ಬಡವರ ಮರುವಲಸೆ ಸಮಸ್ಯೆ ನೀಗಿಸುವುದು‌ ತುರ್ತು ಆದ್ಯತೆಯಾಗಲಿ

ಉತ್ತರ ಭಾರತದ ನಾನಾ ಮೆಟ್ರೋ ನಗರಗಳಿಂದ ಹಳ್ಳಿಗಳ ಕಡೆಗೆ ದೊಡ್ಡ ಪ್ರಮಾಣದ ಮರು ವಲಸೆ ಆರಂಭವಾಗಿದೆ. ದಿನದ ಕೂಳು ಸಂಪಾದಿಸಲೆಂದು ನಗರಗಳಿಗೆ ಬಂದು ಕೂಲಿ ಮಾಡಿ ಹೊಟ್ಟೆಪಾಡು ನೋಡಿಕೊಳ್ಳುತ್ತಿದ್ದವರು, ನಾನಾ ಬಗೆಯಲ್ಲಿ ದಿನದ ಸಂಪಾದನೆಯನ್ನೇ ನೆಚ್ಚಿಕೊಂಡು ಇದ್ದವರು ಈಗ ಲಾಕ್‌ಡೌನ್‌ ಪರಿಣಾಮ ಸಂಪಾದನೆಗೆ ದಾರಿ ಕಾಣದೆ, ತಮ್ಮ ಹಳ್ಳಿಗಳ ದಾರಿ ಹಿಡಿದಿದ್ದಾರೆ. ರೈಲ್ವೆ ಸೇರಿದಂತೆ ಸಾರಿಗೆ ಸಂಪರ್ಕಗಳನ್ನು ರದ್ದುಪಡಿಸಿರುವುದರಿಂದ ಲಕ್ಷಾಂತರ ಸಂಖ್ಯೆಯಲ್ಲಿರುವ ಈ ಕಾರ್ಮಿಕರು ನಡೆದೇ ಹೊರಟಿದ್ದಾರೆ. ಇಂಥದೊಂದು ಅಡ್ಡ ಪರಿಣಾಮವನ್ನು ಊಹಿಸಿರದ ಸರಕಾರ ಥಟ್ಟನೆ ಎಚ್ಚೆತ್ತುಕೊಂಡು […]

Read More

ಸುರಕ್ಷತೆಯೊಂದಿಗೆ ಸುದ್ದಿ ತಲುಪಿಸುತ್ತಿರುವ ಪತ್ರಿಕಾ ವಿತರಕ ಸೇನಾನಿಗಳಿಗೆ ಸಲಾಂ…

ಮಾಧ್ಯಮದವರೂ ಅಗತ್ಯ ಸೇವಕರೆಂದು ಪ್ರಧಾನಿಯೇ ಹೇಳಿದ್ದಾರೆ. ಎಲ್ಲ‌‌ ಸರಕಾರಗಳೂ ಅದನನ್ನೇ ಹೇಳಿವೆ. ಹೇಳಿದ ಮಾತಿಗೆ ಗೌರವ ತರುವ,ಹೊತ್ತ ಹೊಣೆಯನ್ನು‌ಎಚ್ಚರಿಕೆಯಿಂದ ನಿಭಾಯಿಸುವ ನಮ್ಮ‌ ಕೊರೋನಾ ಯೋಧರಿಗೆ ವಿಕ‌ ಸಲಾಂ.  ನಮ್ಮ‌ವಿತರಕರು ನಮ್ಮ‌ಹೆಮ್ಮೆ

Read More

ವಾಸ್ತವವಾದಿ ವಿವೇಚನೆ ಅಗತ್ಯ. ಅನಗತ್ಯ ಬೀದಿಗಿಳಿಯದಿರಿ, ವದಂತಿ ಹರಡಬೇಡಿ.

