ಅಂಚೆ ಮತದಾನ ಜನತಂತ್ರ ವಿರೋಧಿ

– ಕೆ.ದಿವಾಕರ್‌.  ಚುನಾವಣೆಗಳು ಭಾರತದ ಜನತಂತ್ರವನ್ನು ಶಕ್ತಿಶಾಲಿಯಾಗಿ ಇಟ್ಟಿರುವ ಒಂದು ಪ್ರಮುಖ ಪ್ರಕ್ರಿಯೆ. ಒಬ್ಬನಿಗೆ ಒಂದೇ ಓಟು, ಎಲ್ಲರಿಗೂ ಅದರ ಹಕ್ಕು ಎಂಬುದು ಕೂಡಾ ಶಕ್ತಿಶಾಲಿಯಾಗಿರುವ ಆದರ್ಶ. ಎಲ್ಲ ದೋಷಗಳ ನಡುವೆಯೂ ಇದೊಂದು ಜನರ ಕೈಯಲ್ಲಿರುವ ಆಯುಧ. ಜನಸಂಖ್ಯೆಯ ಎಲ್ಲ ಜಾತಿ, ಪಂಥ, ಧರ್ಮ, ವಿದ್ಯಾವಂತರು, ನಿರಕ್ಷರಿಗಳೂ ಒಂದು ಪ್ರಜಾತಂತ್ರದ ಹಬ್ಬದಲ್ಲಿ ಸಂಭ್ರಮದಿಂದ ಭಾಗವಹಿಸುತ್ತಿರುವುದು, ಅವಿದ್ಯಾವಂತರು ಹಾಗೂ ಗ್ರಾಮೀಣ ಪ್ರದೇಶದ ಜನ ನಗರದ ಮತದಾರರಿಗಿಂತ ಹೆಚ್ಚು ಸಂಖ್ಯೆಯಲ್ಲಿ ಮತದಾನದಲ್ಲಿ ಭಾಗವಹಿಸುವ ಪ್ರಕ್ರಿಯೆಗೆ ಭಾರತದಲ್ಲಿ ಬಿಬಿಸಿಯ ಪ್ರತಿನಿಧಿಯಾಗಿದ್ದ ಖ್ಯಾತ […]

Read More

ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಗಮವಾಗಲಿ – ಆತಂಕರಹಿತ ಸುರಕ್ಷತೆಯೇ ಆದ್ಯತೆ

ಶೈಕ್ಷಣಿಕ ಜೀವನದ ಅತಿ ಮಹತ್ವದ ಘಟ್ಟವಾದ ಎಸ್ಸೆಸ್ಸೆಲ್ಸಿ ಪರೀಕ್ಷೆ ನಾಳೆಯಿಂದ ಕಟ್ಟೆಚ್ಚರದ ನಡುವೆ ಆರಂಭಗೊಳ್ಳಲಿದೆ. ಸಾಮಾನ್ಯ ಪರಿಸ್ಥಿತಿಯಲ್ಲಿಯೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಈ ವಾತಾವರಣದಲ್ಲಿ ಒಂದು ಬಗೆಯ ಉದ್ವಿಗ್ನತೆ ನಿರ್ಮಿಸುತ್ತವೆ. ಈಗಂತೂ ಕೊರೊನಾ ಕಾಲಘಟ್ಟದಲ್ಲಿ ಅದು ನಡೆಯುತ್ತಿರುವುದರಿಂದ, ಅದಕ್ಕೆ ಇನ್ನಷ್ಟು ಆತಂಕದ ಅವರಣ ನಿರ್ಮಾಣವಾಗಿದೆ. ಜೂನ್‌ 25ರಂದು ಪರೀಕ್ಷೆ ನಡೆಯಲಿ ಎಂದು ಸರಕಾರ ಹಾಗೂ ತಜ್ಞರು ತೀರ್ಮಾನಿಸುವಾಗ, ಕೊರೊನಾ ಕೇಸುಗಳು ಇಷ್ಟೊಂದು ಪ್ರಮಾಣದಲ್ಲಿ ವೃದ್ಧಿಯಾಗುತ್ತವೆ ಎಂಬ ನಿರೀಕ್ಷೆಯಿರಲಿಲ್ಲ. ಆದರೆ ಕಳೆದ ಒಂದು ವಾರದಿಂದ ಸೋಂಕು ಹಾಗೂ ಮರಣ ಪ್ರಮಾಣ […]

