ಕರ್ನಾಟಕಕ್ಕೆ ರಾಷ್ಟ್ರೀಯ ತನಿಖಾ ದಳ ಯಾಕೆ ಬೇಕು?

ಕರ್ನಾಟಕಕ್ಕೆ ರಾಷ್ಟ್ರೀಯ ತನಿಖಾ ದಳ ಯಾಕೆ ಬೇಕು? ರಫೇಲ್ ಯುಧ್ದ ವಿಮಾನ ಸೇನಾ ಬತ್ತಳಿಕೆ ಸಂದರ್ಭದಲ್ಲಿ ತಿಳಿಯಲೇಬೇಕಾದ ವಿಚಾರ.. ಚೀನಾ ಕಿರಿಕಿರಿ ನಡುವೆ ಭಾರತಕ್ಕೆ ಜಪಾನ್ ಅಭಯ… ಒಮ್ಮೆ ಬಂದವರಿಗೂ ಕೊರೊನಾ ಮತ್ತೆ ಬರತ್ತಂತೆ! ಕೊರೊನಾದಿಂದ ಶಿಕ್ಷಕರ ಕಾಪಾಡಿ ಪ್ಲೀಸ್… ಓದುಗರಿಗೆ,ಪುಸ್ತಕ ಪ್ರಕಾಶಕರಿಗೆ ಸರಕಾರದ ಭರವಸೆ ಏನು?

Read More

ವಂಚಕ ಶಿಕ್ಷಕರ ವರ್ಗ ಜಾಲಕ್ಕೆ ಸಿಕ್ಕ ಟ್ರೀಟ್ ಮೆಂಟ್ ಏನು? ವಿದ್ಯಾಗಮ ಯೋಜನೆ ಏನಾಗತ್ತೆ? ಅಕ್ಟೋಬರದಿಂದ ಶಾಲಾ,ಕಾಲೇಜು ಶುರು ಆಗತ್ತ? ಕರ್ನಾಟಕದ ಉದ್ಯಮಸ್ನೇಹಿ Rankingನಲ್ಲಿ ಕುಸಿದುಹೋಗಿದ್ಯಾಕೆ? ಡ್ರಗ್ಸ್ ಹಾವಳಿ ಬಗ್ಗೆ ನಿಮಗೆಷ್ಟು ಗೊತ್ತು? ಕೇಂದ್ರ ರಾಜ್ಯದಲ್ಲಿ ಒಂದೇ ಸರಕಾರ ಇದ್ರೆ ಅಭಿವೃದ್ಧಿ ಸಲೀಸಾ?

Read More

ಕೊರೊನಾ ನಡುವೆ ಶಿಕ್ಷಕರ ಸ್ಫೂರ್ತಿಯ ಸೆಲೆ

ಕೊರೊನಾ ವಿರುದ್ಧದ ಹೋರಾಟದಲ್ಲಿ ಅನೇಕರು ಯೋಧರಂತೆ ಕೆಲಸ ಮಾಡುತ್ತಿದ್ದಾರೆ. ಅಂಥವರಲ್ಲಿ ವೈದ್ಯರು, ದಾದಿಯರು, ಪೊಲೀಸರು, ಪೌರಕಾರ್ಮಿಕರು ಹಾಗೂ ಶಿಕ್ಷಕರು ಮುಂಚೂಣಿಯಲ್ಲಿದ್ದಾರೆ. ಕೊರೊನಾ ಯೋಧರ ಸಾಲಿನಲ್ಲಿ ಬರುವ ಶಿಕ್ಷಕರು ಜೀವದ ಹಂಗು ತೊರೆದು ಹೇಗೆ ಕೆಲಸ ಮಾಡುತ್ತಿದ್ದಾರೆ? ಪ್ರತಿಕೂಲ ಪರಿಸ್ಥಿತಿಯಲ್ಲೂ ಹೇಗೆ ಕೆಲಸ ನಿರ್ವಹಿಸುತ್ತಿದ್ದಾರೆ? ಶಿಕ್ಷಕರ ಸ್ಫೂರ್ತಿದಾಯಕ ಮಾತುಗಳು ಇಲ್ಲಿವೆ. ಜಾಗೃತಿ ಮೂಡಿಸಿದ ‘ಉಷಾ’ ಲಾಕ್‌ಡೌನ್‌ ಸಮಯದಲ್ಲೂ ತಮ್ಮದೇ ಆದ ಸುರಕ್ಷಾ ಮಾರ್ಗಗಳ ಮೂಲಕ ಶಾಲೆಯ ಮಕ್ಕಳು ಆಟ ಪಾಠ ಕಲಿಕೆಯಿಂದ ವಂಚಿತರಾಗದಂತೆ ನೋಡಿಕೊಂಡಿದ್ದಾರೆ. ಕೊರೊನಾ ಕುರಿತು ಮಕ್ಕಳು […]

