ಆತ್ಮವಿಶ್ವಾಸ ಹೆಚ್ಚಿಸಿದ ರಫೇಲ್‌ – ಪರಿಣಾಮಕಾರಿ ತರಬೇತಿ, ದೇಶಿ ನಿರ್ಮಾಣ ನಡೆಯಲಿ

ಫ್ರಾನ್ಸ್‌ನಿಂದ ಐದು ರಫೇಲ್‌ ಯುದ್ಧವಿಮಾನಗಳು ಭಾರತಕ್ಕೆ ಆಗಮಿಸಿದ್ದು, ಅಂಬಾಲ ವಾಯುನೆಲೆಯಲ್ಲಿ ಇಳಿದಿವೆ. ಕಳೆದ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ರಫೇಲ್‌ ಖರೀದಿಯ ಬಗ್ಗೆ ಹೆಚ್ಚು ಚರ್ಚೆಯಾಗಿತ್ತು. ರಫೇಲ್‌ನಂಥ ಯುದ್ಧವಿಮಾನಗಳ ಖರೀದಿ ಹೊಸದಲ್ಲ, ಅಂಥ ವಿಚಾರಗಳು ಜನಸಾಮಾನ್ಯರ ನೆಲೆಯಲ್ಲಿ ಹೆಚ್ಚು ಚರ್ಚೆಯಾಗುವುದಿಲ್ಲವಾದರೂ, ರಫೇಲ್‌ ಫೈಟರ್‌ಜೆಟ್‌ಗಳ ವಿಚಾರದಲ್ಲಿ ಹಾಗಾಗಿಲ್ಲ. ದೇಶದ ಜನತೆ ಕುತೂಹಲದಿಂದ ಇವುಗಳನ್ನು ನೋಡಿದ್ದಾರೆ. ಇವುಗಳ ಬಗ್ಗೆ ಸಾಕಷ್ಟು ಉತ್ಪ್ರೇಕ್ಷೆಯೂ ಹಬ್ಬಿದೆ; ಹಾಗೇ ಉಡಾಫೆಯೂ ಕೆಲವು ವಲಯದಲ್ಲಿ ಇದೆ. ಈ ಎರಡೂ ವೈಖರಿಗಳನ್ನು ಕೈಬಿಟ್ಟು ವಸ್ತುನಿಷ್ಠವಾಗಿ ಈ ವಿಚಾರವನ್ನು ನೋಡುವುದು […]

Read More

ಸಮರ ವೀರನ ಆಗಮನ, ವಾಯುಪಡೆಗೆ ಭೀಮ ಬಲ

– ಮೊದಲ ಕಂತಿನ ಐದು ರಫೇಲ್ ಜೆಟ್ ಭಾರತದ ತೆಕ್ಕೆಗೆ – ತಂಟೆಕೋರ ಚೀನಾ-ಪಾಕ್ ಜೋಡಿ ಎದೆಯಲ್ಲಿ ನಡುಕ. ಹೊಸದಿಲ್ಲಿ/ಅಂಬಾಲಾ: ಭಾರತೀಯ ರಕ್ಷಣಾ ಸಾಮರ್ಥ್ಯವನ್ನು ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಮಟ್ಟಕ್ಕೆ ಎತ್ತರಿಸಬಲ್ಲ ಯುದ್ಧ ‘ವಿಮಾನಗಳ ರಾಜ’ ರಫೇಲ್ 5 ಜೆಟ್‌ಗಳು ಬುಧವಾರ ಮಧ್ಯಾಹ್ನ ಹರಿಯಾಣದ ಅಂಬಾಲಾ ವಾಯುನೆಲೆಗೆ ಬಂದಿಳಿದಿವೆ. ಒಟ್ಟು 36ರ ಪೈಕಿ ಮೊದಲ ಬ್ಯಾಚ್‌ನ 5 ಯುದ್ಧ ವಿಮಾನಗಳನ್ನು ಫ್ರಾನ್ಸ್ ಸರಕಾರ ಒಪ್ಪಿಸಿದೆ. ಸೋಮವಾರ ಫ್ರಾನ್ಸ್‌ನಿಂದ ಹಾರಿದ್ದ 5 ರಫೇಲ್ ಜೆಟ್‌ಗಳ ಪೈಕಿ ಮೂರು ಸಿಂಗಲ್ […]