Read More

ಭೂಸುಧಾರಣೆ 2.0 ಶೀಘ್ರ

– ಮುದ್ರಾಂಕ ಶುಲ್ಕ ವಿನಾಯಿತಿ | ಅಕ್ರಮ ಸಕ್ರಮಕ್ಕೆ ಹೊಸ ಕಾಯಿದೆ ವಿಕ ಸುದ್ದಿಲೋಕ, ಬೆಂಗಳೂರು ಕೃಷಿಕರಲ್ಲದವರೂ ಕೃಷಿ ಭೂಮಿ ಖರೀದಿಸಲು ಅವಕಾಶ ಮಾಡಿಕೊಡುವ ಭೂಸುಧಾರಣಾ ಕಾಯಿದೆ ತಿದ್ದುಪಡಿಯ ದಿಟ್ಟ ಹೆಜ್ಜೆ ಇಟ್ಟ ರಾಜ್ಯ ಸರಕಾರ ಇದೀಗ 2ನೇ ಹಂತದ ಭೂಸುಧಾರಣೆಗೆ ಸಿದ್ಧವಾಗಿದೆ. ನೋಂದಣಿ ಶುಲ್ಕದಲ್ಲಿ ವಿನಾಯಿತಿ, ಭೂ ಖರೀದಿ ನಿಯಮ ಸರಳೀಕರಣ ಸೇರಿದಂತೆ ಮಹತ್ವದ ತೀರ್ಮಾನಗಳು ಜಾರಿಯಾಗಲಿವೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ. ಕೊರೊನಾ ಕಾಲಘಟ್ಟದಲ್ಲಿ ರಾಜ್ಯದ ಆರ್ಥಿಕತೆ, ವ್ಯವಹಾರ ಮತ್ತು ಜನಜೀವನದ […]

Read More

ಎಸ್ಸೆಸ್ಸೆಲ್ಸಿಗೂ ಮಾದರಿ – ಯಶಸ್ವಿಯಾದ ಪಿಯುಸಿ ಪರೀಕ್ಷೆ

ರಾಜ್ಯಾದ್ಯಂತ ದ್ವಿತೀಯ ಪಿಯುಸಿ ಇಂಗ್ಲಿಷ್‌ ಪರೀಕ್ಷೆ ಯಾವುದೇ ಆತಂಕವಿಲ್ಲದೆ, ಸುಸಜ್ಜಿತವಾಗಿ ಹಾಗೂ ಅಹಿತಕರ ಘಟನೆಗಳಿಲ್ಲದೆ ನೆರವೇರಿದೆ. ಪರೀಕ್ಷಾ ಕೇಂದ್ರಗಳ ಒಳಗೆ ಮತ್ತು ಹೊರಗೆ ಸಾಮಾಜಿಕ ಅಂತರ, ಆರೋಗ್ಯ ನಿಗಾಕ್ಕೆ ವ್ಯವಸ್ಥೆ, ಪರೀಕ್ಷಾ ಕೇಂದ್ರದ ಗೇಟ್‌ಗಳ ಬಳಿಯೇ ವಿದ್ಯಾರ್ಥಿಗಳಿಗೆ ದೇಹದ ಉಷ್ಣಾಂಶ ಪರೀಕ್ಷೆ, ಸ್ಯಾನಿಟೈಸರ್‌ನಿಂದ ಸ್ವಚ್ಛತೆ, ಪ್ರತಿ ವಿದ್ಯಾರ್ಥಿಗೂ ಮಾಸ್ಕ್‌ ಕಡ್ಡಾಯ, ಎಲ್ಲಾ ಕೊಠಡಿಗಳು ಮತ್ತು ಪೀಠೋಪಕರಣಗಳ ಸಂಪೂರ್ಣ ಸ್ಯಾನಿಟೈಸೇಷನ್‌, ಕಂಟೈನ್ಮೆಂಟ್‌ ವಲಯದವರಿಗೆ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ ಬರೆಯಲು ಅವಕಾಶ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳಿದ್ದವರಿಗೂ ಪ್ರತ್ಯೇಕ ಕೊಠಡಿಯಲ್ಲಿ ಪರೀಕ್ಷೆ […]

