ಮಾಯಾವತಿ, ಮಹಂತ, ಕೇಜ್ರಿವಾಲ್ ಮುಂತಾದವರ ಮಾತು ಹಾಗಿರಲಿ, ಬಿಜೆಪಿಯಂತಹ ರಾಷ್ಟ್ರೀಯ ಪಕ್ಷದ ನೆಲೆಗಟ್ಟಿನಲ್ಲಿ ಬಲಾಢ್ಯ ಆಗಿರುವ ಮೋದಿಗೇ ಕೇವಲ ಸಿದ್ಧಾಂತದಿಂದ, ಜಾತಿಯಿಂದ, ಭಾವನಾತ್ಮಕ ಅಂಶಗಳಿಂದ ಜನರನ್ನು ಬಹಳ ಕಾಲ ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂಬುದು ಮನವರಿಕೆಯಾದಂತಿದೆ. ಅಜಮಾಸು ನಾಲ್ಕು ವರ್ಷಗಳ ಹಿಂದಿನ ಮಾತು. ಆಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕರಾಗಿದ್ದರು. ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಜನಜಾತಿಗಳ ಸಮಾವೇಶ ನಡೆಯುತ್ತಿತ್ತು. ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಪ್ರತಿಷ್ಠಾಪನೆಗೊಳಿಸಲೇಬೇಕೆಂಬ […]
Read More
ಇಬ್ಬರು ಡಿವೈಎಸ್ಪಿಗಳ ಆತ್ಮಹತ್ಯೆ ಪ್ರಕರಣಗಳಿಗೆ ಮಾನವೀಯತೆಯ ದೃಷ್ಟಿಕೋನವಲ್ಲದೆ ಅದಕ್ಕೊಂದು ಆಡಳಿತಾತ್ಮಕ ಮುಖವೂ ಇದೆ. ಘಟನೆ ನಡೆದುಹೋದ ಬಳಿಕವೂ ಎಚ್ಚೆತ್ತುಕೊಳ್ಳದೆ, ವಿವೇಚನೆಯಿಂದ ಪ್ರಕರಣ ನಿಭಾಯಿಸದೇ ಇರುವುದು ಸರ್ಕಾರ ಗಾಢಾಂಧಕಾರದಲ್ಲಿ ಮುಳುಗಿರುವುದಕ್ಕೆ ಸಾಕ್ಷಿ ಎನ್ನಬಹುದು. ಸರ್ಕಾರಗಳ ಸ್ಥಿರತೆ-ಅಸ್ಥಿರತೆ ಕುರಿತು ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲರು ಹೇಳಿದ ಉಪಮೆಯೊಂದು ಬಹಳ ಮಜವಾಗಿದೆ. ಆ ಸಂದರ್ಭವನ್ನು ನೆನೆಸಿಕೊಂಡರೆ ಈಗಲೂ ಹೊಟ್ಟೆ ಹುಣ್ಣಾಗುವಷ್ಟು ನಗು ಬರುತ್ತದೆ. ಆಗ ರಾಷ್ಟ್ರ ರಾಜಕಾರಣದಲ್ಲಾದ ಹಠಾತ್ ಬೆಳವಣಿಗೆಯ ಕಾರಣ ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ಎಚ್.ಡಿ.ದೇವೇಗೌಡರು ದೇಶದ ಪ್ರಧಾನಿ ಆಗಿ ಪ್ರಮೋಷನ್ […]
Read More