ಕೊರೊನಾ ವೈರಸ್‌ ವಿರುದ್ಧ ಹೋರಾಡಲು ಇಡೀ ದೇಶವನ್ನು ಲಾಕ್‌ಡೌನ್‌ ಮಾಡಿದ ನಂತರ ಸ್ಥಳೀಯವಾಗಿ ಹಲವು ಬೆಳವಣಿಗೆಗಳು ಆಗುತ್ತಿವೆ. ಉದಾಹರಣೆಗೆ, ಕರ್ನಾಟಕದಲ್ಲಿ ಲಾಕ್‌ಡೌನ್‌ ಅನ್ನು ಪೊಲೀಸರು ನಿರ್ವಹಿಸಿದ ರೀತಿ ಸರಿಯಾಗಲಿಲ್ಲ ಎಂಬ ಆಕ್ಷೇಪ ಕೇಳಿಬಂತು. ಕೆಲವೆಡೆ ಬೀದಿಗಿಳಿದ ಜನರ ಮೇಲೆ ಪೊಲೀಸರು ಲಾಠಿ ಬೀಸಿದ ಸುದ್ದಿ, ದೃಶ್ಯಗಳು ಇದಕ್ಕೆ ಪೂರಕವಾಗಿ ಕಂಡುಬಂದವು. ವಿರೋಧ ಕಂಡುಬಂದ ಹಿನ್ನೆಲೆಯಲ್ಲಿ, ಪೊಲೀಸರು ಲಾಠಿ ಎತ್ತದೆ ಕಾರ್ಯ ನಿರ್ವಹಿಸುವಂತೆಯೂ ಪೊಲೀಸ್‌ ಮುಖ್ಯಸ್ಥರು ನಿರ್ದೇಶನ ನೀಡಿದ್ದಾರೆ. ಇನ್ನೊಂದು ಬೆಳವಣಿಗೆಯೆಂದರೆ, ಕೋವಿಡ್‌-19 ಸಂಬಂಧಿತ ನಾನಾ ಬಗೆಯ ವದಂತಿಗಳಿಗೆ […]

Read More

ಗೊಗೊಯಿ ನೇಮಕ ತಾಂತ್ರಿಕವಾಗಿ ಸರಿ, ನೈತಿಕವಾಗಿ?

ಗೊಗೊಯಿ ನೇಮಕ ತಾಂತ್ರಿಕವಾಗಿ ಸರಿ, ನೈತಿಕವಾಗಿ? ಇಂಥ ನೇಮಕಗಳನ್ನು ಹಿಂದೆ ಸ್ವತಃ ಗೊಗೊಯಿ ವಿರೋಧಿಸಿದ್ದರು/ ಲೈಂಗಿಕ ದೌರ್ಜನ್ಯ ಆರೋಪವೂ ಅವರ ಮೇಲಿದೆ – ಹರಿಪ್ರಕಾಶ್‌ ಕೋಣೆಮನೆ ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಬಳಿಕ ಇದೇ ಮೊದಲ ಬಾರಿಗೆ ಪರ-ವಿರೋಧದ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಐತಿಹಾಸಿಕ ಎಂಬಂತೆ ಗೊಗೊಯಿ ಪ್ರಮಾಣ ವಚನದ ವೇಳೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸಭಾತ್ಯಾಗ ಮಾಡಿ ಪ್ರತಿಭಟಿಸಿದೆ. ಈ ಹಿಂದೆಯೂ ಯುಪಿಎ ಸರಕಾರದ ಅವಧಿಯಲ್ಲೂ ಸುಪ್ರೀಂ ಕೋರ್ಟಿನ […]

