ರಾಷ್ಟ್ರದ ಹೆಮ್ಮೆಯ ಉದಾರ ರತ್ನ

ಸಮಾಜದ ಸಂಕಟ ನಿವಾರಣೆಗೆ ಧಾವಿಸುವ ರತನ್ ಟಾಟಾ ಅವರನ್ನು ಉದ್ಯಮಿಯಾಗಿ ಮಾತ್ರವಲ್ಲ, ಒಬ್ಬ ಉದಾರಿಯಾಗಿ ದೇಶದ ಜನ ನೆನೆಯುತ್ತಿದ್ದಾರೆ, ಗೌರವದಿಂದ ಕಾಣುತ್ತಿದ್ದಾರೆ. – ಹ.ಚ.ನಟೇಶ್‌ಬಾಬು ವ್ಯಾಪಾರಿಗಳು ಅಥವಾ ಉದ್ಯಮಿಗಳೆಂದರೆ ಸಮಾಜದಲ್ಲಿ ನಕಾರಾತ್ಮಕ ಭಾವನೆಗಳೇ ಹೆಚ್ಚು. ಲಾಭಕ್ಕಾಗಿ ಜನರನ್ನು ದೋಚುವ ಕಳ್ಳರಂತೆ ಉದ್ಯಮಿಗಳನ್ನು ಕೆಲವರು ಬಿಂಬಿಸುತ್ತಾರೆ. ಆದರೆ, ರತನ್ ಟಾಟಾ ಎಂದಾಗ ಎಲ್ಲರ ಮನದಲ್ಲಿ ಹೆಮ್ಮೆ ಮತ್ತು ಗೌರವದ ಭಾವ. 82 ವರ್ಷದ ರತನ್ ಟಾಟಾ, ಕೋವಿಡ್-19 ವಿರುದ್ಧದ ಸಮರಕ್ಕಾಗಿ 500 ಕೋಟಿ ರೂ. ದೇಣಿಗೆ ನೀಡಿದ್ದಾರೆ. ಅವರ […]

Read More

ಎಚ್‌ಸಿಕ್ಯೂ ಬಾಪ್‌ರೇ! – ಬಿಸಿಪಿಎಲ್‌ ದೇಶದ ಮೊದಲ ಫಾರ್ಮಾಸ್ಯುಟಿಕಲ್‌ ಕಂಪನಿ

ಹೈಡ್ರಾಕ್ಸಿಕ್ಲೋರೋಕ್ವಿನ್‌ಗೆ ಬೇಡಿಕೆ ಹೆಚ್ಚಾಗುತ್ತಿದ್ದಂತೆ ಸಾರ್ವಜನಿಕ ವಲಯದ ದೇಶದ ಏಕೈಕ ಡ್ರಗ್ಸ್‌ ಕಂಪನಿ ‘ಬೆಂಗಾಲ್‌ ಕೆಮಿಕಲ್ಸ್‌ ಆ್ಯಂಡ್‌ ಫಾರ್ಮಾಸ್ಯುಟಿಕಲ್ಸ್‌ ಲಿ.(ಬಿಸಿಪಿಎಲ್‌) ಹಾಗೂ ಅದರ ಸ್ಥಾಪಕ ಆಚಾರ್ಯ ಪ್ರಫುಲ್ಲಚಂದ್ರ ರೇ ಅವರು ಮುನ್ನಲೆಗೆ ಬಂದಿದ್ದಾರೆ. ಈ ಕಂಪನಿಯು ಆ್ಯಂಟಿ ಮಲೇರಿಯಾ ಔಷಧ, ಆ್ಯಂಟಿ ಸ್ನೇಕ್‌ ವೆನಮ್‌ ಸೀರಮ್‌ ಉತ್ಪಾದಿಸುತ್ತಿದೆ. ಸಂಸ್ಥಾಪಕ ರೇ ಅವರ ಬಗ್ಗೆ ಇಲ್ಲಿದೆ ಮಾಹಿತಿ. ಇಡೀ ಜಗತ್ತಿಗೆ ಕಂಟವಾಗಿರುವ ಕೊರೊನಾ ವೈರಸ್‌ಗೆ ಭಾರತ ಸಮೃದ್ಧವಾಗಿ ಉತ್ಪಾದಿಸುವ ಆ್ಯಂಟಿ ಮಲೇರಿಯಾ ಡ್ರಗ್ಸ್‌ ರಾಮಬಾಣ ಎಂದು ಗೊತ್ತಾಗುತ್ತಿದ್ದಂತೆ ಎಲ್ಲದೇಶಗಳು ಭಾರತಕ್ಕೆ […]