Read More

ಜೀವ ರಕ್ಷಕರಾದ ಶಿಕ್ಷಕರು

ಕೊರೊನಾ ಹೋರಾಟದಲ್ಲಿ ಹತ್ತಾರು ಹೊಣೆ | ರಾಜ್ಯದೆಲ್ಲೆಡೆ ಜಾಗೃತಿಯ ಜಾಗರಣೆ ಅಪಾಯವನ್ನೂ ಲೆಕ್ಕಿಸದೆ ದುಡಿಯುತ್ತಿರುವರನ್ನು ಸರಕಾರ ವಾರಿಯರ್ಸ್ ಆಗಿ ಪರಿಗಣಿಸಬೇಕಿದೆ. ವಿಕ ಸುದ್ದಿಲೋಕ ಬೆಂಗಳೂರು: ‘ಶಿಕ್ಷಕರಿಗೆ ವರ್ಷವಿಡೀ ರಜೆ, ಕೆಲಸವೂ ಕಡಿಮೆ, ಸಂಬಳಕ್ಕೆ ಮಾತ್ರ ತೊಂದರೆ ಇಲ್ಲ’ ಎಂದು ಕೊಂಕು ನುಡಿಯುವವರೇ ಹೆಚ್ಚು. ಆದರೆ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕ, ಶಿಕ್ಷಕಿಯರು ಸಂಕಷ್ಟ ಕಾಲದಲ್ಲಿ ಕೊರೊನಾ ವಾರಿಯರ್‌ಗಳಾಗಿ ಕೆಲಸ ಮಾಡುವ ಮೂಲಕ ಜೀವರಕ್ಷಣೆಯಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ವೈದ್ಯರು, ನರ್ಸ್‌ಗಳು, ಪೊಲೀಸರು, ಆಶಾ ಕಾರ್ಯಕರ್ತೆಯರಂತೆಯೇ […]