Read More

ರಫೇಲ್ ಬಲ

ಫ್ರಾನ್ಸ್‌ನಿಂದ ಹೊರಟಿರುವ ರಫೇಲ್ ಯುದ್ಧವಿಮಾನಗಳು ಯುಎಇನಲ್ಲಿ ಸಿಂಗಲ್ ಸ್ಟಾಪ್ ನೀಡಿ, ಬುಧವಾರ ಭಾರತಕ್ಕೆ ತಲುಪಲಿವೆ. ರಫೇಲ್ ಫೈಟರ್‌ ಜೆಟ್‌ಗಳ ಫುಲ್ ಡಿಟೇಲ್ಸ್ ಇಲ್ಲಿದೆ. ಬಹುದಿನಗಳ ಕನಸು ನನಸಾಗುವ ಕ್ಷಣ ಹತ್ತಿರವಾಗಿದೆ. ಭಾರತೀಯ ವಾಯು ಪಡೆಗೆ ‘ಪವನಶಕ್ತಿ’ ನೀಡಲಿರುವ, ಅತ್ಯಾಧುನಿಕ ‘ರಫೇಲ್ ಯುದ್ಧವಿಮಾನ’ಗಳು ಬುಧವಾರ(ಜು.29) ಭಾರತಕ್ಕೆ ಬರಲಿವೆ. ವಿಶೇಷ ಎಂದರೆ, ಈ ರಫೇಲ್‌ಗಳನ್ನು ಲಡಾಕ್ ಸೆಕ್ಟರ್‌ನಲ್ಲಿ ನಿಯೋಜನೆ ಮಾಡಲು ಯೋಜಿಸಲಾಗಿದೆ! ಎಲ್ಎಸಿ(ವಾಸ್ತವಿಕ ಗಡಿ ರೇಖೆ)ಗೆ ಸಂಬಂಧಿಸಿದಂತೆ ಭಾರತ ಮತ್ತು ಚೀನಾ ಮಧ್ಯೆ ಸಂಘರ್ಷ ಏರ್ಪಟ್ಟಿದ್ದು, ಇಂಥ ಹೊತ್ತಿನಲ್ಲಿ ರಫೇಲ್‌ಗಳು […]

Read More

‘ಪಂಚಶೀಲ’ ಚೌ ಎನ್‌-ಲೇಗೆ ತಮಾಷೆಯೆನಿಸಿತ್ತು

– ನಿರಂಜನ ಸಂಗ್ರಹ ನಿರೂಪಣೆ: ಸುಧೀಂದ್ರ ನಿರೂಪಣೆ 1949ರ ಅಕ್ಟೋಬರ್‌ ತಿಂಗಳಲ್ಲಿ ಮೊದಲ ಬಾರಿ ಅಮೆರಿಕದ ಸಂಯುಕ್ತ ಸಂಸ್ಥಾನಗಳಿಗೆ ಭೇಟಿ ಕೊಟ್ಟಾಗ ಭಾರತ ಪ್ರಧಾನಿ ಜವಾಹರಲಾಲ ನೆಹರೂ ಅವರು ಆಡಿದ ಮಾತು.  ‘‘ನಮಗೆ ಇಷ್ಟವಿರಲಿ, ಇಲ್ಲದೇ ಹೋಗಲಿ, ಪ್ರತ್ಯೇಕತೆಯಲ್ಲಿ ಬದುಕುವುದು ಸಾಧ್ಯವೇ ಇಲ್ಲವೆಂಬುದನ್ನು ನಾವು ಮನಗಂಡಿದ್ದೇವೆ. ಯಾವ ರಾಷ್ಟ್ರವೂ ಹಾಗಿರುವಂತಿಲ್ಲ. ನನಗಂತೂ ಅದು ಶಕ್ಯವೇ ಇಲ್ಲ. ನಮ್ಮ ಭೂಗೋಲ, ನಮ್ಮ ಇತಿಹಾಸ, ಈಗಿನ ಘಟನೆಗಳು ಎಲ್ಲವೂ ಹೆಚ್ಚು ವಿಸ್ತೃತ ಚಿತ್ರದೆಡೆಗೇ ನಮ್ಮನ್ನು ಎಳೆದೊಯ್ಯುತ್ತಿವೆ.’’ ಈ ಮಾತಿನ ಹಿಂದೆ […]

Read More

ಕೋವಿಡ್‌ ಕರಾಳತೆಯ ಬಳಿಕ…

ಭಾರತದಲ್ಲಿ ಕೊರೊನಾ ವೈರಸ್‌ ಮರಣ ಮೃದಂಗ ಬಾರಿಸಲು ಆರಂಭಿಸಿದೆ. ಲಾಕ್‌ಡೌನ್‌ನ ಸಂದರ್ಭದಲ್ಲಿ ಇದ್ದುದಕ್ಕೂ ಈಗಿನ ಸನ್ನಿವೇಶಕ್ಕೂ ವ್ಯತ್ಯಾಸ ಎದ್ದು ಕಾಣುತ್ತಿದೆ. ದಿಲ್ಲಿ ಹಾಗೂ ಮಹಾರಾಷ್ಟ್ರಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯನ್ನು ನಿಭಾಯಿಸಲು ಸಾಧ್ಯವಾಗದೆ ಖಾಸಗಿ ವ್ಯವಸ್ಥೆಯ ಮೊರೆ ಹೋಗಲಾಗುತ್ತಿದೆ. ಸರಕಾರಿ ಆಸ್ಪತ್ರೆಗಳಲ್ಲಿ ತೀವ್ರ ಸೋಂಕಿತರಿಗೆ ಐಸಿಯುಗಳು ಸಿಗುತ್ತಿಲ್ಲ. ಇಂಥ ಸನ್ನಿವೇಶದಲ್ಲಿ ಇತರ ದೇಶಗಳಲ್ಲಿ ಪರಿಸ್ಥಿತಿ ಹೇಗಿದೆ? ಅಲ್ಲೂ ಕೊರೊನಾ ಕೇಸುಗಳಲ್ಲಿ ಏರುಮುಖವಿದೆಯೇ ಅಥವಾ ಇಳಿಮುಖವಾಗುತ್ತಿದೆಯೇ? ಅಲ್ಲಿನ ಲಾಕ್‌ಡೌನ್‌ ನಂತರದ ಸಾಮಾಜಿಕ- ಆರ್ಥಿಕ ಸನ್ನಿವೇಶಗಳು ಹೇಗಿವೆ? ಒಂದು ನೋಟ ಇಲ್ಲಿದೆ. […]