Read More

ಬದ್ಧತೆ ಪ್ರದರ್ಶಿಸೋಣ -ಲಾಕ್‌ಡೌನ್‌ ಇರಲಿ ಬಿಡಲಿ, ಶಿಸ್ತು ಪಾಲಿಸೋಣ

ವಾಸ್ತವದಲ್ಲಿ ನಾವೆಲ್ಲರೂ ಮುಷ್ಕರ, ಹರತಾಳ ಮತ್ತು ಬಂದ್‌ನಂಥ ಪ್ರವೃತ್ತಿಗಳನ್ನು ವಿರೋಧಿಸುವ ಮನಸ್ಥಿತಿ ಉಳ್ಳವರು ನಿಜ. ಈ ನೆಲದ ನ್ಯಾಯಾಲಯಗಳೂ ಬಂದ್‌ಗೆ ಸಮ್ಮತಿಯನ್ನು ನೀಡುವುದಿಲ್ಲ; ಬಂದ್‌ ವೇಳೆ ಉಂಟಾಗುವ ನಷ್ಟವನ್ನು ಆಯೋಜಕರಿಂದಲೇ ವಸೂಲಿ ಮಾಡಬೇಕೆಂಬ ಐತಿಹಾಸಿಕ ಆದೇಶಗಳನ್ನು ನೀಡಿವೆ. ಪರಿಸ್ಥಿತಿ ಹೀಗಿರುವಾಗ ನಾವೆಲ್ಲ ಈ ಲಾಕ್‌ಡೌನ್‌ ಎಂಬ 21 ದಿನಗಳ ಅಜ್ಞಾತವಾಸವನ್ನು ಒಪ್ಪಿಕೊಂಡಿದ್ದೆವೆ. ಯಾಕೆಂದರೆ, ಇಡೀ ಮನುಕುಲಕ್ಕೆ ಅಪಾಯ ತಂದೊಡ್ಡಿರುವ ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಇರುವ ಸದ್ಯದ ಏಕೈಕ ಪರಿಹಾರ ಎಂಬ ಕಾರಣಕ್ಕಾಗಿ. ವಿಶೇಷ ಎಂದರೆ, […]

Read More

ಅಭದ್ರತೆ ಭಯ ಬಿಟ್ಹಾಕಿ – ಉದ್ಯೋಗ ಕೌಶಲ ಹೆಚ್ಚಿಸಿಕೊಳ್ಳಲು ಇಲ್ಲಿವೆ ಟಿಪ್ಸ್

– ರಾಮಸ್ವಾಮಿ ಹುಲಕೋಡು ಕೊರೊನಾ ವೈರಸ್ ದಾಳಿಯಿಂದ ಇಡೀ ಜಗತ್ತಿನ ಆರ್ಥಿಕತೆ ಕುಸಿದು ಬಿದ್ದಿದೆ. ಹಿಂದೆಂದೂ ಕಂಡಿರದಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ಉದ್ಯೋಗ ಮಾರುಕಟ್ಟೆಯ ಮೇಲೂ ಇದು ನೇರ ಪರಿಣಾಮ ಬೀರಿದೆ. ಹೀಗಾಗಿ ಈಗಾಗಲೇ ಉದ್ಯೋಗದಲ್ಲಿರುವವರು, ಉದ್ಯೋಗದ ನಿರೀಕ್ಷೆಯಲ್ಲಿರುವ ಅಭದ್ರತೆಯಿಂದಲೇ ದಿನ ದೂಡುವಂತಾಗಿದೆ. ನಮ್ಮ ದೇಶದಲ್ಲಿ ನಿರುದ್ಯೋಗದ ಪ್ರಮಾಣ ಈಗ ಶೇ.30ಕ್ಕಿಂತೂ ಹೆಚ್ಚಿದೆ ಎಂದು ವಿವಿಧ ಸಮೀಕ್ಷೆಗಳು ಅಭಿಪ್ರಾಯಪಟ್ಟಿವೆ. ಮುಂದೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆಗಳಿವೆ. ಇಂಥ ಸಂದರ್ಭದಲ್ಲಿ ಈಗ ಉದ್ಯೋಗ ಮಾಡುತ್ತಿರುವವರು ಮತ್ತು ಉದ್ಯೋಗದ ನಿರೀಕ್ಷೆಯಲ್ಲಿರುವವರು ಏನು […]

