ವೃತ್ತಿಪರತೆಯ ರುಜುವಾತಿಗೆ ರಸ್ತೆಗಳನ್ನು ನೋಡಿದರೆ ಸಾಕು! ರಸ್ತೆಯೆಂದರೆ ನಾಗರಿಕತೆಯ ಸಂಕೇತ ಎಂದ ಅರಸು ಮಾತು ನಮಗೆ ಅರ್ಥವಾಗುವುದು ಯಾವಾಗ..? ಕೆಲವೊಂದು ವ್ಯಕ್ತಿಗಳೇ ಹಾಗೆ! ಅವರಿಗೆ ಅವರೇ ಸಾಠಿ. ಅಂಥವರಿಗೆ ಪರ್ಯಾಯ ಸೃಷ್ಟಿಸುವುದು ಅಸಾಧ್ಯ ಮಾತು. ಅಟಲ್ ಬಿಹಾರಿ ವಾಜಪೇಯಿ, ರಾಮಕೃಷ್ಣ ಹೆಗಡೆ, ದೇವೇಗೌಡರು, ಯಡಿಯೂರಪ್ಪ, ನಿತಿನ್ ಗಡ್ಕರಿ ಅವರನ್ನು ನೋಡಿದಾಗ ಈ ಹೇಳಿಕೆ ಎಷ್ಟು ಸಮಂಜಸ, ಪ್ರಾಕ್ಟಿಕಲ್ ಎಂಬುದು ಮನದಟ್ಟಾಗುತ್ತದೆ. ಮುತ್ಸದ್ದಿ(ಸ್ಟೇಟ್ಸ್‌ಮನ್)ತನದ ಪ್ರಸ್ತಾಪ ಬಂದರೆ ದಿವಂಗತ ವಾಜಪೇಯಿ ಅವರನ್ನು ಬಿಟ್ಟು ಬೇರೆ ಹೆಸರು ಕಣ್ಣಮುಂದೆ ಬರಲು ಸಾಧ್ಯವೇ ಇಲ್ಲ. […]
Read More
ಭಾರತದ ಮಟ್ಟಿಗೆ ಗುಡ್ ಗವರ್ನನ್ಸ್ ಪದಪ್ರಯೋಗವನ್ನು ಅಧಿಕೃತವಾಗಿ ಪರಿಚಯ ಮಾಡಿ ಆರು ವರ್ಷ ಕಳೆದಿದೆ. 2014ರ ಡಿಸೆಂಬರ್ 23ರಂದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-1 ಸರಕಾರ ಪಂಡಿತ್ ಮದನಮೋಹನ ಮಾಳವೀಯ ಹಾಗೂ ಮಾಜಿ ಪ್ರಧಾನಿ, ಮಹಾನ್ ಮುತ್ಸದ್ದಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿ ಘೋಷಿಸಿತು. ಅದೇ ವೇಳೆ ಸರಕಾರ ಇನ್ನೊಂದು ಮಹತ್ವದ ತೀರ್ಮಾನ ಪ್ರಕಟಿಸಿತು. ಅದೇ ಗುಡ್ ಗವರ್ನನ್ಸ್ ಡೇ. ಎ.ಬಿ.ವಾಜಪೇಯಿ ಅವರ ಹುಟ್ಟಿದ ದಿನವಾದ ಡಿ.25ನ್ನು ಗುಡ್ […]
Read More
ಇತ್ತೀಚಿನ ಕೆಲ ರೇಪ್ ಪ್ರಕರಣಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ರೇಪ್ ಇನ್ ಇಂಡಿಯಾ ಎಂಬ ಹೊಸ ಘೋಷವಾಕ್ಯ ಮೊಳಗಿಸಿದ್ದಾರೆ. ಹಾಗೆಯೇ ಸಂಸತ್ತಿನ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿವಾದದ ಸ್ವರೂಪಕ್ಕೆ ತಿರುಗುತ್ತಿದೆ. ಈ ಎರಡು ಮಹತ್ವದ ವಿಷಯಗಳ ತುಲನಾತ್ಮಕ ಅವಲೋಕನ ಇಲ್ಲಿದೆ. ಹೈದರಾಬಾದ್‌ನ ಪಶುವೈದ್ಯೆ ಮೇಲಿನ ಅತ್ಯಾಚಾರ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಅತ್ಯಾಚಾರ ಎಸಗಿದ ಕಿರಾತಕರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಇಡೀ ದೇಶವೇ ಏಕ ಕಂಠದಿಂದ ಆಗ್ರಹಿಸಿದೆ. ಹಾಗಂದ ಮಾತ್ರಕ್ಕೆ ವಿಚಾರಣಾಧೀನ ಕೈದಿಗಳಾಗಿರುವ […]
Read More
ಫುಕೆತ್! ಈ ಪದವೇ ಹೇಳುವುದಕ್ಕೂ ಮತ್ತು ಕೇಳುವುದಕ್ಕೂ ಒಂದು ರೀತಿ ಮಜವಾಗಿದೆ. ಇದು ಸುಂದರ ಐಲ್ಯಾಂಡ್. ಈ ಹೆಸರನ್ನು ಹಲವರು ಕೇಳಿರುತ್ತಾರೆ. ಕೆಲವರಾದರೂ ನೋಡಿರುತ್ತಾರೆ. ಥೈಲ್ಯಾಂಡ್ ದೇಶದ 32 ಮನಸೂರೆಗೊಳ್ಳುವ ದ್ವೀಪಗಳ ಪೈಕಿ ಫುಕೆತ್ ಮನಮೋಹಕ ದ್ವೀಪಪ್ರಾಂತ್ಯ ಹಾಗೂ ಈ ಎಲ್ಲ ದ್ವೀಪಗಳಿಗಿಂತ ದೊಡ್ಡದು. ಒಟ್ಟು ವಿಸ್ತೀರ್ಣ ಎಷ್ಟು ಅಂತೀರಾ, ಕೇವಲ 576 ಚದರ ಕಿಲೋಮೀಟರ್. ಉತ್ತರದಿಂದ ದಕ್ಷಿಣಕ್ಕೆ ಉದ್ದ 48 ಕಿ.ಮೀ. ಪೂರ್ವದಿಂದ ಪಶ್ಚಿಮಕ್ಕೆ 21 ಕಿ.ಮೀ. ದ್ವೀಪದ ಕಾಯಂ ನಿವಾಸಿಗಳ ಸಂಖ್ಯೆ ಮೂರೂ ಮುಕ್ಕಾಲು […]
Read More
ನಮ್ಮ ಸಂವಿಧಾನದಲ್ಲಿ ಅಡಕವಾಗಿರುವ ‘ಧರ್ಮ ನಿರಪೇಕ್ಷತೆ’ ಮತ್ತು ‘ಸೆಕ್ಯುಲರ್’ ಎಂಬ ಎರಡು ಪದಗಳು ಅತಿ ಹೆಚ್ಚು ಚರ್ಚೆಗೊಳಪಟ್ಟಿರುವುದು ಗೊತ್ತೇ ಇದೆ. ರಾಜಕೀಯ ಮತ್ತು ಧರ್ಮದ ಸಂಬಂಧದ ವಿಷಯದಲ್ಲಿಆರಂಭವಾದ ಈ ಚರ್ಚೆ ರಾಜಕೀಯದಲ್ಲಿ ಧರ್ಮ ಇರಬೇಕೇ ಅಥವಾ ಧರ್ಮದಲ್ಲಿ ರಾಜಕೀಯದಲ್ಲಿ ಇರಬೇಕೇ ಎಂಬ ಜಿಜ್ಞಾಸೆಗೂ ಕಾರಣವಾಗಿದೆ. ಸಂವಿಧಾನದಲ್ಲಿ ಉಲ್ಲೇಖಿತ ಧರ್ಮ ನಿರಪೇಕ್ಷತೆಯನ್ನು ಸೆಕ್ಯುಲರಿಸಂ(ಜಾತ್ಯತೀತತೆ)ಗೆ ಸಂವಾದಿಯಾಗಿಸಿದ್ದೂ ಇದೆ. ಇರಲಿ, ಇಲ್ಲಿಧರ್ಮನಿರಪೇಕ್ಷತೆ ಎಂದರೆ ಧರ್ಮ ಬಿಡಬೇಕು ಎಂತಲೋ ಅಥವಾ ಸೆಕ್ಯುಲರಿಸಂ ಎಂದರೆ ಜಾತಿ ತ್ಯಾಗ ಮಾಡು, ಜಾತಿ ವಿನಾಶಕ್ಕೆ ಹೋರಾಡು ಎಂತಲೋ […]
