕ ತರುತ್ತಿದ್ದೇವೆ ಎಂಬುದನ್ನು ಕಾಂಗ್ರೆಸ್ ನಾಯಕರು ಮರೆತಂತೆ ತೋರುತ್ತಿದೆ. ಕಾಂಗ್ರೆಸ್ ಯಾಕೆ ಇಂಥ ಪ್ರಮಾದವನ್ನು ಮತ್ತೆ ಮತ್ತೆ ಮಾಡುತ್ತಿದೆ? ಹತಾಶೆಯೇ, ಅಸಹಿಷ್ಣುತೆಯೇ, ಅಪ್ರಬುದ್ಧತೆಯೇ, ಅನುಕಂಪ ಗಿಟ್ಟಿಸಿಕೊಳ್ಳುವ ಅಗ್ಗದ ಆಲೋಚನೆಯೇ… ಯಾವುದು? ಈ ಎಲ್ಲವೂ ಮೇಳೈಸಿರುವಂತೆ ತೋರುತ್ತಿದೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರು ಹೈಕಮಾಂಡನ್ನು ಪ್ರಶ್ನೆ […]
Read More
ಧರ್ಮದ ಹೆಸರಿನಲ್ಲಿ ಹಾದಿ ತಪ್ಪಿರುವ ಒಂದು ವರ್ಗದ ಕೆಲವರನ್ನು ಸರಿದಾರಿಗೆ ತರಲು ಸಂಬಂಧಿಸಿದ ಧಾರ್ವಿುಕ ನಾಯಕರು ಯಾಕೆ ಪ್ರಯತ್ನಿಸಬಾರದು? ಕೆಲ ಮತಾಂಧರು ಮಾಡುವ ದುಷ್ಟ ಕಾರ್ಯದಿಂದ ಒಂದು ಉದಾತ್ತ ಧರ್ಮಕ್ಕೆ ಕಳಂಕ ಬರುತ್ತಿರುವುದನ್ನು ತಡೆಯುವುದಕ್ಕಾದರೂ ಧಾರ್ವಿುಕ ನಾಯಕರೆಲ್ಲ ಒಕ್ಕೊರಲ ಧ್ವನಿ ಮೊಳಗಿಸಿದರೆ ಒಳಿತಾಗಬಹುದು. ಅಮೆರಿಕದಲ್ಲಿ ಗುಂಡಿನ ದಾಳಿ ನಡೆಯುವುದು ಹೊಸತೇನಲ್ಲ. ಪ್ರತಿ ವರ್ಷವೂ ಅಲ್ಲಿ ಅಂಥ ಹಲವು ಘಟನೆಗಳು ವರದಿಯಾಗುತ್ತಲೇ ಇರುತ್ತವೆ. ಹತ್ತಾರು ಮಂದಿ ಪ್ರಾಣ ಕಳೆದುಕೊಳ್ಳುತ್ತಾರೆ. ಜಗತ್ತಿಗೆಲ್ಲ ‘ದೊಡ್ಡಣ್ಣ’ ಎಂದು ಬೀಗುವ ಆ ದೇಶಕ್ಕೆ ಇದು […]
Read More
ಈಗಿನ ಸನ್ನಿವೇಶದಲ್ಲಿ ಆಡ್ವಾಣಿ ಮತ್ತು ಮೋದಿ ಪಾಳಯದಲ್ಲಿ ಯಾರ ಕೈ ಮೇಲಾಗುತ್ತದೆ ಎಂಬುದು ಮುಖ್ಯವಲ್ಲ. ಬದಲಾಗಿ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಅದರ ಬೆನ್ನಲ್ಲೇ ನಡೆದ ದೆಹಲಿ ಮತ್ತು ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮುಗ್ಗರಿಸಿದ ಬಿಜೆಪಿ ಯಾವ ಪಾಠ ಕಲಿಯುತ್ತದೆ ಎಂಬುದು ಪ್ರಮುಖ ಸಂಗತಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಇನ್ನು ಮುಂದೆ ಪಕ್ಷದ ಆಂತರಿಕ ಭಿನ್ನಮತ ನಿಭಾಯಿಸುವುದೇ ದೊಡ್ಡ ತಲೆಬೇನೆಯಾಗುತ್ತದೆ ನೋಡಿ. ಪ್ರಧಾನಿ ಯಾದವನಿಗೆ ಜನರ ನಿರೀಕ್ಷೆಗೆ ತಕ್ಕಂತೆ ದೇಶ ಆಳುವುದು ಒಂದು ಸವಾಲಾದರೆ ಅತೃಪ್ತಿಯಿಂದ ಬಳಲುವ […]
Read More
ಅಸಹಿಷ್ಣುತೆ ಎಂಬುದು ಇತ್ತೀಚೆಗೆ ಹುಟ್ಟಿಕೊಂಡು ಪ್ರಚಾರ ಪಡೆದುಕೊಳ್ಳುತ್ತಿರುವ ಹೊಚ್ಚ ಹೊಸ ಪದ. ಇದನ್ನು ನೋಡುತ್ತಿದ್ದರೆ ಕಳೆದ ಹದಿನೈದು ವರ್ಷಗಳಿಂದಲೂ ಅತಿಯಾಗಿ ಬಳಸಿದ ಸೆಕ್ಯುಲರ್ ಮತ್ತು ಕೋಮುವಾದ ಎಂಬ ಪದಗಳು ಸವಕಲಾಯಿತೆಂದು ಅದರ ವಾರಸುದಾರರಿಗೇ ಅನ್ನಿಸಿತೆ ಎಂಬ ಅನುಮಾನ ಮೂಡುವುದು ಸಹಜ.ಅರೆ ಇಸ್ಕಿ, ಏಕಾಏಕಿ ಈ ಅಸಹಿಷ್ಣುತೆ ವಿರೋಧಿ ಚಳವಳಿ ಎದ್ದು ಕುಳಿತಿದ್ದಾದರೂ ಹೇಗೆ? ಎಷ್ಟೇ ಯೋಚಿಸಿದರೂ ಸಮರ್ಪಕ ಉತ್ತರ ಮಾತ್ರ ಹೊಳೆಯುತ್ತಿಲ್ಲ. ಇಲ್ಲೊಂದು ಪ್ರಶ್ನೆ. ಧಾರ್ವಿುಕ ಅಸಹಿಷ್ಣುತೆ, ವೈಚಾರಿಕ ತಾಕಲಾಟ ಇವೆಲ್ಲ ಈ ದೇಶಕ್ಕೆ ಪರಿಚಯವಾದದ್ದು ಕಳೆದ […]
Read More
ವಾರ್ಷಿಕ ಅಂದಾಜು 22,250 ಕೋಟಿ ರೂ. ಮೌಲ್ಯದ ಗೋಮಾಂಸವನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ. ಅದೇ ಗೋ ಸಂತತಿಯನ್ನು ರಕ್ಷಿಸಿದರೆ ಆರೋಗ್ಯ, ಕೃಷಿ, ಇಂಧನ ಇತ್ಯಾದಿಗಳಿಂದ ಹಲವು ಸಹಸ್ರ-ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಲು, ಉಳಿಸಲು ಸಾಧ್ಯವಿದೆ. ಆ ಬಗ್ಗೆ ಯೋಚನೆ ಮಾಡಲು ನಮ್ಮ ಸರ್ಕಾರಗಳಿಗೆ ಮನಸ್ಸಿಲ್ಲ, ವ್ಯವಧಾನವೂ ಇಲ್ಲ. *** ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯ ಹತ್ಯೆ ಸಂಬಂಧವಾಗಿ ಗೋಮಾಂಸ ಭಕ್ಷಣೆ ಕುರಿತು ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ದೇಶಾದ್ಯಂತ ತೆರಪಿಲ್ಲದೆ ಚರ್ಚೆ ನಡೆಯುತ್ತಿರುವುದು ಗೊತ್ತೇ […]
Read More