Read More

ತೆರೆದ ಶಾಲೆಗಳ ಪಾಠ

ಕೊರೊನಾ ವೈರಸ್ಸನ್ನು ಯಶಸ್ವಿಯಾಗಿ ನಿಯಂತ್ರಿಸಿರುವ ಹಲವು ದೇಶಗಳಲ್ಲಿ ಶಾಲೆಗಳನ್ನು ಆಗಲೇ ತೆರೆಯಲಾಗಿದೆ. ಆದರೆ ಬಹಳ ಮುನ್ನೆಚ್ಚರಿಕೆ, ಕಠಿಣ ಸುರಕ್ಷತಾ ಕ್ರಮಗಳೊಂದಿಗೆ ಇವನ್ನು ನಡೆಸಲಾಗುತ್ತಿದೆ. ಈ ದೇಶಗಳ ಶಾಲೆಗಳ ಮಾದರಿ ನಮಗೆ ಒಂದು ಪಾಠ ಆಗಬಹುದು. ಸಣ್ಣ ಮಕ್ಕಳಿಗೆ ಭೀತಿಯಿಲ್ಲ ಈ ಸೋಂಕಿಗೆ ಸಂಬಂಧಿಸಿದ ಒಂದು ವಿಚಿತ್ರ ಸಗತಿಯೆಂದರೆ, ಮಕ್ಕಳು ಸಣ್ಣವರಾಗಿದ್ದಷ್ಟೂ ಈ ವೈರಸ್‌ ಬಾಧಿಸುವ ಸಾಧ್ಯತೆ ಕಡಿಮೆ. ಅಂದರೆ ಹೈಸ್ಕೂಲ್‌ ಮಕ್ಕಳನ್ನು ಬಾಧಿಸುವ ಪ್ರಮಾಣದಲ್ಲಿ ಪ್ರಾಥಮಿಕ ಶಾಲಾ ವಯೋಮಾನದ ಮಕ್ಕಳನ್ನು ಈ ವೈರಸ್‌ ಸೋಂಕುವುದೇ ಇಲ್ಲ; ಅಥವಾ […]

Read More

ಆನ್‌ಲೈನ್‌ ಕ್ಲಾಸ್‌ಗೆ ಸವಾಲುಗಳು : ಉಳ್ಳವರ – ಇಲ್ಲದವರ ಅಂತರ ಹೆಚ್ಚಾಗದಿರಲಿ

ಖಾಸಗಿ ಶಾಲೆಗಳು ಎಲ್‌ಕೆಜಿಯಿಂದ ಹತ್ತನೇ ತರಗತಿಯವರೆಗೆ ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸುವುದಕ್ಕೆ ಸರಕಾರ ವಿಧಿಸಿರುವ ನಿರ್ಬಂಧಕ್ಕೆ ಹೈಕೋರ್ಟ್‌ ತಡೆಯಾಜ್ಞೆ ನೀಡಿದೆ. ‘ಇದು ಸಂವಿಧಾನದ 21 ಹಾಗೂ 21ಎ ವಿಧಿಯಯನ್ವಯ ಪ್ರಜೆಗಳಿಗೆ ದತ್ತವಾಗಿರುವ ಬದುಕಿನ ಹಾಗೂ ಶಿಕ್ಷಣದ ಹಕ್ಕನ್ನು ನಿರಾಕರಿಸಿದಂತಾಗಿದೆ’ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ. ಇದರಿಂದ, ಆನ್‌ಲೈನ್‌ ಕ್ಲಾಸ್‌ಗಳನ್ನು ನಡೆಸಲು ಮುಂದಾಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಮುಕ್ತ ರಹದಾರಿ ದೊರೆತಂತಾಗಿದೆ. ಆದರೆ ಈ ಆದೇಶ, ಆನ್‌ಲೈನ್‌ ಶಿಕ್ಷಣದ ಹೆಸರಿನಲ್ಲಿ ಶುಲ್ಕ ವಸೂಲಿ ಮಾಡಲು ಅಥವಾ ಆನ್‌ಲೈನ್‌ ಕ್ಲಾಸುಗಳನ್ನು ಕಡ್ಡಾಯ ಮಾಡಲು […]

