ರಾಹುಲ್ ಗಾಂಧಿ ಬ್ರಾಹ್ಮಣರೋ, ಹಿಂದುವೋ, ಅಹಿಂದುವೋ, ರೋಮನ್ ಕ್ಯಾಥೋಲಿಕ್ ಕ್ರೖೆಸ್ತರೋ ಎಂಬ ಚರ್ಚೆ ಗೊತ್ತು. ಆದರೆ ಎಡಪಂಥೀಯ ವಿಚಾರಧಾರೆಯ ಜಾತ್ಯತೀತ ನಿಲುವಿನ ನೆಹರು ಇಂದಿರಾ ಪತಿ ಫಿರೋಜ್ರಿಗೆ ಬ್ರಾಹ್ಮಣ್ಯದ ದೀಕ್ಷೆ ಕೊಟ್ಟಿದ್ದು ಗೊತ್ತೇ? ಇಲ್ಲಿ ಕೆಲವೊಮ್ಮೆ ವಿಷಯವೇ ಅಲ್ಲದ ವಿಷಯಗಳು ಮುಖ್ಯಭೂಮಿಕೆಗೆ ಬಂದು ಒಂದು ಸಾರ್ವತ್ರಿಕ ಚುನಾವಣೆಯ ದಿಕ್ಕು ಮತ್ತು ಭವಿಷ್ಯವನ್ನೇ ಬದಲಿಸಿಬಿಡುತ್ತವೆ. ಇದು ಇಂದಲ್ಲ, ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪರಿ. ಪ್ರಧಾನಿ ನರೇಂದ್ರ ಮೋದಿ ವಿರೋಧಿಗಳು ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸೆಡ್ಡು ಹೊಡೆಯಲು ಅದೇ […]
Read More
ಅಭಿವ್ಯಕ್ತಿ ಸ್ವಾತಂತ್ರ್ಯದಷ್ಟೇ ವ್ಯಕ್ತಿ ಸ್ವಾತಂತ್ರ್ಯವೂ ಮುಖ್ಯ. ವ್ಯಕ್ತಿಯ ಸಾವಿನ ಜತೆಗೆ ಆತನ ಘನತೆ, ಗೌರವಗಳೂ ಸಾಯುವುದಿಲ್ಲ ಎಂಬುದು ಕಾನೂನು ಪಂಡಿತರು ಹೇಳುವ ಮಾತು. ಹಾಗಾದರೆ ರಾಣಿ ಪದ್ಮಾವತಿಯ ವ್ಯಕ್ತಿ ಸ್ವಾತಂತ್ರ್ಯ ರಕ್ಷಣೆ, ಮಾನನಷ್ಟದ ಭರ್ತಿ ಯಾರ ಹೊಣೆ?! ಎರಡು ದಿನದ ಹಿಂದೆ ಹಿರಿಯ ನ್ಯಾಯವಾದಿ ಸಿ.ಎಚ್.ಹನುಮಂತರಾಯಪ್ಪ ಅವರ ಜೊತೆ ಮಾತನಾಡುತ್ತಿದ್ದೆ. ಅವರೊಂದು ಮಾತನ್ನು ಹೇಳಿದರು- ‘ಮಾನಹಾನಿಗೊಳಗಾದ ವ್ಯಕ್ತಿಯ ಮರಣದ ನಂತರವೂ ಮಾನನಷ್ಟ ಮೊಕದ್ದಮೆಯನ್ನು ಮುಂದುವರಿಸಿ ನ್ಯಾಯ ಕೊಡಿಸಲು ಸಾಧ್ಯ. ಅಥವಾ ಮಾನಹಾನಿಗೊಳಗಾದ ವ್ಯಕ್ತಿ ಮರಣ ಹೊಂದಿದ್ದಾನೆ ಎಂಬ […]
Read More
ಮಾಧ್ಯಮಗಳು ಮತ್ತು ಪತ್ರಕರ್ತರು ಕ್ರಿಯಾತ್ಮಕವಾಗಿರಬೇಕೇ ಹೊರತು ಪ್ರತಿಕ್ರಿಯಾತ್ಮಕವಾಗಿರಬಾರದು ಎಂಬುದು ಬಲವಾದ ನಂಬಿಕೆ. ಆದರೆ ತೀರಾ ಮಾಧ್ಯಮ ಕ್ಷೇತ್ರ ಮಾರಾಟವಾಗಿದೆ, ಪತ್ರಕರ್ತರು ಗುಲಾಮರಾಗಿದ್ದಾರೆ ಎಂದು ಹೇಳಿದಾಗ ಇನ್ನು ಸುಮ್ಮನಿರಬಾರದು ಎನಿಸಿತು. ಹೇಳಲೇಬೇಕಾಯಿತು. ಬುದ್ಧಿಜೀವಿಯ ವರಸೆಯಲ್ಲಿ ಮಲಯಾಳಂ ಲೇಖಕ ಪೌಲ್ ಝುಕಾರಿಯಾ ದಿ| ಅನಂತಮೂರ್ತಿಯವರನ್ನೂ ಮೀರಿಸುವ ಹಾಗೆ ತೋರುತ್ತಿದೆ. 