Read More

ಆರ್ಥಿಕತೆಯ ಹೊಸ ಗಾಳಿ ಕೇಂದ್ರ- ರಾಜ್ಯಗಳ ಸಮಗ್ರ ಸಹಕಾರ

ಮುಂದಿನ ದಿನಗಳಲ್ಲಿ ಆರ್ಥಿಕತೆಯ ಉತ್ತೇಜನಕ್ಕೆ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಕಿವಿಮಾತು ಹೇಳಿದ್ದಾರೆ. ದೇಶದಲ್ಲಿನ ಕೋವಿಡ್‌-19 ಪರಿಸ್ಥಿತಿ, ಅನ್‌ಲಾಕ್‌ 1.0 ಜಾರಿಯ ಪರಿಣಾಮ, ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚಿಸಲು 15 ರಾಜ್ಯಗಳ ಸಿಎಂಗಳೊಂದಿಗೆ ಬುಧವಾರ ನಡೆಸಿದ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಅವರು ಹಲವು ಸಲಹೆಗಳನ್ನು ನೀಡಿದ್ದಾರೆ. ಕೋವಿಡ್‌ ಸಂದರ್ಭ ಬಳಸಿಕೊಂಡು ಆರೋಗ್ಯ ಸೇವೆಗಳ ವಿಸ್ತರಣೆಗೆ ನಾವು ಒತ್ತು ನೀಡಬೇಕೆಂಬ ಆಶಯವನ್ನೂ ಅವರು ಪ್ರತಿಪಾದಿಸಿದ್ದಾರೆ. ಮತ್ತೊಮ್ಮೆ ಲಾಕ್‌ಡೌನ್‌ ಮಾಡಲಾಗುವುದಿಲ್ಲ […]

Read More

ಕನ್ನಡ ಭಾಷೆಯ ಕಲಿಕೆ ಕಡ್ಡಾಯ – ಅನುಷ್ಠಾನದ ಇಚ್ಛಾಶಕ್ತಿ ಕನ್ನಡಿಗರಿಗೆ ಇರಲಿ

ರಾಜ್ಯದಲ್ಲಿ ಶಿಕ್ಷಣ ನೀಡುವ ಎಲ್ಲ ಶಾಲೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬ ಒಂದು ಕನಸು ಈಗಾಗಲೇ ಕುಸಿದುಬಿದ್ದಿದೆ. ಸುಪ್ರೀಂ ಕೋರ್ಟ್‌ ಕೂಡ, ಶಿಕ್ಷಣ ಮಾಧ್ಯಮದ ಆಯ್ಕೆ ಹೆತ್ತವರಿಗೆ ಬಿಟ್ಟದ್ದು ಎಂದು ಹೇಳುವ ಮೂಲಕ ಇದಕ್ಕೆ ತೆರೆ ಎಳೆದಿತ್ತು. ಆದರೆ, ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಪ್ರತಿಯೊಂದು ಶಾಲೆಯೂ ಸ್ಥಳೀಯ ಭಾಷೆಯಾದ ಕನ್ನಡವನ್ನು ಒಂದು ಭಾಷೆಯಾಗಿ ಕಡ್ಡಾಯವಾಗಿ ಕಲಿಸಬೇಕು ಎಂಬುದನ್ನಾದರೂ ಆಗ್ರಹಪೂರ್ವಕವಾಗಿ ಸ್ಥಾಪಿಸುವ ಹಕ್ಕು ಕನ್ನಡಿಗರಿಗೆ ಇದೆ. ಇದೇ ಹಿನ್ನೆಲೆಯಲ್ಲಿ, 2026-27ನೇ ಸಾಲಿನ ಹೊತ್ತಿಗೆ ರಾಜ್ಯದ ಎಲ್ಲಾ ಶಾಲೆಗಳು […]