Read More
ಸಿನಿಮಾ ಕೂಡ ಅಮಿತಾಭ್‌ಗೆ ಏಕಾಏಕಿ ದಕ್ಕಿದ್ದಲ್ಲ. ಅವರಿಗೆ 30 ವರ್ಷ ಆಗುವ ಹೊತ್ತಿಗೆ ಒಂದಲ್ಲ, ಎರಡಲ್ಲ ಸತತ 12 ಸಿನಿಮಾಗಳು ಫ್ಲಾಪ್ ಆದವು. ಅಮಿತಾಭ್ ಬಚ್ಚನ್ ಅಂದ್ರೆ ಛಲ, ಸಾಹಸ, ಸ್ಫೂರ್ತಿ ಮತ್ತು ಒಂದು ಯಶಸ್ವಿ ಮಾದರಿಯ(ಬ್ರಾಂಡ್) ಸಂಕೇತ, ಈ ಎಲ್ಲವುಗಳ ಬಹುದೊಡ್ಡ ರೂಪಕ. ಬಚ್ಚನ್ ಜೀವನದ ನಾನಾ ಮಜಲುಗಳ ಮೇಲೆ ಒಮ್ಮೆ ಕಣ್ಣಾಡಿಸಿದರೆ, ಎಂಥವರಿಗೂ ಇದು ಮನವರಿಕೆ ಆಗದೆ ಇರದು. ತನ್ನ ಜೀವಿತಾವಧಿಯಲ್ಲೇ ದಂತಕತೆಯಾದ ವ್ಯಕ್ತಿ ನಮ್ಮ ನಡುವೆ ಯಾರಾದರೂ ಇದ್ದರೆ ಅದು ಅಮಿತಾಭ್ ಮಾತ್ರ ಎಂದು […]
Read More
ಹೀಗೊಂದು ಕಥೆ…ಸಾವಿಲ್ಲದ ಮನೆಯಿಂದ ಸಾಸಿವೆ ಕಾಳು ತೆಗೆದುಕೊಂಡು ಬಾ ಎಂದು ಬುದ್ಧ ಕಿಸಾಗೌತಮಿಗೆ ಹೇಳಿದ ಕಥೆಯ ರೀತಿಯಲ್ಲಿರುವ ಇನ್ನೊಂದು ಕಥೆಯಿದು. ಒಂದಾನೊಂದು ಕಾಲದಲ್ಲಿ ಬಲೇ ಪ್ರಖ್ಯಾತನಾದ ಓರ್ವ ರಾಜ ಇದ್ದ. ಅಧಿಕಾರ, ಐಶ್ವರ್ಯ, ಆರೋಗ್ಯ ಎಲ್ಲವೂ ಅವನಲ್ಲಿ ಇತ್ತು. ಅಪಾರ ಪ್ರಜಾ ಬೆಂಬಲವೂ ಇತ್ತು. ವಿರೋಧಿಗಳಿಗೂ ಆತನೆಂದರೆ ಒಂದು ತೆರನಾದ ಭಯ. ಕಾಲಕಾಲಕ್ಕೆ ಮಳೆ ಬೆಳೆ ಆಗಿ ರಾಜ್ಯ ಸುಭಿಕ್ಷ ವಾಗಿತ್ತು. ಇಷ್ಟಾದರೂ ರಾಜನಿಗೆ ನೆಮ್ಮದಿ ಎಂಬುದಿರಲಿಲ್ಲ. ಸದಾ ದುಃಖ, ಕೊರಗಿನಲ್ಲೇ ಇರುತ್ತಿದ್ದ. ಮನೋ ಸಂತೋಷ ಅರಸಿಕೊಂಡು […]
Read More
ಹೌದು… ರಾಜಕೀಯವೇ ಹೊಲಸು ಅನ್ನುತ್ತಾರೆ, ಅದು ಈಗ ಮತ್ತಷ್ಟು ಕದಡಿದಂತೆ ಭಾಸವಾಗುತ್ತಿದೆ. ಅದಕ್ಕೆ ಕಾರಣಗಳು ಹಲವು! ಆದರೆ ಇಲ್ಲೊಂದು ಪ್ರಶ್ನೆಯನ್ನು ನಾವು ಸಹಜವಾಗಿ ಕೇಳಿಕೊಳ್ಳಲೇಬೇಕಿದೆ. ಅದೇನೆಂದರೆ ನಾವೆಷ್ಟೇ ಬೈದರೂ, ಬೇಡವೆಂದರೂ ರಾಜಕೀಯವನ್ನು ಬಿಟ್ಟು ನಾವು ಬದುಕಬಹುದೇ? ಖಂಡಿತವಾಗಿ ಹೌದು ಎಂಬ ಉತ್ತರವನ್ನು ಕೊಡಲು