Read More

ಎಸ್ಎಸ್ಎಲ್‌ಸಿ ಪರೀಕ್ಷೆ ಪೂರ್ಣ ಸಕ್ಸೆಸ್

– ಕೋವಿಡ್ ಆತಂಕದ ನಡುವೆಯೂ ಶೇ.90ರಷ್ಟು ವಿದ್ಯಾರ್ಥಿಗಳು ಹಾಜರು. ವಿಕ ಸುದ್ದಿಲೋಕ ಬೆಂಗಳೂರು. ಕೋವಿಡ್-19ನಿಂದಾಗಿ ತೀವ್ರ ಆತಂಕದೊಂದಿಗೆ ಜೂ.25ರಿಂದ ಆರಂಭವಾಗಿದ್ದ 2019-20ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಾವುದೇ ಅಹಿತಕರ ಘಟನೆಗಳಿಲ್ಲದೆ ಪೂರ್ಣಗೊಂಡಿತು. ಶುಕ್ರವಾರ ನಡೆದ ತೃತೀಯ ಭಾಷಾ ವಿಷಯಗಳ ಪರೀಕ್ಷೆಗೆ ಶೇ.98.10ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ‘‘ಕೊರೊನಾ ವೈರಸ್ ವ್ಯಾಪಿಸುತ್ತಿರುವ ಸಂದರ್ಭದಲ್ಲಿ ಪರೀಕ್ಷೆ ನಡೆಸುವುದು ಸವಾಲಾಗಿತ್ತು. ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಪುದುಚೆರಿ, ಮಹಾರಾಷ್ಟ್ರಗಳಲ್ಲಿ ಅಲ್ಲಿನ ಸರಕಾರಗಳು ಪರೀಕ್ಷೆ ಮುಂದೂಡಿವೆ. ಆದರೆ, ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾವು ನಡೆಸಿದ ಪ್ರಯತ್ನ […]

Read More

ಅಬ್ಬಾ… ಸಸ್ಪೆಂಡ್‌ ಅಂದ್ರೆ ಹಬ್ಬ!

– ವರ್ಗಾವಣೆ ತಪ್ಪಿಸಿಕೊಳ್ಳಲು ಶಾಲಾ ಶಿಕ್ಷಕರ ಹೊಸ ಸಿಲೆಬಸ್‌ – ಆರ್‌.ಶ್ರೀಧರ್‌ ರಾಮನಗರ. ಹೊಸದಾಗಿ ನಿಯೋಜನೆಗೊಂಡ ಶಾಲೆಯಲ್ಲಿ ಉದ್ದೇಶಪೂರ್ವಕವಾಗಿಯೇ ತಪ್ಪು ಮಾಡುವುದು. ಆ ಮೂಲಕ ಸಸ್ಪೆಂಡ್‌ ಆಗುವುದು. ಇಲಾಖಾ ತನಿಖೆಯಲ್ಲಿ ನಿರ್ದೋಷಿ ಎಂದು ಸಾಬೀತುಪಡಿಸಿ ತಾವು ಕೆಲಸ ಮಾಡುತ್ತಿದ್ದ ಹಳೆಯ ಶಾಲೆಯಲ್ಲೇ ಮರು ನಿಯೋಜನೆಗೊಳ್ಳುವುದು…! ಹೇಗೆ ಪ್ಲ್ಯಾನ್‌? ಹೌದು, ಕೆಲವು ಶಿಕ್ಷಕರು ವರ್ಗಾವಣೆಯಿಂದ ತಪ್ಪಿಸಿಕೊಳ್ಳಲು ಇಂಥದೊಂದು ಹೊಸ ಮಾರ್ಗವನ್ನು ಕಂಡುಕೊಂಡಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಈ ರೀತಿಯ ಪ್ರಕರಣಗಳು ವರದಿಯಾಗುತ್ತಿವೆ. ಈ ಜಿಲ್ಲೆಯೊಂದರಲ್ಲೇ ಆಗಿರುವ 105 ಶಿಕ್ಷಕರ ಅಮಾನತು […]