Read More

ಬ್ಯಾಂಕ್‌ಗಳ ಸಂಕಷ್ಟಕ್ಕೂ ಬಜೆಟ್‌ ಸಂಕಟಕ್ಕೂ ಸಂಬಂಧವಿದೆ

ಬ್ಯಾಂಕ್‌ಗಳ ಸಂಕಷ್ಟಕ್ಕೂ ಬಜೆಟ್‌ ಸಂಕಟಕ್ಕೂ ಸಂಬಂಧವಿದೆ ಭಾರತದ ಹಣಕಾಸು ಕ್ಷೇತ್ರದಲ್ಲಿ ಉಂಟಾಗಿರುವ ತಲ್ಲಣಕ್ಕೆ ಬಿಗಿ ನಿಯಂತ್ರಣ ವ್ಯವಸ್ಥೆ ರೂಪಿಸುವುದೊಂದೇ ಪರಿಹಾರ – ಹರಿಪ್ರಕಾಶ್‌ ಕೋಣೆಮನೆ ಯೆಸ್‌ ಬ್ಯಾಂಕ್‌ ಸಂಕಷ್ಟದ ಬೆಳವಣಿಗೆಗೂ ಕರ್ನಾಟಕ ಸರಕಾರದ ಬಜೆಟ್‌ಗೂ ನೇರವಾಗಿ ಯಾವುದೇ ಸಂಬಂಧ ಇಲ್ಲ. ಆದರೆ ಆ ಎರಡೂ ವಿದ್ಯಮಾನಗಳ ನಡುವೆ ಕೆಲ ಸಾಮ್ಯತೆಗಳಿರುವುದು ಮಾತ್ರ ನಿಜ. ಯೆಸ್‌ ಬ್ಯಾಂಕ್‌ ದಿವಾಳಿ ಹಾದಿಯಲ್ಲಿ ದಾಪುಗಾಲಿಟ್ಟಿರುವುದು ಬಹಳ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹಾಗೆಯೇ ದೇಶ ಎದುರಿಸುತ್ತಿರುವ ಆರ್ಥಿಕ ಮುಗ್ಗಟ್ಟಿನ ಪರಿಣಾಮ ರಾಜ್ಯ ಸರಕಾರದ ಕಾರ್ಯನಿರ್ವಹಣೆಯ […]

Read More

ಪಾಕಿಸ್ತಾನದ ಪರ ಅದೇಕೆ ಇಷ್ಟೊಂದು ಪ್ರೀತಿ!

ಈ ಅಪಾಯಕಾರಿ ಪಿಡುಗಿಗೆ ಸಹಾನುಭೂತಿ ತೋರುವುದನ್ನು ನಿಲ್ಲಿಸಿದರೆ ಅದೇ ಪರಿಹಾರ ಪಾಕಿಸ್ತಾನದ ಪರ ಅದೇಕೆ ಇಷ್ಟೊಂದು ಪ್ರೀತಿ! ‘ಪಾಕಿಸ್ತಾನ್‌ ಜಿಂದಾಬಾದ್‌’ ಎಂದು ಘೋಷಣೆ ಕೂಗುವ ಪ್ರವೃತ್ತಿ ಕೊರೋನಾ ವೈರಸ್‌ ರೀತಿಯಲ್ಲಿಹಬ್ಬುತ್ತಿದೆ. ರಾಷ್ಟ್ರದ ಸಮಗ್ರತೆ ಮತ್ತು ಏಕತೆಯ ದೃಷ್ಟಿಯಿಂದ ಇದು ಖಂಡಿತಕ್ಕೂ ಒಳ್ಳೆಯ ಬೆಳವಣಿಗೆಯಲ್ಲ. ಈ ವಿಷಬೀಜ ಮೊಳಕೆಯೊಡೆದದ್ದು ದಿಲ್ಲಿಯ ಜೆಎನ್‌ಯು ಕ್ಯಾಂಪಸ್‌ನಿಂದ ಎನ್ನುತ್ತಾರೆ. ಅದಕ್ಕೆ ಪುರಾವೆಗಳೂ ಸಿಗುತ್ತಿವೆ. ಹಲವು ವರ್ಷಗಳಿಂದ ಸುಪ್ತವಾಗಿ ಪ್ರವಹಿಸಿ ಗಟ್ಟಿಗೊಳ್ಳುತ್ತಲಿದ್ದ ಆ ಮಾನಸಿಕತೆ ಕೆಲ ವರ್ಷಗಳ ಹಿಂದೆ ಬಹಿರಂಗ ಸ್ವರೂಪ ಪಡೆದುಕೊಂಡಿತು. ಜೆಎನ್‌ಯು […]