Read More

ಈಡೇರಿದ ದಶಕಗಳ ಕನಸು – ಅಯೋಧ್ಯೆಯಲ್ಲಿಂದು ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ

ಕೋಟ್ಯಂತರ ಭಕ್ತರ ಹಲವು ವರ್ಷಗಳ ಕನಸು ಈಡೇರುವ ಗಳಿಗೆ ಹತ್ತಿರವಾಗಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಬುಧವಾರ(ಜೂ.10)ರಂದು ಶಿಲಾನ್ಯಾಸ ನಡೆಯಲಿದೆ. ರಾಮಜನ್ಮಭೂಮಿ ವ್ಯಾಪ್ತಿಯಲ್ಲೇ ಇರುವ ‘ಕುಬೇರ ತಿಲ’ ಮಂದಿರದಲ್ಲಿ ಶಿವನಿಗೆ ರುದ್ರಾಭಿಷೇಕ ಮಾಡುವುದರೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿವೆ. ‘‘ಲಂಕಾ ಮೇಲಿನ ದಾಳಿಗೂ ಮುನ್ನ ಶ್ರೀರಾಮಚಂದ್ರನು ಶಿವನನ್ನು ಪ್ರಾರ್ಥಿಸಿದ್ದ. ಅದೇ ಸಂಪ್ರದಾಯವನ್ನು ಈಗ ಪಾಲಿಸುತ್ತಿದ್ದೇವೆ. ರುದ್ರಾಭಿಷೇಕದ ಬಳಿಕವೇ ರಾಮ ಮಂದಿರ ಶಿಲಾನ್ಯಾಸದ ಕಾರ್ಯಕ್ರಮಗಳು ಆರಂಭವಾಗಲಿವೆ,’’ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಕ್ತಾರರಾದ ಮಹಾಂತ ಕಮಲನಯನ ದಾಸ್ […]

Read More

ಇಎಂಐ ವಿನಾಯಿತಿ ಅಲ್ಲ – ಗ್ರಾಹಕನಿಗೆ ಇನ್ನಷ್ಟು ಹಣಕಾಸಿನ ಹೊರೆ

ಸಾಲ ಮರುಪಾವತಿಯ ಅವಧಿ ಮುಂದೂಡಿಕೆಗೆ ಅವಕಾಶ ನೀಡಿರುವ ಆರ್‌ಬಿಐ, ಈ ಅವಧಿಯ ಬಡ್ಡಿ ಮನ್ನಾ ಮಾಡದಿರುವುದಕ್ಕೆ ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಾಲದ ಇಎಂಐ ಕಟ್ಟಲು ಅವಧಿಯನ್ನು ಮಾರ್ಚ್‌ನಿಂದ ಆಗಸ್ಟ್‌ವರೆಗೆ, ಆರು ತಿಂಗಳ ಕಾಲ ಮುಂದೂಡಿದೆ. ಆದರೆ ಇದೇ ಅವಧಿಯಲ್ಲಿ ಸಾಲಕ್ಕೆ ಬಡ್ಡಿ ಸಂಗ್ರಹಿಸಲು ಬ್ಯಾಂಕ್‌ಗಳಿಗೆ ಅವಕಾಶ ನೀಡಿದೆ. ಇದು ಅನಿವಾರ್ಯ ಎಂದು ಕೋರ್ಟ್‌ಗೆ ನೀಡಿದ ವಿವರಣೆಯಲ್ಲಿ ಆರ್‌ಬಿಐ  ಹೇಳಿದೆ. ಆರ್‌ಬಿಐ ನೀಡಿರುವ ಈ ಸೌಲಭ್ಯವೇ ಒಂದು ಬಗೆಯಲ್ಲಿ ವಿಚಿತ್ರ. ಇದನ್ನು ಒಂದೇ ಮಾತಿನಲ್ಲಿ […]