Read More

ಸಂಕಷ್ಟವಷ್ಟೇ ಅಲ್ಲ, ಭರವಸೆ ಉಂಟು – ಭವಿಷ್ಯದ ಸವಾಲಿಗೊಂದು ಹಾಲಿ ರಿಹರ್ಸಲ್

ಎಲ್ಲ ಸರಾಗವಾಗಿ ನಡೆದುಕೊಂಡು ಹೋಗುತ್ತಿರುವಾಗ ದಿಢೀರ್ ಎದುರಾಗುವ ಸವಾಲುಗಳು ನಮ್ಮ ಮನೋಬಲವನ್ನು ಕುಂದಿಸಿ, ನಾವು ಋಣಾತ್ಮಕವಾಗಿ ಚಿಂತಿಸುವಂತೆ ಮಾಡುವುದು ಸಹಜ. ಕೊರೊನಾ ಸೃಷ್ಟಿಸಿರುವ ಆವಾಂತರವೂ ಇದಕ್ಕೆ ಹೊರತಲ್ಲ. ಈ ಆರೋಗ್ಯ ಸಂಬಂಧಿ ತುರ್ತು ಪರಿಸ್ಥಿತಿಯಿಂದಾಗಿ ನಾವು ಎಲ್ಲವನ್ನು ಕಳೆದುಕೊಂಡು ಬಿಟ್ಟೆವು; ಎಲ್ಲವೂ ಮುಗಿದೇ ಹೋಯಿತು; ಬದುಕು ಹಾಳಾಯಿತು ಎಂದು ಭಾವಿಸಲು ಕಾರಣವಿಲ್ಲ. ನಮ್ಮನ್ನು ನಾವು ಮತ್ತು ನಮ್ಮ ಶಕ್ತಿಯನ್ನು ಮರುಪೂರಣಗೊಳಿಸಿಕೊಳ್ಳಲು ಸೃಷ್ಟಿಯಾಗಿರುವ ಅವಕಾಶ ಎಂದು ಏಕೆ ತಿಳಿಯಬಾರದು. ಸಕಾರಾತ್ಮಕ ದೃಷ್ಟಿಕೋನದಿಂದ ಈಗಿನ ಪರಿಸ್ಥಿತಿಯನ್ನು ನೋಡಿದರೆ, ಮುಂಬರುವ ದಿನಗಳು […]

Read More

ಕೊರೊನಾ ಸಂಕಷ್ಟದಲ್ಲಿರುವವರಿಗೆ ಭರವಸೆ ಬಾಗಿಲು‌..

ಡೋಂಟ್ ವರಿ, ಎಲ್ಲ ಬಾಗಿಲುಗಳೂ ಮುಚ್ಚಿಲ್ಲ! ಲಾಕ್‌ಡೌನ್ ನಡುವೆಯೂ ಹಲವು ವಲಯಗಳಲ್ಲಿ ಚುರುಕಿನ ವಹಿವಾಟು ಕೊರೊನಾಘಾತದ ನಡುವೆಯೂ ಆಶಾಕಿರಣ ನಾನಾ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ದಿನ ಬಳಕೆ ವಸ್ತು ತಯಾರಿ ಕಂಪನಿಗಳ ಷೇರು ವೌಲ್ಯ ವೃದ್ಧಿ, ಔಷಧ ರಫ್ತಿನಿಂದ ಭಾರಿ ಲಾಭ – ಕೇಶವ ಪ್ರಸಾದ್ ಬಿ. ಬೆಂಗಳೂರು ಕೊರೊನಾ ವೈರಸ್ ದೇಶದ ಆರ್ಥಿಕತೆ ಮೇಲೆ ಭಾರಿ ಪ್ರಹಾರ ಮಾಡಿದೆ. ಸುದೀರ್ಘ ಲಾಕ್‌ಡೌನ್‌ನಿಂದಾಗಿ ಕೈಗಾರಿಕೋದ್ಯಮಕ್ಕೆ ಗರ ಬಡಿದಂತಾಗಿರುವುದು ನಿಜ. ಹಾಗಂತ ಪೂರ್ಣ ನಿರಾಶರಾಗಬೇಕಿಲ್ಲ. ಕೊರೊನಾ ಬಿಕ್ಕಟ್ಟು ಹಲವು […]