2014ರ ಲೋಕಸಭಾ ಚುನಾವಣೆಗೆ ಮುನ್ನ ಅನಂತಮೂರ್ತಿಯವರು ‘ಒಂದೊಮ್ಮೆ ಮೋದಿ ಈ ದೇಶದ ಪ್ರಧಾನಿಯಾದರೆ ನಾನು ದೇಶ ತೊರೆಯುತ್ತೇನೆ’ ಎಂದಿದ್ದರು. ಅದು ವ್ಯಾಪಕ ಚರ್ಚೆಗೆ ಗ್ರಾಸವಾದಾಗ ತಮ್ಮ ಮಾತಿಗೆ ವಿವರಣೆ ನೀಡಿ […]
Read More
ಸೋನಿಯಾ ಗಾಂಧಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸುವ ದಿನಗಳು ಸಮೀಪಿಸುತ್ತಿವೆ. ಅವರ ಉತ್ತರಾಧಿಕಾರಿಯಾಗಿ ರಾಹುಲ್ ಗಾಂಧಿ ನೇಮಕ ಆಗುವುದೂ ನಿಚ್ಚಳವಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇವೆರಡೂ ಘಟನೆಗಳು ಜರುಗಲು ಹೆಚ್ಚು ಕಾಲ ಹಿಡಿಯುವುದಿಲ್ಲ. ಸೋನಿಯಾ ನಿರ್ಗಮನ ಮತ್ತು ರಾಹುಲ್ ಆಗಮನ ಕ್ಷಣಗಳಿಗೆ ಬೆಂಗಳೂರಲ್ಲಿ ನಡೆಯುವ ಎಐಸಿಸಿ ಅಧಿವೇಶನವೇ ವೇದಿಕೆಯಾಗಲಿದೆ ಎಂಬುದು ಮತ್ತೊಂದು ವಿಶೇಷ. ಇದು ಕಾಕತಾಳೀಯವೋ ಏನೋ ಗೊತ್ತಿಲ್ಲ, ಸೋನಿಯಾ ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡುವ ಸಂದರ್ಭದಲ್ಲೂ ಕಾಂಗ್ರೆಸ್ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿತ್ತು. ಈಗ ಅವರು ನಿರ್ಗಮಿಸುವ […]
Read More
ಭಾಗ 2 ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ಪಟ್ಟಾಭಿಷಿಕ್ತರಾಗಿ ಐವತ್ತು ವರ್ಷಗಳಾಗುತ್ತಿವೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆ ಅವರಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹೆಗ್ಗಡೆಯವರು ಹಲವು ಸಂಗತಿಗಳ ಕುರಿತು ವಿವರವಾಗಿ ಮಾತನಾಡಿದ್ದಾರೆ. # ತಮ್ಮ ಸೇವೆಯ ಕಾರಣಕ್ಕೆ, ಧರ್ಮಸ್ಥಳದ ಕ್ಷೇತ್ರದ ಮಹಿಮೆಯ ಕಾರಣಕ್ಕೆ ಅಪಾರ ಹೊಗಳಿಕೆ ಕೇಳಿಬರುತ್ತಿರುತ್ತದೆ. ಇದನ್ನು ತಾವು ಹೇಗೆ ಸ್ವೀಕರಿಸುತ್ತೀರಿ? ಇಂತಹ ಹೊಗಳಿಕೆಗಳಿಂದ ಭಯವಾಗುತ್ತದೆ ಎಂದು ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಸೇವೆಯ ಅವಕಾಶಗಳು ಸಾಕಷ್ಟಿವೆ. ಇನ್ನೂ ನೂರು ಕೆಲಸಗಳನ್ನು ನಾವು ಮಾಡಬಹುದು. ಕಳೆದ ಎರಡು ವರ್ಷದಿಂದ ಕೆರೆ […]