ನೌಕರರು, ಮಂತ್ರಿಗಳ ಕಾರ್ಯಕ್ಷಮತೆಯನ್ನು ಒರೆಗೆ ಹಚ್ಚುವುದು ಮಾತ್ರವಲ್ಲ, ನೂರಾರು ಅನಗತ್ಯ ನಿಗಮ ಮಂಡಳಿಗಳಿಗೆ ನೇಮಕ ಮಾಡದೆ ತೆರಿಗೆದಾರರ ಕೋಟ್ಯಂತರ ರೂಪಾಯಿಗಳನ್ನು ಉಳಿಸುವ ಕೆಲಸವನ್ನೂ ಮೋದಿ ಮಾಡಿದ್ದಾರೆ. ಈ ಲೆಕ್ಕ, ಪಾರದರ್ಶಕತೆಯೆಲ್ಲ ಕೇಜ್ರಿವಾಲ್, ಸಿದ್ದರಾಮಯ್ಯನವರಂಥವರಿಗೂ ಅನ್ವಯ ಆಗಬೇಕು, ಅರ್ಥ ಆಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ಪುನಾರಚನೆ ರಂಪಾಟ ಇನ್ನು ಮುಂದುವರಿಯಲಾರದು. ಅದಕ್ಕೆ ಕಾರಣ ಹಲವು. ಕೈಬಿಟ್ಟವರೆಲ್ಲ ಕೈಲಾಗದವರೇ ಎಂಬುದು ಒಂದು. ಕಾಂಗ್ರೆಸ್ ಹೈಕಮಾಂಡಿಗೆ ಸಿದ್ದರಾಮಯ್ಯ ಸ್ಥಾನ ತುಂಬುವ ಬೇರೆ ಆಯ್ಕೆ ಇಲ್ಲ ಎಂಬುದು ಮತ್ತೊಂದು. ಕಮಕ್ ಕಿಮಕ್ ಎಂದರೆ […]
Read More
ಬೆಲೆ ಏರಿಕೆಯು ಬಡ ಮತ್ತು ಮಧ್ಯಮ ವರ್ಗದವರ ಜಂಘಾಬಲವನ್ನೇ ಉಡುಗಿಸಿಬಿಡುವಂಥದ್ದು. ಅಕ್ಕಿ, ಬೇಳೆಕಾಳು, ತರಕಾರಿ, ಹಣ್ಣುಹಂಪಲು ಬೆಲೆ ಎರಡು-ಮೂರು ಪಟ್ಟು ಏರಿಕೆಯಾದರೆ ಬಡಜನರು ಅದ್ಹೇಗೆ ಬದುಕಬಲ್ಲರು ಎಂಬುದನ್ನು ಸರ್ಕಾರ ನಡೆಸುವವರು ಕಿಂಚಿತ್ತಾದರೂ ಯೋಚಿಸಬೇಡವೇ? ‘ಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲ’ ಎನ್ನುವುದಾದರೆ, ಕೇವಲ ಭಾಷಣ, ಬಾಯಿಮಾತು ಮತ್ತು ಘೊಷಣೆಗಳಿಂದ ದೇಶದ ಜನರ ಹೊಟ್ಟೆ ತುಂಬುವುದಿಲ್ಲ ಎಂಬುದನ್ನೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸೂತ್ರ ಹಿಡಿದಿರುವವರು ಅರ್ಥ ಮಾಡಿಕೊಳ್ಳಬೇಕಾಗುತ್ತದೆ ತಾನೆ?! ನಾನಿಲ್ಲಿ ಹೇಳಲು ಹೊರಟಿರುವುದು ದಿನೇದಿನೇ ಗಗನಮುಖಿಯಾಗುತ್ತಿರುವ ಆಹಾರ ಧಾನ್ಯಗಳ ಬೆಲೆ […]
Read More
ಕಾಯಿದೆ ಕಾನೂನು, ಕೋಟು೯, ಅಧಿಕಾರ ಬಲ ಎಲ್ಲವೂ ಇ೦ದು ಯಾರದ್ದೋ ರಕ್ಷಣೆಗೆ ಬರಬಹುದು. ಆದರೆ ಜನರು ಒ೦ದು ತೀಮಾ೯ನಕ್ಕೆ ಬರಲು ಬೇಕಾದಷ್ಟು ಮಾಧ್ಯಮಗಳಿವೆ. ಮಾಗ೯ಗಳಿವೆ. ಮುಖ್ಯವಾಗಿ ಈ ಸಮಾಜ/ದೇಶ ಬದಲಾಗುತ್ತಿದೆ. ಬರಬರುತ್ತ ಪಾರದಶ೯ಕತೆ ಮತ್ತು ಪ್ರಾಮಾಣಿಕತೆ ಹೇಗೆ ಮಹತ್ವ ಪಡೆದುಕೊಳ್ಳುತ್ತಿವೆ ನೋಡಿ. ಪ್ರಧಾನಿ ನರೇ೦ದ್ರ ಮೋದಿಯನ್ನು ಈ ದೇಶದ ಜನರು ಏಕೆ ಇಷ್ಟಪಡುತ್ತಾರೆ? ಅದೇ ಜನರು ಬಿಜೆಪಿಯ ಇತರ ನಾಯಕರನ್ನು ಏಕೆ ಅಷ್ಟರಮಟ್ಟಿಗೆ ಇಷ್ಟಪಡುವುದಿಲ್ಲ ಎ೦ಬುದು ಕಾ೦ಗ್ರೆ ಸ್ ಮತ್ತು ಬಿಜೆಪಿಯ ಮುಖ೦ಡರನ್ನು ಹೊರತುಪಡಿಸಿ ಬೇರೆಲ್ಲರಿಗೂ ಗೊತ್ತಿದೆ […]
Read More
ವಾರ್ಷಿಕ ಅಂದಾಜು 22,250 ಕೋಟಿ ರೂ. ಮೌಲ್ಯದ ಗೋಮಾಂಸವನ್ನು ಭಾರತದಿಂದ ರಫ್ತು ಮಾಡಲಾಗುತ್ತಿದೆ. ಅದೇ ಗೋ ಸಂತತಿಯನ್ನು ರಕ್ಷಿಸಿದರೆ ಆರೋಗ್ಯ, ಕೃಷಿ, ಇಂಧನ ಇತ್ಯಾದಿಗಳಿಂದ ಹಲವು ಸಹಸ್ರ-ಲಕ್ಷ ಕೋಟಿ ರೂಪಾಯಿಗಳನ್ನು ಗಳಿಸಲು, ಉಳಿಸಲು ಸಾಧ್ಯವಿದೆ. ಆ ಬಗ್ಗೆ ಯೋಚನೆ ಮಾಡಲು ನಮ್ಮ ಸರ್ಕಾರಗಳಿಗೆ ಮನಸ್ಸಿಲ್ಲ, ವ್ಯವಧಾನವೂ ಇಲ್ಲ. *** ಉತ್ತರಪ್ರದೇಶದ ದಾದ್ರಿಯಲ್ಲಿ ಅಖ್ಲಾಕ್ ಎಂಬ ಮುಸ್ಲಿಂ ವ್ಯಕ್ತಿಯ ಹತ್ಯೆ ಸಂಬಂಧವಾಗಿ ಗೋಮಾಂಸ ಭಕ್ಷಣೆ ಕುರಿತು ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ದೇಶಾದ್ಯಂತ ತೆರಪಿಲ್ಲದೆ ಚರ್ಚೆ ನಡೆಯುತ್ತಿರುವುದು ಗೊತ್ತೇ […]
Read More
ಕನ್ನಡದ ನಂ.1 ದೈನಿಕ ವಿಜಯವಾಣಿ ಪತ್ರಿಕೆಯ ಸಂಪಾದಕರು ಹಾಗೂ ವಿ ಆರ್ ಎಲ್ ಮೀಡಿಯಾ ಲಿಮಿಟೆಡ್‌ನ ನಿರ್ದೇಶಕರೂ ಆಗಿರುವ ಹರಿಪ್ರಕಾಶ ಕೋಣೆಮನೆ ಅವರು ಮೂಲತಃ ಗ್ರಾಮೀಣ ಹಿನ್ನಲೆಯಿಂದ ಬಂದವರು. ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ನಂದೊಳ್ಳಿ ಗ್ರಾಮದ ಕೃಷಿಕರಾದ ಶ್ರೀ ವೆಂಕಟರಮಣ ಕೋಣೆಮನೆ ಹಾಗೂ ಶ್ರೀಮತಿ ಪಾರ್ವತಿಯವರ ಪುತ್ರನಾಗಿ ಜನಿಸಿದರು. ಹೈಸ್ಕೂಲ್‌ವರೆಗಿನ ಪ್ರಾಥಮಿಕ ಶಿಕ್ಷಣವನ್ನು ಊರು ನಂದೊಳ್ಳಿ ಮತ್ತು ಯಲ್ಲಾಪುರದಲ್ಲಿ ಮುಗಿಸಿದರು. ನಂತರ ಶಿರಸಿಯ ಎಂಎಂ ಆರ್ಟ್ಸ್ ಆ್ಯಂಡ್ ಸೈನ್ಸ್ ಕಾಲೇಜಿನಲ್ಲಿ ಬಿ.ಎ. ಪದವಿ ಓದು. ಮೈಸೂರು […]
Read More