Read More

ಜಿ7 – ಅಮೆರಿಕದ ಕರೆ – ಚೀನಾದ ಕರಕರೆ – ಚೀನಾಗೆ ಮುಸುಕಿನ ಗುದ್ದು

ಜಾಗತಿಕ ವಾಣಿಜ್ಯ, ಆರ್ಥಿಕ ಸಮೀಕರಣವನ್ನು ತಿದ್ದಿ ಬರೆಯುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದಾಗಿದ್ದಾರೆ. ಜಿ7 ಗಂಪಿನಲ್ಲಿ ಭಾರತವನ್ನೂ ಸೇರಿಸಿಕೊಳ್ಳಬೇಕು ಎಂಬುದು ಅವರ ವಾದ. ಇದು ಯಾಕೆ ಹಾಗೂ ಇದರ ಪರಿಣಾಮಗಳೇನು? ಜಿ7 ದೇಶಗಳ ಈ ವರ್ಷದ (46ನೇ) ಶೃಂಗಸಭೆ ಜೂನ್‌ 10- 12ರಂದು ಅಮೆರಿಕದ ಕ್ಯಾಂಪ್‌ ಡೇವಿಡ್‌ನಲ್ಲಿ ನಡೆಯಬೇಕಿತ್ತು. ಆದರೆ ಅದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮುಂದೂಡಿದ್ದಾರೆ. ಅದಕ್ಕೆ ಅವರು ನೀಡಿದ ಕಾರಣ: ‘‘ಹೊಸ ಜಾಗತಿಕ ಸನ್ನಿವೇಶದಲ್ಲಿ ಜಿ7 ಎಂಬುದು ಅಪ್ರಸ್ತುತ ಸಂಘಟನೆಯಾಗಿದೆ. ಭಾರತ, […]

Read More

ಕಡಿಮೆಯಾಗುತ್ತಿದೆ ಸೋಂಕು ಆದರೆ, ಹೆಚ್ಚಾಗುತ್ತಿದೆ ಸಾವಿನ ಪ್ರಮಾಣ

ಕೊರೊನಾ ವೈರಸ್(ಕೋವಿಡ್ 19) ಸೃಷ್ಟಿಸಿರುವ ತಲ್ಲಣಕ್ಕೆ ಇಡೀ ಜಗತ್ತೇ ಸ್ತಬ್ಧವಾಗಿದೆ. ಚೀನಾ, ಅಮೆರಿಕ, ಇಟಲಿ, ಜರ್ಮನಿ ಹಾಗೂ ಸ್ಪೇನ್‌ನಂಥ ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಕೋವಿಡ್ 19 ಎದುರಿಸಲಾಗಿದೇ ಮಕಾಡೆ ಮಲಗಿವೆ. ಈ ದೇಶಗಳಲ್ಲಿ ಸೋಂಕಿಗೆ ಒಳಗಾಗುವವರು ಮತ್ತು ಸೋಂಕಿನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಲಕ್ಷ ಮತ್ತು ಸಾವಿರ ಲೆಕ್ಕದಲ್ಲಿದೆ. ಆದರೆ, ಅಭಿವೃದ್ಧಿಶೀಲ ರಾಷ್ಟ್ರವಾದ ಭಾರತದಲ್ಲಿ ಈ ಕೊರೊನಾ ಉಪಟಳವನ್ನು ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಒಗ್ಗೂಡಿ ಹೋರಾಡುತ್ತಿದ್ದು, ಅದರ ಫಲ ಈಗ ನಿಚ್ಚಳವಾಗುತ್ತಿದೆ. ಲಾಕ್‌ಡೌನ್‌ ಹೆಚ್ಚು ಪರಿಣಾಮಕಾರಿಯಾಗುತ್ತಿದೆ […]

Read More

Hariprakash Konemane
Hariprakash Konemane

ARCHIVES

SUBSCRIBE

Get latest updates on your inbox, subscribe to my newsletter


 

Back To Top