Read More

ಮೊದಲ ದಿನ ನಿರಾಳ – ಎಸ್ಸೆಸ್ಸೆಲ್ಸಿ ಪರೀಕ್ಷೆ ಶುಭಾರಂಭ | 98.3% ವಿದ್ಯಾರ್ಥಿಗಳು ಹಾಜರು

ವಿಕ ಸುದ್ದಿಲೋಕ ಬೆಂಗಳೂರು.  ಕೊರೊನಾ ಆತಂಕದ ನಡುವೆ ರಾಜ್ಯಾದ್ಯಂತ ಎಸ್ಸೆಸ್ಸೆಲ್ಸಿ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ಕನ್ನಡ ಪರೀಕ್ಷೆಗಳು ಗುರುವಾರ ಯಶಸ್ವಿಯಾಗಿ ನಡೆದಿದ್ದು, ಶೇ.98.3ರಷ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶಿಕ್ಷಣ ಸಚಿವ ಸುರೇಶ್ ಕುಮಾರ್, ಶಿಕ್ಷಣ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ, ಪೊಲೀಸರು, ಶಿಕ್ಷಕರು, ಪೋಷಕರು ಮತ್ತು ಸಾರ್ವಜನಿಕರು ಎಲ್ಲರೂ ಸೇರಿ ದೇಶಾದ್ಯಂತ ಕುತೂಹಲ ಕೆರಳಿಸಿದ್ದ, ವ್ಯಾಪಕ ಚರ್ಚೆಗೆ ಗುರಿಯಾಗಿದ್ದ ಪರೀಕ್ಷೆಯನ್ನು ಯಾವುದೇ ದೊಡ್ಡ ಸಮಸ್ಯೆಗಳಿಲ್ಲದೆ ನಡೆಸುವಲ್ಲಿ ಯಶಸ್ವಿಯಾದರು. ರಾಜ್ಯಾದ್ಯಂತ ಒಟ್ಟು 2879 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಜರುಗಿತು. […]

Read More

ಇಂದಿನಿಂದ ಎಸ್ಸೆಸ್ಸೆಲ್ಸಿ ಅಗ್ನಿಪರೀಕ್ಷೆ – ಸಂಕಷ್ಟ ಕಾಲದ ಪರೀಕ್ಷೆಗೆ ಸಕಲ ಕ್ರಮ – ವಿದ್ಯಾರ್ಥಿಗಳಿಗೆ ಶುಭಾಶಯ

ವಿಕ ಸುಕದ್ದಿಲೋಕ ಬೆಂಗಳೂರು. ಕೋವಿಡ್-19 ಆತಂಕದ ನಡುವೆ ಗುರುವಾರದಿಂದ ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಪ್ರಾರಂಭವಾಗುತ್ತಿವೆ. ಪರೀಕ್ಷೆಯ ಸುರಕ್ಷತೆ ವಿಚಾರವಾಗಿ ಮೊದಲಿದ್ದ ಆತಂಕ ದೂರವಾಗಿದೆ. ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಎದುರಿಸಲು ಸಜ್ಜಾಗಿರುವುದು ಎಲ್ಲೆಡೆ ಕಂಡು ಬಂದಿದೆ. ಪೋಷಕರು, ಶಿಕ್ಷಕರು, ಗಣ್ಯರು ಹಾಗೂ ಊರಿನ ಜನರು ವಿದ್ಯಾರ್ಥಿಗಳ ಬೆನ್ನಿಗೆ ನಿಂತು ನಿರ್ಭಯವಾಗಿ ಪರೀಕ್ಷೆ ಬರೆಯುವಂತೆ ಪ್ರೇರೇಪಿಸುತ್ತಿದ್ದಾರೆ. ಎಲ್ಲೆಡೆ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ, ಸ್ಯಾನಿಟೈಸೇಷನ್ ಸೇರದಂತೆ ಸಕಲ ಸುರಕ್ಷತಾ ಕ್ರಮಗಳೊಂದಿಗೆ ಸಿದ್ಧತೆಗಳನ್ನು ನಡೆಸಲಾಗಿದೆ. ಕೆಲವೆಡೆ ಶಾಲೆಗಳು ತಳಿರು-ತೋರಣಗಳಿಂದ ವಿದ್ಯಾರ್ಥಿಗಳನ್ನು ಸ್ವಾಗತಿಸಲು […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top