Read More
ಆರ್ಥಿಕ ಸುಧಾರಣೆಯ ನಿಟ್ಟಿನಲ್ಲಿ ಹೊಸ ಪ್ರಯತ್ನಗಳು ಆರಂಭವಾಗಿವೆ. ಸಾಮಾನ್ಯ ಜನರು ಕೂಡ ದೇಶದ ವಿತ್ತೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸುವ ವಾತಾವರಣ ಸೃಷ್ಟಿಯಾಗಿದೆ. ಸಾಮಾಜಿಕ ಯೋಜನೆಗಳು ವೇಗ ಪಡೆದುಕೊಂಡಿದ್ದು, ಅಭಿವೃದ್ಧಿ ಕುರಿತಾದ ಚರ್ಚೆ ಗರಿಗೆದರಿದ್ದು, ಜನರ ಮನೋಧರ್ಮದಲ್ಲಿ ಬದಲಾವಣೆ ಕಾಣುತ್ತಿದೆ. ದೇಶದ ಆರ್ಥಿಕತೆ ವಿಷಯ ಬಂದಾಗ ನಮಗೆ ಎರಡು ವಿಚಾರಗಳು ಇದೀಗ ಪ್ರಮುಖವಾಗಿ ಕಾಣಿಸುತ್ತಿವೆ. ಒಂದು- ಬೇಸರ. ಇನ್ನೊಂದು-ಖುಷಿ. ಮೊದಲು ಬೇಸರದ ವಿಚಾರ ಏನು ಅಂತ ನೋಡೋಣ. 1) ಉದ್ಯೋಗ ಸೃಷ್ಟಿಯಲ್ಲಿ ಭಾರಿ ಇಳಿಕೆ ಆಗಿದೆ. 2) […]
Read More
ಧರ್ಮಸ್ಥಳ ದೇಶವಿದೇಶಗಳಲ್ಲಿಯೂ ಖ್ಯಾತಿ ಪಡೆದ ಪುಣ್ಯಕ್ಷೇತ್ರ, ಕಾರಣಿಕ ಕ್ಷೇತ್ರ. ಶ್ರೀ ಕ್ಷೇತ್ರದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಹೆಸರೂ ಅಷ್ಟೇ ಸುಪರಿಚಿತ. ಧಾರ್ವಿುಕ, ಸಾಮಾಜಿಕ ಕಾರ್ಯಗಳಲ್ಲಿ ನಿರಂತರವಾಗಿ ತೊಡಗಿಕೊಂಡಿರುವ ಹೆಗ್ಗಡೆಯವರು ಈಗ ಪಟ್ಟಾಭಿಷೇಕದ 50ನೇ ವರ್ಷದ ಮಹತ್ವದ ಕಾಲಘಟ್ಟದಲ್ಲಿದ್ದಾರೆ. ವಿಜಯವಾಣಿ ಹಾಗೂ ದಿಗ್ವಿಜಯ ನ್ಯೂಸ್ ಪ್ರಧಾನ ಸಂಪಾದಕ ಹರಿಪ್ರಕಾಶ ಕೋಣೆಮನೆಯವರಿಗೆ ನೀಡಿದ ಈ ವಿಶೇಷ ಸಂದರ್ಶನದಲ್ಲಿ ಡಾ.ಹೆಗ್ಗಡೆಯವರು ತಮ್ಮ ಸುದೀರ್ಘ ಪಯಣದ ವಿವರಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಭಾಗ 1 # ಸಾಮಾಜಿಕ ಕಾರ್ಯ ಧರ್ಮಸ್ಥಳ ಕ್ಷೇತ್ರಕ್ಕೆ ವಿಶಿಷ್ಟ ಸ್ಥಾನಮಾನವನ್ನು […]
Read More