Read More

ಆರ್ಥಿಕತೆಗೆ ಕೊರೊನಾಘಾತ

 ಕೊರೊನಾ ವೈರಸ್‌ ಜಗತ್ತಿನಾದ್ಯಂತ ವಲಸಿಗ ಕಾರ್ಮಿಕರ ಸಂಕಷ್ಟಗಳನ್ನು ಹೆಚ್ಚಿಸಿದೆ. ಒಂದು ಕಡೆ ರೋಗವಾಹಕರಾಗುವ ಅಪಾಯ, ಮತ್ತೊಂದು ಕಡೆ ಸಾಮಾಜಿಕ ಭದ್ರತೆಯ ಅಭಾವಕ್ಕೀಡಾಗಿದ್ದಾರೆ. ಜಗತ್ತಿನ ಎಲ್ಲ ರಾಷ್ಟ್ರಗಳು ವಲಸಿಗರ ಸೇವೆಯನ್ನು ಬಯಸುತ್ತವೆ. ಮಹಾ ನಗರಗಳ ನಿರ್ಮಾಣದಲ್ಲಿ ಅವರಿಲ್ಲದೆ ಆಗುವುದಿಲ್ಲ. ವಲಸಿಗರಿಗೂ ಜೀವನೋಪಾಯಕ್ಕೆ ಇದು ಅನಿವಾರ್ಯ. ಆದರೆ ಕೊರೊನಾ ವೈರಸ್‌ ವಿಶ್ವಾದ್ಯಂತ ಅಸಂಘಟಿತ ವಲಯದ ಕೋಟ್ಯಂತರ ಬಡ ವಲಸಿಗರನ್ನು ನಾನಾ ಸಂಕಟಕ್ಕೆ ತಳ್ಳಿದೆ. ಒಂದು ಕಡೆ ಕೆಲಸವಿಲ್ಲ, ಸಾಮಾಜಿಕ ಭದ್ರತೆಯಂತೂ ಮೊದಲೇ ಇಲ್ಲ. ಸರಕಾರದ ನೆರವಿನ ಪ್ಯಾಕೇಜ್‌ನ ಕೊರತೆ ಅವರನ್ನು […]

Read More

ಕೊರೊನಾ ಶಂಕಿತರಿಗೆ ತಂತ್ರಜ್ಞಾನ ಕಡಿವಾಣ

ಭಾರತವೂ ಸೇರಿದಂತೆ ಹೆಚ್ಚಿನ ಎಲ್ಲ ದೇಶಗಳು ತಮ್ಮ ಪ್ರಜೆಗಳಲ್ಲಿ ಕೋವಿಡ್‌ ಸೋಂಕಿತರ ಮೇಲೆ ನಿಗಾ ಇಡಲು ಹಾಗೂ ಸೋಂಕು ಶಂಕಿತರನ್ನು ಪತ್ತೆ ಹಚ್ಚಲು ನಾನಾ ನಿಗಾ ವ್ಯವಸ್ಥೆಗಳನ್ನು ರೂಪಿಸಿಕೊಂಡಿವೆ. ಅಂಥ ನಿಗಾ ವ್ಯವಸ್ಥೆಗಳ ಮೇಲೊಂದು ನೋಟ ಇಲ್ಲಿದೆ. ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್‌ ಅವರು ಮೊನ್ನೆ ಒಂದು ಡ್ಯಾಶ್‌ಬೋರ್ಡ್‌ ಬಿಡುಗಡೆ ಮಾಡಿದರು. ಇದರ ಕೆಲಸ, ರಾಜ್ಯದಾದ್ಯಂತ ಇರುವ ಕೋವಿಡ್‌ ಸೊಂಕಿತರು, ಶಂಕಿತರು ಹಾಗೂ ಚಿಕಿತ್ಸೆ ಕುರಿತ ಪೂರ್ಣ ವಿವರ ನೀಡುವುದು. ಇದರ ಜೊತೆಗೆ, ಕೊರೊನಾ […]

Read More

ಕೊರೊನಾಕ್ಕಿಂತ ಕೊರೊನಾ ಸೃಷ್ಟಿಸಿದ ಭಯ, ಸಂಕಷ್ಟದಿಂದ ಸಾಯೋರು ಹೆಚ್ಚಾಗ್ತಿದ್ದಾರಾ? ಸರ್ಕಾರ ಇತ್ತ ಒಮ್ಮೆ ನೋಡಬೇಕು!