ಸಾಧ್ಯವೇ ಇಲ್ಲ. ಕಾರಣ ಇಷ್ಟೆ, ರಾಜಕೀಯ ನಮ್ಮ ದೇಶದ ವ್ಯವಸ್ಥೆಯ ಅವಿಭಾಜ್ಯ ಅಂಗ. ನಾವೂ ಕೂಡ ವೈಯಕ್ತಿಕವಾಗಿ ಮತ್ತು ಸಾಮೂಹಿಕವಾಗಿ ಆ ವ್ಯವಸ್ಥೆಯ ಭಾಗವೇ ಆಗಿದ್ದೇವೆ. ಆದ್ದರಿಂದ ಈಗಲೂ ನಾವು ಧನಾತ್ಮಕವಾಗಿ ಆಲೋಚನೆ […]
Read More
ಓರ್ವ ಟಿ.ಎನ್. ಶೇಷನ್ ಭಾರತದ ಚುನಾವಣಾ ವ್ಯವಸ್ಥೆಯಲ್ಲಿ ಇಷ್ಟು ಅಗಾಧ ಬದಲಾವಣೆ ಮಾಡಬಲ್ಲರಾದರೆ ನಾವು ಕರ್ನಾಟಕದ ಆರು ಕೋಟಿ ಜನರು/ದೇಶದ ನೂರಿಪ್ಪತ್ತೈದು ಕೋಟಿ ಜನರು ಇನ್ನೇನೆಲ್ಲ ಮಾಡಬಹುದು! ಆಲೋಚಿಸುವುದು ಬೇಡವೇ? ಕರ್ನಾಟಕ ವಿಧಾನಸಭಾ ಚುನಾವಣೆ ಇದಕ್ಕೆ ವೇದಿಕೆಯಾಗಲಿ. ಚುನಾವಣಾ ಆಯೋಗಕ್ಕೆ ಎಂಥ ತಾಕತ್ತಿದೆ ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟ ಮಾಜಿ ಮುಖ್ಯಚುನಾವಣಾ ಆಯುಕ್ತ ಟಿ.ಎನ್. ಶೇಷನ್ ತಮ್ಮ ಕೊನೇ ದಿನಗಳನ್ನು ಎಲ್ಲಿ ಮತ್ತು ಹೇಗೆ ಕಳೆಯುತ್ತಿದ್ದಾರೆ ಎಂಬುದರ ಕುರಿತು ದಿನಂಪ್ರತಿ ತರಹೇವಾರಿ ಸುದ್ದಿಗಳು ಹರಿದಾಡುತ್ತಿವೆ. ಶೇಷನ್ ಮಾತ್ರವಲ್ಲ, ಒಂದುಕಾಲಕ್ಕೆ […]
Read More
ಈ ಲೇಖನದ ತಲೆಬರಹ ಡಾ. ಸುಬ್ರಮಣಿಯನ್ ಸ್ವಾಮಿ ಅವರ ಭಾಷಣದಿಂದ ಆಯ್ದುಕೊಂಡದ್ದು. ಈ ಪ್ರಶ್ನೆ ಮತ್ತು ಅದರೊಳಗಿನ ಅರ್ಥದ ಹಿನ್ನೆಲೆಯಲ್ಲಿ ಆಲೋಚನೆ ಮಾಡಿದರೆ ಈಗ ನಮಗೆ ಕಾಡುವ ಅನೇಕ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಸಿಗುತ್ತದೆ. ಭಾರತದ ಸಂವಿಧಾನಕ್ಕೆ ನೂರಾರು ಬಾರಿ ತಿದ್ದುಪಡಿ ಮಾಡಿದ ನಂತರ ಇದೀಗ ಅದೇ ವಿಚಾರ ಏಕಾಏಕಿ ಚರ್ಚೆಯ ಮುನ್ನೆಲೆಗೆ ಬಂದು ನಿಂತುಕೊಂಡಿದೆ. ಸಂವಿಧಾನದ ಆಶಯಗಳನ್ನು ಕಾಲಕಾಲಕ್ಕೆ ವ್ಯಾಖ್ಯಾನಿಸಿ ಅದರ ಮೂಲ ಆಶಯ ಸಂರಕ್ಷಿಸಬೇಕಾದ ಸುಪ್ರೀಂಕೋರ್ಟ್ ತೀರ್ಪು ಕೂಡ ದೇಶದಲ್ಲಿ ಹಿಂಸೆಯ ಜ್ವಾಲೆ ಉರಿಯಲು […]
Read More