Read More

ನೀಟ್ ಪರೀಕ್ಷೆ ಸರ್ವಮಾನ್ಯ – ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಿಗೂ ಅನ್ವಯ

ದೇಶಾದ್ಯಂತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶಾವಕಾಶ ಕಲ್ಪಿಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್) ಅಲ್ಪ ಸಂಖ್ಯಾತ, ಖಾಸಗಿ ಶಾಲೆಗಳಿಗೆ ಸೇರಿದಂತೆ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಅನ್ವಯಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಅಂತಿಮ ಶರಾ ಬರೆದಿದೆ. ಇದರೊಂದಿಗೆ ಹಲವು ವರ್ಷಗಳಿಂದ ಈ ನಿಟ್ಟಿನಲ್ಲಿ ನಡೆದುಕೊಂಡು ಬಂದಿದ್ದ ತಾರತಮ್ಯಕ್ಕೆ ಮಂಗಳ ಹಾಡಿದಂತಾಗಿದೆ. ಇನ್ನು ಮುಂದೆ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು, ಖಾಸಗಿ ಕಾಲೇಜುಗಳು ಮತ್ತು ಡೀಮ್ಡ್ ವಿವಿಗಳು ಸೇರಿದಂತೆ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲೂ ಪದವಿ ಮತ್ತು ಸ್ನಾತಕೋತ್ತರ […]

Read More

ಗೊಗೊಯಿ ನೇಮಕ ತಾಂತ್ರಿಕವಾಗಿ ಸರಿ, ನೈತಿಕವಾಗಿ?

ಗೊಗೊಯಿ ನೇಮಕ ತಾಂತ್ರಿಕವಾಗಿ ಸರಿ, ನೈತಿಕವಾಗಿ? ಇಂಥ ನೇಮಕಗಳನ್ನು ಹಿಂದೆ ಸ್ವತಃ ಗೊಗೊಯಿ ವಿರೋಧಿಸಿದ್ದರು/ ಲೈಂಗಿಕ ದೌರ್ಜನ್ಯ ಆರೋಪವೂ ಅವರ ಮೇಲಿದೆ – ಹರಿಪ್ರಕಾಶ್‌ ಕೋಣೆಮನೆ ಸುಪ್ರೀಂ ಕೋರ್ಟಿನ ಮಾಜಿ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ರಾಜ್ಯಸಭೆಗೆ ನಾಮ ನಿರ್ದೇಶನಗೊಂಡ ಬಳಿಕ ಇದೇ ಮೊದಲ ಬಾರಿಗೆ ಪರ-ವಿರೋಧದ ದೊಡ್ಡ ಚರ್ಚೆಯೇ ನಡೆಯುತ್ತಿದೆ. ಐತಿಹಾಸಿಕ ಎಂಬಂತೆ ಗೊಗೊಯಿ ಪ್ರಮಾಣ ವಚನದ ವೇಳೆ ರಾಜ್ಯಸಭೆಯಲ್ಲಿ ಕಾಂಗ್ರೆಸ್‌ ಸಭಾತ್ಯಾಗ ಮಾಡಿ ಪ್ರತಿಭಟಿಸಿದೆ. ಈ ಹಿಂದೆಯೂ ಯುಪಿಎ ಸರಕಾರದ ಅವಧಿಯಲ್ಲೂ ಸುಪ್ರೀಂ ಕೋರ್ಟಿನ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top