Read More

ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು

ಪೌರತ್ವ ಕಾಯಿದೆ : ಅಪಾಯ ಬಿತ್ತಿ ಬೆಳೆದ ಅರ್ಧಸತ್ಯಗಳು ಜತನದಿಂದ ಕಾಪಾಡಿಕೊಂಡು ಬಂದ ಮತೀಯ ಸಾಮರಸ್ಯಕ್ಕೆ ಪೆಟ್ಟು, ದೇಶದ ಪ್ರತಿಷ್ಠೆಗೆ ಘಾಸಿ ಮಾಡಿದ ಅಶಾಂತಿ ಭಾರತದ ಜನತಂತ್ರಾತ್ಮಕ ಗಣರಾಜ್ಯ ಎಂದೂ ಕೂಡ ಬನಾನಾ ರಿಪಬ್ಲಿಕ್‌ ಆಗಲು ಸಾಧ್ಯವೇ ಇಲ್ಲ. ಈ ಅದಮ್ಯ ಆತ್ಮವಿಶ್ವಾಸಕ್ಕೆ ಕಾರಣ ನಮ್ಮ ಶ್ರೇಷ್ಠ ಸಂವಿಧಾನ. ಜಗತ್ತಿನ 220 ದೇಶಗಳ ಪೈಕಿ 180 ಪ್ರಜಾತಂತ್ರ ದೇಶಗಳಲ್ಲಿರುವ ಶ್ರೇಷ್ಠ ಮಾದರಿಗಳನ್ನು ಅಧ್ಯಯನ ನಡೆಸಿ, ರೂಪುಗೊಂಡಿರುವ ಸರ್ವಶ್ರೇಷ್ಠವಾದ ಸಂವಿಧಾನ ನಮ್ಮದು. ಹಾಗಾಗಿ ಇದು ಇಡೀ ಜಗತ್ತಿನಲ್ಲೇ ಅತ್ಯಂತ […]

Read More

ವೃತ್ತಿಪರತೆಯ ರುಜುವಾತಿಗೆ ರಸ್ತೆಗಳನ್ನು ನೋಡಿದರೆ ಸಾಕು!

ವೃತ್ತಿಪರತೆಯ ರುಜುವಾತಿಗೆ ರಸ್ತೆಗಳನ್ನು ನೋಡಿದರೆ ಸಾಕು! ರಸ್ತೆಯೆಂದರೆ ನಾಗರಿಕತೆಯ ಸಂಕೇತ ಎಂದ ಅರಸು ಮಾತು ನಮಗೆ ಅರ್ಥವಾಗುವುದು ಯಾವಾಗ..? ಕೆಲವೊಂದು ವ್ಯಕ್ತಿಗಳೇ ಹಾಗೆ! ಅವರಿಗೆ ಅವರೇ ಸಾಠಿ. ಅಂಥವರಿಗೆ ಪರ್ಯಾಯ ಸೃಷ್ಟಿಸುವುದು ಅಸಾಧ್ಯ ಮಾತು. ಅಟಲ್‌ ಬಿಹಾರಿ ವಾಜಪೇಯಿ, ರಾಮಕೃಷ್ಣ ಹೆಗಡೆ, ದೇವೇಗೌಡರು, ಯಡಿಯೂರಪ್ಪ, ನಿತಿನ್‌ ಗಡ್ಕರಿ ಅವರನ್ನು ನೋಡಿದಾಗ ಈ ಹೇಳಿಕೆ ಎಷ್ಟು ಸಮಂಜಸ, ಪ್ರಾಕ್ಟಿಕಲ್‌ ಎಂಬುದು ಮನದಟ್ಟಾಗುತ್ತದೆ. ಮುತ್ಸದ್ದಿ(ಸ್ಟೇಟ್ಸ್‌ಮನ್‌)ತನದ ಪ್ರಸ್ತಾಪ ಬಂದರೆ ದಿವಂಗತ ವಾಜಪೇಯಿ ಅವರನ್ನು ಬಿಟ್ಟು ಬೇರೆ ಹೆಸರು ಕಣ್ಣಮುಂದೆ ಬರಲು ಸಾಧ್ಯವೇ ಇಲ್ಲ. […]