ಕೆಲವು ಎನ್ಜಿಒಗಳು ಭಾರತದ ಘನತೆ ಗೌರವವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಾಜು ಹಾಕಲೆಂದೇ ಕಾರ್ಯನಿರ್ವಹಿಸುತ್ತಿವೆ. ಈ ಘನಂದಾರಿ ಕೆಲಸಕ್ಕಾಗಿ ಅವಕ್ಕೆ ಅಪಾರ ಪ್ರಮಾಣದ ಧನ ಸಹಾಯವೂ ಬರುತ್ತದೆ. ಈ ಹುನ್ನಾರವನ್ನು ಅರಿಯದೆ ವಿದೇಶಿ ನೆಲದಲ್ಲಿ ಭಾರತವನ್ನು ಬೈಯುವುದಕ್ಕೆ ಏನೆನ್ನಬೇಕೋ ತಿಳಿಯದು. ರಾಹುಲ್ ಗಾಂಧಿ ಕೊನೆಗೂ ಕಾಂಗ್ರೆಸ್ ಗಾಡಿಯ ನೊಗಕ್ಕೆ ಹೆಗಲು ಕೊಡಲು ಮನಸ್ಸು ಮಾಡಿದ್ದಾರೆ. ಅಷ್ಟು ಮಾತ್ರವಲ್ಲ, ದೇಶದ ಪ್ರಧಾನಮಂತ್ರಿಯೂ ಆಗುತ್ತೇನೆಂದು ಹೇಳುವ ಧೈರ್ಯ ತೋರಿದ್ದಾರೆ. ಅದು ಒಳ್ಳೆಯದೇ ಅಂತಿಟ್ಟುಕೊಳ್ಳೋಣ. ಈ ಘೊಷಣೆಯಿಂದ ಯಾರಿಗೆ ಎಷ್ಟು ಸಮಾಧಾನ, ಖುಷಿಯಾಗಿದೆಯೋ […]
Read More
ತನ್ನ ಸಾಮ್ರಾಜ್ಯವಾದ ವಿಸ್ತರಣೆಗೆ ಭಾರತವೇ ದೊಡ್ಡ ಅಡ್ಡಿ ಎಂಬುದು ಚೀನಾದ ಅಸಮಾಧಾನ. ಹೀಗಾಗಿ ಲಭ್ಯ ವೇದಿಕೆಗಳನ್ನೆಲ್ಲ ಬಳಸಿಕೊಂಡು ಭಾರತಕ್ಕೆ ತಲೆನೋವು ತರುವುದು ಅದರ ಕಾರ್ಯತಂತ್ರ. ಆದರೆ ಭಾರತ ಬದಲಾಗಿದೆ ಎಂಬ ಸ್ಪಷ್ಟ ಸಂದೇಶ ಡೋಕ್ಲಂ ಬಿಕ್ಕಟ್ಟಿನ ಸಂದರ್ಭದಲ್ಲಿ ರವಾನೆಯಾಗಿದೆ. ಇನ್ನೇನು ಭಾರತದ ಮೇಲೆ ಚೀನಾ ಯುದ್ಧ ನಡೆಸಿಯೇಬಿಟ್ಟಿತು ಎಂಬ ಸ್ಥಿತಿ ನಿರ್ಮಾಣ ಆದಾಗಲೂ ಪ್ರಧಾನಿ ನರೇಂದ್ರ ಮೋದಿ ಯಾಕೆ ಮೌನ ಮುರಿಯಲಿಲ್ಲ? ಚೀನಾದ ಸತತ ತರ್ಲೆಗಳಿಗೆ ಬಹಿರಂಗ ಉತ್ತರ ಕೊಡುವುದಕ್ಕೆ ಅವರೇಕೆ ಮುಂದಾಗಲಿಲ್ಲ ಎಂಬ ಪ್ರಶ್ನೆಗಳಿಗೆ ಈಗ […]
Read More
ಸರಿ-ತಪ್ಪುಗಳು ಕಾಲ ಬದಲಾದಂತೆ ಬದಲಾಗುವುದಿಲ್ಲ. ನ್ಯಾಯ-ಅನ್ಯಾಯಗಳು ಕೂಡ ಅದೇ ರೀತಿ. ಜೀವನದ ಮೌಲ್ಯಗಳೂ ಅಷ್ಟೇ. ಹಾಗೇನೆ ತಾನು ಏಟು ತಿಂದಾಗ ನೋವಾಯಿತು ಎಂದು ಅಳುವವರು ತಾವು ಬೇರೆಯವರಿಗೆ ಏಟು ಕೊಟ್ಟಾಗಲೂ ಅದೇ ರೀತಿ ನೋವಾಗುತ್ತದೆ ಎಂದು ತಿಳಿದುಕೊಳ್ಳಬೇಕಲ್ಲವೇ? ಅಹಮದ್ ಪಟೇಲ್ ವಿಚಾರಕ್ಕೆ ಆಮೇಲೆ ಬರೋಣ. ಅದಕ್ಕಿಂತ ಮೊದಲು ಇಬ್ಬರು ವ್ಯಕ್ತಿಗಳ ಜಾತಕವನ್ನು ಒಮ್ಮೆ ಪರಿಶೀಲಿಸುವುದು ಉತ್ತಮ. ಒಬ್ಬಾಕೆ ಇಷ್ರತ್ ಜಹಾನ್. ಮತ್ತೊಬ್ಬಾತ ಸೊಹ್ರಾಬುದ್ದೀನ್ ಶೇಖ್. ಈ ಇಬ್ಬರೂ ಗುಜರಾತ್ ಮತ್ತು ರಾಜಸ್ಥಾನ ಪೊಲೀಸರ ಗುಂಡಿಗೆ ಸಾವನ್ನಪ್ಪಿದವರು. ಇವರ […]
Read More