ಕೊರೊನಾ ನೆಪದಲ್ಲಿ ಅನ್ಯ ರೋಗಿಗಳೂ ಬಲಿ – ಕೋವಿಡ್‌-19 ವರದಿಗೆ ಕಾದು ಜಾಂಡೀಸ್‌ಗೆ ಚಿಕಿತ್ಸೆ ಕೊಡಲಿಲ್ಲ, ಯುವ ಎಂಜಿನಿಯರ್‌ ಸಾವು ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಹೆಚ್ಚಾಗಿ ದೇಶಾದ್ಯಂತ ದೊಡ್ಡ ಪ್ರಮಾಣದ ಅವಾಂತರ ಸೃಷ್ಟಿಸುತ್ತಿದ್ದರೆ, ಇನ್ನೊಂದೆಡೆ ಇದೇ ಕೊರೊನಾ ನೆಪದಲ್ಲಿ ಚಿಕಿತ್ಸೆ ಸಿಗದೇ ಬೇರೆ ರೋಗಿಗಳೂ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ​ಹುಬ್ಬಳ್ಳಿಯ ಕಿಮ್ಸ್‌ ಆಸ್ಪತ್ರೆಯಲ್ಲಿ ಏ. 3ರಂದು ಮೃತಪಟ್ಟ ಧಾರವಾಡದ 31 ವರ್ಷದ ಎಂಜಿನಿಯರ್‌ ರಾಜು ನಾಯ್ಕ್‌ ಸಾವು ಇದಕ್ಕೆ ಜ್ವಲಂತ ಸಾಕ್ಷಿ. ನ್ಯುಮೋನಿಯಾ, ಜಾಂಡೀಸ್‌ನಿಂದ ಬಳಲುತ್ತಿದ್ದ ರಾಜುಗೆ […]

Read More

ವೈದ್ಯರು ವಿವೇಚನೆ ಬಳಸಲಿ: ರೋಗಿಗಳ ಹಿತಚಿಂತನೆಯ ಆದ್ಯತೆ

ಕೊರೊನಾ ವೈರಸ್‌ ವಿರುದ್ಧದ ಯುದ್ಧದಲ್ಲಿ ವೈದ್ಯರೇ ಸೇನಾನಿಗಳು ಎಂಬುದು ರುಜುವಾತಾಗಿ ಹೋಗಿದೆ. ಕೋವಿಡ್‌ ಕಾಯಿಲೆಯ ಲಕ್ಷಣಗಳನ್ನು ಸಮರ್ಪಕವಾಗಿ ಗುರುತಿಸುವುದು, ಅಗತ್ಯ ಪ್ರತ್ಯೇಕ ನಿಗಾ ವ್ಯವಸ್ಥೆ ಮಾಡುವುದು, ರಾಷ್ಟ್ರೀಯ ವೈದ್ಯಕೀಯ ಸಂಸ್ಥೆ ನಿಗದಿಪಡಿಸಿದ ಮಾನದಂಡಗಳಿಗೆ ಅನುಗುಣವಾಗಿ ಚಿಕಿತ್ಸೆ ನೀಡುವುದು, ಸೋಂಕಿತರ ಜೊತೆ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಗುರುತಿಸಿ ಪರೀಕ್ಷೆಗೆ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನೆರವಾಗುವುದು- ಇವೆಲ್ಲವನ್ನೂ ವೈದ್ಯಕೀಯ ಸೇವೆಯಲ್ಲಿರುವವರು ಮಾಡಬೇಕಿದೆ. ಕೋವಿಡ್‌ ಚಿಕಿತ್ಸೆಗಾಗಿ ಸರಕಾರ ಪ್ರತ್ಯೇಕ ಕೇಂದ್ರಗಳನ್ನು ತೆರೆದಿದ್ದರೂ ಇಂಥ ತುರ್ತು ಸಂದರ್ಭಗಳಲ್ಲಿ ಖಾಸಗಿ ವೈದ್ಯಕೀಯ ಸೇವೆಯ ಮೇಲೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top