Read More

ಗುಡ್‌ ಗವರ್ನೆನ್ಸ್‌ ಅಂದರೆ ಗ್ರಾಮವಾಸ್ತವ್ಯ ಮಾತ್ರವಾ? ತೆರಿಗೆ ಹಣದ ಬಳಕೆಯಲ್ಲಿ ವೃತ್ತಿಪರತೆ ಕಾಣಬೇಕಾದರೆ ತಮಿಳುನಾಡಿನ ರಸ್ತೆಗಳನ್ನು ನೋಡಬೇಕು

ಭಾರತದ ಮಟ್ಟಿಗೆ ಗುಡ್‌ ಗವರ್ನನ್ಸ್‌ ಪದಪ್ರಯೋಗವನ್ನು ಅಧಿಕೃತವಾಗಿ ಪರಿಚಯ ಮಾಡಿ ಆರು ವರ್ಷ ಕಳೆದಿದೆ. 2014ರ ಡಿಸೆಂಬರ್‌ 23ರಂದು ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ-1 ಸರಕಾರ ಪಂಡಿತ್‌ ಮದನಮೋಹನ ಮಾಳವೀಯ ಹಾಗೂ ಮಾಜಿ ಪ್ರಧಾನಿ, ಮಹಾನ್‌ ಮುತ್ಸದ್ದಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ದೇಶದ ಅತ್ಯುನ್ನತ ಪುರಸ್ಕಾರವಾದ ಭಾರತ ರತ್ನ ಪ್ರಶಸ್ತಿ ಘೋಷಿಸಿತು. ಅದೇ ವೇಳೆ ಸರಕಾರ ಇನ್ನೊಂದು ಮಹತ್ವದ ತೀರ್ಮಾನ ಪ್ರಕಟಿಸಿತು. ಅದೇ ಗುಡ್‌ ಗವರ್ನನ್ಸ್‌ ಡೇ. ಎ.ಬಿ.ವಾಜಪೇಯಿ ಅವರ ಹುಟ್ಟಿದ ದಿನವಾದ ಡಿ.25ನ್ನು ಗುಡ್‌ […]

Read More

ಮರಣವೇ ದಂಡನೆ, ಹಾಗಂತ ಕೊಲ್ಲುವುದು ಪೊಲೀಸರ ಕೆಲಸವಲ್ಲ

ಇತ್ತೀಚಿನ ಕೆಲ ರೇಪ್‌ ಪ್ರಕರಣಗಳನ್ನು ಉಲ್ಲೇಖಿಸಿ ರಾಹುಲ್‌ ಗಾಂಧಿ ರೇಪ್‌ ಇನ್‌ ಇಂಡಿಯಾ ಎಂಬ ಹೊಸ ಘೋಷವಾಕ್ಯ ಮೊಳಗಿಸಿದ್ದಾರೆ. ಹಾಗೆಯೇ ಸಂಸತ್ತಿನ ಒಪ್ಪಿಗೆ ಪಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿವಾದದ ಸ್ವರೂಪಕ್ಕೆ ತಿರುಗುತ್ತಿದೆ. ಈ ಎರಡು ಮಹತ್ವದ ವಿಷಯಗಳ ತುಲನಾತ್ಮಕ ಅವಲೋಕನ ಇಲ್ಲಿದೆ. ಹೈದರಾಬಾದ್‌ನ ಪಶುವೈದ್ಯೆ ಮೇಲಿನ ಅತ್ಯಾಚಾರ ಘಟನೆ ದೇಶವನ್ನು ಬೆಚ್ಚಿ ಬೀಳಿಸಿದೆ. ಅತ್ಯಾಚಾರ ಎಸಗಿದ ಕಿರಾತಕರನ್ನು ಕಠಿಣಾತಿ ಕಠಿಣ ಶಿಕ್ಷೆಗೆ ಗುರಿಪಡಿಸಬೇಕೆಂದು ಇಡೀ ದೇಶವೇ ಏಕ ಕಂಠದಿಂದ ಆಗ್ರಹಿಸಿದೆ. ಹಾಗಂದ ಮಾತ್ರಕ್ಕೆ ವಿಚಾರಣಾಧೀನ ಕೈದಿಗಳಾಗಿರುವ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top